Download Kannadanudi worksheet
ಅ) ಪದಗಳ ಅರ್ಥ ಬರೆಯಿರಿ :
ಅರಿ, ಅಮ್ರತ, ಗುಡಿ, ಚಿತ್ತ, ತಿರುಳು, ತೊರೆ, ನುಡಿ, ಒಲುಮೆ, ನನ್ನಿ, ಆಲಿಸು, ಕಣಜ, ತಾಯಿನುಡಿ, ಮಳಲು
ಆ) ʼಅʼ ಪಟ್ಟಿಯಿಂದ ʼಬʼ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ:
ʼ ಅʼ ಪಟ್ಟಿ ʼಬʼ ಪಟ್ಟಿ
೧. ಪುಣ್ಯಕೋಟಿ ಅ) ಕೀರ್ತನೆಗಳು
೨. ಹದಿಬದೆಯಧರ್ಮ ಆ) ಗೋವು
೩. ದಾಸರು ಇ) ವಚನಗಳು
೪. ಶರಣರು ಈ) ಸಂಚಿಹೊನ್ನಮ್ಮ
ಉ) ಹೃದಯದ ಒಲುಮೆ
ಪ್ರಶ್ನೆಗಳು
ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧) ʼಕನ್ನಡ ನುಡಿʼ ಕವಿತೆಯನ್ನು ಬರೆದ ಕವಿಯ ಹೆಸರು ಏನು?
೨) ಜಾನಪದದಲ್ಲಿ ಮೂಡಿದ ಸತ್ಯದ ಬದುಕಿನ ಚರಿತ್ರೆ ಯಾವುದು?
೩) ಕನ್ನಡದೊಲುಮೆಯ ಹವಳಗಳು ಯಾವುವು?
೪) ಹದಿಬದೆಯಧರ್ಮ ಗ್ರಂಥವನ್ನು ಬರೆದವರು ಯಾರು?
೫) ಕನ್ನಡದ ನುಡಿಯಲ್ಲಿ ಏನು ತುಂಬಿದೆ?
೬) ಶರಣರು ರಚಿಸಿದ ಸಾಹಿತ್ಯ ಯಾವುದು?
೭) ಕವಿ ತನ್ನ ಮಾತುಗಳನ್ನು ಹೇಗೆ ಆಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದ್ದಾರೆ?
ಈ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧) ಕನ್ನಡದ ನುಡಿಯಲ್ಲಿ ಏನೇನು ಅಡಗಿದೆ?
೨) ದಾಸಸಾಹಿತ್ಯವನ್ನು ಕವಿ ಯಾವ ರೀತಿ ಬಣ್ಣಿಸಿದ್ದಾರೆ?
೩) ಪುಣ್ಯಕೋಟಿ ಕಥೆಯು ಏನನ್ನು ತಿಳಿಸುತ್ತದೆ?
೪) ʼಮಕ್ಕಳೆ ಕನ್ನಡ ಕಲಿಯಿರಿʼ ಎಂದು ಕವಿ ಏಕೆ ಒತ್ತಾಯಿಸುತ್ತಾರೆ?
೫) ಕವಿಯು ಶರಣರ ವಚನಗಳನ್ನು ಏನೆಂದು ಬಣ್ಣಿಸಿದ್ದಾರೆ?
ಭಾಷಾಭ್ಯಾಸ:
ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ.
೧) ಚಿತ್ತ :
೨) ಒಲುಮೆ:
೩) ಜನಪದ:
೪) ಕಣಜ:
೫) ತಿರುಳು:
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.
೧) ಮೂಡು X
೨) ಧರ್ಮ X
೩) ಅರಳು X
ಇ) ಈ ನುಡಿಯಲ್ಲಿ ಗೆರೆ ಹಾಕಿದ ಪ್ರಾಸ ಪದಗಳನ್ನು ಹುಡುಕಿ ಜೋಡಿಸಿ ಬರೆಯಿರಿ.
ಕನ್ನಡ ನುಡಿಯಲಿ ಕನ್ನಡ ಗುಡಿಯಲಿ
ಹೃದಯದ ಒಲುಮೆಯು ತುಂಬಿಹುದು
ಹಾಲಿನ ತೊರೆಯು ಸಕ್ಕರೆ ಮಳಲು
ಜೇನಿನ ಹನಿಯು ಅಲ್ಲಿಹುದು
ಈ) ಕೆಳಗಿನ ವಾಕ್ಯಗಳಲ್ಲಿ ದೋಷಯುಕ್ತ ಪದಗಳನ್ನು ಸರಿಪಡಿಸಿ ಬರೆಯಿರಿ.
೧) ನಮ್ಮಯ ನಾಡಿನ ಪುಣ್ಯದ ಬೀಡಿನ ನಿನ್ನಯ ಕಥೆಯನು ಬರೆಯುತ್ತ.
೨) ಪಾಪಕೋಟಿಯ ಬದುಕಿನ ಚರಿತೆಯು ಜನಪದದಲ್ಲಿ ಮೂಡಿಹುದು.
೩) ಕನ್ನಡ ಎಡೆಯಲಿ ಕನ್ನಡ ಗಡಿಯಲಿ ಹೃದಯದ ಒಲುಮೆ.
೪) ಬನ್ನಿರಿ ಮಕ್ಕಳೆ ಕನ್ನಡ ಕುಡಿಯುರಿ ಬದುಕಿನ ತಿರುಳನು ಅರಿಯುತ್ತ.
ಉ) ಈ ಪದಗಳನ್ನು ನಕಲು ಮಾಡಿ ಬರೆಯಿರಿ.
ಚಿತ್ತ ಸಕ್ಕರೆ ಪುಣ್ಯ ಅಮೃತ ನನ್ನಿ ಹೃದಯ ಒಲುಮೆ
ಊ) ಈ ಪದಗಳಿಗೆ ಏಕವಚನದ ರೂಪ ಬರೆಯಿರಿ.
ಬಹುವಚನ
೧) ಗುಡಿಗಳು
೨) ತೊರೆಗಳು
೩) ಶರಣರು
೪) ಹವಳಗಳು