Bhagyashilpigalu Kannada lesson grade X is about Nalvadi Krishnaraja Wodeyar and Sir M Vishveshwarayya. Bhagyashilpigalu 10th grade Kannada lesson can be used for the notes.
ಭಾಗ್ಯಶಿಲ್ಪಿಗಳು – Architects of Fortune
- ನಾಲ್ವಡಿ ಕೃಷ್ಣರಾಜ ಒಡೆಯರು – ಸಮಿತಿ ಸಂಗ್ರಹ
Nalwadi Krishnaraja Wadiyar – Compiled by the Committee - ಸರ್ ಎಂ. ವಿಶ್ವೇಶ್ವರಯ್ಯ – ಡಿ.ಎಸ್. ಜಯಪ್ಪಗೌಡ
Sir M. Visvesvaraya – By D.S. Jayappagowda
ಪ್ರವೇಶ:
ಹುಟ್ಟಿದವರೆಲ್ಲರಿಗೂ ಸಾಧಕರಾಗುವುದಕ್ಕೆ ಅವಕಾಶವಿದ್ದರೂ ಎಲ್ಲರೂ ಸಾಧಕರಾಗುವುದಿಲ್ಲ. ಸಾಧಕರಾಗುವುದಕ್ಕೆ ಅಪಾರವಾದ ಸಾಮಾಜಿಕ ಹೊಣೆಗಾರಿಕೆ, ಪರಿಶ್ರಮ, ಭವಿಷ್ಯತ್ ಚಿಂತನೆ, ಛಲವಂತಿಕೆ ಬೇಕಾಗುತ್ತದೆ. ಸಾಧನೆಯ ಪಥದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಬೇಕು. ಇಂತಹ ಅಪರೂಪದ ಸಾಧಕರನ್ನು ಸಮಾಜ ನಿತ್ಯ ಸ್ಮರಿಸುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಡಳಿತಾತ್ಮಕವಾಗಿ, ವೈಜ್ಞಾನಿಕವಾಗಿ ಸಾಧನೆ ಮಾಡಿ ಕನ್ನಡನಾಡಿನ ಅಭಿವೃದ್ಧಿಗಾಗಿ ಸಲ್ಲಿಸಿರುವ ಸೇವೆಯ ಪರಿಚಯ ಮಾಡಿಕೊಡುವುದು ಇಲ್ಲಿನ ಆಶಯ.
Introduction:Although everyone born has the potential to become an achiever, not everyone succeeds. Becoming an achiever requires an immense sense of social responsibility, hard work, vision for the future, and determination. One must overcome the obstacles and anxieties encountered on the path to achievement. Society remembers such rare individuals daily. The objective here is to introduce the services rendered by these individuals toward the development of Karnataka through their achievements in social, educational, administrative, and scientific fields.
ನಾಲ್ವಡಿ ಕೃಷ್ಣರಾಜ ಒಡೆಯರು
ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೆಯ ರಾಜರು ನಾಲ್ವಡಿ ಕೃಷ್ಣರಾಜ ಒಡೆಯರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಹಾರಾಣಿ ವಾಣಿ ವಿಲಾಸರವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.
Nalwadi Krishnaraja Wadiyar
Nalwadi Krishnaraja Wadiyar was the 24th ruler of the Wadiyar royal dynasty of the Kingdom of Mysore. His reign lasted from 1902 to 1940. Although Nalwadi Krishnaraja Wadiyar was crowned in 1895, he was a boy of only 10 years old; therefore, his mother, Maharani Vani Vilas, managed the administration as Regent. As a result of the Maharani taking close care to provide the young prince with an appropriate education and administrative training, the State of Mysore obtained a highly capable ruler in Nalwadi Krishnaraja Wadiyar.
ಮಾದರಿ ಮೈಸೂರು:
೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಅಯ್ಯರ್‌ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣಬದ್ಧರಾದರು. ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು.
Model Mysore:
From August 8, 1902, the direct management of Mysore State came under the charge of Krishnaraja Wadiyar. With the cooperation of the then Diwan, Sir K. Seshadri Iyer, Nalwadi Krishnaraja Wadiyar committed himself wholeheartedly to the all-round development of Mysore State. During his era, Mysore State witnessed development unprecedented by any other princely state across the entire Indian subcontinent, earning the Kingdom of Mysore the prestigious title of ‘Model Mysore’. Although Nalwadi Krishnaraja Wadiyar hailed from a royal lineage, he strongly favored public participation in governance.
ಪ್ರಜಾಪ್ರತಿನಿಧಿ ಸಭೆ:
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ‘ಪ್ರಜಾಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಅದಕ್ಕಾಗಿ ೧೯೨೩ರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದು, ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದರು. ಇದು ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಪ್ರಜಾ ಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (೧ ಜೂನ್ – ಮಹಾರಾಜರ ವರ್ಧಂತಿ, ೨ ಅಕ್ಟೋಬರ್ – ದಸರಾ ಮಹೋತ್ಸವ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು. ಅಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ, ಪ್ರಶೋತ್ತರಗಳು, ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡೆವಳಿಕೆ ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿದ್ದ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು.
Representative Assembly (Praja Pratinidhi Sabha):
During the time of Nalwadi Krishnaraja Wadiyar, the ‘Representative Assembly’ took on a new form and transformed into a true assembly of people’s representatives. For this purpose, he enacted a new law in 1923, converting the Representative Assembly into a statutory body. From a democratic perspective, this began functioning as a model institution across India. The Representative Assembly convened twice a year (June 1st – the Maharaja’s Birthday, and October 2nd – during Dasara festivities) to conduct its proceedings. Parliamentary practices such as examining the annual budget, question hours, and tabling resolutions took place there. Out of the 275 members in the assembly, a majority of the representatives were elected directly by the people.
ನ್ಯಾಯ ವಿಧಾಯಕ ಸಭೆ:
ನಾಲ್ವಡಿ ಕೃಷ್ಣರಾಜರು ೧೯೦೭ ರಲ್ಲಿ ನ್ಯಾಯ ವಿಧಾಯಕ ಸಭೆಯನ್ನು ಸ್ಥಾಪಿಸಿದರು. ಇದರ ಸದಸ್ಯರ ಸಂಖ್ಯೆಯ ೫೦. ಇದರಲ್ಲಿ ಜನರಿಂದ ಆಯ್ಕೆಯಾದವರು ೨೨ ಸದಸ್ಯರು. ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ, ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು. ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನು ವಿಮರ್ಶಿಸುವ ಅಧಿಕಾರ ಆ ಸಭೆಗೆ ಇದ್ದಿತು. ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಆ ಸಭೆಯ ಅನುಮತಿ ಅಗತ್ಯವಾಗಿತ್ತು. ಆ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತು.
Legislative Council (Nyaya Vidhayaka Sabha):
Nalwadi Krishnaraja Wadiyar established the Legislative Council in 1907. It had 50 members, out of which 22 were elected by the people. Functioning like an upper house, this institution convened in Bangalore during the months of June and December. The council held the power to review all matters tabled in the Representative Assembly. Crucially, the approval of this house was mandatory to enact any law. The assembly also possessed the authority to reduce government expenditures.
ಕೊಡುಗೆ:
ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ನಗರಪಾಲಿಕೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದವು. ಇವರ ಕಾಲದಲ್ಲಿ ೧. ಗ್ರಾಮ ನೈರ್ಮಲೀಕರಣ ೨. ವೈದ್ಯಕೀಯ ಸಹಾಯ ೩. ವಿದ್ಯಾ ಪ್ರಚಾರ ೪. ನೀರಿನ ಸೌಕರ್ಯ ೫. ಪ್ರಯಾಣ ಸೌಲಭ್ಯ
ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದರು. ‘ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಹೆಸರಾದರು. ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನೀಡಿದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
ಮೈಸೂರು, ಅರಸೀಕೆರೆ, ಬೆಂಗಳೂರು-ಚಿಕ್ಕಬಳ್ಳಾಪುರ, ಚಿಕ್ಕಜಾಜೂರು-ಚಿತ್ರದುರ್ಗ, ನಂಜನಗೂಡು-ಚಾಮರಾಜನಗರ, ತರೀಕೆರೆ-ಶಿವಮೊಗ್ಗ-ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು ೧೯೩೧ರ ವೇಳೆಗೆ ಪೂರೈಸಲಾಯಿತು.
Contributions:
He set up local bodies to facilitate the decentralization of administration. Municipalities and village panchayats began functioning. During his reign, fields such as: 1. Village sanitation 2. Medical aid 3. Spread of education 4. Water supply facilities 5. Travel and transport facilities became self-governing sectors. He shaped the Kingdom of Mysore into a model state and came to be known as the ‘Pioneer of Social Laws’, emphasized the development of literature, music, and architecture. He established the Kannada Sahitya Parishat (Kannada Literary Academy) in Bangalore. By 1931, railway lines connecting Mysore-Arasikere, Bangalore-Chikkaballapur, Chikkajajur-Chitradurga, Nanjanagudu-Chamarajanagar, and Tarikere-Shivamogga-Anandapura were completed.
೧೯೦೦ರಲ್ಲಿಯೇ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು. ಇದು ಭಾರತ ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ. ೧೯೦೭ರಲ್ಲಿ ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಕಟ್ಟಲ್ಪಟ್ಟಿತು. ೧೯೧೧ರಲ್ಲಿ ಕೃಷ್ಣರಾಜ ಸಾಗರ ಇವರ ಬೃಹತ್ ಮುಂಗಾಣ್ಕೆಯ ಕೊಡುಗೆ.
As early as 1900, a hydroelectric power station was commissioned using the Kaveri River near Shivanasamudra. This was the first hydroelectric project not just in India, but in the entire continent of Asia. In 1907, the Vani Vilas Sagara (Mari Kanive) dam was built. The Krishna Raja Sagara dam, built in 1911, stands as a testament to his monumental foresight.
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಉಚಿತ ಮತ್ತು ಕಡ್ಡಾಯವಾಗಿ ಪ್ರಾರಂಭಿಸಲಾಯಿತು. ನಾಡಿನಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ೨೭೦ ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕಿನ ಸ್ಥಾಪನೆ ಆರ್ಥಿಕ ಅಭಿವೃದ್ಧಿಯ ಸಂಕೇತ. ೧೯೦೬ರಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು.
Primary and secondary education were made free and compulsory. The credit for establishing the University of Mysore, the very first university in the state, goes to Nalwadi. Around 270 free hospitals commenced operations. In the commercial sector, the establishment of the Bank of Mysore symbolized economic progress. Cooperative societies were introduced in 1906.
ಜಾರಿ ಮಾಡಿದ ಸಾಮಾಜಿಕ ಕಾನೂನುಗಳು:
೧೯೦೯ – ದೇವದಾಸಿ ಪದ್ಧತಿ ನಿಷೇಧ, ೧೯೧೦ – ಬಸವಿ ಪದ್ಧತಿ ರದ್ದತಿ, ಗೆಜ್ಜೆ ಪೂಜೆ ಪದ್ಧತಿ ಸಂಪೂರ್ಣ ನಿರ್ಮೂಲನೆ, ೧೯೩೬ – ವೇಶ್ಯಾ ವೃತ್ತಿ ತಡೆಗಟ್ಟುವ ಕಾಯ್ದೆ; ವಿಧವಾ ಮರು ವಿವಾಹ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ೧೯೧೪ – ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ, ೧೯೧೯ – ಮಾಧ್ಯಮಿಕ ಶಾಲಾ ಶಿಕ್ಷಣ ಶುಲ್ಕ ರದ್ಧತಿ, ೧೯೨೭ – ಮೊಟ್ಟ ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು. ೧೯೦೫ – ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ. ೧೯೧೩ – ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ೧೯೧೮ – ಗ್ರಾಮ ಪಂಚಾಯಿತಿಗಳ ಕಾಯ್ದೆಗಳನ್ನು ಜಾರಿಗೆ ತಂದು ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
Social Legislation Enacted:
1909 – Abolition of the Devadasi system, 1910 – Abolition of the Basavi system and complete eradication of the Gejje Pooja custom, 1936 – Prevention of Prostitution Act; Widow Remarriage Act, and the implementation of compulsory education for women, 1914 – Prohibition of caste consideration for school admissions, 1919 – Abolition of school fees for secondary education, 1927 – Granting voting rights to women for the very first time. 1905 – Cooperative Workmen’s Compensation Act, 1913 – Mysore Village Courts Act,
1918 – Implementation of the Village Panchayats Acts, striving continuously for the state’s progress
ಸರ್ ಎಂ. ವಿಶ್ವೇಶ್ವರಯ್ಯ:
“ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”. — ಪಂಡಿತ್ ಜವಾಹರಲಾಲ್ ನೆಹರು ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರ ಬಗ್ಗೆ ಈ ರೀತಿ ನುಡಿದರು. ಅವರ ಒಂದೊಂದು ಮಾತುಗಳು ಸರ್ ಎಂ. ವಿ. ಅವರಿಗೆ ಅಕ್ಷರಶಃ ಸಲ್ಲುತ್ತಿದ್ದವು. ಇವರು ಭಾರತದ ಆಧುನಿಕತೆಯ ಹರಿಕಾರರಾಗಿ ವಾಸ್ತವ ಚಿಂತನೆ, ನಿಸ್ವಾರ್ಥ ನಡತೆ, ಸುಸಂಗತ ವೈಜ್ಞಾನಿಕ ದೃಷ್ಟಿ, ಯೋಜನೆ ಮತ್ತು ದಕ್ಷ ಆಡಳಿತದ ತಳಹದಿಯ ಮೇಲೆ ಹೊಸ ರಾಷ್ಟ್ರ ನಿರ್ಮಿಸಲು ಮುಂದಾದವರು.
Sir M Visvesvaraya
“Unfortunately, we Indians are accused of being talkative and uncommunicative. You are a great exception to this saying. You talked less; you did more. Let us learn from you.” — Pandit Jawaharlal Nehru said this about Visvesvaraya at the birth centenary celebrations held in Bangalore. Every word of his was literally attributed to Sir M. V. He was the pioneer of Indian modernity, who set out to build a new nation on the foundation of practical thinking, selfless conduct, coherent scientific vision, planning and efficient administration.
ವಿಶ್ವೇಶ್ವರಯ್ಯ ಅವರು ಕ್ರಿಸ್ತ ಶಕ ೧೮೬೦ ಸೆಪ್ಟೆಂಬರ್ ೧೫ರಂದು ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ಅವರ ಎರಡನೆಯ ಮಗನಾಗಿ ಜನಿಸಿದರು. ಇವರ ಪೂರ್ವಜರು ಮೂಲತಃ ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕಿನ ‘ಮೋಕ್ಷಗೊಂಡಂ’ ಅಗ್ರಹಾರಕ್ಕೆ ಸೇರಿದವರು. ಕಾರಣಾಂತರದಿಂದ ಕರ್ನಾಟಕಕ್ಕೆ ವಲಸೆ ಬಂದು ಚಿಕ್ಕಬಳ್ಳಾಪುರ ಸಮೀಪದಲ್ಲಿರುವ ಮುದ್ದೇನಹಳ್ಳಿಯಲ್ಲಿ ನೆಲೆಸಿದರು. ಮೊದಲಿನಿಂದಲೂ ಅವರ ಮನೆತನಕ್ಕೆ ‘ಮೋಕ್ಷಗೊಂಡಂ’ ಎಂಬ ಅವರ ಮೂಲ ಸ್ಥಳದ ಹೆಸರು ಸೇರಿಕೊಂಡಿತ್ತು. ವೆಂಕಟಲಕ್ಷ್ಮಮ್ಮ ಅವರಿಗೆ ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು.
Visweshvaraya was born on 15 September 1860 AD as the second son of Srinivasa Sastri and Venkatalakshmamma. His ancestors originally belonged to the ‘Mokshagondam’ agrahara in Giddalur taluk of Kurnool district. For some reason, they migrated to Karnataka and settled in Muddenahalli near Chikkaballapur. From the very beginning, their family name ‘Mokshagondam’, their original place, was attached to their family. Venkatalakshmamma had a desire for her children to study more and become great people. For this, she shifted the family to Chikkaballapur.
ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಸೋದರಮಾವ ಎಚ್. ರಾಮಯ್ಯ ಅವರ ಮಾರ್ಗದರ್ಶನದಂತೆ ಬೆಂಗಳೂರಿನ ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನೂ ಸೆಂಟ್ರಲ್ ಕಾಲೇಜಿನಲ್ಲಿ ಎರಡು ವರ್ಷಗಳ ಇಂಟರ್ ಮೀಡಿಯಟ್ ಮತ್ತು ಮೂರು ವರ್ಷಗಳ ಬಿ.ಎ. ಪದವಿ ಶಿಕ್ಷಣವನ್ನೂ ಪಡೆದರು. ವ್ಯಾಸಂಗದಲ್ಲಿ ಕ್ರಮನಿಷ್ಠರಾಗಿದ್ದ ಅವರು ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕೆಂಬ ದೃಢನಿರ್ಧಾರವನ್ನು ಹೊಂದಿದ್ದರು. ಅದಕ್ಕೆ ತಕ್ಕನಾದ ಪ್ರತಿಭೆ, ಮನೋಸ್ಥೆರ್ಯ ಅವರಲ್ಲಿತ್ತು. ಅಂದಿನ ಮೈಸೂರು ದಿವಾನರಾಗಿದ್ದ ಸಿ. ರಂಗಾಚಾರ್ಲುರವರು ನೀಡಿದ ವಿದ್ಯಾರ್ಥಿವೇತನ ಸೌಲಭ್ಯವನ್ನು ಬಳಸಿಕೊಂಡು ಪೂನಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದು ಜೇಮ್ಸ್ ಬರ್ಕ್ಲಿ ಬಹುಮಾನಕ್ಕೂ ಪಾತ್ರರಾದರು.
Visvesvaraya’s primary education took place in Chikkaballapur. Guided by his maternal uncle, H. Ramayya, he completed his high school education at the Wesleyan High School in Bangalore, and went on to complete two years of Intermediate and three years of B.A. degree education at Central College. Highly disciplined in his studies, he possessed a firm resolve to achieve something lofty in life. He possessed the natural talent and mental fortitude corresponding to that ambition. Utilizing a scholarship provided by the then Diwan of Mysore, C. Rangacharlu, he pursued diploma education in engineering at the College of Engineering, Pune, where he secured the first rank and won the prestigious James Berkley Prize.
ವಿಶ್ವೇಶ್ವರಯ್ಯನವರು ೧೮೮೪ ರಲ್ಲಿ ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು. ಖಾನ್‌ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸು ಗಳಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ಮುಂಬೈ ಸರ್ಕಾರದ ಸೂಚನೆಯ ಮೇರೆಗೆ ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ಸಂಡ್ ಹರ್ಸ್ಟ್ ಅವರು ಇವರನ್ನು ಮುಕ್ತಕಂಠದಿಂದ ಹಾಡಿಹೊಗಳಿದರು. ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು. ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು. ಇದನ್ನೇ ಮುಂದೆ ಗ್ವಾಲಿಯರ್‌ನ ತಿಗ್ರ ಜಲಾಶಯಕ್ಕೂ ಮೈಸೂರಿನ ಕೃಷ್ಣರಾಜಸಾಗರ ಜಲಾಶಯಕ್ಕೂ ಅಳವಡಿಸಲಾಯಿತು. ಮುಂದೆ ನಾಲ್ಕು ವರ್ಷಗಳ ಕಾಲ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕಗೊಂಡರು. ಈ ಹುದ್ದೆಗೆ ನೇಮಕವಾದ ಪ್ರಥಮ ಭಾರತೀಯರು ಎಂಬುದು ಗಮನಾರ್ಹ ಅಂಶ.
In 1884, Visvesvaraya began his career as an Assistant Engineer in the Public Works Department of the Bombay Presidency. He won the appreciation of his superiors by successfully constructing an overpass pipe aqueduct over the Panjra River, which flowed through the Khandesh and Nashik districts. On instructions from the Bombay Government, he successfully executed a drinking water supply system for Sukkur town in the Sindh province. The then Governor of the Bombay Presidency, Lord Sandhurst, praised him open-heartedly. He installed automatic floodgates at Lake Fife, which served as the water source for Pune’s Mutha Canal. The invention of these automatic gates added another feather to the cap of Visvesvaraya’s achievements. This same design was later implemented at the Tigra Dam in Gwalior and the Krishna Raja Sagara Dam in Mysore (located in present-day Mandya district). Subsequently, he was appointed as the Sanitary Engineer of the Bombay Presidency for four years. It is noteworthy that he was the first Indian to be appointed to this position.
ಪುಟಿಯುವ ಚೈತನ್ಯ, ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡಬೇಕೆಂಬ ತುಡಿತ ಅವರದಾಗಿತ್ತು. ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು. ಅದನ್ನು ತಡೆಯಲು ಎರಡು ನದಿಗಳಿಗೂ ಪ್ರತ್ಯೇಕ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿದರು. ಹೈದರಾಬಾದ್ ನಗರವನ್ನು ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು.
He possessed bounding energy and a strong impulse to do today what might be done tomorrow, and to do right now what was to be done today. Hyderabad city used to suffer immense losses due to recurrent floods from the Easi and Musi rivers. He solved this problem by designing separate reservoirs for both rivers to contain the floods. Through his efforts, he helped Hyderabad secure a place among the well-planned cities of India.
ವಿಶ್ವೇಶ್ವರಯ್ಯ ಅವರು ಮೂರು ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು. ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ ಪ್ರಾರಂಭ, ರೈಲು ಮಾರ್ಗಗಳ ವಿಸ್ತರಣೆಗೆ ಕ್ರಮ, ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಯೋಜನೆ, ಮಾರಿಕಣಿವೆ ಜಲಾಶಯದ ನೀರು ಹಂಚಿಕೆಯ ಪುನರ್ವ್ಯವಸ್ಥೆ, ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ, ಇವೆಲ್ಲ ಅವರ ಅಭಿವೃದ್ಧಿ ಕಾರ್ಯಗಳ ಕುರುಹು.
Vishvesvaraya served as the Chief Engineer of the Mysore State for three years. The initiation of the Kannambadi (Krishna Raja Sagara) Dam project across the Kaveri River, steps to expand railway lines, plans to develop technical education, reorganization of water distribution from the Marikanive reservoir, and reviving small irrigation systems were all hallmarks of his developmental vision.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸುವ ಮೂಲಕ ಹೊಸ ಮನ್ವಂತರಕ್ಕೆ ಅಡಿಪಾಯ ಹಾಕಿದರು. ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅಷ್ಟೇ ಅಲ್ಲದೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು. ಗಾಂಧೀಜಿ ಅವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು. ಇದರಿಂದ ‘ಮೈಸೂರು ಮಾದರಿ’ ಎಂಬ ಹೊಸ ಆಡಳಿತ ಮಾದರಿ ಜನ್ಮತಾಳಿತು.
The Maharaja of Mysore State, Nalwadi Krishnaraja Wadiyar, laid the foundation for a new era by appointing Visvesvaraya as the Diwan. He brought comprehensive reforms to office procedures by implementing a fresh administrative model. Furthermore, he placed paramount emphasis on efficiency and integrity. He separated the powers of the judiciary and the executive, which had previously been centralized at the local levels in the state. Mahatma Gandhi lauded Mysore’s administrative style wholeheartedly, giving birth to a new governance paradigm known as the ‘Mysore Model’.
ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ ಎಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ಅದಕ್ಕಾಗಿ ೧೯೧೩ ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಪ್ರೌಢಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಬದಲಿಸಿ ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು.
Visvesvaraya believed that modern education was the ultimate solution to all societal problems. Recognizing education as an elixir, he formulated diverse educational schemes. For this purpose, he introduced the Primary Education Regulation in 1913. High schools were previously under the control of Madras University. To change this, he formulated a plan through the Economic Conference for the state itself to conduct its own independent high school leaving examinations.
ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಮತ್ತೊಂದು ಫಲಶ್ರುತಿ. “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು” ಎಂಬುದನ್ನು ಮನಗಂಡ ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಕನ್ನಡ ಭಾಷೆ ಹಾಗೂ ಸಾಹಿತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿದ್ದ ಒಲವನ್ನು ಮನಗಂಡು ‘ಕನ್ನಡ ಸಾಹಿತ್ಯ ಪರಿಷತ್ತನ್ನು’ ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ ಸಾಧನೆ.
The establishment of the University of Mysore was another fruit of his grand vision. Believing that “Education should be for education’s sake. It should not remain the property of a few, but must be the birthright of everyone in a progressive state,” he gave priority to technical and vocational education. To achieve this, he started the Mechanical Engineering School in Bangalore and the Chamarajendra Technical Institute in Mysore. Recognizing the public’s growing love for the unified Karnataka movement and the Kannada language and literature, the establishment of the ‘Kannada Sahitya Parishat’ became another major milestone of his tenure.
ವಿಶ್ವೇಶ್ವರಯ್ಯ ಅವರು ಕೈಗಾರಿಕೆಗೆ ಅಗ್ರ ಪ್ರಾಶಸ್ತ್ರ ನೀಡಿದ್ದರು. “ಕೈಗಾರಿಕೀಕರಣ ಇಲ್ಲವೆ ಅವನತಿ” ಎಂಬ ಘೋಷಣೆ ಮಾಡಿದರು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವುದು ಅವರ ದೊಡ್ಡ ಗುರಿಯಾಗಿತ್ತು. ಇದಲ್ಲದೆ ಹೆಂಚಿನ ಕಾರ್ಖಾನೆ, ಮೂಳೆ ಮತ್ತು ಗೊಬ್ಬರ ತಯಾರಿಕಾ ಸ್ಥಾವರ, ಸಕ್ಕರೆ ಕಾರ್ಖಾನೆ, ಔಷಧಿ ತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆಗಳು ಸ್ಥಾಪಿತವಾದವು. ಸೋಪು ಹಾಗೂ ಲೋಹ ತಯಾರಿಕೆ, ಕಲೆ ಮತ್ತು ಕರಕುಶಲ ಡಿಪೋ, ಕೃಷ್ಣರಾಜೇಂದ್ರ ಬಟ್ಟೆ ಗಿರಣಿ, ಕಾಗದದ ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತು ಪೀಠೋಪಕರಣಗಳ ತಯಾರಿಕಾ ಘಟಕಗಳು – ಹೀಗೆ ನೂರಾರು ಕೈಗಾರಿಕೆಗಳು ಪ್ರಾರಂಭಗೊಂಡವು.
Visvesvaraya gave top priority to industrialization. He coined the famous slogan: “Industrialize not there is the decline”. Establishing the Iron and Steel Works at Bhadravati was one of his greatest goals. Apart from this, a tile factory, a bone and fertilizer manufacturing plant, a sugar factory, a pharmaceutical unit, and sandalwood oil, matchstick, and paper factories were established. Soap and metal manufacturing units, an arts and crafts depot, the Sri Krishnarajendra Mills, paper pulp, cardboard, pencil, matchstick, and furniture manufacturing units—hundreds of industries flourished.
ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು. ಇದಕ್ಕಾಗಿ ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು. ಅನಂತರ ಉಳಿತಾಯ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು, ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕ್‌ಗಳನ್ನು ಸ್ಥಾಪಿಸಿದರು.
To lay a solid foundation for the state’s economic activities, he reformed fiscal policy. For this purpose, he established the Bank of Mysore in 1913. Subsequently, savings banks came into existence. Feeder banks, along with industrial investment and development funds, were created to support industrial growth, and a public life insurance scheme was introduced. To provide credit facilities to farmers and artisans, he strengthened the cooperative sector and established provincial cooperative banks. He introduced a fresh perspective to budgeting, making it easier to measure the impact of development works by focusing on growing the state’s assets and generating revenue.
ಗೊಮ್ಮಟವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಮಾತಿನಂತೆ ಬೆಳೆದ ವಿಶ್ವೇಶ್ವರಯ್ಯ ಅವರಿಗೆ ಬ್ರಿಟಿಷ್ ಸರ್ಕಾರ ‘ಸರ್’ ಪದವಿಯನ್ನು ನೀಡಿ ಗೌರವಿಸಿತು. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಯನ್ನು ಸಲ್ಲಿಸಿತು. ದೇಶದ ಹಲವಾರು ಪ್ರತಿಷ್ಠಿತ ಸಂಸ್ಥೆ ಹಾಗೂ ವಿಶ್ವವಿದ್ಯಾನಿಲಯಗಳು ಸದಸ್ಯತ್ವ ಹಾಗೂ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿದವು. ಮಹಾನ್ ಆಡಳಿತಗಾರರಾದ ಇವರ ಶತಮಾನೋತ್ಸವದ ಸವಿನೆನಪಿಗಾಗಿ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಾಯಿತು. ಮೈಸೂರು ಸಂಸ್ಥಾನದ ದಿವಾನ ಹುದ್ದೆಯಿಂದ ನಿವೃತ್ತಿಯಾದ ಅನಂತರವು ದೇಶ ಸೇವೆಯ ಪಥದಲ್ಲಿಯೇ ಸಾಗಿದರು. ತಮ್ಮ ಪರಿಪಕ್ವ ಅನುಭವವನ್ನು ದೇಶದ ಅಭಿವೃದ್ಧಿಗಾಗಿಯೇ ಬಳಸಿಕೊಂಡರು. ಸಾಹಿತ್ಯ ಸೃಷ್ಟಿಯನ್ನು ಮಾಡಿದ್ದಕ್ಕೆ ನಿದರ್ಶನ ಅವರ ‘ ರಿಕನ್‌ಸ್ಟಕ್ಟಿಂಗ್ ಇಂಡಿಯಾ’, ‘ಪ್ಲಾನ್ದ್ ಎಕಾನಮಿ ಫಾರ್ ಇಂಡಿಯ’ ಹಾಗು ಆತ್ಮ ಚರಿತ್ರೆ ‘ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್’, ‘ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’ ಕೃತಿಗಳು. ಸೆಪ್ಟೆಂಬರ್ ೧೫, ೧೯೬೦ರಂದು ಶತಮಾನೋತ್ಸವ ಅಭಿನಂದನೆ ‘ಸರ್ ಎಂ. ವಿ. ಅಭಿನಂದನಾ ಗ್ರಂಥವನ್ನು ಪ್ರಕಟಿಸಲಾಯಿತು. ೧೦೨ ವರ್ಷಗಳ ತುಂಬ ಜೀವನ ಪೂರೈಸಿದ ಸರ್ ಎಂ. ವಿ. ಅವರು ೧೯೬೨ ರಲ್ಲಿ ಇಹಲೋಕ ತ್ಯಜಿಸಿದರು ಇವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ‘ಎಂಜಿನಿಯರ್ಸ್ ದಿನಾಚರಣೆಯನ್ನು’ ಮಾಡಲಾಗುತ್ತದೆ.
Visvesvaraya, who grew up as a philosophical leader with a strong personality, Visvesvaraya was like “there is no green that the goat does not touch” . He was honored by the British government with the title of ‘Sir’. In recognition of his achievements, the Indian government presented the country’s highest award, the ‘Bharat Ratna’. Several prestigious institutions and universities of the country honored him with membership and honorary doctorate degrees. A special stamp was released to commemorate the centenary of his great ruler. After retiring from the post of Diwan of the Mysore State, he continued on the path of national service. He used his mature experience for the development of the country. Examples of his literary creation are his works ‘Reconstructing India’, ‘Planned Economy for India’ and the autobiography ‘Memories of My Working Life’, ‘Nation Building Plan for India’. On September 15, 1960, the centenary congratulations were given by ‘Sir M. V. A congratulatory book was published. Sir M. V., who completed a life of 102 years, left this world in 1962. To commemorate his birthday, ‘Engineers’ Day’ is still celebrated.
ಕೃತಿಕಾರರ ಪರಿಚಯ
ಡಿ. ಎಸ್. ಜಯಪ್ಪಗೌಡ ಇವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಕ್ರಿ.ಶ. ೧೯೪೭ ರಲ್ಲಿ ಜನಿಸಿದರು. ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಇವರ ಪೂರ್ಣ ಹೆಸರು. ಇತಿಹಾಸ ಮತ್ತು ಭಾಷಾಂತರ ವಿಷಯದಲ್ಲಿ ಮಹತ್ವದ ಕೃತಿಗಳನ್ನು ರಚಿಸಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದ ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಶ್ರೀಯುತರ ಪ್ರಮುಖ ಕೃತಿಗಳು. ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಭಾಜನರಾಗಿದ್ದಾರೆ.
D. S. Jayappagowda was born in 1947 in Daradahalli, Mudigere taluk, Chikkamagaluru district. His full name is Daradahalli Subbegouda Jayappagowda. He has written important works in the field of history and translation and has served in the Department of Translation and Textbooks, University of Mysore.Karnataka Rural Institutions, Karnataka’s Overseas Connections, Mysore Odeyars, Folk Games, and the Achievements of Diwan Sir M. Visvesvaraya are some of his major works. Karnataka’s Overseas Connections has won the Karnataka Sahitya Academy Award. He has been awarded the Dharwad Karnataka Sangha Research Prize.
ಪ್ರಸ್ತುತ ಪಾಠದ ೧. ನಾಲ್ವಡಿ ಕೃಷ್ಣರಾಜ ಒಡೆಯರು ಎಂಬ ಭಾಗವನ್ನು ಪರಿಷ್ಕರಣ ಸಮಿತಿಯು ಸಂಗ್ರಹಿಸಿ ನಿಗದಿಪಡಿಸಿದೆ ಹಾಗೂ ೨. ಸರ್ ಎಂ. ವಿಶ್ವೇಶ್ವರಯ್ಯ ಭಾಗವನ್ನು ಡಿ. ಎಸ್. ಜಯಪ್ಪಗೌಡ ಅವರು ರಚಿಸಿರುವ ‘ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು’ ಕೃತಿಯಿಂದ ಆರಿಸಿ ನಿಗದಿಪಡಿಸಲಾಗಿದೆ.
The section on 1. Nalvadi Krishnaraja Wodeyaru of the present lesson has been compiled and arranged by the Revision Committee and the section on 2. Sir M. Visvesvaraya has been selected and arranged from the work ‘Dewan Sir M. Visvesvaraya’s Achievements’ written by D. S. Jayappagowda.
ಆಶಯ
ಪರಿಶ್ರಮ, ಪ್ರತಿಭೆ, ನಿಷ್ಠೆಯಿದ್ದರೆ, ಧೇಯವನ್ನು ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ ಸವಾಲುಗಳನ್ನು ಎದುರಿಸಿ ಯಶಸ್ಸು ಪಡೆಯಬಹುದು. ಬಡತನದ ಬವಣೆಯಾಗಲಿ, ಯಾವುದೇ ತಾರತಮ್ಯವಾಗಲಿ ಅದನ್ನು ನಿರ್ಬಂಧಿಸಲಾರದು. ವ್ಯಕ್ತಿತ್ವದ ವಿಕಾಸಕ್ಕೆ ಅಡ್ಡಿಯಾಗಲಾರವು. ವ್ಯಕ್ತಿಯು ಸಮಾಜಮುಖಿಯಾಗಿ ಲಭಿಸಿದ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಜನಮನದಲ್ಲಿ ಶಾಶ್ವತ ಸ್ಥಾನ ಪಡೆಯಬಹುದೆಂಬುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಅವರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉತ್ಕರ್ಷದ ಆಕಾಂಕ್ಷೆ ಇದ್ದವರಿಗೆ ಜೀವಂತ ಆದರ್ಶ ವ್ಯಕ್ತಿತ್ವದ ಪರಿಚಯ ಮಾದರಿಯಾಗಬಲ್ಲದು. ಬಹುಮುಖಿತ್ವದ ಅನುಭವವಾಗಬಲ್ಲದು.
If you have perseverance, talent, loyalty, and a determination to achieve your goal, you can face challenges and achieve success. Neither poverty nor any discrimination can restrict it. They cannot hinder the development of personality. Nalvadi Krishnaraja Wodeyar and Sir.M. Visvesvaraya are direct witnesses to the fact that when a person uses the power he has gained in a socially oriented manner effectively, he can gain a permanent place in the public eye. For those who aspire to rise, the introduction of a living ideal personality can be a model. It can be an experience of versatility
ಪದಗಳ ಅರ್ಥ (Word Meanings)
| ಪದ (Word) | Kannada Meaning | English Meaning & Context |
| ಅಸ್ತಿಭಾರ | ಬುನಾದಿ | Foundation / Base |
| ಗಿರಣಿ | ಹತ್ತಿಯನ್ನು ಬಿಡಿಸುವ, ನೂಲು ಮಾಡುವ, ಧಾನ್ಯ ಬೀಸುವ ಯಂತ್ರ ಮತ್ತು ಇಂತಹ ಯಂತ್ರಗಳಿಂದ ಕೂಡಿದ ಕಟ್ಟಡ. | Mill / Factory (e.g., cotton mill, flour mill) |
| ತಾಂತ್ರಿಕ | ತಂತ್ರಜ್ಞಾನಕ್ಕೆ ಸಂಬಂಧಿಸಿದ | Technical / Technological |
| ಮುಕ್ತಕಂಠ | ತೆರೆದ ಮನಸ್ಸು | Open-minded / Wholehearted praise (literally “open throat/voice”) |
| ಶತಮಾನೋತ್ಸವ | ನೂರು ವರ್ಷ ತುಂಬಿದ ಸಮಯದಲ್ಲಿ ಆಚರಿಸುವ ಉತ್ಸವ | Centenary / 100th-anniversary celebration |
| ಸುಪರ್ದಿ | ವಶ | Custody / Control / Possession |
| ಸ್ಥೈರ್ಯ | ದೃಢತೆ | Fortitude / Mental firmness / Resoluteness |
| ಹರಿಕಾರ | ಮುಂದಾಳು | Harbinger / Pioneer / Leader |
| ಕಾಮಗಾರಿ | ಕೆಲಸ | Work / Construction work / Project execution |
| ಗೊಮ್ಮಟ ವ್ಯಕ್ತಿತ್ವ | ಉನ್ನತ ವ್ಯಕ್ತಿತ್ವ | Monumental personality / Sublime and magnificent character |
| ದೂಷಣೆ | ನಿಂದನೆ | Blame / Criticism / Condemnation |
| ವೈಜ್ಞಾನಿಕ | ವಿಜ್ಞಾನಕ್ಕೆ ಸಂಬಂಧಿಸಿದ | Scientific |
| ಸಮುಚ್ಚಯ | ಸಮೂಹ | Cluster / Collection / Aggregation / Complex |
| ಸುಸಂಗತ | ಯೋಗ್ಯವಾದ | Relevant / Consistent / Appropriate |
| ಹಂಬಲ | ಬಯಕೆ | Yearning / Longing / Strong desire |
ಟಿಪ್ಪಣಿ
| ಪದ (Word) | ಮೂಲ (Origin) | ಕನ್ನಡ ಅರ್ಥ (Kannada Meaning) | English Meaning & Context |
| ರೀಜೆಂಟ್ | (ಇಂಗ್ಲಿಷ್ ಪದ) | ಪ್ರತಿನಿಧಿ | Regent (A person appointed to administer a state because the monarch is a minor, absent, or incapacitated; a representative). |
| ಸ್ಯಾನಿಟರಿ | (ಇಂಗ್ಲಿಷ್ ಪದ) | ನಿರ್ಮಲೀಕರಣ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ. | Sanitary, Relating to conditions affect hygiene and health |
| ದಿವಾನ | (ಪರ್ಷಿಯನ್ ಪದ) | ಸಚಿವ, ಮಂತ್ರಿ, ಹಿರಿಯ, ಮುಖ್ಯಕಾರ್ಯಭಾರಿ. | Diwan / Dewan ,A chief officer |
| ಮನ್ವಂತರ | (ಸಂಸ್ಕೃತ ಪದ) | ಒಬ್ಬ ಮನುವಿನ ಕಾಲ, ಪರಿವರ್ತನೆಯ ಕಾಲ. | Manvantara / Age of Transition (An astronomical period of time in Hindu cosmology ruled by a specific Manu; contextually means a monumental period of change or transformation). |
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. (Answer the given questions in one sentence each.
೧. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ಉ. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರು.
೨. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣ ಬದ್ಧರಾದರು?
ಉ. ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದರು.
೩. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?
ಉ. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ವಾಣಿವಿಲಾಸ ಸಾಗರ.
೪. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು ?
ಉ. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.
೫. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
ಉ. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು.
೬. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ?
ಉ: ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ʼಎಂಜನಿಯರ್ ದಿನಾಚರಣೆʼಯನ್ನು ಆಚರಿಸಲಾಗುತ್ತಿದೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the given questions in three to four sentences)
೧. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.
೨. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಾಣಿವಿಲಾಸ ಸಾಗರ ಅಥವಾ ಮಾರಿ ಕಣಿವೆ, ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ, ಕೃಷ್ಣರಾಜಸಾಗರ ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ ಹೀಗೆ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು.
೩. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
ಉ: ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆ ಜನ್ಮ ಸಿದ್ಧ ಹಕ್ಕಾಗಬೇಕು” ಎಂದು ಹೇಳಿದರು.
೪. ನೆಹರು ಅವರು ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ?
ಉ: “ ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ. ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ನೆಹರು ಅವರು ಸರ್. ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಹೇಳಿದ್ದಾರೆ.
೫. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
ಉ: ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳು ಹೀಗಿವೆ: ೧೯೧೩ರಲ್ಲಿ ಮೈಸೂರು ಬ್ಯಾಂಕ್ ಅನ್ನು ಸ್ಥಾಪಿಸಿದರು. ಅನಂತರ ಉಳಿತಾಯ ಬ್ಯಾಂಕುಗಳನ್ನು ಆರಂಭಿಸಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಪ್ರಾರಂಭಿಸಿದರು. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲ ತೆಗೆದುಕೊಳ್ಳಲು ಸಹಕಾರಿ ಬ್ಯಾಂಕುಗಳನ್ನು ಆರಂಭಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the given questions in eight to ten sentences)
೧. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ʼಮಾದರಿ ಮೈಸೂರು ರಾಜ್ಯʼ ಹೇಗಾಯಿತು?
೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ಕೃಷ್ಣರಾಜ ಒಡೆಯರ್ ಅವರು ನೋಡಿಕೊಂಡರು. ಅವರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ಇವರು ಪ್ರಜಾಪ್ರತಿನಿಧಿ ಸಭೆ ಆರಂಭಿಸಿ ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದರು. ಇದನ್ನು ವರ್ಷಕ್ಕೆ ಎರಡು ಬಾರಿ ಜೂನ್ ೧, ಮಹಾರಾಜರ ವರ್ಧಂತಿ ಅಕ್ಟೋಬರ್ ೨, ದಸರಾ ಮಹೋತ್ಸವ ಸಮಾವೇಶಗಳಲ್ಲಿ ಕಲಾಪಗಳನ್ನು ನಡೆಸುತ್ತಿದ್ದರು. ಅಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು ಮುಂತಾದ ಸಂಸದೀಯ ಮಾದರಿಯ ನಡವಳಿಕೆ ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು.
ನಾಲ್ವಡಿ ಕೃಷ್ಣರಾಜರು ೧೯೦೭ರಲ್ಲಿ ನ್ಯಾಯ ವಿದಾಯಕ ಸಭೆಯನ್ನು ಸ್ಥಾಪಿಸಿದರು. ಇದರ ಸದಸ್ಯರ ಸಂಖ್ಯೆ ೫೦. ಈ ಸಂಸ್ಥೆ ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು. ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲಾ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿತ್ತು. ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಈ ಸಭೆಯ ಅನುಮತಿ ಬೇಕಿತ್ತು. ಈ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇತ್ತು.
ಅವರ ಕಾಲದಲ್ಲಿ ವಾಣಿವಿಲಾಸ ಸಾಗರ ಅಥವಾ ಮಾರಿ ಕಣಿವೆ, ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ, ಕೃಷ್ಣರಾಜಸಾಗರ ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ ಹೀಗೆ ಹಲವು ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು.
ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣವನ್ನು ಮಾಡಿದರು. ನಗರ ಪಾಲಿಕೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಕೆಲಸವನ್ನು ಮಾಡಲು ಆರಂಭಿಸಿದವು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.
ಸಂಗೀತ, ಸಾಹಿತ್ಯ, ವಾಸ್ತುಶಿಲ್ಪಗಳ ಅಭಿವೃದ್ಧಿಯನ್ನು ಮಾಡಿದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಮೈಸೂರು, ಅರಿಸಿಕೆರೆ, ಬೆಂಗಳೂರು – ಚಿಕ್ಕಬಳ್ಳಾಪುರ, ಚಿಕ್ಕಜಾಜೂರು- ಚಿತ್ರದುರ್ಗ, ನಂಜನಗೂಡು-ಚಾಮರಾಜನಗರ, ತರಿಕೆರೆ-ಶಿವಮೊಗ್ಗ-ಆನಂದಪುರ ಈ ಎಲ್ಲಾ ರೈಲಿನ ಮಾರ್ಗಗಳನ್ನು ೧೯೩೧ರ ವೇಳೆಗೆ ಪೂರೈಸಿದರು.
ಹೀಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ʼಮಾದರಿ ಮೈಸೂರು ರಾಜ್ಯʼವಾಯಿತು.
೨. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
ಉ: ವಿಶ್ವೇಶ್ವರಯ್ಯನವರು ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು.
ವಿಶ್ವೇಶ್ವರಯ್ಯನವರು ೧೯೧೩ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಅವರು ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣದಿಂದ ಹೊರಗೆ ತಂದರು. ಇದನ್ನು ಮೈಸೂರು ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ಆರ್ಥಿಕ ಶರತ್ತಿನ ಮೂಲಕ ನಡೆಸುವ ಯೋಜನೆಯನ್ನು ತಂದರು. ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.
ವಿಶ್ವೇಶ್ವರಯ್ಯನವರು ಕೈಗಾರಿಕೆಗೆ ಅಗ್ರ ಪ್ರಶಸ್ತಿ ನೀಡಿದ್ದರು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಿದರು. ಹೆಂಚಿನ ಕಾರ್ಖಾನೆ, ಮೂಳೆ ಮತ್ತು ಗೊಬ್ಬರ ತಯಾರಿಕಾ ಸ್ಥಾವರ, ಸಕ್ಕರೆ ಕಾರ್ಖಾನೆ, ಔಷಧಿ ತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದ ಕಾರ್ಖಾನೆಗಳನ್ನು ಸ್ಥಾಪಿಸಿದರು. ಸೋಪು ಹಾಗೂ ಲೋಹ ತಯಾರಿಕೆ, ಕಲೆ ಮತ್ತು ಕರಕುಶಲ ಡಿಪೋ, ಕೃಷ್ಣರಾಜೇಂದ್ರ ಬಟ್ಟೆ ಗಿರಣಿ, ಕಾಗದದ ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತು ಪಿಠೋಪಕರಣಗಳ ತಯಾರಿಕಾ ಘಟಕಗಳು ಹೀಗೆ ಹಲವು ಕೈಗಾರಿಕೆಗಳನ್ನು ಆರಂಭಿಸಿದರು.
ವಿಶ್ವೇಶ್ವರಯ್ಯನವರು ರಾಜ್ಯದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು. ಅವರು ೧೯೧೩ರಲ್ಲಿ ಮೈಸೂರು ಬ್ಯಾಂಕ್ ನ್ನು ಸ್ಥಾಪಿಸಿದರು. ಉಳಿತಾಯ ಬ್ಯಾಂಕುಗಳನ್ನು ಸ್ಥಾಪಿಸಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಪ್ರಾರಂಭಿಸಿದರು. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲ ತೆಗೆದುಕೊಳ್ಳಲು ಸಹಕಾರಿ ಬ್ಯಾಂಕುಗಳನ್ನು ಆರಂಭಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು. ಅವರು ರಾಜ್ಯದ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು. ಹೀಗೆ ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸೇವೆಯನ್ನು ಸಲ್ಲಿಸಿದರು.
೩. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
ಉ: ವಿಶ್ವೇಶ್ವರಯ್ಯನವರು ಆಧುನಿಕ ಶಿಕ್ಷಣವು ಎಲ್ಲ ಸಮಸ್ಯೆಗಳಿಗೂ ಪರಿಹಾರವೆಂದು ನಂಬಿದ್ದರು. ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ವಿಶ್ವೇಶ್ವರಯ್ಯನವರು ೧೯೧೩ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಅವರು ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣದಿಂದ ಹೊರಗೆ ತಂದರು. ಇದನ್ನು ಮೈಸೂರು ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ಆರ್ಥಿಕ ಶರತ್ತಿನ ಮೂಲಕ ನಡೆಸುವ ಯೋಜನೆಯನ್ನು ತಂದರು. ವಿಶ್ವೇಶ್ವರಯ್ಯನವರು “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ರಾಜ್ಯದಲ್ಲಿ ಎಲ್ಲರ ಜನ್ಮಸಿದ್ದ ಹಕ್ಕಾಗಬೇಕು” ಎಂದು ನಂಬಿದ್ದರು. ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿರಿ. (Explain taste with context)
೧. “ಸಾಮಾಜಿಕ ಕಾನೂನುಗಳ ಹರಿಕಾರ”
ಆಯ್ಕೆ: ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಪಾಠ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿ ಮಾಡಿದರು. ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ, ಗೆಜ್ಜೆಪೂಜೆ ಪದ್ಧತಿ ನಿರ್ಮೂಲನೆ, ವೈಶ್ಯಾವೃತ್ತಿ ತಡೆಗಟ್ಟುವ ಕಾಯಿದೆ, ವಿಧವಾ ಮರು ವಿವಾಹ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ ಹೀಗೆ ಹಲವಾರು ಕಾನೂನುಗಳನ್ನು ಜಾರಿಗೊಳಿಸಿ ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದರು.
ಸ್ವಾರಸ್ಯ: ಒಳ್ಳೆಯ ಸಮಾಜಕ್ಕಾಗಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಕಾನೂನುಗಳು
ಅವರನ್ನು “ಸಾಮಾಜಿಕ ಕಾನೂನುಗಳ ಹರಿಕಾರ” ಎಂಬ ಹೆಸರು ತಂದುಕೊಟ್ಟಿದ್ದು ಇಲ್ಲಿನ ಸ್ವಾರಸ್ಯವಾಗಿದೆ.
೨. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು”
ಆಯ್ಕೆ: ಈ ವಾಕ್ಯವನ್ನು “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಪುನಾದ ಮುಖ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲುಗಳನ್ನು ವಿಶ್ವೇಶ್ವರಯ್ಯನವರು ಅಳವಡಿಸಿದ್ದರು. ಸ್ವಯಂ ಚಾಲಿತ ಬಾಗಿಲುಗಳ ಅನ್ವೇಷಣೆ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು ಎಂಬ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ವಿಶ್ವೇಶ್ವರಯ್ಯನವರಲ್ಲಿದ್ದ ಅನ್ವೇಷಣಾ ಸಾಮರ್ಥ್ಯವನ್ನು ಇಲ್ಲಿ ಸ್ವಾರಸ್ಯ ಪೂರ್ಣವಾಗಿ ಹೇಳಲಾಗಿದೆ.
೩. “ಮೈಸೂರು ಸಂಸ್ಥಾನಕ್ಕೆ ʼಮಾದರಿ ಮೈಸೂರುʼ ಎಂಬ ಕೀರ್ತಿ ಪ್ರಾಪ್ತವಾಯಿತು”
ಆಯ್ಕೆ: ಈ ವಾಕ್ಯವನ್ನು “ಭಾಗ್ಯಶಿಲ್ಪಿಗಳು” ಪಾಠದ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿರುವ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಪಾಠ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ಕೃಷ್ಣರಾಜ ಒಡೆಯರ್ ಅವರು ನೋಡಿಕೊಂಡರು. ಅವರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಹೀಗೆ ಮೈಸೂರು ಸಂಸ್ಥಾನದ ಅಭಿವೃದ್ದಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
ಸ್ವಾರಸ್ಯ: ನಾಲ್ವಡಿ ಕೃಷ್ಣರಾಜ ಒಡೆಯರು ದೂರದೃಷ್ಟಿ ಹಾಗೂ ಅಭಿವೃದ್ಧಿಯ ಆಡಳಿತದ ಸ್ವಾರಸ್ಯವನ್ನು ಇಲ್ಲಿ ಹೇಳಲಾಗಿದೆ.
೪. “ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ”
ಆಯ್ಕೆ: ಈ ವಾಕ್ಯವನ್ನು “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು” ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ. ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ನೆಹರುರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು.
ಸ್ವಾರಸ್ಯ: ಸರ್ ಎಂ ವಿಶ್ವೇಶ್ವರಯ್ಯನವರ ಅಘಾತ ಸೇವೆ ಕರ್ತವ್ಯ ನಿಷ್ಠೆ ಭಾರತದ ಗಮನ ಸೆಳೆದಿತ್ತು ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
ಉ) ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ. (Fill in the blanks with the correct word)
೧. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರೀಜೆಂಟರಾಗಿ ಕಾರ್ಯ ನಿರ್ವಹಿಸಿದವರು ಮಹಾರಾಣಿ ವಾಣಿ ವಿಲಾಸ್ ರವರು.
೨. ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧವಾಯಿತು.
೩. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು.
೪. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ಸಂಡ್ ಹಸ್ಟ್ರ್ ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು.
೫. ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ ʼಭಾರತ ರತ್ನʼ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳ ತತ್ಸಮ ತದ್ಭವ ಬರೆಯಿರಿ. (Write the equivalent of the given words.
ವಂಶ = ಬಂಚ, ಸ್ಥಾನ = ತಾಣ, ಯಶ = ಜಸ, ಪಟ್ಟಣ = ಪತ್ತನ, ಕಾರ್ಯ = ಕಜ್ಜ
೨. ನೀಡಿರುವ ಪದಗಳಲ್ಲಿ ಅನ್ಯ ದೇಶ ಪದಗಳನ್ನು ಆರಿಸಿ ಬರೆಯಿರಿ. (Choose and write foreign words from the given words)
ಡಿಪ್ಲೋಮಾ, ದಿವಾನ, ಪ್ರೌಢ, ಶಿಕ್ಷಣ, ನಡೆಸು, ಸೋಪು, ಕಾರ್ಖಾನೆ, ಕಾಗದ, ಕಚೇರಿ
ಅನ್ಯ ದೇಶ ಪದ – ಡಿಪ್ಲೋಮಾ, ದಿವಾನ, ಸೋಪು, ಕಚೇರಿ
೩.ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. (Explain and write the meaning of the given proverbs)
೧. ಕೂಡಿ ಬಾಳಿದರೆ ಸ್ವರ್ಗ ಸುಖ.
ಗಾದೆ ವೇದಕ್ಕೆ ಸಮಾನ. ಎಲ್ಲರೂ ಒಗ್ಗಟ್ಟಿನಿಂದ ಮತ್ತು ಪ್ರೀತಿಯಿಂದ ಒಟ್ಟಾಗಿ ಬಾಳಿದರೆ, ಆ ಜೀವನವೇ ಸ್ವರ್ಗದಂತೆ ಸುಖಮಯವಾಗಿರುತ್ತದೆ.
೨. ಮಾತೆ ಮುತ್ತು ಮಾತೆ ಮೃತ್ಯು.
ಗಾದೆ ವೇದಕ್ಕೆ ಸಮಾನ. ನಾವು ಆಡುವ ಒಳ್ಳೆಯ ಮಾತು ನಮಗೆ ಮುತ್ತಿನಂತೆ ಗೌರವ ತಂದರೆ, ಆಡುವ ಕೆಟ್ಟ ಮಾತು ಸಾವಿನಂತಹ ದೊಡ್ಡ ಸಂಕಷ್ಟವನ್ನು ತರಬಲ್ಲದು.
ಸೈದ್ಧಾಂತಿಕ ಭಾಷಾಭ್ಯಾಸ (ಲೇಖನ ಚಿಹ್ನೆಗಳು)
ಬರೆವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಮುಖ್ಯವಾದುದು. ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳು ಎನ್ನುತ್ತೇವೆ. ಲೇಖನ ಚಿಹ್ನೆಗಳಿಲ್ಲದ ಬರೆವಣಿಗೆ ಸ್ಪಷ್ಟಾರ್ಥವನ್ನು ಕೊಡದೆ ತೊಡಕುಗಳಿಗೆ ಕಾರಣವಾಗುವುದುಂಟು.
- ಪೂರ್ಣ ವಿರಾಮ : ( . ) ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು. ಉದಾ :- ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ.
- ಅರ್ಧ ವಿರಾಮ : ( ; ) ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು. ಉದಾ :- ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.
- ಅಲ್ಪವಿರಾಮ : ( , ) ಸಂಬೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಅಲ್ಪವಿರಾಮ ಬಳಸಬೇಕು. ಉದಾ :- ಬಟ್ಟೆಗಿರಣಿ, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ.
- ಪ್ರಶ್ನಾರ್ಥಕ : ( ? ) ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಲಾಗುವುದು. ಉದಾ :- ದಾಶರಥಿ ಯಾರು ?
- ಭಾವಸೂಚಕ : ( ! ) ಹರ್ಷ, ಆಶ್ಚರ್ಯ, ಸಂತೋಷ, ವಿಷಾದ ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು. ಉದಾ :- ಅಯ್ಯೋ! ಹೀಗಾಗಬಾರದಿತ್ತು!
- ಉದ್ಧರಣ ಚಿಹ್ನೆ : ( “ ” ) ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು. ಉದಾ :- “ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು” ಎಂದು ಸರ್ ಎಂ. ವಿಶ್ವೇಶ್ವರಯ್ಯನವರು ಹೇಳಿದರು.
- ವಾಕ್ಯವೇಷ್ಟನ ಚಿಹ್ನೆ : (‘ ’) ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು. ಉದಾ :- ಕನ್ನಡ ಭಾಷೆಯಲ್ಲಿ ‘ಇಂಗ್ಲಿಷ್’, ‘ಪರ್ಷಿಯನ್’, ‘ಪೋರ್ಚುಗೀಸ್’ ಭಾಷೆಗಳ ಪದಗಳನ್ನು ಬಳಸಲಾಗುತ್ತದೆ.