Nityotsava 7th Standard Kannada Notes. Nityotsava Karnataka State Syllabus 2024 Kseeb Solutions For Class 8 Kannada  8ನೇ ತರಗತಿ ಕನ್ನಡ ನಿತ್ಯೋತ್ಸವ, ನಿತ್ಯೋತ್ಸವ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು ಸಾರಾಂಶ, nithyotsava Question Answer Summary, hutathma balaaka Mcq Pdf Download in Kannada Medium,

This poem is written by Shri. K S Nisar Ahmed. Karnataka’s beauty is very well expressed by the poet. He writes about Karnataka as”Beautiful jog falls, free flowing of Tunga river, minerals of Sahyadri hills, Green thick forest “. This is the solved exercise of the Poem Nityotsava.

ನಿತ್ಯೋತ್ಸವ (ಪದ್ಯ) – Everyday Celebration (Poem)

ಕೆ. ಎಸ್. ನಿಸಾರ್ ಅಹಮದ್
– K. S. Nissar Ahmed

ಪಾಠ ಪ್ರವೇಶ :

ಕನ್ನಡ ನಾಡು ನುಡಿಯನ್ನು ಕುರಿತು ಅದೆಷ್ಟು ಭಾವನೆಗಳು ಮನಸ್ಸಿನಲ್ಲಿ ಮೂಡಿಬರುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ, ನದಿ, ಬೆಟ್ಟಗಳು, ಜಲಪಾತಗಳು, ಅರಣ್ಯಗಳು ಮೈಮನವನ್ನು ಸೆಳೆಯುತ್ತವೆ. ಹಾಗೆಯೇ ಈ ನಾಡಿನ ಇತಿಹಾಸ ವೀರರ ಕೆಚ್ಚು, ಜನರ ನಡೆನುಡಿಗಳು ಲೋಕಕ್ಕೆ ಆದರ್ಶವಾಗಿವೆ. ಹೀಗಾಗಿಯೇ ಅನೇಕ ಕವಿಗಳು ಈ ನಾಡನ್ನು ಅನೇಕ ವಿಧದಲ್ಲಿ ಹಾಡಿ ಹೊಗಳಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಕವಿ ಜಗತ್ಪ್ರಸಿದ್ಧ ಜೋಗದ ಜಲಪಾತ, ಸಹ್ಯಾದ್ರಿಯ ಪರ್ವತಶ್ರೇಣಿ ಮತ್ತು ಅಲ್ಲಿಯ ನದಿಗಳ ನೈಸರ್ಗಿಕ ಸೊಬಗು ನಿತ್ಯೋತ್ಸವವನ್ನು ಉಂಟುಮಾಡುತ್ತಿವೆ. ಈ ನಿತ್ಯೋತ್ಸವ ಇತಿಹಾಸದ ಪುಟಗಳಲ್ಲಿ, ದೇವಾಲಯಗಳ ಭಿತ್ತಿಗಳಲ್ಲಿ, ಓಲೆಗರಿಗಳಲ್ಲಿ ಅಷ್ಟೇ ಅಲ್ಲ ಜನರ ನಡೆನುಡಿಗಳಲ್ಲೂ ತುಂಬಿದೆ ಎಂದು ಬಣ್ಣಿಸಿದ್ದಾರೆ.

Introduction to the Lesson:

How many diverse emotions rise in our hearts when thinking of the Kannada land and language! Its natural beauty, rivers, hills, waterfalls, and forests captivate our minds and souls. Similarly, this land’s history, the fierce courage of its heroes, and the conduct of its people serve as an ideal to the entire world. It is for this reason that many poets have sung praises of this land in numerous ways. In the present poem, the poet describes how the world-famous Jog Falls, the Sahyadri mountain ranges, and the natural beauty of the rivers flowing there create an everyday celebration. He portrays how this everyday celebration is alive not only in the pages of history, on temple walls, and on palm leaves but is also deeply embedded in the everyday conduct and speech of the people.

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ||೧||

In the wealth of Jog’s light
In the swaying of Tungabhadra’s crops
In the iron ores of Sahyadri
At the high, unreachable peak,
Among the teak and sandalwood trees of the evergreen forest,
Everyday celebration, Mother, everyday celebration!
To you, everyday celebration, Mother, everyday celebration! || 1 ||

ಇತಿಹಾಸದ ಹಿಮದಲ್ಲಿನ
ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ
ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ||೨||

In the snow of history,
In the series of thrones,
In the lines of inscriptions
Proclaiming past adventures loudly,
In the wealth of palm leaves, on the walls of temples,
Everyday celebration, Mother, everyday celebration! || 2 ||

ಹಲವೆನ್ನದ ಹಿರಿಮೆಯೆ
ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲನುಡಿಯ
ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ||೩||

Pride that says all are one (not many),
Glory that says there is no caste,
Good righteous speech,
Landscape of the world’s nectar,
This Year , no jealousy or hatredeness selfless mind
Everyday celebration, Mother, everyday celebration!
To you, everyday celebration, Mother, everyday celebration!

ಕೃತಿಕಾರರ ಪರಿಚಯ :

ಕೆ. ಎಸ್. ನಿಸಾರ್ ಅಹಮದ್ ಕನ್ನಡದ ಪ್ರಮುಖ ಕವಿಗಳಲ್ಲಿ ಇವರು ಒಬ್ಬರು. ಇವರ ಹುಟ್ಟೂರು ಬೆಂಗಳೂರು ಜಿಲ್ಲೆಯ ದೇವನಹಳ್ಳಿ. ಇವರು ಫೆಬ್ರವರಿ ೦೫, ೧೯೩೬ ರಲ್ಲಿ ಜನಿಸಿದರು. ಇವರು ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ನಿತ್ಯೋತ್ಸವ, ನವೋಲ್ಲಾಸ, ಅಚ್ಚು ಮೆಚ್ಚು, ಇದು ಬರಿ ಬೆಡಗಲ್ಲೋ ಅಣ್ಣ ಮುಂತಾದ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಇವರಿಗೆ ಮಾಸ್ತಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳು ಲಭಿಸಿವೆ. ಪ್ರಸ್ತುತ ‘ನಿತ್ಯೋತ್ಸವ’ ಕವಿತೆ ಅವರ ಪ್ರಸಿದ್ಧ ಕವಿತೆಯಾಗಿದೆ.

About the Author:

Prof. K. S. Nissar Ahmed is one of the prominent poets of Kannada literature. His birthplace is Devanahalli in the Bengaluru district. He was born on February 05, 1936. He served as a professor in various government colleges.

K S Nisar Ahmed has authored highly significant works such as ‘Manasu Gandhi Bazaru’, ‘Nenedavara Manadalli’, ‘Sanje Aidara Male’, ‘Nanemba Parakiya’, ‘Nityotsava’, ‘Navollasa’, ‘Acchu Mecchu’, and ‘Idu Bari Bedagallo Anna’.

He has been honored with prestigious awards, including the Masti Award, the State Sahitya Academy Award, the Nadoja Award, and the Kempegowda Award. The poem ‘Nityotsava’ (Everyday Celebration) remains his most celebrated work.

ಅಭ್ಯಾಸ

I. ಪದಗಳ ಅರ್ಥ ತಿಳಿಯಿರಿ :

ಅದಿರು – ಖನಿಜ– Mineral / Metal

ಉತ್ತುಂಗ – ಎತ್ತರವಾದ; ಶ್ರೇಷ್ಠ. – High / Height / Eminent

ಗತ – ಹಿಂದೆ ಆದುದು – Past / That which has passed

ತರು – ಮರ – Tree

ತೇಗ – ಒಂದು ಜಾತಿಯ ಮರ; ಸಾಗುವಾನಿ – Teak wood / A type of tree

ನಿರ್ಮತ್ಸರ – ದ್ವೇಷ ಇಲ್ಲದಿರುವುದು – Free from jealousy or malice

ವತ್ಸರ – ವರ್ಷ – Year

ಶಾಸನ – ಆಜ್ಞೆ; ಕಲ್ಲಿನ ಮೇಲಿನ ಬರಹ – Edict / Inscription on stone

ಸದ್ವಿಕಾಸ – ಉತ್ತಮ ಬೆಳವಣಿಗೆ – Good growth / Healthy development

ಸೀಮೆ – ಸ್ಥಳ; ಪ್ರದೇಶ; ನಾಡು; ದೇಶ – Region / Territory / Boundary / Land / Country

ಅಮೃತ – ಹಾಲು; ಪವಿತ್ರವಾದುದು – Nectar / Milk / Something pure and divine

ಓಲೆ – ತಾಳೆಗರಿ; ಕಾಗದ ಪತ್ರ – Palm leaf / Letter / Document

ಗರಿಮೆ – ಹಿರಿಮೆ – Pride / Greatness / Glory

ತೆನೆ – ಬಸಿರು; ಧಾನ್ಯದ ಹೊದೆ – Ear of corn or grain / Crop / Swaying grain spike

ನಿತ್ಯೋತ್ಸವ– ನಿತ್ಯ ನಡೆಯುವ ಮಂಗಳ ಕಾರ್ಯ- Everyday celebration / Daily auspicious event

ಭಿತ್ತಿ – ಗೋಡೆ – Wall

ವನ – ಕಾಡು, ಬನ,  ಅರಣ್ಯ – Forest / Grove / Woods

ಶೀಲ – ನಡತೆ, ಚಾರಿತ್ರ್ಯ- Conduct / Character / Behaviour

ಸಿರಿ – ಸಂಪತ್ತು – Wealth / Prosperity

ಹಿರಿಮೆ – ಹೆಚ್ಚುಗಾರಿಕೆ – Greatness / Pride / Superiority

II. ಪ್ರಶ್ನೆಗಳು :

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. ( Answer the following questions in one sentences)

೧. ಜೋಗದ ಸಿರಿ ಯಾವುದು?
ಉ: ಜೋಗದ ಸಿರಿ ಬೆಳಕಿನಲ್ಲಿದೆ.

೨. ತುಂಗಾ ನದಿ ಹೇಗೆ ಹರಿದು ಬರುತ್ತದೆ?
ಉ: ತುಂಗಾ ನದಿ ತೆನೆಯ ನಡುವೆ ಬಳುಕುತ್ತಾ ಹರಿದು ಬರುತ್ತದೆ

೩. ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?
ಉ: ಹರಿದ್ವರ್ಣ ಕಾಡುಗಳಲ್ಲಿ ತೇಗ ಮತ್ತು ಗಂಧ ಜಾತಿಯ ಮರಗಳಿವೆ.

೪. ಶಾಸನಗಳು ಏನನ್ನು ಸಾರುತ್ತದೆ?
ಉ: ಶಾಸನಗಳು ಗತಕಾಲದ ಸಾಹಸಗಳನ್ನು ಸಾರುತ್ತದೆ.

೫. ಕನ್ನಡ ಸೀಮೆಯ ಜನರ ಮನಸ್ಸು ಎಂತಹದ್ದು?
ಉ: ಕನ್ನಡ ಸೀಮೆಯ ಜನರ ಮನಸ್ಸು “ ನಾವೆಲ್ಲರೂ ಒಂದೇ” ಎಂಬ ಮನೋಭಾವದ್ದು.

೬. ಕನ್ನಡ ಸೀಮೆಯ ಜನರ ನುಡಿ ಯಾವ ರೀತಿಯದು?
ಉ: ಕನ್ನಡ ಸೀಮೆಯ ಜನರ ನುಡಿ ಅದ್ಭುತದ ರೀತಿಯದು.

ಇ.  ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the questions in two – three sentences)

೧. ಕನ್ನಡ ನಾಡಿನ ಪ್ರಕೃತಿಯ ನಿತ್ಯೋತ್ಸವವನ್ನು ಕವಿ ಏನೆಂದು ವರ್ಣಿಸಿದ್ದಾರೆ?
ಉ: ಕನ್ನಡ ನಾಡಿನ ಪ್ರಕೃತಿಯ ನಿತ್ಯೋತ್ಸವವನ್ನು ಕವಿ ಜೋಗದ ಜಲಪಾತ, ಬಳುಕುವ ತುಂಗೆಯ ಸಂಪತ್ತಿಗೆ ಹೋಲಿಸಿ ವರ್ಣಿಸಿದ್ದಾರೆ.

೨. ನಾಡಿನ ಇತಿಹಾಸ ನಿತ್ಯೋತ್ಸವವನ್ನು ಎಲ್ಲೆಲ್ಲಿ ಕಾಣಬಹುದಾಗಿದೆ?
ಉ: ನಾಡಿನ ಇತಿಹಾಸ ನಿತ್ಯೋತ್ಸವವನ್ನು ಕರ್ನಾಟಕವನ್ನು ಆಳಿದ  ವೀರ ಅರಸರ ಶಾಸನಗಳಲ್ಲಿ, ಗೋಡೆಯ ಚಿತ್ರಗಳಲ್ಲಿ ಹಾಗೂ ಕವಿಗಳು ರಚಿಸಿದ ಓಲೆಗರಿಗಳಲ್ಲಿ ಕಾಣಬಹುದಾಗಿದೆ.

III. ಭಾಷಾಭ್ಯಾಸ :

ಅ. ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)

ನಿತ್ಯೋತ್ಸವ: ಶಾಲೆಗೆ ಹೋಗುವದೆಂದರೆ ನನಗೆ ನಿತ್ಯೋತ್ಸವ.
ಉತ್ತುಂಗ: ಹಿಮಾಲಯ ಪರ್ವತ ಉತ್ತುಂಗದಲ್ಲಿ ಇದೆ.
ಹಿರಿಮೆ: ಕರ್ನಾಟಕದ ಬಗ್ಗೆ ನಮಗೆ ಹಿರಿಮೆ ಇದೆ.
ಸದ್ವಿಕಾಸ: ನಮ್ಮ ಸದ್ವಿಕಾಸದ ಕಡೆಗೆ ಗಮನ ಕೊಡಬೇಕು.
ಇತಿಹಾಸ: ನನಗೆ ಇತಿಹಾಸ ಇಷ್ಟ ಇಲ್ಲ.

ಆ . ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. ( Split the words)

  1. ನಿತ್ಯೋತ್ಸವ = ನಿತ್ಯ + ಉತ್ಸವ
  2. ಮನದುದಾರ = ಮನದ + ಉದಾರ
  3. ಲೋಹದದಿರ = ಲೋಹದ + ಅದಿರ
  4. ಲೋಕಾಮೃತ = ಲೋಕ + ಅಮ್ರತ
  5. ಸಿಂಹಾಸನ : ಸಿಂಹ + ಆಸನ

ಇ. ಕೆಳಗಿನ ಪದಗಳಿಗೆ ನಾನಾರ್ಥ ಪದಗಳನ್ನು ಬರೆಯಿರಿ. (Write many meanings)

೧. ತೊರೆ – ನದಿ , ಬಿಡು
೨. ವರ್ಣ – ಬಣ್ಣ , ಜಾತಿ
೩. ಹತ್ತು – ಸಂಖ್ಯೆ , ಏರು

ಈ. ಕೆಳಗಿನ ಪದಗಳನ್ನು ಬಹುವಚನ ಬರೆಯಿರಿ. (Write the plural)
೧. ಓಲೆ – ಓಲೆಗಳು                ೨. ಸಿಂಹಾಸನ – ಸಿಂಹಾಸನಗಳು
೩. ತಾಯಿ – ತಾಯಿಯರು          ೪. ಜಲಪಾತ – ಜಲಪಾತಗಳು

IV. ಚಟುವಟಿಕೆಗಳು :

೧. ಕರ್ನಾಟಕವನ್ನು ಆಳಿದ ರಾಜಮನೆತನಗಳನ್ನು ಪಟ್ಟಿ ಮಾಡಿರಿ – List the dynasties that ruled over Karnataka.

ಕರ್ನಾಟಕದ ಇತಿಹಾಸದಲ್ಲಿ ಸುದೀರ್ಘ ಕಾಲ ಆಳ್ವಿಕೆ ನಡೆಸಿ, ಕಲೆ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡಿದ ಪ್ರಮುಖ ರಾಜಮನೆತನಗಳು ಹೀಗಿವೆ:

೨. ಕರ್ನಾಟಕದಲ್ಲಿ ದೊರೆತ ಪ್ರಮುಖ ಶಾಸನಗಳನ್ನು ಹೆಸರಿಸಿ – Name the prominent inscriptions found in Karnataka.

ಕರ್ನಾಟಕದ ಇತಿಹಾಸ ಮತ್ತು ಕನ್ನಡ ಭಾಷೆಯ ಪ್ರಾಚೀನತೆಯನ್ನು ಸಾರುವ ಪ್ರಮುಖ ಶಾಸನಗಳು:

೩. ಕರ್ನಾಟಕದಲ್ಲಿರುವ ಪ್ರಮುಖ ನದಿ ಹಾಗೂ ಅರಣ್ಯ ಪ್ರದೇಶಗಳ ಬಗ್ಗೆ ಮಾಹಿತಿ – Gather information about the major rivers and forest regions located across Karnataka

ಅ) ಪ್ರಮುಖ ನದಿಗಳು:

ಕರ್ನಾಟಕವನ್ನು ನದಿಗಳ ತವರು ಎನ್ನಬಹುದು. ಇಲ್ಲಿನ ನದಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು:

ಕೃಷ್ಣಾ ನದಿ: ಕರ್ನಾಟಕದ ಉತ್ತರ ಭಾಗದ ಪ್ರಮುಖ ನದಿ (ಉಪನದಿಗಳು: ಮಲಪ್ರಭಾ, ಘಟಪ್ರಭಾ, ತುಂಗಭದ್ರಾ).

ಕಾವೇರಿ ನದಿ: ದಕ್ಷಿಣ ಕರ್ನಾಟಕದ ಜೀವನದಿ (ಕೊಡಗಿನ ತಲಕಾವೇರಿಯಲ್ಲಿ ಉಗಮಿಸುತ್ತದೆ. ಉಪನದಿಗಳು: ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಕಪಿಲಾ, ಶಿಂಷಾ).

ಶರಾವತಿ: (ಪ್ರಸಿದ್ಧ ಜೋಗ ಜಲಪಾತವನ್ನು ಸೃಷ್ಟಿಸುವ ನದಿ).

ನೇತ್ರಾವತಿ, ಕಾಳಿ, ಅಘನಾಶಿನಿ, ವರಾಹಿ.

ಆ) ಪ್ರಮುಖ ಅರಣ್ಯ ಪ್ರದೇಶಗಳು:

ಕರ್ನಾಟಕದ ಪಶ್ಚಿಮ ಘಟ್ಟಗಳು (ಸಹ್ಯಾದ್ರಿ ಶ್ರೇಣಿ) ಜಗತ್ತಿನ ಪ್ರಮುಖ ಜೀವವೈವಿಧ್ಯದ ತಾಣಗಳಲ್ಲಿ ಒಂದಾಗಿದೆ.

ಮಲೆ ಮಹದೇಶ್ವರ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಅರಣ್ಯ ಪ್ರದೇಶಗಳು.

ಬಂಡೀಪುರ ರಾಷ್ಟ್ರೀಯ ಉದ್ಯಾನವನ (ಚಾಮರಾಜನಗರ) – ಹುಲಿ ಸಂರಕ್ಷಿತ ಪ್ರದೇಶ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ಮೈಸೂರು-ಕೊಡಗು ಬಾರ್ಡರ್).

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (ಬೆಂಗಳೂರು).

ಕುದುರೆಮುಖ ರಾಷ್ಟ್ರೀಯ ಉದ್ಯಾನವನ (ಚಿಕ್ಕಮಗಳೂರು).

ಅಂಶಿ ರಾಷ್ಟ್ರೀಯ ಉದ್ಯಾನವನ / ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಉತ್ತರ ಕನ್ನಡ)

Click here to download nithyostsava lesson exercise