Shivabhutiya Kathe sahitya sangama ICSE grade IX story is taken from Panchatantra written by Vishnusharma. Shivabhutiya Kathe class 9 sahithya sanghama has a moral.

This story from the Panchatantra highlights the contrast between the gratitude of animals and the treachery of a wicked human.

A compassionate Brahmin named Shivabhuti discovers a well where a tiger, a monkey, a snake, and a hunter named Kambalaka are trapped. Despite the animals’ warnings that the hunter is untrustworthy, Shivabhuti rescues all four. In gratitude, the tiger gifts him precious ornaments, and the monkey provides him with fruits during his travels.

When Shivabhuti visits the hunter in Padmanagara, seeking to share his wealth, the ungrateful man sees the ornaments and immediately betrays the Brahmin. He reports Shivabhuti to the King, claiming he stole the royal jewelry. Shivabhuti is imprisoned.

Remembering the snake’s promise of help, the Brahmin summons it. The snake bites the Prince, making him fall into a death-like trance that no doctor can cure. Following the snake’s plan, Shivabhuti “heals” the Prince using “mantled water.” Grateful, the King learns the truth, rewards the Brahmin with riches, and punishes the treacherous hunter.

Moral of the Story: The company of the wicked is dangerous, and sometimes animals show more humanity and gratitude than humans.

ಶಿವಭೂತಿಯ ಕಥೆ (ಪಂಚತಂತ್ರ)

ಪಂಚತಂತ್ರ ಭಾರತದ ಅತ್ಯುತ್ಕೃಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ಮೊದಲಿಗೆ ಸಂಸ್ಕೃತದಲ್ಲಿ ಸುಮಾರು ಕ್ರಿ.ಶ. 550ರಲ್ಲಿ (ಅಥವಾ ಅದಕ್ಕೂ ಹಿಂದೆ) ಪ್ರಸಿದ್ಧ ವಿದ್ವಾಂಸ ಪಂಡಿತ ವಿಷ್ಣುಶರ್ಮ ಅವನ ಎಂಬತ್ತನೆ ವಯಸ್ಸಿನಲ್ಲಿ ಬರೆದಿದ್ದಾನೆ. ಇದು ವಿಶ್ವದ 50ಕ್ಕೂ ಹೆಚ್ಚು ಭಾಷೆಗಳಲ್ಲಿ ತರ್ಜುಮೆಗೊಂಡಿದೆ.

The Panchatantra is considered one of India’s most outstanding literary works. It was originally written in Sanskrit around 550 CE (or perhaps even earlier) by the renowned scholar Pandit Vishnu Sharma at the age of eighty. This work has been translated into more than 50 languages across the world.

ಇವು ನೀತಿ ವಿಷಯವನ್ನು ಒಳಗೊಂಡಿದ್ದು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕುರಿತ ಕುತೂಹಲ ಹುಟ್ಟಿಸುವಂತಹ ಕಥೆಗಳಾಗಿವೆ. ಈ ಕಥೆಗಳಿಗೆ ‘ಪಂಚತಂತ್ರ’ ಎಂದು ಹೆಸರಿಡಲಾಗಿದೆ. ಪಂಚ ಎಂದರೆ ಐದು. ತಂತ್ರ ಎಂಬುದರ ಅರ್ಥವೇನೆಂದರೆ ಜೀವನದಲ್ಲಿ ಜಾಣ ನಡವಳಿಕೆಯ ವಿಧಾನ. ಹೇಗೆ ವಿಶ್ವಾಸವನ್ನು ಅಭಿವೃದ್ಧಿಪಡಿಸಿಕೊಳ್ಳುವುದು, ಜನರನ್ನು ಹೇಗೆ ಅರ್ಥಮಾಡಿಕೊಳ್ಳುವುದು, ಒಳ್ಳೆಯ ಗೆಳೆಯರನ್ನು ಹೇಗೆ ಆರಿಸಿ ಕೊಳ್ಳುವುದು, ಬುದ್ಧಿವಂತಿಕೆಯನ್ನು ಹೇಗೆ ಸಂಪಾದಿಸಿಕೊಳ್ಳುವುದು, ಜೀವನದಲ್ಲಿ ಹೇಗೆ ಸವಾಲುಗಳನ್ನು ಎದುರಿಸುವುದು ಎಂಬುದರ ಬಗ್ಗೆ ಬೋಧನೆಗಳಿಂದ ಇವನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಪಂಚತಂತ್ರ ಕುರಿತ ಹಳೆಯ ಜಾಣ್ನುಡಿಯ ಪ್ರಕಾರ ಈ ವಿಜ್ಞಾನದಲ್ಲಿ ನಿಷ್ಣಾತನಾಗಿರುವವನು ಜೀವನದಲ್ಲಿ ಸದಾ ಯಶಸ್ಸನ್ನು ಸಾಧಿಸುತ್ತಾನೆ.

These are fascinating stories about animals and birds that incorporate moral themes. These stories have been named ‘Panchatantra,’ where ‘Pancha’ means five. The meaning of ‘Tantra’ refers to the method of wise conduct in life. The teachings are further expanded upon through lessons on how to develop trust, how to understand people, how to choose good friends, how to acquire wisdom, and how to face challenges in life. According to an old proverb regarding the Panchatantra, one who is an expert in this science will always achieve success in life.

ಪಂಚತಂತ್ರದ ಕಥೆಗಳು ಮನುಷ್ಯನ ಗುಣಗಳ ಅನೇಕ ಮುಖಗಳನ್ನು ಅಂದರೆ ದುರಾಸೆ, ಕ್ರೌರ್ಯ, ನಂಬಿಕೆದ್ರೋಹ, ಅಪ್ರಾಮಾಣಿಕತೆ, ಮಾತ್ಸರ್ಯ, ಗಡಸುತನ ಮತ್ತು ಅಧಿಕಾರ ಹಾಗೂ ಸಂಪತ್ತಿನ ಲಾಲಸೆಗಳನ್ನು ಪ್ರಾಣಿಗಳ ನಡವಳಿಕೆಗಳ ರೂಪದಲ್ಲಿ ಅಭಿವ್ಯಕ್ತಗೊಳಿಸುವ ಮೂಲಕ ಮತ್ತು ಮನುಷ್ಯನೊಂದಿಗೆ ಅವುಗಳ ಪಾರಸ್ಪರಿಕ ಕ್ರಿಯೆಗಳನ್ನು ನಿರೂಪಿಸುವ ಮೂಲಕ ಪ್ರಕಟಗೊಳಿಸುತ್ತವೆ. ಅನ್ಯೋನ್ಯತೆ, ಪ್ರೀತಿ ಮತ್ತು ಕರುಣೆ, ನಿಸ್ವಾರ್ಥತೆಯಿಂದ ಕೂಡಿರುವ ಎದೆಗಾರಿಕೆ, ಸಾಮೂಹಿಕ ಬದುಕು, ಅನ್ಯೋನ್ಯ ಅರಿವು ಮತ್ತು ಜ್ಞಾನದ ಸಂಪಾದನೆಯ ವಿಷಯಗಳನ್ನು ನಮಗೆ ಬೋಧಿಸುತ್ತವೆ.

Panchatantra stories express many facets of human nature—such as greed, cruelty, betrayal, dishonesty, jealousy, stubbornness, and the lust for power and wealth—by portraying them through animal behavior and their mutual interactions with humans. Furthermore, these stories teach us about harmony, love, compassion, selfless courage, communal living, mutual understanding, and the acquisition of knowledge.

………………………………………………………………………………………………………………………….

ಒಂದು ಮಹಾ ಅರಣ್ಯದಲ್ಲಿ ಕಂಬಳಕನೆಂಬ ಬೇಡನಿದ್ದನು. ಅವನನ್ನು ಒಂದು ಹುಲಿ ಅಟ್ಟಿಸಿಕೊಂಡು ಬಂದಿತು. ಆ ಬೇಡನು ಪ್ರಾಣ ಭಯದಿಂದ ದಿಕ್ಕುಗಾಣದೆ ಓಡಿ ಬರುತ್ತ ಒಂದು ಹಳೆಯ ಬಾವಿಯಲ್ಲಿ ಬಿದ್ದನು. ಕೋಪದಿಂದ ಕುರುಡಾದ ಆ ಹುಲಿಯು ಸಹ ಅದೇ ಬಾವಿಯಲ್ಲಿ ಬಿದ್ದಿತು. ಅದೇ ದಾರಿಯಲ್ಲಿ ಚಪಲಕನೆಂಬ ಒಂದು ಕಪಿಯು ಬಾಯಾರಿ ನೀರು ಕುಡಿಯಲು ಬಾವಿಯನ್ನು ಹೊಕ್ಕು ದಡದ ಮೂಲಕ ಇಳಿಯುತ್ತ, ಜೋತು ಬಿದ್ದಿದ್ದ ಒಂದು ಸರ್ಪವನ್ನು ಬಳ್ಳಿ ಎಂದು ಭ್ರಮಿಸಿ ಹಿಡಿದು ಹಾವು ಸಹಿತ ಬಾವಿಯಲ್ಲಿ ಬೀಳುತ್ತದೆ. ಅಷ್ಟರಲ್ಲಿ

In a great forest, there lived a hunter named Kambalaka. A tiger came chasing after him. Fearing for his life and not knowing which way to turn, the hunter ran and fell into an old well. The tiger, blinded by rage, also fell into the same well. On that same path, a monkey named Chapalaka, feeling thirsty and wanting to drink water, entered the well. While climbing down along the wall, it mistook a hanging snake for a vine, grabbed it, and fell into the well along with the snake.

ಮಲರಹಿತನನೂನ ದಯಾ
ನಿಲಯನದ್ರಷ್ಟಾರ್ಥಿ  ತೀರ್ಥಯಾತ್ರಾಶ್ರಮ ವಿ
ಹ್ವಲಮಾನಸಂ ಪಿಪಾಸಾ
ಕುಲಿತಂ ಶಿವಭೂತಿಯೆಂಬ ಪಾರ್ವಂ ಬರುತುಂ

ತೀರ್ಥಯಾತ್ರೆಗೆ ಹೊರಟ ದಯಾಮಯನಾದ ಶಿವಭೂತಿ ಎಂಬ ಬ್ರಾಹ್ಮಣನು ಬಾಯಾರಿ ಅದೇ ಬಾವಿಗೆ ನೀರು ಕುಡಿಯಲು ಬರುತ್ತಾನೆ. ಆ ಬಾವಿಯಿಂದ ನೀರು ಪಡೆಯಲು ಒಂದು ಬಳ್ಳಿಗೆ ತನ್ನ ಸಣ್ಣ ಕಳಶಗಿಂಡಿಯನ್ನು ಕಟ್ಟಿ ಬಾವಿಯಲ್ಲಿ ಬಿಡುತ್ತಾನೆ. ನೀರು ತುಂಬಿದ ಗಿಂಡಿಯನ್ನು ಮೇಲೆತ್ತುವಾಗ ಆ ಹುಲಿಯು ಹಿಡಿದು ನೇತಾಡುತ್ತಿತ್ತು. ಕೈಯಿಗೆ ಭಾರವಾದರೂ ಬಲವಾಗಿ ಹಿಡಿದು ಹೊರಗೆ ಎತ್ತಿದನು. ಆ ಹುಲಿಯು ವಿನಯದಿಂದ ನಮಸ್ಕರಿಸಿತು. ಹುಲಿಯನ್ನು ಕಂಡು ಆಶ್ಚರ್ಯದಿಂದ ಹೇಗೆ ಬಾವಿಯಲ್ಲಿ ಬಿದ್ದೆ ಎಂದು ಪ್ರಶ್ನಿಸಿದನು. ತಾನು ಬೇಡನು ಸರ್ಪವೂ ಕಪಿಯೂ ಬಿದ್ದ ಕಥೆಯನ್ನು ಹೇಳಿ ಆ ಹುಲಿಯು ತಮ್ಮ ಉಪಕಾರದಿಂದ ನಾನು ಜೀವಸಹಿತ ಉಳಿದುಬಂದೆನು. ದೂರದಲ್ಲಿ ಕಾಣುವ ಪರ್ವತ ಪಂಕ್ತಿಯ ತಪ್ಪಲಿನಲ್ಲಿರುವ ಒಂದು ಗುಹೆಯಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿಗೆ ತಾವು ಬನ್ನಿ ನಿಮಗೆ ಅಮೂಲ್ಯವಾದ ವಸ್ತುಗಳನ್ನು ಕಾಣಿಕೆಯಾಗಿ ಕೊಡುತ್ತೇನೆ ಎಂದಿತು. ನೀನು ಹೇಳಿದ ಪ್ರಾಣಿಗಳನ್ನು ರಕ್ಷಿಸಿ, ತೀರ್ಥಯಾತ್ರೆ ಮುಗಿಸಿ ನಿನ್ನಲ್ಲಿಗೆ ಬರುತ್ತೇನೆ ಎಂದನು. ಆ ಹುಲಿಯು ಈ ಬೇಡನನ್ನು ಮಾತ್ರ ರಕ್ಷಿಸಬೇಡಿ, ಅವನು ನೀಚ, ನೀಚನಿಗೆ ಎಷ್ಟು ಉಪಕಾರ ಮಾಡಿದರೂ ತನ್ನ ನೀಚಬುದ್ಧಿಯನ್ನು ಬಿಡುವುದಿಲ್ಲ.

A compassionate Brahmin named Shivabhuti set out on a pilgrimage. Feeling thirsty, he came to a well to drink water. To draw water from the well, he tied his small pot to a creeper and lowered it down. As he was pulling up the pot filled with water, a tiger was clinging to it. Though it felt heavy in his hands, he held it firmly and lifted it out. The tiger bowed to him humbly.

Surprised to see the tiger, he asked how it had fallen into the well. The tiger narrated how it, along with a hunter, a snake, and a monkey, had fallen in. It said, “Because of your help, I have come out alive. I live in a cave at the foot of the mountain range you see in the distance. Please come there, and I will offer you valuable gifts.”

Shivabhuti replied, “I will rescue the other creatures you mentioned, complete my pilgrimage, and then come to you.

”The tiger then warned him, “Do not rescue the hunter alone. He is wicked. No matter how much kindness you show to a wicked person, he will never give up his evil nature.”

ಶ್ಲೋಕ:

ಉಪಕಾರೋಪಿ ನೀಚಾನಾಂ ಅಪಕಾರಾಯ ಕಲ್ಪತೆ
ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಂ

ನೀಚನಿಗೆ ಉಪಕಾರ ಮಾಡಿದರೆ ಅಪಕಾರವನ್ನೇ ಮಾಡುತ್ತಾನೆ. ಅದು ಹೇಗೆಂದೊಡೆ ಹಾವಿಗೆ ಹಾಲೆರೆದಂತೆ ಎಂದು ಹೇಳಿ ಹುಲಿಯು ಹೊರಟು ಹೋಯಿತು. ನಂತರ ಆ ಬ್ರಾಹ್ಮಣನು ಆ ಬಾವಿಯಲ್ಲಿದ್ದ ಸರ್ಪವನ್ನು ಕಪಿಯನ್ನು ಹೊರಗೆ ತೆಗೆಯುತ್ತಾನೆ. ಎರಡು ನಮಸ್ಕರಿಸಿ ಕಪಿಯು ನಿಮ್ಮ ಕರುಣೆಯಿಂದ ನಾನು ಬದುಕುಳಿದೆನು. ನಾನು ಮರುಹುಟ್ಟು ಪಡೆದಂತಾಯಿತು. ನಾನು ಬದರಿಕಾಶ್ರಮದಲ್ಲಿದ್ದೇನೆ. ನೀವು ಅಲ್ಲಿಗೆ ಹೇಗಾದರೂ ಬಂದರೆ ನನ್ನ ಶಕ್ತಿ ಮೀರಿ ಸತ್ಕರಿಸುತ್ತೇನೆ ಎಂದಿತು. ಅದೇ ರೀತಿ ಸರ್ಪವೂ ಕೂಡ ಹೇಳಿ ಎರಡು ಹೊರಟು ಹೋದವು.

“If you do a favor to a wicked person, he will only repay you with harm. It is like pouring milk to a snake,” saying this, the tiger went away.

After that, the Brahmin rescued the snake and the monkey that were in the well. Both of them bowed to him. The monkey said, “By your kindness, I have survived. It feels as though I have been reborn. I live in Badarikashrama. If you ever come there, I will honor you to the best of my ability.”

In the same way, the snake also expressed its gratitude, and then both of them departed.

ಪೊಲ್ಲಗಡ ತೆಗೆಯಲಪ್ಪೊಡೆ
ಬಿಲ್ಲನನೆಂದೆನಗೆ ಪುಂಡರೀಕಂ ಪೇಳ್ದ
ತ್ತಿಲ್ಲುಭಯ ಪಕ್ಷಪಾತಮೆ
ಪೊಲ್ಲದು ಪೊಲ್ಲದೆ ಪರೋಪಕಾರ ವ್ಯಸನಂ

ಹುಲಿಯು ಈ ಬೇಡನನ್ನು ಮಾತ್ರ ಹೊರಗೆ ತೆಗೆಯಬೇಡಿ ಎಂದು ಹೇಳಿ ಹೋಯಿತು. ಈಗ ಅವನನ್ನು ತೆಗೆಯದೆ ಹೋದಾಗ ಅವನಿಗೆ ಪಕ್ಷಪಾತ ತೋರಿದಂತಾಗುತ್ತದೆ. ಪರೋಪಕಾರವು ಕೆಟ್ಟದೆ, ಹೇಗಾದರೂ ಯತ್ಪರಾರ್ಥಂ ಶರೀರಂ ಎಂಬ ಸುಭಾಷಿತದಂತೆ ಈ ಬೇಡನನ್ನು ನಾನು ರಕ್ಷಿಸದೆ ಇದ್ದರೆ ಕೆಟ್ಟವನಾಗುತ್ತೇನೆ. ತನಗೆ ಏನಾದರೂ ಆಗಲಿ ಎಂದು ತನ್ನಲ್ಲಿ ಆಲೋಚಿಸಿ ಪರೋಪಕಾರಿಯಾದ ಶಿವಭೂತಿಯು, ದುರಾತ್ಮನನ್ನದೆ ಕರುಣೆಯಿಂದ ಆ ಕಿರಾತನನ್ನು ರಕ್ಷಿಸುತ್ತಾನೆ.

The tiger had warned him not to rescue this hunter and had gone away. Now, if he left the man without rescuing him, it would seem like showing partiality. Thinking that doing good to others is never wrong, and remembering the saying “Yat parārtham śarīram” (the body exists for the service of others), he reflected that if he did not save this hunter, he himself would be at fault. Accepting whatever might happen to him, the compassionate Shivabhuti, moved by kindness even towards a wicked man, rescued the hunter.

ಕಿರಾತನು ಹೊರಗೆ ಬಂದು ಶಿವಭೂತಿಗೆ ನಮಸ್ಕರಿಸಿ ನಿಮ್ಮಿಂದ ನನ್ನ ಪ್ರಾಣ ಉಳಿಯಿತು ನಾನು ಪದ್ಮನಗರದಲ್ಲಿ ವಾಸಿಸುತ್ತಿದ್ದೇನೆ. ನೀವು ಹೇಗಾದರೂ ಅಲ್ಲಿಗೆ ಬಂದರೆ ನನ್ನ ಕೈಮೀರಿ ಸತ್ಕರಿಸುತ್ತೇನೆ ಎಂದು ಹೇಳಿ ಹೊರಟು ಹೋದನು.

The hunter came out, bowed to Shivabhuti, and said, “Because of you, my life has been saved. I live in Padmanagara. If you ever come there, I will honor you to the best of my ability.” Saying this, he took leave and went away.

ಇತ್ತ ಶಿವಭೂತಿಯು ಕೆಲವಾರು ದಿವಸಗಳಿಗೆ ತೀರ್ಥಯಾತ್ರೆಯನ್ನು ಮುಗಿಸಿ ಹಿಂದಿರುಗಿ ಬರುತ್ತ ಪರ್ವತ ಪಂಕ್ತಿಗಳ ತಪ್ಪಲಿನಲ್ಲಿ ಬರುತ್ತಿರುವವಾಗ ಹುಲಿಯು ಕಂಡು ಬೇಗ ಓಡಿ ಬಂದು ಶಿವಭೂತಿಗೆ ನಮಸ್ಕರಿಸಿ ತನ್ನ ಗುಹೆಗೆ ಕೊಂಡುಹೋಯಿತು. ತನ್ನಲ್ಲಿದ್ದ ಅಪಾರ ಅಮೂಲ್ಯ ಒಡವೆಗಳನ್ನು ಶಿವಭೂತಿಗೆ ಕೊಟ್ಟು ಆದರದಿಂದ ಸತ್ಕರಿಸಿ ಕಳಿಸಿಕೊಟ್ಟಿತು. ಹೀಗೆ ಹುಲಿಯು ಕೊಟ್ಟ ವಸ್ತ್ರಾಭರಣಗಳಿಂದ ತಾನು ಸಿರಿವಂತನಾದೆನೆಂದು ಸಂತೋಷಪಡುತ್ತ ಬದರಿಕಾಶ್ರಮಕ್ಕೆ ಬರುತ್ತಾನೆ. ಅಲ್ಲಿ ಪ್ರಯಾಣದ ಆಯಾಸವನ್ನು ಒಂದು ಮಾವಿನ ಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಆ ವನದಲ್ಲಿದ್ದ ಕಪಿಯು ಶಿವಭೂತಿಯನ್ನು ಕಂಡು ಪ್ರೀತಿಯಿಂದ ಪ್ರಸನ್ನವದನನಾಗಿ, ಆ ವನದ ಅನೇಕ ಹಲಸು ಮಾವು ಪೇರಲು ಬಾಳೆ ಮುಂತಾದ ಹಣ್ಣುಗಳನ್ನು ತಂದುಕೊಟ್ಟು ಶಿವಭೂತಿಯನ್ನು ಸಂಭ್ರಮದಿಂದ ಸತ್ಕರಿಸುತ್ತದೆ. ಬ್ರಾಹ್ಮಣನು ಆ ದಿವಸ ಅಲ್ಲಿದ್ದು ಮಾರನೆ ದಿವಸ ಹೊರಟು ಕೆಲವು ದಿನಗಳು ಕಳೆದ ನಂತರ ಕಂಬಳಕನೆಂಬ ಬೇಡನಿದ್ದ ಪದ್ಮನಗರಕ್ಕೆ ಬರುತ್ತಾನೆ. ಅವನ ಮನೆಯನ್ನು ಹುಡುಕುತ್ತ ಬೀದಿಯಲ್ಲಿ ಬರುತ್ತಿದ್ದ ಶಿವಭೂತಿಯನ್ನು ಆ ಬೇಡನು ಕಂಡು ನಮಸ್ಕರಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಕುಳ್ಳಿರಿಸುತ್ತಾನೆ. ನೀವು ಬಂದಿದ್ದೀರಿ, ನಿಮ್ಮನ್ನು ಸತ್ಕರಿಸಲು ಈಗ ನನ್ನಲ್ಲಿ ಏನೂ ಇಲ್ಲ, ನಾನು ಬರಿಗೈ ಆಗಿದ್ದೇನೆ ಎಂದು ಬೇಡನು ತನ್ನ ನಿರುಪಾಯ ಸ್ಥಿತಿಯನ್ನು ವಿವರಿಸುತ್ತಾನೆ. ಬೇಡನ ದೀನತೆಯನ್ನು ನೋಡಿ ಇನ್ನು ಇದಕ್ಕೆ ಚಿಂತಿಸಬೇಡ, ನಾನು ನಿನಗೆ ಬಾಳುವ ಉಪಾಯವನ್ನು ತೋರಿಸುತ್ತೇನೆ ಎಂದು ತನ್ನಲ್ಲಿದ್ದ ಬೆಲೆ ಬಾಳುವ ಒಡವೆಗಳನ್ನು ಆ ಕಿರಾತನಿಗೆ ತೋರಿಸುತ್ತಾನೆ.

After a few days, Shivabhuti completed his pilgrimage and was returning. As he came near the foothills of the mountain range, the tiger saw him, ran quickly toward him, bowed, and took him to its cave. It gave Shivabhuti many precious ornaments it had and respectfully honored him before sending him on his way.

With the valuable ornaments given by the tiger, Shivabhuti felt happy that he had become wealthy and then came to Badarikashrama. There, feeling tired from the journey, he lay down under a mango tree to rest. The monkey living in that forest saw Shivabhuti, greeted him warmly with a cheerful face, and brought various fruits like jackfruit, mango, guava, and banana, and joyfully served him.

The Brahmin stayed there for that day and left the next day. After a few days, he reached Padmanagara, where the hunter Kambalaka lived. While Shivabhuti was walking through the street searching for his house, the hunter saw him, greeted him, and took him home and seated him.

The hunter said, “You have come, but I have nothing right now to honor you. I am empty-handed,” and explained his helpless condition. Seeing the hunter’s poverty, Shivabhuti said, “Do not worry about this. I will show you a way to make a living,” and showed him the valuable ornaments he had.

ಎನಗೆ ಹಿತಂ ಬ್ರಾಹ್ಮಣನೀ
ತನೆನ್ನದವಿವೇಕಿಯಾಗಿ ಶಿವಭೂತಿಗೆ ತೊ
ಟ್ಟನೆ ಬಗೆದನಹಿತಮಂತ
ದ್ವನಚರನೆಂತುಂ ಕೃತಜ್ಞರೇನಂ ಮಾಡರ್

ಶಿವಭೂತಿಯು ತನಗೆ ಉಪಕಾರಿ ಎಂದು ಯೋಚಿಸದೆ ಅವಿವೇಕಿಯಾಗಿ ಕಂಬಳಕನು ಕೆಡುಕನ್ನೇ ಯೋಚಿಸುತ್ತಾನೆ. ಉಪಕಾರ ಸ್ಮರಣೆ ಇಲ್ಲದವರು ಏನು ತಾನೆ ಮಾಡಲು ಹಿಂಜರಿಯರು. ಕೂಡಲೇ ಆ ಊರಿನ ಅರಸನ ಬಳಿಗೆ ಹೋಗಿ ದೇವ! ನೀವು ತೊಡುವ ಆಭರಣಗಳನ್ನು ನನ್ನ ಮನೆಯಲ್ಲಿರುವ ಒಬ್ಬ ಆಗಂತುಕ ಬ್ರಾಹ್ಮಣನು ತಂದಿದ್ದಾನೆ ಎಂದು ಚಾಡಿ ಹೇಳುತ್ತಾನೆ. ಆಗ ರಾಜನು ದೂತರ ಮೂಲಕ ಶಿವಭೂತಿಯನ್ನು ಕರೆಸಿ ಅವನ ಕೈಯಲ್ಲಿದ್ದ ಒಡವೆಗಳನ್ನು ಕಸಿದು ಸೆರೆಗೆ ಕಳುಹಿಸುತ್ತಾನೆ. ಆಗ ಶಿವಭೂತಿಯು ತನ್ನ ಹುಚ್ಚುತನಕ್ಕೆ ತಾನೇ ಮರುಳಾಗಿ ತನ್ನಲ್ಲಿಯೇ ನಕ್ಕು ಸುಮ್ಮನಾಗುತ್ತಾನೆ. ನಂತರ ಕಷ್ಟ ಬಂದಾಗ ನನ್ನನ್ನು ನೆನೆಯಿರಿ ಎಂದು ಹೇಳಿದ ಸರ್ಪದ ಮಾತು ನೆನಪಿಗೆ ಬರುತ್ತದೆ. ಅದನ್ನು ನೆನೆದೊಡನೆ ಆ ಸರ್ಪವು ಬಂದು ನಮಸ್ಕರಿಸುತ್ತದೆ. ನಡೆದುದನ್ನೆಲ್ಲ ಶಿವಭೂತಿಯು ಸರ್ಪಕ್ಕೆ ತಿಳಿಸುತ್ತಾನೆ. ಇದಕ್ಕೆ ತಕ್ಕ ಉಪಾಯವನ್ನು ಮಾಡುತ್ತೇನೆಂದು ಅರಸನ ಹಿರಿಯ ಮಗನನ್ನು ಈಗಲೇ ಹೋಗಿ ಕಚ್ಚಿ ಕೊಲ್ಲುತ್ತೇನೆ. ನಿಮ್ಮಲ್ಲದೆ ಬೇರೆ ಯಾರಿಗೂ ನಾನು ಸಾಧ್ಯವಾಗುವುದಿಲ್ಲ. ನೀವು ಬಂದು ಉಪಾಯದಿಂದ ನೀರನ್ನು ಮಂತ್ರಿಸಿ ಹಾಕಿದೊಡನೆ ವಿಷವನ್ನೆಲ್ಲ ಕಳೆಯುತ್ತೇನೆ ಎಂದು ಸರ್ಪವು ಹಾಗೆ ಮಾಡಲು ರಾಜಕುಮಾರನು ಹಾವು ಕಚ್ಚಿ ಸಾಯಲು, ಯಾರು ಮಂತ್ರಿಸಿದರೂ ಬದುಕದಿರಲು, ಯಾರಾದರೂ ಬದುಕಿಸಿದರೆ ಬೇಡಿದುದನ್ನು ಕೊಡುವೆನೆಂದು ರಾಜನು ಡಂಗುರ ಹೊಡೆಸಲು, ಶಿವಭೂತಿಯು ಕೇಳಿ ಹೋಗಿ ಗುಂಡಿಗೆಯ ನೀರನ್ನು ಮಂತ್ರಿಸಿ ಚಿಮುಕಿಸಲು, ರಾಜಕುಮಾರನು ಎದ್ದು ಕುಳಿತುಕೊಳ್ಳುತ್ತಾನೆ. ನಡೆದ ವಿಚಾರವನ್ನು ಶಿವಭೂತಿಯಿಂದ ಕೇಳಿ ರಾಜನು ಆತನಿಗೆ ಅಪಾರ ದ್ರವ್ಯವನ್ನು ಕೊಟ್ಟು ಕಳುಹಿಸುತ್ತಾನೆ. ಮತ್ತು ಬೇಡನನ್ನು ಯಮಪುರಿಗೆ ಅಟ್ಟುತ್ತಾನೆ.

Kambalaka, without thinking that Shivabhuti had helped him, foolishly began to think evil thoughts. Those who lack gratitude will not hesitate to do anything wrong. Immediately, he went to the king of that town and falsely reported, “O King! The ornaments you wear have been brought by a stranger Brahmin staying in my house.”

Hearing this, the king sent his men, summoned Shivabhuti, seized the ornaments from him, and had him imprisoned. At this, Shivabhuti, realizing his own folly, smiled to himself and remained silent.

Later, he remembered the words of the snake, which had said, “Remember me when you are in trouble.” As soon as he thought of it, the snake appeared and bowed to him. Shivabhuti told the snake everything that had happened.

The snake said, “I will find a solution. I will go and bite the king’s eldest son now. No one except you will be able to save him. When you come and sprinkle water with your mantra, I will withdraw the poison.”

Accordingly, the snake bit the prince, and he appeared dead. The king then announced that anyone who could bring his son back to life would be rewarded with whatever they asked for. Shivabhuti heard this, went there, chanted over water, and sprinkled it. The prince immediately rose up alive.

After hearing the whole story from Shivabhuti, the king rewarded him with great wealth and sent him away with honor. As for the hunter, he was punished severely (sent to the abode of Yama).

ಹೀಗೆ ದುಷ್ಟರ ಸಹವಾಸ ಕೆಟ್ಟದು ಎಂಬುದು ಈ ಕಥೆಯ ಪಾಠ.

The moral of the story is: association with wicked people leads to harm.

ಶಿವಭೂತಿಯ ಕಥೆ (ಪಂಚತಂತ್ರ)

I. ಅರ್ಥಗಳು

II. ಪ್ರಶೋತ್ತರಗಳು (Questions & Answers)

೧. ಪಂಚತಂತ್ರದಲ್ಲಿ ಅಡಕವಾಗಿರುವ ಸಂದೇಶಗಳು ಯಾವುವು?
ಉ: ಪಂಚ ಎಂದರೆ ಐದು. ತಂತ್ರ ಎಂದರೆ ಜೀವನದಲ್ಲಿ ಜಾಣನಾಗಿ ನಡೆಯುವ ವಿಧಾನ. ಜೀವನದಲ್ಲಿ ವಿಶ್ವಾಸವನ್ನು ಅಭಿವೃದ್ಧಿಸುವುದು, ಜನರನ್ನು ಹೇಗೆ ಅರ್ಥಮಾಡಿಕೊಳ್ಳುವುದು, ಒಳ್ಳೆಯ ಗೆಳೆಯರನ್ನು ಹೇಗೆ ಆರಿಸುವುದು, ಬುದ್ಧಿವಂತಿಕೆಯನ್ನು ಹೇಗೆ ಸಂಪಾದಿಸುವುದು, ಜೀವನದಲ್ಲಿ ಹೇಗೆ ಸವಾಲುಗಳನ್ನು ಎದುರಿಸುವುದು ಎಂಬುದರ ಬಗ್ಗೆ ವಿಸ್ತರಿಸಲಾಗಿದೆ. ಪಂಚತಂತ್ರ ಕುರಿತ ಹಳೆಯ ಜಾಣ್ನುಡಿಯ ಪ್ರಕಾರ ಈ ವಿಜ್ಞಾನದಲ್ಲಿ ನಿಷ್ಣಾತನಾಗಿರುವವನು ಜೀವನದಲ್ಲಿ ಸದಾ ಯಶಸ್ಸನ್ನು ಸಾಧಿಸುತ್ತಾನೆ. ಈ ಕೃತಿಯು ಅನ್ಯೋನ್ಯತೆ, ಪ್ರೀತಿ ಮತ್ತು ಕರುಣೆ ನಿಸ್ವಾರ್ಥತೆಯಿಂದ ಕೂಡಿರುವ ಎದೆಗಾರಿಕೆ, ಸಾಮೂಹಿಕ ಬದುಕು, ಅನ್ಯೋನ್ಯ ಅರಿವು ಮತ್ತು ಜ್ಞಾನ ಸಂಪಾದನೆಯ ವಿಷಯಗಳನ್ನು ನಮಗೆ ಬೋಧಿಸುತ್ತದೆ.

೨. ಬಾವಿಯಲ್ಲಿ ಬಿದ್ದವರು ಯಾರು ಯಾರು? ಅವರು ಹೇಗೆ ಬಾವಿಯಲ್ಲಿ ಬಿದ್ದರು?
ಉ: ಬೇಡ, ಹುಲಿ, ಸರ್ಪ, ಮಂಗ ಇವುಗಳು ಬಾವಿಯಲ್ಲಿ ಬಿದ್ದವು. ಕಂಬಳಕನೆಂಬ ಬೇಡನನ್ನು ಒಂದು ಹುಲಿಯು ಅರಣ್ಯದಲ್ಲಿ ಅಟ್ಟಿಸಿಕೊಂಡು ಬಂದಿತು. ಬೇಡನು ಪ್ರಾಣಭಯದಿಂದ ದಿಕ್ಕುಗಾಣದೆ ಓಡಿ ಬರುತ್ತ ಹಳೆಯ ಬಾವಿಯಲ್ಲಿ ಬಿದ್ದನು. ಕೋಪದಲ್ಲಿದ್ದ ಹುಲಿಯೂ ಅದೇ ಬಾವಿಯಲ್ಲಿ ಬಿದ್ದಿತು. ಅದೇ ದಾರಿಯಲ್ಲಿ ಚಪಲಕನೆಂಬ ಒಂದು ಕಪಿಯು ಬಾಯಾರಿ ನೀರು ಕುಡಿಯಲು ಬಾವಿಯನ್ನು ನೋಡಿತು. ದಡದಿಂದ ಇಳಿಯುತ್ತ ಜೋತುಬಿದ್ದಿದ್ದ ಸರ್ಪವನ್ನು ಬಳ್ಳಿ ಎಂದು ತಿಳಿದು, ಅದನ್ನು ಹಿಡಿದು ಹಾವಿನ ಸಹಿತ ಬಾವಿಯಲ್ಲಿ ಬಿದ್ದಿತು.

೩. ಶಿವಭೂತಿ ಯಾರು? ಅವನು ಬಾವಿಯ ಬಳಿ ಏಕೆ ಬಂದನು?
ಉ: ಶಿವಭೂತಿ ಒಬ್ಬ ಬ್ರಾಹ್ಮಣ. ಇವನು ತೀರ್ಥಯಾತ್ರೆಗೆಂದು ಹೊರಟಿದ್ದನು. ದಾರಿಯಲ್ಲಿ ಬಾಯಾರಿಕೆಯಾಗಿ ಬಾವಿಯ ಬಳಿ ನೀರು ಕುಡಿಯಲು ಬಂದನು. ಆ ಬಾವಿಯಿಂದ ನೀರು ತೆಗೆಯಲು ಒಂದು ಬಳ್ಳಿಗೆ ತನ್ನ ಸಣ್ಣ ಕಳಶಗಿಂಡಿಯನ್ನು ಕಟ್ಟಿ ಬಾವಿಯಲ್ಲಿ ಬಿಟ್ಟನು. ಹೀಗೆ ಶಿವಭೂತಿಯು ತನ್ನ ಬಾಯಾರಿಕೆಗಾಗಿ ಬಾವಿಯ ಹತ್ತಿರಕ್ಕೆ ಬಂದನು.

೪. ಶಿವಭೂತಿಯು ಯಾರನ್ನು ರಕ್ಷಿಸಿದನು? ಅವರೆಲ್ಲರೂ ಅವನಿಗೆ ಹೇಳಿದ್ದೇನು?
ಉ: ಶಿವಭೂತಿಯು ಹುಲಿ, ಸರ್ಪ, ಕಪಿ ಹಾಗೂ ಬೇಡನನ್ನು ರಕ್ಷಿಸಿದನು. ಹುಲಿಯು ಶಿವಭೂತಿಯ ಉಪಕಾರವನ್ನು ಹೊಗಳಿ ತಾನು ಆ ಪರ್ವತದ ತಪ್ಪಲಿನಲ್ಲಿರುವ ಒಂದು ಗುಹೆಯಲ್ಲಿ ವಾಸಿಸುತ್ತಿದ್ದೇನೆಂದು ಹೇಳಿತು. ಅವನು ಅಲ್ಲಿಗೆ ಬಂದರೆ ಅಮೂಲ್ಯವಾದ ಕಾಣಿಕೆಗಳನ್ನು ಕೊಡುತ್ತೇನೆಂದಿತು. ಹಾಗೆಯೇ ಕಪಿಯು ಸಹ ಸಂತೋಷಪಟ್ಟು ತಾನು ಬದರಿಕಾಶ್ರಮದಲ್ಲಿರುತ್ತೇನೆ. ಅವನು ಅಲ್ಲಿಗೆ ಬಂದರೆ, ಸತ್ಕರಿಸುತ್ತೇನೆಂದು ಹೇಳಿತು. ಸರ್ಪವೂ ಶಿವಭೂತಿಗೆ ವಂದನೆ ಸಲ್ಲಿಸಿತು. ಕೊನೆಗೆ ಶಿವಭೂತಿ ರಕ್ಷಿಸಿದ ಕಿರಾತನು ಸಹ ಅವನು ಪದ್ಮನಗರಕ್ಕೆ ಬಂದರೆ, ಕೈ ಮೀರಿ ಸತ್ಕರಿಸುತ್ತೇನೆಂದು ನುಡಿದನು.

೫. ಹುಲಿಯು ಶಿವಭೂತಿಗೆ ಏನೆಂದು ಹೇಳಿತು?
ಉ: ಶಿವಭೂತಿಯು ನೀರು ತುಂಬಿದ ಗಿಂಡಿಗೆ ಹುಲಿಯು ನೇತಾಡುತ್ತಿತ್ತು. ಕೈಗೆ ಭಾರವಾದರೂ ಬಲವಾಗಿ ಹಿಡಿದು ಎತ್ತಿದನು. ಆ ಹುಲಿಯು ವಿನಯದಿಂದ ನಮಸ್ಕರಿಸಿತು. ಹುಲಿಯನ್ನು ಕಂಡು ಆಶ್ಚರ್ಯದಿಂದ ಅದು ಬಾವಿಯಲ್ಲಿ ಹೇಗೆ ಬಿದ್ದಿತೆಂದು ಶಿವಭೂತಿಯು ಕೇಳಿದನು. ಹುಲಿಯು ತಾನು, ಬೇಡ, ಸರ್ಪ, ಕಪಿ ಎಲ್ಲರೂ ಬಿದ್ದ ಕಥೆಯನ್ನು ಹೇಳಿತು. ಶಿವಭೂತಿಯ ಉಪಕಾರವನ್ನು ಹೊಗಳಿ ತಾನು ಆ ಪರ್ವತದ ತಪ್ಪಲಿನಲ್ಲಿರುವ ಒಂದು ಗುಹೆಯಲ್ಲಿ ವಾಸಿಸುತ್ತಿದ್ದೇನೆಂದು ಹೇಳಿತು. ಅವನು ಅಲ್ಲಿಗೆ ಬಂದರೆ ಅಮೂಲ್ಯವಾದ ಕಾಣಿಕೆಗಳನ್ನು ಕೊಡುತ್ತೇನೆಂದಿತು.ನಂತರ ಆ ಹುಲಿಯು ನೀಚನಾದ ಬೇಡನನ್ನು ಮಾತ್ರ ರಕ್ಷಿಸಬಾರದೆಂದು, ನೀಚನಿಗೆ ಎಷ್ಟು ಉಪಕಾರ ಮಾಡಿದರೂ ತನ್ನ ನೀಚ ಬುದ್ಧಿಯನ್ನು ಬಿಡುವುದಿಲ್ಲ ಎಂದು ನುಡಿಯಿತು.

೬. ಶಿವಭೂತಿಯು ಕಿರಾತನನ್ನು ರಕ್ಷಿಸಿದನೇ? ಏಕೆ?
ಉ: ಶಿವಭೂತಿಯು ಕಿರಾತನನ್ನು ರಕ್ಷಿಸಿದನು. ಹುಲಿಯು ಶಿವಭೂತಿಗೆ ಬೇಡನು ನೀಚನೆಂದು, ಅವನು ಉಪಕಾರ ಮಾಡಿದರೆ ಅಪಕಾರವನ್ನೇ ಮಾಡುತ್ತಾನೆ ಎಂದಿತು. ಅವನು ಹಾವಿಗೆ ಹಾಲೆರೆದಂತೆ. ಆದ್ದರಿಂದ ಬೇಡನನ್ನು ರಕ್ಷಿಸಬಾರದೆಂದು ಹೇಳಿತು. ಹುಲಿಯನ್ನು, ಕಪಿಯನ್ನು, ಸರ್ಪವನ್ನು ರಕ್ಷಿಸಿದ ಮೇಲೆ ಕಿರಾತನನ್ನು ರಕ್ಷಿಸದಿದ್ದರೆ ಪಕ್ಷಪಾತ ತೋರಿದಂತಾಗುತ್ತದೆ. ಪರೋಪಕಾರವು ಎಂದೂ ಕೆಟ್ಟದಲ್ಲ. ‘ಯತ್ಪರಾರ್ಥಂ ಶರೀರಂ’ ಎಂಬ ಸುಭಾಷಿತದಂತೆ ಈ ಬೇಡನನ್ನು ರಕ್ಷಿಸದಿದ್ದರೆ ತಾನು ಕೆಟ್ಟವನಾಗುತ್ತೇನೆ ಎಂದು ಶಿವಭೂತಿಯು ಕರುಣೆಯಿಂದ  ಕಿರಾತನನ್ನು ರಕ್ಷಿಸುತ್ತಾನೆ.

೭. ಹುಲಿ ಮತ್ತು ಕಪಿ ಶಿವಭೂತಿಯನ್ನು ಹೇಗೆ ಸತ್ಕರಿಸಿದವು?
ಉ: ಶಿವಭೂತಿಯು ತೀರ್ಥಯಾತ್ರೆಯನ್ನು ಮುಗಿಸಿ ಪರ್ವತ ಪಂಕ್ತಿಗಳ ತಪ್ಪಲಿನಲ್ಲಿ ಬರುತ್ತಿರುವವಾಗ ಹುಲಿಯು ಅವನನ್ನು ಕಂಡು ಓಡಿಬಂದು, ನಮಸ್ಕರಿಸಿ ತನ್ನ ಗುಹೆಗೆ ಕರೆದುಕೊಂಡುಹೋಯಿತು. ತನ್ನಲ್ಲಿದ್ದ ಅಮೂಲ್ಯವಾದ ಒಡವೆಗಳನ್ನು ಶಿವಭೂತಿಗೆ ಕೊಟ್ಟು ಆದರದಿಂದ ಸತ್ಕರಿಸಿ ಕಳುಹಿಸಿಕೊಟ್ಟಿತು. ಶಿವಭೂತಿಯು ಬದರಿಕಾಶ್ರಮಕ್ಕೆ ಬಂದು ಒಂದು ಮಾವಿನ ಮರದ ಕೆಳಗೆ ಮಲಗಿದ್ದನು. ಆ ವನದಲ್ಲಿದ್ದ ಕಪಿಯು ತನ್ನನ್ನು ಕಾಪಾಡಿದ ಶಿವಭೂತಿಯನ್ನು ಕಂಡು ಪ್ರೀತಿಯಿಂದ ಹಲಸು, ಮಾವು, ಪೇರಲೆ, ಬಾಳೆ ಮುಂತಾದ ಹಣ್ಣು ತಂದುಕೊಟ್ಟು ಸತ್ಕರಿಸಿತು.

೮. ಕಂಬಳಕನ ಊರು ಯಾವುದು? ಅವನು ಶಿವಭೂತಿಗೆ ಮಾಡಿದ ದ್ರೋಹವೇನು?
ಉ: ಕಂಬಳಕನ ಊರುಪದ್ಮನಗರ. ಬೀದಿಯಲ್ಲಿ ಬರುತ್ತಿದ್ದ ಶಿವಭೂತಿಯನ್ನು ಕಂಡ ಆ ಬೇಡನು ಅವನಿಗೆ ನಮಸ್ಕರಿಸಿ ತನ್ನ ಮನೆಗೆ ಕರೆದುಕೊಂಡು ಹೋದನು. ತನ್ನ ಬಡತನದ ಕಾರಣದಿಂದ ಶಿವಭೂತಿಯನ್ನು ಸತ್ಕರಿಸಲಾಗದು ಎಂದನು. ಬೇಡನ ಸ್ಥಿತಿಯನ್ನು ನೋಡಿದ ಶಿವಭೂತಿ ಅವನಿಗೆ ಹುಲಿಯು ಕೊಟ್ಟ ಆಭರಣಗಳನ್ನು ತೋರಿಸಿದನು. ಬೇಡನು ಶಿವಭೂತಿಯ ಬಗ್ಗೆ ಕೆಡುಕು ಆಲೋಚಿಸಿ ರಾಜನ ಬಳಿಗೆ ಹೋಗಿ ರಾಜನು ತೊಡುವ ಆಭರಣಗಳನ್ನು ಒಬ್ಬ ಆಗಂತುಕ ತಂದಿದ್ದಾನೆಂದು ದೂರು ನೀಡುತ್ತಾನೆ. ಆಗ ರಾಜನು ಶಿವಭೂತಿಯ ಹತ್ತಿರವಿದ್ದ ಒಡವೆಯನ್ನು ಕಸಿದು ಅವನನ್ನು ಸೆರೆಮನೆಗೆ ಅಟ್ಟುತ್ತಾನೆ.

೯. ಶಿವಭೂತಿಗೆ ಸರ್ಪವು ಹೇಗೆ ನೆರವಾಯಿತು?
ಉ: ಕಷ್ಟ ಬಂದಾಗ ತನ್ನನ್ನು ನೆನೆಯಿರಿ ಎಂದು ಸರ್ಪ ಹೇಳಿದ ಮಾತು ಶಿವಭೂತಿಗೆ ನೆನಪಾಗಿ ಸರ್ಪವನ್ನು ನೆನೆದನು. ಸರ್ಪವು ಬಂದಿತು. ಶಿವಭೂತಿಯು ನಡೆದುದನ್ನು ವಿವರಿಸಿದನು. ಸರ್ಪವು ತಾನು ಅರಸನ ಹಿರಿಯ ಮಗನನ್ನು ಕಚ್ಚಿ ಕೊಲ್ಲುವುದಾಗಿ ಹೇಳಿತು. ಬೇರೆ ಯಾರೂ ರಾಜಕುಮಾರನನ್ನು ಬದುಕಿಸಲಾಗದು. ಶಿವಭೂತಿಗೆ ರಾಜಕುಮಾರನಿಗೆ ಮಂತ್ರಿಸಿದ ನೀರು ಹಾಕಲು ಹೇಳಿತು. ಹಾವು ಹಾಗೆಯೇ ಮಾಡಿತು. ರಾಜನು ತನ್ನ ಮಗನನ್ನು ಬದುಕಿಸಿದವರಿಗೆ ಕೇಳಿದುದನ್ನು ಕೊಡುವೆನೆಂದು ಡಂಗುರ ಹೊಡೆಸಿದನು. ಆಗ ಶಿವಭೂತಿಯು ನೀರನ್ನು ಮಂತ್ರಿಸಿ ರಾಜಕುಮಾರನಿಗೆ ಚಿಮುಕಿಸಿ, ರಾಜಕುಮಾರನನ್ನು ಬದುಕಿಸಿದನು. ಶಿವಭೂತಿಯಿಂದ ನಡೆದ ವಿಚಾರವನ್ನು ತಿಳಿದ ರಾಜನು ಕಿರಾತನನ್ನು ಕೊಲ್ಲಿಸಿ, ಶಿವಭೂತಿಗೆ ಅಮೂಲ್ಯವಾದ ಕಾಣಿಕೆಗಳನ್ನು ಕೊಟ್ಟನು.

೧೦. ಈ ಕಥೆಯಿಂದ ತಿಳಿದುಬರುವ ನೀತಿಯೇನು?
ಉ: ಯೋಗ್ಯರಲ್ಲದವರಿಗೆ ದಾನ ಮಾಡಬಾರದು. ನೀಚನಿಗೆ ಉಪಕಾರ ಮಾಡಬಾರದು. ಎಷ್ಟೇ ಉಪಕಾರ ಮಾಡಿದರೂ ಅವರ ನೀಚತನವನ್ನು ಅವರು ಬಿಡುವುದಿಲ್ಲ. ಹಾವಿಗೆ ಹಾಲೆರೆದಂತೆ. ನೀಚರಿಂದ ದೂರವೇ ಉಳಿಯಬೇಕು. ‘ದುಷ್ಟರ ಸಹವಾಸ ಕೆಟ್ಟದ್ದು’ ಎಂಬದು ಈ ಕಥೆಯಿಂದ ತಿಳಿದುಬರುವ ನೀತಿ.

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.
ಒಂದು ಮಹಾ ಅರಣ್ಯದಲ್ಲಿ ಕಂಬಳಕನೆಂಬ ಬೇಡನಿದ್ದನು. ಅವನನ್ನು ಒಂದು ಹುಲಿ ಅಟ್ಟಿಸಿಕೊಂಡು ಬಂದಿತು. ಆ ಬೇಡನು ಪ್ರಾಣಭಯದಿಂದ ದಿಕ್ಕುಗಾಣದೆ ಓಡಿಬರುತ್ತ ಒಂದು ಹಳೆಯ ಬಾವಿಯಲ್ಲಿ ಬಿದ್ದನು.

೧೧. ಅರಣ್ಯದಲ್ಲಿದ್ದ ಬಾವಿಯಲ್ಲಿ ಯಾರು ಬಿದ್ದರು? ಹೇಗೆ? ವಿವರಿಸಿ.
ಉ: ಬೇಡ, ಹುಲಿ, ಸರ್ಪ, ಮಂಗ ಇವುಗಳು ಬಾವಿಯಲ್ಲಿ ಬಿದ್ದವು. ಕಂಬಳಕನೆಂಬ ಬೇಡನನ್ನು ಒಂದು ಹುಲಿಯು ಅರಣ್ಯದಲ್ಲಿ ಅಟ್ಟಿಸಿಕೊಂಡು ಬಂದಿತು. ಬೇಡನು ಪ್ರಾಣಭಯದಿಂದ ದಿಕ್ಕುಗಾಣದೆ ಓಡಿ ಬರುತ್ತ ಹಳೆಯ ಬಾವಿಯಲ್ಲಿ ಬಿದ್ದನು. ಕೋಪದಲ್ಲಿದ್ದ ಹುಲಿಯೂ ಅದೇ ಬಾವಿಯಲ್ಲಿ ಬಿದ್ದಿತು. ಅದೇ ದಾರಿಯಲ್ಲಿ ಚಪಲಕನೆಂಬ ಒಂದು ಕಪಿಯು ಬಾಯಾರಿ ನೀರು ಕುಡಿಯಲು ಬಾವಿಯನ್ನು ನೋಡಿತು. ದಡದಿಂದ ಇಳಿಯುತ್ತ ಜೋತುಬಿದ್ದಿದ್ದ ಸರ್ಪವನ್ನು ಬಳ್ಳಿ ಎಂದು ತಿಳಿದು, ಅದನ್ನು ಹಿಡಿದು ಹಾವಿನ ಸಹಿತ ಬಾವಿಯಲ್ಲಿ ಬಿದ್ದಿತು.

೧೨. ಶಿವಭೂತಿಯು ಹುಲಿಯ ಮಾತು ಕೇಳಲಿಲ್ಲವೇಕೆ? ವಿವರಿಸಿ.(Same as 6th question)
ಉ:
ಹುಲಿಯು ಶಿವಭೂತಿಗೆ ಬೇಡನು ನೀಚನೆಂದು, ಅವನು ಉಪಕಾರ ಮಾಡಿದರೆ ಅಪಕಾರವನ್ನೇ ಮಾಡುತ್ತಾನೆ ಎಂದಿತು. ಅವನು ಹಾವಿಗೆ ಹಾಲೆರೆದಂತೆ. ಆದ್ದರಿಂದ ಬೇಡನನ್ನು ರಕ್ಷಿಸಬಾರದೆಂದು ಹೇಳಿತು. ಹುಲಿಯನ್ನು, ಕಪಿಯನ್ನು, ಸರ್ಪವನ್ನು ರಕ್ಷಿಸಿದ ಮೇಲೆ ಕಿರಾತನನ್ನು ರಕ್ಷಿಸದಿದ್ದರೆ ಪಕ್ಷಪಾತ ತೋರಿದಂತಾಗುತ್ತದೆ. ಪರೋಪಕಾರವು ಎಂದೂ ಕೆಟ್ಟದಲ್ಲ. ‘ಯತ್ಪರಾರ್ಥಂ ಶರೀರಂ’ ಎಂಬ ಸುಭಾಷಿತದಂತೆ ಈ ಬೇಡನನ್ನು ರಕ್ಷಿಸದಿದ್ದರೆ ತಾನು ಕೆಟ್ಟವನಾಗುತ್ತೇನೆ ಎಂದು ಶಿವಭೂತಿಯು ಕರುಣೆಯಿಂದ  ಕಿರಾತನನ್ನು ರಕ್ಷಿಸುತ್ತಾನೆ.

೧೩. ಬೇಡನು ಶಿವಭೂತಿಯನ್ನು ರಾಜನಿಂದ ದಂಡನೆಗೆ ಗುರಿಪಡಿಸಿದ್ದು ಹೇಗೆ? (Same as 8th question)
ಉ:
ಬೀದಿಯಲ್ಲಿ ಬರುತ್ತಿದ್ದ ಶಿವಭೂತಿಯನ್ನು ಕಂಡ ಬೇಡನು ಅವನಿಗೆ ನಮಸ್ಕರಿಸಿ ತನ್ನ ಮನೆಗೆ ಕರೆದುಕೊಂಡು ಹೋದನು. ತನ್ನ ಬಡತನದ ಕಾರಣದಿಂದ ಶಿವಭೂತಿಯನ್ನು ಸತ್ಕರಿಸಲಾಗದು ಎಂದನು. ಬೇಡನ ಸ್ಥಿತಿಯನ್ನು ನೋಡಿದ ಶಿವಭೂತಿ ಅವನಿಗೆ ಹುಲಿಯು ಕೊಟ್ಟ ಆಭರಣಗಳನ್ನು ತೋರಿಸಿದನು. ಬೇಡನು ಶಿವಭೂತಿಯ ಬಗ್ಗೆ ಕೆಡುಕು ಆಲೋಚಿಸಿ ರಾಜನ ಬಳಿಗೆ ಹೋಗಿ ರಾಜನು ತೊಡುವ ಆಭರಣಗಳನ್ನು ಒಬ್ಬ ಆಗಂತುಕ ತಂದಿದ್ದಾನೆಂದು ದೂರು ನೀಡುತ್ತಾನೆ. ಆಗ ರಾಜನು ಶಿವಭೂತಿಯ ಹತ್ತಿರವಿದ್ದ ಒಡವೆಯನ್ನು ಕಸಿದು ಅವನನ್ನು ಸೆರೆಮನೆಗೆ ಅಟ್ಟುತ್ತಾನೆ.

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ
ತೀರ್ಥಯಾತ್ರೆಗೆ ಹೊರಟ ದಯಾಮಯನಾದ ಶಿವಭೂತಿ ಎಂಬ ಬ್ರಾಹ್ಮಣನು ಬಾಯಾರಿ ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಬಾವಿಗೆ ನೀರು ಕುಡಿಯಲು ಬರುತ್ತಾನೆ. ಆ ಬಾವಿಯಿಂದ ನೀರು ಪಡೆಯಲು ಒಂದು ಬಳ್ಳಿಗೆ ತನ್ನ ಸಣ್ಣ ಕಳಶಗೆಂಡಿಯನ್ನು ಕಟ್ಟಿ ಬಾವಿಯಲ್ಲಿ ಬಿಡುತ್ತಾನೆ.

೧೪. ಶಿವಭೂತಿ ಯಾರು? ಅವನು ತನ್ನ ಕಳಶಗಿಂಡಿಯನ್ನು ಎತ್ತುವಾಗ ಏನಾಯಿತು?
ಉ:
ಶಿವಭೂತಿ ಒಬ್ಬ ಬ್ರಾಹ್ಮಣ. ಇವನು ತೀರ್ಥಯಾತ್ರೆಗೆಂದು ಹೊರಟಿದ್ದನು. ದಾರಿಯಲ್ಲಿ ಬಾಯಾರಿಕೆಯಾಗಿ ಬಾವಿಯ ಬಳಿ ನೀರು ಕುಡಿಯಲು ಬಂದನು. ಆ ಬಾವಿಯಿಂದ ನೀರು ತೆಗೆಯಲು ಒಂದು ಬಳ್ಳಿಗೆ ತನ್ನ ಸಣ್ಣ ಕಳಶಗಿಂಡಿಯನ್ನು ಕಟ್ಟಿ ಬಾವಿಯಲ್ಲಿ ಬಿಟ್ಟನು. ನೀರು ತುಂಬಿದ ಗಿಂಡಿಯನ್ನು ಮೇಲೆತ್ತುವಾಗ ಆ ಹುಲಿಯು ಹಿಡಿದು ನೇತಾಡುತ್ತಿತ್ತು. ಕೈಯಿಗೆ ಭಾರವಾದರೂ ಬಲವಾಗಿ ಹಿಡಿದು ಹೊರಗೆ ಎತ್ತಿದನು. ಹುಲಿಯು ಅವನಿಗೆ ನಮಸ್ಕರಿಸಿ, ಬಾವಿಯಲ್ಲಿ ಬೇಡ, ಸರ್ಪ ಮತ್ತು ಕೋತಿ ಇದೆಯೆಂದು ಹೇಳಿತು. ತನ್ನನ್ನು ರಕ್ಷಿಸಿದ ಶಿವಭೂತಿಗೆ ತನ್ನ ಗುಹೆಗೆ ಬರಲು ಹೇಳಿತು. ಅಮೂಲ್ಯವಾದ ಕಾಣಿಕೆಗಳನ್ನು ಕೊಡುವೆನು ಎಂದಿತು.

೧೪. ಪಂಚತಂತ್ರದಲ್ಲಿ ಅಡಕವಾಗಿರುವ ಸಂದೇಶಗಳು ಯಾವುವು? ಇದನ್ನು ಬರೆದವರು ಯಾರು? (Same as 1st question )
ಉ:
ಪಂಚ ಎಂದರೆ ಐದು. ತಂತ್ರ ಎಂದರೆ ಜೀವನದಲ್ಲಿ ಜಾಣನಾಗಿ ನಡೆಯುವ ವಿಧಾನ. ಜೀವನದಲ್ಲಿ ವಿಶ್ವಾಸವನ್ನು ಅಭಿವೃದ್ಧಿಸುವುದು, ಜನರನ್ನು ಹೇಗೆ ಅರ್ಥಮಾಡಿಕೊಳ್ಳುವುದು, ಒಳ್ಳೆಯ ಗೆಳೆಯರನ್ನು ಹೇಗೆ ಆರಿಸುವುದು, ಬುದ್ಧಿವಂತಿಕೆಯನ್ನು ಹೇಗೆ ಸಂಪಾದಿಸುವುದು, ಜೀವನದಲ್ಲಿ ಹೇಗೆ ಸವಾಲುಗಳನ್ನು ಎದುರಿಸುವುದು ಎಂಬುದರ ಬಗ್ಗೆ ವಿಸ್ತರಿಸಲಾಗಿದೆ. ಪಂಚತಂತ್ರ ಕುರಿತ ಹಳೆಯ ಜಾಣ್ನುಡಿಯ ಪ್ರಕಾರ ಈ ವಿಜ್ಞಾನದಲ್ಲಿ ನಿಷ್ಣಾತನಾಗಿರುವವನು ಜೀವನದಲ್ಲಿ ಸದಾ ಯಶಸ್ಸನ್ನು ಸಾಧಿಸುತ್ತಾನೆ. ಈ ಕೃತಿಯು ಅನ್ಯೋನ್ಯತೆ, ಪ್ರೀತಿ ಮತ್ತು ಕರುಣೆ ನಿಸ್ವಾರ್ಥತೆಯಿಂದ ಕೂಡಿರುವ ಎದೆಗಾರಿಕೆ, ಸಾಮೂಹಿಕ ಬದುಕು, ಅನ್ಯೋನ್ಯ ಅರಿವು ಮತ್ತು ಜ್ಞಾನ ಸಂಪಾದನೆಯ ವಿಷಯಗಳನ್ನು ನಮಗೆ ಬೋಧಿಸುತ್ತದೆ. ಪಂಚತಂತ್ರ ಬರೆದವರು ವಿಷ್ಣುಶರ್ಮ.

೧೫. ಕಪಿಯು ಶಿವಭೂತಿಯನ್ನು ಹೇಗೆ ಸತ್ಕರಿಸಿತು?
ಉ:
ಶಿವಭೂತಿಯು ತೀರ್ಥಯಾತ್ರೆಯಿಂದ ಬದರಿಕಾಶ್ರಮಕ್ಕೆ ಬಂದನು. ಪ್ರಯಾಣದ ಆಯಾಸವನ್ನು ಒಂದು ಮಾವಿನ ಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದನು. ಆ ವನದಲ್ಲಿದ್ದ ಕಪಿಯು ಶಿವಭೂತಿಯನ್ನು ಕಂಡು ಪ್ರೀತಿಯಿಂದ ಪ್ರಸನ್ನವದನನಾಗಿ, ಆ ವನದ ಅನೇಕ ಹಲಸು, ಮಾವು, ಪೇರಲು, ಬಾಳೆ ಮುಂತಾದ ಹಣ್ಣುಗಳನ್ನು ತಂದುಕೊಟ್ಟು ಶಿವಭೂತಿಯನ್ನು ಸಂಭ್ರಮದಿಂದ ಸತ್ಕರಿಸಿತು.

೧೬. ಸರ್ಪವು ಶಿವಭೂತಿಯ ಉಪಕಾರವನ್ನು ಹೇಗೆ ತೀರಿಸಿತು? ವಿವರಿಸಿ.
ಉ:
ಕಷ್ಟ ಬಂದಾಗ ತನ್ನನ್ನು ನೆನೆಯಿರಿ ಎಂದು ಸರ್ಪ ಹೇಳಿದ ಮಾತು ಶಿವಭೂತಿಗೆ ನೆನಪಾಗಿ ಸರ್ಪವನ್ನು ನೆನೆದನು. ಸರ್ಪವು ಬಂದಿತು. ಶಿವಭೂತಿಯು ನಡೆದುದನ್ನು ವಿವರಿಸಿದನು. ಸರ್ಪವು ತಾನು ಅರಸನ ಹಿರಿಯ ಮಗನನ್ನು ಕಚ್ಚಿ ಕೊಲ್ಲುವುದಾಗಿ ಹೇಳಿತು. ಬೇರೆ ಯಾರೂ ರಾಜಕುಮಾರನನ್ನು ಬದುಕಿಸಲಾಗದು. ಶಿವಭೂತಿಗೆ ರಾಜಕುಮಾರನಿಗೆ ಮಂತ್ರಿಸಿದ ನೀರು ಹಾಕಲು ಹೇಳಿತು. ಹಾವು ಹಾಗೆಯೇ ಮಾಡಿತು. ರಾಜನು ತನ್ನ ಮಗನನ್ನು ಬದುಕಿಸಿದವರಿಗೆ ಕೇಳಿದುದನ್ನು ಕೊಡುವೆನೆಂದು ಡಂಗುರ ಹೊಡೆಸಿದನು. ಆಗ ಶಿವಭೂತಿಯು ನೀರನ್ನು ಮಂತ್ರಿಸಿ ರಾಜಕುಮಾರನಿಗೆ ಚಿಮುಕಿಸಿ, ರಾಜಕುಮಾರನನ್ನು ಬದುಕಿಸಿದನು. ಶಿವಭೂತಿಯಿಂದ ನಡೆದ ವಿಚಾರವನ್ನು ತಿಳಿದ ರಾಜನು ಕಿರಾತನನ್ನು ಕೊಲ್ಲಿಸಿ, ಶಿವಭೂತಿಗೆ ಅಮೂಲ್ಯವಾದ ಕಾಣಿಕೆಗಳನ್ನು ಕೊಟ್ಟನು. ಹೀಗೆ ಸರ್ಪವು ಶಿವಭೂತಿಯ ಉಪಕಾರವನ್ನು ತೀರಿಸಿತು.

ಸಮನಾರ್ಥಕ ಪದಗಳು – Synonyms

ಅರಣ್ಯ = ಕಾಡು, ವನ, ಬನ forest
ಕೋಪ = ಸಿಟ್ಟು,  angry
ಸರ್ಪ = ಹಾವು, ಉರಗ snake
ಕಪಿ = ಮಂಗ, ಕೋತಿ monkey
ಆಶ್ಚರ್ಯ = ಅಚ್ಚರಿ, ಬೆರಗು surprised
ಸಿರಿವಂತ = ಶ್ರೀಮಂತ,  rich
ಸಂತೋಷ = ಖುಷಿ, ಆನಂದ happy
ದಿವಸ = ದಿನ  day
ಅರಸ = ರಾಜ, ಪ್ರಭು king
ಪರ್ವತ = ಬೆಟ್ಟ, ಗುಡ್ಡ Mountain
ದಾರಿ = ರಸ್ತೆ road

ವಿರುದ್ಧಾರ್ಥಕ ಪದಗಳು – Opposite words

ಹೊರಗೆ X ಒಳಗೆ (Inside X Outside)
ಸಿರಿವಂತ X ಬಡವ (Rich X Poor)
ಉಪಾಯ X ನಿರುಪಾಯ (Idea X Idealess)
ಬನ್ನಿ X ಹೋಗಿ (Come X Go)
ಮೇಲೆ X ಕೆಳಗೆ (Up X Down)
ಪ್ರೀತಿ X ದ್ವೇಷ (Love X Hate)

Click here to download Sivabutiya kate kannada sahitya sangama grade IX

One Response