Kannada Nighantu letter writing is a formal letter for X grade. Kannada Nighantu X grade letter writing.

ನೀವು ಶಿವಮೊಗ್ಗದ ಅಶೋಕನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರಮೀಳ ಎಂದು ಭಾವಿಸಿಕೊಂಡು ಪರಿಷತ್ತು ಪ್ರಕಟಿಸಿದ ‘ಕನ್ನಡ ನಿಘಂಟು’ವಿನ ಹತ್ತು ಪ್ರತಿಗಳನ್ನು ಕಳುಹಿಸಿಕೊಡುವಂತೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಿಗೊಂದು ಪತ್ರ ಬರೆಯಿರಿ.

                                                                                    ದಿನಾಂಕ: ೨೫.೦೫.೨೦೨೬

ಇವರಿಂದ,
ಪ್ರಮೀಳ,
ಹತ್ತನೆಯ ತರಗತಿ
ಸರಕಾರಿ ಪ್ರೌಢಶಾಲೆ
ಅಶೋಕನಗರ, ಶಿವಮೊಗ್ಗ.


ಇವರಿಗೆ,

ಮಾನ್ಯ ಕಾರ್ಯದರ್ಶಿಗಳು,
ಕನ್ನಡ ಸಾಹಿತ್ಯ ಪರಿಷತ್ತು,
ಚಾಮರಾಜಪೇಟೆ, ಬೆಂಗಳೂರು.

ಮಾನ್ಯರೇ,

ವಿಷಯ:
ಪರಿಷತ್ತಿನ ಪ್ರಕಟಣೆಯಾದ ‘ಕನ್ನಡ ನಿಘಂಟು’ವಿನ ಹತ್ತು ಪ್ರತಿಗಳನ್ನು ಕಳುಹಿಸಿ ಕೊಡುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪರಿಷತ್ತು ಪ್ರಕಟಿಸಿರುವ ಕನ್ನಡ ನಿಘಂಟಿನ ಹತ್ತು ಪ್ರತಿಗಳು ನನಗೆ ಮತ್ತು ನನ್ನ ಗೆಳತಿಯರಿಗೆ ಬೇಕಾಗಿದೆ. ದಯಮಾಡಿ ಹತ್ತು ಪ್ರತಿಗಳನ್ನು ನನ್ನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ಈ ಮೂಲಕ ಕೇಳಿ ಕೊಳ್ಳುತ್ತೇನೆ. ಆ ಬಗ್ಗೆ ಐನೂರು ರೂಪಾಯಿಗಳ ಬ್ಯಾಂಕ್ ಹುಂಡಿಯನ್ನು  ಮುಂಗಡರೂಪವಾಗಿ ಈ ಪತ್ರದ ಜೊತೆ ಇರಿಸಿದ್ದೇನೆ.

ವಂದನೆಗಳೊಂದಿಗೆ,

ಇಂತಿ ತಮ್ಮ ನಂಬುಗೆಯ,
        
ಸಹಿ ………………………..

(ಪ್ರಮೀಳ)

Official Letter

Instruction: Imagine you are Pramila, a student at the Government High School in Ashok Nagar, Shivamogga. Write a letter to the Secretary of the Kannada Sahitya Parishat, Bengaluru, requesting them to send ten copies of the ‘Kannada Dictionary’ published by the council.

Date: 25.05.2019

From,
Pramila,
10th Standard,
Government High School,
Ashok Nagar, Shivamogga.

To,
The Honorable Secretary,
Kannada Sahitya Parishat,
Chamarajpet, Bengaluru.

Respected Sir,

Subject: Regarding the request to send ten copies of the ‘Kannada Dictionary’ published by the Parishat.

With reference to the subject mentioned above, my friends and I require ten copies of the Kannada Dictionary published by the Parishat. I hereby request you to kindly send ten copies to my address. I have enclosed a bank draft of 500 rupees as an advance payment along with this letter.

Thanking You,

Yours faithfully,
(Signature)……..
Pramila

Click here to download formal letter vyvaharika patra about Kannada Nighantu