Gadegalu 1 mark explains the proverbs in one sentence. This is only for CBSE 10th board exams.
೧. ಕಟ್ಟುವುದು ಕಠಿಣ; ಕೆಡಹುವುದು ಸುಲಭ. (Building is hard; breaking it is easy)
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಬದುಕನ್ನು ಕಟ್ಟಲು ತುಂಬಾ ವರ್ಷಗಳು ಬೇಕು ಹಾಗೆಯೇ ಬದುಕನ್ನು ತುಂಬಾ ಬೇಗ ಹಾಳು ಮಾಡಿಕೊಳ್ಳಬಹುದು.
Even the Vedas might prove false, but a proverb never will. It takes many years to build a life, yet one can ruin it very quickly.
೨. ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. (Mother who gave birth and the motherland that bears you are higher than heaven)
ವೇದ ಸುಳ್ಳಾದರು ಗಾದೆ ಸುಳ್ಳಾಗದು. ನಮ್ಮನ್ನು ಹೆತ್ತ ತಾಯಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಹಾಗೆಯೇ ನಮ್ಮ ತಾಯಿನಾಡು ನಮ್ಮ ಬದುಕಿಗೆ ಬೇಕಾದನ್ನು ಕೊಡುತ್ತಾಳೆ. ಹಾಗಾಗಿ ಇವರಿಬ್ಬರು ಸ್ವರ್ಗಕ್ಕಿಂತ ಮಿಗಿಲು.
Even the Vedas might prove false, but a proverb never will. Our birth mother watches over us with the utmost care and devotion. In the same way, our motherland provides everything necessary for our lives. Therefore, both of them are greater than heaven itself.
೩. ಕೈ ಕೆಸರಾದರೆ ಬಾಯಿ ಮೊಸರು (If you dirty your hands, your mouth will taste curd)
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಸುಖವಾದ ಜೀವನ ಅಥವಾ ಪ್ರತಿಫಲ ಸಿಗುತ್ತದೆ ಎಂದರ್ಥ.
Even the Vedas might prove false, but a proverb never will. It implies that a comfortable life or a reward can be attained only through hard work.
೪. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ (A year for the potter, a minute for the stick)
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಕಷ್ಟಪಟ್ಟು ಮಾಡಿದ ಪ್ರಯತ್ನವನ್ನು, ಅಜಾಗರೂಕತೆ ಅಥವಾ ದುಷ್ಕೃತ್ಯದಿಂದ ಕ್ಷಣಮಾತ್ರದಲ್ಲಿ ನಾಶಪಡಿಸಬಲ್ಲದು ಎಂದರ್ಥ.
Even the Vedas might prove false, but a proverb never will. This means that an effort made through hard work can be destroyed in an instant due to carelessness or a misdeed.
೫) ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. Truth never dies, lies never gives happiness. (Truth Triumps)
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಸತ್ಯ ನಮ್ಮನ್ನು ಯಾವಾಗಲೂ ಕಾಪಾಡುತ್ತದೆ. ಸುಳ್ಳು ನಮ್ಮನ್ನು ಯಾವಾಗಲೂ ಕಾಡುತ್ತದೆ, ನೆಮ್ಮದಿ ಕೊಡುವುದಿಲ್ಲ.
Even if the Vedas were to prove false, a proverb would not. Truth always protects us. A lie always haunts us and denies us peace.
೬) ಆಳಾಗಬಲ್ಲವನು ಅರಸನಾಗಬಲ್ಲನು. The one works like a labour will enjoy like a king.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಯಾರು ಆಳಾಗಿ ದುಡಿಯುತ್ತಾರೋ ಅವರು ಅರಸನಂತೆ ಬಾಳುತ್ತಾರೆ.
Even the Vedas might prove false, but a proverb never will. Those who toil like servants live like kings.
೭) ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ. Nothing tastier than salt, no relative like mother.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಸಿಹಿ, ಕಹಿ, ಹುಳಿ, ಖಾರಕ್ಕಿಂತ ಉಪ್ಪಿನ ರುಚಿಯೇ ಮೇಲು, ಹಾಗೆಯೇ ತಾಯಿಯ ಪ್ರೀತಿ, ಸಹನೆ ಎಲ್ಲ ಬಂಧುವಿಗಿಂತ ಮಿಗಿಲು.
Even the Vedas might prove untrue, but a proverb never will. Just as the taste of salt surpasses that of sweet, bitter, sour, or spicy flavors, a mother’s love and patience excel those of any other relative.
೮) ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. Don’t think about the lost time.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಆ ಸಮಯ ಮಿಂಚಿದೆ ಎಂದು ಯೋಚಿಸಿ ಫಲವಿಲ್ಲ.
Even the Vedas might prove false, but a proverb never will. There is no point in lamenting that the time for a task has passed because you failed to complete it when you should have.
೯) ಕೂಡಿ ಬಾಳಿದರೆ ಸ್ವರ್ಗ ಸುಖ Happiness is in living together.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಮನೆಯಲ್ಲಿ, ಸಮಾಜದಲ್ಲಿ ಎಲ್ಲರ ಜೊತೆ ಒಟ್ಟಿಗೆ ಬಾಳಿದರೆ ಒಳ್ಳೆಯ ಜೀವನ ನಡೆಸಬಹುದು.
Even if the Vedas prove false, a proverb will not. One can lead a good life by living together with others—both at home and in society.
೧೦) ಮಾತೇ ಮುತ್ತು, ಮಾತೇ ಮೃತ್ಯು What we speak can favour us or trouble us.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ನಾವು ಆಡುವ ಮಾತು ನಮಗೆ ಒಳ್ಳೆಯದನ್ನು ಮಾಡಬಹುದು ಹಾಗೇ ಕೆಟ್ಟದ್ದನ್ನೂ ಮಾಡಬಹುದು.
Even the Vedas might prove false, but a proverb never will. The words we speak can bring us good, just as they can bring us harm.
೧೧) ತಾಳಿದವನು ಬಾಳಿಯಾನು Patience is the key.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ತಾಳ್ಮೆಯಿಂದ ಇದ್ದರೆ ಜೀವನ ಒಳ್ಳೆಯದಾಗಿರುತ್ತದೆ.
Even if the Vedas are false, proverbs are not false. Life is good if you are patient.
೧೨) ಮನಸ್ಸಿದ್ದರೆ ಮಾರ್ಗ Where there is a will there is a way.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಮನಸ್ಸಿಟ್ಟು ಮಾಡಿರುವ ಎಲ್ಲಾ ಕೆಲಸಗಳಿಗೆ ಯಶಸ್ಸು ಸಿಗುತ್ತದೆ.
Even the Vedas might prove false, but a proverb never will. Any task undertaken with dedication will meet with success.
೧೩) ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ. The one speaks well will never fight, the one knows to eat will never have any disease.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಯಾರು ಒಳ್ಳೆಯ ಮಾತನಾಡುತ್ತಾರೋ ಅವರು ಜಗಳ ಮಾಡುವುದಿಲ್ಲ. ಯಾರು ಒಳ್ಳೆಯ ಊಟ ಮಾಡುತ್ತಾರೋ ಅವರಿಗೆ ರೋಗ ಬರುವುದಿಲ್ಲ.
Even the Vedas might prove false, but a proverb never will. Those who speak well do not pick fights. Those who eat well do not fall ill.
೧೪) ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? Plant can be bent but not the tree.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಚಿಕ್ಕ ಮಕ್ಕಳಿದ್ದಾಗ ಅವರ ತಪ್ಪನ್ನು ಸರಿ ಮಾಡಬಹುದು, ಆದರೆ ಅವರು ದೊಡ್ಡವರಾದಾಗ ಸರಿ ಮಾಡುವುದು ಕಷ್ಟ ಎಂಬುದು ಈ ಗಾದೆ ಮಾತಿನ ಅರ್ಥ.
Even the Vedas might prove false, but a proverb never will. The meaning of this proverb is that while it is possible to correct the mistakes of young children, it becomes difficult to do so once they have grown up.