Deepavaliya Mahime sahitya sangama ICSE grade IX story is from Janapada. Deepavaliya Mahime is story from folk class 9 sahithya sanghama has a moral.

ದೀಪಾವಳಿಯ ಮಹಿಮೆ ಜನಪದ

ಮಾನವನ ಪುರಾತನ ಸಂಸ್ಕೃತಿಯ ಹಾಗೂ ಸಂಪ್ರದಾಯದ ಮೇಲೆ ಹೆಚ್ಚು ಬೆಳಕನ್ನು ಬೀರಬಲ್ಲ ಜಾನಪದ ಪ್ರಕಾರಗಳಲ್ಲಿ ಕಥೆ ಪ್ರಮುಖವಾದುದು. ಬಾಯಿಂದ ಬಾಯಿಗೆ ಹರಿದು ಬಂದಿರುವ ಈ ಕಥೆಗಳ ಉಗಮ, ವಿಕಾಸ ಮತ್ತು ಪ್ರಸಾರಗಳನ್ನು ಅಭ್ಯಸಿಸಿದವರಿಗೆ ಇದು ಅಸತ್ಯವೆನಿಸದು. ಮಾನವ, ಅವನ ಸಮಾಜ ಮತ್ತು ಸಂಸ್ಕೃತಿ ನಾಗರಿಕತೆಗಳ ಬಗ್ಗೆ ಅಧಿಕ ಪುರಾವೆಗಳನ್ನು ಒದಗಿಸಬಲ್ಲ ಇದು ಕೇವಲ ಸಾಹಿತ್ಯ ಪ್ರಕಾರವಾಗಿರದೆ ಪ್ರಾಮಾಣಿಕ ವಿಜ್ಞಾನವೂ ಆಗಿದೆ. ಆದ್ದರಿಂದ ಇಂಥ ಪರಂಪರಾಗತ ಕಥೆಗಳಿಗೆ ಮನೋರಂಜನೆ ಒಂದು ಮುಖವಾದರೆ, ಸಾಮಾಜಿಕ, ಭಾಷಿಕ, ಚಾರಿತ್ರಿಕ, ಮನಶ್ಯಾಸ್ತ್ರೀಯ ಹಾಗೂ ಮಾನವಶಾಸ್ತ್ರೀಯ ದೃಷ್ಟಿಕೋನಗಳ ಮೂಲಕ ಮನುಷ್ಯ ವರ್ಗದ ತಿಳಿವಳಿಕೆ ಮತ್ತೊಂದು ಮುಖವಾಗುತ್ತದೆ.

ಈ ಸಂಪ್ರದಾಯದ ಕಥೆಗಳು ಗದ್ಯಪದ್ಯಗಳೆರಡರಲ್ಲಿಯೂ ವ್ಯಕ್ತವಾಗಿವೆ. ಕಥೆಗಳನ್ನು ಹೇಳುವುದಾಗಲೀ ಕೇಳುವುದಾಗಲೀ ನಿನ್ನೆಮೊನ್ನೆಯದಲ್ಲ. ಶ್ರಮದ ಉಪಶಮನಕ್ಕಾಗಿ ಕಲೆ ಜನ್ಮತಾಳಿತು ಎಂಬುದನ್ನು ನಂಬಿಕೊಳ್ಳುವುದಾದರೆ, ಕಥೆ ಹುಟ್ಟಿದ್ದೂ ಈ ಅನಿವಾರ್ಯದ ಫಲವಾಗಿ ಎಂದು ಹೇಳಬಹುದು.

Among the various genres of folklore that can shed significant light on the ancient culture and traditions of mankind, the story holds a prominent place. For those who have studied the origin, evolution, and dissemination of these stories that have flowed from mouth to mouth (through oral tradition), this will not seem untrue. Providing substantial evidence about human beings, their society, culture, and civilization, this is not merely a literary genre but an authentic science. Therefore, while entertainment forms one aspect of such traditional stories, understanding mankind through social, linguistic, historical, psychological, and anthropological perspectives forms the other.

Stories of this tradition have been expressed in both prose and poetry. The act of telling or listening to stories is not something that started just yesterday or today. If we are to believe that art was born to relieve exhaustion and labor, it can be said that the birth of the story was also a result of this inevitable necessity.

ಸಾವಿರಾರು ವರ್ಷಗಳ ಹಿಂದೆ ಚಿನ್ನಾರಿ ರಾಜ್ಯದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಪ್ರತಾಪ. ರಾಜ್ಯ ಚಿಕ್ಕದಾಗಿದ್ದರೂ ಸಂಪದ್ಭರಿತವಾಗಿತ್ತು. ಪ್ರಜೆಗಳು ಸುಖ-ಸಂತೋಷದಿಂದ ಜೀವನ ನಡೆಸುತ್ತಿದ್ದರು. ಭಂಡಾರದಲ್ಲಿ ಹೇರಳ ಧನವಿತ್ತು. ಇದರಿಂದ ಪ್ರತಾಪ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದನು. ದೊಡ್ಡ ಸೈನ್ಯವನ್ನು ಕಟ್ಟಿದನು. ತನ್ನ ರಾಜ್ಯವನ್ನು ವಿಸ್ತರಿಸಿದನು. ಪ್ರತಾಪನ ಒಳ್ಳೆಯ ಗುಣದ ಜೊತೆಗೆ ಅವನೊಬ್ಬ ಹಠಮಾರಿ, ಅಭಿಮಾನಿ ರಾಜನಾಗಿದ್ದುದು ಪ್ರಜೆಗಳಿಗೆ ಚಿಂತೆಯಾಗಿತ್ತು.

ಒಂದು ದಿನ ಅವನ ರಾಜ್ಯಕ್ಕೆ ಕಾಶ್ಮೀರದಿಂದ ಕೆಲವು ಜನ ಕೇಸರಿ ಮಾರುವ ವ್ಯಾಪಾರಿಗಳು ಬಂದರು. ಅವರು ತಮ್ಮ ಜೊತೆ ಭಾರಿ ಮೊತ್ತದ ಕೇಸರಿ ಹೊತ್ತು ತಂದಿದ್ದರು. ಕೇಸರಿಯ ಬೆಲೆ ಜಾಸ್ತಿ. ಹೀಗಾಗಿ ಅವರು ಪ್ರತಾಪನಿಗೆ ಅದನ್ನು ಮಾರಲು ಇಚ್ಛಿಸಿದರು. ಪ್ರತಾಪ ಆ ವ್ಯಾಪಾರಿಗಳೆದುರು ತಾನು ಎಷ್ಟು ದೊಡ್ಡ ಶ್ರೀಮಂತ ಎಂದು ತೋರಿಸುವ ಆಸೆಯಾಯಿತು. ಅವರ ಬಳಿ ಇದ್ದ ಎಲ್ಲ ಕೇಸರಿಯನ್ನೂ ಖರೀದಿಸಿದನು. ಇದರಿಂದ ವ್ಯಾಪಾರಿಗಳಿಗೆ ತುಂಬ ಸಂತೋಷವಾಯಿತು. ಅವರು ನೋಡು ನೋಡುತ್ತಿದ್ದಂತೆಯೇ ಅದನ್ನೆಲ್ಲಾ ಗೊಬ್ಬರದ ಗುಂಡಿಗೆ ಸುರಿದನು.

ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿಗೆ ಇದರಿಂದ ಅಪಮಾನವಾಯಿತು. ತನ್ನ ಕೃಪೆಯಿಂದ ಶ್ರೀಮಂತನಾಗಿ ಮೆರೆಯುತ್ತಿರುವ ಪ್ರತಾಪನ ಸೊಕ್ಕು ಇಳಿಸಲು ಲಕ್ಷ್ಮೀ ದೇವತೆ ನಿರ್ಧರಿಸಿದಳು. ಪ್ರತಾಪನ ಮೂರ್ಖತನದಿಂದ ಅವಳಿಗೆ ತುಂಬ ಸಿಟ್ಟುಬಂದಿತ್ತು.

ಕೆಲವೇ ದಿನಗಳಲ್ಲಿ ಪ್ರತಾಪ ಜೂಜಾಡುವುದನ್ನು ಕಲಿತ. ದಿನ ಕಳೆದಂತೆ ಅವನು ತನ್ನೆಲ್ಲಾ ಸಂಪತ್ತನ್ನು ಜೂಜಿನಲ್ಲಿ ಸೋತು ನಿರ್ಗತಿಕನಾದನು. ಅವನ ರಾಜ್ಯ ಕೈ ತಪ್ಪಿತು. ಶತ್ರುಗಳು ಅವನ ರಾಜ್ಯದ ಮೇಲೆ ಆಕ್ರಮಣ ಮಾಡಿದರು. ಸದಾ ಜೂಜಿನಲ್ಲಿ ನಿರತನಾದ ಪ್ರತಾಪನಿಗೆ ಶತ್ರುಗಳನ್ನು ಎದುರಿಸುವ ಶಕ್ತಿ ಇರಲಿಲ್ಲ.

ಆ ರಾತ್ರಿ ಪ್ರತಾಪ ತನ್ನ ಮಗ ಮತ್ತು ಸೊಸೆಯೊಂದಿಗೆ ರಾಜ್ಯವನ್ನು ಬಿಟ್ಟು ಹೊರಟನು. ಈಗ ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಮೂರು ಹಗಲು-ರಾತ್ರಿ ಪ್ರಯಾಣ ಮಾಡುತ್ತಾ ದೂರದ ರಾಜ್ಯ ಒಂದಕ್ಕೆ ಬಂದರು. ನಗರದ ಹೊರಗೆ ಒಂದು ಗುಡಿಸಲು ಕಟ್ಟಿಕೊಂಡು ಜೀವನ ನಡೆಸತೊಡಗಿದರು. ಪ್ರತಾಪ ಮತ್ತು ಅವನ ಮಗ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರು. ಕಟ್ಟಿಗೆ ಒಡೆಯುವುದು, ಬಂಡೆ ಸೀಳುವುದು, ಪೈರು ನಾಟಿ ಮಾಡುವುದು ಹೀಗೆ ಯಾವ ಕೆಲಸವಾದರೂ ಸರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು.

ರಾಜನ ಸೊಸೆಯ ಹೆಸರು ಸುಮಂಗಳ. ಅವಳು ತುಂಬ ಬುದ್ಧಿವಂತೆ. ಮನೆಯಲ್ಲಿ ಚೊಕ್ಕವಾಗಿ ಸಂಸಾರ ಮಾಡುತ್ತಾ ತನ್ನ ಮಾವ ಮತ್ತು ಗಂಡನಿಗೆ ಧೈರ್ಯ ಹೇಳುತ್ತಿದ್ದರು. ಅವರಿಗೆ ದುಃಖವಾಗದಂತೆ ಎಚ್ಚರವಹಿಸಿದ್ದಳು. “ನೀವು ಕೆಲಸದಿಂದ ಹಿಂದಿರುಗುವಾಗ ಏನಾದರೂ ಒಂದು ವಸ್ತುವನ್ನು ಮರೆಯದೆ ತನ್ನಿ” ಎಂದು ಅವರಿಗೆ ಹೇಳಿದ್ದಳು. ಅವಳ ಮಾತಿನಂತೆಯೇ ಪ್ರತಾಪ ಮತ್ತು ಅವನ ಮಗ ಮನೆಗೆ ಹಿಂದಿರುಗುವಾಗ ಏನಾದರೊಂದು ವಸ್ತು – ಇಟ್ಟಿಗೆ, ಕಲ್ಲು, ಕಟ್ಟಿಗೆ – ಇತ್ಯಾದಿ ತರುತ್ತಿದ್ದರು.

ಒಂದು ದಿನ ಅವರಿಗೆ ಬೇರೇನೂ ವಸ್ತು ದೊರೆಯದಿದ್ದಾಗ ಮರದ ಬುಡದಲ್ಲಿ ಬಿದ್ದಿದ್ದ ಒಂದು ಸತ್ತ ಹಾವನ್ನು ಎತ್ತಿಕೊಂಡು ಬಂದರು. ಸುಮಂಗಳ ಆ ಸತ್ತ ಹಾವನ್ನು ತನ್ನ ಗುಡಿಸಲಿನ ಮೇಲೆ ಎಸೆದಳು.

ಮಾರನೆಯ ದಿನ ರಾಜ್ಯದಲ್ಲಿ ಕೋಲಾಹಲವುಂಟಾಯಿತು. ಜನರು ತಮ್ಮ ತಮ್ಮಲ್ಲೇ ಕುತೂಹಲದಿಂದ ಮಾತನಾಡಿಕೊಳ್ಳುತ್ತಿದ್ದರು. ಪ್ರತಾಪ ಜನರ ಬಳಿ ಹೋಗಿ ಈ ಕೋಲಾಹಲಕ್ಕೆ ಏನು ಕಾರಣ ? ಎಂದು ವಿಚಾರಿಸಿದ.

“ಮಹಾರಾಣಿಯ ವಜ್ರದ ಹಾರ ಕಳುವಾಗಿದೆ. ಹಾರದಲ್ಲಿದ್ದ ವಜ್ರಗಳು ತುಂಬ ಬೆಲೆ ಬಾಳುವಂಥವು. ಹಣಕೊಟ್ಟರೂ ಅಂಥ ಅಮೂಲ್ಯವಾದ ವಜ್ರಗಳು ಸಿಕ್ಕಲಾರವು. ಮಹಾರಾಣಿ ಸ್ನಾನ ಮಾಡುವ ಮೊದಲು ವಜ್ರದ ಹಾರವನ್ನು ಕಿಟಕಿಯ ಗೂಡಿನಲ್ಲಿ ಇಟ್ಟಿದ್ದಳು. ಅವಳು ನೋಡುತ್ತಾ ಇದ್ದಂತೆಯೇ ಒಂದು ಹದ್ದು ಹಾರಿ ಬಂದು ಹಾರವನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಟುಹೋಯಿತು. ಅದು ಎಲ್ಲಿ ಹೋಯಿತೆಂದೇ ತಿಳಿಯದು” ಗುಂಪಿನಲ್ಲಿದ್ದ ಒಬ್ಬ ಹೇಳಿದ.

ಪ್ರತಾಪ ಗುಡಿಸಲಿಗೆ ಬಂದು ತನ್ನ ಸೊಸೆಗೆ ವಿಷಯವನ್ನು ತಿಳಿಸಿದ. ಸುಮಂಗಳ ಅವನ ಮಾತು ಕೇಳಿ ಸಂತೋಷಗೊಂಡಳು. “ಈಗ ನೀವು ರಾಜನ ಬಳಿ ಹೋಗಿ ಮಹಾರಾಣಿಯ ವಜ್ರದ ಹಾರವನ್ನು ತಂದುಕೊಟ್ಟರೆ ಏನು ಉಡುಗೊರೆ ಕೊಡುತ್ತಾನೆಂದು ಕೇಳಿ ಖಚಿತ ಪಡಿಸಿಕೊಳ್ಳಿರಿ” ಎಂದು ಹೇಳಿದಳು.

ಅವಳ ಮಾತು ಕೇಳಿ ಪ್ರತಾಪನಿಗೆ ಆಶ್ಚರ್ಯವಾಯಿತು. “ಸುಮಂಗಳ… ಇದೆಂಥ ಮಾತು ! ಮಹಾರಾಣಿಯ ವಜ್ರದ ಹಾರ ನಮ್ಮ ಬಳಿ ಎಲ್ಲಿದೆ ? ಎಂದು ಕೇಳಿದ.

“ಈಗಲೇ ಅದರ ರಹಸ್ಯವನ್ನು ಹೇಳುವುದಿಲ್ಲ. ಮೊದಲು ರಾಜನಿಂದ ವಾಗ್ದಾನ ಪಡೆದು ಬನ್ನಿ” ಸುಮಂಗಳ ಹೇಳಿದಳು. ಪ್ರತಾಪ ಮತ್ತು ಅವನ ಮಗ ಇಬ್ಬರೂ ರಾಜನ ಬಳಿ ಬಂದರು. “ವಜ್ರದ ಹಾರವನ್ನು ತಂದುಕೊಟ್ಟರೆ ನೀವು ನಮಗೇನು ಉಡುಗೊರೆ ಕೊಡುತ್ತೀರಿ” ಎಂದು ಕೇಳಿದರು.

“ಅಮೂಲ್ಯವಾದ ವಜ್ರದ ಹಾರ ಮತ್ತೆ ಸಿಗುವುದಾದರೆ ನೀವು ಏನು ಕೇಳಿದರೂ ಕೊಡುತ್ತೇನೆ”. ರಾಜ ಉಲ್ಲಾಸದಿಂದ ಹೇಳಿದ. ಪ್ರತಾಪ ಗುಡಿಸಲಿಗೆ ಹಿಂದಿರುಗಿ ಸುಮಂಗಳೆಗೆ ವಿಷಯವನ್ನು ತಿಳಿಸಿದನು.

ಮಾರನೆಯ ದಿನ ಸುಮಂಗಳ ತನ್ನ ಮಾವ ಮತ್ತು ಗಂಡನ ಜೊತೆ ಅರಮನೆಗೆ ಬಂದಳು. ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ, ಹದ್ದು ಸತ್ತ ಹಾವನ್ನು ಕಚ್ಚಿಕೊಂಡು ಗುಡಿಸಿಲಿನ ಮೇಲೆ ಬಿಟ್ಟು ಹೋಗಿದ್ದ ವಜ್ರದ ಹಾರವನ್ನು ತೆಗೆದು ರಾಜನ ಮುಂದಿಟ್ಟಳು. ರಾಜನಿಗೆ ಇದರಿಂದ ತುಂಬ ಸಂತೋಷವಾಯಿತು. “ನಿನಗೇನು ಬೇಕು ಕೇಳು, ಸಂಕೋಚಪಡಬೇಡ, ಖಂಡಿತ ಅದನ್ನು ಕೊಡುತ್ತೇನೆ” ರಾಜ ಹೇಳಿದ.

“ಪ್ರಭು ನನಗೆ ಧನಕನಕ ವಸ್ತು ವಾಹನಾದಿಗಳು ಏನೂ ಬೇಡ. ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ ರಾಜ್ಯದಲ್ಲಿ ಅರಮನೆಯೂ ಸೇರಿ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ಹಾಗೆ ದೀಪಾವಳಿ ಆಚರಿಸಿ ದೀಪವನ್ನು ಬೆಳಗಿಸಬೇಕೆಂದಿರುವವರು ನನ್ನ ಗುಡಿಸಲಿನ ಸುತ್ತಲೂ ಬೆಳಗಿಸಲಿ” ಸುಮಂಗಳ ಅಳುಕದೆ ಕೇಳಿದಳು.

“ಇದೆಂಥ ವಿಚಿತ್ರ ಬೇಡಿಕೆ !…” ರಾಜನಿಗೆ ತುಂಬ ಆಶ್ಚರ್ಯವಾಯಿತು. ಆದರೂ ಮಾತಿಗೆ ತಪ್ಪುವಂತಿರಲಿಲ್ಲ. ಅವಳ ಕೋರಿಕೆಯನ್ನು ನಡೆಸಿಕೊಡುವುದಾಗಿ ಅವಳಿಗೆ ವಾಗ್ದಾನ ಮಾಡಿದ.

ಒಂದೆರಡು ತಿಂಗಳಿನಲ್ಲೇ ದೀಪಾವಳಿ ಹಬ್ಬ ಧಾವಿಸಿಬಂತು. ರಾಜನ ಆಜ್ಞೆಯಂತೆ ಇಡೀ ರಾಜ್ಯದಲ್ಲಿ ಯಾರ ಮನೆಯಲ್ಲೂ ರಾತ್ರಿ ದೀಪವನ್ನು ಬೆಳಗಿಸಲಿಲ್ಲ. ಅರಮನೆಯೂ ಇದಕ್ಕೆ ಹೊರತಿರಲಿಲ್ಲ. ಸುಮಂಗಳೆಯ ಗುಡಿಸಲಿನ ವಾತಾವರಣ ಅಂದು ಚೇತೋಹಾರಿಯಾಗಿತ್ತು.

ದೀಪಾವಳಿಯ ಶುಭರಾತ್ರಿ, ಧನ-ಸಂಪತ್ತಿನ ದೇವತೆ ಲಕ್ಷ್ಮಿ ಆ ರಾಜ್ಯವನ್ನು ಪ್ರವೇಶಿಸಿದಳು. ಆದರೆ ಇಡೀ ರಾಜ್ಯ ಕತ್ತಲಿನಿಂದ ತುಂಬಿರುವುದನ್ನು ಕಂಡು ಅವಳು ಹೌಹಾರಿದಳು. ದೀಪಾವಳಿಯ ದಿನ ತಾನು ಎಲ್ಲರ ಮನೆಗೆ ಬರುವುದು ತಿಳಿದೂ ಸಹ ಹೀಗೆ ಕತ್ತಲು ಮುಸುಕಿರುವುದು ಅವಳಿಗೆ ಆಶ್ಚರ್ಯವೆನಿಸಿತು.

ಲಕ್ಷ್ಮೀದೇವಿ ದೀಪ ಬೆಳಗಿದ ಮನೆಯನ್ನು ಹುಡುಕುತ್ತಾ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ದೀಪ ಬೆಳಗುತ್ತಿತ್ತು. ಸುತ್ತಲೂ ದೀಪದ ಹಣತೆಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಲಕ್ಷ್ಮೀದೇವಿಗೆ ಇದರಿಂದ ತುಂಬ ಆನಂದವಾಯಿತು. ಸರಸರನೆ ನಡೆಯುತ್ತಾ ಗುಡಿಸಲಿನ ಬಳಿ ಬಂದಳು. ಆದರೆ ಕೈಯಲ್ಲಿ ಕೋಲು ಹಿಡಿದು ಸುಮಂಗಳ ಅವಳನ್ನು ಬಾಗಿಲಿನಲ್ಲಿಯೇ ತಡೆದಳು.

“ನನ್ನನ್ನು ತಡೆಯಬೇಡ. ದಯಮಾಡಿ ಈ ರಾತ್ರಿ ತಂಗಲು ಅವಕಾಶ ಮಾಡಿಕೊಡು” ಲಕ್ಷ್ಮೀದೇವಿ ಕೇಳಿದಳು.

“ಸಾಧ್ಯವಿಲ್ಲ. ನನ್ನ ತಂದೆ ಮಾಡಿದ ಚಿಕ್ಕ ತಪ್ಪಿಗೆ ನೀನು ದೊಡ್ಡ ಶಿಕ್ಷೆ ಕೊಟ್ಟಿರುವೆ. ತಂದೆಯ ರಾಜ್ಯ ಸಂಪತ್ತು ಎಲ್ಲವೂ ಹೋಯಿತು. ಈಗ ಅವನು ದುಃಖದಿಂದ ನಿರ್ಗತಿಕನಾಗಿ ಜೀವನ ನಡೆಸಬೇಕಾಗಿದೆ. ನೀನು ತುಂಬ ಕ್ರೂರಿ” ಸುಮಂಗಳ ಗುಡುಗಿದಳು.

“ಬೇಸರಿಸಬೇಡ, ಇಂದಿನ ರಾತ್ರಿ ದೀಪ ಬೆಳಗುತ್ತಿರುವ ಈ ಗುಡಿಸಲಿನಲ್ಲಿ ನನಗೆ ತಂಗಲು ಅವಕಾಶಕೊಟ್ಟರೆ ಮತ್ತೆ ನಿನ್ನ ತಂದೆ ಮೊದಲಿನಂತೆಯೇ ಸಿರಿವಂತನಾಗುತ್ತಾನೆ. ಅವನ ರಾಜ್ಯ ಅವನಿಗೆ ಮತ್ತೆ ಲಭಿಸುತ್ತದೆ” ಲಕ್ಷ್ಮೀದೇವಿ ಹೇಳಿದಳು.

ಸುಮಂಗಳ ಸಂತೋಷದಿಂದ ದೇವತೆಯನ್ನು ಒಳಗೆ ಬರಮಾಡಿಕೊಂಡಳು. ಬೆಳಕು ಹರಿದ ಕೂಡಲೇ ಗುಡಿಸಲು ಇರುವ ಜಾಗದಲ್ಲಿ ಭವ್ಯವಾದ ಮಹಲು ಎದ್ದುನಿಂತಿತ್ತು. ಅದು ಸಕಲ ಸಂಪತ್ತಿನಿಂದ ತುಂಬಿತ್ತು. ಮುತ್ತು, ರತ್ನ, ವಜ್ರ, ವೈಢೂರ್ಯಗಳು ರಾಶಿ ರಾಶಿ ಹರಡಿತ್ತು.

ಪ್ರತಾಪ ಹಣದ ಸಹಾಯದಿಂದ ಮತ್ತೆ ಸೈನ್ಯವನ್ನು ಕಟ್ಟಿದ. ಶತ್ರುರಾಜ್ಯವನ್ನು ಸೋಲಿಸಿ ಮತ್ತೆ ತನ್ನ ರಾಜ್ಯವನ್ನು ಪಡೆದ. ತನ್ನ ಸೊಸೆಯ ಬುದ್ಧಿವಂತಿಕೆಯನ್ನು ಕೊಂಡಾಡಿದ. ಮುಂದಿನ ದೀಪಾವಳಿಯನ್ನು ತನ್ನ ರಾಜ್ಯದಲ್ಲಿ ವೈಭವದಿಂದ ಆಚರಿಸಿದನು.

Thousands of years ago, there was a king in the Chinnari kingdom. His name was Pratapa. Although the kingdom was small, it was filled with wealth and prosperity. The citizens lived a happy and comfortable life. The treasury held an abundance of wealth. Because of this, Pratapa spent money like water. He built a large army and expanded his kingdom. Along with Pratapa’s good qualities, the fact that he was a stubborn and proud king was a cause of worry for the citizens.

One day, some merchants selling saffron from Kashmir came to his kingdom. They had brought a massive quantity of saffron with them. Saffron was very expensive. Therefore, they wished to sell it to Prathapa.

Prathapa felt a strong urge to show off how immensely wealthy he was in front of those merchants. He purchased all the saffron they had. This made the merchants incredibly happy. However, right before their very eyes, he dumped all of that saffron into a manure pit.

Goddess Lakshmi, the deity of wealth and prosperity, felt deeply insulted by this act. She decided to shatter the arrogance of Prathapa, who was showing off the immense wealth he had acquired through her blessings. She became furious with Prathapa due to his sheer foolishness.

Within a few days, Prathapa picked up a gambling habit. As days went by, he lost all his wealth in gambling and became completely destitute. His kingdom slipped out of his hands. Enemies launched an attack on his kingdom. Prathapa, who was constantly engrossed in gambling, lacked the strength and resources to confront the enemies.

That night, Prathapa left the kingdom with his wife and daughter. Now he understood his mistake. Traveling continuously for three days and nights, they reached another kingdom. Exhausted from hunger, they built a small hut and lived there. Prathapa and his wife would leave early in the morning in search of labor work. They did whatever work was available—washing utensils, sweeping the floor, transplanting crops—to earn their living.

His daughter in law’s name was Sumangali. She was very intelligent. Managing the cooking at home, she would comfort her mother and father and keep them encouraged. She made sure they didn’t feel any sorrow. “When you return from work, please bring back whatever useless, waste item you happen to find,” she told them. Accordingly, when Prathapa and his wife returned home from work, they would bring back some discarded item—a date palm leaf, a stone, a stick, and so on.

One day, when they went to look for work, they picked up a dead snake that was lying on the side of the road and brought it back. Sumangali placed that dead snake on top of her hut.

The next day, a proclamation was made in the kingdom. People were talking among themselves in absolute astonishment. Prathapa approached someone in the crowd and asked, “What is the reason for this proclamation?”

“The Queen’s diamond necklace has been lost. The diamonds in that necklace are extremely valuable. Nowhere else could you find such priceless diamonds. Before taking a bath, the Queen had taken off her diamond necklace and placed it on a window sill. Right before her eyes, a kite (bird) flew in, snatched the necklace up in its beak, and flew away. No one knows where it flew off to,” a person in the crowd explained.

Prathapa returned to the hut and informed his daughter about the matter. Hearing his words, Sumangali became delighted. “Go to the King right now and find out for certain what reward he will give if the Queen’s diamond necklace is found and returned,” she said.

Hearing her words, Prathapa was astonished. “Sumangali… what kind of talk is this! Where do we have the Queen’s diamond necklace?” he asked.

“I will not reveal its secret right now. First, go and get a promise from the King,” Sumangali said. Prathapa and his wife both went to the King. “If we find and return the diamond necklace, what reward will you give us?” they asked.

“If the priceless diamond necklace is found and returned, I will give you whatever you ask for,” the King said enthusiastically. Prathapa returned to the hut and informed Sumangali about the matter.

The next day, Sumangali went to the King along with her mother and father. She brought along the diamond necklace that the kite (bird) had dropped on top of their hut in order to pick up the dead snake she had kept on it, and handed it over to the King. The King was overjoyed by this. “Ask for whatever you want, do not hesitate, I will give it immediately,” the King said.

“O King, I do not want any gold, silver, or jewelry. On the night of Deepavali (the festival of lights), no one in the entire kingdom, including the King, should light any lamps. If anyone wishes to see a light on Deepavali night, they must come and see it at my hut,” Sumangali requested.

“What a strange request!…” the King thought, thoroughly surprised. However, he could not go back on his word. He gave them his promise to fulfill her wish.

Within two months, the festival of Deepavali arrived. True to the King’s order, no one in the entire kingdom lit any lamps at night. Even the King’s palace was no exception. Sumangali’s hut was beautifully decorated for that day.

As per the tradition of Deepavali, Lakshmi, the Goddess of wealth and prosperity, entered the kingdom. However, seeing the entire kingdom completely engulfed in darkness, she was baffled. She was astonished to see how the kingdom was dark on the very day of Deepavali, a day when she usually visits houses illuminated with light.

Goddess Lakshmi walked toward the outskirts of the town, searching for a house with a lit lamp. A lamp was burning brightly at Prathapa’s hut. The sparks of light from the lamp were shining brilliantly. This made Goddess Lakshmi very happy. Walking with a smile, she approached the hut. However, holding a broom in her hand, Sumangali stopped her right at the entrance.

“Do not stop me. Please give me permission to enter this hut tonight,” Goddess Lakshmi requested.

“Not possible. You gave a massive punishment for a very small mistake made by my father. My father’s kingdom and all his wealth were lost. Now, because of that sorrow, he is forced to live a destitute life. You are very cruel,” Sumangali spoke back firmly.

“Do not worry. If you grant me permission to enter this hut where a lamp is burning tonight, your father will become wealthy once again, just like before. His kingdom will be returned to him,” Goddess Lakshmi promised.

Sumangali happily welcomed the Goddess inside. By the break of dawn, a magnificent palace stood in place of the small hut. It was filled with all kinds of wealth. Gold, silver, diamonds, and luxuries returned overnight.

Prathapa rebuilt his army with the help of his newfound wealth. He defeated the enemy kingdom and reclaimed his own kingdom. Pratap praised his daughter’s sharp wisdom. He celebrated the next Deepavali in his kingdom with immense grandeur.

ಅರ್ಥಗಳು

ಪುರಾತನ – ಹಳೆಯ (Ancient / Old)
ಬೆಳಕುಬೀರು – ಗೋಚರಿಸು (To shine / To appear)
ಪ್ರಕಾರ – ರೀತಿ (Type / Manner)
ಉಗಮ – ಹುಟ್ಟು (Origin / Birth)
ಪುರಾವೆ – ಸಾಕ್ಷಿ (Proof / Evidence)
ಉಪಶಮನ – ಕಡಿಮೆ ಮಾಡು (Relief / To reduce)
ಅನಿವಾರ್ಯ – ಅಗತ್ಯ (Inevitable / Necessary)
ಭಂಡಾರ – ಖಜಾನೆ (Treasury / Storehouse)
ಕೃಪೆ – ಅನುಗ್ರಹ, ದಯೆ (Grace / Kindness)
ಸೊಕ್ಕು – ಅಹಂಕಾರ, ಗರ್ವ (Arrogance / Pride)
ನಿರ್ಗತಿಕ – ಅನಾಥ, ಗತಿ ಇಲ್ಲದ (Destitute / Helpless)
ನಿರತ – ಮಗ್ನ (Engaged / Engrossed)
ಚೊಕ್ಕ – ಅಚ್ಚುಕಟ್ಟು, ಸ್ವಚ್ಛ (Neat / Clean)
ಕೋಲಾಹಲ – ಗಲಾಟೆ (Chaos / Uproar)
ಖಚಿತ – ನಿರ್ಧಾರ (Confirmed / Certain)
ಅಮೂಲ್ಯ – ಬೆಲೆ ಕಟ್ಟಲಾಗದ (Priceless / Invaluable)
ಧನ – ಸಂಪತ್ತು (Wealth / Money)
ಕನಕ – ಚಿನ್ನ (Gold)
ಆಜ್ಞೆ – ಅಪ್ಪಣೆ (Order / Command)
ಮುಸುಕು – ಆವರಿಸು (To cover / Veil)
ತಂಗು – ನೆಲೆಸು (To stay / Reside)

II ಪ್ರಶೋತ್ತರಗಳು

೧. ಚಿನ್ನಾರಿ ದೇಶದ ರಾಜ ಯಾರು? ಅವನ ಬಗ್ಗೆ ಪ್ರಜೆಗಳಿಗೆ ಏಕೆ ಚಿಂತೆಯಾಗಿತ್ತು?
ಉ: ಚಿನ್ನಾರಿ ದೇಶದ ರಾಜ ಪ್ರತಾಪ. ರಾಜ್ಯವು ಪುಟ್ಟದಾಗಿದ್ದರೂ ಸಂಪತ್ತಿನಿಂದ ಕೂಡಿತ್ತು. ಪ್ರಜೆಗಳು ಸುಖ-ಸಂತೋಷದಿಂದ ಜೀವನ ನಡೆಸುತ್ತಿದ್ದರು. ಖಜಾನೆಯಲ್ಲಿ ಸಂಪತ್ತು ತುಂಬಿತ್ತು. ಇದರಿಂದ ಪ್ರತಾಪ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದನು. ಪ್ರತಾಪನ ಒಳ್ಳೆಯ ಗುಣದ ಜೊತೆಗೆ ಅವನೊಬ್ಬ ಹಠಮಾರಿ, ಅಭಿಮಾನಿ ರಾಜನಾಗಿದ್ದುದು ಪ್ರಜೆಗಳಿಗೆ ಚಿಂತೆಯಾಗಿತ್ತು.

೨. ಲಕ್ಷ್ಮೀದೇವಿಗೆ ಅವಮಾನವಾಗಲು ಕಾರಣವೇನು?
ಉ: ಒಂದು ಬಾರಿ ಚಿನ್ನಾರಿ ರಾಜ್ಯಕ್ಕೆ ಕಾಶ್ಮೀರದಿಂದ ಕೆಲವು ಜನ ಕೇಸರಿ ಮಾರುವ ವ್ಯಾಪಾರಿಗಳು ಬಂದರು. ಅವರು ತಮ್ಮ ಜೊತೆ ಭಾರೀ ಮೊತ್ತದ ಕೇಸರಿ ತಂದಿದ್ದರು. ಕೇಸರಿಯ ಬೆಲೆ ಜಾಸ್ತಿ, ಹೀಗಾಗಿ ಅವರು ಪ್ರತಾಪನಿಗೆ ಅದನ್ನು ಮಾರಲು ಇಚ್ಛಿಸಿದರು. ತಾನೆಷ್ಟು ಶ್ರೀಮಂತ ಎಂದು ತೋರಿಸಿಕೊಳ್ಳಲು ಅವರ ಬಳಿ ಇದ್ದ ಕೇಸರಿಯೆಲ್ಲವನ್ನೂ ರಾಜನು ಖರೀದಿಸಿದನು. ವ್ಯಾಪಾರಿಗಳಿಗೆ ಸಂತೋಷವಾಯಿತು. ಅವರು ನೋಡುತ್ತಿದ್ದಂತೆಯೇ ಅದನ್ನೆಲ್ಲಾ ಗೊಬ್ಬರದ ಗುಂಡಿಗೆ ಸುರಿದನು. ಇದು ಲಕ್ಷ್ಮೀದೇವಿಗೆ ಅವಮಾನವಾಗಲು ಕಾರಣ.

೩. ಲಕ್ಷ್ಮೀದೇವಿಯು ಪ್ರತಾಪನ ಅಹಂಕಾರವನ್ನು ಹೇಗೆ ಕಳೆದಳು?
ಉ: ಅಪಾರ ಬೆಲೆಯ ಕೇಸರಿಯನ್ನು ಗೊಬ್ಬರದ ಗುಂಡಿಗೆ ಸುರಿದ ಪ್ರತಾಪನನ್ನು ನೋಡಿ ಲಕ್ಷ್ಮೀದೇವಿಗೆ ಕೋಪ ಬಂತು. ಪ್ರತಾಪನಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿ ಅವನ ರಾಜ್ಯದಿಂದ ಹೊರಟಳು. ಕೆಲವೇ ದಿನಗಳಲ್ಲಿ ಪ್ರತಾಪ ಜೂಜಾಡುವುದನ್ನು ಕಲಿತ. ದಿನ ಕಳೆದಂತೆ ಅವನು ತನ್ನೆಲ್ಲಾ ಸಂಪತ್ತನ್ನು ಜೂಜಿನಲ್ಲಿ ಸೋತನು. ಅವನ ರಾಜ್ಯ ಕೈ ತಪ್ಪಿತು. ಶತ್ರುಗಳು ಅವನ ರಾಜ್ಯದ ಮೇಲೆ ಆಕ್ರಮಣ ಮಾಡಿದರು. ಸದಾ ಜೂಜಿನಲ್ಲಿ ನಿರತನಾದ ಪ್ರತಾಪನಿಗೆ ಶತ್ರುಗಳನ್ನು ಎದುರಿಸುವ ಶಕ್ತಿ ಇರಲಿಲ್ಲ. ಮಗ-ಸೊಸೆಯನ್ನು ಕರೆದುಕೊಂಡು ರಾಜ್ಯವನ್ನು ಬಿಟ್ಟು ದೂರದ ರಾಜ್ಯದಲ್ಲಿ, ನಗರದ ಹೊರಗೆ ಗುಡಿಸಲು ಕಟ್ಟಿಕೊಂಡು ಜೀವಿಸುತ್ತಿದ್ದನು.

೪. ಪ್ರತಾಪನು ತನ್ನ ಕುಟುಂಬದ ಸದಸ್ಯರೊಡನೆ ಹೇಗೆ ಜೀವನ ಸಾಗಿಸಿದನು?
ಉ: ಮಗ-ಸೊಸೆಯನ್ನು ಕರೆದುಕೊಂಡು ರಾಜ್ಯವನ್ನು ಬಿಟ್ಟು ದೂರದ ರಾಜ್ಯದಲ್ಲಿ, ನಗರದ ಹೊರಗೆ ಗುಡಿಸಲು ಕಟ್ಟಿಕೊಂಡು ಜೀವಿಸುತ್ತಿದ್ದನು. ಅಲ್ಲಿಯೇ ತನ್ನ ಮಗನೊಂದಿಗೆ ಕಟ್ಟಿಗೆ ಒಡೆಯುವುದು, ಬಂಡೆ ಸೀಳುವುದು, ಪೈರು ನಾಟಿ ಮಾಡುವ ಕೆಲಸಗಳನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದನು.

೫. ಸುಮಂಗಳ ಯಾರು? ಆಕೆ ತನ್ನ ಮಾವ, ಗಂಡನಿಗೆ ಹೇಳಿದ್ದೇನು?
ಉ: ಸುಮಂಗಳ ಪ್ರತಾಪನ ಸೊಸೆ. ಈಕೆ ಬಹಳ ಬುದ್ಧಿವಂತೆ. ಎಲ್ಲವನ್ನು ಕಳೆದುಕೊಂಡ ತನ್ನ ಮಾವ, ಗಂಡನನ್ನು ಸಮಾಧಾನ ಮಾಡಿದಳು. ಅವರಿಬ್ಬರು ಕೆಲಸದಿಂದ ಹಿಂದಿರುಗುವಾಗ ಏನಾದರೊಂದು ವಸ್ತುವನ್ನು ಮರೆಯದೆ ತರಬೇಕೆಂದು ಹೇಳಿದಳು.

೬. ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು? ಅದಕ್ಕೆ ಸುಮಂಗಳ ಉತ್ತರಿಸಿದ್ದೇನು?
ಉ: ಒಂದು ದಿನ ನಗರದಲ್ಲಿ ಇದ್ದಕ್ಕಿದ್ದಂತೆ ಕೋಲಾಹಲವೆದ್ದಿತು. ಪ್ರತಾಪನು ಜನರ ಬಳಿ ಹೋಗಿ ಕೋಲಾಹಲಕ್ಕೆ ಕಾರಣವೇನೆಂದು ಕೇಳಿದನು. ಮಹಾರಾಣಿಯ ವಜ್ರದ ಹಾರ ಕಳುವಾಗಿದೆ. ಹಾರದಲ್ಲಿದ್ದ ವಜ್ರಗಳು ತುಂಬಾ ಬೆಲೆಯುಳ್ಳದ್ದು. ಮಹಾರಾಣಿ ಸ್ನಾನ ಮಾಡುವ ಮೊದಲು ವಜ್ರದ ಹಾರವನ್ನು ಕಿಟಕಿಯ ಗೂಡಿನಲ್ಲಿ ಇಟ್ಟಿದ್ದಳು. ಅವಳು ನೋಡುತ್ತಿದ್ದಂತೇ ಒಂದು ಹದ್ದು ಬಂದು ಹಾರವನ್ನು ಕಚ್ಚಿಕೊಂಡುಹೋಯಿತು. ಅದಕ್ಕಾಗಿ ಈ ಕೋಲಾಹಲವೆಂದು ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದನು. ಪ್ರತಾಪನು ಮನೆಗೆ ಬಂದು ಈ ವಿಷಯವನ್ನು ತಿಳಿಸಿದಾಗ, ಅವನ ಸೊಸೆ, ಸುಮಂಗಳ ಮಹಾರಾಣಿಯ ವಜ್ರದ ಹಾರ ತಂದುಕೊಟ್ಟರೆ ರಾಜನು ಏನನ್ನು ಉಡುಗೊರೆಯಾಗಿ ಕೊಡುತ್ತಾನೆಂದು ತಿಳಿದು ಬರಲು ಕಳುಹಿಸಿದಳು.
 
೭. ಸತ್ತ ಹಾವನ್ನು ತಂದವರು ಯಾರು? ಆ ಹಾವನ್ನು ಸುಮಂಗಳ ಎಲ್ಲಿ ಬಿಸಾಡಿದಳು?
ಉ: ಪ್ರತಾಪ ಮತ್ತು ಅವನ ಮಗ ಕೆಲಸದಿಂದ ಹಿಂದಿರುಗುವಾಗ ಏನಾದರೊಂದು ವಸ್ತುವನ್ನು ಮರೆಯದೆ ತರಬೇಕೆಂದು ಸುಮಂಗಳ ಹೇಳಿದ್ದಳು. ಕಲ್ಲು, ಕಟ್ಟಿಗೆ, ಇಟ್ಟಿಗೆ ಇತ್ಯಾದಿ ವಸ್ತುಗಳು. ಒಂದು ದಿನ ಏನೂ ಸಿಗದಿರುವಾಗ ಅವರಿಬ್ಬರು ಮರದ ಬುಡದಲ್ಲಿ ಸತ್ತ ಹಾವನ್ನು ತಂದರು. ಸುಮಂಗಳ ಅದನ್ನು ಮನೆಯ ಮೇಲೆ ಬಿಸಾಡಿದಳು.

೮. ರಾಜನಲ್ಲಿ ಸುಮಂಗಳ ಏನು ಬೇಕೆಂದು ಕೇಳಿಕೊಂಡಳು?
ಉ: ರಾಜನಿಗೆ ವಜ್ರದ ಹಾರವನ್ನು ಕಂಡು ತುಂಬಾ ಸಂತೋಷವಾಯಿತು. ಸುಮಂಗಳೆಗೆ ಬೇಕಾದುದನ್ನು ಕೇಳುವಂತೆ ಹೇಳಿದನು. ಆಗ ಸುಮಂಗಳ “ಪ್ರಭು ನನಗೆ ಧನಕನಕ ವಸ್ತು ವಾಹನಾದಿಗಳು ಏನೂ ಬೇಡ. ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ ರಾಜ್ಯದಲ್ಲಿ ಅರಮನೆಯೂ ಸೇರಿ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ಹಾಗೆ ದೀಪಾವಳಿ ಆಚರಿಸಿ ದೀಪವನ್ನು ಬೆಳಗಬೇಕೆಂದಿರುವವರು ನನ್ನ ಗುಡಿಸಲಿನ ಸುತ್ತಲೂ ದೀಪ ಬೆಳಗಿಸಲಿ” ಎಂದು ಕೇಳಿಕೊಂಡಳು.

೯. ದೀಪಾವಳಿಯ ರಾತ್ರಿ ನಡೆದ ಘಟನೆ ಏನು?

ಉ: ದೀಪಾವಳಿಯ ಶುಭರಾತ್ರಿ ಧನ-ಸಂಪತ್ತಿನ ದೇವತೆ ಲಕ್ಷ್ಮೀ ಆ ರಾಜ್ಯವನ್ನು ಪ್ರವೇಶಿಸಿದಳು. ಆದರೆ ಇಡೀ ರಾಜ್ಯ, ಕತ್ತಲಿನಿಂದ ತುಂಬಿರುವುದನ್ನು ಕಂಡು ಅವಳು ಹೌಹಾರಿದಳು. ದೀಪಾವಳಿಯ ದಿನ ತಾನು ಎಲ್ಲರ ಮನೆಗೆ ಬರುವುದು ತಿಳಿದೂ ಕತ್ತಲಿರುವುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಆನಂತರ ಲಕ್ಷ್ಮೀದೇವಿ ದೀಪ ಬೆಳಗಿದ ಮನೆಯನ್ನು ಹುಡುಕುತ್ತಾ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ ದೀಪ ಬೆಳಗುತ್ತಿತ್ತು. ಗುಡಿಸಲಿನ ಸುತ್ತಲೂ ಮಾತ್ರ ದೀಪದ ಹಣತೆಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಲಕ್ಷ್ಮೀದೇವಿಗೆ ಇದರಿಂದ ತುಂಬಾ ಆನಂದವಾಯಿತು. ಗುಡಿಸಲಿನ ಬಳಿಗೆ ಬಂದಳು ಆದರೆ ಸುಮಂಗಳ ಅವಳನ್ನು ಬಾಗಿಲಿನಲ್ಲೇ ತಡೆದಳು. ಆಗ ಲಕ್ಷ್ಮೀದೇವಿ ಇಂದಿನ ರಾತ್ರಿ ಈ ಗುಡಿಸಲಿನಲ್ಲಿ ತನಗೆ ತಂಗಲು ಅವಕಾಶ ಕೊಟ್ಟರೆ ಪ್ರತಾಪನಿಗೆ ಅವನ ರಾಜ್ಯ, ಸಿರಿಸಂಪತ್ತುಗಳು ಮತ್ತೆ ಸಿಗುತ್ತದೆ ಎಂದಳು. ಆಗ ಸುಮಂಗಳ ಸಂತೋಷದಿಂದ ಲಕ್ಷ್ಮಿಯನ್ನು ಒಳಗೆ ಬರಮಾಡಿಕೊಳ್ಳುತ್ತಾಳೆ.

೧೦. ಪ್ರತಾಪನು ತನ್ನ ರಾಜ್ಯವನ್ನು ಮತ್ತೆ ಹೇಗೆ ಪಡೆದನು?

ಉ:
ಪ್ರತಾಪನ ಸೊಸೆಯಾದ ಸುಮಂಗಳ ಬುದ್ಧಿವಂತಿಕೆಯಿಂದ ದೀಪಾವಳಿಯ ದಿನ ರಾತ್ರಿಯಂದು ಲಕ್ಷ್ಮೀದೇವಿಯನ್ನು ತನ್ನ ಗುಡಿಸಲಿನಲ್ಲಿಯೇ ಇರುವಂತೆ ಮಾಡಿದಳು. ಬೆಳಕಾದ ಕೂಡಲೇ ಅವರ ಗುಡಿಸಲು ಇದ್ದ ಜಾಗದಲ್ಲಿ ಒಂದು ಭವ್ಯವಾದ ಮಹಲು ಕಂಡುಬಂದಿತು. ಅದರಲ್ಲಿ ಸಿರಿಸಂಪತ್ತು ಇತ್ತು. ನಂತರ ಪ್ರತಾಪನು ಆ ಹಣದ ಸಹಾಯದಿಂದ ಮತ್ತೆ ಸೈನ್ಯವನ್ನು ಕಟ್ಟಿ, ಶತ್ರುರಾಜ್ಯವನ್ನು ಸೋಲಿಸಿ, ತನ್ನ ರಾಜ್ಯವನ್ನು ಮರಳಿ ಪಡೆದನು.

Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :
ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮೀಗೇ ಇದರಿಂದ ಅಪಮಾನವಾಯಿತು. ತನ್ನ ಕೃಪೆಯಿಂದ ಶ್ರೀಮಂತನಾಗಿ ಮೆರೆಯುತ್ತಿರುವ ಪ್ರತಾಪನ ಸೊಕ್ಕನ್ನು ಇಳಿಸಲು ಲಕ್ಷ್ಮಿ ದೇವತೆ ನಿರ್ಧರಿಸಿದಳು.
— (ದೀಪಾವಳಿಯ ಮಹಿಮೆ)

೧೧. ಪ್ರತಾಪ ಯಾರು? ಲಕ್ಷ್ಮೀದೇವಿ ಅವನ ಸೊಕ್ಕು ಇಳಿಸಲು ನಿರ್ಧರಿಸಲು ಕಾರಣವೇನು? ವಿವರಿಸಿ.
(Same as question 2)

ಉ. ಚಿನ್ನಾರಿ ದೇಶದ ರಾಜ ಪ್ರತಾಪ. ಒಂದು ಬಾರಿ ಚಿನ್ನಾರಿ ರಾಜ್ಯಕ್ಕೆ ಕಾಶ್ಮೀರದಿಂದ ಕೆಲವು ಜನ ಕೇಸರಿ ಮಾರುವ ವ್ಯಾಪಾರಿಗಳು ಬಂದರು. ಅವರು ತಮ್ಮ ಜೊತೆ ಭಾರೀ ಮೊತ್ತದ ಕೇಸರಿ ತಂದಿದ್ದರು. ಕೇಸರಿಯ ಬೆಲೆ ಜಾಸ್ತಿ, ಹೀಗಾಗಿ ಅವರು ಪ್ರತಾಪನಿಗೆ ಅದನ್ನು ಮಾರಲು ಇಚ್ಛಿಸಿದರು. ತಾನೆಷ್ಟು ಶ್ರೀಮಂತ ಎಂದು ತೋರಿಸಿಕೊಳ್ಳಲು ಅವರ ಬಳಿ ಇದ್ದ ಕೇಸರಿಯೆಲ್ಲವನ್ನೂ ರಾಜನು ಖರೀದಿಸಿದನು. ವ್ಯಾಪಾರಿಗಳಿಗೆ ಸಂತೋಷವಾಯಿತು. ಅವರು ನೋಡುತ್ತಿದ್ದಂತೆಯೇ ಅದನ್ನೆಲ್ಲಾ ಗೊಬ್ಬರದ ಗುಂಡಿಗೆ ಸುರಿದನು. ಇದು ಲಕ್ಷ್ಮೀದೇವಿಗೆ ಅವಮಾನವಾಗಲು ಕಾರಣ. ಹೀಗಾಗಿ ಅವಳು ಪ್ರತಾಪ ರಾಜನ ಸೊಕ್ಕು ಇಳಿಸಲು ನಿರ್ಧರಿಸಿದಳು.

೧೨. ಸುಮಂಗಳ ಯಾರು? ಅವಳಿಗೆ ಮಹಾರಾಣಿಯ ವಜ್ರದ ಹಾರ ಹೇಗೆ ದೊರಕಿತು?
ಉ. ಸುಮಂಗಳ ಪ್ರತಾಪ ರಾಜನ ಸೊಸೆ. ಲಕ್ಷ್ಮೀದೇವಿಯ ಕೋಪಕ್ಕೆ ತುತ್ತಾದ ಪ್ರತಾಪನು ತನ್ನ ಸಂಪತ್ತು, ರಾಜ್ಯವೆಲ್ಲವನ್ನೂ ಕಳೆದುಕೊಂಡನು. ಬಡತನದಲ್ಲಿ ಬೇರೆ ರಾಜ್ಯಕ್ಕೆ ಬಂದು ನಗರದ ಹೊರಗೆ ಒಂದು ಗುಡಿಸಲಲ್ಲಿ ವಾಸವಾಗಿದ್ದನು. ಪ್ರತಾಪ ಮತ್ತು ಅವನ ಮಗ ಕೆಲಸದಿಂದ ಹಿಂದಿರುಗುವಾಗ ಏನಾದರೊಂದು ವಸ್ತುವನ್ನು ಮರೆಯದೆ ತರಬೇಕೆಂದು ಸುಮಂಗಳ ಹೇಳಿದ್ದಳು. ಕಲ್ಲು, ಕಟ್ಟಿಗೆ, ಇಟ್ಟಿಗೆ ಇತ್ಯಾದಿ ವಸ್ತುಗಳು. ಒಂದು ದಿನ ಏನೂ ಸಿಗದಿರುವಾಗ ಅವರಿಬ್ಬರು ಮರದ ಬುಡದಲ್ಲಿ ಸತ್ತು ಬಿದ್ದಿದ್ದ ಹಾವನ್ನು ತಂದರು. ಸುಮಂಗಳ ಅದನ್ನು ಮನೆಯ ಮೇಲೆ ಬಿಸಾಡಿದಳು.ರಾಣಿಯ ವಜ್ರದ ಹಾರವನ್ನು ತೆಗೆದುಕೊಂಡು ಹೋಗುತ್ತಿದ್ದ ಹದ್ದು ಹಾವನ್ನು ನೋಡಿದ್ದರಿಂದ ತನ್ನ ಬಾಯಲ್ಲಿದ್ದ ಹಾರವನ್ನು ಬಿಟ್ಟು ಹಾವನ್ನು ಹಿಡಿಯಿತೆಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬಹುದು. ಹೀಗೆ ಸುಮಂಗಳಿಗೆ ರಾಣಿಯ ಹಾರವು ದೊರಕಿತು.

೧೩.  “ನನ್ನನ್ನು ತಡೆಯಬೇಡ ದಯಮಾಡಿ ಈ ರಾತ್ರಿ ತಂಗಲು ಅವಕಾಶ ಮಾಡಿಕೊಡು” ಹೇಳಿದವರು ಯಾರು? ಸಂದರ್ಭವೇನು? (Same as question 9)
ಉ. ದೀಪಾವಳಿಯ ಶುಭರಾತ್ರಿ ಧನ-ಸಂಪತ್ತಿನ ದೇವತೆ ಲಕ್ಷ್ಮೀ ಆ ರಾಜ್ಯವನ್ನು ಪ್ರವೇಶಿಸಿದಳು. ಆದರೆ ಇಡೀ ರಾಜ್ಯ, ಕತ್ತಲಿನಿಂದ ತುಂಬಿರುವುದನ್ನು ಕಂಡು ಅವಳು ಹೌಹಾರಿದಳು. ದೀಪಾವಳಿಯ ದಿನ ತಾನು ಎಲ್ಲರ ಮನೆಗೆ ಬರುವುದು ತಿಳಿದೂ ಕತ್ತಲಿರುವುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಆನಂತರ ಲಕ್ಷ್ಮೀದೇವಿ ದೀಪ ಬೆಳಗಿದ ಮನೆಯನ್ನು ಹುಡುಕುತ್ತಾ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ ದೀಪ ಬೆಳಗುತ್ತಿತ್ತು. ಗುಡಿಸಲಿನ ಸುತ್ತಲೂ ಮಾತ್ರ ದೀಪದ ಹಣತೆಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಲಕ್ಷ್ಮೀದೇವಿಗೆ ಇದರಿಂದ ತುಂಬಾ ಆನಂದವಾಯಿತು. ಗುಡಿಸಲಿನ ಬಳಿಗೆ ಬಂದಳು ಆದರೆ ಸುಮಂಗಳ ಅವಳನ್ನು ಬಾಗಿಲಿನಲ್ಲೇ ತಡೆದಳು. ಆಗ ಲಕ್ಷ್ಮೀದೇವಿಯು ಸುಮಂಗಳೆಯನ್ನು ಆ ಒಂದು ರಾತ್ರಿ ಸುಮಂಗಳೆಯ ಗುಡಿಸಲಿನಲ್ಲಿ ತಂಗಲು ಅವಕಾಶವನ್ನು ಕೇಳಿದಳು.

೧೪. ವಜ್ರದ ಹಾರವನ್ನು ಹಿಂತಿರುಗಿಸಿದ ಸುಮಂಗಳ ರಾಜನನ್ನು ಕೇಳಿಕೊಂಡಿದ್ದೇನು? ವಿವರಿಸಿ.
(Same as question 8)

ಉ. ರಾಜನಿಗೆ ವಜ್ರದ ಹಾರವನ್ನು ಕಂಡು ತುಂಬಾ ಸಂತೋಷವಾಯಿತು. ಸುಮಂಗಳೆಗೆ ಬೇಕಾದುದನ್ನು ಕೇಳುವಂತೆ ಹೇಳಿದನು. ಆಗ ಸುಮಂಗಳ “ಪ್ರಭು ನನಗೆ ಧನಕನಕ ವಸ್ತು ವಾಹನಾದಿಗಳು ಏನೂ ಬೇಡ. ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ ರಾಜ್ಯದಲ್ಲಿ ಅರಮನೆಯೂ ಸೇರಿ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ಹಾಗೆ ದೀಪಾವಳಿ ಆಚರಿಸಿ ದೀಪವನ್ನು ಬೆಳಗಬೇಕೆಂದಿರುವವರು ನನ್ನ ಗುಡಿಸಲಿನ ಸುತ್ತಲೂ ದೀಪ ಬೆಳಗಿಸಲಿ” ಎಂದು ಕೇಳಿಕೊಂಡಳು.

Read the extract given below and answer in Kannada the questions that follow:
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :

ಪ್ರತಾಪ ಮತ್ತು ಅವನ ಮಗ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರು
— (ದೀಪಾವಳಿಯ ಮಹಿಮೆ)

೧೫. ಪ್ರತಾಪ ರಾಜನ ಸೊಸೆ ಯಾರು? ಆಕೆಯು ತನ್ನ ಮಾವ ಮತ್ತು ಗಂಡನನ್ನು ನೋಡಿಕೊಳ್ಳುತ್ತಿದ್ದಳು ಹೇಗೆ?
ಉ. ಪ್ರತಾಪನ ರಾಜನಸೊಸೆ ಸುಮಂಗಳ. ಸುಮಂಗಳ ತುಂಬಾ ಬುದ್ಧಿವಂತೆ ಮನೆಯಲ್ಲಿ ಚೊಕ್ಕವಾಗಿ ಸಂಸಾರ ಮಾಡುತ್ತಾ ತನ್ನ ಮಾವ ಮತ್ತು ಗಂಡನಿಗೆ ಧೈರ್ಯ ಹೇಳುತ್ತಿದ್ದಳು ಅವರಿಗೆ ದುಃಖವಾಗದಂತೆ ಎಚ್ಚರವಹಿಸಿದ್ದಳು.

೧೬. ಪ್ರತಾಪ ಮತ್ತು ಅವನ ಮಗ ಕೆಲಸಕ್ಕೆ ಹೋಗುವ ಸ್ಥಿತಿ ಉಂಟಾದದ್ದು ಏಕೆ?
ಉ. ಅಪಾರ ಬೆಲೆಯ ಕೇಸರಿಯನ್ನು ಗೊಬ್ಬರದ ಗುಂಡಿಗೆ ಸುರಿದ ಪ್ರತಾಪನನ್ನು ನೋಡಿ ಲಕ್ಷ್ಮೀದೇವಿಗೆ ಕೋಪ ಬಂತು. ಪ್ರತಾಪನಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿ ಅವನ ರಾಜ್ಯದಿಂದ ಹೊರಟಳು. ಕೆಲವೇ ದಿನಗಳಲ್ಲಿ ಪ್ರತಾಪ ಜೂಜಾಡುವುದನ್ನು ಕಲಿತ. ದಿನ ಕಳೆದಂತೆ ಅವನು ತನ್ನೆಲ್ಲಾ ಸಂಪತ್ತನ್ನು ಜೂಜಿನಲ್ಲಿ  ಸೋತನು. ಅವನ ರಾಜ್ಯ ಕೈ ತಪ್ಪಿತು. ಶತ್ರುಗಳು ಅವನ ರಾಜ್ಯದ ಮೇಲೆ ಆಕ್ರಮಣ ಮಾಡಿದರು. ಸದಾ ಜೂಜಿನಲ್ಲಿ ನಿರತನಾದ ಪ್ರತಾಪನಿಗೆ ಶತ್ರುಗಳನ್ನು ಎದುರಿಸುವ ಶಕ್ತಿ ಇರಲಿಲ್ಲ. ಮಗ-ಸೊಸೆಯನ್ನು ಕರೆದುಕೊಂಡು ರಾಜ್ಯವನ್ನು ಬಿಟ್ಟು ದೂರದ ರಾಜ್ಯದಲ್ಲಿ, ನಗರದ ಹೊರಗೆ ಗುಡಿಸಲು ಕಟ್ಟಿಕೊಂಡು ಜೀವಿಸುತ್ತಿದ್ದನು. ಹೀಗೆ ಪ್ರತಾಪ ಮತ್ತು ಅವನ ಮಗ ಕೆಲಸಕ್ಕೆ ಹೋಗುವ ಸ್ಥಿತಿ ಉಂಟಾಯಿತು.

೧೭. ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು? (Same as question 8)
ಉ. ಒಂದು ದಿನ ನಗರದಲ್ಲಿ ಇದ್ದಕ್ಕಿದ್ದಂತೆ ಕೋಲಾಹಲವೆದ್ದಿತು. ಪ್ರತಾಪನು ಜನರ ಬಳಿ ಹೋಗಿ ಕೋಲಾಹಲಕ್ಕೆ ಕಾರಣವೇನೆಂದು ಕೇಳಿದನು. ಮಹಾರಾಣಿಯ ವಜ್ರದ ಹಾರ ಕಳುವಾಗಿದೆ. ಹಾರದಲ್ಲಿದ್ದ ವಜ್ರಗಳು ತುಂಬಾ ಬೆಲೆಯುಳ್ಳದ್ದು. ಮಹಾರಾಣಿ ಸ್ನಾನ ಮಾಡುವ ಮೊದಲು ವಜ್ರದ ಹಾರವನ್ನು ಕಿಟಕಿಯ ಗೂಡಿನಲ್ಲಿ ಇಟ್ಟಿದ್ದಳು. ಅವಳು ನೋಡುತ್ತಿದ್ದಂತೇ ಒಂದು ಹದ್ದು ಬಂದು ಹಾರವನ್ನು ಕಚ್ಚಿಕೊಂಡುಹೋಯಿತು. ಅದಕ್ಕಾಗಿ ಈ ಕೋಲಾಹಲವೆಂದು ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದನು.

೧೮.  ಸಂಪತ್ತಿನ ದೇವಿ ಸುಮಂಗಳಿಗೆ ಒಲಿದ ಪರಿ ಹೇಗೆ? (Same as question 9)
ಉ: ದೀಪಾವಳಿಯ ಶುಭರಾತ್ರಿ ಧನ-ಸಂಪತ್ತಿನ ದೇವತೆ ಲಕ್ಷ್ಮೀ ಆ ರಾಜ್ಯವನ್ನು ಪ್ರವೇಶಿಸಿದಳು. ಆದರೆ ಇಡೀ ರಾಜ್ಯ, ಕತ್ತಲಿನಿಂದ ತುಂಬಿರುವುದನ್ನು ಕಂಡು ಅವಳು ಹೌಹಾರಿದಳು. ದೀಪಾವಳಿಯ ದಿನ ತಾನು ಎಲ್ಲರ ಮನೆಗೆ ಬರುವುದು ತಿಳಿದೂ ಕತ್ತಲಿರುವುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಆನಂತರ ಲಕ್ಷ್ಮೀದೇವಿ ದೀಪ ಬೆಳಗಿದ ಮನೆಯನ್ನು ಹುಡುಕುತ್ತಾ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ ದೀಪ ಬೆಳಗುತ್ತಿತ್ತು. ಗುಡಿಸಲಿನ ಸುತ್ತಲೂ ಮಾತ್ರ ದೀಪದ ಹಣತೆಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಲಕ್ಷ್ಮೀದೇವಿಗೆ ಇದರಿಂದ ತುಂಬಾ ಆನಂದವಾಯಿತು. ಗುಡಿಸಲಿನ ಬಳಿಗೆ ಬಂದಳು ಆದರೆ ಸುಮಂಗಳ ಅವಳನ್ನು ಬಾಗಿಲಿನಲ್ಲೇ ತಡೆದಳು. ಆಗ ಲಕ್ಷ್ಮೀದೇವಿ ಇಂದಿನ ರಾತ್ರಿ ಈ ಗುಡಿಸಲಿನಲ್ಲಿ ತನಗೆ ತಂಗಲು ಅವಕಾಶ ಕೊಟ್ಟರೆ ಪ್ರತಾಪನಿಗೆ ಅವನ ರಾಜ್ಯ, ಸಿರಿಸಂಪತ್ತುಗಳು ಮತ್ತೆ ಸಿಗುತ್ತದೆ ಎಂದಳು. ಹೀಗೆ ಸಂಪತ್ತಿನ ದೇವಿ ಸುಮಂಗಳಿಗೆ ಒಲಿದ ಪರಿ.

Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :

ಸಾವಿರಾರು ವರ್ಷಗಳ ಹಿಂದೆ ಚಿನ್ನಾರಿ ರಾಜ್ಯದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಪ್ರತಾಪ. ರಾಜ್ಯ ಚಿಕ್ಕದಾಗಿದ್ದರೂ ಸಂಪದ್ಭರಿತವಾಗಿತ್ತು. ಪ್ರಜೆಗಳು ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಭಂಡಾರದಲ್ಲಿ ಹೇರಳ ಧನವಿತ್ತು. — ದೀಪಾವಳಿಯ ಮಹಿಮೆ – ಜನಪದ

೧೯. ಧನ ಮತ್ತು ಸಮೃದ್ಧಿಯ ಲಕ್ಷ್ಮಿಗೆ ಯಾರ ಬಗ್ಗೆ, ಏಕೆ ಅಸಮಾಧಾನವಾಯಿತು?
ಉ: ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿಗೆ ಚಿನ್ನಾರಿ ರಾಜ್ಯದ ರಾಜನಾದ ಪ್ರತಾಪನ ಮೇಲೆ ಅಸಮಾಧಾನವುಂಟಾಯಿತು.ಒಂದು ಬಾರಿ ಚಿನ್ನಾರಿ ರಾಜ್ಯಕ್ಕೆ ಕಾಶ್ಮೀರದಿಂದ ಕೆಲವು ಜನ ಕೇಸರಿ ಮಾರುವ ವ್ಯಾಪಾರಿಗಳು ಬಂದರು. ಅವರು ತಮ್ಮ ಜೊತೆ ಭಾರೀ ಮೊತ್ತದ ಕೇಸರಿ ತಂದಿದ್ದರು. ಕೇಸರಿಯ ಬೆಲೆ ಜಾಸ್ತಿ, ಹೀಗಾಗಿ ಅವರು ಪ್ರತಾಪನಿಗೆ ಅದನ್ನು ಮಾರಲು ಇಚ್ಛಿಸಿದರು. ತಾನೆಷ್ಟು ಶ್ರೀಮಂತ ಎಂದು ತೋರಿಸಿಕೊಳ್ಳಲು ಅವರ ಬಳಿ ಇದ್ದ ಕೇಸರಿಯೆಲ್ಲವನ್ನೂ ರಾಜನು ಖರೀದಿಸಿದನು. ವ್ಯಾಪಾರಿಗಳಿಗೆ ಸಂತೋಷವಾಯಿತು. ಅವರು ನೋಡುತ್ತಿದ್ದಂತೆಯೇ ಅದನ್ನೆಲ್ಲಾ ಗೊಬ್ಬರದ ಗುಂಡಿಗೆ ಸುರಿದನು.ಇದರಿಂದ ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿಗೆ ಅಸಮಾಧಾನವುಂಟಾಯಿತು.

೨೦. “…..ಹಣ ಕೊಟ್ಟರು ಅಂಥ ಅಮೂಲ್ಯವಾದ ವಜ್ರಗಳು ಸಿಕ್ಕಲಾರವು…” ಸಂದರ್ಭದೊಡನೆ ವಿವರಿಸಿ.
ಉ: ಈ ವಾಕ್ಯವನ್ನು ‘ದೀಪಾವಳಿಯ ಮಹಿಮೆ’ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ. ಪ್ರತಾಪನು ಜೀವಿಸುತ್ತಿದ್ದ ರಾಜ್ಯದಲ್ಲಿ ಕೋಲಾಹಲವುಂಟಾಯಿತು. ಜನರು ತಮ್ಮಲ್ಲೇ ಕುತೂಹಲದಿಂದ ಮಾತನಾಡಿಕೊಳ್ಳುತ್ತಿದ್ದರು. ಪ್ರತಾಪ ಜನರ ಬಳಿಗೆ ಹೋಗಿ ಈ ಕೋಲಾಹಲಕ್ಕೆ ಏನು ಕಾರಣ ಎಂದು ಕೇಳಿದನು. “ಮಹಾರಾಣಿಯ ವಜ್ರದ ಹಾರ ಕಳುವಾಗಿದೆ. ಹಾರದಲ್ಲಿದ್ದ ವಜ್ರಗಳು ತುಂಬಾ ಬೆಲೆ ಬಾಳುವಂಥವು. ಹಣ ಕೊಟ್ಟರೂ ಅಂಥ ಅಮೂಲ್ಯವಾದ ವಜ್ರಗಳು ಸಿಗಲಾರವು” ಎಂದು ಗುಂಪಿನಲ್ಲಿದ್ದವನೊಬ್ಬ ಹೇಳಿದನು.

೨೧. “ಇದೆಂಥ ವಿಚಿತ್ರ ಬೇಡಿಕೆ?” ಎಂದೆನಿಸಿದ್ದು ಯಾರಿಗೆ, ಏಕೆ? ವಿವರಿಸಿ.
ಉ : “ಇದೆಂಥ ವಿಚಿತ್ರ ಬೇಡಿಕೆ?” ಎಂದೆನಿಸಿದ್ದು ಪ್ರತಾಪ ವಾಸವಾಗಿದ್ದ ರಾಜ್ಯದ ರಾಜನಿಗೆ. ಸುಮಂಗಳೆಯು ವಜ್ರದ ಹಾರವನ್ನು ರಾಜನಿಗೆ ಕೊಟ್ಟಳು. ಆಗ ರಾಜನು ಸಂತೋಷದಿಂದ “ನಿನಗೇನು ಬೇಕು ಕೇಳು” ಎಂದಾಗ ಸುಮಂಗಳೆಯು “ಪ್ರಭು ನನಗೆ ಧನ ಕನಕ ವಸ್ತು ವಾಹನಾದಿಗಳು ಏನೂ ಬೇಡ ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ ರಾಜ್ಯದಲ್ಲಿ ಅರಮನೆಯೂ ಸೇರಿ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ಹಾಗೆ ದೀಪಾವಳಿ ಆಚರಿಸಿ ದೀಪ ಹಚ್ಚಬೇಕೆಂದಿರುವವರು ನನ್ನ ಗುಡಿಸಲಿನ ಸುತ್ತಲೂ ಬೆಳಗಿಸಲಿ” ಎಂದಳು. ಅವಳ ಈ ಬೇಡಿಕೆ ರಾಜನಿಗೆ ವಿಚಿತ್ರವಾಗಿ ಕಂಡಿತು.

೨೨. ರಾಜ ಪ್ರತಾಪನಿಗೆ ಮತ್ತೆ ರಾಜ್ಯ ಸಂಪತ್ತು ಲಭಿಸಿದ್ದು ಹೇಗೆ? (Same as question 8)
ಉ: ದೀಪಾವಳಿಯ ಶುಭರಾತ್ರಿ ಧನ-ಸಂಪತ್ತಿನ ದೇವತೆ ಲಕ್ಷ್ಮೀ ಆ ರಾಜ್ಯವನ್ನು ಪ್ರವೇಶಿಸಿದಳು. ಆದರೆ ಇಡೀ ರಾಜ್ಯ, ಕತ್ತಲಿನಿಂದ ತುಂಬಿರುವುದನ್ನು ಕಂಡು ಅವಳು ಹೌಹಾರಿದಳು. ದೀಪಾವಳಿಯ ದಿನ ತಾನು ಎಲ್ಲರ ಮನೆಗೆ ಬರುವುದು ತಿಳಿದೂ ಕತ್ತಲಿರುವುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಆನಂತರ ಲಕ್ಷ್ಮೀದೇವಿ ದೀಪ ಬೆಳಗಿದ ಮನೆಯನ್ನು ಹುಡುಕುತ್ತಾ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ ದೀಪ ಬೆಳಗುತ್ತಿತ್ತು. ಗುಡಿಸಲಿನ ಸುತ್ತಲೂ ಮಾತ್ರ ದೀಪದ ಹಣತೆಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಲಕ್ಷ್ಮೀದೇವಿಗೆ ಇದರಿಂದ ತುಂಬಾ ಆನಂದವಾಯಿತು. ಗುಡಿಸಲಿನ ಬಳಿಗೆ ಬಂದಳು ಆದರೆ ಸುಮಂಗಳ ಅವಳನ್ನು ಬಾಗಿಲಿನಲ್ಲೇ ತಡೆದಳು. ಆಗ ಲಕ್ಷ್ಮೀದೇವಿ ಇಂದಿನ ರಾತ್ರಿ ಈ ಗುಡಿಸಲಿನಲ್ಲಿ ತನಗೆ ತಂಗಲು ಅವಕಾಶ ಕೊಟ್ಟರೆ ಪ್ರತಾಪನಿಗೆ ಅವನ ರಾಜ್ಯ, ಸಿರಿಸಂಪತ್ತುಗಳು ಮತ್ತೆ ಸಿಗುತ್ತದೆ ಎಂದಳು. ಆಗ ಸುಮಂಗಳ ಸಂತೋಷದಿಂದ ಲಕ್ಷ್ಮಿಯನ್ನು ಒಳಗೆ ಬರಮಾಡಿಕೊಳ್ಳುತ್ತಾಳೆ. ಹೀಗೆ ರಾಜ ಪ್ರತಾಪನಿಗೆ ಮತ್ತೆ ರಾಜ್ಯ ಸಂಪತ್ತು ಲಭಿಸಿತು.

Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :
ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿಗೆ ಇದರಿಂದ ಅಪಮಾನವಾಯಿತು. ತನ್ನ ಕೃಪೆಯಿಂದ ಶ್ರೀಮಂತನಾಗಿ ಮೆರೆಯುತ್ತಿರುವ ಪ್ರತಾಪನ ಸೊಕ್ಕನ್ನು ಇಳಿಸಲು ಲಕ್ಷ್ಮಿ ದೇವತೆ ನಿರ್ಧರಿಸಿದಳು. ಪ್ರತಾಪನ ಮೂರ್ಖತನದಿಂದ ಅವಳಿಗೆ ತುಂಬ ಸಿಟ್ಟು ಬಂದಿತ್ತು —ದೀಪಾವಳಿಯ ಮಹಿಮೆ
ಜನಪದ

೨೩. ರಾಜನ ಸೊಸೆಯ ಹೆಸರೇನು? ಅವಳು ‘ಬುದ್ಧಿವಂತೆ’ ಹೇಗೆ? ವಿವರಿಸಿ.
ಉ: ರಾಜನ ಸೊಸೆಯ ಹೆಸರು ಸುಮಂಗಳೆ.ಇವಳು ತುಂಬಾ ಬುದ್ಧಿವಂತೆ ಹೇಗೆಂದರೆ, ಈಕೆಯ ಮಾವ ಪ್ರತಾಪ ತನ್ನ ಅಹಂಕಾರದಿಂದ ರಾಜ್ಯವನ್ನು ಕಳೆದುಕೊಂಡನು. ಈ ಕಾರಣದಿಂದ ಸುಮಂಗಳೆ ತನ್ನ ಮಾವ ಮತ್ತು ಪತಿಯೊಂದಿಗೆ ಬೇರೆ ರಾಜ್ಯಕ್ಕೆ ಹೋಗಿ ಗುಡಿಸಲಿನಲ್ಲಿ ನೆಲೆಸಬೇಕಾಯಿತು. ಸುಮಂಗಳೆ ಮನೆಯಲ್ಲಿ ಚೊಕ್ಕವಾಗಿ ಸಂಸಾರ ಮಾಡುತ್ತಾ ತನ್ನ ಮಾವ ಮತ್ತು ಗಂಡನಿಗೆ ಧೈರ್ಯ ಹೇಳುತ್ತಿದ್ದಳು. ಅವರಿಗೆ ದುಃಖವಾಗದಂತೆ ಎಚ್ಚರವಹಿಸಿದ್ದಳು.

೨೪. ರಾಜ್ಯದಲ್ಲಿ ಕೋಲಾಹಲವುಂಟಾಗಲು ಕಾರಣವೇನು? ವಿವರಿಸಿ.
ಉ : ಒಂದು ದಿನ ನಗರದಲ್ಲಿ ಇದ್ದಕ್ಕಿದ್ದಂತೆ ಕೋಲಾಹಲವೆದ್ದಿತು. ಪ್ರತಾಪನು ಜನರ ಬಳಿ ಹೋಗಿ ಕೋಲಾಹಲಕ್ಕೆ ಕಾರಣವೇನೆಂದು ಕೇಳಿದನು. ಮಹಾರಾಣಿಯ ವಜ್ರದ ಹಾರ ಕಳುವಾಗಿದೆ. ಹಾರದಲ್ಲಿದ್ದ ವಜ್ರಗಳು ತುಂಬಾ ಬೆಲೆಯುಳ್ಳದ್ದು. ಮಹಾರಾಣಿ ಸ್ನಾನ ಮಾಡುವ ಮೊದಲು ವಜ್ರದ ಹಾರವನ್ನು ಕಿಟಕಿಯ ಗೂಡಿನಲ್ಲಿ ಇಟ್ಟಿದ್ದಳು. ಅವಳು ನೋಡುತ್ತಿದ್ದಂತೇ ಒಂದು ಹದ್ದು ಬಂದು ಹಾರವನ್ನು ಕಚ್ಚಿಕೊಂಡುಹೋಯಿತು. ಅದಕ್ಕಾಗಿ ಈ ಕೋಲಾಹಲವೆಂದು ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದನು.

೨೫.  ಸೊಸೆಯ ಯಾವ ಮಾತು ಕೇಳಿ ಪ್ರತಾಪನಿಗೆ ಆಶ್ಚರ್ಯವಾಯಿತು? ನಂತರ ಅವರು ಮಾಡಿದ್ದೇನು?
ಉ: ಮಹಾರಾಣಿಯ ಅಮೂಲ್ಯವಾದ ವಜ್ರದ ಹಾರ ಕಳುವಾದ ವಿಷಯವನ್ನು ಪ್ರತಾಪ ತನ್ನ ಸೊಸೆ ಸುಮಂಗಳೆಗೆ ತಿಳಿಸಿದಾಗ ಆಕೆ ಸಂತೋಷಗೊಂಡು ‘ಈಗ ನೀವು ರಾಜನ ಬಳಿ ಹೋಗಿ ಮಹಾರಾಣಿಯ ವಜ್ರದ ಹಾರವನ್ನು ತಂದುಕೊಟ್ಟರೆ ಏನು ಉಡುಗೊರೆ ಕೊಡುತ್ತಾರೆಂದು ಕೇಳಿ’ ಎಂದು ಹೇಳಿದಳು. ಸೊಸೆಯ ಈ ಮಾತನ್ನು ಕೇಳಿ ಪ್ರತಾಪನಿಗೆ ಆಶ್ಚರ್ಯವಾಯಿತು. ನಂತರ ಪ್ರತಾಪ ಮತ್ತು ಅವನ ಮಗ ರಾಜನ ಬಳಿ ಬಂದು ‘ವಜ್ರದ ಹಾರವನ್ನು ತಂದುಕೊಟ್ಟರೆ ನೀವು ನಮಗೆ ಏನು ಉಡುಗೊರೆ ಕೊಡುತ್ತೀರಿ’ ಎಂದು ಕೇಳಿದರು. ಆಗ ಆ ರಾಜನಿಂದ ‘ಅಮೂಲ್ಯವಾದ ಆ ವಜ್ರದ ಹಾರ ಮತ್ತೆ ಸಿಗುವುದಾದರೆ ಏನು ಕೇಳಿದರೂ ಕೊಡುತ್ತೇನೆ’ ಎಂಬ ಮಾತನ್ನು ಪಡೆದು ಗುಡಿಸಲಿಗೆ ಮರಳಿದರು.

೨೬. ಲಕ್ಷ್ಮೀದೇವಿ ಹೌಹಾರಿದ್ದು ಏಕೆ? ನಂತರ ಲಕ್ಷ್ಮೀದೇವಿ ಏನೆಂದು ಹೇಳಿದಳು? (Same as question 9)
ಉ : ದೀಪಾವಳಿಯ ಶುಭರಾತ್ರಿ ಧನ-ಸಂಪತ್ತಿನ ದೇವತೆ ಲಕ್ಷ್ಮೀ ಆ ರಾಜ್ಯವನ್ನು ಪ್ರವೇಶಿಸಿದಳು. ಆದರೆ ಇಡೀ ರಾಜ್ಯ, ಕತ್ತಲಿನಿಂದ ತುಂಬಿರುವುದನ್ನು ಕಂಡು ಅವಳು ಹೌಹಾರಿದಳು. ದೀಪಾವಳಿಯ ದಿನ ತಾನು ಎಲ್ಲರ ಮನೆಗೆ ಬರುವುದು ತಿಳಿದೂ ಕತ್ತಲಿರುವುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು. ಆನಂತರ ಲಕ್ಷ್ಮೀದೇವಿ ದೀಪ ಬೆಳಗಿದ ಮನೆಯನ್ನು ಹುಡುಕುತ್ತಾ ನಗರದ ಹೊರಗೆ ಬಂದಳು. ಪ್ರತಾಪನ ಗುಡಿಸಲಿನಲ್ಲಿ ಮಾತ್ರ ದೀಪ ಬೆಳಗುತ್ತಿತ್ತು. ಗುಡಿಸಲಿನ ಸುತ್ತಲೂ ಮಾತ್ರ ದೀಪದ ಹಣತೆಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಲಕ್ಷ್ಮೀದೇವಿಗೆ ಇದರಿಂದ ತುಂಬಾ ಆನಂದವಾಯಿತು. ಗುಡಿಸಲಿನ ಬಳಿಗೆ ಬಂದಳು ಆದರೆ ಸುಮಂಗಳ ಅವಳನ್ನು ಬಾಗಿಲಿನಲ್ಲೇ ತಡೆದಳು. ಆಗ ಲಕ್ಷ್ಮೀದೇವಿ ಇಂದಿನ ರಾತ್ರಿ ಈ ಗುಡಿಸಲಿನಲ್ಲಿ ತನಗೆ ತಂಗಲು ಅವಕಾಶ ಕೊಟ್ಟರೆ ಪ್ರತಾಪನಿಗೆ ಅವನ ರಾಜ್ಯ, ಸಿರಿಸಂಪತ್ತುಗಳು ಮತ್ತೆ ಸಿಗುತ್ತದೆ ಎಂದಳು. ಆಗ ಸುಮಂಗಳ ಸಂತೋಷದಿಂದ ಲಕ್ಷ್ಮಿಯನ್ನು ಒಳಗೆ ಬರಮಾಡಿಕೊಳ್ಳುತ್ತಾಳೆ.

Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :

ಒಂದು ದಿನ ಅವರಿಗೆ ಬೇರೇನೂ ವಸ್ತು ದೊರೆಯದಿದ್ದಾಗ ಮರದ ಬುಡದಲ್ಲಿ ಬಿದ್ದಿದ್ದ ಒಂದು  ಹಾವನ್ನು ಎತ್ತಿಕೊಂಡು ಬಂದರು. ಸುಮಂಗಳ ಆ ಸತ್ತ ಹಾವನ್ನು ತನ್ನ ಗುಡಿಸಲಿನ ಮೇಲೆ ಎಸೆದಳು — ದೀಪಾವಳಿಯ ಮಹಿಮೆ-ಜನಪದ

೨೭. ಸತ್ತ ಹಾವನ್ನು ಎತ್ತಿಕೊಂಡು ಬಂದವರು ಯಾರು? ಏಕೆ? (Same question 7)
ಉ: ಪ್ರತಾಪ ಮತ್ತು ಅವನ ಮಗ ಸತ್ತ ಹಾವನ್ನು ಎತ್ತಿಕೊಂಡು ಬಂದರು. ಪ್ರತಾಪ ಮತ್ತು ಅವನ ಮಗ ಕೆಲಸದಿಂದ ಹಿಂದಿರುಗುವಾಗ ಏನಾದರೊಂದು ವಸ್ತುವನ್ನು ಮರೆಯದೆ ತರಬೇಕೆಂದು ಸುಮಂಗಳ ಹೇಳಿದ್ದಳು. ಕಲ್ಲು, ಕಟ್ಟಿಗೆ, ಇಟ್ಟಿಗೆ ಇತ್ಯಾದಿ ವಸ್ತುಗಳು. ಒಂದು ದಿನ ಏನೂ ಸಿಗದಿರುವಾಗ ಅವರಿಬ್ಬರು ಮರದ ಬುಡದಲ್ಲಿ ಸತ್ತ ಹಾವನ್ನು ತಂದರು.

೨೮. ರಾಜ ನಿರ್ಗತಿಕನಾಗಲು ಕಾರಣವೇನು? (Same as question 3)
ಉ: ಅಪಾರ ಬೆಲೆಯ ಕೇಸರಿಯನ್ನು ಗೊಬ್ಬರದ ಗುಂಡಿಗೆ ಸುರಿದ ಪ್ರತಾಪನನ್ನು ನೋಡಿ ಲಕ್ಷ್ಮೀದೇವಿಗೆ ಕೋಪ ಬಂತು. ಪ್ರತಾಪನಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿ ಅವನ ರಾಜ್ಯದಿಂದ ಹೊರಟಳು. ಕೆಲವೇ ದಿನಗಳಲ್ಲಿ ಪ್ರತಾಪ ಜೂಜಾಡುವುದನ್ನು ಕಲಿತ. ದಿನ ಕಳೆದಂತೆ ಅವನು ತನ್ನೆಲ್ಲಾ ಸಂಪತ್ತನ್ನು ಜೂಜಿನಲ್ಲಿ ಸೋತನು. ಅವನ ರಾಜ್ಯ ಕೈ ತಪ್ಪಿತು. ಶತ್ರುಗಳು ಅವನ ರಾಜ್ಯದ ಮೇಲೆ ಆಕ್ರಮಣ ಮಾಡಿದರು. ಸದಾ ಜೂಜಿನಲ್ಲಿ ನಿರತನಾದ ಪ್ರತಾಪನಿಗೆ ಶತ್ರುಗಳನ್ನು ಎದುರಿಸುವ ಶಕ್ತಿ ಇರಲಿಲ್ಲ. ಹೀಗೆ ರಾಜ ನಿರ್ಗತಿಕನಾಗಲು ಕಾರಣ.

೨೯. ಚಿನ್ನಾರಿ ರಾಜ್ಯದ ರಾಜ ಯಾರು?ಅವನ ಬಗ್ಗೆ ಜನರು ಚಿಂತಿಸುತ್ತಿದ್ದುದು ಏಕೆ?ತಿಳಿಸಿ.(Same as question 1)
ಉ: ಚಿನ್ನಾರಿ ದೇಶದ ರಾಜ ಪ್ರತಾಪ. ರಾಜ್ಯವು ಪುಟ್ಟದಾಗಿದ್ದರೂ ಸಂಪತ್ತಿನಿಂದ ಕೂಡಿತ್ತು. ಪ್ರಜೆಗಳು ಸುಖ-ಸಂತೋಷದಿಂದ ಜೀವನ ನಡೆಸುತ್ತಿದ್ದರು. ಖಜಾನೆಯಲ್ಲಿ ಸಂಪತ್ತು ತುಂಬಿತ್ತು. ಇದರಿಂದ ಪ್ರತಾಪ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದನು. ಪ್ರತಾಪನ ಒಳ್ಳೆಯ ಗುಣದ ಜೊತೆಗೆ ಅವನೊಬ್ಬ ಹಠಮಾರಿ, ಅಭಿಮಾನಿ ರಾಜನಾಗಿದ್ದುದು ಪ್ರಜೆಗಳಿಗೆ ಚಿಂತೆಯಾಗಿತ್ತು.

೩೦.  “ನಿನಗೇನು ಬೇಕು ಕೇಳು, ಸಂಕೋಚಪಡಬೇಡ, ಖಂಡಿತ ಅದನ್ನು ಕೊಡುತ್ತೇನೆ” – ಈ ಮಾತು ಯಾರದು? ಅದಕ್ಕೆ ಸುಮಂಗಳೆಯ ಉತ್ತರವೇನು? (Same as question 21)
ಉ: ಈ ಮಾತು ಪ್ರತಾಪನ ಕುಟುಂಬ ನೆಲೆಸಿದ ರಾಜ್ಯದ ರಾಜನದು. ಪ್ರತಾಪ ವಾಸವಾಗಿದ್ದ ರಾಜ್ಯದ ರಾಜನಿಗೆ. ಸುಮಂಗಳೆಯು ವಜ್ರದ ಹಾರವನ್ನು ರಾಜನಿಗೆ ಕೊಟ್ಟಳು. ಆಗ ರಾಜನು ಸಂತೋಷದಿಂದ “ನಿನಗೇನು ಬೇಕು ಕೇಳು” ಎಂದಾಗ ಸುಮಂಗಳೆಯು “ಪ್ರಭು ನನಗೆ ಧನ ಕನಕ ವಸ್ತು ವಾಹನಾದಿಗಳು ಏನೂ ಬೇಡ ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ ರಾಜ್ಯದಲ್ಲಿ ಅರಮನೆಯೂ ಸೇರಿ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ಹಾಗೆ ದೀಪಾವಳಿ ಆಚರಿಸಿ ದೀಪ ಹಚ್ಚಬೇಕೆಂದಿರುವವರು ನನ್ನ ಗುಡಿಸಲಿನ ಸುತ್ತಲೂ ಬೆಳಗಿಸಲಿ” ಎಂದಳು. ಅವಳ ಈ ಬೇಡಿಕೆ ರಾಜನಿಗೆ ವಿಚಿತ್ರವಾಗಿ ಕಂಡಿತು.

Click here to download Deepavaliya mahime icse grade 9 ix

Leave a Reply

Your email address will not be published. Required fields are marked *