Karnataka Aikakarana kannada chapter grade VI is about Karnataka Unification. Karnataka Aikakarana class 6th explains the journey of the Karnataka Unification.
Karnataka Ekikarana (Unification of Karnataka) refers to the movement that led to the formation of a unified state for Kannada-speaking people. Before 1956, Kannada-speaking regions were scattered across different provinces like Bombay, Madras, Hyderabad, and Mysore. Leaders like Aluru Venkata Rao played a key role in inspiring the movement. After years of struggle, on November 1, 1956, these regions were united to form Mysore State, which was later renamed Karnataka in 1973. Karnataka Rajyotsava is celebrated every year on November 1 to mark this historic achievement, symbolizing unity, cultural identity, and pride of Kannada language and heritage.
ಕರ್ನಾಟಕ ಏಕೀಕರಣ
ಅ) ಹೊಂದಿಸಿ ಬರೆಯಿರಿ. ( Match the following )
” ಅ” ‘‘ ಬ ”
೧. ೧೮೯೦ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ
೨. ೧೯೧೬ ಕರ್ನಾಟಕ ಸಭೆ ಸಂಸ್ಥೆ ಪ್ರಾರಂಭ
೩. ೧೯೧೫ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ
೪. ೧೯೫೬ ಮೈಸೂರು ರಾಜ್ಯ ಉದಯ
೫. ೧೯೭೩ ಕರ್ನಾಟಕ ರಾಜ್ಯ ಎಂಬ ಹೆಸರು ಬಂದಿದ್ದು
ಆ) ಕೆಳಗಿನ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ. ( Make your own sentence)
೧. ಹೋರಾಟ : ಸ್ವಾತಂತ್ರ್ಯಕ್ಕಾಗಿ ಭಾರತೀಯರು ಹೋರಾಟ ಮಾಡಿದರು.
೨. ಸವಾಲು : ನಾವು ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕು.
೩. ಕಲ್ಪಿಸು : ನನಗೆ ನನ್ನ ತಂದೆತಾಯಿಯರು ಒಳ್ಳೆಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
೪. ಅಗ್ರಗಣ್ಯ : ಡಾ. ರಾಜ ಕುಮಾರ್ ಕರ್ನಾಟಕದ ಅಗ್ರಗಣ್ಯರು.
೫. ಪ್ರತಿಭೆ : ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇದೆ.
ಇ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ. ( Answer the following in one sentence )
೧. ರೇಡಿಯೋದಲ್ಲಿ ಯಾವ ನುಡಿ ಹರಿದು ಬಂತು?
ಉ: ರೇಡಿಯೋದಲ್ಲಿ ಆಕಾಶವಾಣಿ “ ಇದೀಗ ಮಕ್ಕಳ ಕಾರ್ಯಕ್ರಮ, ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ. ಆಲಿಸಿರಿ ” ಎಂಬ ನುಡಿ ಹರಿದು ಬಂತು.
೨. ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ. ಯಾಕೆ?
ಉ: ಕನ್ನಡ ಪರ ದೇಶಗಳು ಮುಂಬೈ, ಮದ್ರಾಸ್, ಕೊಡಗು ಮತ್ತು ಇತರ ಸಂಸ್ಥಾನಗಳಲ್ಲಿ ಹಂಚಿತ್ತು. ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ.
೩. ಕನ್ನಡದ ಪರವಾಗಿ ಹೋರಾಟ ಮಾಡಿದವರಲ್ಲಿ ಕೆಲವರ ಹೆಸರು ತಿಳಿಸಿರಿ.
ಉ: ಕನ್ನಡದ ಪರವಾಗಿ ಹೋರಾಟ ಮಾಡಿದವರು ಆಲೂರು ವೆಂಕಟರಾಯರು, ಗದಿಗೆಯ ಹೊನ್ನಾಪುರಮಠ, ಕಡಪಾದ ರಾಘವೇಂದ್ರರಾಯರು ಮತ್ತು ಮುಂತಾದವರು.
೪. ವಂಗಭಂಗ ಚಳುವಳಿಯನ್ನು ಯಾರು ನಡೆಸಿದರು?
ಉ: ವಂಗಭಂಗ ಚಳುವಳಿಯನ್ನು ಬಂಗಾಳಿಗರು ನಡೆಸಿದರು.
೫. ವಿದ್ಯಾವರ್ಧಕ ಸಂಘದ ಕೆಲಸವೇನಾಗಿತ್ತು?
ಉ: ಕನ್ನಡದಲ್ಲಿ ಶಿಕ್ಷಣ ನೀಡಿ, ಕನ್ನಡಿಗರೆಲ್ಲ ಒಂದಾಗಲು ಪ್ರೇರಣೆ ನೀಡಿತು. ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ ಹಾಗೂ ‘ ವಾಗ್ಬೂಷಣ ‘ ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿತು. ಇವು ವಿದ್ಯಾವರ್ಧಕ ಸಂಘದ ಕೆಲಸವಾಗಿತ್ತು.
೬. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಯಾವಾಗ ಬಂದಿತು ?
ಉ: ನಮ್ಮ ರಾಜ್ಯಕ್ಕೆ ಕರ್ನಾಟಕ‘ ಎಂಬ ಹೆಸರು ೧೯೭೩, ನವೆಂಬರ್ ೧ರಂದು ಬಂದಿತು.
ಈ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer the following in two -three sentences)
೧. ಕನ್ನಡನಾಡು ಏಕೀಕರಣಗೊಳ್ಳಲು ಕನ್ನಡಿಗರಿಗೆ ಪ್ರೇರಣೆಯಾದ ಘಟನೆ ಯಾವುದು?
ಉ: ೧೯೦೫ರ ಆಗಸ್ಟ್ ೧೬ ರಂದು ಬ್ರಿಟಿಷ್ ಸರ್ಕಾರ ಬಂಗಾಳದ ರಾಜ್ಯ ವಿಭಜನೆಗೆ ಮುಂದಾಯಿತು. ಇದನ್ನು ಬಂಗಾಳಿಯರು ಪ್ರತಿಭಟಿಸಿ ‘ ವಂಗಭಂಗ ‘ ಎನ್ನುವ ಚಳುವಳಿ ನಡೆಸಿದರು. ಇದಕ್ಕೆ ಮಣಿದ ಸರ್ಕಾರ ಪುನಃ ಬಂಗಾಳದ ರಾಜ್ಯ ವಿಭಜನೆ ಮಾಡಲಿಲ್ಲ. ಈ ಘಟನೆ ಕನ್ನಡನಾಡು ಏಕೀಕರಣಗೊಳ್ಳಲು ಕನ್ನಡಿಗರಿಗೆ ಪ್ರೇರಣೆಯಾಯಿತು.
೨. ‘ ಕನ್ನಡ ಸಾಹಿತ್ಯ ಪರಿಷತ್ತು ‘ ಕರ್ನಾಟಕ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿದ್ದು ಹೇಗೆ ?
ಉ: ಕನ್ನಡ ನಾಡು ನುಡಿಯ ಬೆಳವಣಿಗೆ ಮತ್ತು ಸಂರಕ್ಷಣೆ ಉದ್ದೇಶವಾಗಿತ್ತು. ಕನ್ನಡ ಗ್ರಂಥಗಳ ಪ್ರಕಟಣೆ, ಸಂಶೋಧನೆ, ನಿಘಂಟು ರಚನೆ ಇದರ ಸಾಧನೆಗಳು. ‘ ಕನ್ನಡ ಸಾಹಿತ್ಯ ಪರಿಷತ್ತು ‘ ಕನ್ನಡಕ್ಕೊಂದು ನೆಲೆ ಕಲ್ಪಿಸಿತು. ಕನ್ನಡಿಗರನ್ನು ಒಂದುಗೂಡಿಸಿ ಕರ್ನಾಟಕದ ಏಕೀಕರಣದ ಬೇಡಿಕೆಗೆ ವೇದಿಕೆ ಕಲ್ಪಿಸಿತು.
೩. ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮದಲ್ಲಿ ಏನೆಲ್ಲಾ ಘಟನೆಗಳು ನಡೆದವು?
ಉ : ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ೨೫-೧೨-೧೯೨೪ ರಂದು ಕರ್ನಾಟಕ ಸಭೆಯ ಮೊದಲ ಕಾರ್ಯಕ್ರಮ ನಡೆಯಿತು. ಹುಯಿಲುಗೋಳು ನಾರಾಯಣರಾಯರು ರಚಿಸಿದ “ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು “ ಎಂಬ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಈ ಸಭೆಯ ಪರಿಣಾಮವಾಗಿ ಮದ್ರಾಸ್ ಮತ್ತು ಮುಂಬೈ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯದ ಬಗ್ಗೆ ಮಾತನಾಡಿದರು.
ಉ) ಕೆಳಗಿನ ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer the following in five – six sentences)
೧. ಬಂಗಾಳದಲ್ಲಿ ನಡೆದ ‘ ವಂಗ ಭಂಗ ‘ ಚಳುವಳಿಯ ಬಗ್ಗೆ ಬರೆಯಿರಿ ?
ಉ: ೧೯೦೫ರ ಆಗಸ್ಟ್ ೧೬ ರಂದು ಬ್ರಿಟಿಷ್ ಸರ್ಕಾರ ಬಂಗಾಳದ ರಾಜ್ಯ ವಿಭಜನೆಗೆ ಮುಂದಾಯಿತು. ಇದನ್ನು ಬಂಗಾಳಿಯರು ಪ್ರತಿಭಟಿಸಿ ‘ ವಂಗಭಂಗ ‘ ಎನ್ನುವ ಚಳುವಳಿ ನಡೆಸಿದರು. ಲಾರ್ಡ್ ಕರ್ಝನ್ ಬಂಗಾಳವನ್ನು ಪೂರ್ವ ಮತ್ತು ಪಶ್ಚಿಮವಾಗಿ ವಿಭಜಿಸಿದನು, ಇದಕ್ಕೆ ಜನರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.ಈ ಚಳುವಳಿಯ ಮೂಲಕ ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿಗಳು ಆರಂಭವಾದವು.ಜನರು ವಿದೇಶಿ ವಸ್ತುಗಳನ್ನು ತ್ಯಜಿಸಿ, ದೇಶೀಯ ವಸ್ತುಗಳನ್ನು ಬಳಸಲು ಪ್ರಾರಂಭಿಸಿದರು.ಈ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿತು.ಬಂಗಾಳದ ರಾಜ್ಯ ವಿಭಜನೆ ಮಾಡಲಿಲ್ಲ.
ಊ) ಕೆಳಗಿನ ಪರಿಚ್ಛೇದವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿರಿ. (Read the passage and write the answers)
ಭಾರತದ ಜನಮಾನಸದಲ್ಲಿ ಇಂದಿಗೂ ಮುಕ್ಕಾಗದೇ ಇರುವವರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ವ್ಯಕ್ತಿತ್ವವೂ ಒಂದು. ಕಡುಬಡತನದ ಮನೆಯಲ್ಲಿ ಜನಿಸಿದ ಅವರು ರಾಷ್ಟ್ರದ ಉನ್ನತ ಹುದ್ದೆಯಾದ ಪ್ರಧಾನಿ ಪದವಿಗೇರಿದರು. ಅಧಿಕಾರಾವಧಿಯಲ್ಲಿ ಸ್ವಂತಕ್ಕೊಂದು ಮನೆ ಮಾಡಿಕೊಳ್ಳಲಿಲ್ಲ. ರಾಷ್ಟ್ರದ ಜನತೆಗೆ ಅವರ ಮೇಲೆ ಅಪಾರ ವಿಶ್ವಾಸವಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿಗಳು ೧೯೦೪ ಅಕ್ಟೋಬರ್ ೨ರಂದು ವಾರಣಾಸಿ ಹತ್ತಿರದ ಮೊಗಲ್‌ರಾಯಿಯಲ್ಲಿ ಶಾರದಾ ಪ್ರಸಾದ, ರಾಮದುಲಾರಿ ದೇವಿಯವರ ಮಗನಾಗಿ ಜನಿಸಿದರು. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆ ತೀರಿಕೊಂಡರು.
ತಾಯಿಯ ಆರೈಕೆಯಲ್ಲಿ ಅಜ್ಜನ ಮನೆಯಲ್ಲಿ ಬೆಳೆದರು. ವಿದ್ಯಾರ್ಥಿಯಾಗಿದ್ದಾಗ ಸ್ನೇಹಿತರೊಂದಿಗೆ ಜಾತ್ರೆಗೆ ಹೋಗಿದ್ದರು. ಹಿಂತಿರುಗಿ ಬರುವಾಗ ದೋಣಿ ದಾಟಿಸುವವನಿಗೆ ಕೊಡಲು ಹಣವಿರಲಿಲ್ಲ. ಗೆಳೆಯರಲ್ಲಿ ಕೈಚಾಚಲು ಮನಸ್ಸಿರಲಿಲ್ಲ . ಗಂಗಾನದಿಯನ್ನು ದಾಟಲೇಬೇಕು ಆಗ ಏನು ಮಾಡಿದರು ಗೊತ್ತೇ? ಗೆಳೆಯರ ಬಳಿ ತಡವಾಗಿ ಬರುವೆನೆಂದು ಹೇಳಿ ಸಂಜೆಯಾಗುತ್ತಿದ್ದಂತೆ ತುಂಬಿ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಧುಮುಕಿ ಈಜಿ ಮನೆ ಸೇರಿದರು. ಜೀವನದ ಕೊನೆಯುಸಿರಿರುವವರೆಗೂ ಯಾರ ಬಳಿಯೂ ಕೈಚಾಚಲಿಲ್ಲ ನಮ್ಮ ಲಾಲ್ ಬಹಾದ್ದೂರ್ ಶಾಸ್ತ್ರಿಗಳು.
ಪ್ರಶ್ನೆಗಳಿಗೆ ಉತ್ತರಿಸಿರಿ. (Answer the following )
ಅ) ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಯಾವ ಉನ್ನತ ಪದವಿಗೇರಿದರು ?
ಉ: ಲಾಲ್ ಬಹಾದ್ದೂರ್ ಶಾಸ್ತ್ರಿಯವರು ರಾಷ್ಟ್ರದ ಉನ್ನತ ಪದವಿಯಾದ ಪ್ರಧಾನ ಮಂತ್ರಿಯ ಪದವಿಗೇರಿದರು.
ಆ) ಇವರು ಎಲ್ಲಿ , ಯಾವಾಗ ಜನಿಸಿದರು?
ಉ: ಲಾಲ್ ಬಹದ್ದೂರ್ ಶಾಸ್ತ್ರಿಯವರು ೧೯೦೪ ಅಕ್ಟೋಬರ್ ೨ರಂದು ವಾರಣಾಸಿ ಹತ್ತಿರದ ಮೊಗಲ್ ಸರಾಯಿಯಲ್ಲಿ ಜನಿಸಿದರು.
ಇ) ತಂದೆ ತೀರಿಕೊಂಡ ಬಳಿಕ ಶಾಸ್ತ್ರಿಯವರು ಹೇಗೆ ಬೆಳೆದರು?
ಉ: ತಂದೆ ತೀರಿಕೊಂಡ ಬಳಿಕ ಶಾಸ್ತ್ರಿಯವರು ತಾಯಿಯ ಆರೈಕೆಯಲ್ಲಿ ಅಜ್ಜನ ಮನೆಯಲ್ಲಿ ಬೆಳೆದರು.
ಈ) ‘ ಅಕ್ಟೋಬರ್ ೨ ‘ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನ. ಅವರ ಹೆಸರೇನು ?
ಉ: ಅಕ್ಟೋಬರ್ ೨ ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರು ಮಹಾವ್ಯಕ್ತಿಗಳ ಜನ್ಮದಿನ.
ಉ) ದೋಣಿ ದಾಟಿಸುವವನಿಗೆ ಕೊಡಲು ಹಣವಿಲ್ಲದಾಗ ಶಾಸ್ತ್ರಿ ಏನು ಮಾಡಿದರು ?
ಉ: ದೋಣಿ ದಾಟಿಸುವವನಿಗೆ ಕೊಡಲು ಹಣವಿಲ್ಲದಾಗ ಶಾಸ್ತ್ರಿಯವರು ಗಂಗಾ ನದಿಯಲ್ಲಿ ಧುಮುಕಿ ಈಜಿ ಮನೆ ಸೇರಿದರು.
ಋ) ದೂರದರ್ಶನ ವೀಕ್ಷಣೆಯ ಸಾಧಕ ಬಾಧಕಗಳ ಬಗ್ಗೆ ಒಂದು ಚಿಕ್ಕ ಪ್ರಬಂಧ ಬರೆಯಿರಿ.
ಪೀಠಿಕೆ: ದೂರದರ್ಶನವು ಇಂದಿನ ಕಾಲದಲ್ಲಿ ಅತ್ಯಂತ ಪ್ರಮುಖ ಮನರಂಜನೆ ಮತ್ತು ಮಾಹಿತಿ ಮಾಧ್ಯಮವಾಗಿದೆ. ಇದು ಜಗತ್ತಿನ ಘಟನೆಗಳನ್ನು ಕ್ಷಣಕ್ಷಣಕ್ಕೂ ನಮ್ಮ ಮನೆಗೆ ತಲುಪಿಸುತ್ತದೆ. ದೂರದರ್ಶನದ ಮೂಲಕ ಸುದ್ದಿಗಳು, ಶೈಕ್ಷಣಿಕ ಕಾರ್ಯಕ್ರಮಗಳು, ವಿಜ್ಞಾನ, ಇತಿಹಾಸ ಮತ್ತು ಸಂಸ್ಕೃತಿ ಕುರಿತು ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪಾಠಗಳಿಗೆ ಸಂಬಂಧಿಸಿದ ಶಿಕ್ಷಣಾತ್ಮಕ ಕಾರ್ಯಕ್ರಮಗಳು ಸಹ ಸಹಾಯಕವಾಗುತ್ತವೆ. ಜೊತೆಗೆ ಸಂಗೀತ, ನಾಟಕ, ಕ್ರೀಡೆ ಮತ್ತು ಚಿತ್ರಗಳು ಮನರಂಜನೆಯನ್ನು ಒದಗಿಸುತ್ತವೆ.
ವಿಷಯ ನಿರೂಪಣೆ: ಆದರೆ ದೂರದರ್ಶನ ವೀಕ್ಷಣೆಗೆ ಕೆಲವು ಬಾಧಕಗಳೂ ಇವೆ. ಹೆಚ್ಚು ಸಮಯ ಟಿವಿ ನೋಡಿದರೆ ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಬೀಳಬಹುದು. ಇದು ಕಣ್ಣುಗಳ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಕೆಲವು ಕಾರ್ಯಕ್ರಮಗಳು ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗೆಯೇ ಹೆಚ್ಚು ಸಮಯ ಟಿವಿ ನೋಡಿದರೆ ವ್ಯಾಯಾಮ ಮತ್ತು ಹೊರಾಂಗಣ ಆಟಗಳಿಗೆ ಸಮಯ ಕಡಿಮೆಯಾಗುತ್ತದೆ.
ಉಪಸಂಹಾರ: ಆದ್ದರಿಂದ ದೂರದರ್ಶನವನ್ನು ಮಿತವಾಗಿ ಮತ್ತು ಅಗತ್ಯವಾದ ಕಾರ್ಯಕ್ರಮಗಳನ್ನು ಮಾತ್ರ ವೀಕ್ಷಿಸುವುದು ಉತ್ತಮ. ಸರಿಯಾದ ರೀತಿಯಲ್ಲಿ ಬಳಸಿದರೆ ದೂರದರ್ಶನವು ಜ್ಞಾನ ಮತ್ತು ಮನರಂಜನೆ ನೀಡುವ ಉತ್ತಮ ಸಾಧನವಾಗಿದೆ.