Vachanagalu Basavanna Kannada Sahitya Sangama grade IX poem is written by Basavana. Vachanagalu Basavanna 9th class sahithya sangama can be referred as notes.

Basava’s Vachanas teach inner and outer purity in simple language. They correct societal flaws while spreading powerful messages of humanity, equality, and spiritual wisdom.

Basavanna

Birth & Early Life:
Basavanna was born in 1131 CE in Bagevadi (present-day Karnataka) to Madarasa and Madalambike, a devout Brahmin family. From a young age, he questioned ritualistic practices and social inequalities, which led him to leave home and pursue spiritual learning at Kudalasangama.

Personal Life:
He married Gangambike and later Neelambike. Despite holding a high position, he lived simply, valuing humility and devotion over material wealth.

Career Path:
Basavanna rose to become the chief minister in the court of King Bijjala II at Kalyana. He used his position to promote progressive social reforms.

Teachings & Contributions:
He founded the Anubhava Mantapa, a spiritual assembly encouraging open dialogue. Through his Vachanas, he preached equality, dignity of labor (Kayaka), sharing (Dasoha), and devotion to Lord Shiva, strongly opposing caste discrimination and social injustice.

ವಚನಗಳು ಬಸವಣ್ಣ

ಜಗತ್ತಿನ ಧಾರ್ಮಿಕ, ಸಾಮಾಜಿಕ ಮಹಾಪುರುಷರಲ್ಲಿ ಬಸವೇಶ್ವರರಿಗೆ ಮಹತ್ವದ ಸ್ಥಾನವಿದೆ ಎಂಬುದು ನಿರ್ವಿವಾದ. ಭಕ್ತಿ ಭಂಡಾರಿ, ಸಮಾಜ ಸುಧಾರಕ, ಕ್ರಾಂತಿಕಾರಿ, ಯುಗಪುರುಷ, ಜಗಜ್ಯೋತಿ ಬಸವೇಶ್ವರ – ಹೀಗೆ ಅನೇಕ ರೀತಿಯಾಗಿ ಕರೆಯುತ್ತಾರೆ. 12ನೇ ಶತಮಾನದಲ್ಲಿ ಜೀವಿಸಿದ್ದ ಇವರು ಸಮಾಜದಲ್ಲಿ, ಸಾಹಿತ್ಯದಲ್ಲಿ, ಧರ್ಮದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿ ಕ್ರಾಂತಿಯನ್ನು ತಂದರು. 12ನೇ ಶತಮಾನದಲ್ಲಿ ವೀರಶೈವ ಧರ್ಮವನ್ನು ಕುರಿತು ನಡೆದ ಎಲ್ಲ ಚಟುವಟಿಕೆಗಳ ಕೇಂದ್ರವಾಗಿದ್ದವರು ಬಸವಣ್ಣನವರು.

ಅಧ್ಯಾತ್ಮ ಪ್ರಪಂಚದಲ್ಲಿ ಬಸವಣ್ಣನವರ ಸ್ಥಾನ ಮಹತ್ತಾದುದು. ಸಾರ್ವಜನಿಕ ಜೀವನವನ್ನು ಸತ್ಯಮಾರ್ಗದಲ್ಲಿ ಹರಿಯಿಸಿ, ಸತ್ವಮಯವನ್ನಾಗಿ ಮಾಡಲು ಬಸವಣ್ಣನವರು ಶ್ರಮಿಸಿದರು.

ಇವರ ವಚನಗಳು ಧರ್ಮದ ತಿರುಳನ್ನು ತಿಳಿಸುವಂತಹ ಸಾಹಿತ್ಯದ ಭಂಡಾರಗಳು. ಸಮಾಜದ ಓರೆಕೋರೆಗಳನ್ನು ನೇರ್ಪುಗೊಳಿಸುವ ಸದುದ್ದೇಶದಿಂದ ನುಡಿದವು. ಇವುಗಳಲ್ಲಿ ಎಷ್ಟೋ ವಾಕ್ಯಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ: ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’, ‘ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’, ‘ನುಡಿದರೆ ಮುತ್ತಿನ ಹಾರದಂತಿರಬೇಕು…’ – ಹೀಗೆ ನೂರಾರು ಉತ್ತಮ ವಚನಗಳ ಭಾಗಗಳನ್ನು ಉದ್ಧರಿಸಬಹುದು.

ಕಳಬೇಡ ಕೊಲಬೇಡ ; ಹುಸಿಯ ನುಡಿಯಲು ಬೇಡ ;
Do not steal, do not kill; Do not utter lies.

ಮುನಿಯಬೇಡ ; ಅನ್ಯರಿಗೆ ಅಸಹ್ಯ ಪಡಬೇಡ,
Do not lose your temper; do not feel disgusted or intolerant toward others

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
Do not praise yourself; do not insult or humiliate others.


ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
This is internal purity; this is external purity.

ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ
This is the only way to please our Lord, Kudala Sangama Deva.

ಲೋಕದ ಡೊಂಕ ನೀವೇಕೆ ತಿದ್ದುವಿರಿ?
Why do you try to straighten the crookedness of the world?

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ;
First, take care of your own body;

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ;
Take care of your own mind;

ನೆರೆಮನೆಯ ದುಃಖಕ್ಕೆ ಅಳುವವರ
Those who weep for the sorrow of their neighbors,

ಮೆಚ್ಚ ಕೂಡಲ ಸಂಗಮದೇವ
Are not appreciated by Kudala Sangama Deva.

ಹಾವು ತಿಂದವರ ನುಡಿಸಬಹುದು !
One bitten by a snake may still be made to speak!

ಗರ ಹೊಡೆದವರ ನುಡಿಸಬಹುದು !
The One struck by shock may still be made to speak!

ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ !
one can not speak wealth people,

ಬಡತನವೆಂಬ ಮಂತ್ರವಾದಿ ಹೊಗಲು –
When the magician called poverty hits the rich people

ಒಡನೆ ನುಡಿವರಯ್ಯ ಕೂಡಲ ಸಂಗಮದೇವ
They will start speaking, Oh Kudala Sangama Deva.

I. ಅರ್ಥಗಳು (Meanings)

II. ಪದ್ಯದ ಸಾರಾಂಶ (Summary of the Poem)

  1. ಕಳ್ಳತನ, ಪ್ರಾಣಹಿಂಸೆ, ಸುಳ್ಳು ಹೇಳುವುದು, ಸಿಟ್ಟು ಮಾಡಬಾರದು, ಅಸಹ್ಯ ಪಡಬೇಡ, ಆತ್ಮಪ್ರಶಂಸೆ, ನಿಂದನೆ – ಇವನ್ನು ತ್ಯಜಿಸುವುದೇ ಅಂತರಂಗ-ಬಹಿರಂಗ ಶುದ್ಧಿಯ ಮೂಲ ಧರ್ಮ. ಹೀಗಿರುವ ಸದ್ಭಕ್ತನು ಕೂಡಲ ಸಂåಗಮದೇವನನ್ನು ಸುಲಭದಲ್ಲಿ ಒಲಿಸಿಕೊಳ್ಳಬಲ್ಲ ಎಂಬುದು ಈ ವಚನದಲ್ಲಿದೆ.
    Abandoning theft, animal cruelty (violence), lying, and anger is the basic duty of internal and external purity. One should not feel disgusted toward others, engage in self-praise, or insult others. This Vachana states that a true devotee who follows these principles can easily please Lord Kudala Sangama Deva.

  2. ತಮ್ಮ ತನು-ಮನದಲ್ಲಿ ತುಂಬಿರುವ ಕೆಟ್ಟದಾದ ಅಪೇಕ್ಷೆ, ವಿಕಾರ, ಅವಿಚಾರ ಸರಿಪಡಿಸಿಕೊಳ್ಳುದೇ, ಜಗತ್ತಿನ ಲೋಪದೋಷಗಳನ್ನು ಏಕೆ ತಿದ್ದಲೆತ್ನಿಸುವಿರಿ? ನೆರೆಮನೆಯವರ ದುಃಖಕ್ಕಾಗಿ ಅಳುವವರನ್ನು ಕೂಡಲಸಂಗಮದೇವನು ಮೆಚ್ಚುವುದಿಲ್ಲ ಎಂದು ವಚನದಲ್ಲಿ ಹೇಳಲಾಗಿದೆ.
    One must correct the negative desires, distortions, and irrational thoughts filled within one’s own body and mind; why do you try to correct the flaws of the world?
    It is stated in the Vachana that Lord Kudala Sangama Deva does not appreciate those who cry for the sorrows of their neighbors (without first correcting themselves).

  1. ಹಾವಿನಿಂದ ಕಚ್ಚಿಸಿಕೊಂಡವರನ್ನು, ಭೂತ ಹಿಡಿದುಕೊಂಡವರನ್ನು ಮಾತನಾಡಿಸಬಹುದು. ಆದರೆ ಸಿರಿವಂತಿಕೆಯ ಭೂತ ಹಿಡಿದವರನ್ನು ಮಾತನಾಡಿಸುವುದು ಬಲುಕಷ್ಟ. ಒಂದುವೇಳೆ ಅವರ ಮನೆಯಲ್ಲಿ ಬಡತನವೆಂಬ ಮಂತ್ರಗಾರ ಹೊಕ್ಕು ಬಿಟ್ಟರೆ ಕೂಡಲೇ ಮಾತನಾಡುತ್ತಾರೆ, ಕೂಡಲ ಸಂಗಮದೇವನನ್ನು ನೆನೆಯುತ್ತಾರೆ ಎಂದು ಎಂದು ವಚನದಲ್ಲಿ ಹೇಳಲಾಗಿದೆ.
    One can talk to those bitten by a snake or those possessed by a ghost. However, it is extremely difficult to talk to those possessed by the “ghost of wealth”. The Vachana states that if the “magician of poverty” enters their home, they will immediately start talking and begin to remember Lord Kudala Sangama Deva.

III. ಪ್ರಶೋತ್ತರಗಳು (Questions and Answers)

೧. ಬಸವಣ್ಣನವರ ಅಂಕಿತನಾಮವೇನು? ಅವರ ವಿಚಾರವಾಗಿ ಬರೆಯಿರಿ.
ಉ: ಕೂಡಲ ಸಂಗಮದೇವ ಎಂಬುದು ಬಸವಣ್ಣನವರ ಅಂಕಿತನಾಮ. ಬಸವಣ್ಣನವರು ಕ್ರಿ.ಶ. 12ನೇ ಶತಮಾನದಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ, ಮಾದರಸ, ಮಾದಲಾಂಬಿಕೆಯರಿಗೆ ಜನಿಸಿದರು. ಕಲ್ಯಾಣದ ಬಿಜ್ಜಳ ದೊರೆಯ ಮಹಾಮಂತ್ರಿಯಾಗಿದ್ದರು. ಕಲ್ಯಾಣದಲ್ಲಿ ‘ಅನುಭವ ಮಂಟಪ’ ಎಂಬ ವಿಚಾರ ವೇದಿಕೆಯನ್ನು ನಿರ್ಮಿಸಿದರು. ಬಸವಣ್ಣನವರನ್ನು ಭಕ್ತಿ ಭಂಡಾರಿ, ಸಮಾಜ ಸುಧಾರಕ, ಕ್ರಾಂತಿಕಾರಿ, ಯುಗ ಪುರುಷ, ಜಗಜ್ಯೋತಿ ಬಸವೇಶ್ವರ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇವರು ಸಮಾಜದಲ್ಲಿ, ಸಾಹಿತ್ಯದಲ್ಲಿ, ಧರ್ಮದಲ್ಲಿ ಅನೇಕ ಸುಧಾರಣೆಗಳನ್ನು ತರುವ ಮೂಲಕ ಕ್ರಾಂತಿಯನ್ನು ಮಾಡಿದವರು.

೨. ಕೂಡಲ ಸಂಗಮನನ್ನು ಒಲಿಸುವ ಪರಿ ಹೇಗೆ? ವಿವರಿಸಿ.
ಉ: ಬಸವಣ್ಣನವರ ಪ್ರಕಾರ ಪರರ ವಸ್ತುಗಳನ್ನು ಕಳ್ಳತನ ಮಾಡಬಾರದು, ಯಾರ ಪ್ರಾಣಹಿಂಸೆ ಮಾಡಬಾರದು. ಸುಳ್ಳನ್ನು ಹೇಳಬಾರದು, ಸಿಟ್ಟು ಮಾಡಬಾರದು, ಅಸಹ್ಯ ಪಡಬಾರದು. ಹಾಗೆಯೇ ತನ್ನ ಆತ್ಮಪ್ರಶಂಸೆ ಮಾಡಬಾರದು, ಇತರರ ನಿಂದನೆ ಮಾಡಬಾರದು. ಈ ರೀತಿ ನೀತಿಯಲ್ಲಿ ಬದುಕುವವರ ಅಂತರಂಗ-ಬಹಿರಂಗ ಎರಡೂ ಶುದ್ಧವಾಗಿರುತ್ತದೆ. ಹೀಗೆ ಶುದ್ಧತೆಯನ್ನು ಕಾಪಾಡಿಕೊಳ್ಳುವ ಮೂಲಕ ಕೂಡಲಸಂಗಮನನ್ನು ಒಲಿಸಿಕೊಳ್ಳಬಹುದು ಎಂದು ಬಸವಣ್ಣನವರು ಹೇಳುತ್ತಾರೆ.

೩. ಲೋಕದ ಡೊಂಕನ್ನು ನಾವು ಏಕೆ ತಿದ್ದಬಾರದೆಂದು ಬಸವಣ್ಣನವರು ಹೇಳುತ್ತಾರೆ?
ಉ: ಬಸವಣ್ಣನವರ ಪ್ರಕಾರ ತಮ್ಮ ತನು-ಮನದಲ್ಲಿ ತುಂಬಿರುವ ಕೆಟ್ಟದಾದ ಅಪೇಕ್ಷೆ, ವಿಕಾರ, ಅವಿಚಾರ ಸರಿಪಡಿಸಿಕೊಳ್ಳುದೇ, ಜಗತ್ತಿನ ಲೋಪದೋಷಗಳನ್ನು ತಿದ್ದುವುದು ಸರಿಯಲ್ಲ ಎಂದಿದ್ದಾರೆ. ಕೆಲವು ಬಾರಿ ಆ ತಿದ್ದುವ ಅರ್ಹತೆಯೂ ನಮಗಿರುವುದಿಲ್ಲ. ನಮ್ಮ ಮನೆಯೊಳಗೆ ಕೆಡುಕು, ದುಃಖ, ಕಷ್ಟ ತುಂಬಿರುವಾಗ ಅದನ್ನು ಸರಿಪಡಿಸದೇ ಪಕ್ಕದ ಮನೆಯವರಿಗಾಗಿ ಅಳುವವರನ್ನು ಕೂಡಲಸಂಗಮನು ಮೆಚ್ಚುವುದಿಲ್ಲ ಎಂದು ಹೇಳಿದ್ದಾರೆ.

೪. ಯಾರನ್ನು ಮಾತನಾಡಿಸಬಹುದು? ಯಾರನ್ನು ಮಾತನಾಡಿಸಲಾಗುವುದಿಲ್ಲ? ಏಕೆ?
ಉ:
 ಹಾವಿನಿಂದ ಕಚ್ಚಿಸಿಕೊಂಡವರನ್ನು ಮಾತನಾಡಿಸಿದರೆ ಅವನು ಮಾತನಾಡಬಲ್ಲ, ಭೂತ ಹಿಡಿದುಕೊಂಡವರನ್ನು ಮಾತನಾಡಿಸಬಹುದು. ಆದರೆ ಸಿರಿವಂತಿಕೆಯ ಭೂತ ಹಿಡಿದವರನ್ನು ಮಾತನಾಡಿಸುವುದು ಬಲುಕಷ್ಟ. ಅದೇ ಸಿರಿವಂತರ ಮನೆಯಲ್ಲಿ ಬಡತನವೆಂಬ ಮಂತ್ರಗಾರ ಹೊಕ್ಕು ಬಿಟ್ಟರೆ ಕೂಡಲೇ ಮಾತನಾಡುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ. ಕೂಡಲ ಸಂಗಮದೇವನನ್ನು ನೆನೆಯುತ್ತಾರೆ ಎಂದು ವಚನದಲ್ಲಿ ಹೇಳಲಾಗಿದೆ.

೫. ಬಸವಣ್ಣನವರು ಕೂಡಲ ಸಂಗಮದೇವನು ಯಾರನ್ನು ಮೆಚ್ಚುವುದಿಲ್ಲ ಎಂದಿದ್ದಾರೆ? ವಿವರಿಸಿ. (Same as 3rd question)
ಉ: ಬಸವಣ್ಣನವರ ಪ್ರಕಾರ ತಮ್ಮ ತನು-ಮನದಲ್ಲಿ ತುಂಬಿರುವ ಕೆಟ್ಟದಾದ ಅಪೇಕ್ಷೆ, ವಿಕಾರ, ಅವಿಚಾರ ಸರಿಪಡಿಸಿಕೊಳ್ಳುದೇ, ಜಗತ್ತಿನ ಲೋಪದೋಷಗಳನ್ನು ತಿದ್ದುವುದು ಸರಿಯಲ್ಲ ಎಂದಿದ್ದಾರೆ. ಕೆಲವು ಬಾರಿ ಆ ತಿದ್ದುವ ಅರ್ಹತೆಯೂ ನಮಗಿರುವುದಿಲ್ಲ. ನಮ್ಮ ಮನೆಯೊಳಗೆ ಕೆಡುಕು, ದುಃಖ, ಕಷ್ಟ ತುಂಬಿರುವಾಗ ಅದನ್ನು ಸರಿಪಡಿಸದೇ ಪಕ್ಕದ ಮನೆಯವರಿಗಾಗಿ ಅಳುವವರನ್ನು ಕೂಡಲಸಂಗಮನು ಮೆಚ್ಚುವುದಿಲ್ಲ ಎಂದು ಹೇಳಿದ್ದಾರೆ.

೬. ಅಂತರಂಗ ಶುದ್ಧಿ-ಬಹಿರಂಗ ಶುದ್ಧಿಯ ಬಗ್ಗೆ ಬಸವಣ್ಣನವರು ತಮ್ಮ ವಚನದಲ್ಲಿ ಹೇಗೆ ಹೇಳಿದ್ದಾರೆ? ವಿವರಿಸಿ. (Same as 2nd question)
ಉ: ಬಸವಣ್ಣನವರ ಪ್ರಕಾರ ಪರರ ವಸ್ತುಗಳನ್ನು ಕಳ್ಳತನ ಮಾಡಬಾರದು, ಯಾರ ಪ್ರಾಣಹಿಂಸೆ ಮಾಡಬಾರದು. ಸುಳ್ಳನ್ನು ಹೇಳಬಾರದು, ಸಿಟ್ಟು ಮಾಡಬಾರದು, ಅಸಹ್ಯ ಪಡಬಾರದು. ಹಾಗೆಯೇ ತನ್ನ ಆತ್ಮಪ್ರಶಂಸೆ ಮಾಡಬಾರದು, ಇತರರ ನಿಂದನೆ ಮಾಡಬಾರದು. ಈ ರೀತಿ ನೀತಿಯಲ್ಲಿ ಬದುಕುವವರ ಅಂತರಂಗ-ಬಹಿರಂಗ ಎರಡೂ ಶುದ್ಧವಾಗಿರುತ್ತದೆ. ಹೀಗೆ ಶುದ್ಧತೆಯನ್ನು ಕಾಪಾಡಿಕೊಳ್ಳುವ ಮೂಲಕ ಕೂಡಲಸಂಗಮನನ್ನು ಒಲಿಸಿಕೊಳ್ಳಬಹುದು ಎಂದು ಬಸವಣ್ಣನವರು ಹೇಳುತ್ತಾರೆ.

೭. ಜನರು ಕೂಡಲ ಸಂಗಮನನ್ನು ಯಾವಾಗ ನೆನೆಯುತ್ತಾರೆ? (Same as 4th question)
ಉ: ಹಾವಿನಿಂದ ಕಚ್ಚಿಸಿಕೊಂಡವರನ್ನು ಮಾತನಾಡಿಸಿದರೆ ಅವನು ಮಾತನಾಡಬಲ್ಲ, ಭೂತ ಹಿಡಿದುಕೊಂಡವರನ್ನು ಮಾತನಾಡಿಸಬಹುದು. ಆದರೆ ಸಿರಿವಂತಿಕೆಯ ಭೂತ ಹಿಡಿದವರನ್ನು ಮಾತನಾಡಿಸುವುದು ಬಲುಕಷ್ಟ. ಅದೇ ಸಿರಿವಂತರ ಮನೆಯಲ್ಲಿ ಬಡತನವೆಂಬ ಮಂತ್ರಗಾರ ಹೊಕ್ಕು ಬಿಟ್ಟರೆ ಕೂಡಲೇ ಮಾತನಾಡುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ. ಕೂಡಲ ಸಂಗಮದೇವನನ್ನು ನೆನೆಯುತ್ತಾರೆ ಎಂದು ವಚನದಲ್ಲಿ ಹೇಳಲಾಗಿದೆ.

೮. ಬಸವಣ್ಣನವರ ಪ್ರಕಾರ ನಾವು ಯಾವ ರೀತಿಯ ವರ್ತನೆಗಳನ್ನು ಬೆಳೆಸಿಕೊಳ್ಳಬೇಕು? (Same as 2nd question)

ಉ: ಬಸವಣ್ಣನವರ ಪ್ರಕಾರ ಪರರ ವಸ್ತುಗಳನ್ನು ಕಳ್ಳತನ ಮಾಡಬಾರದು, ಯಾರ ಪ್ರಾಣಹಿಂಸೆ ಮಾಡಬಾರದು. ಸುಳ್ಳನ್ನು ಹೇಳಬಾರದು, ಸಿಟ್ಟು ಮಾಡಬಾರದು, ಅಸಹ್ಯ ಪಡಬಾರದು. ಹಾಗೆಯೇ ತನ್ನ ಆತ್ಮಪ್ರಶಂಸೆ ಮಾಡಬಾರದು, ಇತರರ ನಿಂದನೆ ಮಾಡಬಾರದು. ಈ ರೀತಿ ನೀತಿಯಲ್ಲಿ ಬದುಕುವವರ ಅಂತರಂಗ-ಬಹಿರಂಗ ಎರಡೂ ಶುದ್ಧವಾಗಿರುತ್ತದೆ. ಹೀಗೆ ಬಸವಣ್ಣನವರ ಪ್ರಕಾರ ನಾವು ಈ ರೀತಿಯ ವರ್ತನೆಗಳನ್ನು ಬೆಳೆಸಿಕೊಳ್ಳಬೇಕು.

೯. ಬಸವಣ್ಣನವರು ಯಾರನ್ನೆಲ್ಲ ನುಡಿಸಬಹುದು? ಯಾರನ್ನೆಲ್ಲ ನುಡಿಸಬಾರದೆನ್ನುವ ಕಾರಣವೇನು? (Same as 4th question)

ಉ: ಹಾವಿನಿಂದ ಕಚ್ಚಿಸಿಕೊಂಡವರನ್ನು ಮಾತನಾಡಿಸಿದರೆ ಅವನು ಮಾತನಾಡಬಲ್ಲ, ಭೂತ ಹಿಡಿದುಕೊಂಡವರನ್ನು ಮಾತನಾಡಿಸಬಹುದು. ಆದರೆ ಸಿರಿವಂತಿಕೆಯ ಭೂತ ಹಿಡಿದವರನ್ನು ಮಾತನಾಡಿಸುವುದು ಬಲುಕಷ್ಟ. ಅದೇ ಸಿರಿವಂತರ ಮನೆಯಲ್ಲಿ ಬಡತನವೆಂಬ ಮಂತ್ರಗಾರ ಹೊಕ್ಕು ಬಿಟ್ಟರೆ ಕೂಡಲೇ ಮಾತನಾಡುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ. ಕೂಡಲ ಸಂಗಮದೇವನನ್ನು ನೆನೆಯುತ್ತಾರೆ ಎಂದು ವಚನದಲ್ಲಿ ಹೇಳಲಾಗಿದೆ.

ಸಮಾನಾರ್ಥಕ ಪದಗಳು

ಕ್ರಾಂತಿ = ಬದಲಾವಣೆ, ರೂಪಾಂತರ (Revolution )
ಎಲ್ಲಾ = ಸಕಲ, ಸಮಸ್ತ, ಪೂರ್ಣ (All )
ಚಟುವಟಿಕೆ = ಕೆಲಸ, ಕಾರ್ಯ (Activity)
ಕೇಂದ್ರ = ಮಧ್ಯಭಾಗ, ಪ್ರಮುಖ ಸ್ಥಾನ (Center)
ಪ್ರಪಂಚ = ಜಗತ್ತು, ಲೋಕ, ಇಳೆ (World )
ಶ್ರಮಿಸು = ಕಷ್ಟಪಡು, ದುಡಿ (To work hard)
ಸಮಾಜ = ಸಂಘ, ಸಮುದಾಯ (Society )
ನುಡಿ = ಮಾತು, ಭಾಷೆ, ವಚನ (Word / Speech / To speak)
ದಯೆ = ಕರುಣೆ, ಅನುಕಂಪ, ಕೃಪೆ (Kindness )
ಬೇಕು = ಅಪೇಕ್ಷೆ, ಅಗತ್ಯ (Want )
ಸಕಲ = ಎಲ್ಲಾ, ಸಮಸ್ತ (All )
ಹುಸಿ = ಸುಳ್ಳು, ಅಸತ್ಯ (Lie )
ತನು = ದೇಹ, ಕಾಯ, ಶರೀರ (Body)
ಮನ = ಅಂತರಂಗ, ಚಿತ್ತ (Mind / Soul )
ಲೋಕ = ಜಗತ್ತು, ಪ್ರಪಂಚ (World )

ಅರ್ಥಗಳು (Meanings)

ತಿಂದ = – Ate (To eat / consume)
ಹೊಡೆ = (To beat )
ಬಡತನ = Poverty

Click here to download Vachanagalu Basavanna grade IX Sahitya Sangama

2 Responses