Jyotiye agu jagakela kannada poem is from janapadaru. Jyotiye agu jagakela grade 8 poem is about life lessons. Folk people (Janapadaru) are the lifeline of our land. They live in close harmony with nature. Through songs, dance, and art, they preserve their culture. Farming, handicrafts, and folk music are part of their lives. Their simple lifestyle reflects true tradition and heritage. jyotiyagu jagakella means the mother explaining the child life lessons and explaining the child to become the light to the world.

ಜ್ಯೋತಿಯೇ ಆಗು ಜಗಕೆಲ್ಲ

ಆಚಾರಕರಸಾಗು ನೀತಿಗೆ ಪ್ರಭುವಾಗು
ಮಾತಿನಲ್ಲಿ ಚೂಡಾಮಣಿಯಾಗು ನನಕಂದ
ಜ್ಯೋತಿಯೇ ಆಗು ಜಗಕೆಲ್ಲ

ಸಂಸಾರವೆಂಬುದು ಸಾಗರ ಹೊಳೆಯಪ್ಪ
ಈಸಬಲ್ಲವನಿಗೆ ಎದೆಯುದ್ಧ ನನ ಕಂದ
ಓದುಬಲ್ಲವನಿಗೆ ಕೈಲಾಸ

ಬಂಗಾರದ ಬಳೆ ತೊಟ್ಟು ಬೈಬ್ಯಾಡ ಬಡವರ
ಬಂಗಾರ ನಿನಗೆ ಸ್ಥಿರವಲ್ಲ ಮದ್ದಿನದ
ಹೊತ್ತು ಹೊರಳೋದು ತಡವಲ್ಲ

ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸಬೇಡ
ಎಷ್ಟುಂಡರೆಂದು ಅನಬೇಡ ಇವು ಮೂರು
ಮುಟ್ಟುವದು ಶಿವನ ಬಳಿಯಲ್ಲಿ

ಅಕ್ಕ ಇದ್ದರೆ ಭಾವ ರೊಕ್ಕ ಇದ್ದರೆ ಸಂತೆ
ಮಕ್ಕಳಿದ್ದರೆ ಮನಿಮಾರು ಹಡೆದವ್ವ
ನೀ ಇದ್ದರೆ ನಮಗ ಸಾಂರಾಜ್ಯ

ಉಂಡಾಗ ಉಡುವಾಗ ಜನವೆಲ್ಲ ನೆಂಟರು
ಅಡವಿಯ ಸೊಪ್ಪು ತಲೆಯಲ್ಲಿ ತಪ್ಪಾಗ
ಒಡಹುಟ್ಟಿದಣ್ಣ ಮುಖ ನೋಡ

I. ಪದಗಳ ಅರ್ಥ: (Word Meaning)

ಅಡವಿ = ಕಾಡು, ಅರಣ್ಯ, ವನ, ಬನ
ಆಚಾರ = ಒಳ್ಳೆಯ ನಡತೆ, ಸಂಪ್ರದಾಯ
ಕುದಿ = ಸಂಕಟಪಡು, ಕೋಪದಿಂದ ಕೆರಳು
ಚೂಡಾಮಣಿ = ರತ್ನದ ಆಭರಣ, ಶ್ರೇಷ್ಠವಾದದು
ಪ್ರಭು = ರಾಜ, ಯಜಮಾನ, ಒಡೆಯ
ಭಾವ = ಸಹೋದರಿಯ ಗಂಡ
ರೊಕ್ಕ = ಹಣ, ರೂಪಾಯಿ
ಸಂಸಾರ = ಕುಟುಂಬ, ಲೌಕಿಕ ಜೀವನ
ಸಾಗರ = ಸಮುದ್ರ ,ಕಡಲು
ಹಡೆದವ್ವ = ಜನ್ಮ ನೀಡಿದ ತಾಯಿ
ಹೊರಳು = ಉರುಳು, ಬದಲಾಗು
ಅರಸ = ರಾಜ, ಶ್ರೇಷ್ಠ
ಇಟ್ಟು= ಇಡುವದು, ಊಟಕ್ಕೆ ನೀಡಿ
ಕೈಲಾಸ = ಶಿವನ ನೆಲೆ
ಜ್ಯೋತಿ = ಬೆಳಕು, ದೀಪ
ಬಂಗಾರ = ಚಿನ್ನ, ಹೇಮ, ಕನಕ
ಮದ್ದಿನ = ಮಧ್ಯಾಹ್ನ, ನಡು ಹಗಲು
ಸಂತೆ = ನಿಯಮಿತ ಸ್ಥಳ ಹಾಗೂ ದಿನದಲ್ಲಿ ಕೊಂಡುಕೊಳ್ಳುವುದಕ್ಕೆ ಜನ ಸೇರುವದು
ಸಾಂರಾಜ್ಯ = ಸಾಮ್ರಾಜ್ಯ, ರಾಜನ ಆಡಳಿತಕ್ಕೆ ಒಳಪಟ್ಟ ವಿಸ್ತಾರವಾದ ರಾಜ್ಯ,
ಹಂಗಿಸು = ಹೀಯಾಳಿಸು, ವ್ಯಂಗ್ಯ ಮಾಡು
ಹೊತ್ತು = ಸಮಯ, ಕಾಲ

II. ಪ್ರಶ್ನೆಗಳು (Questions)

ಅ) ಕೆಳಗೆ ನೀಡಿರುವ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ. (Match the following)

ಅ ಪಟ್ಟಿ                                 ಬ ಪಟ್ಟಿ
೧) ಅಕ್ಕ                                  ಅ) ಸಾಗರ                     ಭಾವ       
೨) ಮಕ್ಕಳು                            ಆ) ಸಂತೆ                       ಮನೆಮಾರು
೩) ರೊಕ್ಕ                               ಇ) ತಂದೆ                       ಸಂತೆ
೪) ಸಂಸಾರ                           ಈ) ಭಾವ                      ಸಾಗರ
                                             ಉ) ಮನೆಮಾರು

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧) ತಾಯಿ ತನ್ನ ಮಗನು ಯಾವ ಗುಣಗಳಿಗೆ ಒಡೆಯನಾಗಬೇಕೆಂದು ಬಯಸುತ್ತಾಳೆ?
ಉ: ತಾಯಿ ತನ್ನ ಮಗನು ಆಚಾರಕ್ಕೆ ಅರಸನಾಗಬೇಕು, ನೀತಿಗೆ ಪ್ರಭುವಾಗಬೇಕೆಂದು ಬಯಸುತ್ತಾಳೆ.

೨) ಜನಪದರು ಸಂಸಾರವನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಉ: ಜನಪದರು ಸಂಸಾರವನ್ನು ಸಾಗರಕ್ಕೆ ಹೋಲಿಸಿದ್ದಾರೆ.

೩) ಈಸ ಬಲ್ಲವನಿಗೆ ಸಂಸಾರವೆಂಬ ಸಾಗರ ಹೇಗೆ ಕಾಣಿಸುತ್ತದೆ?
ಉ: ಈಸಬಲ್ಲವನಿಗೆ ಸಂಸಾರವೆಂಬ ಸಾಗರ ಎದೆಯುದ್ಧದ ನೀರಿರುವ ಹೊಳೆಯಂತೆ ಗೋಚರಿಸುತ್ತದೆ.

೪) ಸಂಸಾರವೆಂಬ ಸಾಗರದಲ್ಲಿ ಈಸುವದು ಎಂದರೇನು?
ಉ: ಸಂಸಾರವೆಂಬ ಸಾಗರದಲ್ಲಿ ಈಸುವದು ಎಂದರೆ ಜೀವನದ ಕಷ್ಟ ಸುಖಗಳನ್ನು ಧೈರ್ಯವಾಗಿ ಎದುರಿಸುವದು.

೫) ಜನಪದ ಪ್ರಕಾರ ಜನರೆಲ್ಲ ನೆಂಟರಾಗುವುದು ಯಾವಾಗ?
ಉ: ಜನಪದರ ಪ್ರಕಾರ ಉಂಟಾಗ ಉಡುವಾಗ ಜನರೆಲ್ಲ ನೆಂಟರಾಗುತ್ತಾರೆ.

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer in three – four sentences)

೧) ತಾಯಿ ತನ್ನ ಮಗುವಿನಲ್ಲಿ ಒಳ್ಳೆಯ ಗುಣಗಳು ಇರಬೇಕೆಂದು ಏಕೆ ಬಯಸುತ್ತಾಳೆ?
ಉ: ತಾಯಿ ತನ್ನ ಮಗು ಆಚಾರದಲ್ಲಿ ಅರಸನಾಗಿ ನೀತಿಯಲ್ಲಿ ಪ್ರಭುವಾಗಿ ಜಗಕ್ಕೆಲ್ಲ ಜ್ಯೋತಿಯಾಗಬೇಕೆಂದು ಬಯಸುತ್ತಾಳೆ.

೨) ಓದಿನ ಮಹತ್ವವನ್ನು ಜನಪದರು ಯಾವ ರೀತಿ ತಿಳಿಸಿದ್ದಾರೆ?
ಉ: ಸಂಸಾರ ಸಾಗರ ಈಸಬಲ್ಲವನಿಗೆ ಎದೆಯುದ್ಧ ನೀರಿರುವ ನದಿಯಂತೆಯಾದರೆ, ಓದುಬಲ್ಲವನಿಗೆ ನೆಮ್ಮದಿ ನೀಡುವ ಕೈಲಾಸದಂತೆ ಎಂದು ಜನಪದರು ತಿಳಿಸಿದ್ದಾರೆ.

೩) ʼಬಂಗಾರದ ಬಳೆ ತೊಟ್ಟು ಬೈಬೇಡ ಬಡವರʼ – ಎನ್ನುವ ಮಾತಿನಲ್ಲಿ ಜನಪದ ಯಾವ ಭಾವನೆಗಳಿವೆ?
ಉ: ʼಬಂಗಾರದ ಬಳೆ ತೊಟ್ಟು ಬೈಬೇಡ ಬಡವರʼ ಎಂದರೆ ಜನಪದರು ಸಿರಿವಂತಿಕೆಯಲ್ಲಿ ಅಹಂಕಾರದಿಂದ ಬಡವರನ್ನು ಬಯ್ಯಬೇಡ. ಸಿರಿತನ ಸ್ಥಿರವಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

೪) ಶ್ರೀಮಂತಿಕೆಯ ದರ್ಪವನ್ನು ಬಡವರ ಮೇಲೆ ಏಕೆ ತೋರಬಾರದು?
ಉ: ಶ್ರೀಮಂತಿಕೆಯ ದರ್ಪವನ್ನು ಬಡವರ ಮೇಲೆ ತೋರಬಾರದು. ಶ್ರೀಮಂತಿಕೆ ಸ್ಥಿರವಲ್ಲ ಅದು ಕಳೆದು ಹೋಗಲು ಬಹಳ ಸಮಯ ಬೇಕಾಗಿಲ್ಲ.

೫) ಭಾವ, ಸಂತೆ ಹಾಗೂ ಮನೆ, ಇವುಗಳ ಇರುವಿಕೆ ಸಾಧ್ಯವಾಗುವುದು ಯಾವಾಗ?
ಉ: ಅಕ್ಕನಿದ್ದರೆ ಭಾವ, ರೊಕ್ಕವಿದ್ದರೆ ಸಂತೆ ಹಾಗೂ ಮಕ್ಕಳಿದ್ದರೆ ಮಾತ್ರ ಮನೆಮಾರುಗಳು ಇರುವುದಕ್ಕೆ ಸಾಧ್ಯವಾಗುತ್ತದೆ.

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer in eight – ten sentences)

೧) ಸುಖಕ್ಕೆ ಬರುವ ಜನ ಕಷ್ಟಕ್ಕೆಬಾರರು ಎನ್ನುವ ಮಾತು ಜನಪದರ ಹಾಡಿನಲ್ಲಿ ಹೇಗೆ ವ್ಯಕ್ತವಾಗಿದೆ?
ಉ: ಉಂಡಾಗ ಉಡುವಾಗ ಜನವೆಲ್ಲ ನೆಂಟರು, ಅಂದರೆ ನಮ್ಮಲ್ಲಿ ಊಟ, ಬಟ್ಟೆ ಇದ್ದಾಗ ಎಲ್ಲಾ ನೆಂಟರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಅಡವಿಯ ಸೊಪ್ಪು ತಲೆಯಲ್ಲಿ ತಪ್ಪಾಗ ಒಡಹುಟ್ಟಿದ ಅಣ್ಣ ಮುಖ ನೋಡ,  ಅಂದರೆ ನಾವು ಅಡವಿಯಿಂದ ಸೊಪ್ಪು ತಂದು ಬದುಕುವ ಪರಿಸ್ಥಿತಿ ಬಂದಾಗ ಒಡಹುಟ್ಟಿದ ಅಣ್ಣನು ನಮ್ಮನ್ನು ಮಾತನಾಡಿಸುವುದಿಲ್ಲ. ನಮ್ಮ ಮುಖವನ್ನು ಯಾರೂ ನೋಡಲು ಬಯಸುವುದಿಲ್ಲ. ಹೀಗೆ ಸುಖಕ್ಕೆ ಬರುವ ಜನ ಕಷ್ಟಕ್ಕೆಬಾರರು ಎನ್ನುವ ಮಾತು ಜನಪದರ ಹಾಡಿನಲ್ಲಿ ವ್ಯಕ್ತವಾಗಿದೆ.

೨) ಜ್ಯೋತಿಯೇ ಆಗು ಜಗಕೆಲ್ಲ ತ್ರಿಪದಿಗಳಲ್ಲಿ ವ್ಯಕ್ತವಾಗಿರುವ ಜನಪದ ಭಾವನೆಗಳೇನು?
ಉ: ತಾಯಿ ತನ್ನ ಮಗು ಆಚಾರದಲ್ಲಿ ಅರಸನಾಗಿ, ನೀತಿಯಲ್ಲಿ ಪ್ರಭುವಾಗಿ ಜಗಕ್ಕೆಲ್ಲ ಜ್ಯೋತಿಯಾಗು ಎಂದು ಜನಪದ ತಾಯಿ ಹೇಳುತ್ತಾಳೆ. ಸಂಸಾರ ಸಾಗರ ಈಸಬಲ್ಲವನಿಗೆ ಎದೆಯುದ್ಧ ನೀರಿರುವ ನದಿಯಂತೆಯಾದರೆ, ಓದುಬಲ್ಲವನಿಗೆ ನೆಮ್ಮದಿ ನೀಡುವ ಕೈಲಾಸದಂತೆ. ಬಂಗಾರದ ಬಳೆ ತೊಟ್ಟು ಬೈಯಬೇಡ ಬಡವರ ಎಂದರೆ ಸಿರಿವಂತಿಕೆಯಲ್ಲಿ ಅಹಂಕಾರದಿಂದ ಬಡವರನ್ನು ಬಯ್ಯಬೇಡ. ಸಿರಿತನ ಸ್ಥಿರವಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಕೊಟ್ಟು ಕುದಿಯಲು ಬೇಡ. ಇಟ್ಟು ಹಂಗಿಸಬೇಡ. ಎಷ್ಟು ಉಂಡರೆಂದು ಹೇಳಬೇಡ. ಈ ಮೂರು ಗುಣಗಳು ಶಿವನಿಗೆ ಒಪ್ಪಿಗೆಯಾಗುವದಿಲ್ಲ ಎಂದಿದ್ದಾರೆ. ಅಕ್ಕನಿದ್ದರೆ ಭಾವ, ರೊಕ್ಕವಿದ್ದರೆ ಸಂತೆ ಹಾಗೂ ಮಕ್ಕಳಿದ್ದರೆ ಮಾತ್ರ ಮನೆಮಾರುಗಳು ಇರುವುದಕ್ಕೆ ಸಾಧ್ಯವಾಗುತ್ತದೆ. ಇವು ಜ್ಯೋತಿಯೇ ಆಗು ಜಗಕೆಲ್ಲ ತ್ರಿಪದಿಗಳಲ್ಲಿ ವ್ಯಕ್ತವಾಗಿರುವ ಜನಪದ ಭಾವನೆಗಳು.

ಉ) ಸಂದರ್ಭದೊಡನೆ ವಿವರಿಸಿರಿ. (Explain the context in detail)

೧) “ಜ್ಯೋತಿಯೇ ಆಗು ಜಗಕೆಲ್ಲ”
ಆಯ್ಕೆ: ಈ ವಾಕ್ಯವನ್ನು ಜನಪದ ತ್ರಿಪದಿಗಳಿಂದ ಆರಿಸಿಕೊಳ್ಳಲಾಗಿದೆ .
ಈ ಮಾತನ್ನು ತಾಯಿ ಮಗುವಿಗೆ ಹೇಳುತ್ತಾಳೆ.
ಸಂದರ್ಭ: ಜನಪದ ತಾಯಿ ತನ್ನ ಮಗುವಿಗೆ ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾಗಿ, ಮಾತಿನಲ್ಲಿ ಚೂಡಾಮಣಿಯಾಗಿ ಜಗತ್ತನ್ನೆಲ್ಲ ಬೆಳಗುವ ಜ್ಯೋತಿಯಾಗು ಎಂದು ಹಾರೈಸುವ ಸಂದರ್ಭದಲ್ಲಿ ಹೇಳುತ್ತಾಳೆ.

೨) “ಬಂಗಾರ ನಿನಗೆ ಸ್ಥಿರವಲ್ಲ”
ಆಯ್ಕೆ: ಈ ವಾಕ್ಯವನ್ನು ಜನಪದ ತ್ರಿಪದಿಗಳಿಂದ ಆರಿಸಿಕೊಳ್ಳಲಾಗಿದೆ .
ಈ ಮಾತನ್ನು ಜನಪದರು ಹೇಳುತ್ತಾರೆ.
ಸಂದರ್ಭ: ಬಂಗಾರದ ಬಳೆ ತೊಟ್ಟು ಬಡವರನ್ನು ಬೈಯಬೇಡ, ಬಂಗಾರ ಸ್ಥಿರವಲ್ಲ ಎಂದು ಹೇಳುವ ಸಂದರ್ಭದಲ್ಲಿ ಹೇಳಿದ್ದಾರೆ.

೩) “ಇಟ್ಟು ಹಂಗಿಸಬೇಡ”
ಆಯ್ಕೆ: ಈ ವಾಕ್ಯವನ್ನು ಜನಪದ ತ್ರಿಪದಿಗಳಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಜನಪದರು ಹೇಳುತ್ತಾರೆ.
ಸಂದರ್ಭ: ಕೊಟ್ಟು ಕುದಿಯಲು ಬೇಡ. ಇಟ್ಟು ಹಂಗಿಸಬೇಡ. ಎಷ್ಟು ಉಂಡರೆಂದು ಹೇಳಬೇಡ. ಈ ಮೂರು ಗುಣಗಳು ಶಿವನಿಗೆ ಒಪ್ಪಿಗೆಯಾಗುವದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಹೇಳುತ್ತಾರೆ.

೪) “ಒಡಹುಟ್ಟಿದ ಅಣ್ಣ ಮುಖ ನೋಡ”
ಆಯ್ಕೆ: ಈ ವಾಕ್ಯವನ್ನು ಜನಪದ ತ್ರಿಪದಿಗಳಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಜನಪದರು ಹೇಳುತ್ತಾರೆ.
ಸಂದರ್ಭ: ನಮ್ಮಲ್ಲಿ ಊಟ, ಬಟ್ಟೆ ಇದ್ದಾಗ ಎಲ್ಲಾ ನೆಂಟರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ನಮಗೆ ಬಡತನ ಬಂದರೆ ಅಣ್ಣನು ನಮ್ಮನ್ನು ಮಾತನಾಡಿಸುವುದಿಲ್ಲ, ನಮ್ಮ ಮುಖವನ್ನು ನೋಡುವಿದಿಲ್ಲ ಎಂದು ಹೇಳುತ್ತಾರೆ.

III. ಭಾಷಾಭ್ಯಾಸ

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ. (Write the synonyms)

ಅರಸ – ರಾಯ, ರಾಜ
ಕಂದ – ಮಗು, ಕೂಸು
ಹಂಗಿಸು – ಹೀಯಾಳಿಸು, ವ್ಯಂಗ್ಯ ಮಾಡು
ಬಂಗಾರ – ಚಿನ್ನ, ಕನಕ
ಅಡವಿ – ಬನ, ವನ
ಸಾಗರ – ಸಮುದ್ರ, ಕಡಲು

ಆ) ಕೆಳಗಿನ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ. (Write the textual form)

ಬೈಬೇಡ – ಬೈಯಬೇಡ
ಹೊರಳೋದು – ಹೊರಳುವದು
ಸಾಂರಾಜ್ಯ – ಸಾಮ್ರಾಜ್ಯ
ನಮಗ – ನಮಗೆ

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)

ಚೂಡಾಮಣಿ = ಎಲ್ಲಾ ತಾಯಂದಿರು ತಮ್ಮ ಮಕ್ಕಳು ಚೂಡಾಮಣಿಯಾಗಲೆಂದು ಬಯಸುತ್ತಾರೆ.
ಹಂಗಿಸು = ಬಡವರನ್ನು ಹಂಗಿಸಬೇಡ.
ನೆಂಟರು = ನಮ್ಮ ಮನೆಗೆ ನೆಂಟರು ಬಂದರು.
ಸ್ಥಿರ = ಜೀವನದಲ್ಲಿ ಸಿರಿವಂತಿಕೆ ಸ್ಥಿರವಲ್ಲ.

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ. (Write the opposite words)

ಪ್ರಭು X  ಸೇವಕ                    ಸ್ಥಿರ X ಅಸ್ಥಿರ               ನೀತಿ X ಅನೀತಿ
ಆಚಾರ X ಅನಾಚಾರ           ಬಡವ X ಬಲ್ಲಿದ

ಉ) ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ. (Split the word)

ಜಗಕೆಲ್ಲ =  ಜಗಕೆ + ಎಲ್ಲ
ಸಂಸಾರವೆಂಬುದು = ಸಂಸಾರವು +ಎಂಬುದು
ಎದೆಯುದ್ಧ = ಎದೆ + ಯುದ್ಧ
ಹಡೆದವ್ವ = ಹಡೆದ + ಅವ್ವ
ಎಷ್ಟುಂಡರೆಂದು = ಎಷ್ಟು + ಉಂಡರೆಂದು
ಮಕ್ಕಳಿದ್ದರೆ = ಮಕ್ಕಳು +ಇದ್ದರೆ
ಒಡಹುಟ್ಟಿದಣ್ಣ = ಒಡಹುಟ್ಟಿದ +ಅಣ್ಣ

ಊ) ಕೆಳಗಿನ ಪದ್ಯದ ಭಾವಾರ್ಥ ಬರೆಯಿರಿ. (Write the meaning)

ಉಂಡಾಗ ಉಡುವಾಗ ಜನವೆಲ್ಲ ನೆಂಟರು
ಅಡವಿಯ ಸೊಪ್ಪು ತಲೆಯಲ್ಲಿ ತಪ್ಪಾಗ
ಒಡಹುಟ್ಟಿದ ಅಣ್ಣ ಮುಖ ನೋಡ

ಉ: ಈ ತ್ರಿಪದಿಯು ಜನಪದ ಗೀತೆಗಳಲ್ಲಿ ಒಂದು. ಉಂಡಾಗ ಉಡುವಾಗ ಜನವೆಲ್ಲ ನೆಂಟರು, ಅಂದರೆ ನಮ್ಮಲ್ಲಿ ಊಟ, ಬಟ್ಟೆ ಇದ್ದಾಗ ಎಲ್ಲಾ ನೆಂಟರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಅಡವಿಯ ಸೊಪ್ಪು ತಲೆಯಲ್ಲಿ ತಪ್ಪಾಗ ಒಡಹುಟ್ಟಿದ ಅಣ್ಣ ಮುಖ ನೋಡ,  ಅಂದರೆ ನಾವು ಅಡವಿಯಿಂದ ಸೊಪ್ಪು ತಂದು ಬದುಕುವ ಪರಿಸ್ಥಿತಿ ಬಂದಾಗ ಒಡಹುಟ್ಟಿದ ಅಣ್ಣನು ನಮ್ಮನ್ನು ಮಾತನಾಡಿಸುವುದಿಲ್ಲ. ನಮ್ಮ ಮುಖವನ್ನು ಯಾರೂ ನೋಡಲು ಬಯಸುವುದಿಲ್ಲ ಎಂಬುದು ಇಲ್ಲಿಯ ಭಾವಾರ್ಥ

ಋ) ಕೆಳಗೆ ನೀಡಿರುವ ಸಜಾತಿಯ ವಿಜಾತಿಯ ಒತ್ತಕ್ಷರ ಪದಗಳನ್ನು ವಿಂಗಡಿಸಿ ಬರೆಯಿರಿ. (Separate Sajatiya and Vijatiya ottakshara)

ಪ್ರಭು, ಜ್ಯೋತಿ, ಜಗಕೆಲ್ಲ, ಹೊತ್ತು, ಕೊಟ್ಟು, ರೊಕ್ಕ, ರಾಜ್ಯ, ಹುಟ್ಟಿದ, ಅಣ್ಣ, ಸೊಪ್ಪು, ಸ್ಥಿರ, ಬ್ಯಾಡ

ಸಜಾತಿಯವಿಜಾತಿಯ
ಜಗಕೆಲ್ಲಪ್ರಭು
ಹೊತ್ತುಜ್ಯೋತಿ
ಕೊಟ್ಟುರಾಜ್ಯ
ರೊಕ್ಕಸ್ಥಿರ
ಹುಟ್ಟಿದಬ್ಯಾಡ
ಅಣ್ಣ 
ಸೊಪ್ಪು 

Click here to download jotiyagu jagakela