Kolala Jogi kannada lesson grade VII is about a begger managing rats menace. Kolala Jogi class grade 4 kannada chapter.

In the small village of Iliyuru, life had become unbearable because the entire place was overrun by rats. They were everywhere—in kitchens, cupboards, rooftops, and even door frames. Whatever the villagers cooked was eaten by the rats within minutes. They chewed through roofs, doors, and food grains, leaving the people helpless and frustrated.

One day, a shabby-looking beggar named Kodala Jogi arrived in the village. He went to the village leader and confidently promised that he could free Iliyuru from the rats, but only if he was given a generous reward. Desperate for a solution, the leader agreed.

Kodala Jogi took out his flute and began to play a strange, enchanting tune. Instantly, rats from every corner of the village rushed out, mesmerized by the music. He walked towards the river while playing, and the rats followed him blindly into the water, where they all drowned.

However, when Kodala Jogi returned for his reward, the villagers refused to pay him, saying he had done nothing but play a simple tune. Angered, he played another melody—this time causing people to dance uncontrollably. Children fell, and panic spread. Realizing their mistake, the leader apologized and promised the reward. Only then did Kodala Jogi stop playing, restoring peace to Iliyuru.

ಕೊಳಲ ಜೋಗಿ

ಅ. ಪದಗಳ ಅರ್ಥ ಬರೆಯಿರಿ. (Write the word meanings)

ಅರಿವೆ = ಬಟ್ಟೆ, ವಸ್ತ್ರ
ಅವಾಂತರ = ಗಡಿಬಿಡಿ
ಇನಾಮು = ಬಹುಮಾನ
ಕಡಗ = ಕೈಗೆ ಹಾಕಿಕೊಳ್ಳುವ ಬಳೆ
ಚಾವಡಿ = ಹಳ್ಳಿಯಲ್ಲಿ ಸಭೆ ಸೇರುವ ಸ್ಥಳ
ತಿರುಕ = ಭಿಕ್ಷುಕ
ಜೋಗಿ = ಯೋಗಿ, ತಪಸ್ವಿ, ಬೈರಾಗಿ
ತೊಗಲು = ಚರ್ಮ
ಬಿಲ = ಡೊಗರು
ಮಾಡು = ಛಾವಣಿ
ಮೊರೆ = ಬೇಡು
ವ್ಯಸನ = ಚಿಂತೆ, ದುಃಖ
ಅರೆವಾಸಿ = ಅರ್ಧದಷ್ಟು
ಆಳು = ಸೇವಕ
ಎವೆಯಿಕ್ಕದೆ = ಕಣ್ಣು ಮಿಟುಕಿಸದೆ ನೋಡುವದು
ಕಾಟ = ತೊಂದರೆ
ಜಗಲಿ = ಕಟ್ಟೆ, ವೇದಿಕೆ
ತಟಸ್ಥ = ಚಲನೆ ಇಲ್ಲದಿರುವುದು
ತಿರುಪೆ = ಭಿಕ್ಷೆ, ಯಾಚನೆ
ನೆಲುವು = ಪಾತ್ರೆಗಳನ್ನು ಇಡುವುದಕ್ಕೆ ಇಳಿ ಬಿಡುವ ಹಗ್ಗದ ಜಾಳಿಗೆ
ಮಂಕು = ಮಬ್ಬು, ಕಾಂತಿ ಇಲ್ಲದಿರುವಿಕೆ
ಮೊನೆ = ತುದಿ, ಚೂಪಾದ
ವಂತಿಗೆ = ಚಂದಾ ಹಣ
ಸರಿಗೆ = ಲೋಹದ ತಂತಿ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ಇಲಿಗಳು ಹಾಸಿಗೆಯನ್ನು ಯಾವ ರೀತಿ ಹಾಳು ಮಾಡಿದವು?
ಉ: ಇಲಿಗಳು ಹಾಸಿಗೆಯನ್ನು ಕಡಿದು ಅವುಗಳ ಒಳಗಿನ ಹತ್ತಿಯನ್ನು ತೆಗೆದು ಹಾಸಿಗೆಯನ್ನು ಹಾಳು ಮಾಡಿದವು.

೨. ದೇವಸ್ಥಾನದ ಉತ್ಸವಕ್ಕೆ ಹೊರಟವರಿಗೆ ಇಲಿಗಳು ಯಾವ ರೀತಿ ತೊಂದರೆ ಮಾಡಿದವು?
ಉ: ಇಲಿಗಳು ದೇವಸ್ಥಾನದ ಉತ್ಸವಕ್ಕೆ ಹೊರಟವರ ಜರಿ ಬಟ್ಟೆಗಳನ್ನು ಕಡಿದು ಕತ್ತರಿಸಿದವು.

೩. ಜೋಗಿಯ ಕೊಳಲರಾಗಕ್ಕೆ ಇಲಿಗಳು ಹೇಗೆ ಸಾಲುಗಟ್ಟಿ ಬಂದವು?
ಉ:ಜೋಗಿಯ ಕೊಳಲರಾಗಕ್ಕೆ ಇಲಿಗಳು ಒಂದು, ಎರಡು, ಹತ್ತು, ಸಾವಿರ, ಲಕ್ಷ ಹೀಗೆ ಸಾಲುಗಟ್ಟಿ ಅವನ ಸುತ್ತ ಬಂದು ಸೇರಿದವು.

೪. ಇಲಿಗಳ ಕಾಟ ತಪ್ಪಿಸಿದ ಜೋಗಿಯು ಊರ ಗೌಡನ ಬಳಿ ಬಂದು ಏನೆಂದು ಕೇಳಿದನು?
ಉ: ಇಲಿಗಳ ಕಾಟ ತಪ್ಪಿಸಿದ ಜೋಗಿಯು ಊರ ಗೌಡನ ಬಳಿ ಬಂದು ಇನಾಮು ಕೇಳಿದನು.

೫. ಕೊಳಲ ಜೋಗಿ ಕಥೆಯ ನೀತಿ ಏನು?
ಉ: ಕೊಟ್ಟ ಮಾತಿಗೆ ತಪ್ಪಬಾರದು ಎನ್ನುವುದು ಕೊಳಲ ಜೋಗಿ ಕಥೆಯ ನೀತಿ.

ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)

೧. ಅಡಿಗೆ ಮನೆಯಲ್ಲಿ ಇಲಿಗಳಿಂದ ಯಾವ ತೊಂದರೆಗಳಾಗುತ್ತಿದ್ದವು?
ಉ: ಅಡಿಗೆ ಮನೆಗಳಲ್ಲಿ ಇಲಿಗಳು ಸಾಲು ಸಾಲಾಗಿ ಬಂದು ತುಪ್ಪ , ಬೆಣ್ಣೆ, ಮೊಸರುಗಳನ್ನು ನೆಲಮಾಳಿಗೆಯಲ್ಲಿ ಇಟ್ಟರೂ ತಿಂದು ಬಿಡುತ್ತಿದ್ದವು. ಸಣ್ಣ ಮಕ್ಕಳು ಊಟಕ್ಕೆ ಕುಳಿತಾಗ ಒಂದು ತುತ್ತನ್ನು ಬಾಯಿಗೆ ಹಾಕಿ ಇನ್ನೊಂದು ತುತ್ತು ತೆಗೆದುಕೊಳ್ಳುವಷ್ಟರಲ್ಲಿ ಬಟ್ಟಲು ಬರಿದಾಗುತ್ತಿತ್ತು. ಅಡಿಗೆಯವನು ಅನ್ನದ ಪಾತ್ರ ತರುವಷ್ಟರಲ್ಲಿ ಇಲಿಗಳು ಪಾತ್ರೆಯನ್ನು ಮುತ್ತಿಕೊಂಡು ಖಾಲಿ ಮಾಡುತ್ತಿದ್ದವು.

೨. ಇಲಿಗಳಿಂದ ಹಾಳಾದ ಮನೆಯ ಮಾಡು, ಕಿಟಕಿ, ಬಾಗಿಲುಗಳು ಹೇಗೆ ಕಾಣುತ್ತಿದ್ದವು?
ಉ: ಇಲಿಗಳು ಮಾಡಿನ ಗಳಗಳನ್ನು ಕತ್ತರಿಸಿದ್ದವು. ಮಾಡುಗಳು ಕಳಚಿ ಬೀಳುವಂತೆ ಜೋಲುತ್ತಿದ್ದವು. ಕಿಟಕಿ, ಬಾಗಿಲುಗಳ ಕದಗಳನ್ನು ಇಲಿಗಳು ಕೊರೆದಿದ್ದರಿಂದ ಅವು ಬಲೆಗಳಂತೆ ಕಾಣುತ್ತಿದ್ದವು.

೩. ಇಲಿಗಳನ್ನು ಹಿಡಿಯಲು ಯಾವ ಯಾವ ಪ್ರಯತ್ನಗಳನ್ನು ಮಾಡಿದರು?
ಉ: ಇಲಿಗಳನ್ನು ಹಿಡಿಯಲು ಊರಿನವರು ಬೋನುಗಳನ್ನು ತರಿಸಿದರು. ಬೆಕ್ಕು ನಾಯಿಗಳನ್ನು ಸಾಕಿದರು.

೪. ಇಲಿಗಳ ಕಾಟ ತಪ್ಪಿಸಲು ಊರ ಗೌಡನು ಯಾವ ತೀರ್ಮಾನ ಕೈಗೊಂಡನು?
ಉ: ಇಲಿಗಳ ಕಾಟದಿಂದ ತಪ್ಪಿಸುವವರಿಗೆ ೨೦೦ ರೂಪಾಯಿಯ ಚಿನ್ನದ ಕಡಗವನ್ನು ಇನಾಮು ಕೊಡುವದಾಗಿ ಊರ ಗೌಡನು ಹೇಳಿದನು.

೫. ಜೋಗಿಯು ಯಾವ ರೀತಿಯ ಜೀವನ ನಡೆಸುತ್ತಿದ್ದನು?
ಉ: ಜೋಗಿಗೆ ಮನೆ ಮಾರು ಇರಲಿಲ್ಲ. ಹಗಲೆಲ್ಲ ತಿರುಪೆ ಎತ್ತುತ್ತಿದ್ದನು. ಒಂದು ಮರದ ನೆರಳಲ್ಲಿ ಅನ್ನ ಬೇಯಿಸಿ ಊಟ ಮಾಡುತ್ತಿದ್ದನು. ರಾತ್ರಿ ಮರದ ಕೆಳಗೆ ಮಲಗುತ್ತಿದ್ದನು. ಬೆಳಗ್ಗೆ ಎದ್ದು ಇನ್ನೊಂದು ಊರಿಗೆ ಹೋಗುತ್ತಿದ್ದನು.

೬. ಜೋಗಿಯ ಉಡುಗೆ ತೊಡುಗೆಗಳು ಹೇಗಿದ್ದವು?
ಉ: ಜೋಗಿಯ ಮೈಮೇಲೆ ಬಟ್ಟೆ, ಉಡಲಿಕ್ಕೆ ಅರಿವೆ ಇರಲಿಲ್ಲ. ಒಂದು ಹುಲಿಯ ತೊಗಲನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದನು. ಇನ್ನೊಂದನ್ನು ಹೆಗಲಿನ ಮೇಲೆ ಹೊದ್ದುಕೊಳ್ಳುತ್ತಿದ್ದನು.

೭. ಜೋಗಿಯ ಯಾವ ಗುಣ ಇಷ್ಟವಾಯಿತು? ಏಕೆ?
ಉ: ಜೋಗಿಯು ಹಣಕ್ಕೆ ಆಸೆ ಪಡಲಿಲ್ಲ. ತನಗೆ ಸೇರಬೇಕಾದ ಹಣದಿಂದ ಊರ ಹೊರಗಿನ ಗುಡಿಯನ್ನು ಸರಿಪಡಿಸಲು ಹೇಳಿದನು. ಮಾತಿಗೆ ತಪ್ಪಬಾರದೆಂದು ಬುದ್ಧಿ ಕಲಿಸಿದ ಅವನ ಗುಣ ನನಗೆ ಇಷ್ಟವಾಯಿತು.

ಈ. ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)

೧. ಇಲಿಯೂರಿನಲ್ಲಿ ಇಲಿಗಳ ಕಾಟ ಯಾವ ಯಾವ ರೀತಿ ಇತ್ತು?
ಉ: ಇಲಿಯೂರಿನಲ್ಲಿನ ಇಲಿಗಳು ಅಡುಗೆ ಮನೆಯಲ್ಲಿ ಇಟ್ಟಿರುವ ತುಪ್ಪ, ಬೆಣ್ಣೆ, ಮೊಸರುಗಳನ್ನು ತಿನ್ನುತ್ತಿದ್ದವು. ಸಣ್ಣ ಮಕ್ಕಳು ಊಟಕ್ಕೆ ಕುಳಿತರೆ ಒಂದು ತುತ್ತನ್ನು ಬಾಯಿಗೆ ಇಡುವಷ್ಟರಲ್ಲಿ ಬಟ್ಟಲಲ್ಲಿರುವ ಅನ್ನವನ್ನು ತಿನ್ನುತ್ತಿತ್ತು. ಪಲ್ಯ ಬಡಿಸಲಿಕ್ಕೆ ಬಂದ ಅಡಿಗೆಯವನು ಅನ್ನದ ಪಾತ್ರೆಯನ್ನು ತರುವಷ್ಟರಲ್ಲಿ ಖಾಲಿಯಾಗಿರುತ್ತಿತ್ತು. ಮನೆಯಲ್ಲಿನ ಆಳು ಹಾಸಿಗೆಯನ್ನು ಹಾಸಿ ಮಲಗುವ ಕೋಣೆಯ ಬಾಗಿಲು ಹಾಕುವಷ್ಟರಲ್ಲಿ ಹಾಸಿಗೆಯ ಬಟ್ಟೆಯನ್ನು ಕಡಿದು ಹತ್ತಿಯನ್ನು ಕೋಣೆಯಲ್ಲಿ ಚದುರಿ ಬಿಡುತ್ತಿದ್ದವು. ದೇವಸ್ಥಾನದ ಉತ್ಸವಕ್ಕೆ ಪೆಟ್ಟಿಗೆಯೊಳಗಿನ ಪಟ್ಟೆ ಮತ್ತು ಜರಿ ಬಟ್ಟೆಗಳನ್ನು ತೆಗೆದು ಧರಿಸಿಕೊಳ್ಳುವಷ್ಟರಲ್ಲಿ ಬಟ್ಟೆಗಳನ್ನು ಕತ್ತರಿಸಿ ಚೂರು ಚೂರಾಗಿ ಮಾಡುತ್ತಿದ್ದವು.
ರಾತ್ರಿ ಮಲಗಿದವರ ಕೈಕಾಲು ಚರ್ಮಗಳನ್ನು ಕಚ್ಚುತ್ತಿದ್ದವು. ಇಲಿಗಳು ಮಾಡಿನ ಗಳಗಳನ್ನು ಕತ್ತರಿಸಿದ್ದವು. ಮಾಡುಗಳು ಕಳಚಿ ಬೀಳುವಂತೆ ಜೋಲುತ್ತಿದ್ದವು. ಕಿಟಕಿ, ಬಾಗಿಲುಗಳ ಕದಗಳನ್ನು ಇಲಿಗಳು ಕೊರೆದಿದ್ದರಿಂದ ಅವು ಬಲೆಗಳಂತೆ ಕಾಣುತ್ತಿದ್ದವು.

೨. ಜೋಗಿಯು ಇಲಿಗಳನ್ನು ಯಾವ ರೀತಿ ನಾಶ ಮಾಡಿದನು?
ಉ: ಜೋಗಿಯು ಒಂದು ವಿಚಿತ್ರ ರೀತಿಯಿಂದ ಕೊಳಲನ್ನು ಬಾರಿಸಲು ತೊಡಗಿದನು. ಯಾರು ಆ ರಾಗವನ್ನು ಅದುವರೆಗೆ ಕೇಳಿರಲಿಲ್ಲ. ಆದರೆ ಅವನು ಬಾರಿಸುತ್ತಿದ್ದ ಹಾಗೆ ಇಲಿಗಳು ಒಂದು, ಎರಡು, ಹತ್ತು, ಇಪ್ಪತ್ತು, ಐವತ್ತು, ನೂರು, ಸಾವಿರ, ಲಕ್ಷ ಹೀಗೆ ಸಾಲು ಕಟ್ಟಿ ಅವನ ಸುತ್ತು ಬಂದು ಸೇರಿದವು. ಅಲ್ಲಿ ಕುಣಿದಾಡಿದವು. ಆಮೇಲೆ ಅವನು ಗೌಡನ ಅಂಗಳದಿಂದ ಬೀದಿಗೆ ಇಳಿದನು. ಅವನ ಕೊಳಲಿನ ಸ್ವರವನ್ನು ಕೇಳಿ ಎಲ್ಲಾ ಇಲಿಗಳು ಸೇರಿದವು.  ಹೀಗೆ ಬೀದಿಯ ಉದ್ದಕ್ಕೂ ಅವನು ಹೋಗುವ ಕಡೆಗಳಲ್ಲೆಲ್ಲ ಇಲಿಗಳು ಅವನ ಹಿಂದೆ ಬಂದವು. ಮನೆಯ ಮಾಡುಗಳಲ್ಲಿ, ಗೋಡೆ ಸಂದುಗಳಲ್ಲಿ, ಜಗಲಿಯ ಬಿಲಗಳಲ್ಲಿ, ಕತ್ತಲಾದ ಕೋಣೆಗಳಲ್ಲಿ ಎಲ್ಲಿಯೂ ಹಿಂದೆ ನಿಲ್ಲಲಿಲ್ಲ. ಜೋಗಿಯ ಕೊಳಲನುಡಿಗೆ ಅವನ ಹಿಂದೆ ಹಿಂಬಾಲಿಸಿದವು. ಸ್ವಲ್ಪ ದೂರದಲ್ಲಿರುವ ಹಳ್ಳದ ಕಡೆಗೆ ಕೊಳಲ ಜೋಗಿಯು ನಡೆದನು. ಅವನು ಕೊಳಲನ್ನು ಬಾರಿಸುತ್ತಾ ಹಳ್ಳದಲ್ಲಿ ಇಳಿದನು. ಹಾಗೆ ಚೆನ್ನಾಗಿ ತಿಂದ ಇಲಿಗಳು ಹಳ್ಳದಲ್ಲಿ ಇಳಿದು ಸತ್ತು ಹೋದವು. ಹೀಗೆ ಕೊಳಲ ಜೋಗಿಯು ಇಲಿಗಳನ್ನು ನಾಶ ಮಾಡಿದನು.

೩. ಜೋಗಿಗೆ ಇನಾಮು ಕೊಡಲು ತಿರಸ್ಕರಿಸಿದ ಊರ ಜನರಿಗೆ ಯಾವ ಗತಿ ಉಂಟಾಯಿತು?
ಉ: ಜೋಗಿಯು ಕೊಳಲಿನಿಂದ ಒಂದು ಸ್ವರವನ್ನು ನುಡಿಸತೊಡಗಿದನು. ಜನರು ತಟಸ್ಥರಾದರು. ಹೇಗೆ ಅವನು ನುಡಿಸುವ ಸ್ವರವು ಜೋರಾಯಿತೋ ಹಾಗೇ ಜನರು ಕುಣಿಯಲಾರಂಭಿಸಿದರು. ಮೊದಲು ಊರಿನ ಗೌಡ , ಆಮೇಲೆ ಮಹಿಳೆಯರು, ಪುರುಷರು, ಮಕ್ಕಳು ತಾಳ ಹಾಕಿ ಕುಣಿಯಲಾರಂಭಿಸಿದರು. ಹಾಡತೊಡಗಿದರು. ಗಂಟಲು ಒಣಗಿತು. ಕಾಲು ಸುಸ್ತಾಯಿತು. ಮಕ್ಕಳು ಕೆಳಗೆ ಬಿದ್ದರು. ಕೊನೆಗೆ ಊರ ಗೌಡನು ಸಾಕು ಮಾಡು ಮಾರಾಯ! ಎಂದು ಜೋಗಿಯನ್ನು ಬೇಡಿಕೊಂಡನು.

ಉ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ? (Who told whom)

೧. ಒಡೆಯಾ! ನನ್ನ ಕೆಲಸ ತೀರಿತು ನನ್ನ ಇನಾಮು ಕೊಡೋಣಾಗಲಿ.
ಉ: ಈ ಮಾತನ್ನು ಕೊಳಲ ಜೋಗಿಯು ಊರ ಗೌಡನಿಗೆ ಹೇಳಿದನು.

೨. ನಿನಗೆ ಹೊಟ್ಟೆ ತುಂಬಾ ಒಂದು ಊಟ ಸಿಕ್ಕಿದರೆ ಸಾಲದೆ?
ಉ: ಈ ಮಾತನ್ನು ಊರ ಗೌಡನು ಕೊಳಲ ಜೋಗಿಗೆ ಹೇಳಿದನು.

೩. ಸೈ , ಸೈ, ತಿರುಕನಿಗೆ ಅಷ್ಟೇ ಸಾಕು.
ಉ: ಈ ಮಾತನ್ನು ಊರ ಜನರು ಜೋಗಿಗೆ ಹೇಳಿದರು.

೪. ನಿನ್ನ ಕೊಳಲು ಸಾಕು ಮಾಡೋ ಮಹಾರಾಯ!
ಉ:ಈ ಮಾತನ್ನು ಊರ ಗೌಡನು ಕೊಳಲ ಜೋಗಿಗೆ ಹೇಳಿದನು.

೫. ಇನ್ನಾದರೂ ಆಡಿ ತಪ್ಪಬೇಡಿ.
ಉ: ಈ ಮಾತನ್ನು ಕೊಳಲ ಜೋಗಿಯು ಎಲ್ಲರಿಗೂ ಹೇಳಿದನು.

ಋ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentences)

೧. ಕನಿಕರ: ಭಿಕ್ಷುಕನನ್ನು ನೋಡಿ ಕನಿಕರ ಉಂಟಾಯಿತು.
೨. ಮೊರೆ: ಇಲಿಗಳ ಕಾಟಕ್ಕೆ ಜನರು ದೇವರಿಗೆ ಮೊರೆ ಹೋದರು.
೩. ಇಡು: ಅಮ್ಮ ಡಬ್ಬದಲ್ಲಿ ಚಪಾತಿ ಇಡಲು ಹೇಳಿದಳು.
೪. ಉತ್ಸವ: ನಮ್ಮ ಊರಿನ ಉತ್ಸವ ಚೆನ್ನಾಗಿತ್ತು.
೫. ನಿಶ್ಚಯಿಸಿ: ನಾನು ನಾಳೆ ಶಾಲೆಗೆ ಹೋಗಲು ನಿಶ್ಚಯಿಸಿದೆ.
೬. ಆವಾಂತರ: ಅವನು ದೊಡ್ಡ ಆವಾಂತರ ಮಾಡಿದನು.

ಎ. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opoosite words)

ಆಸೆ X ನಿರಾಸೆ               ಉಪಾಯ X ನಿರುಪಾಯ           ಬೆಳಕು X ಕತ್ತಲು
ರಾತ್ರಿ X ಹಗಲು             ಕಷ್ಟ X ಸುಖ

ಏ. ಕೆಳಗೆ ನೀಡಲಾಗಿರುವ ವಾಕ್ಯಗಳಲ್ಲಿ ಪದಗಳನ್ನು ಅರ್ಥ ಪೂರ್ಣವಾಗಿ ಜೋಡಿಸಿ ಬರೆಯಿರಿ. (Correct the following sentence)

೧. ಹೊರಗೆ ಜೋಗಿ ಊರಿನ ಕೊಳಲನ್ನು ಹೋದನು ಬಾರಿಸುತ್ತ
ಉ: ಜೋಗಿ ಊರಿನ ಹೊರಗೆ ಕೊಳಲನ್ನು ಬಾರಿಸುತ್ತ ಹೋದನು.

೨. ತರಿಸಿದರು ಇಲಿಗಳನ್ನು ಬೋನುಗಳನ್ನು ಹಿಡಿಯಬೇಕೆಂದು ಊರಿನವರು
ಉ: ಊರಿನವರು ಇಲಿಗಳನ್ನು ಹಿಡಿಯಬೇಕೆಂದು ಬೋನುಗಳನ್ನು ತರಿಸಿದರು.

೩. ಕೊಳಲು ಜೋಗಿ ಇತ್ತು ಬಿದುರಿನ ಬಳಿಯಲ್ಲಿ
ಉ: ಬಿದುರಿನ ಬಳಿಯಲ್ಲಿ ಜೋಗಿ ಕೊಳಲು ಇತ್ತು.

Click here to download Kolala Jogi kannada grade 8