Edege Bidda Akshara 10thgrade chapter written by Devanoor Mahadeva. focusing on empathy and equality as the essence of life. In Edege Bidda Akshara CBSE sirikannada lesson summary is here. he references the poet Siddalingayya, who tells the story of the goddess “Mane Manchamma.” In a village, while constructing a temple for Manchamma, the work progresses to the lintel level when she appears in the form of a laborer and authoritatively asks whether every villager has a home. One person admits he doesn’t. Manchamma then insists that before her temple is completed, all the villagers should have houses, emphasizing her concern for everyone’s well-being. Hence, she is revered as “Mane Manchamma.” The story illustrates that even the gods demonstrate empathy and treat everyone equally. “Edege Bidda Akshara” also touches on important psychological aspects, conveying a deep message about human values.
ಎದೆಗೆ ಬಿದ್ದ ಅಕ್ಷರ – ದೇವನೂರ ಮಹಾದೇವ
ಪ್ರವೇಶ : ಶಿಕ್ಷಣ, ವಿಜ್ಞಾನ, ನಗರೀಕರಣದ ಪ್ರಭಾವದಿಂದ ವೈಚಾರಿಕ ಚಿಂತನೆ ತೀವ್ರವಾಯಿತು. ಅಸಮಾನತೆಯ ವಿರುದ್ಧ ದನಿಯೆತ್ತುವ ಪರಿಸ್ಥಿತಿ ನಿರ್ಮಾಣವಾಯಿತು. ಸಾಮಾಜಿಕ ಸಾಮರಸ್ಯಕ್ಕೆ ಮೊದಲನೆಯ ಅಡ್ಡಿ ಮೌಡ್ಯವೆ. ಮೌಡ್ಯಮರೆಯಾಗುವವರೆಗೆ ಸಾಮರಸ್ಯವೆಂಬುದು ಕನಸಾಗಿಯೇ ಉಳಿಯುತ್ತದೆ. ವಚನಕಾರರ ಸಂದೇಶಗಳನ್ನು ನಾವು ನಡೆನುಡಿಗಳಲ್ಲಿ ಅನ್ವಯಿಸಿಕೊಂಡು ಅರಿವು ಮೂಡಿಸಿಕೊಂಡು, ದ್ವೇಷ ಅಸೂಯೆಗಳನ್ನು ತೊರೆದು ಸಮಷ್ಟಿಯ ಒಳಿತಿಗಾಗಿ ಸಾಮರಸ್ಯದ ನೆಲೆಯಲ್ಲಿ ಬದುಕನ್ನು ರೂಪಿಸಿಕೊಂಡಲ್ಲಿ ಸಮಾಜದ ಸ್ವಾಸ್ಥ್ಯ ಸ್ಥಿರಗೊಳ್ಳಬಹುದೆಂಬುದು ಇಲ್ಲಿನ ಆಶಯ.
Introduction: Due to the influence of education, science, and urbanization, rational thought intensified. A situation was created to raise one’s voice against inequality. The first obstacle to social harmony is ignorance. Until ignorance disappears, harmony remains a dream. The hope here is that if we apply the messages of the poets in our actions and words, create awareness, abandon hatred and jealousy, and live a life based on harmony for the good of the community, the well-being of society can be stabilized.
ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು
A seed fell on the earth
A letter/word fallen into the heart
Will surely bear fruit, if not today, then tomorrow
ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ಟಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಲಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಲಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ.
In a story once told to me by the poet Siddalingaiah, my kind of god emerges from within a village deity named ‘Manemanchamma’— Once upon a time, all the people of a village gather and begin constructing a temple for their deity. As the construction progresses and the temple reaches the roof level, the goddess Manchamma possesses a man’s body and roars, ‘Stop it, my children!’ Terrified by her roaring, the people halt their work and look on in utter bewilderment; then, a dialogue takes place between the deity and the people
‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
“ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’
‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’
–ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!
” What are you all doing?”
“We are building a temple-home (shrine) for you, Mother.”
“Oh, so you are building a temple-home for me? If that’s the case, do all of you have homes of your own, my children?”
“I don’t have one, Mother,” someone says from over there.
“Then until everyone has a home, I don’t want a home either.”
By saying this, Goddess Manchammadevi becomes Manemanchamma!
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿ ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.
Even today, Mother Manemanchamma is worshipped in a shrine without a roof. If a Buddha, who embodies compassion and equality, is placed in such a shrine without a roof—then that becomes my kind of god
ಮೊನ್ನೆ ಒಂದು ಪುಸ್ತಕ ಓದುತ್ತಾ ಇದ್ದೆ. ‘ಶಿವಾನುಭವ ಶಬ್ದಕೋಶ’ ಪುಸ್ತಕದ ಹೆಸರು, ಹಳಕಟ್ಟಿಯವರು ಬರೆದ ಪುಸ್ತಕ ಅದು. ಅರಿವು, ಜ್ಞಾನದ ಬಗ್ಗೆ ಅವರು ಹೇಳಿರೋದು ನೋಡಿ ನನಗೆ ಸುಸ್ತಾಗ್ಹೋಯ್ತು. ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.
The day before yesterday, I was reading a book. The name of the book is ‘Shivanubhava Shabdakosha’. This book written by Halakatti. Seeing what he has said about ‘Arivu’ (awareness/true consciousness) and ‘Jnana’ (knowledge) completely exhausted me (blew my mind). From the perspective of the Vachanakaras, ‘Arivu’ is not just mere understanding or knowledge that exists passively on its own. it is something that manifests through the experience of action (Kriya). It is not something simply heard and known. Understanding that arises dynamically within action—that is not mere logic. If speech is born out of one’s conduct (walk/actions), that is true awareness (‘Arivu’).
ಈಗ ನನ್ನ ಮನಸ್ಸು ಅರಿವಿಗಾಗಿ ಕಂಡ ಕಂಡ ಕಡೆ, ಇದುವರೆಗೆ ಭಾರತೀಯ ಪರಂಪರೆಯಲ್ಲಿ ಈ ಸುಟ್ಟುಕೊಂಡು ಬರುವ ಅರಿವು ಯಾರಾರಿಗಿದೆ? ಎಲ್ಲೆಲ್ಲಿದೆ? ಹುಡುಕಾಡತೊಡಗಿದೆ.
Now, in search of ‘Arivu’ (true awareness), my mind has begun to wander everywhere, searching: who are the various people throughout the Indian tradition who have possessed this intertwined, deeply ingrained awareness? And where does it reside?
ಮತ್ತೆ ಇನ್ನೊಂದು. ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರದೇ ಇಷ್ಟದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು. ಈ ರೀತಿ ಪ್ರಜ್ಞೆಯನ್ನೇ ದೇವರು ಅಂತ ಅಂದುಕೊಂಡರೆ ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡಂತಾಗುತ್ತದೆ. ತಮ್ಮ ಪ್ರಜ್ಞೆ ಮುಂದೆ ಸುಳ್ಳು ಹೇಳಕ್ಕಾಗಲ್ಲ. ಅದೇ ಕಷ್ಟ ಆಗೋದು. ಇತರೆ ದೇವರಿಗಾದರೆ – ಯಾವುದೇ ಉಗ್ರ ದೇವತೆ ಇರಲಿ, ಏನೋ ಸ್ವಲ್ಪ ಹೊಟ್ಟೆ ಒಳಕ್ಕೆ ಹಾಕ್ಕೋಂತ ಸುಳ್ಳುಪಳ್ಳು ಹೇಳಿಬಿಡಬಹುದು. ಆದರೆ ಪ್ರಜ್ಞೆ ಮುಂದೆ ಇದು ನಡೆಯದು. ಈ ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು ಎಂದು ಕಾಣಿಸುತ್ತದೆ. ಅವರು ತಮ್ಮ ಕಷ್ಟ ಸುಖಾನ, ದುಃಖ ದುಮ್ಮಾನಾನ, ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ ಕೊಟ್ಟರು.
And there is another thing. The Vachanakaras did not consider the gods in the temples around them as true God. Every Vachanakara had their own unique choice. That means their chosen deity (Ishta-Devata) was their God. To accept such a deity as God is like carrying a burning ember on top of one’s head. They cannot lie in front of their chosen deity. That is the difficulty. For other gods—whichever village deity it may be—one could easily lie a little bit to save their skin.
But this does not work in front of one’s chosen deity. It appears that the Vachanakaras became completely transparent because of this very dilemma.Seems they bared themselves, laying open their hidden inner secrets, griefs, miseries, and burning struggles before that deity. It is to this intense pouring out of the self that they gave voice through their words (Vachanas).
ಅವರು ಅಂದು ನುಡಿದದ್ದು ಇಂದು ನುಡಿದಂತೆ ಕೇಳಿಸುತ್ತಿದೆ. ಅದು ತನಗೆ ತಾನೆ ಕಾವ್ಯವಾಗಿಬಿಟ್ಟಿದೆ. ಈ ಬೆಂಕಿಯಂಥ ವಚನ ಸೃಷ್ಟಿಗೆ ಸಾಂತ್ವನದ ಜಾನಪದ ಕಸಿ ಮಾಡಿ ನಾವು ಹುಟ್ಟಬೇಕಾಗಿದೆ, ಹುಟ್ಟುಪಡೆಯಬೇಕಾಗಿದೆ, ಅನ್ನಿಸತೊಡಗಿದೆ.
What they spoke back then sounds exactly like spoken words today. It has naturally become poetry on its own. It makes me feel that to create such fire-like Vachanas, we must grow and be reborn by grafting them with the soothing, comforting nature of folk traditions.
ಬುದ್ಧನ ಕಾರುಣ್ಯ ನನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಲು ಪ್ರಯತ್ನಿಸುವೆ.
I will try to explain, with the help of an example, the way the Buddha’s compassion has seated itself within my mind.
ಇತ್ತೀಚೆಗೆ ಶಿವಮೊಗ್ಗದ ಡಾ. ಅಶೋಕ ಪೈ (ಮನೋವೈದ್ಯರು) ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ- ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದು:ಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.ಈ ನಿಜ ಏನನ್ನು ಹೇಳುತ್ತದೆ? ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೊ. ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.
Recently, a scientist named Dr. Anish (neurosurgeon) had come to my house. He told me about a research study related to the mind. It goes like this—imagine a few people are sitting in a room watching television. Imagine another group of people sitting in a separate room, oblivious to the first group, engaged in some work of their own. At that moment, when a tragic or sorrowful scene appears on the television, the brains of those watching it change with a feeling of grief, and simultaneously, the brains of those sitting in the other room—who aren’t even watching it—are also impacted, causing their minds to subtly become sorrowful.
Similarly, when a joyful or happy scene appears on the same television, the joy of those watching it subtly influences the minds of the people in the other room, creating a sense of happiness.What does this truth tell us? It tells us that no life exists entirely isolated on its own. The grief, pain, and misery experienced by any single life resonates subtly across all living beings, creating an undercurrent. This experiment tells us that all life in the universe is fundamentally one.
ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು.
It is perhaps from right here that the Buddha’s compassion emerged.
ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಶೋಭೆಗೊಂಡು ನರಳುತ್ತಿರುವ ಜಗತ್ತು, ಅದು ಘಾಸಿಗೊಳಿಸುವುದು ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.
A world that is suffering, tormented by murder, plunder, hatred, and jealousy—what it hurts and distresses is its own deep, inner collective mind. Everyone exists within this collective mind.
ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.
ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ.
We humans need to awaken the compassion that lies in a dormant state within ourselves. Holding onto this thread, we must shape globalization. Only then will it truly be globalization.
ಕೃತಿಕಾರರ ಪರಿಚಯ
ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ದೇವನೂರಿನಲ್ಲಿ ಕ್ರಿ.ಶ. ೧೯೪೮ ರಲ್ಲಿ ಜನಿಸಿದರು. ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಬಂಡಾಯ ಮತ್ತು ದಲಿತ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಅಚ್ಚಿನಲ್ಲಿ ಶಬ್ದಶಿಲ್ಪಿ ಇವರು.
ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ, ನಂಬಿಕೆಯನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ ಶ್ರೀಯುತರಪ್ರಮುಖರ ಕೃತಿಗಳು. ಇವರ ಕುಸುಮಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.
ಆಶಯ
ವಚನಕಾರರ ನಡೆ-ನುಡಿಗಳ ಸಮನ್ವಯವೇ ಅರಿವು. ಅಂತರಂಗದ ಹೊಂದಾಣಿಕೆಯಿಂದ ಮಾತ್ರ ಸಮಾನತೆ, ಸಾಮರಸ್ಯ ಸಾಧ್ಯ ಅದಕ್ಕಾಗಿ ಹೋರಾಡಿದ ಮಹನೀಯರ ದಾರಿಯಲ್ಲಿ ಜಾಗತೀಕರಣವನ್ನು ರೂಪಿಸಬೇಕಾಗಿದೆ. ಕಾರುಣ್ಯ, ಸಮತೆ, ಪ್ರಜ್ಞೆಗಳೇ ದೇವರು. ಅವು ಜಾಗೃತವಾಗಬೇಕೆಂಬುದೇ ಆಶಯವಾಗಿದೆ.
ದೇವನೂರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ಈ ಗದ್ಯಭಾಗವನ್ನು ಆಯ್ಕೆಮಾಡಲಾಗಿದೆ.
ಪದಗಳ ಅರ್ಥ:
ಆವಾಹಿಸು – ಮೈಮೇಲೆ ಬರುವಂತೆ ಮಾಡಿಕೊ
ಗುಡಿಮನೆ – ಚಿಕ್ಕ ದೇವಸ್ಥಾನ
ಕ್ಷೋಭೆ – ತಳಮಳ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ. (Answer the following in one sentence)
೧. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
ಉ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ.
೨. ಮನೆಮಂಚಮ್ಮ ಯಾರು?
ಉ: ಮನೆಮಂಚಮ್ಮ ಗ್ರಾಮದೇವತೆ .
೩. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
ಉ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ.
೪. ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಯಾರು?
ಉ: ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಫ.ಗು.ಹಳಕಟ್ಟಿಯವರು.
೫. ವಚನಕಾರರಿಗೆ ಯಾವುದು ದೇವರಾಗಿತ್ತು?
ಉ: ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.
೬. ಅಶೋಕ ಪೈ ಅವರ ವೃತ್ತಿ ಯಾವುದು?
ಉ: ಅಶೋಕ ಪೈ ಅವರು ಮನೋವೈದ್ಯರು.
೭. ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿ.
ಉ: ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ ಎಂದು ದೇವನೂರ ಮಹದೇವ ಅವರು ತನ್ನ ದೇವರನ್ನು ಸ್ಪಷ್ಟಿಕರಿಸುತ್ತಾರೆ.
೮. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ?
ಉ: ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.
೯.ವಚನಕಾರರು ತಮ್ಮ ಕಷ್ಟ ಸುಖ, ದುಃಖ ದುಮ್ಮಾನ, ಏಳುಬೀಳುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದರು ?
ಉ: ವಚನಕಾರರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ತಮ್ಮ ಪ್ರತಿಜ್ಞೆ ಮುಂದೆ ಹೇಳಿಕೊಳ್ಳುತಿದ್ದರು.
೧೦. ನಮ್ಮೊಳಗೆ ಯಾವುದನ್ನ ಎಚ್ಚರಗೊಳಿಸಬೇಕಾಗಿದೆ ?
ಉ: ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in 3-4 senetnces)
೧. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಉ: ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಪಕ್ಕ ದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ಇರುತ್ತಾರೆ. ಆಗ ಟೆಲಿವಿಷನ್ ನಲ್ಲಿ ಒಂದು ಕೊಲೆ ದೃಶ್ಯ ಬರುತ್ತದೆ. ಟೆಲಿವಿಷನ್ ನೋಡುತ್ತಿದ್ದವರು ದು:ಖದ ಭಾವನೆಗೆ ಒಳಗಾಗುತ್ತಾರೆ. ಇದು ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೆ ಮುಟ್ಟುತ್ತದೆ. ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್ ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರಲ್ಲಿ ಖುಷಿ ಭಾವನೆ ಉಂಟಾಗುತ್ತದೆ. ಇದು ಪಕ್ಕದ ಕೊಠಡಿಯಲ್ಲಿ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸಂತೋಷದ ಭಾವನೆ ಉಂಟಾಗುತ್ತದೆ. ಈ ಸಂಶೋಧನಾ ಅರ್ಥ ಏನೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಆಗುತ್ತದೆ. ಇದು ಅಶೋಕ ಪೈ ಹೇಳಿದ ಆ ಸಂಶೋಧನಾ ಸತ್ಯ.
೨. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.
ಉ: ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ ನಮ್ಮಲ್ಲಿ ಮೂಡಿ ಬರುವುದು. ಅದು ಬೇರೆಯವರು ಹೇಳಿದ್ದನ್ನು ಕೇಳಿ ತಿಳಿಯುವದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು ಎಂಬುದು ವಚನಕಾರರ ದೃಷ್ಟಿ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in 8-10 sentences)
೧. ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.
ಉ: ದೇವನೂರ ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯ ಅವರು ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೀಗೆ ಹೇಳುತ್ತಾರೆ. ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಗುಡಿ ಕಟ್ಟುತ್ತಾ ಇರುವಾಗ ಚಾವಣಿ ಮಟ್ಟಕ್ಕೆ ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಆ ದೇವತೆ “ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ?” ಎಂದು ಕೇಳುತ್ತಾಳೆ. ಆಗ ಅಲ್ಲೊಬ್ಬ “ನನಗಿಲ್ಲ ತಾಯಿ” ಎನ್ನುತ್ತಾನೆ. ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳುತ್ತಾಳೆ. ಅಂದಿನಿಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ. ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಮನೆಮಂಚಮ್ಮ ದೇವತೆ , ತನಗೆ ಗುಡಿ ಕಟ್ಟುತ್ತಿದ್ದ ಜನರಿಗೆ ಹೇಳುತ್ತಾಳೆ. ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಗುಡಿ ಕಟ್ಟುತ್ತಾ ಇರುವಾಗ ಚಾವಣಿ ಮಟ್ಟಕ್ಕೆ ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಆ ದೇವತೆ “ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ?” ಎಂದು ಕೇಳುತ್ತಾಳೆ. ಆಗ ಅಲ್ಲೊಬ್ಬ “ನನಗಿಲ್ಲ ತಾಯಿ” ಎನ್ನುತ್ತಾನೆ. ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಗುಡಿಕಟ್ಟುವ ಜನರಿಗೆ ಮನೆ ಇಲ್ಲದ ಮೇಲೆ ತನಗೆ ಗುಡಿ ಬೇಡ ಎಂದು ಗ್ರಾಮದೇವತೆ ಕಾರುಣ್ಯ ಮತ್ತು ಸಮಾನತೆಯನ್ನು ಹೇಳುವ ಈ ಮಾತು ಇಲ್ಲಿಯ ಸ್ವಾರಸ್ಯವಾಗಿದೆ.
೨. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಲೇಖಕರು ಬುದ್ಧನ ಕಾರುಣ್ಯವನ್ನು ವಿವರಿಸುವಾಗ, ಅಶೋಕ ಪೈರವರು ಹೇಳಿದ ಸಂಶೋಧನಾ ಉದಾಹರಣೆ ನೀಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ. ಟಿ.ವಿ ನೋಡುವ ಭಾವನೆಗಳು ಪಕ್ಕದ ಕೊಠಡಿಯಲ್ಲಿದ್ದವರ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ , ಹಾಗೆಯೇ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಆಗುತ್ತದೆ. ಈ ಭಾವನೆ ಇಡೀ ಜೀವನ ಕುಲವೆಲ್ಲ ಒಂದೇ ಎಂಬುದನ್ನು ಹೇಳುತ್ತದೆ.
ಸ್ವಾರಸ್ಯ : ಯಾವ ಜೀವಿಯು ತಮ್ಮಷ್ಟಕ್ಕೆ ತಾವೇ ಬದುಕಲು ಸಾಧ್ಯವಿಲ್ಲ. ಇಡೀ ಜೀವಕುಲವೆಲ್ಲ ಒಂದೇ. ಎಲ್ಲರೂ ಸಮಾನರು ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಬಂದಿದೆ.
೩. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಡಿರಲಿಲ್ಲ.
ಪ್ರತಿಯೊಬ್ಬ ವಚನಕಾರರಿಗೂ ಅವರವರ ಇಷ್ಟದೇವತೆ ಇತ್ತು. ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಆ ಪ್ರಜ್ಞೆಯ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.
ಸ್ವಾರಸ್ಯ : ವಚನಕಾರರಿಗೆ ಪ್ರಜ್ಞೆಯೇ ಇಷ್ಟದೇವತೆಯಾಗಿತ್ತು. ಅದೇ ರೀತಿಯಲ್ಲಿ ಪ್ರತಿಯೊಬ್ಬರಲ್ಲಿ ಪ್ರಜ್ಞೆ ಜಾಗೃತವಾಗಲಿ ಎಂಬುದನ್ನು ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.
೪. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಕೊಲೆ, ಸುಲಿಗೆ, ದ್ವೇಷ, ಅಸೂಯೆಗಳಿಂದ ನರಳುತ್ತಿರುವ ಈ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸು ಘಾಸಿಗೊಳಿಸುತ್ತಿದೆ ಎನ್ನುವ ಸಂದರ್ಭದಲ್ಲಿ, ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ ಎಂದು ಹೇಳಿದ್ದಾರೆ.
ಸ್ವಾರಸ್ಯ : ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇದ್ದಾರೆ. ಎಲ್ಲರೂ ಕಾರುಣ್ಯ ಮತ್ತು ಸಮಾನತೆಯ ಭಾವವನ್ನು ಮೂಡಿಸಿಕೊಂಡು ಬದುಕಬೇಕು ಎಂಬುದು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
ಅ) ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ಕಕ್ಕಾಬಿಕ್ಕಿ – confused, dumbfounded – ಹಾವನ್ನು ನೋಡಿ ಅವನು ಕಕ್ಕಾಬಿಕ್ಕಿಯಾದನು.
ಆರಂಭಿಸು – To start, to begin, to commence – ನಾವು ನಾಳೆಯಿಂದ ಹೊಸ ಕೆಲಸ ಆರಂಭಿಸೋಣ.
ಪ್ರಯತ್ನಿಸು – To try, to attempt, to make an effort – ಪರೀಕ್ಷೆಯಲ್ಲಿ ಗೆಲ್ಲಲು ಚೆನ್ನಾಗಿ ಪ್ರಯತ್ನಿಸುತ್ತೇನೆ.
ಘಾಸಿಗೊಳಿಸು – To hurt, to injure, or to wound (can be used for both physical ಯಾರ ಮನಸ್ಸನ್ನೂ ಘಾಸಿಗೊಳಿಸಬೇಡ.
ಆ) ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ.
ಒಳಿತು × ಕೆಡುಕು
ಸಮಷ್ಟಿ × ವ್ರಷ್ಟಿ
ಪುಣ್ಯ × ಪಾಪ
ಬೆಳಕು × ಕತ್ತಲು
ಧರ್ಮ × ಅಧರ್ಮ
ಇ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ಕಟ್ಟುವುದು ಕಠಿಣ; ಕೆಡಹುವುದು ಸುಲಭ. (Building is hard; tearing it down is easy)
ವೇದ ಸುಳ್ಳಾದರು ಗಾದೆ ಸುಳ್ಳಾಗದು. ಬದುಕನ್ನು ಕಟ್ಟಲು ತುಂಬಾ ವರ್ಷಗಳು ಬೇಕು. ಹಾಗೆಯೇ ಬದುಕನ್ನು ತುಂಬಾ ಬೇಗ ಹಾಳು ಮಾಡಿಕೊಳ್ಳಬಹುದು.
೨. ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. (Mother, the land that bears you is higher than heaven)
ವೇದ ಸುಳ್ಳಾದರು ಗಾದೆ ಸುಳ್ಳಾಗದು. ನಮ್ಮನ್ನು ಹೆತ್ತ ತಾಯಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಹಾಗೆಯೇ ನಮ್ಮ ತಾಯಿನಾಡು ನಮ್ಮ ಬದುಕಿಗೆ ಬೇಕಾದನ್ನು ಕೊಡುತ್ತಾಳೆ. ಹಾಗಾಗಿ ಇವರಿಬ್ಬರು ಸ್ವರ್ಗಕ್ಕಿಂತ ಮಿಗಿಲು.
ಈ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ.
೧. ಗ್ರಾಮಸ್ವರಾಜ್ಯ – Gram Swarajya
ಪೀಠಿಕೆ:
ಗ್ರಾಮ ಎಂದರೆ ಹಳ್ಳಿ ಮತ್ತು ಸ್ವರಾಜ್ ಎಂದರೆ ಸ್ವಯಂ ಆಡಳಿತ. ಅಂದರೆ, ಗ್ರಾಮ ಸ್ವರಾಜ್‌ನಲ್ಲಿ, ಹಳ್ಳಿಗಳು ತಾವೇ ನಿಯಂತ್ರಣವನ್ನು ಸಾಧಿಸುವುದು ಎಂದರ್ಥ.
ಗ್ರಾಮಗಳ ಸ್ವಯಂ ಆಡಳಿತ ಕೇಂದ್ರಗಳಾಗಿ ಕಾರ್ಯನಿರ್ವಹಿಸಿ , ತಮ್ಮ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾರ್ಯವನ್ನು ಸ್ವತಃ ಗ್ರಾಮಸ್ಥರೇ ನಿರ್ಧಾರ ಕೈಗೊಳ್ಳುವ ಒಂದು ಸ್ಥಳೀಯ ಆಡಳಿತ ಸಂಸ್ಥೆ.
ಗ್ರಾಮ ಸ್ವರಾಜ್ಯ ಎಂಬುದು ಮಹಾತ್ಮ ಗಾಂಧೀಜಿ ಅವರ ಮಹತ್ವಾಕಾಂಕ್ಷೆಯ ಕನಸಾಗಿದೆ. ಗಾಂಧೀಜಿ ಅವರು ಸ್ವರಾಜ್ಯ ಅಂದರೆ ನಾಡಿನ ಪ್ರತಿಯೊಂದು ಗ್ರಾಮವೂ ಸ್ವಾವಲಂಬನೆಯಾಗಿರಬೇಕು ಎಂಬ ನಂಬಿಕೆ ಹೊಂದಿದ್ದರು. ಅವರ ದೃಷ್ಟಿಯಲ್ಲಿ, ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಒದಗಿಸಲು ಪ್ರತಿಯೊಂದು ಗ್ರಾಮವು ಸ್ವಾವಲಂಬನೆಯಾಗಿರಬೇಕು, ಅರ್ಥಾತ್ ತಾವು ನಡೆಸುವ ಕಾರ್ಯಗಳಲ್ಲಿ ಸ್ವತಂತ್ರವಾಗಿರಬೇಕು.‘ ಗ್ರಾಮಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ‘ ಎಂಬುದು ಗಾಂಧೀಜಿ ಅವರ ನಂಬಿಕೆಯಾಗಿತ್ತು. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೈಸೂರು ರಾಜ್ಯದಲ್ಲಿ ಮಾಡಿದರು.
ವಿಷಯ ನಿರೂಪಣೆ:
ಸ್ವಾವಲಂಬನೆ ಗ್ರಾಮ ಸ್ವರಾಜ್ಯದ ಪ್ರಮುಖ ಆಧಾರವಾಗಿದೆ. ಪ್ರತಿಯೊಂದು ಗ್ರಾಮವೂ ಆರ್ಥಿಕವಾಗಿ ಸ್ವತಂತ್ರವಾಗಿದ್ದು, ತಮ್ಮ ಆಹಾರ, ನೀರು, ವಿದ್ಯುತ್, ಆರೋಗ್ಯ ಸೇವೆ ಮತ್ತು ಶಿಕ್ಷಣದ ಅಗತ್ಯಗಳನ್ನು ತಾವೇ ಪೂರೈಸಲು ಪ್ರೇರೇಪಿತವಾಗಿರಬೇಕು ಎಂಬುದು ಗಾಂಧೀಜಿ ಅವರ ಧ್ಯೇಯವಾಗಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಗ್ರಾಮಪಂಚಾಯತಿಯ ಕಾರ್ಯವನ್ನು ಪ್ರಾರಂಭಿಸಿದರು. ಇವರು ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಹೀಗೆ ಹಲವು ಕ್ಷೇತ್ರಗಳನ್ನು ಸ್ವಯಂ ಆಡಳಿತ ಕ್ಷೇತ್ರಗಳನ್ನಾಗಿ ಮಾಡಿದರು.
ಪಂಚಾಯತ್ ವ್ಯವಸ್ಥೆ ಗ್ರಾಮ ಸ್ವರಾಜ್ಯದ ಮೂಲತತ್ತ್ವವಾಗಿದೆ. 1992ರಲ್ಲಿ 73ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾನೂನಾತ್ಮಕವಾಗಿ ರಚಿಸಲಾಗಿದ್ದು, ಗ್ರಾಮೀಣ ಆಡಳಿತವನ್ನು ಸ್ಥಳೀಯ ಜನತೆ ನಡೆಸಲು ಅವಕಾಶ ಕಲ್ಪಿಸಿದೆ. ಈ ಮೂಲಕ ಗ್ರಾಮಸ್ಥರು ತಮ್ಮ ಸಮುದಾಯದ ಅವಶ್ಯಕತೆಗಳಿಗೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ತಮ್ಮ ಅಭಿವೃದ್ಧಿಯ ಹೊಣೆ ಹೊತ್ತುಕೊಳ್ಳಲು ಸ್ವಾತಂತ್ರ್ಯ ಪಡೆಯುತ್ತಾರೆ.
ಉಪಸಂಹಾರ:
ಆದರೆ, ಗ್ರಾಮ ಸ್ವರಾಜ್ಯದ ಆವಿಷ್ಕಾರದಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ. ಸಾಮಾಜಿಕ ಅಸಮಾನತೆ, ಆರ್ಥಿಕ ಕೊರತೆ ಮತ್ತು ಜನರು ಪಟ್ಟಣಗಳತ್ತ ವಲಸೆ ಹೋಗುವ ಸಮಸ್ಯೆಗಳು ಗ್ರಾಮ ಸ್ವರಾಜ್ಯದ ಅಡಚಣೆಗಳಾಗಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡುತ್ತ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಮುಂದುವರಿಸಬೇಕಾಗಿದೆ.
೨. ತ್ಯಾಜ್ಯವಸ್ತು ನಿರ್ವಹಣೆ – Waste management
ಪೀಠಿಕೆ:
ತ್ಯಾಜ್ಯ ನಿರ್ವಹಣೆಯ ಮೂಲ ತತ್ವಗಳು: ತಿರಸ್ಕರಿಸುವುದು, ಮರುಬಳಕೆ ಮಾಡುವುದು, ಕಡಿಮೆ ಮಾಡುವುದು ಮತ್ತು ನವೀಕರಿಸುವುದು. ತ್ಯಾಜ್ಯ ನಿರ್ವಹಣೆಯು ಪ್ರಾಥಮಿಕವಾಗಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುವುದನ್ನು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯು ಕಸವನ್ನು ಸರಿಯಾಗಿ ನಿರ್ವಹಿಸಿ, ಉತ್ಪತ್ತಿಯಾಗುವ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಸಾಧ್ಯವಾದಾಗ ತ್ಯಾಜ್ಯವನ್ನು ಮೌಲ್ಯಯುತವಾಗಿ ನವೀಕರಿಸಬಹುದಾದ ಶಕ್ತಿಯನ್ನಾಗಿ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ.
ವಿಷಯ ನಿರೂಪಣೆ:
ಭೂಮಿಯ ಬಗ್ಗೆ ಕಾಳಜಿ ವಹಿಸಲು ಗ್ರಾಮ, ಪುರಸಭೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಾಷ್ಟ್ರಗಳು ಕೈಗೊಂಡಿರುವ ಪ್ರಸ್ತುತ ಯೋಜನೆಗಳಲ್ಲಿ ತ್ಯಾಜ್ಯ ನಿರ್ವಹಣೆಯು ಒಂದಾಗಿದೆ. ಈ ಎಚ್ಚರಿಕೆಯ ಕ್ರಮವು ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಮತ್ತು ಸ್ಥಿರವಾದ ವಾತಾವರಣವನ್ನು ಸೃಷ್ಟಿಸಲು ಕೊಡುಗೆ ನೀಡುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರಾಣಿಗಳು ಬೀದಿಗಳಲ್ಲಿ ಕಸವನ್ನು ತಿಂದ ನಂತರ ಉಸಿರುಗಟ್ಟಿ ಸಾಯುತ್ತವೆ.
ಉಪಸಂಹಾರ:
ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದಾಗಿ ಮಾನವ ಮತ್ತು ಪ್ರಾಣಿ ಸೇರಿದಂತೆ ಅನೇಕ ಜೀವಗಳು ಈಗಾಗಲೇ ಬಲಿಯಾಗಿವೆ. ಕಸವನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಉದಾಹರಣೆಗೆ ಕಾಂಪೋಸ್ಟ್, ಲ್ಯಾಂಡ್‌ಫಿಲ್‌ಗಳು, ಮರುಬಳಕೆ ಮತ್ತು ಇನ್ನೂ ಅನೇಕ. ಪರಿಸರಕ್ಕೆ ಹಾನಿಯಾಗದಂತೆ ಕಸವನ್ನು ಕಡಿಮೆ ಮಾಡಲು ಈ ತಂತ್ರಗಳು ಸಹಾಯ ಮಾಡುತ್ತವೆ.
ತ್ಯಾಜ್ಯ ನಿರ್ವಹಣೆ ಪರಿಸರವನ್ನು ಸಂರಕ್ಷಿಸಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಜನರು ಮತ್ತು ಪ್ರಾಣಿಗಳಿಗೆ ಸುರಕ್ಷಿತವಾಗಿಸಲು ಸಹಾಯ ಮಾಡುತ್ತದೆ. ಜನರು ಸ್ವಯಂ ಪ್ರೇರಿತರಾಗಿ ಮತ್ತು ಜಾಗರೂಕತೆಯಿಂದ ದೈನಂದಿನ ಕೆಲಸಗಳಿಗೆ ಹಾಜರಾಗುವ ಮೂಲಕ ತ್ಯಾಜ್ಯ ನಿರ್ವಹಣೆಯಲ್ಲಿ ಭಾಗವಹಿಸುತ್ತಾರೆ. ಜನಸಂಖ್ಯೆಯ ಯಶಸ್ಸು ಮತ್ತು ಸಂತೋಷ, ಮತ್ತು ಅತ್ಯಂತ ನಿರ್ಣಾಯಕವಾಗಿ, ನಮ್ಮ ಗ್ರಹ ಭೂಮಿಯು, ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ಕ್ರಮಗಳ ಮೇಲೆ ಅವಲಂಬಿತವಾಗಿದೆ.
ನಮ್ಮ ಕಸ ನಮ್ಮ ಜವಾಬ್ದಾರಿ.
ಭಾಷೆಯ ಸೊಬಗು
ಕ, ಚ, ಟ, ತ, ಪ – ಇವು ಅಲ್ಪಪ್ರಾಣ ಅಕ್ಷರಗಳು. ಖ, ಛ, ಠ, ಥ, ಫ – ಇವು ಮಹಾಪ್ರಾಣ ಅಕ್ಷರಗಳು.
ಭೂತಾಯಿ ಎಂದರೆ ಭೂಮಿತಾಯಿ. ಬೂತಾಯಿ ಎಂದರೆ ಒಂದು ಬಗೆಯ ಮೀನು.
ಆಧರಿಸಿ ಎಂದರೆ ಆಧಾರ ಮಾಡಿಕೊಂಡು. ಆದರಿಸಿ ಎಂದರೆ ಗೌರವಿಸಿ.
‘ಛಿನ್ನ’ ಎಂದರೆ ತುಂಡಾದ, ಕತ್ತರಿಸಿದ, ಭಗ್ನಗೊಂಡ. ಚಿನ್ನ ಎಂದರೆ ಸುವರ್ಣ, ಬೆಲೆಬಾಳುವ ಹಳದಿ ಲೋಹ.
ವಾಕ್ಯಗಳಲ್ಲಿ ಪ್ರಯೋಗ:
೧. ರೈತನಿಗೆ ಭೂತಾಯಿಯೇ ದೇವರು.
೨. ಬೆಸ್ತನು ಹಿಡಿದ ಮೀನುಗಳಲ್ಲಿ ಬೂತಾಯಿಯದೇ ದೊಡ್ಡ ಪಾಲು.
೩. ರಾಮಾಯಣ ಮಹಾಕಾವ್ಯವನ್ನು ಆಧರಿಸಿ ಹಲವು ನಾಟಕಗಳು ಬಂದವು.
೪. ಅತಿಥಿಗಳನ್ನು ಆದರಿಸಿ ಉಪಚರಿಸುವುದು ನಮ್ಮ ಸಂಸ್ಕೃತಿ.
೫. ೧೯೪೭ರಲ್ಲಿ ಅಖಂಡ ಭಾರತವು ಛಿನ್ನವಾಗಿ ಎರಡು ರಾಷ್ಟ್ರಗಳು ಉದಯಿಸಿದವು.
೬. ಚಿನ್ನ ಎಂದರೆ ಹೆಂಗಳೆಯರಿಗೆ ಮೆಚ್ಚಲ್ಲವೆ?
ಇಂಥ ಇನ್ನಷ್ಟು ಶಬ್ದಗಳನ್ನು ಪಟ್ಟಿ ಮಾಡಿ
ಸೈದ್ಧಾಂತಿಕ ಭಾಷಾಭ್ಯಾಸ
ಕ್ರಿಯಾಪದ
ಕ್ರಿಯಾಪದದ ಮೂಲ ರೂಪವನ್ನು ‘ಧಾತು‘ (ಕ್ರಿಯಾಪ್ರಕೃತಿ) ಎಂದು ಕರೆಯಲಾಗಿದೆ. ಇವುಗಳಲ್ಲಿ ಎರಡು ವಿಧಗಳಿವೆ:
- ಸಕರ್ಮಕ: ಕೊಡು, ಬಿಡು, ಉಣ್ಣು, ಉಜ್ಜು, ತಿದ್ದು, ಮುಚ್ಚು – ಇತ್ಯಾದಿ.
- ಅಕರ್ಮಕ: ಮಲಗು, ಓಡು, ಬದುಕು, ಹೋಗು, ನಾಚು – ಇತ್ಯಾದಿ.
ಕರ್ತರಿ ಪ್ರಯೋಗ: ಧಾತುಗಳಿಗೆ ಲಿಂಗವಾಚಕ ಮತ್ತು ವಚನವಾಚಕಗಳು ಸೇರಿ ಒಂದು ಪೂರ್ಣವಾಕ್ಯವಾದಾಗ ಅದು ‘ಕರ್ತರಿ ಪ್ರಯೋಗದ‘ ವಾಕ್ಯವೆನಿಸುತ್ತದೆ.
- ಉದಾ:- ಭೀಮನು ಅನ್ನವನ್ನು ಉಂಡನು
ಕರ್ಮಣಿ ಪ್ರಯೋಗ: ಸಕರ್ಮಕ ಧಾತುಗಳ ಮೇಲೆ ‘ಅಲ್ಪಡು’ ಪ್ರತ್ಯಯ ಸೇರಿ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಸೇರಿದಾಗ ‘ಕರ್ಮಣಿ ಪ್ರಯೋಗದ’ ವಾಕ್ಯವಾಗುತ್ತದೆ.
- ಉದಾ:- ಭೀಮನಿಂದ ಅನ್ನವು ಉಣ್ಣಲ್ಪಟ್ಟಿತು.
ಅರ್ಥರೂಪ ಕ್ರಿಯಾಪದಗಳು
ಅರ್ಥರೂಪ ಕ್ರಿಯಾಪದಗಳಲ್ಲಿ ‘ವಿಧ್ಯರ್ಥಕ‘, ‘ನಿಷೇಧಾರ್ಥಕ‘, ‘ಸಂಭಾವನಾರ್ಥಕ‘ ಕ್ರಿಯಾಪದಗ ಮೂರು ವಿಧಗಳಿವೆ
ವಿಧ್ಯರ್ಥಕ ಕ್ರಿಯಾಪದಗಳು: ಆಶೀರ್ವಾದ, ಅಪ್ಪಣೆ, ಆಜ್ಞೆ, ಕೋರಿಕೆ ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತಪ್ರತ್ಯಯಗಳು ಸೇರಿ ವಿದ್ಯರ್ಥಕ ಕ್ರಿಯಾಪದಗಳೆನಿಸುವುವು.
‘ಮಾಡು’ ಧಾತುವಿನ ವಿಧ್ಯರ್ಥಕ ರೂಪಗಳು
| ಪುರುಷ | ಲಿಂಗ | ಏಕವಚನ | ಬಹುವಚನ |
| ಪ್ರಥಮ | ಪುಲ್ಲಿಂಗ | ಮಾಡಲಿ | ಮಾಡಲಿ |
| ಸ್ತ್ರೀಲಿಂಗ | ಮಾಡಲಿ | ಮಾಡಲಿ | |
| ನಪುಂಸಕ ಲಿಂಗ | ಮಾಡಲಿ | ಮಾಡಲಿ | |
| ಮಧ್ಯಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡು | ಮಾಡಿ / ಮಾಡಿರಿ |
| ಉತ್ತಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡುವೆ | ಮಾಡುವಾ / ಮಾಡೋಣ |
ನಿಷೇಧಾರ್ಥಕ ಕ್ರಿಯಾಪದಗಳು: ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವುವು.
‘ಮಾಡು’ ಧಾತುವಿನ ನಿಷೇಧಾರ್ಥಕ ರೂಪಗಳು
| ಪುರುಷ | ಲಿಂಗ | ಏಕವಚನ | ಬಹುವಚನ |
| ಪ್ರಥಮ | ಪುಲ್ಲಿಂಗ | ಮಾಡನು | ಮಾಡರು |
| ಸ್ತ್ರೀಲಿಂಗ | ಮಾಡಳು | ಮಾಡರು | |
| ನಪುಂಸಕ ಲಿಂಗ | ಮಾಡದು | ಮಾಡವು | |
| ಮಧ್ಯಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡೆ | ಮಾಡರಿ |
| ಉತ್ತಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡೆನು | ಮಾಡೆವು |
ಸಂಭಾವನಾರ್ಥಕ ಕ್ರಿಯಾಪದಗಳು: ಕ್ರಿಯೆಯು ನಡೆಯುವಿಕೆಯಲ್ಲಿ ‘ಸಂಶಯ’ ಅಥವಾ ‘ಊಹೆ’ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳೆನಿಸುವುವು.
‘ಮಾಡು’ ಧಾತುವಿನ ಸಂಭಾವನಾರ್ಥಕ ರೂಪಗಳು
| ಪುರುಷ | ಲಿಂಗ | ಏಕವಚನ | ಬಹುವಚನ |
| ಪ್ರಥಮ | ಪುಲ್ಲಿಂಗ | ಮಾಡಿಯಾನು | ಮಾಡಿಯಾರು |
| ಸ್ತ್ರೀಲಿಂಗ | ಮಾಡಿಯಾಳು | ಮಾಡಿಯಾರು | |
| ನಪುಂಸಕ ಲಿಂಗ | ಮಾಡೀತು | ಮಾಡಿಯಾವು | |
| ಮಧ್ಯಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡ್ತೀಯೆ | ಮಾಡೀರಿ |
| ಉತ್ತಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡೇನು | ಮಾಡೇವು |
ವಿಭಕ್ತಿ ಪ್ರತ್ಯಯ
ಈ ವಾಕ್ಯ ಗಮನಿಸಿ:
“ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು.”
ಈ ವಾಕ್ಯದಲ್ಲಿ ಭೀಮ, ತಾನು, ಬಲಗಾಲು, ಚೆಂಡು ಎಂಬ ಪದಗಳು ನಾಮಪ್ರಕೃತಿಗಳಾಗಿವೆ. ಈ ನಾಮಪ್ರಕೃತಿಗಳನ್ನು ಮಾತ್ರ ಹೇಳಿ ‘ಒದೆದನು’ ಎಂಬ ಕ್ರಿಯಾಪದವನ್ನು ಹೇಳಿದರೆ ಅರ್ಥ ಸ್ಪಷ್ಟವಾಗುವುದಿಲ್ಲ. (ಭೀಮ ತಾನು ಬಲಗಾಲು ಚೆಂಡು ಒದೆದನು ಎಂದು ಹೇಳಿದ್ದರೆ) ಈ ಎಲ್ಲಾ ನಾಮ ಪ್ರಕೃತಿಗಳಿಗೆ ಕಾರಕಾರ್ಥಕ್ಕೆ ಅನುಗುಣವಾಗಿ ಪ್ರತ್ಯಯಗಳನ್ನು ಸೇರಿಸಿದಾಗ ವಾಕ್ಯವು ಅರ್ಥಪೂರ್ಣವಾಗುತ್ತದೆ. ‘ಭೀಮ‘ ಪದಕ್ಕೆ ‘ಕರ್ತೃರ್ಥ‘ದಲ್ಲಿ ‘ಉ‘ ಪ್ರತ್ಯಯವನ್ನೂ ‘ತಾನು‘ ಸರ್ವನಾಮಕ್ಕೆ ‘ಸಂಬಂಧಾರ್ಥ‘ದಲ್ಲಿ ‘ಅ‘ ಪ್ರತ್ಯಯವನ್ನೂ ‘ಚೆಂಡು‘ ಪದಕ್ಕೆ ‘ಕರ್ಮಾರ್ಥ’ದಲ್ಲಿ ‘ಅನ್ನು‘ ಪ್ರತ್ಯಯವನ್ನೂ ‘ಬಲಗಾಲು‘ ಎಂಬ ಪದಕ್ಕೆ ‘ಕರಣಾರ್ಥ‘ದಲ್ಲಿ ‘ಇಂದ‘ ಎಂಬ ಪ್ರತ್ಯಯವನ್ನೂ ಸೇರಿಸಿ ‘ಒದ್ದನು’ ಎಂಬ ‘ಕ್ರಿಯಾಪದ’ ವನ್ನು ಸೇರಿಸಿದಾಗ – ‘ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು’ ಎಂಬ ಅರ್ಥಪೂರ್ಣವಾದ ವಾಕ್ಯದ ರಚನೆಯಾಯಿತು. ಹೀಗೆ …
ಕಾರಕ: ಕ್ರಿಯೆಗೆ ಸಹಾಯಕವಾಗುವುದನ್ನು “ಕಾರಕ” ಎನ್ನುವರು.
ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಅಧಿಕರಣಾದಿ ಕಾರಕಾರ್ಥಗಳನ್ನು ಹೊಂದಿರುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು.
ಈ ವಿಭಕ್ತಿ ಪ್ರತ್ಯಯಗಳು ಹಳಗನ್ನಡ ಮತ್ತು ಹೊಸಗನ್ನಡದಲ್ಲಿ ಯಾವ ರೂಪದಲ್ಲಿವೆ ಎಂಬುದನ್ನು ನೋಡೋಣ
| ವಿಭಕ್ತಿ | ಕಾರಕಾರ್ಥ | ಹೊಸಗನ್ನಡ ಪ್ರತ್ಯಯ | ಹೊಸಗನ್ನಡ ರೂಪ | ಹಳಗನ್ನಡ ಪ್ರತ್ಯಯ | ಹಳಗನ್ನಡ ರೂಪ |
| ಪ್ರಥಮಾ | ಕರ್ತ್ರಾರ್ಥ | ಉ | ಸಾವಿತ್ರಿಯು | ಮ್ | ಸಾವಿತ್ರಿಯುಮ್ |
| ದ್ವಿತೀಯಾ | ಕರ್ಮಾರ್ಥ | ಅನ್ನು | ಸಾವಿತ್ರಿಯನ್ನು | ಅಂ | ಸಾವಿತ್ರಿಯಂ |
| ತೃತೀಯಾ | ಕರಣಾರ್ಥ | ಇಂದ | ಸಾವಿತ್ರಿಯಿಂದ | ಇಂ, ಇಂದಂ, ಇಂದೆ | ಸಾವಿತ್ರಿಯಿಂ |
| ಚತುರ್ಥೀ | ಸಂಪ್ರದಾನ | ಗೆ, ಇಗೆ, ಕ್ಕೆ | ಸಾವಿತ್ರಿಗೆ | ಗೆ, ಕೆ, ಕ್ಕೆ | ಸಾವಿತ್ರಿಂಗೆ |
| ಪಂಚಮೀ | ಅಪಾದಾನ | ದೆಸೆಯಿಂದ | ಸಾವಿತ್ರಿಯ ದೆಸೆಯಿಂದ | ಅತ್ತಣಿಂ, ಅತ್ತಣಿಂದಂ | ಸಾವಿತ್ರಿಯತ್ತಣಿಂ |
| ಷಷ್ಠೀ | ಸಂಬಂಧ | ಅ | ಸಾವಿತ್ರಿಯ | ಅ | ಸಾವಿತ್ರಿಯ |
| ಸಪ್ತಮೀ | ಅಧಿಕರಣ | ಅಲ್ಲಿ | ಸಾವಿತ್ರಿಯಲ್ಲಿ | ಒಳ್ | ಸಾವಿತ್ರಿಯೊಳ್ |
ವಿಭಕ್ತಿ ಪಲ್ಲಟ: ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು. ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ವಿಭಕ್ತಿ ಪಲ್ಲಟ‘ ಎಂದು ಹೇಳುತ್ತೇವೆ.
ದ್ವಿತೀಯಾ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
- ಊರನ್ನು ಸೇರಿದನು (ದ್ವಿತೀಯಾ) ➔ ಊರಿಗೆ ಸೇರಿದನು (ಚತುರ್ಥೀ)
- ಬೆಟ್ಟವನ್ನು ಹತ್ತಿದನು (ದ್ವಿತೀಯಾ) ➔ ಬೆಟ್ಟಕ್ಕೆ ಹತ್ತಿದನು (ಚತುರ್ಥೀ)
ಪಂಚಮೀ ಬದಲಿಗೆ ತೃತೀಯಾ ವಿಭಕ್ತಿ ಸೇರಿದಾಗ –
- ಮರದ ದೆಸೆಯಿಂದ ಹಣ್ಣು ಬಿತ್ತು (ಪಂಚಮೀ)
ಮರದಿಂದ ಹಣ್ಣು ಬಿತ್ತು (ತೃತೀಯಾ) - ಕೌರವನ ದೆಸೆಯಿಂದ ಕೇಡಾಯ್ತು (ಪಂಚಮೀ)
ಕೌರವನಿಂದ ಕೇಡಾಯ್ತು (ತೃತೀಯಾ)
ಷಷ್ಠಿ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
- ನಮ್ಮ ಚಿಕ್ಕಪ್ಪ (ಷಷ್ಠಿ) ನಮಗೆ ಚಿಕ್ಕಪ್ಪ (ಚತುರ್ಥೀ)
- ಅಯೋಧ್ಯೆಯ ರಾಜ (ಷಷ್ಠಿ) ಅಯೋಧ್ಯೆಗೆ ರಾಜ (ಚತುರ್ಥೀ)
ಪತ್ರಲೇಖನ
ಈಗಾಗಲೇ ಹಿಂದಿನ ತರಗತಿಗಳಲ್ಲಿ ರಜಾ ಅರ್ಜಿ ಬಂಧುಗಳಿಗೆ ಬರೆಯುವ ಪತ್ರಗಳ ಬಗ್ಗೆ ತಿಳಿದುಕೊಳ್ಳಲಾಗಿದೆ ಈ ತರಗತಿಯಲ್ಲಿ ಉಳಿದ ಕೆಲವು ಮಾದರಿಗಳನ್ನು ತಿಳಿದುಕೊಳ್ಳೋಣ.
ವಿನಂತಿ ಪತ್ರ
ನಿಮ್ಮ ಬೀದಿಗೆ ದಾರಿದೀಪ ಹಾಕಿಸುವಂತೆ ನೀವು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ರಾಮಚಂದ್ರನೆಂದು ಭಾವಿಸಿಕೊಂಡು ವಾಮದಪದವು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೊಂದು ಪತ್ರ ಬರೆಯಿರಿ.
ದಿನಾಂಕ: ೨೫.೦೫.೨೦೨೬
ಇವರಿಂದ,
ರಾಮಚಂದ್ರ
ಚೆನ್ನೈತ್ತೋಡಿ ಗ್ರಾಮ
ವಾಮದಪದವು ಅಂಚೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಇವರಿಗೆ,
ಮಾನ್ಯ ಅಧ್ಯಕ್ಷರು,
ಗ್ರಾಮ ಪಂಚಾಯಿತಿ ಕಚೇರಿ,
ವಾಮದಪದವು,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಮಾನ್ಯರೇ,
ವಿಷಯ: ಬೀದಿ ದೀಪ ಅಳವಡಿಸುವಂತೆ ಕೋರಿ ಮನವಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಾಮದಪದವಿನಿಂದ ಚೆನ್ನೈತ್ತೋಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಈ ರಸ್ತೆ ನಿರ್ಮಾಣಗೊಂಡು ಈಗಾಗಲೇ ಹದಿನೈದು ವರ್ಷಗಳಾಗಿವೆ. ಚೆನ್ನೈತ್ತೋಡಿ ಗ್ರಾಮದಲ್ಲಿ ಸುಮಾರು ಎಪ್ಪತ್ತು ಮನೆಗಳಿಗೆ ಹೋಗಲು ಈ ರಸ್ತೆ ಪ್ರಮುಖವಾಗಿದೆ. ಆದರೆ ರಸ್ತೆ ಹೊಂಡಮಯವಾಗಿರುವರಿಂದ ಹಾಗೂ ಕಾಡಿನ ಮಧ್ಯೆ ಹಾದು ಹೋಗುವುದರಿಂದ ರಾತ್ರಿ ಹೊತ್ತಿನಲ್ಲಿ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಆದುದರಿಂದ ಗ್ರಾಮ ಪಂಚಾಯಿತಿಯ ವತಿಯಿಂದ ದಾರಿದೀಪ ಹಾಕಿಸಬೇಕಾಗಿ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ.
ವಂದನೆಗಳೊಂದಿಗೆ
ಇಂತಿ ತಮ್ಮ ವಿಶ್ವಾಸಿ,
ಸಹಿ …………………
(ರಾಮಚಂದ್ರ)
(ಊರಿನ ನಾಗರಿಕರಲ್ಲಿ ಐವತ್ತು ಜನರು ಈ ವಿನಂತಿ ಪತ್ರಕ್ಕೆ ಸಹಿ ಹಾಕಿರುತ್ತಾರೆ.)
ವ್ಯಾವಹಾರಿಕ ಪತ್ರ
ನೀವು ಶಿವಮೊಗ್ಗದ ಅಶೋಕನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರಮೀಳ ಎಂದು ಭಾವಿಸಿಕೊಂಡು ಪರಿಷತ್ತು ಪ್ರಕಟಿಸಿದ ‘ಕನ್ನಡ ನಿಘಂಟು’ವಿನ ಹತ್ತು ಪ್ರತಿಗಳನ್ನು ಕಳುಹಿಸಿಕೊಡುವಂತೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಿಗೊಂದು ಪತ್ರ ಬರೆಯಿರಿ.
ದಿನಾಂಕ: ೨೫.೦೫.೨೦೨೬
ಇವರಿಂದ,
ಪ್ರಮೀಳ,
ಹತ್ತನೆಯ ತರಗತಿ
ಸರಕಾರಿ ಪ್ರೌಢಶಾಲೆ
ಅಶೋಕನಗರ, ಶಿವಮೊಗ್ಗ.
ಇವರಿಗೆ,
ಮಾನ್ಯ ಕಾರ್ಯದರ್ಶಿಗಳು,
ಕನ್ನಡ ಸಾಹಿತ್ಯ ಪರಿಷತ್ತು,
ಚಾಮರಾಜಪೇಟೆ, ಬೆಂಗಳೂರು.
ಮಾನ್ಯರೇ,
ವಿಷಯ: ಪರಿಷತ್ತಿನ ಪ್ರಕಟಣೆಯಾದ ‘ಕನ್ನಡ ನಿಘಂಟು’ವಿನ ಹತ್ತು ಪ್ರತಿಗಳನ್ನು ಕಳುಹಿಸಿ ಕೊಡುವ ಬಗ್ಗೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪರಿಷತ್ತು ಪ್ರಕಟಿಸಿರುವ ಕನ್ನಡ ನಿಘಂಟಿನ ಹತ್ತು ಪ್ರತಿಗಳು ನನಗೆ ಮತ್ತು ನನ್ನ ಗೆಳತಿಯರಿಗೆ ಬೇಕಾಗಿದೆ. ದಯಮಾಡಿ ಹತ್ತು ಪ್ರತಿಗಳನ್ನು ನನ್ನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ಈ ಮೂಲಕ ಕೇಳಿ ಕೊಳ್ಳುತ್ತೇನೆ. ಆ ಬಗ್ಗೆ ಐನೂರು ರೂಪಾಯಿಗಳ ಬ್ಯಾಂಕ್ ಹುಂಡಿಯನ್ನು ಮುಂಗಡರೂಪವಾಗಿ ಈ ಪತ್ರದ ಜೊತೆ ಇರಿಸಿದ್ದೇನೆ.
ವಂದನೆಗಳೊಂದಿಗೆ,
ಇಂತಿ ತಮ್ಮ ನಂಬುಗೆಯ,
ಸಹಿ ………………………..
(ಪ್ರಮೀಳ)
ಪೂರಕ ಓದು
ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ‘ ಎಂಬ ವೈಚಾರಿಕ ಲೇಖನಗಳ ಸಂಪೂರ್ಣ ಸಂಗ್ರಹವನ್ನು ಓದಿರಿ.