Sarvjnana Tripadigalu notes grade IV poem written by Sarvjna. Sarvjnana Tripadigalu class 4 notes is about how Saravajna wrote about the life lessons learnt.
Poet Sarvajna was a great thinker who sought to correct the flaws of this world. Through his tripadi verses, he taught moral values and warned people against unethical behavior in society. He conveyed that one can experience heaven on earth only when one shares food, speaks truthfully, and treats others as equals.
Sarvajna explains that giving to others what one has saved for oneself is not a loss. Instead, setting aside one’s resources for service or charity brings assured rewards in life. He emphasizes that the lamp lit in the home of a person considered socially backward is never inferior. The light in every home is the same.
Though our occupations and skin colors may differ, we must live together in unity without discrimination based on caste. Sarvajna conveys the message that the light we all carry and illuminate is the same.
ಕವಿ ಸರ್ವಜ್ಞನು ಈ ಲೋಕದ ಡೊಂಕುಗಳನ್ನು ತಿದ್ದಿದ ಚಿಂತಕನು. ತನ್ನ ತ್ರಿಪದಿ ವಚನಗಳ ಮೂಲಕ ಮಾನವರು ಸಮಾಜದಲ್ಲಿ ಪಾಲಿಸಬೇಕಾದ ಮೌಲ್ಯಗಳನ್ನು ಬೋಧಿಸಿ, ಕೆಟ್ಟ ನಡವಳಿಕೆಗಳ ಬಗ್ಗೆ ಎಚ್ಚರಿಸಿದ್ದಾರೆ. ಈ ಲೋಕದಲ್ಲಿ ಅನ್ನವನ್ನು ಹಂಚುವುದು, ಸತ್ಯವಾಗಿ ಮಾತನಾಡುವುದು ಮತ್ತು ಇತರರನ್ನು ತನ್ನಂತೆಯೇ ಸಮಾನರೆಂದು ಭಾವಿಸುವ ಮನೋಭಾವ ಹೊಂದಿದಾಗ ಮಾತ್ರ ಇಲ್ಲಿಯೇ ಕೈಲಾಸವನ್ನು ಕಾಣಬಹುದು ಎಂದು ಹೇಳಿದ್ದಾರೆ.
ತನಗೆ ಬೇಕೆಂದು ಸಂಗ್ರಹಿಸಿಕೊಂಡದ್ದನ್ನು ಪರರಿಗೆ ಕೊಟ್ಟರೆ ಅದು ನಷ್ಟವಲ್ಲ; ಬದಲಾಗಿ, ನಿನ್ನಲ್ಲಿರುವುದನ್ನು ಪರರ ಸೇವೆ ಅಥವಾ ದಾನಕ್ಕಾಗಿ ಮುಡುಪಾಗಿಟ್ಟರೆ, ಅದರ ಫಲಗಳು ಮುಂದಿನ ಜೀವನದಲ್ಲಿ ಕಟ್ಟಿಟ್ಟ ಬುತ್ತಿಯಾಗಿ ನಿನಗೆ ದೊರೆಯುತ್ತವೆ ಎಂದು ಸರ್ವಜ್ಞನು ತಿಳಿಸುತ್ತಾನೆ. ಜಾತಿಹೀನನ ಮನೆಯ ಜ್ಯೋತಿಯೂ ಯಾವತ್ತೂ ಹೀನವಲ್ಲ. ನಾವು ವಾಸಿಸುವ ಎಲ್ಲರ ಮನೆಯ ಜ್ಯೋತಿಯೂ ಒಂದೇ. ನಮ್ಮ ಕೆಲಸಗಳು, ಬಣ್ಣಗಳು ಬೇರೆ ಬೇರೆ ಆಗಿರಬಹುದು; ಆದರೆ ಜಾತಿ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಬದುಕಬೇಕು. ನಾವು ಬೆಳಗುವ ಜ್ಯೋತಿ ಒಂದೇ ಎಂಬ ಸಂದೇಶವನ್ನು ಸರ್ವಜ್ಞನು ಸಾರಿದ್ದಾನೆ.
ಸರ್ವಜ್ಞನ ತ್ರಿಪದಿಗಳು
ಅ) ಒಂದೊಂದುವಾಕ್ಯದಲ್ಲಿಉತ್ತರಬರೆಯಿರಿ. (Answer the following in one sentence)
೧. ಸರ್ವಜ್ಞನು ಯಾವ ರೀತಿ ಆಗಿದ್ದನು?
ಉ: ಸರ್ವಜ್ಞನು ವಿದ್ಯೆಯ ಪರ್ವತ ಆಗಿದ್ದನು.
೨. ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದು ಯಾರಿಗೆ?
ಉ: ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಪರರಿಗೆ.
೩. ಯಾರ ಮನೆಯ ಜ್ಯೋತಿಯು ಹೀನವಲ್ಲ?
ಉ: ಜಾತಿಹೀನನ ಮನೆಯ ಜ್ಯೋತಿಯು ಹೀನವಲ್ಲ.
೪. ಪಾಪದ ನೆಲಗಟ್ಟು ಯಾವುದು?
ಉ: ಪಾಪದ ನೆಲಗಟ್ಟು ಕೋಪ.
ಆ) ಎರಡು/ ಮೂರುವಾಕ್ಯಗಳಲ್ಲಿಉತ್ತರಬರೆಯಿರಿ. (Answer the following in two – three sentences)
೧. ಸರ್ವಜ್ಞನು ವಿದ್ಯೆಯ ಪರ್ವತ ಆದದ್ದು ಹೇಗೆ?
ಉ: ಸರ್ವಜ್ಞನು ಗರ್ವದಿಂದ ಆಗಲಿಲ್ಲ. ಎಲ್ಲರಿಂದ ಒಂದೊಂದು ಮಾತನ್ನು ಕಲಿತು ವಿದ್ಯೆಯ ಪರ್ವತ ಆದದ್ದು.
೨. ಕುಲಗೋತ್ರಗಳ ನಡುವೆ ಭಿನ್ನತೆ ಏಕೆ ಇರಬಾರದು?
ಉ: ನಾವು ನಡೆಯುವ ಭೂಮಿಯು ಒಂದೇ. ನಾವು ಕುಡಿಯುವ ನೀರು ಒಂದೇ. ಸುಡುವ ಬೆಂಕಿ ಒಂದೇ ಆಗಿರುವಾಗ ಜಾತಿ – ಮತ – ಪಂಥ ಎಂದೆನ್ನುತ ಕುಲಗೋತ್ರಗಳ ಮಧ್ಯೆ ಭಿನ್ನತೆ ಇರಬಾರದು.
ಭಾಷಾ ಚಟುವಟಿಕೆ
ಆ) ಮಾದರಿಯಂತೆಪದಗಳನ್ನು ಬರೆ. (Write as per the model)
(ಮಾದರಿ : ಟ್ಟು – ಕಟ್ಟು – ಅಟ್ಟು – ತಟ್ಟು – ಪೆಟ್ಟು )
೧.ಡ್ಡ –ಗಡ್ಡ – ದಡ್ಡ – ಅಡ್ಡ- ಗುಡ್ಡ
೨. ತ್ತ – ಮುತ್ತ – ಬೆತ್ತ – ಸುತ್ತ – ಇತ್ತ
೩. ಕ್ಕ – ರೊಕ್ಕ – ಪಕ್ಕ – ತಕ್ಕ – ಲೆಕ್ಕ
ಇ) ಮಾದರಿಯಂತೆ ಸೂಕ್ತ ಸ್ಥಳದಲ್ಲಿಸ, ಶ, ಷ ಸೇರಿಸಿ ಪದ ರಚಿಸು.
ಮಾದರಿ : ಪ್ರಯಾಸ , ಆಕಾಶ , ದೋಷ
ಪ್ರವಾಸ, ನೀರಸ, ವಿಶ್ವಾಸ, ವಿಲಾಸ
ಆಕಾಶ, ವಿವಶ, ವಿದೇಶ, ಹತಾಶ, ವಶ
ದೋಷ, ರೋಷ , ಹರುಷ, ವಿಶೇಷ, ನಿಮಿಷ