D V G kannada writer. D V Gundappa is a famous kannada jourlalist and writer.

Devanahalli Venkataramaniah Gundappa, popularly known as DVG, was born in 1887 in Mulbagil, Kolar district. He was a journalist, founder of the Gokhale Public Institution, social worker, and writer. He wrote original works such as Mankutimmana Kagga, Marula Muniyan Kagga, Umarana Osage, Jnapaka ChitraShale, Antahpurada Geeta. DVG’s Sri and Bhagavad Gita Tatparya won the Kendra Sahitya Academy Award. He was the president of the 18th Kannada Sahitya Sammelana held in Madikeri. He was honored with an honorary degree by the University of Mysore. He died in 1975. The life verse excerpt is selected from DVG’s Mankutimmana Kagga.

ಡಿವಿಜಿ ಎಂದು ಪ್ರಸಿದ್ಧರಾಗಿರುವ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅವರು ೧೮೮೭ ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲಲ್ಲಿ ಜನಿಸಿದರು. ಪತ್ರಿಕೋದ್ಯಮಿಯಾಗಿ, ಗೋಖಲೆ ಸಾರ್ವಜನಿಕ ಸಂಸ್ಥೆಯ ಸ್ಥಾಪಕರಾಗಿ, ಸಮಾಜ ಸೇವಕರಾಗಿ, ಸಾಹಿತಿಯಾಗಿ ಪ್ರಸಿದ್ಧರಾದವರು.

ಇವರು ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಉಮರನ ಒಸಗೆ, ಜ್ಞಾಪಕ ಚಿತ್ರಶಾಲೆ, ಅಂತಃಪುರದ ಗೀತೆಗಳು ಮೊದಲಾದ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಡಿವಿಜಿ ಅವರ ಶ್ರೀ ಮದ್ಭಗವದ್ಗೀತಾ ತಾತ್ಪರ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮಡಿಕೇರಿಯಲ್ಲಿ ಸಮಾವೇಶಗೊಂಡ ೧೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿದೆ. ಇವರು ೧೯೭೫ರಲ್ಲಿ ನಿಧನರಾದರು. ಗೌರವಿಸು ಜೀವನವ ಪದ್ಯ ಭಾಗವನ್ನು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

Click here to download DVG, D V G kannada writer