ತಿರುಕನ ಕನಸು

ಅರ್ಥಗಳನ್ನು ಬರೆಯಿರಿ.

ತಿರುಕ, ಪಟ್ಟ, ಪಟ್ಟಕೊಡೆಯ, ಮಾಳ್ಪೆವು, ಮುರುಕು, ಧರ್ಮಶಾಲೆ, ಒರಗು, ಪುರ, ಕರಿ, ತೊಡರಿಸುವುದೋ, ಪೊಡವಿ, ಮದ, ಧನ, ರಾಜ್ಯಮದ, ತನುಜ, ಜನಿತ, ಅನಿತ, ಅಣ್ಣ, ನೃಪ, ಭಟ್ಟನಿಗಳು, ಓಲಗ, ಚಾತುರಂಗಬಲ, ಲೋಲ, ಸುತರು, ಬಾಲೆ, ಜೀಯ, ಸಕಲ, ಗಾಢ, ಅಖಿಲ, ರಾಯ, ದಂಡು, ಮುತ್ತಿದಂತೆ

ಪ್ರಶ್ನೆಗಳು

೧. ತಿರುಕನು ಎಂಥ ಕನಸನ್ನು ಕಾಣುತ್ತಿದ್ದನು?
೨. ಆಸ್ಥಾನದಲ್ಲಿದ್ದ ತಿರುಕ ತನ್ನ ಮಂತ್ರಿಗೆ ಏನೆಂದು ಹೇಳಿದನು?
೩. ತಿರುಕನು ಹೇಗೆ ರಾಜ್ಯವಾಳಿದನು?
೪. ತಿರುಕನು ಕನಸಿನಲ್ಲಿ ತನ್ನ ಮಕ್ಕಳ ಮದುವೆಯನ್ನು ಹೇಗೆ ಮಾಡಿದನು?
೫. ಈ ಪದ್ಯದ ನೀತಿಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
೬. ತಿರುಕ ಹೇಗೆ ವಾಸ್ತವತೆಗೆ ಮರಳಿದನು?

ಕೆಳಗೆ ಕೊಟ್ಟಿರುವ ಪದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :-

ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
(ತಿರುಕನ ಕನಸು)

ಪ್ರಶ್ನೆಗಳು:-

೭. ಕನಸಿನಲ್ಲಿ ತಿರುಕನೊಳಗೆ ಸೇರಿಕೊಂಡಿದ್ದ ಮದಗಳಾವುವು? ಆತನು ಹೆದರಿ ಕಣ್ಣನ್ನು ತೆರೆದಿದ್ದೇಕೆ? (2)
೮. ಅಖಿಲ ರಾಯರೆಲ್ಲರೂ ಮೆಚ್ಚುವಂತೆ ನಡೆದ ಕಾರ್ಯಕ್ರಮವೇನಾಗಿತ್ತು? ಅದು ಹೇಗಿತ್ತು? (3)
೯. ಅರಸನಾಗಿ ಆಸ್ಥಾನದಲ್ಲಿ ನೃಪನು ಮೆರೆದ ಸನ್ನಿವೇಶವನ್ನು ವರ್ಣಿಸಿ. (3)
೧೦. ಕರಿಯು ಯಾರ ಕೊರಳಿಗೆ ಕುಸುಮ ಮಾಲೆಯನ್ನು ಹಾಕಿತು? ಆಗ ಆ ವ್ಯಕ್ತಿಗಾದ ಸಂತೋಷವೇನು? (2)

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :-

ಧನದ ಮದವು ರಾಜ್ಯಮದವು
ತನುಜಮದವು ಯುವತಿಮದವು
ಜನಿತವಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರದಂಡು
ಮನೆಯ ಮುತ್ತಿದಂತೆಯಾಗೆ
ಕನಸು ಕಾಣುತಿರ್ದು ಹೆದರಿ ಕಣ್ಣ ತೆರೆದನು

ತಿರುಕನ ಕನಸು – ಮುಪ್ಪಿನ ಷಡಕ್ಷರಿ

ಪ್ರಶ್ನೆಗಳು:-

೧೧. ತಿರುಕನು ತನ್ನ ಮಂತ್ರಿಗಳಿಗೆ ಏನೆಂದು ಆಜ್ಞಾಪಿಸಿದನು? ವಿವರಿಸಿ. (3)
೧೨. ತಿರುಕನು ಹೇಗೆ ರಾಜ್ಯವಾಳುತ್ತಿದ್ದನು? (2)
೧೩. ಧರ್ಮಶಾಲೆಯಲ್ಲಿ ಮಲಗಿದ್ದವರು ಯಾರು? ಅವನು ಬಲು ಹಿಗ್ಗಲು ಕಾರಣವೇನು? (2)
೧೪. ಈ ಪದ್ಯದಿಂದ ನಮಗೆ ತಿಳಿದು ಬರುವ ನೀತಿ ಏನು? ವಿವರಿಸಿ. (3)

ಕೆಳಗೆ ಕೊಟ್ಟಿರುವ ಪದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ:

ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ

ತಿರುಕನ ಕನಸು – ಮುಪ್ಪಿನ ಷಡಕ್ಷರಿ

ಪ್ರಶ್ನೆಗಳು :

೧೫. ಈ ಪದ್ಯ ನಮಗೆ ಯಾವ ಸಂದೇಶವನ್ನು ನೀಡುತ್ತದೆ? ವಿವರಿಸಿ. (3)
೧೬. ತಿರುಕನು ಎಲ್ಲಿ ಕನಸು ಕಂಡನು? ಅವನು ಹಿಗ್ಗಲು ಕಾರಣವೇನು? (2)
೧೭. ತಿರುಕನಲ್ಲಿ ಹುಟ್ಟಿಕೊಂಡ ಮದಗಳು ಯಾವುವು? ಅವನು ಕನಸಿನಿಂದ ಎಚ್ಚರಗೊಂಡಿದ್ದು ಹೇಗೆ? (3)
೧೮. ತಿರುಕನು ದರ್ಪದಿಂದ ರಾಜ್ಯವಾಳಿದ್ದು ಹೇಗೆ? (2)
೧೯. ತಿರುಕನು ಹೆದರಿ ಕಣ್ಣು ಬಿಡಲು ಕಾರಣ?

೨೦.  ತಿರುಕನು ಮಲಗಿದ್ದುದು ಎಲ್ಲಿ?

೨೧. ಊರಿನ ಪ್ರಮುಖರು ಮುಂದಿನ ರಾಜನನ್ನು ಆರಿಸಲು ಯಾರಿಗೆ ಕುಸುಮ ಮಾಲೆಯನ್ನು ಕೊಟ್ಟರು?

೨೨. ‘ತಿರುಕನ ಕನಸು’ ಪದ್ಯದ ಕವಿ ಯಾರು?

೨೩. ತಿರುಕನಿಗೆ ಅನಿರೀಕ್ಷಿತವಾಗಿ ಅಧಿಕಾರ ಸಿಕ್ಕಾಗ ಅವನಲ್ಲಿ ಮೂಡಿದ ಭಾವನೆ ಯಾವುದು?

೨೪. ಕನಸಿನಲ್ಲಿ ರಾಜನಾದ ತಿರುಕನಿಗೆ ಕೆಳಗಿನ ಯಾವ ಮದಗಳು (ಅಹಂಕಾರ) ಉಂಟಾದವು?

೨೫. ತಿರುಕನು ತನ್ನ ಮಕ್ಕಳಿಗೆ ಎಂತಹ ಕನ್ಯೆಯರನ್ನು ತಂದು ಮದುವೆ ಮಾಡಲು ಮಂತ್ರಿಗಳಿಗೆ ಆಜ್ಞಾಪಿಸಿದನು?

೨೬. ತಿರುಕನು ಹೆದರಿ ತಟ್ಟನೆ ಕಣ್ಣು ಬಿಡಲು (ಎಚ್ಚರಗೊಳ್ಳಲು) ಕಾರಣವೇನು?

೨೭. ‘ತಿರುಕನ ಕನಸು’ ಪದ್ಯದ ಪ್ರಕಾರ ಜೀವನದಲ್ಲಿ ದೊರಕುವ ಸುಖ ಸಂಪತ್ತು ಯಾವುದರಂತೆ ಕ್ಷಣಮಾತ್ರದಲ್ಲಿ ಕರಗಿ ಹೋಗುತ್ತದೆ?

೨೮. ಈ ಪದ್ಯವು ಮಾನವರಿಗೆ ನೀಡುವ ಮುಖ್ಯ ಸಂದೇಶವೇನು?

Download Teeruthana Kanasuu

Leave a Reply

Your email address will not be published. Required fields are marked *