Vachanagalu Akkamahadevi Kannada poem grade IX teach us life skills. Vachanagalu Akkamahadevi class 9th ICSE notes can be referred to.
Akamahadevi holds a unique and superior place among the many Sharanas (devotees) of the 12th century. Her vachanas, which reflect her firm ideological stands and profound spiritual experiences, have significantly enriched the world of literature.
Akka Mahadevi was born in a village called Udutadi in the Shivamogga district. Her parents were Nirmalashetty and Sumati. From a very young age, she was a great devotee of Shiva. She considered Chennamallikarjuna (a form of Lord Shiva) as her husband and spent her entire life in his contemplation.
She left Udutadi and traveled to Kalyana (the center of the Sharana movement). There, in the Anubhava Mantapa (Hall of Spiritual Experience), she engaged in discussions with great Sharanas like Allama Prabhu and Basavanna, winning their appreciation.
In the final stages of her life, she traveled to Shrishaila and eventually merged with her beloved Chennamallikarjuna in the Kadali Vana (Kadali forest area). Her vachanas, which flow from her inner spirit, continue to inspire the people of the country today.
ವಚನಗಳು – ಅಕ್ಕಮಹಾದೇವಿ
೧೨ನೇ ಶತಮಾನದಲ್ಲಿದ್ದ ಅನೇಕ ಶಿವಶರಣರ ನಡುವೆ ಅವರಿಗೆ ಸರಿಸಮನಾಗಿ ಅಕ್ಕಮಹಾದೇವಿ ರಾರಾಜಿಸುತ್ತಾಳೆ. ಚಿಕ್ಕಪ್ರಾಯದ, ಈ ಸ್ತ್ರೀಯನ್ನು ಪ್ರಭುದೇವರು, ಬಸವಣ್ಣನವರು, ಚೆನ್ನಬಸವಣ್ಣನವರು ಗೌರವದಿಂದ ಕಾಣುವಂತೆ ಬಾಳಿದವಳು ಶಿವಶರಣೆ ಅಕ್ಕಮಹಾದೇವಿ.
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಿಂದ ಐದಾರು ಮೈಲಿಗಳ ದೂರದಲ್ಲಿರುವ ಉಡುತಡಿಯಲ್ಲಿ ಹನ್ನೆರಡನೇ ಶತಮಾನದಲ್ಲಿ ಜನಿಸಿದಳು. ಅಕ್ಕನ ತಾಯಿ- ತಂದೆಯರು ಶಿವಭಕ್ತರು. ಈ ಶಿವಭಕ್ತರ ಶಿವೋಪಾಸನೆಯ ಫಲವಾಗಿ ಜನಿಸಿದವಳು ಅಕ್ಕಮಹಾದೇವಿ. ಉಡುತಡಿಯನ್ನು ಬಿಟ್ಟು ಅಕ್ಕ ಕಲ್ಯಾಣ ಪಟ್ಟಣಕ್ಕೆ ಬಂದಳು. ಅಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ ಮುಂತಾದ ಶಿವಶರಣರನ್ನು ಶಿವಾನುಭವ ಮಂಟಪದಲ್ಲಿ ಕಂಡಳು.
ಈಕೆಯ ವಚನಗಳು ಉತ್ತಮ ಸಾಹಿತ್ಯ ರಚನೆಗಳಾಗಿಯೂ ನಮ್ಮ ಗಮನವನ್ನು ಸೆಳೆಯುತ್ತವೆ.
೧
ವನವೆಲ್ಲ ನೀವೆ
You are the entire forest
ಮನದೊಳಗಣ ದೇವತರುವೆಲ್ಲ ನೀವೆ
You are all the divine trees (Kalpavriksha) within the mind
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ
You are all the birds and animals playing within the trees
ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ
Chennamallikarjuna, you are filled in everything
ಎನಗೇಕೆ ಮುಖದೋರೆ?
Why do you not show your face to me?
೨
ಹಸಿವಾದೊಡೆ ಭಿಕ್ಷಾನ್ನಗಳುಂಟು;
If I am hungry, there is alms-food to be had
ತೃಷೆಯಾದೊಡೆ ಕೆರೆ ಬಾವಿಗಳುಂಟು;
If I am thirsty, there are lakes and wells;
ಶಯನಕ್ಕೆ ಹಾಳು ದೇಗುಲಗಳುಂಟು;
For sleep, there are ruined temples;
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕಿ ನೀ ಎನಗುಂಟು
Lord Chennamallikarjuna, for the companionship of my soul, I have You.
೩
ಬೆಟ್ಟದ ಮೇಲೊಂದು ಮನೆಯ ಮಾಡಿ
Having built a house on top of a mountain
ಮೃಗಗಳಿಗೆಂಜಿದೊಡೆಂತಯ್ಯಾ?
How can you be afraid of wild animals, O Lord?
ಸಮುದ್ರದದಡ ತಡಿಯಲೊಂದು ಮನೆಯ ಮಾಡಿ
Having built a house on the seashore
ನೊರೆತೆರೆಗಳಿಗೆ ಅಂಜಿದೊಡೆಂತಯ್ಯ
How can you be afraid of the frothing waves, O Lord?
ಸಂತೆಯೊಳಗೊಂದು ಮನೆಯ ಮಾಡಿ
Having built a house in the middle of a marketplace
ಶಬ್ದಕ್ಕೆ, ನಾಚಿದೊಡೆಂತಯ್ಯ?
How can you be shy of the noise, O Lord?
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ
Listen, O Lord Chennamallikarjuna
ಲೋಕದೊಳಗೆ ಹುಟ್ಟಿದ ಬಳಿಕ
Once you are born into this world
ಸ್ತುತಿನಿಂದೆಗಳು ಬಂದರೆ
When praise and blame come
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
One should remain calm and composed without harboring anger in the mind.
I. ಅರ್ಥಗಳು
- ವನ-ಕಾಡು; (Forest)
- ತರು-ಗಿಡ; (Tree / Plant)
- ಖಗ-ಪಕ್ಷಿ; (Bird)
- ಮೃಗ-ಪ್ರಾಣಿ; (Animal)
- ಮುಖದೋರೆ-ಕಾಣಿಸು. (Show Face)
- ಭಿಕ್ಷಾನ್ನ-ಬೇಡಿ ತಂದ ಅನ್ನ; (Begged rice)
- ತೃಷೆ-ಬಾಯಾರಿಕೆ; (Thirsty)
- ಶಯನ-ಮಲಗು; (Sleep)
- ಆತ್ಮಸಂಗಾತಕ-ಒಡನಾಡಿ; (Companionship)
- ಅಂಜು-ಭಯಪಡು; (Scared)
- ತಡಿ-ದಡ; (Shore)
- ಸಂತೆ-ಮಾರುಕಟ್ಟೆ; (Market)
- ಸ್ತುತಿ-ಹೊಗಳಿಕೆ; (Appreciate)
- ನಿಂದೆ-ತೆಗಳಿಕೆ; (not appreciate)
II. ಪದ್ಯದ ಸಾರಾಂಶ
೧. ಭಗವಂತನನ್ನು ಕಾಣುವ ಅದಮ್ಯ ಬಯಕೆ ಅಕ್ಕಮಹಾದೇವಿಯದು. ಎಲ್ಲಾ ವಸ್ತುಗಳಲ್ಲಿ ಅವನ ರೂಪವನ್ನೇ ಅವಳು ಕಾಣುತ್ತಾಳೆ. ಭಗವಂತನು ಸರ್ವಭರಿತನಾಗಿದ್ದಾನೆ. ಜಗತ್ತಿನ ಎಲ್ಲಾ ಕಡೆಯಲ್ಲೂ ಅಡಕವಾಗಿದ್ದಾನೆ.
Akka Mahadevi had a very strong desire to see God. She saw God’s form in everything around her. She believed that God is everywhere and exists in every part of the world.
೨. ಲೋಕದ ಯಾವ ಬಂಧನಗಳೂ ತನಗೆ ಬೇಡ. ತನ್ನ ಜೊತೆಗಾರನಾಗಿ ಭಗವಂತನಾದ ಚೆನ್ನಮಲ್ಲಿಕಾರ್ಜುನನಿದ್ದಾನೆ ಎಂಬ ಏಕತಾಭಾವದ ಸಮರ್ಪಣೆಯಿಂದ ಕೂಡಿದ ಶರಣಾಗತಿಯ ಭಾವ ಈ ವಚನದಲ್ಲಿದೆ.
She does not want any of the world’s bonds. This Vachana expresses a feeling of complete surrender and oneness, rooted in the belief that God Chennamallikarjuna is her only companion.
೩. ಮನುಷ್ಯ ತನ್ನ ಜೀವನದಲ್ಲಿ ಸಮಾಧಾನಿಯಾಗಿರಬೇಕು ಎಂದು ಹೇಳುವುದಕ್ಕೆ ಅಕ್ಕಮಹಾದೇವಿಯು ಹಲವು ಉಪಮೆಗಳನ್ನು ನೀಡಿ ಸಮರ್ಥಿಸುತ್ತಾಳೆ.
Akka Mahadevi provides and supports several metaphors to illustrate that a person must remain calm and composed throughout their life.
III. ಪ್ರಶೋತ್ತರಗಳು
೧. ಅಕ್ಕಮಹಾದೇವಿಯ ಅಂಕಿತನಾಮ, ಕೃತಿ-ಕರ್ತೃ ವಿಚಾರವಾಗಿ ಬರೆಯಿರಿ.
ಉ. ಅಕ್ಕಮಹಾದೇವಿಯ ಅಂಕಿತನಾಮ ಚೆನ್ನಮಲ್ಲಿಕಾರ್ಜುನ. ಅಕ್ಕಮಹಾದೇವಿಯ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಸಮೀಪದ ‘ಉಡುತಡಿ’. ಇವರು ಕನ್ನಡದ ಪ್ರಥಮ ವಚನಗಾರ್ತಿ. ಇವರು ೧೨ನೇ ಶತಮಾನದಲ್ಲಿ ಜನಿಸಿದರು. ಶರಣಸತಿ ಎಂಬ ಭಾವದಲ್ಲೇ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಂಡರು. ಅಕ್ಕಮಹಾದೇವಿ ಉಡುತಡಿಯನ್ನು ಬಿಟ್ಟು ಕಲ್ಯಾಣಕ್ಕೆ ಬಂದು ಬಸವಣ್ಣ, ಅಲ್ಲಮ ಮುಂತಾದ ಶರಣರನ್ನು ಭೇಟಿಯಾದರು. ಇವರ ವಚನಗಳು ಉತ್ತಮ ಸಾಹಿತ್ಯದ ರಚನೆಗಳು.
೨. ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನನ್ನು ಏನೆಂದು ಪ್ರಶ್ನಿಸಿದ್ದಾಳೆ?
ಉ. ನಮಗೆ ಪ್ರಕೃತಿಯಲ್ಲಿ ಕಾಣುವದೆಲ್ಲವೂ ಚೆನ್ನಮಲ್ಲಿಕಾರ್ಜುನನ ವಿವಿಧ ರೂಪಗಳು. ಲೌಕಿಕವಾಗಿ ಕಾಣುವ ಚೆನ್ನಮಲ್ಲಿಕಾರ್ಜುನನು, ಅಲೌಕಿಕವಾಗಿ ನಮ್ಮ ಮನದೊಳಗಿರುವನು. ಮರಗಿಡಗಳಲ್ಲಿ, ಆಡುವ ಪಕ್ಷಿಪ್ರಾಣಿಗಳಲ್ಲಿ ಅವನ ದರ್ಶನ ಆಗುತ್ತಿದೆ. ಹೀಗೆ ಪ್ರಕೃತಿಯ ಒಳಗೂ ಹೊರಗೂ ಇರುವ ಚೆನ್ನಮಲ್ಲಿಕಾರ್ಜುನನು ತನಗೆ ಏಕೆ ಕಾಣಿಸುತ್ತಿಲ್ಲ ಎಂದು ಅಕ್ಕಮಹಾದೇವಿ ವ್ಯಾಕುಲತೆಯಿಂದ ಪ್ರಶ್ನಿಸುತ್ತಿದ್ದಾಳೆ.
೩. ಸರಳ ರೀತಿಯಲ್ಲಿ ಹೇಗೆ ನಡೆಸುವದೆಂದು ಅಕ್ಕ ತನ್ನ ಅನುಭವದೊಂದಿಗೆ ಹೇಳುತ್ತಾಳೆ?
ಉ. ಪ್ರತಿಯೊಬ್ಬ ಮನುಷ್ಯನಿಗೂ ಊಟ, ಬಾಯಾರಿಕೆ, ಶಯನದ ಅವಶ್ಯಕತೆ ಇದೆ. ಜೊತೆಗೆ ಮಾನವನಿಗೆ ಇತರ ಸಹಜೀವಿಗಳ ಸ್ನೇಹದ ಅಗತ್ಯವೂ ಇದೆ. ಈ ವಚನದಲ್ಲಿ ಅಕ್ಕಮಹಾದೇವಿ ಇವೆಲ್ಲಕ್ಕೂ ಒಂದು ಪರ್ಯಾಯ ದಾರಿ ಇದೆ ಎಂದು ಹೇಳುತ್ತಿದ್ದಾಳೆ. ಅಕ್ಕಮಹಾದೇವಿ ತನಗೆ ಹಸಿವಾದರೆ ಭಿಕ್ಷಾನ್ನವಿದೆ, ಬಾಯಾರಿಕೆಯಾದರೆ ಕೆರೆ, ಬಾವಿಗಳ ನೀರಿದೆ, ಮಲಗಲು ಹಾಳು ದೇಗುಲಗಳಿವೆ ಎಂದು ತಿಳಿಸುತ್ತಾಳೆ. ತನಗೆ ಹಿತೈಷಿಯಾಗಿ ಚೆನ್ನಮಲ್ಲಿಕಾರ್ಜುನನಿದ್ದಾನೆ ಎಂದು ನುಡಿಯುತ್ತಿದ್ದಾಳೆ. ಈಕೆಯ ಪ್ರಕಾರ ಜೀವನದ ಬಯಕೆಗಳನ್ನು ಮೀರಿ ದೇವನೊಡನೆ ಸಹಚರ್ಯವನ್ನು ಬೆಳೆಸಿಕೊಂಡು ಸಾಗಬಹುದೆಂದು ಹೇಳಿದ್ದಾಳೆ.
೪. ಅಕ್ಕ ಹೇಗೆ ಸಮಾಧಾನಿಯಾಗಿರಬೇಕೆಂದು ಹೇಳುತ್ತಾಳೆ?
ಉ. ಕ್ರೂರ ಮೃಗಗಳು ವಾಸವಾಗಿರುವ ಬೆಟ್ಟದ ಮೇಲೆ ನಾವು ಮನೆಯನ್ನು ಮಾಡಿಕೊಂಡು ಪ್ರಾಣಿಗಳಿಗೆ ಭಯಪಟ್ಟರೆ ಹೇಗೆ? ಸಮುದ್ರದ ದಡದಲ್ಲಿ ಮನೆ ಮಾಡಿಕೊಂಡು ಅಲೆಗಳಿಗೆ ಭಯಪಟ್ಟರೆ ಹೇಗೆ? ಸಂತೆಯಲ್ಲಿ ಮನೆ ಮಾಡಿಕೊಂಡು, ಕಿರಿಕಿರಿಯಾಗುತ್ತಿದೆ ಎಂದರೆ ಹೇಗೆ? ಹಾಗೆಯೇ ಸಮಾಜದ ಜನರು ಅವರ ಮನಸ್ಸಿಗೆ ತೋರಿದಂತೆ ಹೊಗಳುತ್ತಾರೆ. ಹಾಗೆಯೇ ತೆಗಳುತ್ತಾರೆ. ಹೊಗಳಿದಾಗ ಉಬ್ಬದೇ ತೆಗಳಿದಾಗ ಕೋಪಗೊಳ್ಳದೇ ಎರಡಕ್ಕೂ ಸಮಾಧಾನಿಯಾಗಿರಬೇಕೆಂದು ಅಕ್ಕ ಹೇಳಿದ್ದಾಳೆ.
೫. ಅಂಜಿಕೆಯ ಬಗ್ಗೆ ಅಕ್ಕ ಮಹಾದೇವಿಯು ಹೇಳುತ್ತಿರುವುದೇನು? (Same as 4th question)
ಉ: ಕ್ರೂರ ಮೃಗಗಳು ವಾಸವಾಗಿರುವ ಬೆಟ್ಟದ ಮೇಲೆ ನಾವು ಮನೆಯನ್ನು ಮಾಡಿಕೊಂಡು ಪ್ರಾಣಿಗಳಿಗೆ ಭಯಪಟ್ಟರೆ ಹೇಗೆ? ಸಮುದ್ರದ ದಡದಲ್ಲಿ ಮನೆ ಮಾಡಿಕೊಂಡು ಅಲೆಗಳಿಗೆ ಭಯಪಟ್ಟರೆ ಹೇಗೆ? ಸಂತೆಯಲ್ಲಿ ಮನೆ ಮಾಡಿಕೊಂಡು, ಕಿರಿಕಿರಿಯಾಗುತ್ತಿದೆ ಎಂದರೆ ಹೇಗೆ? ಹಾಗೆಯೇ ಸಮಾಜದ ಜನರು ಅವರ ಮನಸ್ಸಿಗೆ ತೋರಿದಂತೆ ಹೊಗಳುತ್ತಾರೆ. ಹಾಗೆಯೇ ತೆಗಳುತ್ತಾರೆ. ಹೊಗಳಿದಾಗ ಉಬ್ಬದೇ ತೆಗಳಿದಾಗ ಕೋಪಗೊಳ್ಳದೇ ಎರಡಕ್ಕೂ ಸಮಾಧಾನಿಯಾಗಿರಬೇಕೆಂದು ಅಕ್ಕ ಹೇಳಿದ್ದಾಳೆ.
ಹಸಿವಾದೊಡೆ ಭಿಕ್ಷಾನ್ನಗಳುಂಟು;
ತೃಷೆಯಾದೊಡೆ ಕೆರೆ ಬಾವಿಗಳುಂಟು;
೬. ಮೇಲಿನ ವಚನದ ಭಾವಾರ್ಥವನ್ನು ಬರೆಯಿರಿ.(Same as 3rd question)
ಉ: ಪ್ರತಿಯೊಬ್ಬ ಮನುಷ್ಯನಿಗೂ ಊಟ, ಬಾಯಾರಿಕೆ, ಶಯನದ ಅವಶ್ಯಕತೆ ಇದೆ. ಜೊತೆಗೆ ಮಾನವನಿಗೆ ಇತರ ಸಹಜೀವಿಗಳ ಸ್ನೇಹದ ಅಗತ್ಯವೂ ಇದೆ. ಈ ವಚನದಲ್ಲಿ ಅಕ್ಕಮಹಾದೇವಿ ಇವೆಲ್ಲಕ್ಕೂ ಒಂದು ಪರ್ಯಾಯ ದಾರಿ ಇದೆ ಎಂದು ಹೇಳುತ್ತಿದ್ದಾಳೆ. ಅಕ್ಕಮಹಾದೇವಿ ತನಗೆ ಹಸಿವಾದರೆ ಭಿಕ್ಷಾನ್ನವಿದೆ, ಬಾಯಾರಿಕೆಯಾದರೆ ಕೆರೆ, ಬಾವಿಗಳ ನೀರಿದೆ, ಮಲಗಲು ಹಾಳು ದೇಗುಲಗಳಿವೆ ಎಂದು ತಿಳಿಸುತ್ತಾಳೆ. ತನಗೆ ಹಿತೈಷಿಯಾಗಿ ಚೆನ್ನಮಲ್ಲಿಕಾರ್ಜುನನಿದ್ದಾನೆ ಎಂದು ನುಡಿಯುತ್ತಿದ್ದಾಳೆ. ಈಕೆಯ ಪ್ರಕಾರ ಜೀವನದ ಬಯಕೆಗಳನ್ನು ಮೀರಿ ದೇವನೊಡನೆ ಸಹಚರ್ಯವನ್ನು ಬೆಳೆಸಿಕೊಂಡು ಸಾಗಬಹುದೆಂದು ಹೇಳಿದ್ದಾಳೆ.
೭. ಸರ್ವಭರಿತನಾಗಿರುವ ಚೆನ್ನಮಲ್ಲಿಕಾರ್ಜುನಯ್ಯನನ್ನು ಅಕ್ಕ ಏನೆಂದು ಕೇಳುತ್ತಿದ್ದಾಳೆ? (Same as 2nd question)
ಉ: ನಮಗೆ ಪ್ರಕೃತಿಯಲ್ಲಿ ಕಾಣುವದೆಲ್ಲವೂ ಚೆನ್ನಮಲ್ಲಿಕಾರ್ಜುನನ ವಿವಿಧ ರೂಪಗಳು. ಲೌಕಿಕವಾಗಿ ಕಾಣುವ ಚೆನ್ನಮಲ್ಲಿಕಾರ್ಜುನನು, ಅಲೌಕಿಕವಾಗಿ ನಮ್ಮ ಮನದೊಳಗಿರುವನು. ಮರಗಿಡಗಳಲ್ಲಿ, ಆಡುವ ಪಕ್ಷಿಪ್ರಾಣಿಗಳಲ್ಲಿ ಅವನ ದರ್ಶನ ಆಗುತ್ತಿದೆ. ಹೀಗೆ ಪ್ರಕೃತಿಯ ಒಳಗೂ ಹೊರಗೂ ಇರುವ ಸರ್ವಭರಿತನಾಗಿರುವ ಚೆನ್ನಮಲ್ಲಿಕಾರ್ಜುನನು ತನಗೆ ಏಕೆ ಕಾಣಿಸುತ್ತಿಲ್ಲ ಎಂದು ಅಕ್ಕ ಕೇಳುತ್ತಿದ್ದಾಳೆ.
೮. ಬೆಟ್ಟ, ಸಮುದ್ರ, ಹಾಗೂ ಸಂತೆಯಲ್ಲಿ ಮನೆಯ ಮಾಡಿದವರು ಯಾವುದಕ್ಕೆ ಅಂಜಬಾರದು? ಏಕೆ? (Same as 4th question)
ಉ: ಕ್ರೂರ ಮೃಗಗಳು ವಾಸವಾಗಿರುವ ಬೆಟ್ಟದ ಮೇಲೆ ನಾವು ಮನೆಯನ್ನು ಮಾಡಿಕೊಂಡು ಪ್ರಾಣಿಗಳಿಗೆ ಭಯಪಟ್ಟರೆ ಹೇಗೆ? ಸಮುದ್ರದ ದಡದಲ್ಲಿ ಮನೆ ಮಾಡಿಕೊಂಡು ಅಲೆಗಳಿಗೆ ಭಯಪಟ್ಟರೆ ಹೇಗೆ? ಸಂತೆಯಲ್ಲಿ ಮನೆ ಮಾಡಿಕೊಂಡು, ಕಿರಿಕಿರಿಯಾಗುತ್ತಿದೆ ಎಂದರೆ ಹೇಗೆ? ಹಾಗೆಯೇ ಸಮಾಜದ ಜನರು ಅವರ ಮನಸ್ಸಿಗೆ ತೋರಿದಂತೆ ಹೊಗಳುತ್ತಾರೆ. ಹಾಗೆಯೇ ತೆಗಳುತ್ತಾರೆ. ಹೊಗಳಿದಾಗ ಉಬ್ಬದೇ ತೆಗಳಿದಾಗ ಕೋಪಗೊಳ್ಳದೇ ಎರಡಕ್ಕೂ ಸಮಾಧಾನಿಯಾಗಿರಬೇಕೆಂದು ಅಕ್ಕ ಹೇಳಿದ್ದಾಳೆ.
೯. ಸ್ತುತಿ, ನಿಂದೆಗಳಿಗೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು? ಕಾರಣವೇನು?
ಉ: ಕ್ರೂರ ಮೃಗಗಳು ವಾಸವಾಗಿರುವ ಬೆಟ್ಟದ ಮೇಲೆ ನಾವು ಮನೆಯನ್ನು ಮಾಡಿಕೊಂಡು ಪ್ರಾಣಿಗಳಿಗೆ ಭಯಪಟ್ಟರೆ ಹೇಗೆ? ಸಮುದ್ರದ ದಡದಲ್ಲಿ ಮನೆ ಮಾಡಿಕೊಂಡು ಅಲೆಗಳಿಗೆ ಭಯಪಟ್ಟರೆ ಹೇಗೆ? ಸಂತೆಯಲ್ಲಿ ಮನೆ ಮಾಡಿಕೊಂಡು, ಕಿರಿಕಿರಿಯಾಗುತ್ತಿದೆ ಎಂದರೆ ಹೇಗೆ? ಹಾಗೆಯೇ ಸಮಾಜದ ಜನರು ಅವರ ಮನಸ್ಸಿಗೆ ತೋರಿದಂತೆ ಹೊಗಳುತ್ತಾರೆ. ಹಾಗೆಯೇ ತೆಗಳುತ್ತಾರೆ. ಹೊಗಳಿದಾಗ ಉಬ್ಬದೇ ತೆಗಳಿದಾಗ ಕೋಪಗೊಳ್ಳದೇ ಎರಡಕ್ಕೂ ಸಮಾಧಾನಿಯಾಗಿರಬೇಕೆಂದು ಅಕ್ಕ ಹೇಳಿದ್ದಾಳೆ.
ವನವೆಲ್ಲ ನೀವೆ
ಮನದೊಳಗಣ ದೇವತರುವೆಲ್ಲ ನೀವೆ
೧೦. ಅಕ್ಕಮಹಾದೇವಿಯವರ ಅಂಕಿತನಾಮವೇನು? ಅವರು”ಎನಗೇಕೆ ಮುಖದೋರೆ?” ಎಂದು ಕೇಳುವಾಗ ವ್ಯಕ್ತಪಡಿಸಿರುವ ಭಾವನೆಗಳೇನು?(Same as 2nd question)
ಉ:ಅಕ್ಕಮಹಾದೇವಿಯ ಅಂಕಿತನಾಮ ಚೆನ್ನಮಲ್ಲಿಕಾರ್ಜುನ. ನಮಗೆ ಪ್ರಕೃತಿಯಲ್ಲಿ ಕಾಣುವದೆಲ್ಲವೂ ಚೆನ್ನಮಲ್ಲಿಕಾರ್ಜುನನ ವಿವಿಧ ರೂಪಗಳು. ಲೌಕಿಕವಾಗಿ ಕಾಣುವ ಚೆನ್ನಮಲ್ಲಿಕಾರ್ಜುನನು, ಅಲೌಕಿಕವಾಗಿ ನಮ್ಮ ಮನದೊಳಗಿರುವನು. ಮರಗಿಡಗಳಲ್ಲಿ, ಆಡುವ ಪಕ್ಷಿಪ್ರಾಣಿಗಳಲ್ಲಿ ಅವನ ದರ್ಶನ ಆಗುತ್ತಿದೆ. ಹೀಗೆ ಪ್ರಕೃತಿಯ ಒಳಗೂ ಹೊರಗೂ ಇರುವ ಚೆನ್ನಮಲ್ಲಿಕಾರ್ಜುನನು “ಎನಗೇಕೆ ಮುಖದೋರೆ” ಎಂದು ಅಕ್ಕಮಹಾದೇವಿ ವ್ಯಾಕುಲತೆಯಿಂದ ಪ್ರಶ್ನಿಸುತ್ತಿದ್ದಾಳೆ.
೧೧. “ಆತ್ಮಸಂಗಾತಕಿ ನೀ ಎನಗುಂಟು” ಎಂದು ಯಾರು ಹೇಳಿದ್ದಾರೆ? ಸಂದರ್ಭವೇನು?
ಉ: “ಆತ್ಮಸಂಗಾತಕಿ ನೀ ಎನಗುಂಟು” ಎಂದು ಅಕ್ಕಮಹಾದೇವಿ ಹೇಳಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಊಟ, ಬಾಯಾರಿಕೆ, ಶಯನದ ಅವಶ್ಯಕತೆ ಇದೆ. ಜೊತೆಗೆ ಮಾನವನಿಗೆ ಇತರ ಸಹಜೀವಿಗಳ ಸ್ನೇಹದ ಅಗತ್ಯವೂ ಇದೆ. ಈ ವಚನದಲ್ಲಿ ಅಕ್ಕಮಹಾದೇವಿ ಇವೆಲ್ಲಕ್ಕೂ ಒಂದು ಪರ್ಯಾಯ ದಾರಿ ಇದೆ ಎಂದು ಹೇಳುತ್ತಿದ್ದಾಳೆ. ಅಕ್ಕಮಹಾದೇವಿ ತನಗೆ ಹಸಿವಾದರೆ ಭಿಕ್ಷಾನ್ನವಿದೆ, ಬಾಯಾರಿಕೆಯಾದರೆ ಕೆರೆ, ಬಾವಿಗಳ ನೀರಿದೆ, ಮಲಗಲು ಹಾಳು ದೇಗುಲಗಳಿವೆ ಎಂದು ತಿಳಿಸುತ್ತಾಳೆ. ತನಗೆ ಹಿತೈಷಿಯಾಗಿ ಚೆನ್ನಮಲ್ಲಿಕಾರ್ಜುನನಿದ್ದಾನೆ ಎಂದು ನುಡಿಯುತ್ತಿದ್ದಾಳೆ. ಈಕೆಯ ಪ್ರಕಾರ ಜೀವನದ ಬಯಕೆಗಳನ್ನು ಮೀರಿ ದೇವನೊಡನೆ ಸಹಚರ್ಯವನ್ನು ಬೆಳೆಸಿಕೊಂಡು ಸಾಗಬಹುದು ಎಂಬ ಸಂದರ್ಭದಲ್ಲಿ ಹೇಳಿದ್ದಾಳೆ.
ಸಮನಾರ್ಥಕ ಪದ:
ವನ = ಕಾಡು, ಅರಣ್ಯ, ಬನ (Forest)
ತರು = ಮರ, ವೃಕ್ಷ (Tree)
ಪಕ್ಷಿ = ಹಕ್ಕಿ (Bird)
ಮೃಗ = ಪ್ರಾಣಿ (Animal)
ದೇಗುಲ = ದೇವಾಲಯ, ದೇವಸ್ಥಾನ (Temple)
ಅಂಜಿ = ಭಯ, ಹೆದರಿಕೆ (Fear)
ಲೋಕ = ಪ್ರಪಂಚ, ಜಗತ್ತು, ಜಗ (World)
ಬೆಟ್ಟ = ಗುಡ್ಡ, ಪರ್ವತ (Mountain)
ಸಮುದ್ರ = ಕಡಲು, ಸಾಗರ (Sea)
ಪದಗಳ ಅರ್ಥ:
ಚೆನ್ನಮಲ್ಲಿಕಾರ್ಜುನ = ಶಿವ (Lord Shiva)
ತೃಷೆ = ಬಾಯಾರಿಕೆ (Thirsty)
ಶಯನ = ಮಲಗು (Sleep)
ಹಾಳು = ಹಾಳಾಗಿರುವ (Spoilt)
ಸಂಗಾತ = ಗೆಳೆಯ (Friend)
ಬಳಿಕ = ನಂತರ (Later)
ಕೋಪ = ಸಿಟ್ಟು (Angry)
ದೇವ = ದೇವರು (God)
ಮುಖ = face
ತೊರೆ = Leave
ಹಸಿವು = Hunger
ಭಿಕ್ಷೆ = Beg
ವಿರುದ್ಧ ಪದ:
ಪ್ರಾಯ X ವಯಸ್ಸು (Young X Old)
ಶಬ್ದ X ನಿಶ್ಶಬ್ದ (Noise X Noiseless)
ಮೇಲೆ X ಕೆಳಗೆ (Up X Down)
ಹುಟ್ಟು X ಸಾವು (Birth X Death)
ಲಿಂಗಗಳು:
ಪುಲ್ಲಿಂಗ ಸ್ತ್ರೀಲಿಂಗ
ಶರಣ ಶರಣೆ (Devotee)
ವಚನಗಾರ ವಚನಗಾರ್ತಿ (Writes Vachanagalu)
ಸಂಗಾತ ಸಂಗಾತಿ (Companion)
2 Responses