Sample paper 1 is to prepare for the ICSE Board exam. Sample Paper 1 can be downloaded.

KANNADA (Second Language)

Term End Examination – March 2026

Maximum Marks: 80

Time Allowed: Two Hours

  1. Answers to this Paper must be written on the paper provided separately.
  1. You will not be allowed to write during the first 15 minutes.
  1. This time is to be spent in reading the question paper.
  1. The time given at the head of this Paper is the time allowed for writing the answers.
  1. This paper comprises two Sections: Section A and Section B.
  1. Attempt all the questions from Section A.
  1. Attempt four questions from Section B, answering at least one question each from the two books you have studied and any two other questions from the same books that you have compulsorily chosen.
  1. The intended marks for questions or parts of questions are given in brackets [ ].

Question 2

Write a letter in Kannada in approximately 120 words on any one of the topics given below: (7)

ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಒಂದನ್ನು ಆರಿಸಿಕೊಂಡು ಸುಮಾರು 120 ಪದಗಳಲ್ಲಿ ಕನ್ನಡದಲ್ಲಿ ಒಂದು ಪತ್ರವನ್ನು ಬರೆಯಿರಿ.

(i) ನಿಮ್ಮ ಶಾಲೆಯಲ್ಲಿ ಆಚರಿಸುವ ವೈಭವದ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ವಿನಂತಿಸಿ ನಿಮ್ಮ ನಗರದ ಪೊಲೀಸ್‌ ಆಯುಕ್ತರಿಗೊಂದು ಪತ್ರ ಬರೆಯಿರಿ.

ಅಥವಾ

(ii) ನಿಮ್ಮ ತಂದೆಯವರ ಹುಟ್ಟು ಹಬ್ಬವನ್ನು ಆಚರಿಸಲು ಅವರಿಗೆ ಅರಿವಿಲ್ಲದಂತೆ ಯಾವ ರೀತಿಯ ತಯಾರಿ ಮಾಡಿಕೊಂಡಿದ್ದೀರಿ ? ಹೇಗೆ ಆಚರಿಸುತ್ತೀರಿ ಎಂಬುದನ್ನು ವಿವರಿಸಿ ಆ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿ ನಿಮ್ಮ ಗೆಳೆಯ/ಗೆಳತಿಯರಿಗೊಂದು ಪತ್ರ ಬರೆಯಿರಿ.

Question 3

Read the passage given below and answer in Kannada the questions that follow:-

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ. ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಬರೆಯಿರಿ.

ವಿನೋಬಾ ಭಾವೆಯನ್ನು ಕೇಳದ ಭಾರತೀಯನಿಲ್ಲ. ಅವರನ್ನು ಜನರು ಪ್ರೀತಿ ವಿಶ್ವಾಸಗಳಿಂದ ‘ವಿನೋಬಾಜಿ’ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಮಾರ್ಗವನ್ನು ಮುಂದುವರಿಸುತ್ತಿರುವ ವಿನೋಬಾ ಶಾಂತಿ, ಅಹಿಂಸೆ, ಸರ್ವೋದಯಗಳ ಪ್ರತಿಪಾದಕರು. ಅವರೇ ಭೂದಾನ, ಗ್ರಾಮದಾನ ಚಳುವಳಿಗಳನ್ನು ಪ್ರಾರಂಭಿಸಿದರು. ಗ್ರಾಮವೇ ನಮ್ಮ ಜೀವಾಳವೆಂದು ಸಾರಿದರು.

ವಿನೋಬಾಜಿಯವರ ಮೇರೆಗೆ ಗ್ರಾಮದ ಏಳಿಗೆಗೆ ಗ್ರಾಮಧರ್ಮ ಎಂಬುದಿದೆ. ಒಂದು ಕುಟುಂಬದ ಏಳಿಗೆಗಾಗಿ ಜಾತಿ ಧರ್ಮವಿರುವುದೋ ಹಾಗೆ, ಒಂದು ಗ್ರಾಮದ ಏಳಿಗೆಗಾಗಿ ಗ್ರಾಮಧರ್ಮವಿದೆ. ಈ ಗ್ರಾಮಧರ್ಮವನ್ನು ಪಾಲಿಸಿದರೆ ಮಾತ್ರ ನಮ್ಮ ಉದ್ಧಾರ ಸಾಧ್ಯ. ಹಾಗಿದ್ದರೆ, ಈ ಗ್ರಾಮಧರ್ಮ ಎಂದರೇನು? ಅವರ ಹಲವು ಲಕ್ಷಣಗಳನ್ನು ನೋಡೋಣ.

ವಿನೋಬಾಜಿಯವರ ಮೇರೆಗೆ ಗ್ರಾಮ ಧರ್ಮವೆಂದರೆ ಪ್ರಾಮುಖ್ಯವಾಗಿ ಗ್ರಾಮದ ಒಗ್ಗಟ್ಟು, ಗ್ರಾಮದ ಸಹಕಾರ. ಉಳುವಾಗ, ಬೀಜ ಬಿತ್ತುವಾಗ, ಬೆಳೆ ಕೊಯ್ಯುವಾಗ ಗ್ರಾಮದ ಜನರೆಲ್ಲ ಪರಸ್ಪರ ನೆರವಾಗಿ ಸಹಕಾರದಿಂದ ದುಡಿಯಬೇಕು. ಅವರು ಇತರರ ಕಷ್ಟಗಳಲ್ಲಿ ಪಾಲ್ಗೊಳ್ಳಬೇಕು. ಅವರ ಸುಖದಲ್ಲಿ ಪಾಲ್ಗೊಳ್ಳಬೇಕು, ಅವರ ಸುಖದಲ್ಲಿ ಸಂತೋಷ ಪಡಬೇಕು ದುಃಖಕ್ಕಾಗಿ ಮರುಗಬೇಕು.

ಇಷ್ಟೇ ಅಲ್ಲದೆ, ವಿನೋಬಾಜಿಯವರು ತಮ್ಮ ಸರ್ವೋದಯ ತತ್ವವನ್ನು ಸಾರಿದರು. ಈ ತತ್ವದ ಮೇಲೆ ಪ್ರತಿಯೊಂದು ಗ್ರಾಮವೂ ಸ್ವಯಂಪೂರ್ಣ ಘಟಕವಾಗಬೇಕು. ಹಳ್ಳಿಗಳಲ್ಲಿನ ಜಗಳಗಳು ಹಳ್ಳಿಯಲ್ಲಿಯೇ ತೀರ್ಮಾನವಾಗಬೇಕು. ಈ ಜಗಳ ತಂಟೆಗಳಲ್ಲದಿದ್ದರೆ, ಒಳ್ಳೆಯದೇನೋ ನಿಜ; ಆದರೆ ಅನೇಕ ಜನರು ಒಂದೆಡೆ ವಾಸಮಾಡಿದಾಗ, ವಿವಾದಗಳೇಳುವುದು ಸ್ವಾಭಾವಿಕ. ಇಂಥ ವಿವಾದಗಳನ್ನು ನಗರದ ಕಛೇರಿಗಳಿಗೆ ಒಯ್ಯದೆ, ಅವು ಸ್ಥಳೀಯ ಹಿರಿಯರ ಸಹಾಯದಿಂದ ಗ್ರಾಮಗಳಲ್ಲಿಯೇ ನಿರ್ಣೀತವಾಗಬೇಕು.

ಹಳ್ಳಿಗಳಲ್ಲಿ ಜ್ವರ, ವಾಂತಿ ಇತ್ಯಾದಿ ರೋಗಗಳಿಂದ, ಜನರು ಬಳಲಿದಾಗ, ಅವರಿಗೆ ಅಲ್ಲಿಯೇ ದೊರೆಯಬೇಕು. ಬಡವರು ಶ್ರೀಮಂತರೆನ್ನದೆ ಹಳ್ಳಿಗಳಲ್ಲಿಯೇ ಅವರಿಗೆ ವೈದ್ಯಕೀಯ ಚಿಕಿತ್ಸೆ ದೊರೆಯಬ… ಅದೂ ಅಲ್ಲದೆ ಹಳ್ಳಿಯ ಎಲ್ಲ ಮಕ್ಕಳಿಗೂ ಉಚಿತ ವಿದ್ಯಾಭ್ಯಾಸದ ಅನುಕೂಲತೆ ಒದಗಬೇಕು. ಬಡವರ ಮಕ್ಕ… ವಿದ್ಯೆಯಿಲ್ಲದೆ, ಅಲೆಯುವಂತಾಗಬಾರದು. ಪ್ರತಿದಿನ ಈ ಮಕ್ಕಳು ಎರಡು ಗಂಟೆಗಳ ಕಾಲ ಓದುಬರಹ ಕಲಿತ… ಸಾಕು. ಉಳಿದ ವೇಳೆಯಲ್ಲಿ ಅವರು ಕೆಲಸ ಮಾಡಬಹುದು.

ಬೇಸಾಯದ ಬಗ್ಗೆಯೂ ಸಹ ವಿನೋಬಾ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿನೋಬಾ ಮೇರೆಗೆ ಬೇಸಾಯವೆಂದರೆ ಭೂಮಿಯ ಸೇವೆ . ಭೂಮಿಯೆಲ್ಲ ದೇವರಿಗೆ ಸೇರಿದ್ದು, ನಾವೆಲ್ಲಾ ಭೂಮಿಯ ಸೇವಕರೆಂಬ ಭಾವನೆಯಿಂದ ನಾವು ಕೆಲಸ ಮಾಡಬೇಕು. ಹೊಲಗದ್ದೆಗಳನ್ನು ನಮ್ಮಲ್ಲಿಯೇ ಹಂಚಿಕೊಂಡರೂ, ಅವೆಲ್ಲ ಇಡೀ ಗ್ರಾಮಕ್ಕೆ ಸೇರಿದವೆಂಬುದನ್ನು ಮರೆಯಬಾರದು. ಬೆಳೆಯನ್ನು ಹಾಳುಮಾಡದೆ, ಭೂಮಿಯ ಉತ್ಪನ್ನವನ್ನು ಹೆಚ್ಚಿಸಲು ಯತ್ನಿಸಬೇಕು.

ಗ್ರಾಮಗಳೆಲ್ಲಾ ಸ್ವಾವಲಂಬಿಗಳಾಗಿರಬೇಕು. ಹಳ್ಳಿಗಳಿಗೆ ಬೇಕಾದ ವಸ್ತುಗಳನ್ನೆಲ್ಲಾ ಹಳ್ಳಿಗಳಲ್ಲಿಯೇ ತಯಾರಿಸಬೇಕು. ಗ್ರಾಮದ ಕೈಕಸುಬುಗಳನ್ನೆಲ್ಲಾ ಪ್ರೋತ್ಸಾಹಿಸಬೇಕು. ಇಂಥ ಗ್ರಾಮ ರಾಜ್ಯವೇ ನಿಜವಾದ ಸ್ವರಾಜ್ಯ. ಈ ಸ್ವರಾಜ್ಯವನ್ನು ಪಡೆಯುವ ಹೋರಾಟದಲ್ಲಿ ನೂಲುವ ಚರಕ, ಉಳುವ ನೇಗಿಲು ಉತ್ತಮ ಆಯುಧಗಳಾಗಿವೆ.

ಪ್ರಶ್ನೆಗಳು:-

  1. ಸರ್ವೋದಯದ ಪ್ರತಿಪಾದಕರು ಯಾರು? ಜನರು ಅವರನ್ನು ಏನೆಂದು ಕರೆಯುತ್ತಿದ್ದರು ? ಅವರು ಪ್ರಾರಂಭಿಸಿದ ಚಳುವಳಿ ಯಾವುದು ? [2]
  1. ಗ್ರಾಮ ಧರ್ಮದ ಹಲವು ಲಕ್ಷಣಗಳನ್ನು ತಿಳಿಸಿ. [2]
  1. ಗ್ರಾಮದ ಹಿರಿಯರು ಕೈಗೊಳ್ಳುವ ನಿರ್ಣಯಗಳೇನು ? [2]
  1. ಹಳ್ಳಿಗಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಕುರಿತು ವಿನೋಬಾರ ಚಿಂತನೆಗಳೇನು? [2]
  1. ಬೇಸಾಯ ಮತ್ತು ಸ್ವಾವಲಂಬಿ ಗ್ರಾಮದ ಬಗ್ಗೆ ವಿನೋಬಾರ ಅಭಿಪ್ರಾಯಗಳೇನು ? [2]

Question 4

Read the questions and choose the correct answer from the options given [8]

ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ/ಅಪೂರ್ಣ ಹೇಳಿಕೆಗಳಿಗೆ ನಾಲ್ಕು (4) ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಆಯ್ಕೆಯನ್ನು ಗುರುತಿಸಿ ಬರೆಯಿರಿ.

  1. ಉದಕ – ಪದದ ಸಮಾನಾರ್ಥಕ ಪದ.
    • (i) ನೀರು (ii) ಬೆಟ್ಟ (iii) ಅಗ್ನಿ (iv) ಪ್ರಮಾದ
  2. ಶ್ರದ್ಧೆ – ಈ ಪದದ ವಿರುದ್ಧ ಪದ.
    (i) ಏಕಾಗ್ರತೆ (ii) ಅಶ್ರದ್ಧೆ (iii) ಶ್ರಾದ್ಧ (iv) ಶ್ರದ್ಧಾವಂತ
  1. ಸರಿಯಾದ ವಾಕ್ಯವನ್ನು ಗುರುತಿಸಿ.
    (i) ಅತ್ಯುತ್ತಮವಾಗಿ ಮಕ್ಕಳು ಮೈದಾನದಲ್ಲಿ ಆಡಿದರು (ii) ಮಕ್ಕಳು ಮೈದಾನದಲ್ಲಿ ಆಡಿದರು ಅತ್ಯುತ್ತಮವಾಗಿ (iii) ಮೈದಾನದಲ್ಲಿ ಅತ್ಯುತ್ತಮವಾಗಿ ಆಡಿದರು ಮಕ್ಕಳು (iv) ಮಕ್ಕಳು ಮೈದಾನದಲ್ಲಿ ಅತ್ಯುತ್ತಮವಾಗಿ ಆಡಿದರು
  1. ಒಡೆಯ – ಈ ಪದದ ಅನ್ಯಲಿಂಗ ರೂಪ.
    (i) ಯಜಮಾನ (ii) ಯಜಮಾನಿ. (iii) ಒಡತಿ (iv) ಸೇವಕ
  1. ಕಲಾವಿದ – ಈ ಪದದ ಬಹುವಚನ ರೂಪ.
    (i) ಕಲೋಪಾಸಕರು (ii) ಕಲಾವಿದರು (iii) ಕೀಲಾವತಿ (iv) ಕಲೆಗಳು
  1. ಉತ್ತಮ ಪುಸ್ತಕಗಳು ನಮ್ಮ ಜ್ಞಾನವನ್ನು ಹೆಚ್ಚಿಸುವವು – ಗೆರೆ ಎಳೆದ ಪದದಲ್ಲಿರುವ ಕಾಲವನ್ನು ಗುರುತಿಸಿ ಬರೆಯಿರಿ.
    (i) ವಸಂತಕಾಲ (ii) ಭೂತಕಾಲ (iii) ಭವಿಷ್ಯತ್ ಕಾಲ (iv) ವರ್ತಮಾನ ಕಾಲ
  1. ಸೂಕ್ತ ವಿಭಕ್ತಿ ಪ್ರತ್ಯಯಗಳನ್ನು ಆರಿಸಿ ವಾಕ್ಯವನ್ನು ಪೂರ್ಣಗೊಳಿಸಿ.

ಗುರುಗಳು ತರಗತಿ ______________ ಮಕ್ಕಳಿಗೆ ಕನ್ನಡ ಪಾಠ __________ ಮಾಡುತ್ತಿದ್ದಾರೆ.

(i) ಯಲ್ಲಿ, ವನ್ನು
(ii) ಗೆ, ದಿಂದ
(iii) ವನ್ನು , ಯಲ್ಲಿ
(iv) ಯಲ್ಲಿ , ಕ್ಕೆ

  1. ಕೂಡಿ ಬಾಳಿದರೆ _____________ ಈ ಗಾದೆ ಮಾತನ್ನು ಪೂರ್ಣಗೊಳಿಸಿ.
    (i) ಕೈಲಾಸ
    (ii) ಸ್ವರ್ಗಸುಖ
    (iii) ಸುಖೀ ಕುಟುಂಬ
    (iv) ಸಂತೋಷ

SECTION – B (40 Marks)

Question from only two of the following textbooks are to be answered.

Attempt four questions from this section.

You must answer at least one question from each of the two books.

You have studied and any two other questions from the same books that you have chosen.

ಸಾಹಿತ್ಯ ಸಂಗಮ ಸಣ್ಣ ಕಥೆಗಳು

SAHITYA SANGAMA – SHORT STORIES

Question 5

Read the extract given below and answer in Kannada, the question that follow:

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.

“ತೀರ್ಥಯಾತ್ರೆಗೆ ಹೊರಟ ದಯಾಮಯನಾದ ವ್ಯಕ್ತಿಯು ಬಾಯಾರಿ ಅದೇ ಬಾವಿಗೆ ನೀರು ಕುಡಿಯಲು ಬರುತ್ತಾನೆ. ಆ ಬಾವಿಯಿಂದ ನೀರು ಪಡೆಯಲು ಒಂದು ಬಳ್ಳಿಗೆ ಸಣ್ಣ – ಬಿಡುತ್ತಾನೆ”

ಶಿವಭೂತಿಯ ಕಥೆ – ಪಂಚತಂತ್ರ

(i) ಬಾವಿಯಲ್ಲಿ ಬಿದ್ದವರು ಯಾರು ಯಾರು? ಅವರು ಹೇಗೆ ಬಾವಿಯಲ್ಲಿ ಬಿದ್ದರು? [2]

(ii) ಬೇಡನನ್ನು ರಕ್ಷಿಸಬೇಡ ಎಂದು ಶಿವಭೂತಿಗೆ ಯಾರು ಹೇಳಿದರು? ಆದರೂ ಶಿವಭೂತಿಯು ಬೇಡನನ್ನು ಏಕೆ ರಕ್ಷಿಸಿದನು? [2]

(iii) ಶಿವಭೂತಿಯು ಸರ್ಪವನ್ನು ನೆನೆಯಲು ಕಾರಣವೇನು ? ವಿವರಿಸಿ. [3]

(iv) ಬೇಡನನ್ನು ರಕ್ಷಿಸಿದ ಕಾರಣ ಶಿವಭೂತಿಗೆ ಉಂಟಾದ ತೊಂದರೆ ಏನು? ವಿವರಿಸಿ. [3]

Question 6

Read the extract given below and answer in Kannada, the question that follow:

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.

ಒಂದು ದಿನ ಅವರಿಗೆ ಬೇರೇನೂ ವಸ್ತು ದೊರೆಯದಿದ್ದಾಗ ಮರದ ಬುಡದಲ್ಲಿ ಬಿದ್ದಿದ್ದ ಒಂದು ಸತ್ತ ಹಾವನ್ನು ಎತ್ತಿಕೊಂಡು ಬಂದರು. ಸುಮಂಗಳ ಆ ಸತ್ತ ಹಾವನ್ನು ತನ್ನ ಗುಡಿಸಲಿನ ಮೇಲೆ ಎಸೆದಳು.

ದೀಪಾವಳಿಯ ಮಹಿಮೆ ಜನಪದ

(i) ಸತ್ತ ಹಾವನ್ನು ಎತ್ತಿಕೊಂಡು ಬಂದವರು ಯಾರು ? ಏಕೆ ? [2]

(ii) ಧನ ಮತ್ತು ಸಮೃದ್ಧಿಯ ಲಕ್ಷ್ಮಿಗೆ ಯಾರ ಬಗ್ಗೆ, ಏಕೆ ಅಸಮಾಧಾನವಾಯಿತು ? [2]

(iii) ಚಿನ್ನಾರಿ ರಾಜ್ಯದ ರಾಜ ಯಾರು ? ಅವನ ಬಗ್ಗೆ ಜನರು ಚಿಂತಿಸುತ್ತಿದ್ದು ಏಕೆ ? ತಿಳಿಸಿ. [3]

(iv) ರಾಜ ಪ್ರತಾಪನಿಗೆ ಮತ್ತೆ ರಾಜ್ಯ ಸಂಪತ್ತು ಲಭಿಸಿದ್ದು ಹೇಗೆ ? [3]

Question 7

Read the extract given below and answer in Kannada, the question that follow:

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.

ಮರದ ಸುತ್ತಲೂ ಸುತ್ತುತ್ತಿದ್ದ ಒಬ್ಬ ಬೇಟೆಗಾರನು ಕಾಣಿಸಿದ. ಭಯಭೀತಿಗೊಳಗಾದ ಪಾರಿವಾಳವು ಮರಕ್ಕೊಂದು ಗೂಡಿನೊಳಗೆ ಮುದುರಿಕೊಂಡಿತು ಮತ್ತು ಕಷ್ಟವು ಬಂದು ಕಾಲಬುಡದಲ್ಲೇ ನಿಂತಿರುವುದನ್ನು ತನ್ನ ಜೊತೆಗಾರ ಪಾರಿವಾಳಕ್ಕೆ ಹೇಳುತ್ತದೆ.

ತಾಳ್ಮೆಗೆ ಒಲಿದ ಅದೃಷ್ಟ ನಾರಾಯಣೀ ದಾಮೋದರ್

(i) ಗಂಡು ಪಾರಿವಾಳವು ಗಡಗಡ ನಡುಗಲು ಕಾರಣವೇನು ? [2]

(ii) ಪಾರಿವಾಳಗಳು ಎಲ್ಲಿ ಮತ್ತು ಹೇಗೆ ಜೀವನ ಸಾಗಿಸುತ್ತಿದ್ದವು ? [2]

(iii) ಪಾರಿವಾಳಗಳಿಗೆ ಆಶ್ಚರ್ಯದ ಜೊತೆಗೆ ಸಂತೋಷ ಉಂಟಾಗಲು ಕಾರಣವೇನು ? [3]

(iv) ಬೇಟೆಗಾರ ಮತ್ತು ಗಿಡುಗ ಅಂತ್ಯಕಂಡ ಬಗೆಯನ್ನು ವಿವರಿಸಿ ? [3]

ಕಾದಂಬರಿ – ನಾಟ್ಯ ಮಯೂರಿ

(NOVEL – NATYA MAYURI)

ಶ್ರೀ ಸಾ. ಶಿ. ಮರುಳಯ್ಯ

(SHRI SA. SHI. MARULAYYA)

Question 8

Read the extract given below and answer in Kannada, the question that follow:

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.

“ಇಬ್ಬರು ನರ್ತಕಿಯರು ಶಿವ-ಪಾರ್ವತಿಯರ ವೇಷ ಧರಿಸಿ ನರ್ತಿಸುತ್ತಿದ್ದಾರೆ. ಆ ನುದಿಗೆ ನೂರು ಮದೆಯಷ್ಟು ಗುಡುಗುವ ವಾದ್ಯ ವಿಶೇಷಗಳು!”

(i) ಇಬ್ಬರು ನರ್ತಕಿಯರು ಯಾವ ವೇಷ ಧರಿಸಿ ನರ್ತಿಸಿದರು? ಅವರಿಬ್ಬರು ಎಲ್ಲಿ ನರ್ತಿಸಿದರು? ಅವರಿಬ್ಬರ ನರ್ತನಕ್ಕೆ ಬಳಸಿದ ವಾದ್ಯಗಳಾವುವು? [2]

(ii) ಶಿವ ಹಾಗೂ ಶಿವೆಯರ ನೃತ್ಯದ ಸೊಬಗನ್ನು ಬಣ್ಣಿಸಿ. [2]

(iii) ‘ಕ್ಷಮಿಸಿ’ ಎಂದು ನುಡಿದವರು ಯಾರು ? ಆತ ನೋಡಲು ಹೇಗಿದ್ದಾನೆ ? [3]

(iv) ಮಾರಸಿಂಗಮಯ್ಯ ಯಾರು? ರಾಜಕುಮಾರ ವಿಷ್ಣುವರ್ಧನನು ಅವರ ವ್ಯಕ್ತಿತ್ವವನ್ನು ಏಕೆ ಪ್ರಶಂಸಿಸಿದನು? [3]

Question 9

Read the extract given below and answer in Kannada, the question that follow:

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.

“ಜನರೆಲ್ಲ ಒಬ್ಬೊಬ್ಬರಾಗಿ ಸರಿದರು. ಶಾಂತಲೆ ಮಾತ್ರ ಗೋಡೆಯ ಮೇಲೆ ಬರೆದ ಚಿತ್ರದಂತೆ ನಿಂತಿದ್ದಳು. ಅವಳಿಗೆ ಕುದುರೆಗಳಾಗಲಿ, ಅವುಗಳೆಬ್ಬಿಸಿದ ಧೂಳೆಯಾಗಲಿ ಕಾಣಿಸುತ್ತಿರಲಿಲ್ಲ. ಆ ಧೂಳಿನ ಮಧ್ಯದಲ್ಲಿ ವಿರಾಜಮಾನವಾಗಿ ಬೆಳಗುತ್ತಿದ್ದ ಮಹಾಮೂರ್ತಿಯೊಂದು ಗೋಚರಿಸುತ್ತಿತ್ತು.”

(i) ಶಾಂತಲೆಯ ಮನದಲ್ಲಿ ವಿರಾಜಮಾನವಾಗಿ ಬೆಳಗುತ್ತಿದ್ದ ಮಹಾಮೂರ್ತಿ ಯಾರು ? ಅದನ್ನು ಅವಳು ಹೇಗೆ ನೋಡುತ್ತಿದ್ದಳು ? [2]

(ii) ವಿಷ್ಣುವರ್ಧನನಿಗೆ ಯಾವ ಯಾವ ಲಲಿತ ಕಲೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು ? ಹೆಂಜೇರು ಯುದ್ಧದ ಗೆಲುವಿನಲ್ಲಿ ಅವರ ಪಾತ್ರ ಬರೆಯಿರಿ. [2]

(iii) ಶಾಂತಲೆಗೆ ದ್ವಾರಸಮುದ್ರದ ಹೊಯ್ಸಳ ಇತಿಹಾಸವನ್ನು ತಿಳಿಸಿದವರು ಯಾರು ? ವಿವರಿಸಿ. [3]

(iv) “ಅದರ ಅಗತ್ಯವಿಲ್ಲ.. ಬಾಚಜ್ಜ” ಸಂದರ್ಭ ಸಹಿತ ವಿವರಿಸಿ. [3]

Question 10

Read the extract given below and answer in Kannada, the question that follow:

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.

“ಇರಲಿ ಚಿಂತೆಯಿಲ್ಲ. ಶಾಂತಲೆಯನ್ನು ವಿಷ್ಣು ಮನಸಾ ಪ್ರೀತಿಸಿ ಲಗ್ನವಾಗಲು ಇಚ್ಛಿಸಿದರೆ ಉಳಿದವರು ರಾಜಕಾರಣಕ್ಕಾಗಿ ಬಾಂಧವ್ಯವನ್ನು ಬಯಸುತ್ತಿದ್ದಾರೆ..”

(i) ವಿಷ್ಣುವರ್ಧನನಿಗೆ ತಮ್ಮ ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಿಕೊಡಲು ಮುಂದೆ ಬಂದ ರಾಜರುಗಳು ಯಾರು ? [2]

(ii) ನಮ್ಮ ನಾಡಿನ ಪುಣ್ಯಕ್ಷೇತ್ರಗಳು ಯಾವುವು ? [2]

(iii) ಮಾರಸಿಂಗಮಯ್ಯನು ಶಿವಗಂಗೆ ನಾಡಿನ ದಂಡನಾಯಕನಾದ ಬಗೆ ಹೇಗೆ ? ವಿವರಿಸಿ. [3]

(iv) ಲಕ್ಷ್ಮಿ ಯಾರು ? ಅವಳು ಮಾರಸಿಂಗಮಯ್ಯನವರ ಸಾಕುಮಗಳಾದ ಬಗೆ ಹೇಗೆ ? [3]

Download sample question paper 1 to practise.

Leave a Reply

Your email address will not be published. Required fields are marked *