Kriyartha ಕ್ರಿಯಾರ್ಥ in Kannada grammar refers to the specific meaning, mood, or intention conveyed by a finite verb (ಕ್ರಿಯಾಪದ) in a sentence. Kriyartha indicates whether an action is stated as a definite fact, a command, a wish, or a possibility.

Based on the speaker’s intent, Kriyartha is divided into three main types: ವಿಧ್ಯರ್ಥ (Vidhyartha) for commands, requests, or blessings (e.g., ಮಾಡು — do); ನಿಷೇಧಾರ್ಥ (Nishedhartha) for negation or denial of an action (e.g., ಮಾಡನು — he will not do); and ಸಂಭಾವನಾರ್ಥ (Sambhavanartha) for doubt, possibility, or assumption (e.g., ಮಾಡಿಯಾನು — he might do).

Understanding Kriyartha helps accurately interpret the exact tone and certainty of an action in both spoken and classical Kannada literature. In school curricula, identifying these verb forms is essential for mastering sentence transformation and grammatical analysis.

ಕ್ರಿಯಾರ್ಥಗಳು

ಕ್ರಿಯಾರ್ಥದ ವಿಧ (Type)ವಿವರಣೆ ಮತ್ತು ಆಖ್ಯಾತ ಪ್ರತ್ಯಯಗಳು (Description & Suffixes)ಏಕವಚನ ರೂಪಗಳು (Singular)ಬಹುವಚನ ರೂಪಗಳು (Plural)
೧. ವಿದ್ಯರ್ಥಕ ಕ್ರಿಯಾಪದವಿವರಣೆ: ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳು ತೋರುವಾಗ ಧಾತುಗಳಿಗೆ ಸೇರುವ ಪ್ರತ್ಯಯಗಳು

ಪ್ರತ್ಯಯಗಳು: ಅಲಿ, ಇ, ವ, ವಾ, ಉವ, ಉವಾ, ಓಣ
ತಿನ್ನಲಿ, ತಿನ್ನುವ, ತಿನ್ನುವಾ,ತಿನ್ನಲಿ, ತಿನ್ನುವ, ತಿನ್ನುವಾ, ತಿನ್ನುವವು, ತಿನ್ನಿ
೨. ನಿಷೇಧಾರ್ಥಕ ಕ್ರಿಯಾಪದವಿವರಣೆ: ಕ್ರಿಯೆಯು ನಡೆಯಲಿಲ್ಲ, ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳಿಗೆ ಸೇರುವ ಪ್ರತ್ಯಯಗಳು

ಏಕವಚನ ಪ್ರತ್ಯಯಗಳು: ಅನು, ಅಳು, ಅದು, ಎ, ಎನು

ಬಹುವಚನ ಪ್ರತ್ಯಯಗಳು: ಅರು, ಅವು, ಅರಿ, ಎವು
ತಿನ್ನೆನು, ತಿನ್ನನು, ತಿನ್ನಳು, ತಿನ್ನೆ, ತಿನ್ನದುತಿನ್ನರು, ತಿನ್ನವು, ತಿನ್ನರಿ, ತಿನ್ನೆವು
೩. ಸಂಭಾವನಾರ್ಥಕ ಕ್ರಿಯಾಪದವಿವರಣೆ: ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆಯನ್ನು ಹೇಳುವಾಗ ಧಾತುಗಳಿಗೆ ಸೇರುವ ಪ್ರತ್ಯಯಗಳು

ತಿಂದಾನು, ತಿಂದಾಳು, ತಿಂದೀತು, ತಿಂದೀಯೆ, ತಿಂದೇನುತಿಂದಾರು, ತಿಂದಾವು, ತಿಂದೀರಿ, ತಿಂದೇವು

‘ಮಾಡು’ ಧಾತುವಿನ ವಿಧ್ಯರ್ಥಕ ರೂಪಗಳು

ಪುರುಷಲಿಂಗಏಕವಚನಬಹುವಚನ
ಪ್ರಥಮಪುಲ್ಲಿಂಗಮಾಡಲಿಮಾಡಲಿ
ಪ್ರಥಮಸ್ತ್ರೀಲಿಂಗಮಾಡಲಿಮಾಡಲಿ
ಪ್ರಥಮನಪುಂಸಕ ಲಿಂಗಮಾಡಲಿಮಾಡಲಿ
ಮಧ್ಯಮಪುಂ, ಸ್ತ್ರೀ, ನಪುಂಸಕ ಲಿಂಗಮಾಡುಮಾಡಿ/ಮಾಡಿರಿ
ಉತ್ತಮಪುಂ, ಸ್ತ್ರೀ, ನಪುಂಸಕ ಲಿಂಗಮಾಡುವೆಮಾಡುವಾ/ಮಾಡೋಣ

ನಿಷೇಧಾರ್ಥಕ ಕ್ರಿಯಾಪದಗಳು :- ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳ ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವುವು.

‘ಮಾಡು’ ಧಾತುವಿನ ನಿಷೇಧಾರ್ಥಕ ರೂಪಗಳು

ಪುರುಷಲಿಂಗಏಕವಚನಬಹುವಚನ
ಪ್ರಥಮಪುಲ್ಲಿಂಗಮಾಡನುಮಾಡರು
ಪ್ರಥಮಸ್ತ್ರೀಲಿಂಗಮಾಡಳುಮಾಡರು
ಪ್ರಥಮನಪುಂಸಕ ಲಿಂಗಮಾಡದುಮಾಡವು
ಮಧ್ಯಮಪುಂ, ಸ್ತ್ರೀ, ನಪುಂಸಕ ಲಿಂಗಮಾಡೆಮಾಡರಿ
ಉತ್ತಮಪುಂ, ಸ್ತ್ರೀ, ನಪುಂಸಕ ಲಿಂಗಮಾಡೆನುಮಾಡೆವು

ಸಂಭಾವನಾರ್ಥಕ ಕ್ರಿಯಾಪದಗಳು :- ಕ್ರಿಯೆಯು ನಡೆಯುವಿಕೆಯಲ್ಲಿ ‘ಸಂಶಯ’ ಅಥವಾ ‘ಊಹೆ’ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳೆನಿಸುವುವು.

‘ಮಾಡು’ ಧಾತುವಿನ ಸಂಭಾವನಾರ್ಥಕ ರೂಪಗಳು

ಪುರುಷಲಿಂಗಏಕವಚನಬಹುವಚನ
ಪ್ರಥಮಪುಲ್ಲಿಂಗಮಾಡಿಯಾನುಮಾಡಿಯಾರು
ಪ್ರಥಮಸ್ತ್ರೀಲಿಂಗಮಾಡಿಯಾಳುಮಾಡಿಯಾರು
ಪ್ರಥಮನಪುಂಸಕ ಲಿಂಗಮಾಡೀತುಮಾಡಿಯಾವು
ಮಧ್ಯಮಪುಂ, ಸ್ತ್ರೀ, ನಪುಂಸಕ ಲಿಂಗಮಾಡೀಯೆಮಾಡೀರಿ
ಉತ್ತಮಪುಂ, ಸ್ತ್ರೀ, ನಪುಂಸಕ ಲಿಂಗಮಾಡೇನುಮಾಡೇವು

ಕೊಟ್ಟಿರುವ ಧಾತುಗಳಿಗೆ ವಿದ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.
ಹಾಡು, ನೋಡು, ಕಟ್ಟು, ಕೇಳು, ಓಡು, ಓದು, ಬರೆ.

ಧಾತು (Root Verb)ಕ್ರಿಯಾರ್ಥದ ವಿಧ (Type)ಏಕವಚನ ರೂಪಗಳು (Singular)ಬಹುವಚನ ರೂಪಗಳು (Plural)
೧. ಹಾಡುವಿದ್ಯರ್ಥಕಹಾಡಲಿ, ಹಾಡು, ಹಾಡುವ, ಹಾಡುವಾಹಾಡಲಿ, ಹಾಡಿ, ಹಾಡುವ, ಹಾಡೋಣ
ನಿಷೇಧಾರ್ಥಕಹಾಡೆನು, ಹಾಡನು, ಹಾಡಳು, ಹಾಡೆ, ಹಾಡದುಹಾಡರು, ಹಾಡವು, ಹಾಡರಿ, ಹಾಡೆವು
ಸಂಭಾವನಾರ್ಥಕಹಾಡಾನು, ಹಾಡಾಳು, ಹಾಡೀತು, ಹಾಡೀಯೆ, ಹಾಡೇನುಹಾಡಾರು, ಹಾಡಾವು, ಹಾಡೀರಿ, ಹಾಡೇವು
೨. ನೋಡುವಿದ್ಯರ್ಥಕನೋಡಲಿ, ನೋಡು, ನೋಡುವ, ನೋಡುವಾನೋಡಲಿ, ನೋಡಿ, ನೋಡುವ, ನೋಡೋಣ
ನಿಷೇಧಾರ್ಥಕನೋಡೆನು, ನೋಡನು, ನೋಡಳು, ನೋಡೆ, ನೋಡದುನೋಡರು, ನೋಡವು, ನೋಡರಿ, ನೋಡೆವು
ಸಂಭಾವನಾರ್ಥಕನೋಡಾನು, ನೋಡಾಳು, ನೋಡೀತು, ನೋಡೀಯೆ, ನೋಡೇನುನೋಡಾರು, ನೋಡಾವು, ನೋಡೀರಿ, ನೋಡೇವು
೩. ಕಟ್ಟುವಿದ್ಯರ್ಥಕಕಟ್ಟಲಿ, ಕಟ್ಟು, ಕಟ್ಟುವ, ಕಟ್ಟುವಾಕಟ್ಟಲಿ, ಕಟ್ಟಿ, ಕಟ್ಟುವ, ಕಟ್ಟೋಣ
ನಿಷೇಧಾರ್ಥಕಕಟ್ಟೆನು, ಕಟ್ಟನು, ಕಟ್ಟಳು, ಕಟ್ಟೆ, ಕಟ್ಟದುಕಟ್ಟರು, ಕಟ್ಟವು, ಕಟ್ಟರಿ, ಕಟ್ಟೆವು
ಸಂಭಾವನಾರ್ಥಕಕಟ್ಟಾನು, ಕಟ್ಟಾಳು, ಕಟ್ಟೀತು, ಕಟ್ಟೀಯೆ, ಕಟ್ಟೇನುಕಟ್ಟಾರು, ಕಟ್ಟಾವು, ಕಟ್ಟೀರಿ, ಕಟ್ಟೇವು
೪. ಕೇಳುವಿದ್ಯರ್ಥಕಕೇಳಲಿ, ಕೇಳು, ಕೇಳುವ, ಕೇಳುವಾಕೇಳಲಿ, ಕೇಳಿ, ಕೇಳುವ, ಕೇಳೋಣ
ನಿಷೇಧಾರ್ಥಕಕೇಳೆನು, ಕೇಳನು, ಕೇಳಳು, ಕೇಳೆ, ಕೇಳದುಕೇಳರು, ಕೇಳವು, ಕೇಳರಿ, ಕೇಳೆವು
ಸಂಭಾವನಾರ್ಥಕಕೇಳಾನು, ಕೇಳಾಳು, ಕೇಳೀತು, ಕೇಳೀಯೆ, ಕೇಳೇನುಕೇಳಾರು, ಕೇಳಾವು, ಕೇಳೀರಿ, ಕೇಳೇವು
೫. ಓಡುವಿದ್ಯರ್ಥಕಓಡಲಿ, ಓಡು, ಓಡುವ, ಓಡುವಾಓಡಲಿ, ಓಡಿ, ಓಡುವ, ಓಡೋಣ
ನಿಷೇಧಾರ್ಥಕಓಡೆನು, ಓಡನು, ಓಡಳು, ಓಡೆ, ಓಡದುಓಡರು, ಓಡವು, ಓಡರಿ, ಓಡೆವು
ಸಂಭಾವನಾರ್ಥಕಓಡಾನು, ಓಡಾಳು, ಓಡೀತು, ಓಡೀಯೆ, ಓಡೇನುಓಡಾರು, ಓಡಾವು, ಓಡೀರಿ, ಓಡೇವು
೬. ಓದುವಿದ್ಯರ್ಥಕಓದಲಿ, ಓದು, ಓದುವ, ಓದುವಾಓದಲಿ, ಓದಿ, ಓದುವ, ಓದೋಣ
ನಿಷೇಧಾರ್ಥಕಓದೆನು, ಓದನು, ಓದಳು, ಓದೆ, ಓದದುಓದರು, ಓದವು, ಓದರಿ, ಓದೆವು
ಸಂಭಾವನಾರ್ಥಕಓದಾನು, ಓದಾಳು, ಓದೀತು, ಓದೀಯೆ, ಓದೇನುಓದಾರು, ಓದಾವು, ಓದೀರಿ, ಓದೇವು
೭. ಬರೆವಿದ್ಯರ್ಥಕಬರೆಯಲಿ, ಬರೆ, ಬರೆಯುವ, ಬರೆಯುವಾಬರೆಯಲಿ, ಬರೆಯಿರಿ, ಬರೆಯುವ, ಬರೆಯೋಣ
ನಿಷೇಧಾರ್ಥಕಬರೆಯೆನು, ಬರೆಯನು, ಬರೆಯಳು, ಬರೆಯೆ, ಬರೆಯದುಬರೆಯರು, ಬರೆಯವು, ಬರೆಯರಿ, ಬರೆಯೆವು
ಸಂಭಾವನಾರ್ಥಕಬರೆದಾನು, ಬರೆದಾಳು, ಬರೆದೀತು, ಬರೆದೀಯೆ, ಬರೆದೇನುಬರೆದಾರು, ಬರೆದಾವು, ಬರೆದೀರಿ, ಬರೆದೇವು

ಪ್ರಶ್ನೆಗಳು (Questions):

ಈ ವಾಕ್ಯದಲ್ಲಿನ ಕ್ರಿಯಾಪದವು ಯಾವ ಕ್ರಿಯಾರ್ಥದಲ್ಲಿದೆ? ಅವುಗಳನ್ನು ಅನ್ಯ ಕ್ರಿಯಾರ್ಥದಲ್ಲಿ ಬರೆಯಿರಿ. [ನಿಷೇಧಾರ್ಥಕ, ಸಂಭಾವನಾರ್ಥಕ, ವಿದ್ಯರ್ಥಕ]

೧] ನೀವು ಎಲ್ಲರೂ ಊಟಕ್ಕೆ ಹೋಗಿರಿ. (ಉದಾಹರಣೆ)

೨] ಮಹಾರಾಣಿಯವರು ರೈಲು ಮಾರ್ಗಗಳನ್ನು ಉದ್ಘಾಟನೆ ಮಾಡಲಿ.

೩] ಖಿರ್ದಿಪುಸ್ತಕವನ್ನು ಶಾನುಭೋಗರು ನೀಡಿಯಾರು.

೪] ಕಥೆ ಕಾದಂಬರಿಗಳನ್ನು ಜನರು ಓದರು.

೫] ಶಬರಿಯು ಹಣ್ಣು ಹಂಪಲುಗಳನ್ನು ನೀಡಿಯಾಳು.

೬] ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯರು.

೭] ಮಕ್ಕಳು ಈ ದಿನದಿಂದ ಶಾಲೆಗೆ ಹೋಗಲಿ.

೮] ಅಕ್ಕನ ಮದುವೆಗೆ ಮುಂದಿನ ತಿಂಗಳು ನಾನು ಮನೆಗೆ ಹೋದೇನು.

೯] ಗುರುಗಳು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

೧೦] ರೈತರು ಹೊಲದಲ್ಲಿ ಭತ್ತವನ್ನು ಬೆಳೆಯರು.

೧೧] ನಾಳೆ ಬೆಳಗ್ಗೆ ಮಳೆಯು ಬಂದೀತು.

೧೨] ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲಿ.

೧೩] ಭಾಮನು ವನವಾಸಕ್ಕೆ ಹೋಗನು.

೧೪] ಅತಿಥಿಗಳು ಸಂಜೆ ಮನೆಗೆ ಬಂದಾರು.

೧೫] ನಾವು ದೇಶದ ಕಾನೂನನ್ನು ಪಾಲಿಸೋಣ.

೧೬] ಸೀತೆಯು ಸುಮಧುರವಾಗಿ ಹಾಡಾಳು.

೧೭] ಮಕ್ಕಳು ಮೈದಾನದಲ್ಲಿ ಆಟವನ್ನು ಆಡರು.

೧೮] ನೀನು ಈ ಕೆಲಸವನ್ನು ಬೇಗನೆ ಮುಗಿಸು.

೨] ಮಹಾರಾಣಿಯವರು ರೈಲು ಮಾರ್ಗಗಳನ್ನು ಉದ್ಘಾಟನೆ ಮಾಡಲಿ.

೩] ಖಿರ್ದಿಪುಸ್ತಕವನ್ನು ಶಾನುಭೋಗರು ನೀಡಿಯಾರು.

೪] ಕಥೆ ಕಾದಂಬರಿಗಳನ್ನು ಜನರು ಓದರು.

೫] ಶಬರಿಯು ಹಣ್ಣು ಹಂಪಲುಗಳನ್ನು ನೀಡಿಯಾಳು.

೬] ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯರು.

೭] ಮಕ್ಕಳು ಈ ದಿನದಿಂದ ಶಾಲೆಗೆ ಹೋಗಲಿ.

೮] ಅಕ್ಕನ ಮದುವೆಗೆ ಮುಂದಿನ ತಿಂಗಳು ನಾನು ಮನೆಗೆ ಹೋದೇನು.

೯] ಗುರುಗಳು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

೧೦] ರೈತರು ಹೊಲದಲ್ಲಿ ಭತ್ತವನ್ನು ಬೆಳೆಯರು.

೧೧] ನಾಳೆ ಬೆಳಗ್ಗೆ ಮಳೆಯು ಬಂದೀತು.

೧೨] ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲಿ.

೧೩] ಭಾಮನು ವನವಾಸಕ್ಕೆ ಹೋಗನು.

೧೪] ಅತಿಥಿಗಳು ಸಂಜೆ ಮನೆಗೆ ಬಂದಾರು.

೧೫] ನಾವು ದೇಶದ ಕಾನೂನನ್ನು ಪಾಲಿಸೋಣ.

೧೬] ಸೀತೆಯು ಸುಮಧುರವಾಗಿ ಹಾಡಾಳು.

೧೭] ಮಕ್ಕಳು ಮೈದಾನದಲ್ಲಿ ಆಟವನ್ನು ಆಡರು.

೧೮] ನೀನು ಈ ಕೆಲಸವನ್ನು ಬೇಗನೆ ಮುಗಿಸು.

Click here to download kriyarthaka padagalu vidyardhaka sambhavanarthaka nishedharthaka

Leave a Reply

Your email address will not be published. Required fields are marked *