Stainless Steel Paatregalu ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು is a touching Kannada literary chapter written by acclaimed author Vasudhendra. Stainless Steel Paatregalu ICSE class IX and X sahitya sangam. The story humorously and emotionally captures the author’s mother’s deep affection and fascination for gleaming stainless steel utensils, which were her prized possessions over gold or silver.

‘ಸ್ಟೇನ್‌ಲೆಸ್’ ಸ್ಟೀಲ್ ಪಾತ್ರೆಗಳು

— ವಸುಧೇಂದ್ರ

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. NITK ಸುರತ್ಕಲ್‌ನಿಂದ ಇಂಜಿನಿಯರಿಂಗ್ ಮತ್ತು IISc ಬೆಂಗಳೂರಿನಿಂದ ಎಂ.ಇ. ಪದವಿ ಪಡೆದಿದ್ದಾರೆ. 20 ವರ್ಷಗಳ ಕಾಲ ಸಾಫ್ಟ್‌ವೇರ್ ಪ್ರಪಂಚದಲ್ಲಿ ಕೆಲಸ ಮಾಡಿ, ಈಗ ತಮ್ಮ ಸಮಯವನ್ನು ಪ್ರವಾಸ, ಓದು ಮತ್ತು ಬರೆಹಗಳಲ್ಲಿ ಕಳೆಯುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ. ರಾ. ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ|| ಯು. ಆರ್. ಅನಂತಮೂರ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಸೇಡಂನ ‘ಅಮ್ಮ’ ಪ್ರಶಸ್ತಿ ಮತ್ತು ಕಥಾರಂಗಂ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಚಾರಣದಲ್ಲಿ ಆಸಕ್ತಿಯಿರುವ ಇವರು ನಮ್ಮ ಪಶ್ಚಿಮಘಟ್ಟದ ಕಾಡಿನಲ್ಲಿರುವ ಹಲವು ಬೆಟ್ಟಗಳನ್ನೂ ಮತ್ತು ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನು ಹತ್ತಿದ್ದಾರೆ. ಟಿಬೆಟ್‌ನಲ್ಲರುವ ಕೈಲಾಸ ಮತ್ತು ಮಾನಸ ಸರೋವರ ಚಾರಣವನ್ನು ಮಾಡಿದ್ದಾರೆ.

asudhendra was born in 1969 in Sandur, Bellary district, and completed his primary education there. He earned his engineering degree from NITK Surathkal and an M.E. degree from IISc Bangalore. After working in the software world for 20 years, he now spends his time traveling, reading, and writing.

He has received several prestigious literary awards, including the Karnataka Sahitya Akademi Book Prize, D. R. Bendre Katha Award, Masti Katha Prashasti, Dr. U. R. Ananthamurthy Award, Basagarahalli Ramanna Award, Sedam’s ‘Amma’ Award, and Katharangam Award.

With a keen interest in trekking, he has climbed many hills in our Western Ghats forests and Mount Kilimanjaro in Tanzania. He has also undertaken treks to Mount Kailash and Lake Manasarovar in Tibet.

ಅಮ್ಮಗೆ ಬೆಳ್ಳಿ ಬಂಗಾರದ ಮೇಲೆ ಅಂತಹ ಮೋಹವಿರಲಿಲ್ಲ. ‘ತೊಗೊಳ್ಳಕ್ಕೆ ಆಗದ್ದಕ್ಕೆ ಆಸೆ ಮಾಡಿ ಏನುಪಯೋಗ’ ಅಂತ ತಳ್ಳಿ ಹಾಕಿಬಿಡುತ್ತಿದ್ದಳು. ಇನ್ನು ಹೊಸ ಬಟ್ಟೆಗಳ ಬಗ್ಗೆಯೂ ಅಂತಹ ವ್ಯಾಮೋಹವಿರಲಿಲ್ಲ. ವರ್ಷಕ್ಕೊಮ್ಮೆ ದೀಪಾವಳಿಗೋ, ತಪ್ಪಿದರೆ ಯುಗಾದಿಗೋ ಒಂದು ಸೀರೆ ಮಾತ್ರ ಅಪ್ಪ ಕೊಡಿಸುತ್ತಿದ್ದುದು. ಗುಮಾಸ್ತನ ಸಂಬಳದಲ್ಲಿ ಅಪ್ಪ ಅದನ್ನು ತರುವುದಕ್ಕೆ ಉದ್ರಿ ಬರೆಸುತ್ತಿದ್ದ. ಹಾಗಂತ ವ್ಯಾಮೋಹಗಳೇ ಇಲ್ಲದೆ ಬದುಕುವುದುಂಟೆ? ಪರ್ಯಾಯವಾಗಿ ಅಷ್ಟೇನು ದುಬಾರಿಯಲ್ಲದ, ಸ್ಟೀಲ್ ಪಾತ್ರೆ ಸಾಮಾನಿನ ಮೇಲೆ ಅಮ್ಮಗೆ ವಿಚಿತ್ರ ಆಕರ್ಷಣೆಯಿತ್ತು. ಅವಳಿಗೆ ಆ ಸ್ಟೀಲ್ ಪಾತ್ರೆಗಳೇ ಬೆಳ್ಳಿ-ಬಂಗಾರ, ವಸ್ತ್ರ-ಒಡವೆ ಎಲ್ಲಾ ಆಗಿತ್ತು.

“Mother did not have much fascination for silver and gold. She would brush it aside saying, ‘What is the use of desiring things that cannot be afforded?’ Nor did she have much craze for new clothes. Father used to get her only one saree a year, either for Diwali or failing that, for Ugadi. On a clerk’s salary, father had to buy it on credit. But does life go on without any desires? As an alternative, mother had a strange attraction towards not-so-expensive steel kitchen utensils. For her, those steel vessels were all her silver, gold, clothes, and ornaments.”

ಬಳ್ಳಾರಿಯಂತಹ ಪಟ್ಟಣದಲ್ಲಿ ಬೆಳೆದ ಅಮ್ಮ, ಮದುವೆಯಾಗಿ ಗಂಡನ ಊರಿಗೆ ಬಂದಾಗ ಅಪ್ಪನ ಮನೆಯಲ್ಲಿ ಒಂದೇ ಒಂದು ಸ್ಟೀಲ್ ಪಾತ್ರೆಯೂ ಇಲ್ಲದ್ದು ಕಂಡು ಎಂತಹ ಹಳ್ಳಿ ಮುಕ್ಕರ ಮನೆಗೆ ತಾನು ಬಂದು ಸೇರಬೇಕಾಯ್ತಲ್ಲಾ ಎಂದು ತುಂಬಾ ದುಃಖವಾಗಿ, ಬಾವಿಕಟ್ಟೆಯ ಬಳಿ ಒಬ್ಬಳೇ ಕುಳಿತು ಕಣ್ಣೀರು ಹಾಕಿದಳಂತೆ. ಅಪ್ಪನ ಮನೆಯಲ್ಲೋ ಊಟಕ್ಕೆ ಮುತ್ತಗದ ಎಲೆಯ ಪತ್ರಾಳಿ ಹಾಕುತಿದ್ದರಂತೆ. ತುಪ್ಪ ಬಡಿಸಬೇಕಾದರೂ ಒಂದು ಪುಟ್ಟ ಚಮಚವಿರಲಿಲ್ಲ. ಹಿತ್ತಲಿನಲ್ಲಿರುವ ಮಾವಿನ ಎಲೆಯೊಂದನ್ನು ಕಿತ್ತು, ಅದನ್ನೇ ಸುರುಳಿ ಸುತ್ತಿ ಉಪಯೋಗಿಸುತ್ತಿದ್ದರಂತೆ.

ಅಡಿಗೆಗಂತೂ ಬರೀ ಹಿತ್ತಾಳೆ, ಕಂಚು, ತಾಮ್ರದ ಪಾತ್ರೆಗಳು. ಕೈ ಜಾರಿ ಕಾಲ ಮೇಲೆ ಬಿದ್ದರೆ ಅಪ್ಪಚ್ಚಿಯಾಗಬೇಕು, ಅಂತಹ ಭಾರದವು. ಅಮ್ಮ ಅಳುವಷ್ಟು ಅತ್ತು ಕಡೆಗೆ ನಿರ್ಧರಿಸಿಬಿಟ್ಟಳಂತೆ – ಈ ಮನೆಯ ತುಂಬಾ ಸ್ಟೀಲ್ ಪಾತ್ರೆಗಳು ಹೊಳೆಯುವಂತೆ ಮಾಡಿದ್ದರೆ ನಾನು ಬಳ್ಳಾರಿ ಹೆಣ್ಣೇ ಅಲ್ಲ ಅಂತ.

Mother, who had grown up in a town like Bellary, felt deeply sorrowful when she came to her husband’s village after marriage and found not a single steel vessel in her father-in-law’s house. Feeling as though she had ended up in a backward, rural household, she sat alone by the well and wept. In her father’s house, meals used to be served on plates made of muttaga (butea) leaves. Even to serve ghee, there wasn’t a tiny spoon; instead, they would pluck a mango leaf from the backyard and use it rolled up.

For cooking, there were only vessels made of brass, bronze, and copper—so heavy that if one accidentally slipped and fell on a foot, it would be crushed. After crying as much as she could, Mother finally made a firm resolve: “If I don’t make this entire house shine with steel vessels, then I am no true daughter of Bellary.”

ಮೂರು ತಿಂಗಳು ಕಳೆಯುವಷ್ಟರಲ್ಲೇ ಮೊದಲ ಸ್ಟೀಲ್ ಪಾತ್ರೆ ಮನೆಯೊಳಗೆ ಕಾಲಿಕ್ಕುವ ಸದಾವಕಾಶ ಕೂಡಿ ಬಂತು. ನನ್ನಕ್ಕ ಸದ್ದಿಲ್ಲದೆ ಅಮ್ಮನೊಳಗೆ ಸೇರಿಕೊಂಡಿದ್ದಳು. ತಿಂದಿದ್ದನೆಲ್ಲಾ ಕಕ್ಕುತ್ತಿದ್ದ ಅಮ್ಮನ ಬಳಿ ಬಂದು ಅಪ್ಪ “ಏನು ಬೇಕೆ?” ಅಂತ ಪ್ರೀತಿಯಿಂದ ಕೇಳಿದ. ಭಟ್ಟರ ಹೋಟೆಲಿನ ಮಸಾಲ ದೋಸೆಯೋ, ಮನೆಗೆ ಪ್ರವೇಶವಿಲ್ಲದ ಬೆಳ್ಳುಳ್ಳಿ ಚಟ್ಣಿಯೋ ಅಥವಾ ಗಂಡಿ ನರಸಿಂಹಸ್ವಾಮಿಯ ಹಳ್ಳದ ನುಣ್ಣನೆಯ ಕೆಂಪು ಮಣ್ಣೋ – ಹೀಗೆ ಏನೋ ಕೇಳುತ್ತಾಳೆಂದುಕೊಂಡರೆ ಅಮ್ಮ “ಒಂದು ಸ್ಟೀಲ್ ತಟ್ಟೆ ಊಟಕ್ಕೆ ತಗೊಂಡು ಬರ್ರಿ” ಅಂತ ಬಯಕೆ ಹೊರಹಾಕಿದಳಂತೆ. ಸ್ಟೀಲ್ ತಟ್ಟೆಯೇನು ಪುಕ್ಕಟೆ ಬರುತ್ತದೆ? ಅಪ್ಪನಿಗೆ ಕೇಳಿದ್ದೇ ತಪ್ಪೆನ್ನಿಸಿರಬೇಕು. ಆದರೆ ತರದಿರಲಾದೀತೇ? ಬಸುರಿಯ ಬಯಕೆ ತೀರದಿದ್ದರೆ ಹುಟ್ಟುವ ಮಗುವಿಗೆ ಮಾತೇ ಬರುವುದಿಲ್ಲ. ಅಷ್ಟೇ! ಸಾಲ-ಸೋಲ ಮಾಡಿ ಅಪ್ಪ ಒಂದು ಸ್ಟೀಲ್ ತಟ್ಟೆ ತಂದ. ಆ ತಟ್ಟೆಗೆ ಚಟ್ಟಿ, ಪಲ್ಯ, ಹುಳಿ, ಉಪ್ಪು ಹಾಕಿಕೊಳ್ಳಲು ಮುಂಭಾಗದಲ್ಲಿ ಕುಣಿಗೆಗಳಿದ್ದವು. ಲೇಪಾಕ್ಷಿ ದೇಗುಲವನ್ನು ಕೆತ್ತಿದ ಶಿಲ್ಪಿ ತನಗೆ ಮತ್ತು ತಮ್ಮನ ಊಟಕ್ಕಾಗಿ ಕಲ್ಲಿನಲ್ಲಿ ಇದೇ ತರಹದ ತಟ್ಟೆಗಳನ್ನು ಕೆತ್ತಿದ್ದಾನಂತೆ. ತಟ್ಟೆಯನ್ನು ನೋಡಿದ ಅಮ್ಮನ ಖುಷಿಗೆ ಎಲ್ಲೆಯಿಲ್ಲಿಂದಂತಾಯಿತು. ಮನೆಯ ಹಳೆಯ ಪಾತ್ರೆಗಳ ಮಧ್ಯೆ ಆ ತಟ್ಟೆ ಹೊಸ ಹೀರೋಯಿನ್ ಆಗಿ ಮೆರೆದುಬಿಟ್ಟಿತ್ತು. ಆ ತಟ್ಟೆಯನ್ನು ತೆಗೆದುಕೊಂಡು ಊರಿನಲ್ಲಿ ಗೊತ್ತಿದ್ದ ಪ್ರತಿಯೊಬ್ಬರ ಮನೆಗೂ ಹೋಗಿ ತೋರಿಸಿ “ನಮ್ಮನೆಯವರು ಕೊಡಿಸ್ಯಾರೆ” ಎನ್ನುವಾಗ ಅಮ್ಮನ ಮುಖದಲ್ಲಿ ಹತ್ತಿಕ್ಕಲಾರದ ಹೆಮ್ಮೆ! ಅಪ್ಪ ಮೊದಲು ಆ ತಟ್ಟೆಯಲ್ಲಿ ಸ್ವಚ್ಛವಾಗಿ ಉಂಡು ಒಂದೆರಡು ಹೋಳು ಉಪ್ಪಿನಕಾಯಿ ಉಳಿಸಬೇಕು, ಅಮ್ಮ ಅನಂತರ ಅದೇ ತಟ್ಟೆಯಲ್ಲಿ ಊಟ ಮಾಡಿ ಮಜ್ಜಿಗೆಯನ್ನಕ್ಕೆ ಆ ಉಪ್ಪಿನಕಾಯಿ ಹೋಳನ್ನು ಬಾಡಿಸಿಕೊಳ್ಳುವಾಗ ಇನ್ನಿಲ್ಲದೆ ನಾಚಿಕೊಳ್ಳಬೇಕು.

Before three months could pass, an opportunity arose for the first steel vessel to enter the house. My older sister had quietly nestled inside mother’s womb. Coming to mother, who was vomiting everything she ate, father lovingly asked, “What would you like?” Thinking she might ask for something like the masala dosa from Bhatta’s hotel, garlic chutney which had no entry into the house, or the smooth red soil from the stream of Gandi Narasimhaswamy, mother instead expressed her desire: “Bring home a steel plate to eat in.” Do steel plates come for free? Asking father must have felt like a mistake to him. But could he refuse to bring it? If a pregnant woman’s cravings are not fulfilled, the child born will not be able to speak. That’s it! Taking on debts, father brought home a single steel plate. That plate had small compartments in the front to put chutney, vegetable side-dishes, sambhar, and salt. It is said that the sculptor who carved the Lepakshi temple had carved similar plates in stone for himself and his younger brother. There was no limit to mother’s joy upon seeing the plate. Amidst the old vessels of the house, that plate shone like a new heroine. Taking that plate, she would go to every known person’s house in the village to show it, and while saying, “My husband got this for me,” an unsuppressible pride would appear on her face! First, father had to eat cleanly from that plate and leave behind a couple of pieces of pickle; then mother would eat from the very same plate, feeling immensely shy as she mingled those pickle pieces with her buttermilk rice.

ಈ ತಟ್ಟೆಯ ಹಿಂದೆಯೇ ಸಾಕಷ್ಟು ಸ್ಟೀಲ್ ಪಾತ್ರೆಗಳು ಒಂದೊಂದಾಗಿ ಮನೆಗೆ ಪ್ರವೇಶ ಪಡೆದವು. ಹಾಲು ಕಾಸಲಿಕ್ಕೆಂದೇ ಒಂದು ಪಾತ್ರೆ, ಆಕಳ ಹಾಲು ಕರೆಯಲು ಒಂದು ಚೊಂಬು, ಅಕ್ಕನಿಗೆ ನೀರು ಕುಡಿಸಲೆಂದು ಸಣ್ಣ ಲೋಟ, ಸಾರು ಕಾಸುವ ಪಾತ್ರೆ… ಹೀಗೆ. ಸ್ಟೀಲ್ ಪಾತ್ರೆ ಬೆಲೆ ಕಡಿಮೆಯಾಯಿತೋ, ಜನರ ಸಂಬಳ ಹೆಚ್ಚಾಯಿತೋ ಗೊತ್ತಿಲ್ಲ. ನನ್ನ ನಾಮಕರಣಕ್ಕೆ ಎರಡು ದಪ್ಪ ಗ್ಲಾಸಗಳನ್ನು ಉಡುಗೊರೆಯಾಗಿಯೂ ಬಂಧುಗಳೊಬ್ಬರು ಕೊಟ್ಟುಬಿಟ್ಟರಂತೆ. ಎರಡರ ಮೇಲೂ ಕೊಟ್ಟವರ ಹೆಸರು! ಒಂದೊಂದಾಗಿ ಹಳೆಯ ಹಿತ್ತಾಳೆ, ಕಂಚು, ತಾಮ್ರದ ಪಾತ್ರೆಗಳು ಅಟ್ಟ ಸೇರಲಾರಂಭಿಸಿದವು. ಮೊದಮೊದಲು ಬರೀ ಅತ್ಯವಶ್ಯಕ ಸ್ಟೀಲ್ ಪಾತ್ರೆಗಳು ಮಾತ್ರ ಮನೆಗೆ ಬಂದಿದ್ದವು. ನಂತರ ನಿಧಾನಕ್ಕೆ ಯಾರೂ ಊಹಿಸಲಾರದ ವಿಶೇಷ ವಸ್ತುಗಳು ಸ್ಟೀಲ್ ಪಾತ್ರೆಗಳಾಗಿ ಬಂದವು. ಎಲೆಯ ಮುಂದೆ ಉಪ್ಪು ಬಡಿಸಲು ‘ವಾದಿರಾಜ್’ ತಟ್ಟೆ, ಉಪ್ಪಿನಕಾಯಿಯ ಜಾಡಿಯ ತಳದಿಂದಲೂ ಹೋಳು ತೆಗೆಯಬಹುದಾದ ‘ಅಮಿತಾಭ್’ ಚಮಚ, ‘ಜಯಮಾಲಿನೀ’ ಊದುಗೊಳವೆ, ‘ಪಾಕೀಜಾ’  ಊದುನಕಡ್ಡಿಯ ಸ್ಟಾಂಡು, ಹೂಬಳ್ಳಿ ಚಿತ್ತಾರದ ‘ಕಲ್ಪನಾ’ ಬಟ್ಟಲು – ಹೀಗೆ.

Following this plate, quite a few steel vessels entered the house one by one. A separate vessel just to boil milk, a small mug to milk the cow, a small tumbler for my older sister to drink water, a vessel to boil saaru (rasam)… and so on. Whether the price of steel vessels decreased or people’s salaries increased, I do not know. For my naming ceremony, one of our relatives gifted two thick glasses. The names of the givers were engraved on both of them. One by one, the old brass, bronze, and copper vessels began to find their way to the attic. Initially, only the most essential steel vessels came home. Later, slowly, special items that no one could have imagined arrived as steel vessels. A ‘Vadiraj’ plate to serve salt in front of a leaf, an ‘Amitabh’ spoon that could scoop out pieces even from the bottom of a pickle jar, a ‘Jayamalini’ blowing pipe (for the hearth), a ‘Pakeezah’ incense stick stand, a ‘Kalpana’ bowl with floral vine designs—and so on.

ನಮ್ಮೂರಿನಲ್ಲಿ ಮೊದಲಿಗೆ ಸ್ಟೀಲ್ ಪಾತ್ರೆ ಅಂಗಡಿಯಿರಲಿಲ್ಲ. ಬಳ್ಳಾರಿಯಲ್ಲಿತ್ತು. ಬಳ್ಳಾರಿಗೆ ಯಾವುದೋ ಕಾರ್ಯದ ಮೇಲೆ ಹೋದರೆ, ಅಮ್ಮ ಸ್ಟೀಲ್ ಅಂಗಡಿಗೆ ಭೇಟಿ ಕೊಡದೆ ವಾಪಾಸಾಗುತ್ತಿರಲಿಲ್ಲ. ಊರ ಹೊರಗೆ ಒಂದು ಫ್ಯಾಕ್ಟರಿ ಕಂ ಅಂಗಡಿಯಿತ್ತು. ಅಲ್ಲಿ ಊರಲ್ಲಿನ ಅಂಗಡಿಗಿಂತ ದರ ಕಡಿಮೆ. ಅಮ್ಮ ಬಿಸಿಲನ್ನೂ ಲೆಕ್ಕ ತೆಗೆದುಕೊಳ್ಳದೆ ಅಲ್ಲಿಗೆ ಹೋಗುತ್ತಿದ್ದಳು. ಜೊತೆಯಲ್ಲಿ ನಾನು ಬಾಲಂಗೋಸಿ. ಅಂಗಡಿಯಲ್ಲಿರುವ ಎಲ್ಲಾ ಸ್ಟೀಲ್ ಪಾತ್ರೆಗಳನ್ನು ಮುಟ್ಟಿ-ಸವರಿ, ಬೆಲೆ ವಿಚಾರಿಸದಿದ್ದರೆ ಅವಳ ಜೀವ ತಡೆಯುತ್ತಿರಲಿಲ್ಲ. ಕೊಳ್ಳುತ್ತಿದ್ದುದು ಒಂದೋ ಎರಡೋ ಮಾತ್ರ, ಅಪ್ಪ ಅದಕ್ಕೇ ಕೂಗಾಡುತ್ತಿದ್ದ. “ಈ ಸುಡುಗಾಡು ಸ್ಟೀಲ್ ಪಾತ್ರೆ ಮನೆ ತುಂಬಿಸಿ ತುಂಬಿಸಿ ನಿಮ್ಮಮ್ಮ ನನ್ನ ಭಿಕ್ಷೆ ಬೇಡೋ ಹಂಗೆ ಮಾಡಿ ಬಿಡ್ತಾಳೆ…” ಅಂತ ನಮ್ಮ ಎದುರಿಗೆ ಅಮ್ಮನನ್ನು ಬೈಯುತ್ತಿದ್ದ. ಒಮ್ಮೆಯಂತೂ ಅಮ್ಮ ಕಾಫಿಗೊಂದು, ಸಕ್ಕರೆಗೊಂದು ಅಂತ ಎರಡು ಗಟ್ಟಿ ಮುಚ್ಚಳದ ಡಬ್ಬಗಳನ್ನು ಉದ್ರಿಯ ಮೇಲೆ ತಂದಿದ್ದಳು. ಮನೆಯಲ್ಲಿದ್ದ ಕಪ್ಪುಗಟ್ಟಿದ ತಗಡಿನ ಡಬ್ಬಗಳು ಅವಳಿಗೆ ಅಸಹ್ಯ ತರಿಸುತ್ತಿದ್ದವು. ಆದರೆ ಅಪ್ಪ ಸುತಾರಾಂ ಆ ಡಬ್ಬಗಳನ್ನು ಕೊಳ್ಳಲು ಒಪ್ಪಲಿಲ್ಲ. ಅಂಗಡಿಯನ್ನು ವಾಪಾಸು ತೆಗೆದುಕೊಳ್ಳುವುದಿಲ್ಲ, ಅಮ್ಮ ಏನು ತಾನೇ ಮಾಡಿಯಾಳು? ಎಷ್ಟೇ ಗೋಗರೆದರೂ ಅಪ್ಪ ಕರಗಲಿಲ್ಲ. ಕಡೆಗೆ ನಾನು ಮತ್ತು ಅಮ್ಮ ಆ ಎರಡೂ ಡಬ್ಬಗಳನ್ನು ಹಿಡಿದುಕೊಂಡು ಊರಲ್ಲಿ ಗೊತ್ತಿದ್ದವರ ಮನೆಗೆಲ್ಲಾ ಅಲೆದವು. “ಛಲೋ ಡಬ್ಬಾಗಳು… ನಮ್ಮನಿಯವರ ಹತ್ತಿರ ಈಗ ದುಡ್ಡಿಲ್ಲ.. ಅದಕ್ಕೇ…” ಅಂತ ಅಮ್ಮ ಮನಕರಗುವಂತೆ ಹೇಳುತ್ತಿದ್ದಳು. ಎಲ್ಲರೂ ಏನೇನೋ ನೆಪ ಹೇಳಿ ಸಾಗ ಹಾಕಿದರು. ಕಡೆಗೆ ಪದ್ದಕ್ಕ ಎರಡು ರೂಪಾಯಿ ಕಡಿಮೆಗೆ ಕೊಂಡಳು. ಮನೆಗೆ ವಾಪಾಸಾಗುವಾಗ “ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನಾನು ಕೇಳಿದಷ್ಟು ಸ್ಟೀಲ್ ಪಾತ್ರೆ ಕೊಡಿಸ್ತೀಯಾ?” ಅಂತ ಕೇಳಿ, ನನ್ನಿಂದ ಮಾತು ತೆಗೆದುಕೊಂಡಳು.

Initially, there was no steel vessel shop in our village; it was in Bellary. Whenever she went to Bellary for any work, Mother never returned without visiting the steel shop. There was a factory-cum-shop on the outskirts of the town where prices were lower than in the village shops. Disregarding the scorching sun, Mother would go there, and I would tag along like a tail. She wouldn’t be at peace unless she touched and caressed every single steel vessel in the shop and inquired about its price, even though she would only buy one or two. Seeing this, Father would scold her in front of us, saying, “By filling the house with these damned steel vessels, your mother is going to make me a beggar…”

Once, Mother brought home two airtight containers for coffee and sugar on credit. The blackened tin boxes at home disgusted her. However, Father flatly refused to buy them, and since the shop wouldn’t take them back, he refused to budge despite all her pleading. Finally, Mother and I took both containers and went around every known house in the village. Mother would plead touchingly, “Good containers… my people don’t have the money right now, that’s why…” but everyone brushed us off with various excuses. Eventually, Padmakka bought them for two rupees less. While returning home, she extracted a promise from me by asking, “When you grow up and get a job, will you get me as many steel vessels as I ask for?”

ಮನೆಯಲ್ಲಿದ್ದ ಪಾತ್ರೆಗಳ ಬಗ್ಗೆ ಅಮ್ಮನಿಗೆ ಖಚಿತವಾದ ಲೆಕ್ಕವಿರುತ್ತಿತ್ತು. ಒಂದು ಪುಟ್ಟ ಚಮಚ ಕಣ್ಮರೆಯಾದರೂ ಸಾಕು ತಳಮಳಿಸಿಬಿಡುತ್ತಿದ್ದಳು. ಗೊತ್ತಿದ್ದವರ ಮನೆಗೆಲ್ಲಾ ಅಲೆದಾಡಿ ಹುಡುಕಿಕೊಂಡು ಬರದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಅದೇ ರೀತಿ ಬೇರೆಯವರ ಪಾತ್ರೆಯೊಂದು ನಮ್ಮಲ್ಲಿ ಉಳಿದುಬಿಟ್ಟರೂ, ಅಷ್ಟೇ ಬೇಗನೆ ಅದನ್ನು ತೊಳೆದು, ಒರೆಸಿ, ಏನಾದರೂ ತಿಂಡಿಯನ್ನು ಅದರಲ್ಲಿ ಹಾಕಿ, ಏನು ಇಲ್ಲದಿದ್ದರೆ ಒಂದು ಬೆಲ್ಲದ ತುಂಡನ್ನು ಹಾಕಿ ಕಳುಹಿಸಿಕೊಡುತ್ತಿದ್ದಳು. ಎಲ್ಲಾ ಪಾತ್ರೆಗಳನ್ನು ಥಳಥಳನೆ ಹೊಳೆಯುವಂತೆ ತೊಳೆದು, ಬರುವವರ ಕಣ್ಣಿಗೆ ಕಾಣುವಂತೆ ಜೋಡಿಸಿಡುತ್ತಿದ್ದಳು.

Mother had a meticulous count of all the utensils in the house. Even if a tiny spoon went missing, she would get deeply restless. She wouldn’t be at peace unless she wandered around to every known person’s house to search for it and bring it back. Similarly, if someone else’s vessel stayed behind at our place, she would just as quickly wash it, wipe it clean, put some snacks in it—or if nothing else was available, a piece of jaggery—and send it back. She would wash all the vessels until they shone brightly and arrange them neatly where visitors could see them.

ಒಮ್ಮೆ ನಮ್ಮ ಬಂದು-ಬಳಗವೆಲ್ಲರೂ ಸೇರಿ ತಿರುಪತಿಗೆ ಹೊರಟೆವು. ಅಮ್ಮ, ಮೊಸರನ್ನ, ಚಿತ್ರಾನ್ನ ಮಾಡಿಕೊಂಡು ಬಂದಿದ್ದರು. ರೈಲು ಅತ್ಯಂತ ವೇಗವಾಗಿ ಸಾಗುವಾಗ ನಾವೆಲ್ಲರೂ ಊಟ ಮುಗಿಸಿದೆವು. ಪಾತ್ರೆಗಳನ್ನೆಲ್ಲ ಚಿಕ್ಕಪನ ಮಗ ವೇಣು ಪ್ಲಾಸ್ಟಿಕ್ ಬಕೆಟಿನ ನೀರಿನಲ್ಲಿ ತೊಳೆದು, ಕಡೆಗೆ ಉಳಿದ ನೀರನ್ನು ರೈಲಿನ ಬಾಗಿಲಿನ ಮೂಲಕ ಚೆಲ್ಲಿದ. ‘ಠಣ್’ ಎಂದು ಸದ್ದು ಬಂತು. ಅಮ್ಮನ ಕಿವಿಗೆ ಸದ್ದು ಬಿದ್ದಿದ್ದೇ “ಹೋಯ್ತು… ಹೋಯ್ತು…” ಎಂದು ಅರಚಿದಳು. ತೊಳೆದಿಟ್ಟ ಪಾತ್ರೆಗಳನ್ನು ನೋಡಿದ್ದೇ ನನ್ನ ನಾಮಕರಣದ ಹೊತ್ತಿಗೆ ಕೊಟ್ಟ ಎರಡು ಲೋಟಗಳಲ್ಲಿ ಒಂದನ್ನು ವೇಣು ಹೊರಗೆ ಚೆಲ್ಲಿಬಿಟ್ಟನೆಂದು ಗೊತ್ತಾಯ್ತು. ಅಮ್ಮನ ಆರ್ಭಟವನ್ನು ಹತೋಟಿಗೆ ತರುವುದು ಕಷ್ಟವಾಯ್ತು. ಚೈನನ್ನೆಳೆದು ರೈಲುಗಳನ್ನು ನಿಲ್ಲಿಸುತ್ತೇನೆಂದು ಮುಂದಾದಳು. ಅಪ್ಪ ಬೈದು ಸುಮ್ಮನಾಗಿಸಿದ. ತಿರುಪತಿಯಿಂದ ವಾಪಾಸು ಪ್ರಯಾಣ ಮಾಡಿದ್ದು ಬೆಳಗಿನ ಹೊತ್ತಲ್ಲಿ. ಪ್ರಯಾಣದುದ್ದಕ್ಕೂ ಅಮ್ಮ ಕಿಟಕಿಯ ಪಕ್ಕವೇ ಕುಳಿತು ಎಲ್ಲಾದರೂ  ಅಕಸ್ಮಾತ್ ಆಗಿ ಆ ಲೋಟ ಕಂಡುಬಿಡುತ್ತೇನೋ, ಅದೇ ವೇಳೆಗೆ ರೈಲು ಏನೋ ಕಾರಣಕ್ಕಾಗಿ ನಿಂತುಬಿಡುತ್ತದೇನೋ ಎಂಬ ಭರ್ಜರಿ ನಿರೀಕ್ಷೆಯಲ್ಲಿ ಕಾದಳು. ಅದೆಲ್ಲಿ ಸಿಕ್ಕೀತು ಹೇಳಿ? ಮುಂದೆ ವೇಣು ಯಾವತ್ತೇ ಮನೆಗೆ ಬಂದರೂ ಅವನಿಗೆ ಉಳಿದ ಒಂದು ಲೋಟದಲ್ಲಿ ಕಾಫಿ ಕೊಟ್ಟು “ಇನ್ನೊಂದನ್ನ ನೀನು ತಿರುಪತಿಗೆ ಹೋಗುವ ಹೊತ್ತಿಗೆ ಕಳೆದುಬಿಟ್ಟಿ… ಭಲೋ ಗಟ್ಟಿಮುಟ್ಟಿ ಲೋಟ…” ಎಂದು ತಪ್ಪದೆ ಹೇಳುತ್ತಿದ್ದಳು. ವೇಣು ಅತ್ಯಂತ ಕಹಿ ಮುಖ ಮಾಡಿಕೊಂಡು ಕಾಫಿ ಕುಡಿಯುತ್ತಿದ್ದ.

Once, all our relatives together set off for Tirupati. Mother had brought curd rice and lemon/tamarind rice. As the train was moving at a very high speed, we all finished our meals. Chikkappa’s son Venu washed all the vessels in a plastic bucket of water and finally threw the remaining water out through the train door. A ‘clang’ sound was heard. As soon as the sound fell on mother’s ears, she screamed, “It’s gone… it’s gone…” Upon looking at the washed vessels, she realized that Venu had thrown away one of the two tumblers given during my naming ceremony.

It became difficult to bring mother’s outburst under control. She stepped forward threatening to pull the chain and stop the train. Father scolded her and calmed her down. The return journey from Tirupati was in the morning. Throughout the journey, mother sat right by the window, waiting in great anticipation that she might accidentally spot that tumbler somewhere and that the train would stop for some reason at that very moment. Where would it ever be found, tell me?

Later, whenever Venu visited the house, she would serve him coffee in the remaining tumbler and never fail to tell him, “You lost the other one by the time you went to Tirupati… what a sturdy tumbler it was…” Venu would drink the coffee making a very bitter face.

ಪಾತ್ರೆ-ಮುಸುರಿ ತೊಳೆಯಲು ಬರಿತ್ತಿದ್ದ ನರಸಕ್ಕನ ಮೇಲೆ ಅಮ್ಮನಿಗೆ ಇನ್ನಿಲ್ಲದ ಅನುಮಾನ. ಅವಳು ತೊಳೆಯಲು ಹಾಕಿದ ಚಿಕ್ಕ ಪುಟ್ಟ ಸ್ಟೀಲ್ ಪಾತ್ರೆಗಳನ್ನು ಉಡಿಯಲ್ಲಿ ಹಾಕಿಕೊಂಡು ಹೋಗಿಬಿಡುತ್ತಾಳೆಂದು ಅಮ್ಮನ ಅಂದಾಜು. ಏನೇ ಪಾತ್ರೆ ಕಾಣದಾದರೂ ನೇರವಾಗಿ ಅವಳನ್ನೇ “ ಮನೆಗೆ ಒಯ್ದೇನೇ…” ಎಂದು ಕೇಳಿಬಿಡುತ್ತಿದ್ದಳು. ನರಸಕ್ಕ ಅಮ್ಮನ ಈ ಅನುಮಾನದ ಸ್ವಭಾವದಿಂದ ರೋಸಿ “ನಾನು ಕಳ್ಳಿ ಅಲ್ಲಮ್ಮೋ… ನನ್ನ ಮನೆಯಾಗೆ ಮಡಿಕೆ- ಕುಡಿಕೆ ಬಿಟ್ಟರೆ ಬೇರೆ ಏನೂ ಇಲ್ಲ…. ಆ ಸ್ಟೀಲಿನ ಪಾತ್ರೆನಾಗೆ ಅಡಿಗಿ ಮಾಡಲಿಕ್ಕೂ ಬರಂಗಿಲ್ಲ…” ಎಂದು ಗೋಳಾಡುತ್ತಿದ್ದಳು. ಕಡೆಗೆ ಅಮ್ಮನ ಈ ಕೆಟ್ಟ ಸ್ವಭಾವಕ್ಕೆ ಪೂರ್ಣವಿರಾಮ ಹಾಕಿದ್ದು ನರಸಕ್ಕನೇ! ಅಕ್ಕನ ಮದುವೆಗೆ ಒಂದು ದೊಡ್ಡ ಸ್ಟೀಲ್‌ನ ಕ್ಯಾರಿಯರ್‌ಅನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟಳು. ಅವಳ ಯೋಗ್ಯತೆಗೆ ಅದು ತೀರಾ ದೊಡ್ಡ ಉಡುಗೊರೆಯಾಗಿತ್ತು. ಅದನ್ನು ನೋಡಿ ಅಮ್ಮಗೆ ಕಣ್ಣಲ್ಲಿ ನೀರು ಬಂತು. ನರಸಕ್ಕಗೆ ಮದುವೆಯ ಉಡುಗೊರೆಯಾಗಿ ಒಂದು ಒಳ್ಳೆಯ ಸೀರೆ, ಕುಪ್ಪಸ, ಒಂದಿಷ್ಟು ಹಣವನ್ನು ಕೊಟ್ಟು “ನರಸಿ, ಇನ್ನು ಮುಂದೆ ಯಾವತ್ತೂ ನಿನ್ನ ಮೇಲೆ ಅನುಮಾನ ಪಡಂಗಿಲ್ಲನೇ…” ಎಂದು ಪ್ರಮಾಣ ಮಾಡಿ, ಹಾಗೆಯೇ ನಡೆದುಕೊಂಡಳು.

Mother had immense suspicion regarding Narasakka, who used to come to wash the utensils and dirty dishes. Mother estimated that she would take away the small steel vessels put out for washing tucked in her waist fold. Whenever any vessel went missing, she would directly question her, asking, “Did you take it home?”

Tired of this suspicious nature of mother, Narasakka would lament, saying, “I am not a thief,amma… I have nothing else in my house except mud pots and earthen jars… I don’t even know how to cook in that steel vessel…” Finally, it was Narasakka herself who put a full stop to this bad nature of mother! She gifted a large steel carrier for sister’s wedding. It was an exceedingly huge gift given her status. Seeing that, tears came to mother’s eyes. Giving Narasakka a good saree, a blouse piece, and some money as a wedding gift, mother took an oath saying, “Narsi, from now on I will never suspect you,” and lived up to it ever after.

ಅಕ್ಕನ ಮದುವೆಗೆ ಸಾಕಷ್ಟು ಸ್ಟೀಲ್ ಪಾತ್ರೆ ಉಡುಗೊರೆಗಳು ಬಂದಿದ್ದವು. ಹೆಚ್ಚು ಕಡಿಮೆ ಎಲ್ಲರೂ ಸ್ಟೀಲ್ ಪಾತ್ರೆಗಳನ್ನೇ ಕೊಡುತ್ತಿದ್ದರು. ಬಂದ ಪಾತ್ರೆಗಳೆಲ್ಲಾ ಅಮ್ಮ ಜೋಡಿಸಿ, ಒಂದು ದೊಡ್ಡ ರಟ್ಟಿನ ಡಬ್ಬದಲ್ಲಿ ಹಾಕಿಟ್ಟಳು. ಬೀಗರು ತಮ್ಮ ಜೊತೆಗೇ ಅದನ್ನು ಒಯ್ಯಲು ಭಾರವೆಂದು ನಿರಾಕರಿಸಿ ಆಮೇಲೆ ಯಾರ ಜೊತೆಯಲ್ಲಾದರೂ ಕಳುಹಿಸಿಕೊಡಬೇಕೆಂದು ಅಪ್ಪಣೆ ಮಾಡಿದರು. ಮದುವೆಯಾದ ಒಂದು ವಾರಕ್ಕೆ ನಾನು ಆ ಡಬ್ಬವನ್ನು ತೆಗೆದುಕೊಂಡು ಅಕ್ಕನ ಊರಿಗೆ ಹೊರಟೆ. “ಕಾಲಿನ ಹತ್ತಿರನೇ ಇಟ್ಟುಗೋ…” ಎಂದು ಅಮ್ಮ ಎರಡೆರಡು ಸಾರಿ ಎಚ್ಚರಿಸಿದಳು. ಮೆರಿಟ್‌ನಲ್ಲಿ ಸೀಟು ಗಿಟ್ಟಿಸಿ, ಒಳ್ಳೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದೇನೆಂಬ ಮಹಾ ಜಂಭ ನನಗಾಗ. ಯಾರೇ ಪರಿಚಯದವರು ನನ್ನ ಗುಣಗಾನ ಮಾಡಿದರೂ ಒಳಗೊಳಗೆ ಖುಷಿ. ಅಕ್ಕನ ಮನೆಯಲ್ಲಿ ಎಲ್ಲರ ಕಣ್ಣಲ್ಲಿ ನಾನು ಮಿಂಚಬಹುದೆಂಬ ಆಸೆಯಿಂದ ಬಸ್ಸೇರಿದೆ.

A lot of steel vessel gifts had arrived for sister’s wedding. More or less, everyone was giving steel vessels. Mother arranged all the received vessels and packed them into a large cardboard box. The in-laws refused to take it with them, saying it was too heavy, and instructed that it should be sent later through someone.

A week after the wedding, I took that box and set off for my sister’s village. “Keep it right near your feet…” mother warned me twice. I was filled with great pride that I had secured a seat on merit and was studying in a good engineering college. Whenever any acquaintance praised me, I felt happy deep inside. I boarded the bus with the hope of shining in everyone’s eyes at my sister’s house.

ಅಮ್ಮ ಹೇಳಿದಂತೆ ಕಾಲ ಬುಡದಲ್ಲೇ ಡಬ್ಬವನ್ನಿಟ್ಟುಕೊಂಡೆ. ಆದರೆ ದಿವಂಗತ ಟಿ.ಕೆ. ರಾಮರಾಯರ ಒಂದು ಭರ್ಜರಿ ಪತ್ತೆದಾರಿ ಕಾದಂಬರಿ ಓದುತ್ತಾ ಕುಳಿತೆ. ರಾಯರು ಒಂದರ ಮೇಲೊಂದು ಹೆಣ ಉರುಳಿಸುತ್ತಿದ್ದರು. ನಾನು ಯಾರನ್ನು ಕೊಲೆಗಾರ ಎಂದು ಊಹಿಸಿದ್ದೆನೋ ಅವನದೇ ಕೊಲೆ ಮಾಡಿಸಿಬಿಟ್ಟರು. ಯಾರೋ ಸ್ವಲ್ಪ ಕಾಲು ಎತ್ತಿ ಆ ಕಡೆ ಇಡಿರಿ ಎಂದರು. ಇಟ್ಟೆ, ಅವರು ಲಕ್ಷಣವಾಗಿ ಡಬ್ಬವನ್ನು ಯಾವುದೋ ನಿಲ್ದಾಣದಲ್ಲಿ ಇಳಿಸಿಕೊಂಡು ಹೋದರು. ಕೊಲೆ-ಗಿಲೆ ಎಲ್ಲಾ ಮುಗಿದು, ಅಪರಾಧಿ ಯಾರೆಂದು ಗೊತ್ತಾಗುವ ಹೊತ್ತಿಗೆ ಅಕ್ಕನ ಊರು ಬಂದಿತ್ತು. ಡಬ್ಬ ಕಾಣೆಯಾಗಿದ್ದು ಆಗ ನನಗೆ ಗೊತ್ತಾಯ್ತು! ಅಕ್ಕನ ಮನೆಯಲ್ಲಿ ಎಲ್ಲರೂ ನಮ್ಮನ್ನು “ಹುಡುಗಿ ತಮ್ಮ… ಮದುವೆ ಸ್ಟೀಲ್ ಪಾತ್ರೆಗಳನ್ನೆಲ್ಲಾ ಬಸ್ಸಿನಾಗೆ ಕಳಕೊಂಡಾನೆ…” ಎಂದು ಪರಿಚಯಿಸಿದರು. ಇನ್ನು ಅಮ್ಮನ ಗೋಳಂತೂ ಹೇಳುವುದಕ್ಕೆ ಸಾಧ್ಯವಿಲ್ಲ. “ಕಾಲಾಗೆ ಇಟ್ಟಿದ್ದ ಡಬ್ಬ ತೊಕ್ಕೊಂಡು ಹೋಗಿದ್ದೂ ಗೊತ್ತಾಗದಂಥ ಸುಡುಗಾಡು ಪುಸ್ತಕ. ಅದ್ಯಾರು ಬರೆದಿದ್ದಾರಾಯ್ತು ಹೇಳವ್ವಾ…” ಎಂದು ಅಪರಿಚಿತ ರಾಮರಾಯರಿಗೆ ಬೈಯ್ದಳು. ಅವಳ ಬೈಯ್ಗಳವೆಲ್ಲವೂ ರಾಮರಾಯರಿಗೆ ಒಂದು ದೊಡ್ಡ ಕಾಂಪ್ಲಿಮೆಂಟ್ !

As mother said, I kept the box right near my feet, but since I sat engrossed in reading a thrilling detective novel by the late T.K. Rama Rao, the box was lost on the bus. Everyone at my sister’s house mockingly introduced me as the one who lost the wedding steel vessels. As for mother, her grief and anger knew no bounds; she scolded the unfamiliar Rama Rao, saying, “Such a damned book that he didn’t even realize the box kept right at his feet was stolen. Tell me, who on earth wrote this…?” All her abuses turned out to be a huge compliment for Rama Rao!

ನನಗೆ ಪದವಿಯನ್ನು ಪೂರ್ತಿಗೊಳಿಸುವುದಕ್ಕೆ ಮುಂಚೆಯೇ ಕ್ಯಾಂಪಸ್ಸಿನಲ್ಲಿ ಒಳ್ಳೆಯ ಉದ್ಯೋಗ ದೊರಕಿತು. ಮದ್ರಾಸಿನಲ್ಲಿ ವಾಸ. ಆರು ತಿಂಗಳಿಗೆಲ್ಲಾ ಊರು ಪರಿಚಯವಾಯ್ತು. ಬಲವಂತದಿಂದ ಅಮ್ಮ-ಅಪ್ಪರನ್ನು ನಾಲ್ಕು ದಿನ ಇದ್ದು ಹೋಗಲು ಕರೆಸಿಕೊಂಡೆ. ಇಬ್ಬರಿಗೂ ನಗರವೆಂದರೆ ಭಯ. ಮದ್ರಾಸಿನ ರಂಗನಾಥನ್ ಸ್ಟ್ರೀಟ್‌ನಲ್ಲಿ ಒಂದು ದೊಡ್ಡ ಸ್ಟೀಲ್ ಪಾತ್ರೆ ಸಾಮಾನಿನ ಅಂಗಡಿಯಿದೆ. ಮದುವೆ ಮಂಟಪದ ಸಭಾಂಗಣದಷ್ಟು ವಿಶಾಲ ಹಾಲಿನ, ಐದಂತಸ್ತಿನ ಕಟ್ಟಡವದು. ಅಲ್ಲಿಗೆ ಅಮ್ಮನನ್ನು ಕರೆದುಕೊಂಡು ಹೊರಟೆ. ಅಪ್ಪ ಮನೆಯಲ್ಲೇ ಇರುತ್ತೇನೆಂದರು. ಬಳ್ಳಾರಿಯ ಅಂಗಡಿಯನ್ನೇ ದೊಡ್ಡದೆಂದುಕೊಂಡಿದ್ದ ಅಮ್ಮ ಈ ತರಹದ ವಿಶಾಲವಾದ ಅಂಗಡಿಯನ್ನು ಊಹಿಸಿಯೂ ಇರಲಿಲ್ಲ. ಹಾಲಿನಲ್ಲಿ ಓಡಾಡಲು ಒಂದಿಷ್ಟು ಜಾಗವನ್ನು ಬಿಟ್ಟರೆ ಎಲ್ಲಾ ಕಡೆಯೂ ಸ್ಟೀಲ್ ಪಾತ್ರೆಗಳನ್ನು ರಾಶಿ ರಾಶಿಯಾಗಿ ಇಟ್ಟಿದ್ದರು. ಗೋಡೆಗೆಲ್ಲಾ ಪಾತ್ರೆಗಳನ್ನು ನೇತು ಹಾಕಿದ್ದರು. ಮೇಲೆ ತಾರಸಿಯಲ್ಲಿಯೂ ಪಾತ್ರೆಗಳನ್ನು ಇಳಿಬಿಟ್ಟಿದ್ದರು. ಅಮ್ಮ ತನಗದ ವಿಸ್ಮಯ, ಭಯಕ್ಕೆ ಮಾತೇ ಹೊರಡದಂತೆ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನಾನು ಅವಳ ಹೆಗಲ ಸುತ್ತಲೂ ಕೈ ಹಾಕಿ, ಪ್ರೀತಿಯಿಂದ ನಕ್ಕೆ. ಅಮ್ಮನ ಕಣ್ಣುಗಳು ಖುಷಿಯಿಂದ ತುಂಬಿದ್ದವು. ನಮ್ಮಿಬ್ಬರ ಆ ಭಂಗಿಯನ್ನು ಅಂಗಡಿಯಲ್ಲಿರುವ ಪ್ರತಿಯೊಂದು ಸ್ಟೀಲ್ ಪಾತ್ರೆಗಳೂ ಪ್ರತಿಬಿಂಬಿಸಿದವು.

I got a good job on campus even before completing my degree. I lived in Madras. Within six months, I became familiar with the city. I forcefully invited my mother and father to stay for four days. Both of them were afraid of the city. On Ranganathan Street in Madras, there is a large steel utensil shop. It is a five-story building with a hall as spacious as a wedding reception hall. I set off taking my mother there. Father said he would stay back at home. Mother, who had thought the shop in Bellary was huge, could not have even imagined such a vast shop. Except for leaving a little space to walk around in the hall, steel vessels were piled up everywhere. Vessels were hung all over the walls. Vessels were suspended even from the ceiling above. Out of sheer amazement and fear, leaving her unable to speak, mother held my hand tightly. I put my arm around her shoulder and smiled lovingly. Mother’s eyes were filled with joy. Every single steel vessel in the shop reflected that posture of both of us.

“ನಿಂಗೆ ಏನು ಬೇಕೋ ಅದು ತೊಗಳಮ್ಮ…” ಎಂದೆ. ಪಟಾಕಿ ಅಂಗಡಿಯೊಳಗೆ ಹೊಕ್ಕ ಮಗು ಏನು ಕೊಳ್ಳಲಿ, ಏನು ಬಿಡಲಿ ಎನ್ನುವಂತೆ ಅಮ್ಮನ ಸ್ಥಿತಿಯಾಯ್ತು. ಹಾಲಿನ ತುಂಬೆಲ್ಲಾ ಓಡಾಡಿ “ಇದು ತೊಗೊಳ್ಲಾ… ಇದನ್ನೂ ತೊಗೊಳ್ಲಾ…” ಎಂದು ನನ್ನನ್ನು ಕೇಳಿ ಕೇಳಿ ಒಂದು ರಾಶಿ ಸಾಮಾನನ್ನು ಕೊಂಡುಕೊಂಡಳು. ಮನೆಗೆ ಹೋಗಿದ್ದೇ ಅಪ್ಪನ ಮುಂದೆ ಅದಲ್ಲಾ ಹರಡಿ, ಒಂದೊಂದನ್ನೇ ವಿವರಿಸಿ ವಿವರಿಸಿ ಹೇಳಿ, “ನನ್ನ ಮಗ ಕೊಡಿಸಿದ್ದು…” ಎನ್ನುವಾಗ ‘ಮಗ’ ಪದಕ್ಕೆ ಜಾಸ್ತಿ ಒತ್ತುಕೊಟ್ಟು ಬಿಟ್ಟಳು. ಅಪ್ಪನ ಮುಖ ಸಣ್ಣದಾಯ್ತು. “ನನಗೂ ಅವನಷ್ಟು ಸಂಬಳ ಬಂದಿದ್ರೆ ಸ್ಟೀಲ್ ಅಂಗಡಿನೇ ಕೊಂಡು ನಿನ್ನ ಮುಂದೆ ಸುರೀತಿದ್ದೆ” ಎಂದು ಬೇಸರದಲ್ಲಿ ಹೇಳಿದ.

“Whatever you want, take it, Amma…” I said. Mother’s state became like that of a child entering a firecracker shop, wondering what to buy and what to leave. Walking all around the hall, she bought a pile of items by asking me repeatedly, “Should I take this?… Should I take this too…?” As soon as we reached home, she spread everything out in front of Father, described and explained each item one by one, and while saying, “My son bought these for me…”, she placed a lot of emphasis on the word ‘son’. Father’s face fell. He said with sadness, “If I had a salary as much as his, I would have bought a whole steel shop and dumped it in front of you”.

ಅಪ್ಪ ಸತ್ತ ಮೇಲೆ ಅಮ್ಮ ಮತ್ತೊಂದೂ ಸ್ಟೀಲ್ ಪಾತ್ರೆ ಕೊಳ್ಳಲಿಲ್ಲ. ಲೇಪಾಕ್ಷಿ ತಟ್ಟೆಯಲ್ಲಿ ಅನ್ನ ಬಡಿಸಿದರೆ “ಝಳ ಝಳ ತೊಳದ ತಟ್ಟಿನಾಗಿ ಬಡಿಸಿದರೆ ನಂಗೆ ಊಟ ಸೇರೋಲ್ಲ…” ಎಂದು ದುಃಖಿಸುತ್ತಿದ್ದಳು. ಅಕ್ಕನ ಮನೆಯಲ್ಲೂ ಈ ವೇಳೆಗಾಗಲೇ ಸ್ಟೀಲ್ ಪಾತ್ರೆಗಳೆಲ್ಲ ಅಟ್ಟ ಸೇರಲಾರಂಭಿಸಿದವು. ಪಿಂಗಾಣಿ ಕಪ್ಪು-ಬಸಿ, ತಟ್ಟೆ ಪಾತ್ರೆಗಳು, ದವಸ ಧಾನ್ಯಗಳನ್ನು ಇಡಲು ಪ್ಲಾಸ್ಟಿಕ್‌ನ ಏರ್ ಟೈಟ್ ಡಬ್ಬಗಳು, ಅಲ್ಯೂಮಿನಿಯಂ ಕುಕ್ಕರ್, ಕರಿಯಲು-ಹುರಿಯಲು ನಾನ್‌ಸ್ಟಿಕ್ ಪಾತ್ರೆಗಳು, ಆಹಾರದ ಬಿಸಿ ಕೆಡದಂತೆ ನೋಡಿಕೊಳ್ಳಲು ಹಾಟ್ ಬಾಕ್ಸ್‌ಗಳು, ಕಟ್ಟಿಗೆ ಚುಚ್ಚಗ, ತಾಮ್ರದ ಫಿಲ್ಟರ್ – ಸ್ಟೀಲಿನ ಅವರೆಗೆ ಬೆರಳಣಿಕೆಯಷ್ಟಾಗಿದ್ದವು. ಒಮ್ಮೆ ಭಾವನವರ ಆಫೀಸಿನವರಾರೋ ಬಂದಾಗ ಸ್ಟೀಲ್ ಲೋಟದಲ್ಲಿ ಅಮ್ಮ ನೀರನ್ನು ಕೊಟ್ಟಿದ್ದಕ್ಕೆ ಅಕ್ಕ ಬೇಸರಗೊಂಡಿದ್ದಳು. “ಲೋಯರ್ ಮಿಡಲ್ ಕ್ಲಾಸ್ ಜನ ಅಂದ್ಕೊಳ್ತಾರಮ್ಮ… ಇನ್ನು ಮುಂದೆ ಗಾಜಿನ ಲೋಟದಲ್ಲೇ ನೀರು ಕೊಡು” ಎಂದು ಬುದ್ಧಿಮಾತು ಹೇಳಿದಳು.

ಅಮ್ಮ ಸತ್ತಾಗ ಕರ್ಮಕಾರ್ಯಗಳನ್ನು ಹಂಪಿಯಲ್ಲಿ ಮಾಡಿದೆವು. ಕಾಗೆ ಪಿಂಡ ಅದೇನೇ ಮಾಡಿದರು ಆಗಲಿಲ್ಲ. ಕಡೆಗೆ ನರಸಕ್ಕನೇ ನನಗೆ ಉಪಾಯ ಹೇಳಿಕೊಟ್ಟಳು. “ನಿಮ್ಮಮ್ಮಗೆ ಸ್ಟೀಲ್ ಪಾತ್ರೆ ಅಂದರೆ ಜೀವದಾಗೆ ಜೀವ… ಇರೋ ಪಾತ್ರೆಗಳನ್ನು ಜೋಪಾನ ಮಾಡಿ ನೋಡ್ಕೊಂತೀನಿ ಅಂತ ಬೇಡ್ಕೊ…” ಎಂದಳು. ನಾನು ಪಿಂಡದ ಮುಂದೆ ನಿಂತು ಮನಸಿನಲ್ಲಿ ಹಾಗೆ ಹೇಳಿಕೊಂಡಿದ್ದೆ ತಡ, ಕಾಗೆಯೊಂದು ಪುರ್ರನೆ ಹಾರಿ ಬಂದು ಪಿಂಡ ತಿಂದುಬಿಟ್ಟಿತು. ಅಂತಹ ದುಃಖದ ಸಂದರ್ಭದಲ್ಲೂ ನಮಗೆ ಈ ಸಂಗತಿ ತಮಾಷೆಯಾಗಿ ಕಂಡಿತು.

ಅಮ್ಮನಿಗೆ ಪಾತ್ರೆ ನೋಡಿಕೊಳ್ಳುತ್ತೇನೆಂದು ಆಸೆ ತೋರಿಸಿದ್ದೇವಾದರೂ ಅದನ್ನು ನಿಭಾಯಿಸಲು ನಮ್ಮಿಬ್ಬರಿಗೆ ಸಾಧ್ಯವಾಗಲಿಲ್ಲ. “ಅಷ್ಟೊಂದು ಸ್ಟೀಲ್ ಸಾಮಾನು ಎಲ್ಲಂತ ಮನೆಯಾಗೆ ಇಡ್ಲೋ… ನಂಗಂತೂ ಬೇಡ…” ಎಂದು ಅಕ್ಕ ನಿರಾಕರಿಸಿಬಿಟ್ಟಳು. ನನ್ನ ಬೆಂಗಳೂರಿನ ಥಳಕು ಬಳುಕಿನ ಮನೆಯಲ್ಲಿ ಅದನ್ನು ಒಯ್ದಿಡಲು ನನಗೂ ಮನಸಿರಲಿಲ್ಲ. ಕೊನೆಗೆ ಅಮ್ಮನ ನೆನೆಪಿಗೆಂದು ನಾನು ಲೇಪಾಕ್ಷಿ ತಟ್ಟೆಯನ್ನು ಇಟ್ಟುಕೊಂಡೆ, ಅಕ್ಕ ಇಜ್ಜೋಡಿನ ಲೋಟವನ್ನು ಇಟ್ಟುಕೊಂಡಳು. ಉಳಿದದ್ದನ್ನು ಮಠಕ್ಕೊಂದಿಷ್ಟು, ಬಂಧು-ಬಳಗಕ್ಕೆ ಒಂದಿಷ್ಟು, ನರಸಕ್ಕಗೆ ಒಂದಿಷ್ಟು ಕೊಟ್ಟು ಕೈ ತೊಳೆದುಕೊಂಡೆವು. ಈಗಲೂ ಯಾವುದೇ ಸ್ಟೀಲ್ ಪಾತ್ರೆಯ ಅಂಗಡಿ ಕಣ್ಣಿಗೆ ಬಿದ್ದರೂ ಸಾಕು, ಅಮ್ಮನ ನೆನಪು ನನ್ನನ್ನಾವರಿಸಿಕೊಂಡುಬಿಡುತ್ತದೆ. ಆ ಪಾತ್ರೆಗಳನ್ನು ಸವರುವಾಗ ಅಮ್ಮನ ಮೈಮೇಲೆ ಪ್ರೀತಿಯಿಂದ ಕೈ ಆಡಿಸಿದ ಅನುಭವವಾಗುತ್ತದೆ.

I. ಅರ್ಥಗಳು

II. ಪ್ರಶೋತ್ತರಗಳು

೧. ಲೇಖಕ ವಸುಧೇಂದ್ರರನ್ನು ಸಂಕ್ಷಿಪ್ತವಾಗಿ ಪರಿಚಯಿಸಿ.

ಉ. ಶ್ರೀ ವಸುಧೇಂದ್ರರು 1969ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರಿನಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಸುರತ್ಕಲ್‌ನಲ್ಲಿ ಇಂಜಿನಿಯರಿಂಗ್ ಹಾಗೂ ಬೆಂಗಳೂರಿನಲ್ಲಿ ಎಂ.ಇ. ಪದವಿಯನ್ನು ಪಡೆದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಇವರು ತಮ್ಮ ಸಮಯವನ್ನು ಪ್ರವಾಸ, ಓದು, ಬರವಣಿಗೆಯಲ್ಲಿ ಕಳೆಯುತ್ತಿದ್ದಾರೆ. ವಸುಧೇಂದ್ರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ.ರಾ.ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ, ಬಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಸೇಡಂನ ‘ಅಮ್ಮ’ ಪ್ರಶಸ್ತಿ ಹಾಗೂ ಕಥಾರಂಗಂ ಪ್ರಶಸ್ತಿಗಳು ದೊರೆತಿವೆ.

೨. ಲೇಖಕರ ಅಮ್ಮನ ಸ್ಟೀಲ್ ಪಾತ್ರೆಯ ವ್ಯಾಮೋಹದ ಬಗ್ಗೆ ಬರೆಯಿರಿ.

ಉ. ಲೇಖಕರ ಅಮ್ಮನಿಗೆ ಬೆಳ್ಳಿ ಬಂಗಾರದ ಮೇಲೆ ಅಂಥ ವ್ಯಾಮೋಹವಿರಲಿಲ್ಲ. ತೆಗೆದುಕೊಳ್ಳಲು ಆಗುವುದಿಲ್ಲ ಎಂದಿರಬಹುದು. ವರ್ಷಕ್ಕೆ ಒಂದು ಸೀರೆ ಮಾತ್ರ ಲೇಖಕರ ತಂದೆ ಕೊಡಿಸುತ್ತಿದ್ದರು. ತಂದೆ ಗುಮಾಸ್ತರಾಗಿದ್ದರು. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಅದನ್ನು ಹಣ ಕೊಟ್ಟು ತರಲಾಗದೆ ಅಂಗಡಿಯಲ್ಲಿ ಸಾಲದಲ್ಲಿ ತರುತ್ತಿದ್ದರು. ಅಷ್ಟೇನು ದುಬಾರಿಯಲ್ಲದ ಸ್ಟೀಲ್ ಪಾತ್ರೆ ಮೇಲೆ ಲೇಖಕರ ಅಮ್ಮನಿಗೆ ವಿಚಿತ್ರ ಆಕರ್ಷಣೆ ಇತ್ತು. ಸ್ಟೀಲ್ ಪಾತ್ರೆಗಳೇ ಅವರಿಗೆ ಬೆಳ್ಳಿ-ಬಂಗಾರ, ಒಡವೆ-ವಸ್ತು ಎಲ್ಲಾ ಆಗಿತ್ತು.

೩. ಲೇಖಕರ ಅಮ್ಮ ಮಾಡಿದ ನಿರ್ಧಾರವೇನು? ಏಕೆ?

ಉ. ಬಳ್ಳಾರಿಯಂತ ಪಟ್ಟಣದಲ್ಲಿ ಬೆಳೆದ ಲೇಖಕರ ಅಮ್ಮ ಮದುವೆಯಾಗಿ ಗಂಡನ ಮನೆಗೆ ಬಂದಾಗ ಅಲ್ಲಿ ಒಂದೇ ಒಂದು ಸ್ಟೀಲ್ ಪಾತ್ರೆಯೂ ಇರಲಿಲ್ಲ. ಅದನ್ನು ಕಂಡು ಎಂತಹ ಹಳ್ಳಿ ಮುಕ್ಕರ ಮನೆಗೆ ತಾನು ಬಂದಿದ್ದೇನೆ ಎಂದು ಬಾವಿಕಟ್ಟೆಯ ಬಳಿ ಕುಳಿತು ಅತ್ತಿದ್ದರು. ಮನೆಯಲ್ಲಿ ಊಟಕ್ಕೆ ಮುತ್ತುಗದ ಎಲೆಯ ಪತ್ರಾವಳಿ ಹಾಕುತ್ತಿದ್ದರು. ತುಪ್ಪ ಹಾಕಲು ಒಂದು ಚಮಚವಿರಲಿಲ್ಲ. ಅಡುಗೆಗಂತೂ ಬರೇ ಹಿತ್ತಾಳೆ, ಕಂಚು, ತಾಮ್ರದ ದೊಡ್ಡ, ದಪ್ಪನಾದ ಪಾತ್ರೆಗಳು. ಲೇಖಕರ ತಾಯಿ ತುಂಬಾ ಅತ್ತು ಕಡೆಗೆ ಈ ಮನೆಯ ತುಂಬಾ ಸ್ಟೀಲ್ ಪಾತ್ರೆಗಳು ಥಳಥಳ ಹೊಳೆಯುವಂತೆ ಮಾಡದಿದ್ದರೆ ‘ನಾನು ಬಳ್ಳಾರಿ ಹೆಗ್ಗಡತಿ ಅಲ್ಲ’ ಎಂದು ನಿರ್ಧಾರ ಮಾಡಿದರು.

೪. ಲೇಖಕರ ಮನೆಗೆ ಮೊದಲ ಸ್ಟೀಲ್ ಪಾತ್ರೆ ಬಂದ ಸಂದರ್ಭವನ್ನು ವರ್ಣಿಸಿ.

ಉ. ಮೂರು ತಿಂಗಳು ಕಳೆಯುವಷ್ಟರಲ್ಲಿ ಮೊದಲ ಸ್ಟೀಲ್ ಪಾತ್ರೆ ಲೇಖಕರ ಮನೆಯೊಳಗೆ ಬಂತು. ಗರ್ಭಿಣಿಯಾಗಿದ್ದ ಅಮ್ಮನನ್ನು ಅಪ್ಪ ‘ಏನು ಬೇಕೇ?’ ಎಂದು ಪ್ರೀತಿಯಿಂದ ಕೇಳಿದರು. ಭಟ್ಟರ ಹೋಟೇಲಿನ ಮಸಾಲೆದೋಸೆಯೋ, ಬೆಳ್ಳುಳ್ಳಿ ಚಟ್ನಿಯೋ, ನುಣ್ಣನೆಯ ಕೆಂಪುಮಣ್ಣೋ -ಹೀಗೆ ಏನೋ ಕೇಳುತ್ತಾಳೆ ಎಂದು ಅಪ್ಪ ಯೋಚಿಸಿದರು. ಆದರೆ ಅಮ್ಮ ‘ಒಂದು ಸ್ಟೀಲ್ ತಟ್ಟೆ ಕೇಳಿದಳು. ಬಸುರಿ ಬಯಕೆ ಈಡೇರಿಸಬೇಕೆಲ್ಲ ಎಂದು ಸಾಲ ಮಾಡಿ ಲೇಪಾಕ್ಷಿ ತಟ್ಟೆಯನ್ನು ತಂದರು. ಅದರಲ್ಲಿ ಚಟ್ನಿ, ಪಲ್ಯ, ಹುಳಿ, ಉಪ್ಪು ಹಾಕಿಕೊಳ್ಳಲು ಮುಂಭಾಗದಲ್ಲಿ ಕುಣಿಗಳಿದ್ದವು. ಇದು ಲೇಖಕರ ಮನೆಗೆ ಮೊದಲ ಸ್ಟೀಲ್ ಪಾತ್ರೆ ಬಂದ ಸಂದರ್ಭ.

೫. ಲೇಪಾಕ್ಷಿ ತಟ್ಟೆ ಬಗ್ಗೆ ಲೇಖಕರ ಅಮ್ಮನಿಗಿದ್ದ ಹೆಮ್ಮೆ ಎಂತಹುದು?
ಉ. ತನ್ನ ಪತಿ ಕೊಡಿಸಿದ ಲೇಪಾಕ್ಷಿ ತಟ್ಟೆಯನ್ನು ನೋಡಿ ಅಮ್ಮನಿಗೆ ಸಂತೋಷವಾಯಿತು. ಆ ತಟ್ಟೆ ಮನೆಯ ಹಳೆಯ ಪಾತ್ರೆಗಳ ನಡುವೆ ಹೊಸ ಹೀರೋಯಿನ್ ಆಗಿ ಮೆರೆಯಿತು. ಲೇಖಕರ ಅಮ್ಮ ಆ ಲೇಪಾಕ್ಷಿ ತಟ್ಟೆಯನ್ನು ತೆಗೆದುಕೊಂಡು ಊರಿನ ಎಲ್ಲಾ ಪರಿಚಿತರ ಮನೆಗಳಿಗೂ ಹೋಗಿ “ನಮ್ಮನೆಯವರು ಕೊಡಿಸಿದ್ದು” ಎಂದು ತೋರಿಸಿದರು. ಲೇಖಕರ ತಂದೆ ಅದೇ ತಟ್ಟೆಯಲ್ಲಿ ಊಟ ಮಾಡಿ ಒಂದೆರಡು ಉಪ್ಪಿನಕಾಯಿ ಹೋಳುಗಳನ್ನು ಉಳಿಸುತ್ತಿದ್ದರು. ಅದನ್ನು ತೆಗೆದುಕೊಳ್ಳುವಾಗ ಅಮ್ಮ ಹೆಮ್ಮೆಯಿಂದ ನಾಚುತ್ತಿದ್ದರು.

೬. ಲೇಖಕರು ಮನೆ ತುಂಬಿದ ವಿಧ ವಿಧವಾದ ಸ್ಟೀಲ್ ಪಾತ್ರೆಗಳನ್ನು ಪರಿಚಯಿಸಿ.

ಉ. ಲೇಪಾಕ್ಷಿ ತಟ್ಟೆಯ ನಂತರ ಹಾಲು ಕಾಯಿಸುವ ಪಾತ್ರೆ, ಹಾಲು ಕರೆವ ಚೆಂಬು, ಮಗುವಿಗೊಂದು ಲೋಟ, ಸಾರು ಮಾಡುವ ಪಾತ್ರೆಗಳು. ಎಲೆಯ ಮುಂದೆ ಉಪ್ಪು ಬಡಿಸಲು ‘ವಾದಿರಾಜ್’ ತಟ್ಟೆ, ಉಪ್ಪಿನಕಾಯಿಯ ಜಾಡಿಯ ತಳದಿಂದಲೂ ಹೋಳು ತೆಗೆಯಬಹುದಾದ ‘ಅಮಿತಾಭ್’ ಚಮಚ, ‘ಜಯಮಾಲಿನೀ’ ಊದುಗೊಳವೆ, ‘ಪಾಕೀಜಾ’  ಊದುನಕಡ್ಡಿಯ ಸ್ಟಾಂಡು, ಹೂಬಳ್ಳಿ ಚಿತ್ತಾರದ ‘ಕಲ್ಪನಾ’ ಬಟ್ಟಲು. ಹೀಗೆ ವಿಧ ವಿಧವಾದ ಸ್ಟೀಲ್ ಪಾತ್ರೆಗಳು ಲೇಖಕರ ಮನೆ ತುಂಬಿದವು.

೭. ಲೇಖಕರಿಂದ ಅವರ ತಾಯಿ ಏನೆಂದು ಮಾತು ತೆಗೆದುಕೊಂಡರು? ಕಾರಣವೇನು?

ಉ. ಒಮ್ಮೆ ಲೇಖಕರ ತಾಯಿ ಮನೆಯಲ್ಲಿ ಕಾಫಿ ಮತ್ತು ಸಕ್ಕರೆಯ ತಗಡಿನ ಡಬ್ಬಗಳನ್ನು ನೋಡಿ ಬೇಜಾರಾಗಿ ಗಟ್ಟಿಮುಟ್ಟಾಗಿದ್ದ ಮುಚ್ಚಳವಿರುವ ಎರಡು ಡಬ್ಬಗಳನ್ನು ಸಾಲದ ಲೆಕ್ಕ ಬರೆಸಿ ತಂದಿದ್ದರು. ಆದರೆ ಲೇಖಕರ ತಂದೆ ಒಪ್ಪಲಿಲ್ಲ. ಅಂಗಡಿಯವನು ವಾಪಾಸ ತೆಗೆದುಕೊಳ್ಳಲು ಒಪ್ಪಲಿಲ್ಲ. ಅಮ್ಮ ಎಷ್ಟೇ ಗೋಳಾಡಿದರೂ ಅಪ್ಪ ಕರಗಲಿಲ್ಲ. ಕಡೆಗೆ ಊರಲ್ಲಿ ಗೊತ್ತಿದ್ದವರ ಮನೆಗಳಿಗೆ ಅಲೆದಾಗ ಪದ್ದಕ್ಕ ಎರಡು ರೂಪಾಯಿ ಕಡಿಮೆಗೆ ಆ ಡಬ್ಬಗಳನ್ನು ತೆಗೆದುಕೊಂಡಳು. ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಲೇಖಕರ ಅಮ್ಮ ಅವರನ್ನು “ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನಾನು ಕೇಳಿದಷ್ಟು ಸ್ಟೀಲ್ ಪಾತ್ರೆ ಕೊಡಿಸುತ್ತಿಯಾ?” ಅಂತ ಕೇಳಿ ಲೇಖಕರಿಂದ ಮಾತು ತೆಗೆದುಕೊಂಡರು.

೮. ಲೇಖಕರ ಅಮ್ಮ ಸ್ಟೀಲ್ ಪಾತ್ರೆಗಳನ್ನು ಹೇಗೆ ಕಾಪಾಡುತ್ತಿದ್ದರು?

ಉ. ಲೇಖಕರ ಅಮ್ಮನಿಗೆ ತಮ್ಮ ಮನೆಯಲ್ಲಿದ್ದ ಸ್ಟೀಲ್ ಪಾತ್ರೆಗಳ ಬಗ್ಗೆ ವಿಚಿತ್ರವಾದ ಲೆಕ್ಕವಿತ್ತು. ಅವರು ಒಂದು ಚಮಚ ಕಾಣೆಯಾದ್ರೂ ತಳಮಳಿಸಿ, ಗೊತ್ತಿದ್ದವರ ಮನೆಗಳಿಗೆಲ್ಲ ಹೋಗಿ ಹುಡುಕಾಡಿ ಬರುತ್ತಿದ್ದರು. ತಮ್ಮ ಎಲ್ಲಾ ಪಾತ್ರೆಗಳನ್ನು ಹೊಳೆಯುವಂತೆ ತೊಳೆದು ಎಲ್ಲರ ಕಣ್ಣಿಗೆ ಕಾಣುವಂತೆ ಜೋಡಿಸುತ್ತಿದ್ದರು. ಇವರು ತಮ್ಮ ಪಾತ್ರೆ ಮಾತ್ರವಲ್ಲದೆ ಬೇರೆಯವರ ಪಾತ್ರೆಗಳನ್ನು ಎಚ್ಚರದಿಂದ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಯಾರಾದರೂ ತಮ್ಮ ಪಾತ್ರೆಯಲ್ಲಿ ಏನಾದರೂ ಹಾಕಿಕೊಟ್ಟಾಗ ತಕ್ಷಣವೇ ಲೇಖಕರ ಅಮ್ಮ ಅದನ್ನು ತೊಳೆದು, ಒರೆಸಿ, ಅದರಲ್ಲಿ ಏನಾದರೂ ತಿಂಡಿ ಹಾಕಿ ಏನು ಇಲ್ಲದಿದ್ದರೆ ಬೆಲ್ಲದ ತುಂಡನ್ನಾದರೂ ಹಾಕಿ ಕಳುಹಿಸುತ್ತಿದ್ದರು. ಹೀಗೆ ಲೇಖಕರ ಅಮ್ಮ ಸ್ಟೀಲ್ ಪಾತ್ರೆಗಳನ್ನು ಕಾಪಾಡುತ್ತಿದ್ದರು.

೯. ಲೇಖಕರ ನಾಮಕರಣದಲ್ಲಿ ಕೊಟ್ಟ ಸ್ಟೀಲ್ ಲೋಟ ಒಂದು ಹೇಗೆ ಕಳೆದುಹೋಯಿತು? ಸಂಕ್ಷಿಪ್ತವಾಗಿ ವಿವರಿಸಿ.

ಉ. ಒಮ್ಮೆ ಲೇಖಕರ ಬಂಧು-ಬಳಗದವರೆಲ್ಲ ಸೇರಿ ತಿರುಪತಿಗೆ ಹೊರಟರು. ಲೇಖಕರ ತಾಯಿ ಚಿತ್ರಾನ್ನ, ಮೊಸರನ್ನ ಮಾಡಿಕೊಂಡು ಹೋಗಿದ್ದರು. ರೈಲು ಅತ್ಯಂತ ವೇಗವಾಗಿ ಸಾಗುವಾಗ ಎಲ್ಲರೂ ಊಟ ಮುಗಿಸಿದರು. ಪಾತ್ರೆಗಳನ್ನೆಲ್ಲ ಚಿಕ್ಕಪ್ಪನ ಮಗ ವೇಣು ಪ್ಲಾಸ್ಟಿಕ್ ಬಕೆಟ್‌ನ ನೀರಿನಲ್ಲಿ ತೊಳೆದು ಕಡೆಗೆ ಉಳಿದ ನೀರನ್ನು ರೈಲಿನ ಬಾಗಿಲಿನ ಮೂಲಕ ಚೆಲ್ಲಿದ. ಠಣ್ ಎಂದು ಸದ್ದು ಬಂದಿತು. ಲೇಖಕರ ಅಮ್ಮನ “ಹೋಯಿತು… ಹೋಯಿತು…” ಎಂದು ಕೂಗಿದಳು. ತೊಳೆದಿಟ್ಟ ಪಾತ್ರೆಗಳನ್ನು ನೋಡಿ ಲೇಖಕರ ನಾಮಕರಣದ ಹೊತ್ತಿಗೆ ಕೊಟ್ಟ ಎರಡು ಲೋಟಗಳಲ್ಲಿ ಒಂದನ್ನು ವೇಣು ಹೊರಗೆ ಚೆಲ್ಲಿಬಿಟ್ಟನೆಂದು ಗೊತ್ತಾಯಿತು. ಲೇಖಕರ ಅಮ್ಮನ ಕೋಪವನ್ನು ಹತೋಟಿಗೆ ತರುವುದು ಕಷ್ಟವಾಯಿತು. ಚೈನನ್ನೆಳದು ರೈಲನ್ನು ನಿಲ್ಲಿಸಲು ಮುಂದಾದಳು. ಅಪ್ಪ ಬೈದು ಸುಮ್ಮನಾಗಿಸಿದರು. ಹೀಗೆ ಲೋಟವು ವೇಣುವಿನ ತಪ್ಪಿನಿಂದ ಕಳೆದುಹೋಯಿತು.

೧೦. ನರಸಕ್ಕ ಯಾರು? ಲೇಖಕರ ತಾಯಿ ಪ್ರಮಾಣ ಮಾಡಿದ್ದು ಯಾಕೆ? ಸನ್ನಿವೇಶವೇನು?

ಉ. ನರಸಕ್ಕ ಲೇಖಕರ ಮನೆಗೆ ಪಾತ್ರೆ ತೊಳೆಯಲು ಬರುತ್ತಿದ್ದ ಕೆಲಸದವಳು. ಮನೆಯಲ್ಲಿ ಸಣ್ಣಪುಟ್ಟ ಸ್ಟೀಲ್ ಪಾತ್ರೆಗಳು ಕಾಣದೇ ಇದ್ದಾಗ ಲೇಖಕರ ತಾಯಿ ನರಸಕ್ಕನೇ ಕದ್ದಿರಬೇಕೆಂದು ಅನುಮಾನಿಸಿ ಪ್ರಶ್ನಿಸುತ್ತಿದ್ದರು. ಇದರಿಂದ ಬೇಸತ್ತ ನರಸಕ್ಕ, ಲೇಖಕರ ಅಕ್ಕನ ಮದುವೆಗೆ ತನ್ನ ಯೋಗ್ಯತೆಗೂ ಮೀರಿ ದೊಡ್ಡ ಸ್ಟೀಲ್ ಕ್ಯಾರಿಯರ್ ನ್ನು ಉಡುಗೊರೆಯಾಗಿ ನೀಡಿದಳು. ನರಸಕ್ಕನ ಪ್ರಾಮಾಣಿಕತೆ ಹಾಗೂ ದೊಡ್ಡ ಮನಸ್ಸನ್ನು ಕಂಡು ಲೇಖಕರ ತಾಯಿಯ ಕಣ್ಣಲ್ಲಿ ನೀರು ಬಂತು. ನರಸಕ್ಕನಿಗೆ ಸೀರೆ, ಕುಪ್ಪಸ ಮತ್ತು ಹಣವನ್ನು ಉಡುಗೊರೆಯಾಗಿ ನೀಡಿ, “ಇನ್ನು ಮುಂದೆ ಯಾವತ್ತೂ ನಿನ್ನ ಮೇಲೆ ಅನುಮಾನಪಡುವುದಿಲ್ಲ” ಎಂದು ಪ್ರಮಾಣ ಮಾಡಿ ಅದರಂತೆ ನಡೆದುಕೊಂಡರು.

೧೧. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಸ್ಟೀಲ್ ಪಾತ್ರೆಗಳನ್ನು ಲೇಖಕರು ಕಳೆದುಕೊಂಡಿದ್ದು ಹೇಗೆ?

ಉ. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಸ್ಟೀಲ್ ಪಾತ್ರೆಗಳನ್ನು ತಾಯಿ ಒಂದು ದೊಡ್ಡ ರಟ್ಟಿನ ಡಬ್ಬದಲ್ಲಿ ತುಂಬಿ, ಅಕ್ಕನ ಊರಿಗೆ ತಲುಪಿಸಲು ಲೇಖಕರ ಕೈಯಲ್ಲಿ ಕೊಟ್ಟು ಕಳಿಸಿದ್ದರು. ಬಸ್ಸಿನಲ್ಲಿ ಪ್ರಯಾಣಿಸುವಾಗ ಲೇಖಕರು ಆ ಡಬ್ಬವನ್ನು ತಮ್ಮ ಕಾಲ ಬುಡದಲ್ಲಿಟ್ಟು, ಟಿ. ಕೆ. ರಾಮರಾಯರ ಪತ್ತೇದಾರಿ ಕಾದಂಬರಿ ಓದುವುದರಲ್ಲಿ ಮಗ್ನರಾಗಿದ್ದರು. ಆಗ ಯಾರೋ “ಕಾಲು ಎತ್ತಿ ಆ ಕಡೆ ಇಡಿ” ಎಂದಾಗ, ಓದಿನಲ್ಲಿ ಮಗ್ನರಾಗಿದ್ದ ಲೇಖಕರು ತಮ್ಮ ಕಾಲುಗಳನ್ನು ಪಕ್ಕಕ್ಕೆ ಸರಿಸಿದರು. ಆ ಕಳ್ಳರು ಡಬ್ಬವನ್ನು ಎತ್ತಿಕೊಂಡು ಹೊರಟುಹೋದರು. ಬಸ್ಸಿನಿಂದ ಇಳಿಯುವಾಗ ಡಬ್ಬ ಕಳವಾಗಿರುವುದು ಲೇಖಕರ ಅರಿವಿಗೆ ಬಂತು.

೧೨. ‘ನನಗೂ ಅವನಷ್ಟು ಸಂಬಳ ಬಂದಿದ್ದರೆ ಸ್ಟೀಲ್ ಅಂಗಡಿನೇ ಕೊಂಡು ನಿನ್ನ ಮುಂದೆ ಸುರಿತಿದ್ದೆ‘ ಈ ಮಾತನ್ನು ಯಾರು ಹೇಳಿದರು? ಹಿನ್ನೆಲೆಯನ್ನು ಬರೆಯಿರಿ.
ಉ. ಈ ಮಾತನ್ನು ಲೇಖಕರ ತಂದೆ ಹೇಳಿದರು. ಮದ್ರಾಸಿನಲ್ಲಿ ಕೆಲಸ ಸಿಕ್ಕ ಮೇಲೆ ಲೇಖಕರು ತಮ್ಮ ತಂದೆ-ತಾಯಿಯನ್ನು ಅಲ್ಲಿಗೆ ಕರೆಸಿಕೊಂಡು, ತಾಯಿಯನ್ನು ರಂಗನಾಥನ್ ಸ್ಟ್ರೀಟ್‌ನಲ್ಲಿದ್ದ ಐದಂತಸ್ತಿನ ದೊಡ್ಡ ಸ್ಟೀಲ್ ಪಾತ್ರೆಗಳ ಅಂಗಡಿಗೆ ಕರೆದೊಯ್ದರು. ಆ ಅಂಗಡಿಯಲ್ಲಿದ್ದ ವಿಧ ವಿಧವಾದ ಪಾತ್ರೆ ಸಾಮಾನಗಳನ್ನು ನೋಡಿ ಲೇಖಕರ ಅಮ್ಮ ಬೆರಗಾದರು. ಅಲ್ಲಿ ಲೇಖಕರು ಹೇಳಿದಂತೆ ತಾಯಿ ತಮಗೆ ಬೇಕಾದಷ್ಟು ಪಾತ್ರೆಗಳನ್ನು ಖರೀದಿಸಿ, ಮನೆಗೆ ಬಂದ ಮೇಲೆ ಹೆಮ್ಮೆಯಿಂದ “ನನ್ನ ಮಗ ಕೊಡಿಸಿದ್ದು” ಎಂದು ಹೇಳಿಕೊಂಡರು. ಇದನ್ನು ಕೇಳಿ ಮುಖ ಸಣ್ಣ ಮಾಡಿಕೊಂಡ ಲೇಖಕರ ತಂದೆ ಮೇಲಿನ ಮಾತನ್ನು ಹೇಳಿದರು.

೧೩. ಲೇಖಕರ ಮನೆಯಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಮಹತ್ವ ಹೇಗೆ ಕಡಿಮೆಯಾಯಿತು?
ಉ. ಸ್ಟೀಲ್ ಪಾತ್ರೆಗಳ ಬಗ್ಗೆ ಅತೀವ ಮೋಹ ಬೆಳೆಸಿಕೊಂಡಿದ್ದ ಲೇಖಕರ ಅಮ್ಮ ತಮ್ಮ ಪತಿಯ ಸಾವಿನ ನಂತರ ನಿರಾಸಕ್ತರಾದರು. ಲೇಪಾಕ್ಷಿ ತಟ್ಟೆಯಲ್ಲಿ ಅನ್ನ ಬಡಿಸಿದರೆ ಊಟ ಸೇರುವುದಿಲ್ಲ ಎನ್ನುತ್ತಿದ್ದರು. ಪ್ಲಾಸ್ಟಿಕ್, ಪಿಂಗಾಣಿ, ನಾನ್ ಸ್ಟಿಕ್ ಬಂದ ಪರಿಣಾಮ ಸ್ಟೀಲ್ ಪಾತ್ರೆಗಳು ಮಹತ್ವ ಕಳೆದುಕೊಂಡವು. ಹಾಗೆಯೇ ಸ್ಟೀಲ್ ಪಾತ್ರೆಗಳು ಮಧ್ಯಮ ವರ್ಗದವರ ಪ್ರತೀಕವೆಂದು ಲೇಖಕರಅಕ್ಕ ಭಾವಿಸಿದ್ದರು.

೧೪. ದುಃಖದ ಸಂದರ್ಭದಲ್ಲಿ ತಮಾಷೆಯಾಗಿ ಕಂಡ ಸಂಗತಿ ಯಾವುದು?
ಉ. ಲೇಖಕರ ತಾಯಿಯವರು ಮರಣ ಹೊಂದಿದಾಗ ಕರ್ಮ ಕಾರ್ಯಗಳನ್ನು ಹಂಪಿಯಲ್ಲಿ ನೆರವೇರಿಸಿದರು. ಪಿಂಡ ಇಟ್ಟಾಗ ಯಾವುದೇ ಕಾಗೆ ಬಂದು ಪಿಂಡವನ್ನು ತಿನ್ನಲಿಲ್ಲ. ಆಗ ನರಸಕ್ಕ “ನಿಮ್ಮಮ್ಮನಿಗೆ ಸ್ಟೀಲ್ ಪಾತ್ರೆ ಅಂದ್ರೆ ಜೀವ. ಇರೋ ಪಾತ್ರೆಗಳನ್ನು ಜೋಪಾನ ಮಾಡ್ಕೋತೀವಿ ಅಂತ ಬೇಡ್ಕೋ” ಎಂದು ಉಪಾಯವೊಂದನ್ನು ಹೇಳಿಕೊಟ್ಟಳು. ಲೇಖಕರು ಪಿಂಡದ ಮುಂದೆ ನಿಂತು ಮನಸ್ಸಿನಲ್ಲಿ ನರಸಕ್ಕ ಹೇಳಿದಂತೆ ಹೇಳಿಕೊಂಡಾಗ ಕಾಗೆಯೊಂದು ಹಾರಿ ಬಂದು ಪಿಂಡ ತಿಂದಿತು. ಅಂಥ ದುಃಖದ ಸಂದರ್ಭದಲ್ಲಿ ತಮಾಷೆಯಾಗಿ ಕಂಡ ಸಂಗತಿ.

೧೫. ಅಮ್ಮನ ಸ್ಟೀಲ್ ಪಾತ್ರೆಗಳ ಗತಿ ಏನಾಯಿತು?

ಉ. ಲೇಖಕರ ಅಮ್ಮನ ನಿಧನದ ನಂತರ ಸ್ಟೀಲ್ ಪಾತ್ರೆಗಳನ್ನು ನಿರ್ವಹಿಸಲು ಯಾರಿಗೂ ಆಗಲಿಲ್ಲ. ಕೊನೆಗೆ ಲೇಖಕರೂ, ಅಕ್ಕನೂ ಸ್ಟೀಲ್ ಪಾತ್ರೆಗಳ್ಳನ್ನೆಲ್ಲ ಮಠಕ್ಕೆ, ಬಂಧು ಬಳಗಕ್ಕೆ, ನರಸಕ್ಕನಿಗೆ ಹಂಚಿದರು. ಲೇಖಕರ ಅಕ್ಕ ಜೋಡಿ ಲೋಟವನ್ನು, ಲೇಖಕರು ಲೇಪಾಕ್ಷಿ ತಟ್ಟೆಯನ್ನು ತಮ್ಮ ಬಳಿ ಇಟ್ಟುಕೊಂಡರು. ಈಗಲೂ ಸ್ಟೀಲ್ ಪಾತ್ರೆಗಳ ಅಂಗಡಿ ಲೇಖಕರಿಗೆ ತಮ್ಮ ಅಮ್ಮನ ನೆನಪನ್ನು ತರುತ್ತದೆ.

೧೬. ಲೇಖಕರ ಅಮ್ಮನಿಗೆ ಯಾವುದರ ಬಗ್ಗೆ ವಿಶೇಷ ಆಕರ್ಷಣೆ ಇತ್ತು? ವಿವರಿಸಿ. (2) (Same as question no 2)

ಉ. ಲೇಖಕರ ಅಮ್ಮನಿಗೆ ಬೆಳ್ಳಿ ಬಂಗಾರದ ಮೇಲೆ ಅಂಥ ವ್ಯಾಮೋಹವಿರಲಿಲ್ಲ. ತೆಗೆದುಕೊಳ್ಳಲು ಆಗುವುದಿಲ್ಲ ಎಂದಿರಬಹುದು. ವರ್ಷಕ್ಕೆ ಒಂದು ಸೀರೆ ಮಾತ್ರ ಲೇಖಕರ ತಂದೆ ಕೊಡಿಸುತ್ತಿದ್ದರು. ತಂದೆ ಗುಮಾಸ್ತರಾಗಿದ್ದರು. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಅದನ್ನು ಹಣ ಕೊಟ್ಟು ತರಲಾಗದೆ ಅಂಗಡಿಯಲ್ಲಿ ಸಾಲದಲ್ಲಿ ತರುತ್ತಿದ್ದರು. ಅಷ್ಟೇನು ದುಬಾರಿಯಲ್ಲದ ಸ್ಟೀಲ್ ಪಾತ್ರೆ ಮೇಲೆ ಲೇಖಕರ ಅಮ್ಮನಿಗೆ ವಿಚಿತ್ರ ಆಕರ್ಷಣೆ ಇತ್ತು. ಸ್ಟೀಲ್ ಪಾತ್ರೆಗಳೇ ಅವರಿಗೆ ಬೆಳ್ಳಿ-ಬಂಗಾರ, ಒಡವೆ-ವಸ್ತು ಎಲ್ಲಾ ಆಗಿತ್ತು.

೧೭. ಲೇಖಕ ಅಮ್ಮನ ಮುಖದಲ್ಲಿ ಹತ್ತಿಕ್ಕಲಾರದ ಹೆಮ್ಮೆಯ ಭಾವ ಬಂದ ಸಂದರ್ಭವನ್ನು ವರ್ಣಿಸಿ. (2) (Same as question no 4)


ಉ. ಮೂರು ತಿಂಗಳು ಕಳೆಯುವಷ್ಟರಲ್ಲಿ ಮೊದಲ ಸ್ಟೀಲ್ ಪಾತ್ರೆ ಲೇಖಕರ ಮನೆಯೊಳಗೆ ಬಂತು. ಗರ್ಭಿಣಿಯಾಗಿದ್ದ ಅಮ್ಮನನ್ನು ಅಪ್ಪ ‘ಏನು ಬೇಕೇ?’ ಎಂದು ಪ್ರೀತಿಯಿಂದ ಕೇಳಿದರು. ಭಟ್ಟರ ಹೋಟೇಲಿನ ಮಸಾಲೆದೋಸೆಯೋ, ಬೆಳ್ಳುಳ್ಳಿ ಚಟ್ನಿಯೋ, ನುಣ್ಣನೆಯ ಕೆಂಪುಮಣ್ಣೋ -ಹೀಗೆ ಏನೋ ಕೇಳುತ್ತಾಳೆ ಎಂದು ಅಪ್ಪ ಯೋಚಿಸಿದರು. ಆದರೆ ಅಮ್ಮ ‘ಒಂದು ಸ್ಟೀಲ್ ತಟ್ಟೆ ಕೇಳಿದಳು. ಬಸುರಿ ಬಯಕೆ ಈಡೇರಿಸಬೇಕೆಲ್ಲ ಎಂದು ಸಾಲ ಮಾಡಿ ಲೇಪಾಕ್ಷಿ ತಟ್ಟೆಯನ್ನು ತಂದರು. ಅದರಲ್ಲಿ ಚಟ್ನಿ, ಪಲ್ಯ, ಹುಳಿ, ಉಪ್ಪು ಹಾಕಿಕೊಳ್ಳಲು ಮುಂಭಾಗದಲ್ಲಿ ಕುಣಿಗಳಿದ್ದವು. ಇದು ಲೇಖಕರ ಮನೆಗೆ ಮೊದಲ ಸ್ಟೀಲ್ ಪಾತ್ರೆ ಬಂದ ಸಂದರ್ಭ.

೧೮. “ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನಾನು ಕೇಳಿದಷ್ಟು ಸ್ಟೀಲ್‌ ಪಾತ್ರೆಗಳನ್ನು ಕೊಡಿಸುತ್ತೀಯಾ?” ಅಂತ ಕೇಳಿ ಮಾತು ತೆಗೆದುಕೊಂಡವರು ಯಾರು? ಸಂದರ್ಭವೇನು? (3) (Same as question no 7)

ಉ. ಲೇಖಕರ ತಾಯಿ, ಲೇಖಕರನ್ನು ಈ ಮೇಲಿನ ಮಾತುಗಳನ್ನು ಹೇಳಿ ಅವರಿಂದ ಮಾತು ತೆಗೆದುಕೊಂಡರು. ಒಮ್ಮೆ ಲೇಖಕರ ತಾಯಿ ಮನೆಯಲ್ಲಿ ಕಾಫಿ ಮತ್ತು ಸಕ್ಕರೆಯ ತಗಡಿನ ಡಬ್ಬಗಳನ್ನು ನೋಡಿ ಬೇಜಾರಾಗಿ ಗಟ್ಟಿಮುಟ್ಟಾಗಿದ್ದ ಮುಚ್ಚಳವಿರುವ ಎರಡು ಡಬ್ಬಗಳನ್ನು ಸಾಲದ ಲೆಕ್ಕ ಬರೆಸಿ ತಂದಿದ್ದರು. ಆದರೆ ಲೇಖಕರ ತಂದೆ ಒಪ್ಪಲಿಲ್ಲ. ಅಂಗಡಿಯವನು ವಾಪಾಸ ತೆಗೆದುಕೊಳ್ಳಲು ಒಪ್ಪಲಿಲ್ಲ. ಅಮ್ಮ ಎಷ್ಟೇ ಗೋಳಾಡಿದರೂ ಅಪ್ಪ ಕರಗಲಿಲ್ಲ. ಕಡೆಗೆ ಊರಲ್ಲಿ ಗೊತ್ತಿದ್ದವರ ಮನೆಗಳಿಗೆ ಅಲೆದಾಗ ಪದ್ದಕ್ಕ ಎರಡು ರೂಪಾಯಿ ಕಡಿಮೆಗೆ ಆ ಡಬ್ಬಗಳನ್ನು ತೆಗೆದುಕೊಂಡಳು. ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಲೇಖಕರ ಅಮ್ಮ ಅವರನ್ನು “ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನಾನು ಕೇಳಿದಷ್ಟು ಸ್ಟೀಲ್ ಪಾತ್ರೆ ಕೊಡಿಸುತ್ತಿಯಾ?” ಅಂತ ಕೇಳಿ ಲೇಖಕರಿಂದ ಮಾತು ತೆಗೆದುಕೊಂಡರು.

೧೯. ಲೇಖಕರು ತಮ್ಮ ಪಾತ್ರೆಗಳ ಡಬ್ಬವನ್ನು ಕಳೆದುಕೊಂಡ ಸಂದರ್ಭವನ್ನು ವರ್ಣಿಸಿ. (3) (Same as question no 11)
ಉ. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಸ್ಟೀಲ್ ಪಾತ್ರೆಗಳನ್ನು ತಾಯಿ ಒಂದು ದೊಡ್ಡ ರಟ್ಟಿನ ಡಬ್ಬದಲ್ಲಿ ತುಂಬಿ, ಅಕ್ಕನ ಊರಿಗೆ ತಲುಪಿಸಲು ಲೇಖಕರ ಕೈಯಲ್ಲಿ ಕೊಟ್ಟು ಕಳಿಸಿದ್ದರು. ಬಸ್ಸಿನಲ್ಲಿ ಪ್ರಯಾಣಿಸುವಾಗ ಲೇಖಕರು ಆ ಡಬ್ಬವನ್ನು ತಮ್ಮ ಕಾಲ ಬುಡದಲ್ಲಿಟ್ಟು, ಟಿ. ಕೆ. ರಾಮರಾಯರ ಪತ್ತೇದಾರಿ ಕಾದಂಬರಿ ಓದುವುದರಲ್ಲಿ ಮಗ್ನರಾಗಿದ್ದರು. ಆಗ ಯಾರೋ “ಕಾಲು ಎತ್ತಿ ಆ ಕಡೆ ಇಡಿ” ಎಂದಾಗ, ಓದಿನಲ್ಲಿ ಮಗ್ನರಾಗಿದ್ದ ಲೇಖಕರು ತಮ್ಮ ಕಾಲುಗಳನ್ನು ಪಕ್ಕಕ್ಕೆ ಸರಿಸಿದರು. ಆ ಕಳ್ಳರು ಡಬ್ಬವನ್ನು ಎತ್ತಿಕೊಂಡು ಹೊರಟುಹೋದರು. ಬಸ್ಸಿನಿಂದ ಇಳಿಯುವಾಗ ಡಬ್ಬ ಕಳವಾಗಿರುವುದು ಲೇಖಕರ ಅರಿವಿಗೆ ಬಂತು.

೨೦. ಈ ಮನೆಯ ತುಂಬಾ ಸ್ಟೀಲ್ ಪಾತ್ರೆಗಳು ಥಳ ಥಳ ಹೊಳೆಯುವಂತೆ ಮಾಡದಿದ್ದರೆ ನಾನು ಬಳ್ಳಾರಿ ಹೆಣ್ಣೆ ಅಲ್ಲ ಅಂತ ಅಮ್ಮ ನಿರ್ಧರಿಸಿದ್ದು ಏಕೆ? (Same as question no 3)
ಉ ಉ. ಬಳ್ಳಾರಿಯಂತ ಪಟ್ಟಣದಲ್ಲಿ ಬೆಳೆದ ಲೇಖಕರ ಅಮ್ಮ ಮದುವೆಯಾಗಿ ಗಂಡನ ಮನೆಗೆ ಬಂದಾಗ ಅಲ್ಲಿ ಒಂದೇ ಒಂದು ಸ್ಟೀಲ್ ಪಾತ್ರೆಯೂ ಇರಲಿಲ್ಲ. ಅದನ್ನು ಕಂಡು ಎಂತಹ ಹಳ್ಳಿ ಮುಕ್ಕರ ಮನೆಗೆ ತಾನು ಬಂದಿದ್ದೇನೆ ಎಂದು ಬಾವಿಕಟ್ಟೆಯ ಬಳಿ ಕುಳಿತು ಅತ್ತಿದ್ದರು. ಮನೆಯಲ್ಲಿ ಊಟಕ್ಕೆ ಮುತ್ತುಗದ ಎಲೆಯ ಪತ್ರಾವಳಿ ಹಾಕುತ್ತಿದ್ದರು. ತುಪ್ಪ ಹಾಕಲು ಒಂದು ಚಮಚವಿರಲಿಲ್ಲ. ಅಡುಗೆಗಂತೂ ಬರೇ ಹಿತ್ತಾಳೆ, ಕಂಚು, ತಾಮ್ರದ ದೊಡ್ಡ, ದಪ್ಪನಾದ ಪಾತ್ರೆಗಳು. ಲೇಖಕರ ತಾಯಿ ತುಂಬಾ ಅತ್ತು ಕಡೆಗೆ ಈ ಮನೆಯ ತುಂಬಾ ಸ್ಟೀಲ್ ಪಾತ್ರೆಗಳು ಥಳಥಳ ಹೊಳೆಯುವಂತೆ ಮಾಡದಿದ್ದರೆ ‘ನಾನು ಬಳ್ಳಾರಿ ಹೆಗ್ಗಡತಿ ಅಲ್ಲ’ ಎಂದು ನಿರ್ಧಾರ ಮಾಡಿದರು.

 ೨೧. ವೇಣುಯಾರು? ಅವನು ತಿರುಪತಿಗೆ ಹೋಗುವಾಗ ಮಾಡಿದ ತಪ್ಪು ಯಾವುದು? ತಿಳಿಸಿ. (Same as question no 9)

ಉ:. ವೇಣು ಲೇಖಕರ ಚಿಕ್ಕಪ್ಪನ ಮಗ. ಒಮ್ಮೆ ಲೇಖಕರ ಬಂಧು-ಬಳಗದವರೆಲ್ಲ ಸೇರಿ ತಿರುಪತಿಗೆ ಹೊರಟರು. ಲೇಖಕರ ತಾಯಿ ಚಿತ್ರಾನ್ನ, ಮೊಸರನ್ನ ಮಾಡಿಕೊಂಡು ಹೋಗಿದ್ದರು. ರೈಲು ಅತ್ಯಂತ ವೇಗವಾಗಿ ಸಾಗುವಾಗ ಎಲ್ಲರೂ ಊಟ ಮುಗಿಸಿದರು. ಪಾತ್ರೆಗಳನ್ನೆಲ್ಲ ಚಿಕ್ಕಪ್ಪನ ಮಗ ವೇಣು ಪ್ಲಾಸ್ಟಿಕ್ ಬಕೆಟ್‌ನ ನೀರಿನಲ್ಲಿ ತೊಳೆದು ಕಡೆಗೆ ಉಳಿದ ನೀರನ್ನು ರೈಲಿನ ಬಾಗಿಲಿನ ಮೂಲಕ ಚೆಲ್ಲಿದ. ಠಣ್ ಎಂದು ಸದ್ದು ಬಂದಿತು. ಲೇಖಕರ ಅಮ್ಮನ “ಹೋಯಿತು… ಹೋಯಿತು…” ಎಂದು ಕೂಗಿದಳು. ತೊಳೆದಿಟ್ಟ ಪಾತ್ರೆಗಳನ್ನು ನೋಡಿ ಲೇಖಕರ ನಾಮಕರಣದ ಹೊತ್ತಿಗೆ ಕೊಟ್ಟ ಎರಡು ಲೋಟಗಳಲ್ಲಿ ಒಂದನ್ನು ವೇಣು ಹೊರಗೆ ಚೆಲ್ಲಿಬಿಟ್ಟನೆಂದು ಗೊತ್ತಾಯಿತು. ಲೇಖಕರ ಅಮ್ಮನ ಕೋಪವನ್ನು ಹತೋಟಿಗೆ ತರುವುದು ಕಷ್ಟವಾಯಿತು. ಚೈನನ್ನೆಳದು ರೈಲನ್ನು ನಿಲ್ಲಿಸಲು ಮುಂದಾದಳು. ಅಪ್ಪ ಬೈದು ಸುಮ್ಮನಾಗಿಸಿದರು. ಹೀಗೆ ಲೋಟವು ವೇಣುವಿನ ತಪ್ಪಿನಿಂದ ಕಳೆದುಹೋಯಿತು. ಇದೇತಿರುಪತಿಗೆ ಹೋಗುವಾಗ ವೇಣು ಮಾಡಿದ ತಪ್ಪು.

೨೨. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದ ಸ್ಟೇಲ್ ಪಾತ್ರೆಗಳನ್ನು ಲೇಖಕರು ಹೇಗೆ ಕಳೆದುಕೊಂಡರು? (Same as question no 11)
ಉ. ಅಕ್ಕನ ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಸ್ಟೀಲ್ ಪಾತ್ರೆಗಳನ್ನು ತಾಯಿ ಒಂದು ದೊಡ್ಡ ರಟ್ಟಿನ ಡಬ್ಬದಲ್ಲಿ ತುಂಬಿ, ಅಕ್ಕನ ಊರಿಗೆ ತಲುಪಿಸಲು ಲೇಖಕರ ಕೈಯಲ್ಲಿ ಕೊಟ್ಟು ಕಳಿಸಿದ್ದರು. ಬಸ್ಸಿನಲ್ಲಿ ಪ್ರಯಾಣಿಸುವಾಗ ಲೇಖಕರು ಆ ಡಬ್ಬವನ್ನು ತಮ್ಮ ಕಾಲ ಬುಡದಲ್ಲಿಟ್ಟು, ಟಿ. ಕೆ. ರಾಮರಾಯರ ಪತ್ತೇದಾರಿ ಕಾದಂಬರಿ ಓದುವುದರಲ್ಲಿ ಮಗ್ನರಾಗಿದ್ದರು. ಆಗ ಯಾರೋ “ಕಾಲು ಎತ್ತಿ ಆ ಕಡೆ ಇಡಿ” ಎಂದಾಗ, ಓದಿನಲ್ಲಿ ಮಗ್ನರಾಗಿದ್ದ ಲೇಖಕರು ತಮ್ಮ ಕಾಲುಗಳನ್ನು ಪಕ್ಕಕ್ಕೆ ಸರಿಸಿದರು. ಆ ಕಳ್ಳರು ಡಬ್ಬವನ್ನು ಎತ್ತಿಕೊಂಡು ಹೊರಟುಹೋದರು. ಬಸ್ಸಿನಿಂದ ಇಳಿಯುವಾಗ ಡಬ್ಬ ಕಳವಾಗಿರುವುದು ಲೇಖಕರ ಅರಿವಿಗೆ ಬಂತು.

೨೩. ಯಾವುದನ್ನು ನೋಡಿ ಅಮ್ಮನಿಗೆ ಕಣ್ಣಲ್ಲಿ ನೀರು ಬಂತು? ವಿವರಿಸಿ. (Same as question no 10)

೨೪. ವಸುಧೇಂದ್ರರ ಕಾಲ ಸ್ಥಳ ಪ್ರಶಸ್ತಿ ಮತ್ತು ಆಸಕ್ತಿಯ ಬಗ್ಗೆ ವಿವರಿಸಿ. [2] (Same as question no 1)
ಉ: ಶ್ರೀ ವಸುಧೇಂದ್ರರು 1969ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರಿನಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಸುರತ್ಕಲ್‌ನಲ್ಲಿ ಇಂಜಿನಿಯರಿಂಗ್ ಹಾಗೂ ಬೆಂಗಳೂರಿನಲ್ಲಿ ಎಂ.ಇ. ಪದವಿಯನ್ನು ಪಡೆದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಇವರು ತಮ್ಮ ಸಮಯವನ್ನು ಪ್ರವಾಸ, ಓದು, ಬರವಣಿಗೆಯಲ್ಲಿ ಕಳೆಯುತ್ತಿದ್ದಾರೆ. ವಸುಧೇಂದ್ರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ.ರಾ.ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ, ಬಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಸೇಡಂನ ‘ಅಮ್ಮ’ ಪ್ರಶಸ್ತಿ ಹಾಗೂ ಕಥಾರಂಗಂ ಪ್ರಶಸ್ತಿಗಳು ದೊರೆತಿವೆ.

೨೫. ಸ್ಟೀಲ್ ಪಾತ್ರೆ ಬೆಲೆ ಕಡಿಮೆಯಾಯಿತೋ, ಜನರ ಸಂಬಳ ಹೆಚ್ಚಾಯಿತುೋ ಗೊತ್ತಿಲ್ಲ ಎಂದು ಲೇಖಕರು ಹೇಳಲು ಕಾರಣವೇನು? [2]
ಉ: ಲೇಖಕರ ಮನೆಗೆ ಲೇಪಾಕ್ಷಿ ತಟ್ಟೆ ಬಂದ ನಂತರ ಸಾಕಷ್ಟು ಸ್ಟೀಲ್ ಪಾತ್ರೆಗಳು ಒಂದೊಂದಾಗಿ ಬಂದವು. ಹಾಲು ಕಾಸಲಿಕ್ಕೆ ಒಂದು ಪಾತ್ರೆ, ಆಕಳ ಹಾಲು ಕರೆಯಲು ಒಂದು ಚೊಂಬು, ಅಕ್ಕನಿಗೆ ನೀರು ಕುಡಿಸಲು ಚಿಕ್ಕಲೋಟ, ಹೀಗೆ ಹಲವಾರು ಸ್ಟೀಲ್ ಪಾತ್ರೆಗಳು ಮನೆಗೆ ಬಂದವು. ಇನ್ನು ಲೇಖಕರ ನಾಮಕರಣದ ಸಂದರ್ಭದಲ್ಲಿ ಬಂಧುಗಳೊಬ್ಬರು ಎರಡು ದಪ್ಪ ಗ್ಲಾಸ್‌ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ ಸಂದರ್ಭವನ್ನು ವಿವರಿಸುವಾಗ ಲೇಖಕರು ಮೇಲಿನ ವಾಕ್ಯವನ್ನು ಹೇಳಿದ್ದಾರೆ.

೨೬. “…..ನಾನು ಕೇಳಿದಷ್ಟು ಸ್ಟೀಲ್ ಪಾತ್ರೆ ಕೊಡಿಸಿಯಾ?” ಎಂದು ಅಮ್ಮ ಕೇಳಲು ಕಾರಣವೇನು? [3] (Same as question no 7)

ಉ. ಒಮ್ಮೆ ಲೇಖಕರ ತಾಯಿ ಮನೆಯಲ್ಲಿ ಕಾಫಿ ಮತ್ತು ಸಕ್ಕರೆಯ ತಗಡಿನ ಡಬ್ಬಗಳನ್ನು ನೋಡಿ ಬೇಜಾರಾಗಿ ಗಟ್ಟಿಮುಟ್ಟಾಗಿದ್ದ ಮುಚ್ಚಳವಿರುವ ಎರಡು ಡಬ್ಬಗಳನ್ನು ಸಾಲದ ಲೆಕ್ಕ ಬರೆಸಿ ತಂದಿದ್ದರು. ಆದರೆ ಲೇಖಕರ ತಂದೆ ಒಪ್ಪಲಿಲ್ಲ. ಅಂಗಡಿಯವನು ವಾಪಾಸ ತೆಗೆದುಕೊಳ್ಳಲು ಒಪ್ಪಲಿಲ್ಲ. ಅಮ್ಮ ಎಷ್ಟೇ ಗೋಳಾಡಿದರೂ ಅಪ್ಪ ಕರಗಲಿಲ್ಲ. ಕಡೆಗೆ ಊರಲ್ಲಿ ಗೊತ್ತಿದ್ದವರ ಮನೆಗಳಿಗೆ ಅಲೆದಾಗ ಪದ್ದಕ್ಕ ಎರಡು ರೂಪಾಯಿ ಕಡಿಮೆಗೆ ಆ ಡಬ್ಬಗಳನ್ನು ತೆಗೆದುಕೊಂಡಳು. ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಲೇಖಕರ ಅಮ್ಮ ಅವರನ್ನು “ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನಾನು ಕೇಳಿದಷ್ಟು ಸ್ಟೀಲ್ ಪಾತ್ರೆ ಕೊಡಿಸುತ್ತಿಯಾ?” ಅಂತ ಕೇಳಿ ಲೇಖಕರಿಂದ ಮಾತು ತೆಗೆದುಕೊಂಡರು.

೨೭. “ನಾನು ಕಳ್ಳ ಅಲ್ಲಮ್ಮೋ… ನನ್ನ ಮನೆಗೆ ಮಡಿಕೆ – ಕುಡಿಕೆ ಬಟ್ಟರೆ ಬೇರೆ ಏನೂ ಇಲ್ಲ” ಸಂದರ್ಭ ವಿವರಿಸಿ.

ಉ: ಈ ವಾಕ್ಯವನ್ನು ವಸುಧೇಂದ್ರರು ಬರೆದಿರುವ “ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು” ಎಂಬ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ಕೆಲಸದವಳಾದ ನರಸಕ್ಕ ಲೇಖಕರ ಅಮ್ಮನಿಗೆ ಹೇಳಿದರು. ಲೇಖಕರ ಅಮ್ಮನಿಗೆ ಸ್ಟೀಲ್ ಪಾತ್ರೆಗಳ ಮೇಲೆ ಅತಿಯಾದ ವ್ಯಾಮೋಹವಿತ್ತು. ಮನೆಯಲ್ಲಿ ಸಣ್ಣಪುಟ್ಟ ಪಾತ್ರೆಗಳು ಕಾಣೆಯಾದಾಗಲೆಲ್ಲ, ನರಸಕ್ಕನೇ ಕದ್ದು ತೆಗೆದುಕೊಂಡಿದ್ದಾಳೆ ಎಂದು ಅಮ್ಮ ಅನುಮಾನದಿಂದ ಪ್ರಶ್ನಿಸುತ್ತಿದ್ದರು. ಅಮ್ಮನ ಈ ಅನುಮಾನದಿಂದ ತುಂಬಾ ಬೇಸತ್ತು ನರಸಕ್ಕ ಮೇಲಿನಂತೆ ಹೇಳಿ ಗೋಳಾಡಿದಳು.

ಸಮಾನಾರ್ಥಕ ಪದಗಳು (Synonyms)

ವಿರುದ್ಧಾರ್ಥಕ ಪದಗಳು (Antonyms)

Click here to download stainless-steel-pathregalu-icse-sahitya-sangama-grade-ix-x

Leave a Reply

Your email address will not be published. Required fields are marked *