Garudagambada Dasayya (ಗರುಡಗಂಬದ ದಾಸಯ್ಯ) chapter by renowned Gandhian writer Gorur Ramaswamy Iyengar from the Class 9 ICSE Sahitya Sangama textbook. Garudagambada Dasayya chapter chronicles the hilarious yet embarrassing series of misunderstandings the author faces when people mistake him for a mendicant (Dasayya) while carrying a ceremonial lamp-post (Garudagamba) back to his village. Dive into our complete study guide featuring simple English translations, Kannada word meanings, synonyms, and exam-ready question-and-answers to master this classic lesson.
ಗರುಡಗಂಬದ ದಾಸಯ್ಯ — ಗೊರೂರು ರಾಮಸ್ವಾಮಿ ಅಯ್ಯಂಗಾರ್
ಲೇಖಕರ ಪರಿಚಯ
ಪ್ರಬಂಧಕಾರ ಗೊರೂರು ಗಾಂಧೀವಾದಿಗಳಾಗಿದ್ದರು. ಜನನ: 4-7-1904. ತಂದೆ: ಶ್ರೀನಿವಾಸ ಅಯ್ಯಂಗಾರ್, ತಾಯಿ: ಲಕ್ಷ್ಮಮ್ಮ. ಸ್ಥಳ: ಅರಕಲಗೂಡು ತಾಲೂಕಿನ ಗೊರೂರು. ಹೈಸ್ಕೂಲ್ ವರೆಗೆ ವಿದ್ಯಾಭ್ಯಾಸ ಮಾಡಿ ಗಾಂಧೀಜಿ ಆಶ್ರಮ ಸೇರಿದರು. ಗುಜರಾತ್ ಪೀಠದಲ್ಲಿ ಅಭ್ಯಾಸ ಮಾಡಿದರು. ಇವರ ಪತ್ನಿ ಶೇಷಮ್ಮ. ಮದರಾಸಿನ “ಲೋಕ ಮಿತ್ರ” ಕನ್ನಡ ಪತ್ರಿಕೆಯ ಉಪ ಸಂಪಾದಕರಾದರು. “ಸೀತಾ ತನಿಯ”, “ಜೆ. ಕೆ. ರಾಮಸ್ವಾಮಿ” ಎಂಬ ಹೆಸರುಗಳಿಂದ ಬರೆಯುತ್ತಿದ್ದರು.
1942ರ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. 1967ರಲ್ಲಿ ತರಿಕೇರೆಯಲ್ಲಿ ನಡೆದ ಮೊದಲನೆಯ ಅಖಿಲ ಕರ್ನಾಟಕ ಸಮ್ಮೇಳನಾಧ್ಯಕ್ಷರಾಗಿದ್ದರು. 1969ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. 1973ರಲ್ಲಿ ಇವರಿಗೆ “ಗೊರೂರು ಗೌರವ ಗ್ರಂಥ” ಅರ್ಪಿಸಿದರು. 1974ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ.ಲಿಟ್. ಪದವಿ ನೀಡಿತ್ತು. 1980ರಲ್ಲಿ “ಅಮೆರಿಕದಲ್ಲಿ ಗೊರೂರು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. 1982ರಲ್ಲಿ ಶಿರಸಿಯಲ್ಲಿ ನಡೆದ 55ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಮುಖ ಕೃತಿಗಳು
“ಭಾರತದ ಸ್ವಾತಂತ್ರ್ಯ” (1930), ಹಳ್ಳಿಯ ಚಿತ್ರಗಳು (1930), ನಮ್ಮ ಊರಿನ ರಸಿಕರು (1932), ಹಳ್ಳಿಯ ಹಾಡುಗಳು (1938), ಹಳ್ಳಿಯ ಬಾಳು (1943).
The essayist Gorur was a Gandhian. He was born on July 4, 1904, to Srinivasa Iyengar and Lakshmamma in Gorur, a village in Arkalgud taluk. After completing his education up to high school, he joined Gandhiji’s ashram and studied at Gujarat Vidyapith. His wife was Sheshamma. He served as the sub-editor of the Madras Kannada newspaper “Loka Mitra” and wrote under the pen names “Sita Taniya” and “J. K. Ramaswamy”. He participated in the 1942 Quit India Movement and was imprisoned. In 1967, he served as the president of the first Akhila Karnataka Conference held in Tarikere. He received the State Sahitya Academy Award in 1969, was presented with the “Gorur Gourava Grantha” felicitation volume in 1973, and received an honorary D.Litt. degree from the University of Mysore in 1974. His work “Amerikadalli Gorur” won the Central Sahitya Akademi Award in 1980, and in 1982, he presided over the 55th Kannada Sahitya Sammelana held in Sirsi.
His major works include “Bharatada Swatantrya” (1930), “Halliya Chitragalu” (1930), “Namma Urina Rasikaru” (1932), “Halliya Hadugalu” (1938), and “Halliya Balu” (1943).
ಪಾಠದ ಸಾರಾಂಶ / ಪಠ್ಯ
ನಮ್ಮ ಊರಿನ ಹೊಲಗೇರಿಯ ಆದಿಕರ್ಣಾಟಕರು ಬಹಳ ದಿವಸಗಳಿಂದ ಭಜನೆಗೆ ಬೇಕಾಗುವ ಗರುಡಗಂಬ ಒಂದನ್ನು ತರಿಸಿಕೊಡಿ ಅಂತಾ ಹೇಳ್ತಾ ಇದ್ರು, ನಾನೂ ಆಗ್ಲಿ ಆಗ್ಲಿ ಅಂತಾ ಹೇಳ್ದಾ ಒಂದುವರೆ ವರುಷ ತಳ್ಳಿದೆ. ಅವತ್ತು ಮಧ್ಯಾಹ್ನ ಬೆಂಗಳೂರಿಗೆ ಹೋಗಿದಾಗ, ನನ್ನ ಸ್ನೇಹಿತ ಶಂಕರಪ್ಪ “ಒಂದು ಗರುಡಗಂಬ, ಮಲ್ಲೇಶ್ವರದಲ್ಲಿ ಮದ್ಯಪಾನ ನಿರೋಧದ ಮೇಲೆ ಉಪನ್ಯಾಸ ಮಾಡುವ ಸಾಧುವಿನ ಬಳಿ ಇದೆ. ಆ ಸಾಧುವಿಗೂ ನನಗೂ ಬಹಳ ಸ್ನೇಹ. ಈ ದಿವಸ ಅವನು ಬಿನ್ನೀ ಮಿಲ್ಲಿನ ಬಳಿ ಹೆಂಡ ಸಾರಾಯಿ ಕುಡಿಯುವುದು ಪಾಪವೆಂಬ ವಿಷಯದ ಮೇಲೆ ಉಪನ್ಯಾಸ ಮಾಡುತ್ತಾನೆ. ಗರುಡಗಂಬವನ್ನು ಕೊಟ್ಟುಬಿಡುತ್ತಾನಂತೆ. ಅದನ್ನು ನೀನು ಕೊಂಡುಕೋ” ಎಂದನು.
ನಾನು ನಿರುತ್ಸಾಹದಿಂದ “ಹೋಗಯ್ಯ ಆ ಗರುಡಗಂಬ ಕೊಂಡುಕೊಂಡು ನಾನು ತಿರುಪಕ್ಕೆ ತಾನೇ ಹೋಗಬೇಕು?” ಎಂದೆ. ಶಂಕರಪ್ಪ, “ನಿಮ್ಮ ಆದಿಕರ್ಣಾಟಕರಿಗೆ ಉಪಯೋಗವಾಗುತ್ತೆ. ಕಡಿಮೆ ಬೆಲೆಗೆ ಕೊಟ್ಟುಬಿಡುತ್ತಾನೆ. ತೆಗೆದುಕೋ” ಎಂದು ಬಲಾತ್ಕರಿಸಿ 2 ರೂ. ಬೆಲೆಬಾಳುವ ಗರುಡಗಂಬವನ್ನು 10 ಆಣೆಗೆ ಕೊಡಿಸಿದನು.
For a long time, the Adi Karnataka community people in our village’s Holageri had been asking me to get them a Garuda pillar required for their devotional bhajan sessions. I kept saying “sure, sure” and dilly-dallied for a year and a half. That afternoon, when I had gone to Bengaluru, my friend Shankarappa said, “A Garuda pillar is with a sadhu near Malleshwaram who gives lectures on prohibition. That sadhu and I are very good friends. Today, he is lecturing near the Binny Mill on the topic that drinking toddy and arrack is a sin. He is willing to give away the Garuda pillar. You should buy it.”
Unenthusiastically, I said, “Get away, man! Should I go buy that Garuda pillar and carry it all the way for begging?” Shankarappa insisted, “It will be useful for your Adi Karnataka people. He will give it for a cheap price. Take it,” and forced me into buying a Garuda pillar worth 2 rupees for just 10 annas.
ಗರುಡಗಂಬ 10 ಆಣೆಗೆ ಸಿಕ್ಕುದರಿಂದ ನನಗೆ ಸಂತೋಷವೇ ಆಯಿತು. ಹಿಂದೆ ಒಂದೆರಡುಸಾರಿ ಒಂದೂವರೆ ರೂಪಾಯಿಗೆ ಕೇಳಿದ್ದರು ಅದು ಸಿಕ್ಕಿರಲಿಲ್ಲ. ನಮ್ಮ ಆದಿಕರ್ಣಾಟಕರಿಗೆ ಪರಮ ಸಂತೋಷವುಂಟಾಗುವುದೆಂಬ ಹುರುಪಿನಿಂದ, ನಾನು ಮೂರುಘಂಟೆಯ ರೈಲಿಗೆ ಗರುಡಗಂಬವನ್ನು ಕೈಯಲ್ಲಿ ಹಿಡಿದುಕೊಂಡು ಮಲ್ಲೇಶ್ವರದಿಂದ ಹೊರಟೆ. ನಾನು ಕೃಷ್ಣ ಬಜಾರಿನ ಮುಂದಕ್ಕೆ ಬಂದಾಗ ಎಲ್ಲರೂ ನನ್ನ ಕಡೆಯೇ ನೋಡುತ್ತಿರುವಂತೆ ತೋರಿತು. “ಇವರು ನನ್ನನ್ನೇ ಕುರಿತು ನೋಡುವಷ್ಟು ನಾನೇನು ಸುಂದರನಲ್ಲವಲ್ಲಾ” ಎಂದುಕೊಂಡು ಇನ್ನೂ ನಾಲ್ಕು ಹೆಜ್ಜೆ ಮುಂದಕ್ಕೆ ಹಾಕಿದೆ. ಆಗ ಥಟ್ಟನೆ ಹೊಳೆಯಿತು. ನಾನು ಗರುಡಗಂಬವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದುದನ್ನು ಜನರು ಕಂಡು, “ಇವನಿಗೆ ಜೋಳಿಗೆ, ಜಾಗಟೆ ಇಲ್ಲ. ಆದರೂ ಇವನು ದಾಸಯ್ಯನೇ ಸಂದೇಹವಿಲ್ಲ” ಎಂದು ಯೋಚಿಸಿದ್ದರು. ನನ್ನ ವೇಷವೇನೋ ಸ್ವಲ್ಪಮಟ್ಟಿಗೆ ಜಾಗಟೆ, ಜೋಳಿಗೆಯ ಗುರುವಿಗೆ ಸಮಾನವಾಗಿಯೇ ಇದ್ದಿತು. ಮಾಸಿದ ಒಂದು ಬಿಳಿಯ ಖಾದಿ ದಟ್ಟೆ, ಮಿತಿ ಮೀರಿ ಬೆಳೆದ ದೇಹಕ್ಕೆ ಬಿಗಿಯಾಗಿ ಮೇಲ್ಕಾಗಿದ್ದ ಒಂದು ಅಂಗಿ. ಅದರ ಮೇಲೆ ಹೊದೆದುಕೊಂಡಿದ್ದ ಕೊಳೆಯಾದ ಅಂಗವಸ್ತ್ರ, ಹೆಗಲ ಮೇಲೆ ನೇತಾಡುತ್ತಿದ್ಧ ಅದರ ತುದಿಯಲ್ಲಿ ಕಟ್ಟಿದ್ದ ಸೌತೆಕಾಯಿಯ ಗಂಟು. ವೈದಿಕರಾದ ನಮ್ಮ ತಂದೆಯವರು ಬೆಂಗಳೂರಿಗೆ ಬರುವರೆಂದು ವದಂತಿ ಇದ್ದುದರಿಂದ ಮುಖಕ್ಷೌರ ಮಾಡಿಸದೆ ಬೆಳೆಸಿದ್ದ, ಚೂಪಾದ, ಅರದಂತಿದ್ದ ಕರಿಯಗಡ್ಡ, ಇವು ಆಗಿನ ನನ್ನ ವೇಷದ ಕೆಲವು ವೈಚಿತ್ರ್ಯಗಳು. ಇದೇ ವೇಷದಲ್ಲಿ ಹೋಟೆಲಿನಲ್ಲಿ ಕುಳಿತಿದ್ದ ನನ್ನನ್ನು ನೋಡಿ ಹಿಂದೆ ಒಬ್ಬನು… “ಸುಮ್ಮನೆ ಕುಕ್ಕರಬಡಿದಿರೋಕೆ ನಿನಗೆ ಸಂಬಳಾ ಕೊಡೋದು. ಹೋಗಿ ಬೇಗ ದೋಸೆ ತೆಗೆದುಕೊಂಡು ಬಾ” ಎಂದಿದ್ದನು. ನಾನು ದಾಸಯ್ಯನೆಂಬುದು ಜನರ ಮನಸ್ಸಿಗೆ ತಿಳಿಯಿತು ಎಂದು ನನಗೆ ಹೊಳೆದಕೂಡಲೇ, ನನಗೆ ಉಂಟಾದ ಅವಮಾನ ಹೇಳತೀರದು. ಭೂಮಿಯು ಅಂದು ನನ್ನನ್ನು ಅಲ್ಲೇ ನುಂಗಿಕೊಂಡಿದ್ದರೆ ನನಗೇನು ದುಃಖವುಂಟಾಗುತ್ತಿರಲಿಲ್ಲ.
I was quite happy that I got the Garuda pillar for just 10 annas. Earlier, people had asked for it for a rupee and a half, but it hadn’t been available. Driven by the excitement that our Adi Karnataka people would be overjoyed, I started from Malleshwaram at the 3 o’clock train, holding the Garuda pillar in my hand. When I walked past Krishna Bazaar, it felt as though everyone was looking right at me. Thinking, “I’m not handsome enough for people to stare at me like this,” I took four more steps forward. Then it suddenly dawned on me. Seeing me carrying the Garuda pillar in my hand, people must have thought, “He has no cloth bag, no cymbals—doubtlessly, he must be a Dasayya (a wandering mendicant/devotee).”
My attire was indeed somewhat similar to that of a cymbal-and-bag-carrying mendicant: a soiled, white Khadi dhoti, a shirt tightly gripping and stretching across my oversized body, and over it, a dirty upper cloth. Hanging over my shoulder was a bundle containing a cucumber tied at its tip. Because there was a rumor that my father—who was a Vedic scholar—was coming to Bengaluru, I hadn’t shaved, and thus had a sharp, file-like black beard. These were some of the oddities of my appearance at that time. Earlier, seeing me sitting in a hotel dressed just like this, someone had remarked, “You aren’t being paid a salary just to sit around doing nothing. Go and get some dosas quickly!”
As soon as it dawned on me that people took me for a Dasayya, the humiliation I felt was beyond words. I wouldn’t have felt any sorrow if the earth had just swallowed me up right then and there.
ನಾನು ಏನು ಮಾಡಬೇಕೆಂದು ತೋರದೆ ಎರಡು ನಿಮಿಷ ಅಲ್ಲೇ ಸುಮ್ಮನೆ ನಿಂತುಬಿಟ್ಟೆ. ಆ ಎರಡು ನಿಮಿಷಗಳಲ್ಲಿ ನೂರಾರು ಜನ ನನ್ನ ಎದುರಿಗೆ ಹೋದರು. ಅವರಲ್ಲೆರಿಗೂ ನನ್ನ ಗರುಡಗಂಬದಮೇಲೆ ದೃಷ್ಟಿಯಿದ್ದಿತೇ ಹೊರತು ಮತ್ತಾವುದರ ಮೇಲೂ ಇರಲಿಲ್ಲ. ಅವರು ನನ್ನ ಕಡೆಯೇ ನೋಡಿಕೊಂಡು ಹಾಸ್ಯಮಾಡುತ್ತಾ ಮಾತನಾಡುತ್ತಿರುವಂತೆ ತೋರಿತು. ಹಾಳಾದ್ದನ್ನ ಬಟ್ಟೆಯಲ್ಲದಾದರೂ ಸುತ್ತಿಕೊಳ್ಳೋಣ ಎಂದರೆ ಅದು ಎಣ್ಣೆಮಯವಾಗಿದ್ದುದರಿಂದ ಅದಕ್ಕೂ ಅವಕಾಶವಿರಲಿಲ್ಲ. ಹಾಗೂ ಮಲ್ಲೇಶ್ವರದ ಸಂಪಿಗೆ ರಸ್ತೆಯ ಗಲ್ಲಿಯಲ್ಲಿ ಹಾದು ನಮ್ಮ ಸ್ನೇಹಿತನ ಕೊಠಡಿಗೆ ಹೋಗಿ ಅದನ್ನು ಇಟ್ಟು ಸದ್ಯ ಬದುಕಿಕೊಂಡೆನೆಂದು ನಿಟ್ಟುಸಿರುಬಿಟ್ಟೆ.
Not knowing what to do, I stood there silently for two minutes. In those two minutes, hundreds of people walked past me. Their gaze was fixed solely on my Garuda pillar and nothing else. It felt as though they were all looking in my direction, talking and mocking. Even if I wanted to wrap the cursed thing in a cloth, I couldn’t because it was greasy. Finally, passing through a lane on Malleshwaram’s Sampige Road, I reached my friend’s room, kept it inside, and let out a sigh of relief, thinking to myself, “I’ve survived for now.”
ಆ ಸ್ನೇಹಿತನ ಕೊಠಡಿಗೆ ಎಷ್ಟೋ ಜನರು ಬಂದರು. ಅವರಿಗೆಲ್ಲಾ ಅದರ ಮೇಲೆ ಕಣ್ಣು. ಎಲ್ಲರೂ ಹಾಸ್ಯಮಾಡುವವರೇ. ಒಬ್ಬನಂತೂ ನನಗೂ ಆ ಗರುಡಗಂಬಕ್ಕೂ ಸಂಬಂಧವಿಲ್ಲವೆಂದುಕೊಂಡು... "ಹಾಳಾದ ದಾಸಯ್ಯ ಯಾರಯ್ಯ ನಿನಗೆ ಗಂಟುಬಿದ್ದೋನು ! ಒಳ್ಳೆಯ ಸ್ನೇಹಿತರನ್ನೇ ಸಂಪಾದಿಸಿದ್ದೀಯೆ ! ದಾಸಯ್ಯಗಳು, ಭಿಕ್ಷುಕರು, ಬುಡುಬುಡುಕೆಯವರು, ಗೋಪಾಳದವರು ಇವರೇ ನಿನ್ನ ಸ್ನೇಹಿತರು. ನಿನ್ನ ಯೋಗ್ಯತೆಗೆ ಬೆಂಕಿಹಾಕಿತು" ಎಂದನು. ನನ್ನ ಸ್ನೇಹಿತ ಗಲ್ಲಿನ ಶಿಕ್ಷೆಗೆ ಗುರಿಯಾದ ನಿರಪರಾಧಿಯ ಮುಖದಂತೆ ಮುಖವನ್ನು ಮಾಡಿಕೊಂಡು ನನ್ನ ಕಡೆ ನೋಡಿದನು. ನಾನು ಮಂಕನಂತೆ ಸುಮ್ಮನಿದ್ದುಬಿಟ್ಟೆ.
Many people came into that friend’s room. All of them had their eyes on it, and everyone was teasing. One person, assuming that I had nothing to do with that Garuda pillar, remarked: “Who is that cursed Dasayya saddled on your back, man? You’ve made some fine friends! Dasayyas, beggars, fortune-tellers, Gopaladasas—these are your friends. To hell with your worth!”
My friend looked at me with the expression of an innocent person facing capital punishment. I stayed dumbfounded and silent.
ಗರುಡಗಂಬದ ಮೇಲೆ ಕೆಲವು ಕಾಗದಗಳನ್ನಾದರೂ ಮುಚ್ಚೋಣವೆಂದರೆ ಜನ ಆ ಕೊಠಡಿಬಿಟ್ಟು ಹೊರಕ್ಕೆ ಹೋರಡಲೇ ಇಲ್ಲ. ಅವರೆದುರಿಗೆ ಮುಚ್ಚಿದರೆ “ನಾನೇ” ಎಂದು ಅವರಿಗೆ ಪೂರ್ತಾ ಗೊತ್ತಾಗಿಬಿಡುವುದಲ್ಲ ಎಂಬ ಭಯದಿಂದ ನಾನು ಮುಚ್ಚಲೇ ಇಲ್ಲ. ಆ ಜಾಗವನ್ನು ಬಿಟ್ಟು ಹೊರಕ್ಕೆ ಹೋಗುವುದಕ್ಕೆ ಕೂಡ ನನಗೆ ಬುದ್ಧಿ ಹೊಳೆಯಲಿಲ್ಲ. ಭಯಂಕರವಾದ ಅಪಾದನೆಗಳಿಗೆ ಗುರಿಯಾದವನು ಹೇಗೆ ನಿರುತ್ಸಾಹದಿಂದ ಬಂದುದನ್ನೆಲ್ಲಾ ಸಹಿಸಲು ಸಿದ್ಧನಾಗಿರುವನೋ, ನಾನೂ ಆ ರೀತಿ ಬಂದ ಅನ್ಯಾಯವನ್ನೆಲ್ಲಾ ಸಹಿಸಲು ಸಿದ್ಧನಾಗಿ ಕುಳಿತುಬಿಟ್ಟೆ.
Even if I wanted to cover the Garuda pillar with some papers or cloth, the people simply refused to leave the room. Fearing that if I covered it right in front of them they would completely realize that it was “me,” I didn’t cover it at all. Nor did my mind think of leaving that place. Just like someone facing grave accusations resigns themselves to enduring whatever unfair treatment comes their way, I sat down, ready to bear all the unjust indignity that had befallen me.
ರಾತ್ರಿ ಹತ್ತು ಘಂಟೆ ರೈಲಿಗೆ ನಾನು ಹೊರಡಬೇಕಾಗಿದ್ದಿತು. ಆ ಹೊತ್ತಿಗಾದರೂ ಬಂದಿದ್ದವರು ನನ್ನ ಸ್ನೇಹಿತನ ಕೊಠಡಿಯನ್ನು ಬಿಟ್ಟು ಹೊರಡಬಹುದೆಂದು ನಿರೀಕ್ಷಿಸುತ್ತಿದ್ದೆ. ಒಂಬತ್ತುವರೆ ಘಂಟೆಯವರೆಗೆ ಕಾದರೂ ಆ ಪಾಪಿಗಳು ಆ ಕೊಠಡಿಯನ್ನು ಬಿಟ್ಟು ಹೊರಕ್ಕೆ ಹೊರಡಲಿಲ್ಲ. ನಾನು ವಿಧಿಯಿಲ್ಲದೆ ಅವರ ಎದುರಿಗೇ ತಿರುಪೆಯ ಕಂಬವನ್ನು ಹೊತ್ತುಕೊಂಡು ರೈಲ್ವೆ ಸ್ಟೇಷನ್ಗೆ ಬಂದೆನು.
I was supposed to leave by the ten o’clock train at night. I had been expecting that by that time, the people who had come might leave my friend’s room. Even after waiting until nine-thirty, those wretches did not leave the room. Left with no choice, right in front of them, I carried the pillar of begging on my shoulder and came to the railway station.
ನಾನು ಕುಳಿತ ಗಾಡಿಯಲ್ಲಿ ಒಬ್ಬ ದೊಡ್ಡಮನುಷ್ಯ ಕುಳಿತಿದ್ದನು. ನಾನು ಬೆಂಚಿನ ಕೆಳಗೆ ಇಟ್ಟ ಗರುಡಗಂಬದ ಕಡೆಯೇ ಅವನು ನೋಡುತ್ತಿದ್ದನು.
In the carriage where I sat, a gentleman was seated. He kept looking right at the Garuda pillar I had placed under the bench.
ಅವನು ನನ್ನನ್ನು ದಾಸಯ್ಯನೆಂದು ತಿಳಿಯಬಾರದೆಂದು ನಾನು ಅವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಪ್ರಾರಂಭಿಸಿದೆ. ಆದರೂ ಅವನು ನನ್ನ ವಿಷಯದಲ್ಲಿ ಅಸಮಾಧಾನದಿಂದಲೇ ಮುಖವನ್ನು ಗಂಟುಹಾಕಿಕೊಂಡಿದ್ದನು.
Hoping he wouldn’t take me for a Dasayya, I started speaking to him in English. Even then, he sat there scowling at me with a displeased look on his face.
ಆ ಹಾಳಾದ ಗರುಡಗಂಬವನ್ನು ತಲೆಕೆಳಗಾಗಿ ಹಿಡಿದುಕೊಂಡು ನಮ್ಮೂರ ಸ್ಟೇಷನಿನಲ್ಲಿ ಇಳಿದು, ಆದಿಕರ್ಣಾಟಕದ ಭಜನೆಮಂದಿರದ ಕಡೆಗೆ ಕತ್ತಲೆಯಲ್ಲಿ ಓಡುತ್ತಿದ್ದೆ. ಸ್ಟೇಷನ್ ಮಾಸ್ತರು… “ಅದ್ಯಾರೋ ದಾಸಯ್ಯ ಟಿಕೆಟ್ಟಿಲ್ಲದೆ ಆ ಕಡೆಯಿಂದ ಓಡ್ತಿರೋನು!” ಎಂದು ಕೂಗಿದನು. ನನ್ನ ಹೊಟ್ಟೆಯಲ್ಲಿ ಅಡಗಿದ್ದ ಸಿಟ್ಟೆಲ್ಲವೂ ಹೊರಗೆ ಬಂದು “ನಿಮ್ಮಪ್ಪ ದಾಸಯ್ಯ” ಎಂದು ಟಿಕೆಟ್ಟನ್ನು ಎಸೆದು ದೆವ್ವ ಹಿಡಿಯಲ್ಪಟ್ಟವನಂತೆ ಮನೆಗೆ ಓಡಿಹೋದೇನು.
Holding that cursed Garuda pillar upside down, I got down at our village station and was running in the dark towards the Adi Karnataka bhajan mandir. The station master shouted, “Who’s that Dasayya running from that side without a ticket?!” All the anger bottled up inside my stomach burst out, and shouting back, “Your father is a Dasayya!”, I threw my ticket at him and ran home like a person possessed by a ghost.
I. ಅರ್ಥಗಳು
- ಗರುಡಗಂಬ: ದಾಸಯ್ಯನು ಕೈಯಲ್ಲಿ ಹಿಡಿಯುವ ಎತ್ತರದ ದೀಪಸ್ತಂಭ (ದೀವಟಿಗೆ) (Light lamp held by Dasayya)
- ಉಪನ್ಯಾಸ: ಭಾಷಣ (Preaching)
- ಹುರುಪು: ಉತ್ಸಾಹ (Enthusiasim)
- ಜೊಳಿಗೆ: ಬಟ್ಟೆಯ ಚೀಲ (Cloth Bag)
- ಜಾಗಟೆ: ಒಂದು ಮಂಗಳ ವಾದ್ಯ (An auspicious musical instrument)
- ಮಾಸಿದ: ಬಣ್ಣ ಹೋಗಿರುವ (Dull)
- ದಟ್ಟೆ: ಸೊಂಟಕ್ಕೆ ಸುತ್ತಿಕೊಳ್ಳುವ ಬಟ್ಟೆ (Cloth tied to the waist)
- ಗಂಟುಬೀಳು: ಸಿಕ್ಕಿಕೊಳ್ಳುವುದು (Caught)
- ಗೋಪಾಲದವರು: ಭಿಕ್ಷೆ ಬೇಡುವವರು (Begger)
- ಅಪಾದನೆ: ದೂರು (Accuse)
II. ಪ್ರಶ್ನೋತ್ತರಗಳು
೧. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜೀವನ ಹಾಗೂ ಸಾಧನೆಯನ್ನು ಪರಿಚಯಿಸಿ.
ಉ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು ಗಾಂಧಿವಾದಿಗಳಾಗಿದ್ದರು. 1904ರಲ್ಲಿ ಅರಕಲಗೂಡು ತಾಲ್ಲೂಕಿನ ಗೊರೂರಿನಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ಇವರು ಗುಜರಾತ್ನ ಗಾಂಧಿ ಆಶ್ರಮ ಸೇರಿದರು. 1942ರ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಇವರು ಅನುಭವಿಸಿದರು. ನಂತರ ಇವರು ‘ಲೋಕಮಿತ್ರ’ ಕನ್ನಡ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದರು. ಇವರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. 1974ರಲ್ಲಿ ಮೈಸೂರು ವಿಶ್ವವಿದ್ಯಾಲಯ ರಾಮಸ್ವಾಮಿಯವರನ್ನು ಡಿ.ಲಿಟ್ ಪದವಿ ನೀಡಿ ಗೌರವಿಸಿತು. ಹಲವಾರು ಕೃತಿಗಳನ್ನು ರಚಿಸಿರುವ ಇವರು ಶಿರಸಿಯಲ್ಲಿ ನಡೆದ 55ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೨. ಲೇಖಕರಿಗೆ ಗರುಡಗಂಬವು ಹೇಗೆ ಸಿಕ್ಕಿತು?
ಉ: ಲೇಖಕರ ಊರಿನ ಆದಿಕರ್ಣಾಟಕರು ಭಜನೆಗೆ ಗರುಡಗಂಬವೊಂದು ಬೇಕೆಂದು ಅವರನ್ನು ಕೇಳಿಕೊಂಡಿದ್ದರು. ಲೇಖಕರೂ ಆಗಲಿ ಎಂದು ಸುಮಾರು ಒಂದುವರೆ ವರ್ಷವಾಗಿತ್ತು. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಲೇಖಕರ ಮಿತ್ರರಾದ ಶಂಕರಪ್ಪನವರು ಅವರ ಸ್ನೇಹಿತನಾದ ಒಬ್ಬ ಸಾಧುವಿನ ಬಳಿ ಗರುಡಗಂಬವಿದೆ ಎಂದು ಹೇಳಿದರು. ಆ ಸಾಧು ಬಿನ್ನಿಮಿಲ್ಲಿನ ಬಳಿ ಕುಡಿಯುವುದು ಪಾಪವೆಂಬ ವಿಷಯದ ಬಗ್ಗೆ ಉಪನ್ಯಾಸ ಮಾಡುತ್ತಿದ್ದನು. ಸಾಧು ಗರುಡಗಂಬವನ್ನು ಕೊಟ್ಟು ಬಿಡುತ್ತಾನೆಂದು ಹೇಳಿ ಲೇಖಕರಿಗೆ 2 ರೂ. ಬೆಲೆ ಬಾಳುವ ಗರುಡಗಂಬವನ್ನು 10 ಆಣೆಗೆ ಕೊಡಿಸಿದರು.
೩. ಲೇಖಕರಿಗೆ ಅವಮಾನ ಉಂಟಾಗಲು ಕಾರಣವೇನು?
ಉ: 10 ಆಣೆಗೆ ಗರುಡಗಂಬವನ್ನು ಹಿಡಿದು ಲೇಖಕರು ಮಲ್ಲೇಶ್ವರದಿಂದ ಹೊರಟರು. ಕೃಷ್ಣ ಬಜಾರಿನ ಮುಂದಕ್ಕೆ ಬಂದಾಗ ಎಲ್ಲರೂ ಲೇಖಕರ ಕಡೆಯೇ ನೋಡುತ್ತಿರುವಂತೆ ಅನಿಸಿತು. ಜನರು ‘ಇವನಿಗೆ ಜೊಳಿಗೆ, ಜಾಗಟೆ ಇಲ್ಲ. ಆದರೂ ಇವನೂ ದಾಸಯ್ಯನೇ ‘ ಎಂದು ಭಾವಿಸಿದರು. ಲೇಖಕರ ವೇಷವೇನೋ ಸ್ವಲ್ಪಮಟ್ಟಿಗೆ ಜಾಗಟೆ ಜೊಳಿಗೆಯ ಗುರುವಿಗೆ ಸಮಾನವಾಗಿಯೇ ಇತ್ತು. ಮಾಸಿದ ಒಂದು ಬಿಳಿಯ ಖಾದಿ ದಟ್ಟೆ, ಮಿತಿ ಮೀರಿ ಬೆಳೆದ ದೇಹಕ್ಕೆ ಬಿಗಿಯಾಗಿ ಮೇಲ್ಕಾಗಿದ್ದ ಒಂದು ಅಂಗಿ, ಅದರ ಮೇಲೆ ಹೊದೆದ ಕೊಳೆಯಾದ ಅಂಗವಸ್ತ್ರ, ಮುಖಕ್ಷೌರ ಮಾಡಿಸದೆ ಬೆಳೆಸಿದ್ದ ಕರಿಯ ಗಡ್ಡ ಇವು ಲೇಖಕರ ವೇಷ. ಇದೇ ವೇಷದಲ್ಲಿ ಹೋಟೆಲಿನಲ್ಲಿ ಕುಳಿತಿದ್ದ ಲೇಖಕರನ್ನು ನೋಡಿ ಒಬ್ಬನು ‘ಸುಮ್ಮನೆ ಕುಕ್ಕರ ಬಡಿದಿರೋಕೆ ನಿನಗೆ ಸಂಬಳಾ ಕೊಡುವುದು ಹೋಗಿ ಬೇಗ ದೋಸೆ ತೆಗೆದುಕೊಂಡು ಬಾ’ ಎಂದಿದ್ದನು. ತಾನು, ದಾಸಯ್ಯನೆಂದು ಜನ ಭಾವಿಸಿದ್ದಾರೆಂಬ ಸಂಗತಿ ಲೇಖಕರಿಗೆ ಅವಮಾನ ಉಂಟಾಗಲು ಕಾರಣ.
೪. ಲೇಖಕರು ತಮ್ಮ ಗರುಡಗಂಬವನ್ನು ಹಿಡಿದು ಸ್ನೇಹಿತನ ಕೊಠಡಿಗೆ ಏಕೆ ಹೋದರು?
ಉ: ಗರುಡಗಂಬವನ್ನು ಹಿಡಿದು ಹೋಗುತ್ತಿದ್ದ ಲೇಖಕರನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ಲೇಖಕರ ರೈಲು ರಾತ್ರಿ ಹತ್ತು ಘಂಟೆಗೆ ಇದ್ದಿದ್ದರಿಂದ ಹೋಟೆಲ್ಗೆ ಊಟಕ್ಕೆಂದು ಹೋದಾಗಲೂ ಅಲ್ಲಿ ಲೇಖಕರನ್ನು ಗರುಡಗಂಬದ ದಾಸಯ್ಯನೆಂದು ತಿಳಿದುದು ಅವರಿಗೆ ಅವಮಾನವಾಯಿತು. ಗರುಡಗಂಬ ಎಣ್ಣೆಯಮಾವಾಗಿದ್ದರಿಂದ ಅದನ್ನು ಬಟ್ಟೆಯಿಂದ ಮುಚ್ಚಲು ಸಾಧ್ಯವಿರಲಿಲ್ಲ. ಬೇರೆ ದಾರಿ ತೋರದೆ ಲೇಖಕರು ಮಲ್ಲೇಶ್ವರದಲ್ಲಿರುವ ತಮ್ಮ ಸ್ನೇಹಿತನ ಕೊಠಡಿಗೆ ಹೋದರು.
೫. ಲೇಖಕರ ಮಿತ್ರ ಗಲ್ಲಿನ ಶಿಕ್ಷೆಗೆ ಗುರಿಯಾದ ನಿರಪರಾಧಿಯಂತೆ ಮುಖ ಮಾಡಿಕೊಳ್ಳಲು ಕಾರಣವೇನು?
ಉ: ಗರುಡಗಂಬವನ್ನು ಹಿಡಿದು ಹೋಗುತ್ತಿದ್ದ ಲೇಖಕರನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ಲೇಖಕರ ರೈಲು ರಾತ್ರಿ ಹತ್ತು ಘಂಟೆಗೆ ಇದ್ದಿದ್ದರಿಂದ ಹೋಟೆಲ್ಗೆ ಊಟಕ್ಕೆಂದು ಹೋದಾಗಲೂ ಅಲ್ಲಿ ಲೇಖಕರನ್ನು ಗರುಡಗಂಬದ ದಾಸಯ್ಯನೆಂದು ತಿಳಿದುದು ಅವರಿಗೆ ಅವಮಾನವಾಯಿತು. ಗರುಡಗಂಬ ಎಣ್ಣೆಯಮಾವಾಗಿದ್ದರಿಂದ ಅದನ್ನು ಬಟ್ಟೆಯಿಂದ ಮುಚ್ಚಲು ಸಾಧ್ಯವಿರಲಿಲ್ಲ. ಬೇರೆ ದಾರಿ ತೋರದ ಲೇಖಕರು ಮಲ್ಲೇಶ್ವರದಲ್ಲಿರುವ ತಮ್ಮ ಸ್ನೇಹಿತನ ಕೊಠಡಿಗೆ ಹೋದರು. ಲೇಖಕರ ಸ್ನೇಹಿತನ ಕೊಠಡಿಗೆ ಎಷ್ಟೋ ಜನರು ಬಂದರು. ಎಲ್ಲರಿಗೂ ಗರುಡಗಂಬದ ಮೇಲೆ ಕಣ್ಣು. ಎಲ್ಲರೂ ಹಾಸ್ಯ ಮಾಡುವವರೇ. ಒಬ್ಬನಂತೂ ಲೇಖಕರಿಗೂ ಗರುಡಗಂಬಕ್ಕೂ ಸಂಬಂಧವಿಲ್ಲವೆಂದುಕೊಂಡು “ಹಾಳಾದ ದಾಸಯ್ಯ ಯಾರಾಯ್ಯಾ ನಿನಗೆ ಗಂಟುಬಿದ್ದೋನು ಒಳ್ಳೆಯ ಸ್ನೇಹಿತರನ್ನೇ ಸಂಪಾದಿಸಿದ್ದೀಯೆ! ದಾಸಯ್ಯಗಳು, ಭಿಕ್ಷುಕರು, ಬುಡುಬುಡುಕೆಯವರು, ಗೋಪಾಲದವರು ಇವರೇ ನಿನ್ನ ಸ್ನೇಹಿತರು. ನಿನ್ನ ಯೋಗ್ಯತೆಗೆ ಬೆಂಕಿಹಾಕಿತು” ಎಂದನು. ಲೇಖಕರ ಸ್ನೇಹಿತ ಗಲ್ಲಿನ ಶಿಕ್ಷೆಗೆ ಗುರಿಯಾದ ನಿರಪರಾಧಿಯ ಮುಖದಂತೆ ಮುಖವನ್ನು ಮಾಡಿಕೊಂಡು ಲೇಖಕರ ಕಡೆ ನೋಡಿದನು.
೬. ಲೇಖಕರು ತಮ್ಮ ಸ್ನೇಹಿತನ ಕೊಠಡಿಯಲ್ಲಿ ಅನುಭವಿಸಿದ ಮುಜುಗರದ ಸನ್ನಿವೇಶಗಳನ್ನು ವರ್ಣಿಸಿ.
ಉ: ಲೇಖಕರು ಗರುಡಗಂಬವನ್ನು ತಂದು ತಮ್ಮ ಸ್ನೇಹಿತನ ಕೊಠಡಿಯಲ್ಲಿಟ್ಟಾಗ, ಅಲ್ಲಿಗೆ ಬಂದ ಹಲವಾರು ಜನರು ಗರುಡಗಂಬವನ್ನೇ ನೋಡುತ್ತಾ ಹಾಸ್ಯ ಮಾಡಲಾರಂಭಿಸಿದರು. ಅವರಲ್ಲೊಬ್ಬನು ಲೇಖಕರಿಗೂ ಆ ಗರುಡಗಂಬಕ್ಕೂ ಸಂಬಂಧವಿಲ್ಲವೆಂದು ಭಾವಿಸಿ, ದಾಸಯ್ಯ, ಭಿಕ್ಷುಕರು ಮತ್ತು ಬುಡುಬುಡುಕೆಯವರೇ ನಿನಗೆ ಸ್ನೇಹಿತರಾಗಿದ್ದಾರೆ ಎಂದು ಸ್ನೇಹಿತನನ್ನು ಅಣಕಿಸಿ ಲೇಖಕರಿಗೆ ತೀವ್ರ ಅವಮಾನ ಮಾಡಿದನು. ಇದರಿಂದ ಸ್ನೇಹಿತನು ಗಲ್ಲಿನ ಶಿಕ್ಷೆಗೆ ಗುರಿಯಾದ ನಿರಪರಾಧಿಯಂತೆ ಮುಖ ಮಾಡಿಕೊಂಡು ನೋಡಿದಾಗ, ಲೇಖಕರು ಮಂಕನಂತೆ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ರಾತ್ರಿ ಒಂಬತ್ತೂವರೆಯಾದರೂ ಬಂದಿದ್ದ ಜನರು ಕೊಠಡಿಯನ್ನು ಬಿಟ್ಟು ಹೊರಡದಾಗ, ವಿಧಿಯಿಲ್ಲದೆ ಲೇಖಕರು ಆ ಗರುಡಗಂಬವನ್ನು ಹೊತ್ತುಕೊಂಡು ರೈಲ್ವೆ ಸ್ಟೇಷನ್ನಿನತ್ತ ಹೊರಟರು.
೭. ಲೇಖಕರು ಸ್ಟೇಷನ್ನಿಂದ ಓಡಿಹೋಗಲು ಕಾರಣವೇನು?
ಉ: ಲೇಖಕರು ಹೇಗೋ ಅವಮಾನಿತರಾಗಿ ಗರುಡಗಂಬವನ್ನು ಹೊತ್ತುಕೊಂಡು ರೈಲ್ವೇ ಸ್ಟೇಷನ್ಗೆ ಬಂದು ರಾತ್ರಿ ಹತ್ತು ಘಂಟೆಯ ರೈಲನ್ನು ಹತ್ತಿದರು. ಅವರು ಕುಳಿತ ಗಾಡಿಯಲ್ಲಿ ಒಬ್ಬ ಶ್ರೀಮಂತ ಕುಳಿತಿದ್ದನು. ಅವರು ಬೆಂಚಿನ ಕೆಳಗೆ ಇಟ್ಟ ಗರುಡಗಂಬವನ್ನು ನೋಡುತ್ತಿದ್ದನ್ನು ನೋಡಿದ ಲೇಖಕರು ತನ್ನನ್ನು ದಾಸಯ್ಯನೆಂದು ತಿಳಿಯಬಾರದೆಂದು ಲೇಖಕರು ಆ ವ್ಯಕ್ತಿಯೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡಲು ಪ್ರಾರಂಭಿಸಿದರು. ಆದರೂ ಅವನು ಅಸಮಾಧಾನದಿಂದಲೇ ಉತ್ತರಿಸುತ್ತಿದ್ದನು. ಊರನ್ನು ತಲುಪಿದ ಲೇಖಕರು ಗರುಡಗಂಬವನ್ನು ತಲೆ ಕೆಳಗಾಗಿ ಹಿಡಿದುಕೊಂಡು ಊರಿನ ಆದಿಕರ್ಣಾಟಕ ಭಜನೆ ಮಂದಿರದ ಕಡೆಗೆ ಕತ್ತಲೆಯಲ್ಲಿ ಓಡುತ್ತಿದ್ದಾಗ, ಸ್ಟೇಷನ್ ಮಾಸ್ಟರ್ ‘ಅದ್ಯಾರೋ ದಾಸಯ್ಯ ಟಿಕೆಟಿಲ್ಲದೆ ಆ ಕಡೆಯಿಂದ ಓಡ್ತಿರೋದು’ ಎಂದು ಕೂಗಿದನು. ಲೇಖಕರಲ್ಲಿ ಅಡಗಿದ್ದ ಸಿಟ್ಟೆಲ್ಲಾ ಹೊರಗೆ ಬಂದು ‘ನಿಮ್ಮಪ್ಪ ದಾಸಯ್ಯ’ ಎಂದು ಟಿಕೆಟ್ಟನ್ನು ಎಸೆದು ಮನೆಗೆ ಓಡಿದರು.
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ: —
“ಅದ್ಯಾರೋ ದಾಸಯ್ಯ ಟಿಕೆಟಿಲ್ಲದೆ ಆ ಕಡೆಯಿಂದ ಓಡ್ತಿರೋದು” ಎಂದು ಕೂಗಿದನು.
(ಗರುಡಗಂಬದ ದಾಸಯ್ಯ)
೮. ಮೇಲೆ ತಿಳಿಸಿದ ಮಾತನ್ನು ಹೇಳಿದ ವ್ಯಕ್ತಿ ಯಾರು? ಸಂದರ್ಭವೇನು? (Part of question 7)
ಉ: ಮೇಲೆ ತಿಳಿಸಿದ ಮಾತನ್ನು ಹೇಳಿದ ವ್ಯಕ್ತಿ ರೈಲ್ವೆ ಸ್ಟೇಷನ್ ಮಾಸ್ಟರ್. ಲೇಖಕರು ಗರುಡಗಂಬವನ್ನು ತಲೆ ಕೆಳಗಾಗಿ ಹಿಡಿದುಕೊಂಡು ಊರಿನ ಆದಿಕರ್ಣಾಟಕ ಭಜನೆ ಮಂದಿರದ ಕಡೆಗೆ ಕತ್ತಲೆಯಲ್ಲಿ ಓಡುತ್ತಿದ್ದಾಗ, ಸ್ಟೇಷನ್ ಮಾಸ್ಟರ್ ‘ಅದ್ಯಾರೋ ದಾಸಯ್ಯ ಟಿಕೆಟಿಲ್ಲದೆ ಆ ಕಡೆಯಿಂದ ಓಡ್ತಿರೋದು’ ಎಂದು ಕೂಗಿದನು.
೯. ಲೇಖಕರನ್ನು ದಾಸಯ್ಯನೆಂದು ಯೋಚಿಸಿದವರು ಯಾರು? ಏಕೆ?
ಉ: ಲೇಖಕರನ್ನು ನೋಡಿದ ಜನ ಮತ್ತು ರೈಲ್ವೆ ಸ್ಟೇಷನ್ನಲ್ಲಿದ್ದವರು ಲೇಖಕರನ್ನು ದಾಸಯ್ಯನೆಂದು ಯೋಚಿಸಿದರು. ಲೇಖಕರು ಧರಿಸಿದ ಮಾಸಿದ ಖಾದಿ ಬಟ್ಟೆ, ಚೂಪಾದ ಕರಿಯ ಗಡ್ಡ ಮತ್ತು ಕೈಯಲ್ಲಿ ಗರುಡಗಂಬ ವೇಷಭೂಷಣವು ದಾಸಯ್ಯನಂತೆ ಇದ್ದುದರಿಂದ ಜನರೆಲ್ಲರೂ ಅವರನ್ನು ದಾಸಯ್ಯನೆಂದು ತಪ್ಪಾಗಿ ಭಾವಿಸಿದರು.
೧೦. ಲೇಖಕರು ಸ್ನೇಹಿತರ ಕೋಣೆಗೆ ಹೋದಾಗ ಎದುರಿಸಿದ ಅವಮಾನಿತ ನುಡಿಗಳೇನೇನು? (Part of question 5)
ಉ: ಸ್ನೇಹಿತನ ಕೊಠಡಿಗೆ ಬಂದಿದ್ದ ಒಬ್ಬ ವ್ಯಕ್ತಿ “ಹಾಳಾದ ದಾಸಯ್ಯ ಯಾರಾಯ್ಯಾ ನಿನಗೆ ಗಂಟುಬಿದ್ದೋನು ಒಳ್ಳೆಯ ಸ್ನೇಹಿತರನ್ನೇ ಸಂಪಾದಿಸಿದ್ದೀಯೆ! ದಾಸಯ್ಯಗಳು, ಭಿಕ್ಷುಕರು, ಬುಡುಬುಡುಕೆಯವರು, ಗೋಪಾಲದವರು ಇವರೇ ನಿನ್ನ ಸ್ನೇಹಿತರು. ನಿನ್ನ ಯೋಗ್ಯತೆಗೆ ಬೆಂಕಿಹಾಕಿತು” ಎಂದು ಲೇಖಕರನ್ನು ಕುರಿತು ಅಣಕಿಸಿ ಅವಮಾನಿಸಿದನು.
೧೧. ಗರುಡಗಂಬವು ಯಾರಿಗೆ ಬೇಕಿತ್ತು? ಅದರ ಬೆಲೆ ಎಷ್ಟು? ಲೇಖಕರು ಅದನ್ನು ಕೊಂಡುಕೊಂಡಿದ್ದು ಹೇಗೆ?
ಉ: ಲೇಖಕರ ಊರಿನ ಆದಿಕರ್ಣಾಟಕರಿಗೆ ಭಜನೆಗಾಗಿ ಗರುಡಗಂಬ ಬೇಕಿತ್ತು. ಆ ಗರುಡಗಂಬದ ಬೆಲೆ 2 ರೂಪಾಯಿ ಆಗಿತ್ತು. ಲೇಖಕರು ಸ್ನೇಹಿತ ಶಂಕರಪ್ಪನವರ ಸಹಾಯದಿಂದ ಆ ಗರುಡಗಂಬವನ್ನು ಕೇವಲ 10 ಆಣೆಗೆ ಸಾಧುವಿನ ಬಳಿಯಿಂದ ಖರೀದಿಸಿದರು.
೧೨. ಲೇಖಕರು ನಿರುತ್ಸಾಹ, ಅನ್ಯಾಯಗಳನ್ನು ಸಹಿಸಲು ಕಾರಣವೇನು? (3) (First half question no 2 )
ಉ: ಲೇಖಕರ ಊರಿನ ಆದಿಕರ್ಣಾಟಕರು ಭಜನೆಗೆ ಗರುಡಗಂಬವೊಂದು ಬೇಕೆಂದು ಅವರನ್ನು ಕೇಳಿಕೊಂಡಿದ್ದರು. ಲೇಖಕರೂ ಆಗಲಿ ಎಂದು ಸುಮಾರು ಒಂದುವರೆ ವರ್ಷವಾಗಿತ್ತು. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಲೇಖಕರ ಮಿತ್ರರಾದ ಶಂಕರಪ್ಪನವರು ಅವರ ಸ್ನೇಹಿತನಾದ ಒಬ್ಬ ಸಾಧುವಿನ ಬಳಿ ಗರುಡಗಂಬವಿದೆ ಎಂದು ಹೇಳಿದರು. ಆ ಸಾಧು ಬಿನ್ನಿಮಿಲ್ಲಿನ ಬಳಿ ಕುಡಿಯುವುದು ಪಾಪವೆಂಬ ವಿಷಯದ ಬಗ್ಗೆ ಉಪನ್ಯಾಸ ಮಾಡುತ್ತಿದ್ದನು. ಸಾಧು ಗರುಡಗಂಬವನ್ನು ಕೊಟ್ಟು ಬಿಡುತ್ತಾನೆಂದು ಹೇಳಿ ಲೇಖಕರಿಗೆ 2 ರೂ. ಬೆಲೆ ಬಾಳುವ ಗರುಡಗಂಬವನ್ನು 10 ಆಣೆಗೆ ಕೊಡಿಸಿದರು. ಲೇಖಕರು ಕಡಿಮೆ ಬೆಲೆಗೆ ಸಿಕ್ಕ ಗರುಡಗಂಬವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಾಗ, ಜನರು ಅವರನ್ನು “ದಾಸಯ್ಯ” ಎಂದು ಭಾವಿಸಿ ಅಪಹಾಸ್ಯ ಮಾಡಿದರು. ಸ್ನೇಹಿತನ ಕೋಣೆಯಲ್ಲಿದ್ದವರೂ ಗರುಡಗಂಬವನ್ನು ನೋಡಿ ಅಪಹಾಸ್ಯ ಮಾಡಿ, ಲೇಖಕರನ್ನು ತೀವ್ರವಾಗಿ ಹೀಯಾಳಿಸಿದರು. ತಮಗೆ ಯಾವುದೇ ತಪ್ಪಿಲ್ಲದಿದ್ದರೂ ಸಮಾಜದ ಆಪಾದನೆಗಳನ್ನು ಎದುರಿಸಲಾಗದೆ, ಅವಮಾನವನ್ನೆಲ್ಲಾ ಮೌನವಾಗಿ ಸಹಿಸಿದರು.
೧೩. “ನಿಮ್ಮಪ್ಪ ದಾಸಯ್ಯ?” ಸಂದರ್ಭದೊಡನೆ ವಿವರಿಸಿ. (3) (First half question 11 and Second half question 7)
ಉ: ಈ ವಾಕ್ಯವನ್ನು ಗರುಡಗಂಬದ ದಾಸಯ್ಯ ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಲೇಖಕರು ಸ್ಟೇಷನ್ ಮಾಸ್ತರರಿಗೆ ಹೇಳಿದರು. ಲೇಖಕರ ಊರಿನ ಆದಿಕರ್ಣಾಟಕರಿಗೆ ಭಜನೆಗಾಗಿ ಗರುಡಗಂಬ ಬೇಕಿತ್ತು. ಆ ಗರುಡಗಂಬದ ಬೆಲೆ 2 ರೂಪಾಯಿ ಆಗಿತ್ತು. ಲೇಖಕರು ಸ್ನೇಹಿತ ಶಂಕರಪ್ಪನವರ ಸಹಾಯದಿಂದ ಆ ಗರುಡಗಂಬವನ್ನು ಕೇವಲ 10 ಆಣೆಗೆ ಸಾಧುವಿನ ಬಳಿಯಿಂದ ಖರೀದಿಸಿದರು. ಊರನ್ನು ತಲುಪಿದ ಲೇಖಕರು ಗರುಡಗಂಬವನ್ನು ತಲೆ ಕೆಳಗಾಗಿ ಹಿಡಿದುಕೊಂಡು ಊರಿನ ಆದಿಕರ್ಣಾಟಕ ಭಜನೆ ಮಂದಿರದ ಕಡೆಗೆ ಕತ್ತಲೆಯಲ್ಲಿ ಓಡುತ್ತಿದ್ದಾಗ, ಸ್ಟೇಷನ್ ಮಾಸ್ಟರ್ ‘ಅದ್ಯಾರೋ ದಾಸಯ್ಯ ಟಿಕೆಟಿಲ್ಲದೆ ಆ ಕಡೆಯಿಂದ ಓಡ್ತಿರೋದು’ ಎಂದು ಕೂಗಿದನು. ಲೇಖಕರಲ್ಲಿ ಅಡಗಿದ್ದ ಸಿಟ್ಟೆಲ್ಲಾ ಹೊರಗೆ ಬಂದು ‘ನಿಮ್ಮಪ್ಪ ದಾಸಯ್ಯ’ ಎಂದು ಟಿಕೆಟ್ಟನ್ನು ಎಸೆದು ಮನೆಗೆ ಓಡಿದರು.
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ: —
“ಯಾರಾಯ್ತಾ ದಾಸಯ್ಯ ನಿನಗೆ ಗೆಳೆಯನಾಗಿ ಸಿಕ್ಕಿರೋದು? ಒಳ್ಳೆ ಸ್ನೇಹಿತರನ್ನೇ ಸಂಪಾದಿಸಿದ್ದೀಯ! ದಾಸಯ್ಯಗಳು ಭಿಕ್ಷುಕರು, ಬುಡುಬುಡಕೆಯವರು, ಗೋಪಾಲದವರು ನಿನ್ನ ಸ್ನೇಹಿತರು. ನಿನ್ನ ಯೋಗ್ಯತೆಗೆ ಬೆಂಕಿ ಹಾಕು” ಎಂದನು.
(ಗರುಡಗಂಬದ ದಾಸಯ್ಯ) (ಗೊರೂರು ರಾಮಸ್ವಾಮಿ ಅಯ್ಯಂಗಾರ್)
೧೪. ಲೇಖಕರು ಗರುಡಗಂಬ ಬೇಕೆಂದು ಕೇಳಿದವರು ಯಾರು? ಅದು ಅವರಿಗೆ ದೊರಕಿತೇ? ಹೇಗೆ? ವಿವರಿಸಿ. (2) (Question no 2)
ಉ: ಲೇಖಕರ ಊರಿನ ಆದಿಕರ್ಣಾಟಕರು ಭಜನೆಗೆ ಗರುಡಗಂಬವೊಂದು ಬೇಕೆಂದು ಅವರನ್ನು ಕೇಳಿಕೊಂಡಿದ್ದರು. ಲೇಖಕರೂ ಆಗಲಿ ಎಂದು ಸುಮಾರು ಒಂದುವರೆ ವರ್ಷವಾಗಿತ್ತು. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಲೇಖಕರ ಮಿತ್ರರಾದ ಶಂಕರಪ್ಪನವರು ಅವರ ಸ್ನೇಹಿತನಾದ ಒಬ್ಬ ಸಾಧುವಿನ ಬಳಿ ಗರುಡಗಂಬವಿದೆ ಎಂದು ಹೇಳಿದರು. ಆ ಸಾಧು ಬಿನ್ನಿಮಿಲ್ಲಿನ ಬಳಿ ಕುಡಿಯುವುದು ಪಾಪವೆಂಬ ವಿಷಯದ ಬಗ್ಗೆ ಉಪನ್ಯಾಸ ಮಾಡುತ್ತಿದ್ದನು. ಸಾಧು ಗರುಡಗಂಬವನ್ನು ಕೊಟ್ಟು ಬಿಡುತ್ತಾನೆಂದು ಹೇಳಿ ಲೇಖಕರಿಗೆ 2 ರೂ. ಬೆಲೆ ಬಾಳುವ ಗರುಡಗಂಬವನ್ನು 10 ಆಣೆಗೆ ಕೊಡಿಸಿದರು.
೧೫. ರೈಲುಗಾಡಿಯಲ್ಲಿ ಲೇಖಕರು ಯಾರೊಡನೆ ಇಂಗ್ಲಿಷಿನಲ್ಲಿ ಮಾತನಾಡಲು ಪ್ರಾರಂಭಿಸಿದರು? ಏಕೆ? (2) (Same as question 7)
ಉ: ಲೇಖಕರು ಅವಮಾನಿತರಾಗಿ ಗರುಡಗಂಬವನ್ನು ಹೊತ್ತುಕೊಂಡು ರೈಲ್ವೇ ಸ್ಟೇಷನ್ಗೆ ಬಂದು ರಾತ್ರಿ ಹತ್ತು ಘಂಟೆಯ ರೈಲನ್ನು ಹತ್ತಿದರು. ಅವರು ಕುಳಿತ ಗಾಡಿಯಲ್ಲಿ ಒಬ್ಬ ಶ್ರೀಮಂತ ಕುಳಿತಿದ್ದನು. ಅವರು ಬೆಂಚಿನ ಕೆಳಗೆ ಇಟ್ಟ ಗರುಡಗಂಬವನ್ನು ನೋಡುತ್ತಿದ್ದನ್ನು ನೋಡಿದ ಲೇಖಕರು ತನ್ನನ್ನು ದಾಸಯ್ಯನೆಂದು ತಿಳಿಯಬಾರದೆಂದು ಲೇಖಕರು ಆ ವ್ಯಕ್ತಿಯೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡಲು ಪ್ರಾರಂಭಿಸಿದರು. ಆದರೂ ಅವನು ಅಸಮಾಧಾನದಿಂದಲೇ ಉತ್ತರಿಸುತ್ತಿದ್ದನು.ಇದರಿಂದ ಆ ವ್ಯಕ್ತಿಯು ತನ್ನನ್ನು ದಾಸಯ್ಯನೆಂದು ತಿಳಿದುಕೊಳ್ಳಬಾರದೆಂಬುದು ಲೇಖಕರ ಯೋಚನೆಯಾಗಿತ್ತು.
೧೬. ಲೇಖಕರ ಗೆಳೆಯ ಗಲ್ಲು ಶಿಕ್ಷೆಗೆ ಗುರಿಯಾದ ನಿರಪರಾಧಿಯ ಮುಖದಂತೆ ಮುಖ ಮಾಡಲು ಕಾರಣವೇನು? [2] (Same as question no 5)
ಉ: ಗರುಡಗಂಬವನ್ನು ಹಿಡಿದು ಹೋಗುತ್ತಿದ್ದ ಲೇಖಕರನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ಲೇಖಕರ ರೈಲು ರಾತ್ರಿ ಹತ್ತು ಘಂಟೆಗೆ ಇದ್ದಿದ್ದರಿಂದ ಹೋಟೆಲ್ಗೆ ಊಟಕ್ಕೆಂದು ಹೋದಾಗಲೂ ಅಲ್ಲಿ ಲೇಖಕರನ್ನು ಗರುಡಗಂಬದ ದಾಸಯ್ಯನೆಂದು ತಿಳಿದುದು ಅವರಿಗೆ ಅವಮಾನವಾಯಿತು. ಗರುಡಗಂಬ ಎಣ್ಣೆಯಮಾವಾಗಿದ್ದರಿಂದ ಅದನ್ನು ಬಟ್ಟೆಯಿಂದ ಮುಚ್ಚಲು ಸಾಧ್ಯವಿರಲಿಲ್ಲ. ಬೇರೆ ದಾರಿ ತೋರದ ಲೇಖಕರು ಮಲ್ಲೇಶ್ವರದಲ್ಲಿರುವ ತಮ್ಮ ಸ್ನೇಹಿತನ ಕೊಠಡಿಗೆ ಹೋದರು. ಲೇಖಕರ ಸ್ನೇಹಿತನ ಕೊಠಡಿಗೆ ಎಷ್ಟೋ ಜನರು ಬಂದರು. ಎಲ್ಲರಿಗೂ ಗರುಡಗಂಬದ ಮೇಲೆ ಕಣ್ಣು. ಎಲ್ಲರೂ ಹಾಸ್ಯ ಮಾಡುವವರೇ. ಒಬ್ಬನಂತೂ ಲೇಖಕರಿಗೂ ಗರುಡಗಂಬಕ್ಕೂ ಸಂಬಂಧವಿಲ್ಲವೆಂದುಕೊಂಡು “ಹಾಳಾದ ದಾಸಯ್ಯ ಯಾರಾಯ್ಯಾ ನಿನಗೆ ಗಂಟುಬಿದ್ದೋನು ಒಳ್ಳೆಯ ಸ್ನೇಹಿತರನ್ನೇ ಸಂಪಾದಿಸಿದ್ದೀಯೆ! ದಾಸಯ್ಯಗಳು, ಭಿಕ್ಷುಕರು, ಬುಡುಬುಡುಕೆಯವರು, ಗೋಪಾಲದವರು ಇವರೇ ನಿನ್ನ ಸ್ನೇಹಿತರು. ನಿನ್ನ ಯೋಗ್ಯತೆಗೆ ಬೆಂಕಿಹಾಕಿತು” ಎಂದನು. ಲೇಖಕರ ಸ್ನೇಹಿತ ಗಲ್ಲಿನ ಶಿಕ್ಷೆಗೆ ಗುರಿಯಾದ ನಿರಪರಾಧಿಯ ಮುಖದಂತೆ ಮುಖವನ್ನು ಮಾಡಿಕೊಂಡು ಲೇಖಕರ ಕಡೆ ನೋಡಿದನು.
೧೭. ಲೇಖಕರ ಉಡುಗೆ ಹೇಗಿತ್ತು? ಅದರಿಂದ ಅವರು ಹೋಟೆಲ್ನಲ್ಲಿ ಯಾವ ರೀತಿ ಮುಜುಗರಕ್ಕೆ ಒಳಗಾದರು? [2] (same as Question no 3)
ಉ: ಲೇಖಕರ ವೇಷ ಸ್ವಲ್ಪಮಟ್ಟಿಗೆ ಜಾಗಟೆ ಜೊಳಿಗೆಯ ಗುರುವಿಗೆ ಸಮಾನವಾಗಿಯೇ ಇತ್ತು. ಮಾಸಿದ ಒಂದು ಬಿಳಿಯ ಖಾದಿ ದಟ್ಟೆ, ಮಿತಿ ಮೀರಿ ಬೆಳೆದ ದೇಹಕ್ಕೆ ಬಿಗಿಯಾಗಿ ಮೇಲ್ಕಾಗಿದ್ದ ಒಂದು ಅಂಗಿ, ಅದರ ಮೇಲೆ ಹೊದೆದ ಕೊಳೆಯಾದ ಅಂಗವಸ್ತ್ರ, ಮುಖಕ್ಷೌರ ಮಾಡಿಸದೆ ಬೆಳೆಸಿದ್ದ ಕರಿಯ ಗಡ್ಡ ಇವು ಲೇಖಕರ ವೇಷ. ಇದೇ ವೇಷದಲ್ಲಿ ಹೋಟೆಲಿನಲ್ಲಿ ಕುಳಿತಿದ್ದ ಲೇಖಕರನ್ನು ನೋಡಿ ಒಬ್ಬನು ‘ಸುಮ್ಮನೆ ಕುಕ್ಕರ ಬಡಿದಿರೋಕೆ ನಿನಗೆ ಸಂಬಳಾ ಕೊಡುವುದು ಹೋಗಿ ಬೇಗ ದೋಸೆ ತೆಗೆದುಕೊಂಡು ಬಾ’ ಎಂದಿದ್ದನು. ಹೀಗೆ ಜನರು ತಮ್ಮನ್ನು ದಾಸಯ್ಯ ಎಂದು ಭಾವಿಸಿದ್ದಾರೆ ಎಂದು ಅರಿದ ಲೇಖಕರು ಬಹಳ ಮುಜುಗರಕ್ಕೆ ಒಳಗಾದರು.
ಸಮಾನಾರ್ಥಕ ಪದಗಳು: Synonyms
• ಉಪನ್ಯಾಸ: ಭಾಷಣ, ಪ್ರವಚನ (Lecture)
ಹುರುಪು: ಉತ್ಸಾಹ, ಸಂಭ್ರಮ (Excitement)
ಜಾಗಟೆ: ವಾದ್ಯ, ಗಂಟೆ (Musical instrument)
ಗಂಟುಬೀಳು: ಸಿಕ್ಕಿಕೊಳ್ಳುವುದು, ಅಂಟಿಕೊಳ್ಳುವುದು (To get stuck)
ಅಪಾದನೆ: ದೂರು, ಆರೋಪ, ನಿಂದನೆ (Accusation)
ಸಂತೋಷ: ಆನಂದ, ಹರ್ಷ, ಖುಷಿ (Happiness)
ಅವಮಾನ: ಅಪಹಾಸ್ಯ, ತಿರಸ್ಕಾರ (Insult)
• ಕತ್ತಲೆ: ಅಂಧಕಾರ, ಇರುಳು (Darkness)
• ರಾತ್ರಿ: ಇರುಳು, ಯಾಮ (Night)
ವಿರುದ್ಧಾರ್ಥಕ ಪದಗಳು (Antonyms)
- ಸಂತೋಷ X ದುಃಖ
- ಮಾನ X ಅಪಮಾನ
- ಕತ್ತಲೆ X ಬೆಳಕು
- ರಾತ್ರಿ X ಹಗಲು
- ಹೊರಗೆ X ಒಳಗೆ
- ಮೇಲೆ X ಕೆಳಗೆ