ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ:
೧. ಅಮಾತ್ಯರು ಯಾವ ವಿಷಯದಲ್ಲಿ ನಿಪುಣವಾಗಿರಬೇಕು?
ಉ. ಅಮಾತ್ಯರು ರಾಜ್ಯಶಾಸ್ತ್ರದಲ್ಲಿ ನಿಪುಣವಾಗಿರಬೇಕು.
೨. ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು?
ಉ. ರಾಜನು ಅಲ್ಪ ಪ್ರಯತ್ನದಿಂದ ಬಹುಫಲವನ್ನು ಪಡೆಯುವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು.
೩. ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು?
ಉ. ಪಂಡಿತನೊಬ್ಬನೇ ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು.
೪. ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು?
ಉ. ಮೇಧಾವಿಯೂ, ಶೂರನೂ, ಕಾರ್ಯದಕ್ಷನೂ, ರಾಜ್ಯಶಾಸ್ತ್ರನಿಪುಣನೂ ಆದ ಸಚಿವನು ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.
೫. ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು?
ಉ. ಬಲಾತ್ಕಾರದಿಂದ ಕೆಲಸ ಮಾಡಿಸಿ, ಶೋಷಿಸುವ ಯಜಮಾನನಂತೆ ಜನರು ಅರಸನನ್ನು ತಿರಸ್ಕರಿಸಬಹುದು.
೬. ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ಯಾರು?
ಉ. ಶತ್ರುಗಳು ಮರಳಿ ದೇಶದೊಳಕ್ಕೆ ಬಂದರೆ ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು.
೭. ಯಾರೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ?
ಉ. ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ.
ಇ) ಈ ಕೆಳಗಿನ ಪ್ರಶ್ನೆಗಳಿಗೆ ೧೦ ವಾಕ್ಯಗಳಲ್ಲಿ ವಿಸ್ತಾರವಾಗಿ ಉತ್ತರಿಸಿ:
೧) ರಾಜ್ಯಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ.
ಉ. ರಾಜ್ಯವನ್ನು ಆಳುವುದರಲ್ಲಿ ಮಂತ್ರಾಲೋಚನೆಯು ಮುಖ್ಯವಾದುದು. ಅದನ್ನು ಗೌಪ್ಯವಾಗಿ ಇಟ್ಟಿರಬೇಕು. ಅವನು ಅಧಿಕಾರಿಗಳನ್ನು ಯೋಗ್ಯತೆಗೆ ತಕ್ಕಂತೆ ನೇಮಿಸಿಕೊಳ್ಳಬೇಕು. ಸೇನಾನಾಯಕರನ್ನು, ಸೈನಿಕರನ್ನು ರಾಜನು ಚೆನ್ನಾಗಿ
ನೋಡಿಕೊಳ್ಳಬೇಕು. ದೇಶದಲ್ಲಿ ಹುಟ್ಟಿದ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು. ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ ನೋಡಿಕೊಳ್ಳಬೇಕು.
೨) ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ.
ಉ. ನಾಸ್ತಿಕಬುದ್ಧಿ, ಸುಳ್ಳು, ಸಿಟ್ಟು, ಅನವಧಾನ, ಚಟುವಟಿಕೆಯಿಲ್ಲದೆ ಕೆಲಸವನ್ನು ತಡಮಾಡುವುದು. ಪ್ರಾಜ್ಞರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು,
ಮಂತ್ರಿಗಳೊಡನೆ ಸಮಾಲೋಚಿಸದೆ ರಾಜನು ತಾನೊಬ್ಬನೇ
ನಿರ್ಧಾರವನ್ನು ತೆಗೆದುಕೊಳ್ಳುವುದು. ಅನುಭವವಿಲ್ಲದ ಅವಿವೇಕಿಗಳೊಡನೆ ಕಾರ್ಯಗಳನ್ನು ಆರಂಭಿಸುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗಪಡಿಸುವುದು, ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು ಹಾಗೂ ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ ಮಾಡುವದು. ಈ ಹದಿನಾಲ್ಕು ದೋಷಗಳು ರಾಜನಲ್ಲಿ ತಲೆದೋರಬಹುದು.
(ಅ) ಈ ಕೆಳಗಿನ ಪದಗಳ ವಚನ ಬದಲಾಯಿಸಿ ಬರೆಯಿರಿ.
ದೂತ – ದೂತರು ಅಮಾತ್ಯ – ಅಮಾತ್ಯರು ಪ್ರಶ್ನೆ – ಪ್ರಶ್ನೆಗಳು ಧನುರ್ಧಾರಿಗಳು – ಧನುರ್ಧಾರಿ ಮೌಲ್ಯ – ಮೌಲ್ಯಗಳು ಬಹುಮಾನಗಳು – ಬಹುಮಾನ
(ಆ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
ಕೃಶ – ನನ್ನ ಗೆಳೆಯ ಊಟ, ತಿಂಡಿ ಮಾಡದೆ ಕೃಶವಾದನು.
ನಿದ್ರಾವಶ – ಕುಂಭಕರ್ಣನು ವರ್ಷದ ಆರು ತಿಂಗಳು ನಿದ್ರಾವಶವಾಗಿರುತ್ತಾನೆ.
ಏರ್ಪಾಡು – ನನ್ನ ಶಾಲೆಯಲ್ಲಿ ವಾರ್ಷಿಕೋತ್ಸವದ ಏರ್ಪಾಡು ನಡೆಯುತ್ತಿದೆ.
ಚಾಪಲ್ಯ – ನನ್ನ ಗೆಳೆಯನಿಗೆ ಊಟದ ಚಾಪಲ್ಯ ತುಂಬಾ ಇದೆ.
ಜ್ಞಾತಿ – ನನ್ನ ಜ್ಞಾತಿಗಳಿಗೆ ನಾನೆಂದರೆ ತುಂಬಾ ಇಷ್ಟ.
(ಇ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ.
ನಡೆಯುತ್ತಿದೆಯೆಂಬುದನ್ನು = ನಡೆಯುತ್ತಿದೆ + ಎಂಬುದನ್ನು – ʼಯʼಕಾರಾಗಮ ಸಂಧಿ
ಜಾವದಲ್ಲೆದ್ದು = ಜಾವದಲ್ಲಿ + ಎದ್ದು – ಲೋಪ ಸಂಧಿ
ದರ್ಶನವನ್ನು = ದರ್ಶನ + ವನ್ನು – ʼವʼ ಕಾರ ಆಗಮಸಂಧಿ
ನಿರ್ಭಯವಾಗಿ = ನಿರ್ಭಯ + ಆಗಿ – ʼವʼ ಕಾರ ಆಗಮಸಂಧಿ
ಕಣ್ಣಿಟ್ಟಿರು = ಕಣ್ಣು +ಇಟ್ಟಿರು – ಲೋಪ ಸಂಧಿ
ಆ) ಈ ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
೧) ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ?
ಉ. ಮಂತ್ರಾಲೋಚನೆಯನ್ನು ಅಮಾತ್ಯರೊಂದಿಗೆ ಗೌಪ್ಯವಾಗಿ ನಡೆಸಬೇಕು. ಮಂತ್ರಾಲೋಚನೆಯನ್ನು ರಾಜನೊಬ್ಬನೇ ಮಾಡದೇ, ಅಗತ್ಯವಿದ್ದಷ್ಟು ಜನರನ್ನು ಮಾತ್ರ ಸೇರಿಸಿ ಮಾಡಬೇಕು. ಮಂತ್ರಾಲೋಚನೆಯು ಕಾರ್ಯರೂಪಕ್ಕೆ ಬರುವ ಮೊದಲೇ ಸಾಮಂತರಾಜರಿಗೆ ಹಾಗೂ ರಾಷ್ಟ್ರಕ್ಕೆ ಬಹಿರಂಗವಾಗಬಾರದು. ಮಂತ್ರಿಗಳ ಜೊತೆ ನಡೆಸಿದ ಮಂತ್ರಾಲೋಚನೆಯು ಊಹೆಯಿಂದಲೂ, ಯುಕ್ತಿಯಿಂದಲೂ ಜನರಿಗೆ ತಿಳಿಯಬಾರದು.
೨) ರಾಜ್ಯದ ಅಮಾತ್ಯರಲ್ಲಿ ಯಾವ ಗುಣಗಳಿರಬೇಕು?
ಉ. ರಾಜ್ಯದ ಅಮಾತ್ಯರು ಲಂಚವನ್ನು ತೆಗೆದುಕೊಳ್ಳಬಾರದು. ಪ್ರಾಮಾಣಿಕನಾಗಿರಬೇಕು. ಅಮಾತ್ಯರು ರಾಜ್ಯಶಾಸ್ತ್ರದಲ್ಲಿ ನಿಪುಣರಾಗಿರಬೇಕು. ಮಂತ್ರಾಲೋಚನೆಯನ್ನು ಗೌಪ್ಯವಾಗಿ ಇಡಬೇಕು. ರಾಜ್ಯದ ಆಡಳಿತವನ್ನು ಸರಿಯಾಗಿ ನಿರ್ವಹಿಸಿ ರಾಜನಿಗೆ
ಶ್ರೇಯಸ್ಸನ್ನು ತಂದುಕೊಡಬಲ್ಲವನಾಗಿರಬೇಕು.
೩) ಯಾವ ಮೂರು ವ್ಯಕ್ತಿಗಳನ್ನು ರಾಜನು ತ್ಯಜಿಸಬೇಕು?
ಉ. ರಾಜನು ಉಪಾಯದಿಂದ ಹಣ ಕೀಳುವ ವೈದ್ಯನನ್ನು ತ್ಯಜಿಸಬೇಕು. ಒಡೆಯನನ್ನು ದೂಷಿಸುವ ಸೇವಕನನ್ನು ಬಿಡಬೇಕು. ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ತ್ಯಜಿಸಬೇಕು.
೪) ದೂತನು ಹೇಗಿರಬೇಕು?
ಉ. ದೂತನು ಅದೇ ದೇಶದಲ್ಲಿ ಹುಟ್ಟಿದ ಬೆಳೆದವನಾಗಿರಬೇಕು. ಅವನು ವಿದ್ವಾಂಸನಾಗಿರಬೇಕು. ದೂತನು ಕಾರ್ಯಸಮರ್ಥನೂ, ಪ್ರತಿಭಾಶಾಲಿಯೂ ಆಗಿರಬೇಕು. ಹೇಳಿಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವ ಸತ್ಯವಂತನಾಗಿರಬೇಕು. ವ್ಯಕ್ತಿ, ವಸ್ತುಗಳ ಬೆಲೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು.
೫) ಸೇವಕರ ವಿಷಯದಲ್ಲಿ ರಾಜನು ಹೇಗೆ ವರ್ತಿಸಬೇಕು?
ಉ. ಸೇವಕರು ನಿರ್ಭಯವಾಗಿ ಬಂದು ರಾಜನ ಎದುರಿಗೆ ನಿಲ್ಲುವ ಸಲಿಗೆ ಕೊಡಬಾರದು. ರಾಜನ ಹತ್ತಿರವೇ ಸುಳಿಯದೇ ದೂರಕ್ಕೆ ಸರಿಯುವಂತೆ ಹೆದರಿಸಬಾರದು. ಸೇವಕರಿಗೆ ಅತೀ ಸಲಿಗೆ ಕೊಡದೇ ಹಾಗೂ ಅತಿಯಾಗಿ ಹೆದರಿಸಬಾರದು. ಇವೆರಡರ
ಮಧ್ಯದ ದಾರಿಯಲ್ಲಿ ರಾಜನು ಸೇವಕರ ಜೊತೆ ವರ್ತಿಸಬೇಕು.
೬) ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನು ಹೇಳುತ್ತಾನೆ?
ಉ. ಖಜಾನೆಯಲ್ಲಿ ವ್ಯಯಕ್ಕಿಂತ ಹೆಚ್ಚಾಗಿ ಆದಾಯ ಇರಬೇಕು. ಖಜಾನೆಯ ಸಂಪತ್ತು ರಾಜ್ಯದ ಅಭಿವ್ರದ್ಧಿಯ ಕೆಲಸಕಾರ್ಯಗಳಿಗೇ ಮಾತ್ರ ಉಪಯೋಗಿಸಬೇಕು. ಖಜಾನೆಯನ್ನು ಬರಿದುಗೊಳಿಸಬಾರದು. ಖಜಾನೆ ತುಂಬಿಸಲು ಅನರ್ಥ, ಅನ್ಯಾಯದ ದಾರಿಯನ್ನು ಹಿಡಿಯಬಾರದು.
ಈ) ಈ ಮಾತುಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.
೧) ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು
ಉ: ಆಯ್ಕೆ : ಈ ವಾಕ್ಯವನ್ನು ʼಡಾ. ಎನ್. ರಂಗನಾಥ ಶರ್ಮʼ ರವರು ಬರೆದಿರುವ ಶ್ರೀ ಮದ್ವಾಲ್ಮೀಕಿರಾಮಾಯಣಮ್ ಕೃತಿಯ ಅಯೋಧ್ಯಾಕಾಂಡದಿಂದ ʼರಾಮರಾಜ್ಯʼ ಎಂಬ ಗದ್ಯವನ್ನು ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ : ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸೆಂದು ತಿಳಿದು ಅವನನ್ನು ಆದರಿಸುವೆಯಾ? ಏಕೆಂದರೆ ಕಷ್ಟಕಾಲದಲ್ಲಿ ಪಂಡಿತನೊಬ್ಬನೇ ಸರಿಯಾದ ಉಪಾಯವನ್ನು ನೀಡಿ, ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖರ ಸಂಖ್ಯೆ ಎಷ್ಟೇ ಇರಲಿ ರಾಜನಿಗೆ ಇದರಿಂದ ಯಾವ ಉಪಯೋಗವಾಗುವಿದಿಲ್ಲ. ಮೇಧಾವಿಯೂ, ಶೂರನೂ, ಕಾರ್ಯದಕ್ಷನೂ, ರಾಜ್ಯಶಾಸ್ತ್ರನಿಪುಣನೂ ಆದ ಸಚಿವನು ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.
೨) ದೂತನು ಕಾರ್ಯಸಮರ್ಥನು ಪ್ರತಿಭಾಶಾಲಿಯೂ ಆಗಿರಬೇಕು.
ಉ: ಆಯ್ಕೆ : ಈ ವಾಕ್ಯವನ್ನು ʼಡಾ. ಎನ್. ರಂಗನಾಥ ಶರ್ಮʼ ರವರು ಬರೆದಿರುವ ಶ್ರೀ ಮದ್ವಾಲ್ಮೀಕಿರಾಮಾಯಣಮ್ ಕೃತಿಯ ಅಯೋಧ್ಯಾಕಾಂಡದಿಂದ ʼರಾಮರಾಜ್ಯʼ ಎಂಬ ಗದ್ಯವನ್ನು ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ : ದೂತನು ಅದೇ ದೇಶದಲ್ಲಿ ಹುಟ್ಟಿದ ಬೆಳೆದವನಾಗಿರಬೇಕು. ಅವನು ವಿದ್ವಾಂಸನಾಗಿರಬೇಕು. ದೂತನು ಕಾರ್ಯಸಮರ್ಥನೂ, ಪ್ರತಿಭಾಶಾಲಿಯೂ ಆಗಿರಬೇಕು. ಹೇಳಿಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವ ಸತ್ಯವಂತನಾಗಿರಬೇಕು. ವ್ಯಕ್ತಿ, ವಸ್ತುಗಳ ಬೆಲೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ದೂತನು ಹೀಗೆ ರಾಮನು ಹೇಳಿದ ಹಾಗೆ ಇದ್ದರೆ ಮಾತ್ರ ಆತನು ರಾಜನನ್ನು ಶತ್ರುಗಳಿಂದ ಕಾಪಾಡುತ್ತಾನೆ.
೩) ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು.
ಉ: ಆಯ್ಕೆ : ಈ ವಾಕ್ಯವನ್ನು ʼಡಾ. ಎನ್. ರಂಗನಾಥ ಶರ್ಮʼ ರವರು ಬರೆದಿರುವ ಶ್ರೀ ಮದ್ವಾಲ್ಮೀಕಿರಾಮಾಯಣಮ್ ಕೃತಿಯ ಅಯೋಧ್ಯಾಕಾಂಡದಿಂದ ʼರಾಮರಾಜ್ಯʼ ಎಂಬ ಗದ್ಯವನ್ನು ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ : ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಅನೇಕ ಮಹಾನುಭಾವರ ಪರಿಚಯವಾಗುತ್ತದೆ. ಅವರು ತಮ್ಮ ವ್ಯಕ್ತಿತ್ವದಿಂದ ಅಪೂರ್ವವಾದ ಸಾಧನೆಯನ್ನು ತೋರಿಸುತ್ತಾರೆ. ಆದ ಕಾರಣ ರಾಜನು ಸಹ ಭರಥನಿಗೆ ರಾಜನ ಆಡಳಿತದ ಬಗ್ಗೆ ಹೇಳುವಾಗ ರಾಜನು ತನ್ನ ಪೂರ್ವಿಕರ ವ್ಯಕ್ತಿತ್ವದ ಅತ್ತ್ಯುತ್ತಮ ಅಂಶಗಳನ್ನು ಅಳವಡಿಸಕೊಳ್ಳಬೇಕು ಎಂದು ಹೇಳುತ್ತಾನೆ. ಇದರಿಂದ ಪ್ರಜೆಗಳು ಸಂತುಷ್ಟರಾಗುತ್ತಾರೆ ಮತ್ತು ಆಡಳಿತವು ಸುಲಭವಾಗುತ್ತದೆ.
The prose "Ramarajya" is selected from the Ayodhyakanda of Sri Madvalmikiramayanam written by N Ranganatha Sharma. The author writes conversation between Prince Bharata, son of King Dasharatha and Shri Ram, son of king Dasarata. Sriram and Barata are brothers. When Baratha comes to meet his brother sri ram, Shriram asks him about his Kingdom. Explains him about the 14 errors the king should never do to rule successfully and keep his citizens happy. Ramarajya's 14 errors : Atheist mind, lies, anger, carelessness, procrastination without activity, Non-association with educated, sensible gentlemen, laziness, subjugation to the five senses and submerging in sensual dullness. The king himself making decisions without consulting the ministers. Starting work with inexperienced workers. King revealing the discussions that he had with his ministers. Not doing auspicious good deeds. Starting a war against all enemies at once.