Indian palm reading is famous in India. This chapter is about the missing education line in the palm of Panini and the with his hard work he writes Sanskrith grammar book .

A boy named Panini goes to Gurukul called Taxila or Takshashila with his mother Dakshi. Takshashile was famous for education in the earlier days of India. Panini’s mother Dakshi requests the Teacher, Upaparva to give education to her son. Upaparva, looking at Panini’s palm says to the mother that he does not have an education line in his palm, and thus cannot teach him. Panini draws an education line in his palm with a sharp pebble stone. The teacher’s heart melts and provides education to Panini. Panini wrote Sanskrit grammar in the 6th Century. The Sanskrit grammar book written by Panini is famous.

Moral: Anything can be achieved with Hard work and dedication.

ಭಾರತೀಯ ಅಂಗೈಶಾಸ್ತ್ರ ಪ್ರಸಿದ್ಧವಾಗಿದೆ. ಈ ಅಧ್ಯಾಯವು ಪಾಣಿನಿಯ ಅಂಗೈಯಲ್ಲಿ ಇಲ್ಲದ ವಿದ್ಯಾರೇಖೆಯ ಬಗ್ಗೆ ಮತ್ತು ಅವರ ಕಠಿಣ ಪರಿಶ್ರಮದಿಂದ ಅವರು ಸಂಸ್ಕೃತ ವ್ಯಾಕರಣ ಪುಸ್ತಕವನ್ನು ಬರೆದಿರುವ ಬಗ್ಗೆಯಾಗಿದೆ.

ಪಾಣಿನಿ ಎಂಬ ಹುಡುಗ ತನ್ನ ತಾಯಿ ದಾಕ್ಷಿಯೊಂದಿಗೆ ತಕ್ಷಶಿಲಾ ಅಥವಾ ತಕ್ಷಶಿಲೆ ಎಂಬ ಗುರುಕುಲಕ್ಕೆ ಹೋಗುತ್ತಾನೆ. ತಕ್ಷಶಿಲೆಯು ಭಾರತದ ಹಿಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಪ್ರಸಿದ್ಧವಾಗಿತ್ತು. ಪಾಣಿನಿಯ ತಾಯಿ ದಕ್ಷಿ ಉಪಪರ್ವ ಶಿಕ್ಷಕನಲ್ಲಿ ತನ್ನ ಮಗನಿಗೆ ಶಿಕ್ಷಣ ನೀಡುವಂತೆ ವಿನಂತಿಸುತ್ತಾಳೆ. ಉಪಪರ್ವ, ಪಾಣಿನಿಯ ಅಂಗೈಯನ್ನು ನೋಡುತ್ತಾ ತಾಯಿಗೆ, ಅವನ ಅಂಗೈಯಲ್ಲಿ ಶಿಕ್ಷಣದ ರೇಖೆಯಿಲ್ಲ, ಆದ್ದರಿಂದ ಅವನಿಗೆ ಕಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಪಾಣಿನಿ ತನ್ನ ಅಂಗೈಯನ್ನು ಚೂಪಾದ ಬೆಣಚು ಕಲ್ಲಿನಿಂದ ವಿದ್ಯಾರೇಖೆಯನ್ನು ಎಳೆಯುತ್ತಾನೆ. ಗುರುವಿನ ಹೃದಯ ಕರಗಿ ಪಾಣಿನಿಗೆ ಶಿಕ್ಷಣವನ್ನು ನೀಡುತ್ತಾರೆ. ಪಾಣಿನಿ 6 ನೇ ಶತಮಾನದಲ್ಲಿ ಸಂಸ್ಕೃತ ವ್ಯಾಕರಣವನ್ನು ಬರೆದರು. ಪಾಣಿನಿ ಬರೆದ ಸಂಸ್ಕೃತ ವ್ಯಾಕರಣ ಗ್ರಂಥ ಪ್ರಸಿದ್ಧವಾಗಿದೆ.

ನೀತಿ: ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಏನನ್ನಾದರೂ ಸಾಧಿಸಬಹುದು.

ಅಭ್ಯಾಸ

ಅ) ಪದಗಳ ಅರ್ಥ ಬರೆಯಿರಿ

ಅಭಿರುಚಿ = ಆಸಕ್ತಿ, ಒಲವು                     ಕಲಕು = ಕದಡು
ಗಡುಸು = ಬಿರುಸು                             ಘನತೆ = ಹಿರಿಮೆ
ಛಲ = ಹಟ                                    ಪರಿಪರಿ = ವಿವಿಧ ರೀತಿ
ಪೂರೈಸು = ಪೂರ್ಣಮಾಡು                    ಪ್ರಾಚೀನ = ಹಿಂದಿನ             
ಬೆಣಚುಕಲ್ಲು = ಹೊಳಪುಳ್ಳ ಚೂಪಾದಕಲ್ಲು   ಬೇಡು = ವಿನಂತಿಸು
ವಿದ್ಯಾದಾನ = ಶಿಕ್ಷಣ ನೀಡು                    ವಿನೀತ = ಸೌಜನ್ಯ, ವಿಧೇಯ    

ಆ) ಒಂದು ವಾಕ್ಯದಲ್ಲಿ ಉತ್ತರಿಸಿ.

೧) ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ಯಾವುದು?
ಉ: ಪ್ರಾಚೀನ ಭಾರತದ ಅತಿದೊಡ್ಡ ಗುರುಕುಲ ತಕ್ಷಶಿಲೆ.
೨) ಮಕ್ಕಳು ತಕ್ಷಶಿಲೆಯಲ್ಲಿ ಓದಬೇಕೆಂದು ತಂದೆತಾಯಿಗಳು ಏಕೆ ಆಸೆಪಡುತ್ತಾರೆ?
ಉ: ಮಕ್ಕಳು ತಕ್ಷಶಿಲೆಯಲ್ಲಿ ಓದಿ ವಿದ್ಯಾವಂತರಾಗಬೇಕೆಂದು ತಂದೆತಾಯಿಗಳು
     ಆಸೆಪಡುತ್ತಾರೆ.
೩) ತಾಯಿ ದಕ್ಷಿ ಗುರುಗಳಲ್ಲಿ ಏನೆಂದು ಬೇಡಿಕೊಂಡಳು?
ಉ: ತಾಯಿ ದಕ್ಷಿ ಗುರುಗಳಲ್ಲಿ ವಿದ್ಯಾದಾನ ಮಾಡುವಂತೆ ಬೇಡಿಕೊಂಡಳು.
೪) ಗುರುಗಳು ಬಾಲಕನ ಕೈನೋಡಿ ಎನೆಂದು ಹೇಳಿದರು?
ಉ: ಗುರುಗಳು ಬಾಲಕನ ಕೈನೋಡಿ “ಇವನ ಕೈಯಲ್ಲಿ ವಿದ್ಯಾರೇಖೆ ಇಲ್ಲ, ಇವನಿಗೆ
     ವಿದ್ಯೆ ಹತ್ತುವದಿಲ್ಲ” ಎಂದು ಹೇಳಿದರು.
೫) ಬಾಲಕ ಕೈಯಲ್ಲಿ ವಿದ್ಯಾರೇಖೆಯನ್ನು ಯಾವುದರಿಂದ  ಮೂಡಿಸಿಕೊಂಡನು?
ಉ: ಬಾಲಕ ಕೈಯಲ್ಲಿ ವಿದ್ಯಾರೇಖೆಯನ್ನು ಚೂಪಾದ ಬೆಣಚು ಕಲ್ಲಿನಿಂದ ಮೂಡಿಸಿಕೊಂಡನು.
೬) ಪಾಣಿನಿ ಯಾವ ಭಾಷೆಯಲ್ಲಿ ವ್ಯಾಕರಣ ರಚಿಸಿದ್ದಾನೆ?
ಉ: ಪಾಣಿನಿ ಸಂಸ್ಕ್ರತ ಭಾಷೆಯಲ್ಲಿ ವ್ಯಾಕರಣ ರಚಿಸಿದ್ದಾನೆ.
೭) ಪಾಣಿನಿಯ ಗುರುವಿನ ಹೆಸರೇನು?
ಉ: ಪಾಣಿನಿಯ ಗುರುವಿನ ಹೆಸರು ಉಪಪರ್ವ.

ಇ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧) ಗುರುಗಳು ಪಾಣಿನಿಗೆ ವಿದ್ಯೆ ಕಲಿಸಲು ಏಕೆ ನಿರಾಕರಿಸಿದರು?
ಉ: ಪಾಣಿನಿಯ ಕೈಯಲ್ಲಿ ವಿದ್ಯಾರೇಖೆ ಇರಲಿಲ್ಲ. ಅದಕ್ಕೆ ಗುರುಗಳು ಪಾಣಿನಿಗೆ ವಿದ್ಯೆ
     ಕಲಿಸಲು ನಿರಾಕರಿಸಿದರು.
೨) ಬಾಲಕ ತನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಹೇಗೆ ಮೂಡಿಸಿಕೊಂಡನು?
ಉ:ಬಾಲಕ ಬೆಣಚು ಕಲ್ಲಿನಿಂದ ಕೈಯನ್ನು ಕೊರೆದುಕೊಂಡನು. ರಕ್ತ ಸುರಿಯಿತು.
    ಹೀಗೆ ಬಾಲಕ ತನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಮೂಡಿಸಿಕೊಂಡನು.
೩) ಗುರುಗಳು ಪಾಣಿನಿಗೆ ವಿದ್ಯೆ ಕಲಿಸಲು ಏಕೆ ಮನಸ್ಸು ಮಾಡಿದರು?
ಉ:ರಕ್ತ ಸುರಿಯುತ್ತಿರುವ ಬಾಲಕನ ಕೈ ನೋಡಿ ಗುರುಗಳ ಮನಸ್ಸು ಕರಗಿತು.
    ಅವನ ವಿದ್ಯೆ ಕಲಿಯುವ ಛಲ ನೋಡಿ ಗುರುಗಳು ಪಾಣಿನಿಗೆ ವಿದ್ಯೆ ಕಲಿಸಲು
    ಮನಸ್ಸು ಮಾಡಿದರು.
೪) ಪಾಣಿನಿ ಜಗತ್‌ ಪ್ರಸಿದ್ದನಾದುದು ಹೇಗೆ?
ಉ:ಪಾಣಿನಿ ಹೊಸ ವಿಚಾರಗಳನ್ನು ಹೇಳಿದ. ಸಂಸ್ಕ್ರತ ಭಾಷೆಗೆ ವ್ಯಾಕರಣ
    ರಚಿಸಿದನು. ಹೀಗೆ ಪಾಣಿನಿ ಜಗತ್‌ ಪ್ರಸಿದ್ದನಾದನು.

ಈ) ಯಾರು ಯಾರಿಗೆ ಹೇಳಿದರು?

೧) “ಅವನ ಕೈಯಲ್ಲಿ ವಿದ್ಯಾರೇಖೆಯಿಲ್ಲ, ಅವನಿಗೆ ವಿದ್ಯೆ ಹತ್ತುವದಿಲ್ಲ”
    ಈ ಮಾತನ್ನು ಗುರುಗಳು ತಾಯಿ ದಕ್ಷಿಗೆ ಹೇಳಿದರು.
೨) “ಇಗೋ ನೋಡು ಇದು ವಿದ್ಯಾರೇಖೆ”
    ಈ ಮಾತನ್ನು ಗುರುಗಳು ಪಾಣಿನಿಗೆ ಹೇಳಿದರು.
೩) “ಗುರುಗಳೇ ನನ್ನ ಕೈಯಲ್ಲಿ ವಿದ್ಯಾರೇಖೆ ಮೂಡಿದೆ ನೋಡಿ”
    ಈ ಮಾತನ್ನು ಪಾಣಿನಿ ಗುರುಗಳಿಗೆ ಹೇಳಿದನು.

ಉ) ಬಿಟ್ಟ ಸ್ಥಳ ತುಂಬಿರಿ.

೧) ಬಾಲಕನು ಬೆಣಚು ಕಲ್ಲಿನಿಂದ ತನ್ನ ಕೈ ಮೇಲೆ ವಿದ್ಯಾರೇಖೆ ಕೊರೆದುಕೊಂಡನು.
೨) ಪಾಣಿನಿಯ ತಾಯಿಯ ಹೆಸರು ದಕ್ಷಿ.
೩)ಪಾಣಿನಿಯು ಕ್ರಿ ಪೂ ೬ನೇಯ ಶತಮಾನದಲ್ಲಿ ಬದುಕಿದ್ದನು.
೪) ಪ್ರಾಚೀನ ಭಾರತದ ಅತಿ ದೊಡ್ಡ ಗುರುಕುಲ ತಕ್ಷಶಿಲೆ ಆಗಿತ್ತು.

ಊ)   ಸ್ವಂತ ವಾಕ್ಯದಲ್ಲಿ ಬಳಸಿ

ಪ್ರಾಚೀನ: ಹಂಪೆ ಒಂದು ಪ್ರಾಚೀನ ನಗರ.
ಅಭಿರುಚಿ: ನನಗೆ ನ್ರತ್ಯದಲ್ಲಿ ಅಭಿರುಚಿ ಇದೆ.
ಪೂರೈಸು: ಕಾವೇರಿ ನದಿ ಮೈಸೂರಿಗೆ ನೀರನ್ನು ಪೂರೈಸುತ್ತದೆ.
ವಿನೀತ : ನಾವು ನಮ್ಮ ತಂದೆ ತಾಯಿಯರಿಗೆ ವಿನೀತರಾಗಿರಬೇಕು.
ಪರಿಪರಿ : ನಾವು ಕೊರೋನ ತೊಲಗಲಿ ಎಂದು ಪರಿಪರಿಯಾಗಿ ಬೇಡಿಕೊಂಡೆವು.

Click here to download Hastha reekhe badalisida balaka solved Worksheet