ಅ. ಪದಗಳ ಅರ್ಥ ಬರೆಯಿರಿ.
ಮೋಜು, ಗುಗ್ಗು , ಅಧೋಗತಿ ,ನಸುನಗು, ಅರಚು, ಗೊಣಗು.
ಆ. ಬಹುವಚನ ಬರೆಯಿರಿ.
ಕುರಿ, ತಂದೆ, ತೋಳ, ಇದು, ಅವನು, ಹುಡುಗ, ನನ್ನ, ಮನೆ,
ಇ. ಬಿಡಿಸಿ ಬರೆಯಿರಿ.
ಜನರನ್ನು = ನಿಜವಾದ =
ಇದೊಂದು = ಬಯಲಲ್ಲಿ =
ಈ. ಸ್ವಂತ ವಾಕ್ಯದಲ್ಲಿ ಬರೆಯಿರಿ.
ತಮಾಷೆ :
ಧಾವಿಸು:
ಗೊಣಗು:
ಉ. ಯಾರು ಯಾರಿಗೆ ಹೇಳಿದರು?
೧. ತೋಳ ಬಂತು ……. ತೋಳ ಬಂತು ಕಾಪಾಡಿ
೨. ನಮ್ಮನ್ನು ಗುಗ್ಗು ಮಾಡಲು ಅರಚುತ್ತಿದ್ದಾನೆ.
ಊ. ಒಂದು ವಾಕ್ಯದಲ್ಲಿ ಉತ್ತರಿಸಿರಿ..
೧. ಹುಡುಗನು ಕುರಿಗಳನ್ನು ಮೇಯಲು ಬಿಟ್ಟು ಏನು ಮಾಡುತ್ತಿದ್ದನು?
೨. ಹುಡುಗನು ಕುರಿಗಳನ್ನು ಮೇಯಿಸಲು ಎಲ್ಲಿಗೆ ಹೋಗುತ್ತಿದ್ದನು?.
೩. ನಿಜವಾದ ತೋಳ ಬಂದರೂ ಜನರು ಹುಡುಗನ ಸಹಾಯಕ್ಕೆ ಏಕೆ ಬರಲಿಲ್ಲ?
೪. ಜನರು ಕುರಿ ಕಾಯುವ ಹುಡುಗನ ಬಳಿ ಏಕೆ ಓಡಿ ಬಂದರು?
ಋ. ಎರಡು, ಮೂರು ವಾಕ್ಯದಲ್ಲಿ ಬರೆಯಿರಿ.
೧. ನಿಜವಾದ ತೋಳ ಬಂದರೂ ಜನರು ಹುಡುಗನ ಸಹಾಯಕ್ಕೆ ಏಕೆ ಬರಲಿಲ್ಲ?
೨. ʼತೋಳ ಬಂತು ತೋಳʼ ಕಥೆಯ ನೀತಿ ಏನು?.
೩. ಕುರಿ ಕಾಯುವ ಹುಡುಗ ತಮಾಷೆಗಾಗಿ ಜನರಿಗೆ ಕೇಳುವಂತೆ ಏನೆಂದು ಕೂಗಿಕೊಂಡನು?
ಎ. ಹೊಂದಿಸಿ ಬರೆಯಿರಿ.
ಅ ಬ
೧) ಹುಡುಗ ಸಹಾಯ
೨) ಜನ ತಮಾಷೆ
೩) ತೋಳ ಕೆಲಸ
೪) ಗದ್ದೆ ಕುರಿ
ಏ. ಗುಂಪಿಗೆ ಸೇರದ ಪದ ಬರೆಯಿರಿ.
೧. ತೋಳ, ಕುರಿ, ಜನ, ಹಸು
೨. ಅರಚು, ಜನ, ಗದ್ದೆ, ಕೆಲಸ
೩. ಆಟ, ಮೋಜು, ವಿನೋದ, ಅಳು
೪. ತೋಳ, ಕುರಿ, ಬಯಲು, ಹಸು
೫. ಆಟ, ಮೋಜು, ವಿನೋದ, ಹೊಟ್ಟೆ
೬. ಮನೆ, ಕಾಡು, ಪ್ರಾಣಿ, ಪಕ್ಷಿ
ಐ. ವಿರುದ್ಧ ಪದ ಬರೆಯಿರಿ.
ದೂರ X ಧೈರ್ಯ X ನಿಜ X
ಒಳಗೆ X ನಗು X ಸಹಾಯ X
ಒ. ಪದಗಳನ್ನು ಕೂಡಿಸಿ ಬರೆಯಿರಿ.
೧. ಇದು + ಒಂದು = ೨. ಆಟ + ಆಡು =
೩. ಒಳಗೆ + ಒಳಗೆ = ೪. ಕುರಿ + ಅನ್ನು =
ಓ. ಲಿಂಗ ಬದಲಿಸಿ ಬರೆಯಿರಿ.
೧. ಹುಡುಗ: ೩. ಮಹಿಳೆ:
೨. ಅವನು: ೪. ಲೇಖಕ:
ಔ. ಕೆಳಗಿನ ವಾಕ್ಯಗಳಲ್ಲಿ ಸರಿ ಅಥವಾ ತಪ್ಪು ಗುರುತಿಸಿ.
೧. ಹುಡುಗ ತೋಳಗಳನ್ನು ಮೇಯಿಸುತ್ತಿದ್ದನು. ………………….
೨. ಜನರು ಹುಡುಗನ ಅಳು ಕೇಳಿ ಓಡೋಡಿ ಬಂದರು. ……………….
೩. ತೋಳ ಜನರನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿತು. …………………