ಅ. ಪದಗಳ ಅರ್ಥ ಬರೆಯಿರಿ. (Write word meanings)
ಕಡಲು, ಚಿನ್ನ, ಧರೆ, ಧಾರೆ, ನಾದ, ನಾಡದೇವಿ, ಬಿಂಬ, ಲಾಲಿ, ಪೊರೆ, ನಮನ, ಊಡು, ಹರಸು, ಮೊರೆ, ಹೆತ್ತು, ಸಲಹು, ಒಡಲು.
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentences)
೧. ಕನ್ನಡ ನುಡಿಯ ಸೊಬಗು ಯಾವ ರೀತಿಯದು?
೨. ಕವಿಯಿತ್ರಿ ಕನ್ನಡ ನಾಡನ್ನು ಯಾರಿಗೆ ಹೋಲಿಸಿದ್ದಾರೆ?
೩. ನಮ್ಮನ್ನು ಹೊತ್ತು ಹೆತ್ತು ಸಲಹಿದವರನ್ನು ಏನೆಂದು ಕರೆಯುತ್ತಾರೆ?
೪. ಕವಿಯಿತ್ರಿ ಕನ್ನಡ ತೆರೆಗಳ ಮೊರೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?
೫. ಕನ್ನಡಮ್ಮ ಈ ನಾಡ ಮಣ್ಣಿನಲ್ಲಿ ಏನನ್ನು ಇರಿಸಿದ್ದಾಳೆ?
ಇ. ಕೆಳಗಿನ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two to three sentences)
೧. ಕನ್ನಡಮ್ಮನ ಲಾಲಿ ಹಾಡು ಯಾವ ರೀತಿಯಲ್ಲಿದೆ?
೨. ಕವಿಯಿತ್ರಿ ಕನ್ನಡಮ್ಮನನ್ನು ಏನೆಂದು ಪ್ರಾರ್ಥಿಸುತ್ತಾರೆ?.
೩. ನಮ್ಮ ತಾಯಿ ನಮ್ಮಮ್ಮ ಯಾವ ರೀತಿ ಸಾಕಿ ಸಲಹುತ್ತಾಳೆ?
೪. ಕನ್ನಡಮ್ಮ ತನ್ನ ಕಂದಮ್ಮಗಳನ್ನು ಹೇಗೆ ಸಲಹಿದ್ದಾಳೆ?
೫. ಕವಿಯಿತ್ರಿ ಕನ್ನಡ ನಾಡನ್ನು ಹೆತ್ತ ತಾಯಿಗೆ ಏಕೆ ಹೋಲಿಸಿದ್ದಾರೆ?.
೬.ನಮ್ಮ ಅಮ್ಮನ ಬಗ್ಗೆ ನಮಗೆ ಪ್ರೀತಿ ಏಕೆ?
೭. ಕನ್ನಡಮ್ಮ ನಮ್ಮನ್ನು ಯಾವ ರೀತಿ ಕಾಯುತ್ತಿದ್ದಾಳೆ?
ಈ) ಕೆಳಗಿನ ಪ್ರಶ್ನೆಗಳಿಗೆ ನಾಲ್ಕು, ಐದು ವಾಕ್ಯಗಳಲ್ಲಿ ಉತ್ತರಿಸಿರಿ. (Answer in four to five sentences)
೧. ಕನ್ನಡ ನಾಡು ನಮ್ಮ ಬದುಕಿಗೆ ಯಾವ ರೀತಿ ಆಸರೆಯಾಗಿದೆ?
೨. ಕನ್ನಡ ನಾಡಿನ ಬಗ್ಗೆ ನಮಗೆ ಪ್ರೀತಿ ಇರಬೇಕು. ಏಕೆ?
ಭಾಷಾಭ್ಯಾಸ
ಅ. ಪ್ರಾಸ ಪಾದಗಳನ್ನು ಬರೆಯಿರಿ. (Write Rhyming words)
ಆ. ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentences)
೧. ಕನ್ನಡಮ್ಮ: ……………………………………………………
೨. ಲಾಲಿಹಾಡು : …………………………………………………
೩. ಹರಸು : …………………………………………………………
೪. ನಾಡದೇವಿ : ……………………………………………………
೫. ಸಲಹು : …………………………………………………………
ಇ. ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ಚಿನ್ನವಿರಿಸಿ = …………………… + ………………….
೨. ಮುದ್ದಾಡಿದವಳು = ……………………. + ……………………
೩. ತುತ್ತನಿತ್ತು = ……………………… + ……………………
೪. ಒಡಲಿಗನ್ನವುಣಿಸಿದವಳು = ……………………….. + …………………..