Brave women have played pivotal roles throughout history, standing up against injustice, breaking barriers, and challenging societal norms. These women have exhibited exceptional courage, resilience, and determination in the face of adversity. They have contributed to social, political, and cultural advancements, leaving a lasting impact on their communities and the world at large.
Kalyanamma and Seethamma are brave-hearted women. Kalyanamma was a social worker, who involved herself in women’s and children’s development. Seethamma was a freedom fighter.
ಕೆಚ್ಚೆದೆಯ ಮಹಿಳೆಯರು ಇತಿಹಾಸದುದ್ದಕ್ಕೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನ್ಯಾಯದ ವಿರುದ್ಧ ನಿಲ್ಲುತ್ತಾರೆ, ಅಡೆತಡೆಗಳನ್ನು ಮುರಿಯುತ್ತಾರೆ ಮತ್ತು ಸಾಮಾಜಿಕ ನಿಯಮಗಳಿಗೆ ಸವಾಲು ಹಾಕುತ್ತಾರೆ. ಈ ಮಹಿಳೆಯರು ಪ್ರತಿಕೂಲ ಪರಿಸ್ಥಿತಿಯಲ್ಲಿ ಅಸಾಧಾರಣ ಧೈರ್ಯ, ಮತ್ತು ದೃಢತೆಯನ್ನು ಪ್ರದರ್ಶಿಸಿದ್ದಾರೆ. ಅವರು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಅವರ ಸಮುದಾಯಗಳು ಮತ್ತು ಪ್ರಪಂಚದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತಾರೆ.
ಕಲ್ಯಾಣಮ್ಮ ಮತ್ತು ಸೀತಮ್ಮ ಧೈರ್ಯಶಾಲಿ ಮಹಿಳೆಯರು. ಕಲ್ಯಾಣಮ್ಮ ಅವರು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸೀತಮ್ಮ ಸ್ವಾತಂತ್ರ್ಯ ಹೋರಾಟಗಾರ್ತಿ.
ಸಾಹಸಿ ಮಹಿಳೆಯರು
ಅ) ಪದಗಳ ಅರ್ಥ ಬರೆಯಿರಿ. Write the word meaning.
ಅನಾರೋಗ್ಯ = ರೋಗದಿಂದ ನರಳುವುದು ಆಶಯ = ಆಸೆ, ಇಂಗಿತ
ಏಳಿಗೆ = ಅಭಿವೃದ್ಧಿ, ಉನ್ನತಿ ಕಷ್ಟಕೋಟಲೆ = ಕಷ್ಟಗಳ ಸರಮಾಲೆ
ಘೋಷಣೆ = ಗಟ್ಟಿಯಾದ ಕೂಗು ದಂಗಾಗು = ಆಶ್ಚರ್ಯಪಡು
ದೀನತೆ = ಬಡತನ ನತ್ತು = ಮೂಗುತಿ
ನಿಷೇಧ = ನಿರಾಕರಣೆ ಪುಡಿಪುಡಿಯಾಗು= ಚುರುಚುರಾಗು
ಬಹಿಷ್ಕಾರ = ಹೊರಕ್ಕೆ ಹಾಕು ಭಾವಾವೇಶ = ಉದ್ರೇಕ
ವಿಚಾರಶಕ್ತಿ = ಆಲೋಚನಾ ಶಕ್ತಿ ವಿಲೀನ = ಐಕ್ಯವಾಗು,ಕಣ್ಮರೆಯಾಗು
ಸಬಲ = ಶಕ್ತಿವಂತ ಸಿಡಿದೇಳು=ರೊಚ್ಚಿಗೇಳು,
ಹಲಗೆ = ತಮಟೆ ಹುಟ್ಟುಹಾಕು = ಪ್ರಾರಂಭಿಸು
ಆ) ಒಂದು ವಾಕ್ಯದಲ್ಲಿ ಉತ್ತರಿಸಿ. Answer in one sentence.
೧. ಕಲ್ಯಾಣಮ್ಮನವರ ವಿಚಾರಶಕ್ತಿಗೆ ಹೇಗೆ ಹೊಳಪು ಬಂದಿತು?
ಉ: ಕಲ್ಯಾಣಮ್ಮ ಮನೆಯಲ್ಲಿಯೇ ಓದಿದ ಕಾರಣ ಅವರ ವಿಚಾರಶಕ್ತಿಗೆ ಹೊಳಪು ಬಂದಿತು.
೨. ಮಾಲಗತ್ತಿ ಗ್ರಾಮದ ಜನರು ಎಲ್ಲಿ ಧ್ವಜ ಏರಿಸಲು ನಿರ್ಧರಿಸಿದರು?
ಉ: ಮಾಲಗತ್ತಿ ಗ್ರಾಮದ ಜನರು ಊರದೇವತೆ ಕೆಂಚವ್ವನ ಗುಡಿಯ ಮೈದಾನದಲ್ಲಿ ಧ್ವಜ ಹಾರಿಸಲು ನಿರ್ಧರಿಸಿದರು.
೩. ಹೈದರಾಬಾದ್ ಪ್ರಾಂತದ ಜನರು ನಿಜಾಮನ ವಿರುದ್ಧ ಏಕೆ ಸಿಡಿದೆದ್ದರು?
ಉ: ಹೈದರಾಬಾದ್ ನಲ್ಲಿ ಭಾರತದ ಧ್ವಜವನ್ನು ಹಾರಿಸಲು ನಿಷೇಧಿಸಲಾದ ಕಾರಣ ಹೈದರಾಬಾದ್ ಜನರು ನಿಜಾಮನ ವಿರುದ್ಧ ಸಿಡಿದೆದ್ದರು.
೪. ಹೈದರಾಬಾದ್ ಪ್ರಾಂತ ಭಾರತದಲ್ಲಿ ಯಾವಾಗ ವಿಲೀನವಾಯಿತು?
ಉ: ಹೈದರಾಬಾದ್ ಪ್ರಾಂತ ಭಾರತದಲ್ಲಿ ಸೆಪ್ಟೆಂಬರ್ ೧೭, ೧೯೪೮ರಂದು ವಿಲೀನವಾಯಿತು.
೫. ಕಲ್ಯಾಣಮ್ಮ ಯಾರ ಏಳಿಗೆಗಾಗಿ ಚಿಂತಿಸಿದರು?
ಉ: ಕಲ್ಯಾಣಮ್ಮನವರು ಮಹಿಳೆ ಮತ್ತು ಮಕ್ಕಳ ಏಳಿಗೆಗಾಗಿ ಚಿಂತಿಸಿದರು.
೬. ಕಲ್ಯಾಣಮ್ಮನವರ ತಂದೆ ತಾಯಿಗಳು ಯಾರು?
ಉ: ಕಲ್ಯಾಣಮ್ಮನವರ ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ಜಾನಕಮ್ಮ.
೭. ಕಲ್ಯಾಣಮ್ಮನವರ ಸಂಸಾರದ ಕನಸು ಪುಡಿಪುಡಿಯಾಗಲು ಕಾರಣವೇನು?
ಉ: ಕಲ್ಯಾಣಮ್ಮನವರು ಮದುವೆಯಾಗಿ ಮೂರು ತಿಂಗಳೊಳಗೆ ಗಂಡನನ್ನು ಕಳೆದುಕೊಂಡರು. ಹೀಗೆ ಅವರ ಸಂಸಾರದ ಕನಸು ಪುಡಿಪುಡಿಯಾಗಲು ಕಾರಣ.
೮. ಕಲ್ಯಾಣಮ್ಮನವರು ಯಾವಾಗ ನಿಧನರಾದರು?
ಉ: ಕಲ್ಯಾಣಮ್ಮನವರು ೧೯೬೫ರಲ್ಲಿ ನಿಧನರಾದರು.
ಇ) ಎರಡು, ಮೂರು ವಾಕ್ಯದಲ್ಲಿ ಉತ್ತರಿಸಿ. Answer in two , three sentences.
೧. ಧ್ವಜ ಏರಿಸಲು ಬಂದ ಸೀತಮ್ಮನ ರೂಪ ವರ್ಣಿಸಿರಿ.
ಉ: ಧ್ವಜವೇರಿಸಲು ಬಂದ ಸೀತಮ್ಮನ ಎಡಗೈಯಲ್ಲಿ ಧ್ವಜ ಬಲಗೈಯಲ್ಲಿ ಕುಡುಗೋಲು ಇತ್ತು. ಅವಳು ಸಾಕ್ಷಾತ್ ಕಾಳಿಯಂತೆ ಕಾಣುತ್ತಿದ್ದಳು. ಗುಂಡು ಮುಖ, ಹಣೆಯಲ್ಲಿ ಕುಂಕುಮ,ಮೂಗಿನಲ್ಲಿ ನತ್ತು ಕಚ್ಚೆ ಹಾಕಿದ ಇಳಕಲ್ ಸೀರೆ ಅವಳಲ್ಲಿ ಭಾವಾವೇಶ ತುಂಬಿತ್ತು.
೨. ಕಲ್ಯಾಣಮ್ಮ ಮಕ್ಕಳಿಗಾಗಿ ಯಾವ ಯಾವ ಕೆಲಸಗಳನ್ನು ಮಾಡಿದರು?
ಉ: ಕಲ್ಯಾಣಮ್ಮ ಮಕ್ಕಳಿಗಾಗಿ “ಅಖಿಲ ಕರ್ನಾಟಕ ಮಕ್ಕಳ ಕೂಟ” ಕಟ್ಟಿದರು. ಸುತ್ತಮುತ್ತಲಿನ ಮಕ್ಕಳನ್ನು ಸೇರಿಸಿದರು. ಮಕ್ಕಳಿಗಾಗಿ ನಾಟಕ ರಚಿಸಿದರು. ಆಟ ಆಡಿಸಿದರು.
೩. ಕಲ್ಯಾಣಮ್ಮನವರ ಜೀವನದಲ್ಲಿ ಎರಗಿ ಬಂದ ಕಷ್ಟಗಳಾವುವು?
ಉ: ಮದುವೆಯಾಗಿ ಮೂರು ತಿಂಗಳೊಳಗೆ ಗಂಡನನ್ನು ಕಳೆದುಕೊಂಡರು. ಅದಕ್ಕೆ ಮನೆಯಿಂದಲೇ ಓದಿದರು. ಇವು ಕಲ್ಯಾಣಮ್ಮನವರ ಜೀವನದಲ್ಲಿ ಬಂದ ಕಷ್ಟಗಳು.
೪. ಮಾಲಗತ್ತಿಯಲ್ಲಿ ಧ್ವಜವೇರಿಸಲು ಹೇಗೆ ಸಿದ್ಧತೆ ನಡೆಯಿತು?
ಉ: ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಬಂದರು. ಊರ ದೇವತೆ ಕೆಂಚವನ ಗುಡಿಯ ಬಯಲಿನಲ್ಲಿ ಭಾರತದ ಧ್ವಜವೇರಿಸಲು ಸಿದ್ಧತೆ ಮಾಡಿದರು.
೫. ಕಲ್ಯಾಣಮ್ಮನವರ ಓದು ಹೇಗೆ ಮುಂದುವರಿಯಿತು?
ಉ: ಕಲ್ಯಾಣಮ್ಮನವರು ಓದುತ್ತಿರುವಾಗಲೇ ಮದುವೆಯಾಯಿತು. ಮದುವೆಯಾಗಿ ಮೂರು ತಿಂಗಳೊಳಗೆ ಗಂಡನನ್ನು ಕಳೆದುಕೊಂಡರು. ಅದಕ್ಕೆ ಮನೆಯಿಂದಲೇ ಓದಿ ಎಲ್. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರು.
೬. ಹೈದರಾಬಾದ್ ಜನ ನಿಜಾಮನ ವಿರುದ್ಧ ಸಿಡಿದೇಳಲು ಕಾರಣವೇನು?
ಉ: ಭಾರತಕ್ಕೆ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕಿತು. ಆದರೆ ಹೈದರಾಬಾದ್ ನಲ್ಲಿ ಭಾರತದ ಧ್ವಜವನ್ನು ಹಾರಿಸಲು ನಿಷೇಧಿಸಲಾಗಿತ್ತು. ಇದೇ ಹೈದರಾಬಾದ್ ಜನ ನಿಜಾಮನ ವಿರುದ್ಧ ಸಿಡಿದೇಳಲು ಕಾರಣ.
ಈ) ವಿರುದ್ಧಾರ್ಥಕ ಪದ ಬರೆಯಿರಿ. Write opposite words.
ಅನುಕೂಲ X ಅನಾನುಕೂಲ ಅಬಲ X ಸಬಲ ಆರೋಗ್ಯ X ಅನಾರೋಗ್ಯ
ನೀತಿ X ಅನೀತಿ ಉತ್ತೀರ್ಣ X ಅನುತ್ತೀರ್ಣ
ಉ) ಬಿಟ್ಟಸ್ಥಳ ತುಂಬಿರಿ. Fill in the blanks.
೧. ಭಾರತಕ್ಕೆ ಸ್ವಾತಂತ್ರ ದೊರೆತರೂ ಹೈದರಾಬಾದ್ ಭಾರತಕ್ಕೆ ವಿಲೀನವಾಗಲಿಲ್ಲ.
೨. ಕಲ್ಯಾಣಮ್ಮನವರು ಎಲ್. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರು.
೩. ಕಲ್ಯಾಣಮ್ಮನವರು ಹುಟ್ಟುಹಾಕಿದ ಪತ್ರಿಕೆಯ ಹೆಸರು ಸರಸ್ವತಿ ಪತ್ರಿಕೆ.
೪. ಬಡಿಗೇರ ಸೀತಮ್ಮನ ಊರು ಮಾಲಗತ್ತಿ.
ಊ) ಹೊಂದಿಸಿ ಬರೆಯಿರಿ. Match the following.
ಅ ಬ ಉ
೧) ಬಡಿಗೇರ ಸೀತಮ್ಮ ಅ) ಸರಸ್ವತಿ ಪತ್ರಿಕೆ ಈ)
೨) ಶ್ರಾವಂತವ್ವ ಆ) ರಾಮಸ್ವಾಮಿ ಅಯ್ಯಂಗಾರ್ ಇ)
೩) ಜಾನಕಮ್ಮ ಇ) ಬಸಪ್ಪ ಆ)
೪) ಕಲ್ಯಾಣಮ್ಮ ಈ) ಸ್ವಾತಂತ್ರ ಹೋರಾಟಗಾರ್ತಿ ಅ)
ಉ) ನಿಜಾಮ
ಋ) ಸ್ವಂತ ವಾಕ್ಯದಲ್ಲಿ ಬರೆಯಿರಿ. Make your own sentences.
ಕಷ್ಟಕೋಟಲೆ = ಜೀವನದಲ್ಲಿ ಕಷ್ಟಕೋಟಲೆಗಳು ಬರುವುದು ಸಹಜ.
ಸಿಡಿದೇಳು = ಬ್ರಿಟಿಷರನ್ನು ನೋಡಿದರೆ ಭಾರತೀಯರು ಸಿಡಿದೇಳುತ್ತಿದ್ದರು.
ದಂಗಾಗು = ನನ್ನ ಗೆಳೆಯನ ಆಟವನ್ನು ನೋಡಿ ನಾನು ದಂಗಾಗುವೆನು.
ಹುಟ್ಟುಹಾಕು = ಕೆಲವರು ಸುಳ್ಳು ಸುದ್ದಿಯನ್ನು ಹುಟ್ಟುಹಾಕುತ್ತಾರೆ.
ಭಾವಾವೇಶ = ಜನಗಣಮನವನ್ನು ಹಾಡುವಾಗ ನಾವು ಭಾವಾವೇಶಕ್ಕೊಳಗಾಗುತ್ತೇವೆ.
ಅಬಲೆ = ಮಹಿಳೆಯರು ಅಬಲೆಯರಲ್ಲ.