ಈ ಮಣ್ಣು ನಮ್ಮದು
ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಘನ
ತೀರುಸುವಿನೆ ಅದರ ಋಣ
ಈ ಒಂದೇ ಜನ್ಮದಿ?
ಕೆಂಪು ನೆಲದ ಹಸಿರು ಬೆಳೆ
ಕಪ್ಪು ಬಣ್ಣ ಮೊಗದ ಕಳೆ
ಸೂರ್ಯ ಚಂದ್ರ ಚುಕ್ಕಿಗಳೆ
ನಮ್ಮ ಹಿರಿಯ ಒಕ್ಕಲು
ನೂರು ಭಾವ ಭಾಷೆ ನೆಲೆ
ನೂರು ಬಣ್ಣವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು
ಪ್ರಾಚೀನವ ತಿಕ್ಕಿ ತೊಳೆ
ವರ್ತಮಾನ ಜೀವಕಳೆ
ಉಕ್ಕೇರಲಿ ಬಾಳ ಹೊಳೆ
ಆ ಭವಿಷ್ಯದೊಡಲಿಗೆ
ಮೈ ಕೊಡವಿದೆ ಮೂಕ ಜನ
ಕೈಹಿಡಿಯಿರಿ ನಾಕು ಚಣ
ಎದ್ದೇಳಲಿ ಎಲ್ಲ ಗುಣ
ಆ ಸಮೃದ್ಧ ಬಾಳಿಗೆ
In my homeland, amidst my people, I find honor and purpose—my life is a debt repaid for this singular existence. The earth beneath us, a canvas of red hues, nurtures the vibrant green of our crops. A symphony of black shadows dances under the sun and moon, encapsulating the essence of our existence.
Dotting the landscape are our elders, the repositories of a hundred sentiments, and the language that weaves together a tapestry of a hundred colors. In this mosaic, the art of communion thrives, a celebration of our diversity. Our songs echo the wisdom of the ancients, a testament to the rich tapestry of our heritage.
To live is to give one’s heart to the future, an inheritance passed from the elders to generations to come. In unity, hand in hand, let us silence the cacophony and let the moment unfold. In this shared journey, we embrace all the qualities essential for a prosperous life.
೧. ವಿರುದ್ಧ ಪದ ಬರೆಯಿರಿ. (Write Opposite words)
ಸಮಾನ X ಅಸಮಾನ ಅಭಿಮಾನ X ನಿರಭಿಮಾನ
ನಮ್ಮ X ನಿಮ್ಮ ಧರ್ಮ X ಅಧರ್ಮ
ಸ್ವದೇಶ X ವಿದೇಶ
೨. ಪದಗಳ ಅರ್ಥ ಬರೆಯಿರಿ. (Write the word meaning)
ಕಾಯ್ವ = ಕಾಯುವ, ದೈವ = ದೇವರು, ಸನ್ನಿದಾನ = ಆಶ್ರಯ, ಆಗರ = ನೆಲೆ,
ಪೈರು = ಬೆಳೆ , ತಂಗಾಳಿ = ತಂಪಾದ ಗಾಳಿ, ನಿರ್ಮಾಣ = ಕಟ್ಟು
೩. ಬಹುವಚನ ಬರೆಯಿರಿ. (Write plurals)
೧. ಯಂತ್ರ – ಯಂತ್ರಗಳು
೨. ತಂದೆ – ತಂದೆಯಂದಿರು
೩. ದೇಶ – ದೇಶಗಳು
೪. ಭಾರತೀಯ – ಭಾರತೀಯರು
೫. ಸೋದರ – ಸೋದರರು
೬. ಪೈರು – ಪೈರುಗಳು
೪. ಪದಗಳನ್ನು ಬಿಡಿಸಿ ಬರೆಯಿರಿ. (Split the words)
ಶಿಲೆಗಳಿವು – ಶಿಲೆಗಳು + ಇವು
ತಲೆದೂಗುವ – ತಲೆ + ತೂಗುವ
ಜನರೆಲ್ಲರೂ – ಜನರು + ಎಲ್ಲರೂ
೫. ಲಿಂಗ ಬದಲಿಸಿರಿ (Change the gender)
ತಾಯಿ – ತಂದೆ ಸೋದರ – ಸೋದರಿ ಕವಿ – ಕವಯತ್ರಿ ಅಕ್ಕ – ಅಣ್ಣ
೬. ಹೊಂದಿಸಿ ಬರೆಯಿರಿ (Match the following)
ಅ ಬ ಉತ್ತರ
೧. ಈ ನಾಡಿನ ಹೃದಯ ತಂದೆ ಸಮಾನ ದೈವ ಸನ್ನಿದಾನ
೨) ಬೇಲೂರು – ಹಳೆಬೀಡು ತಾಯಿ ಸಮಾನ ಕಲೆಯ ಆಗರ
೩) ಈ ದೇಶದ ಜನರೆಲ್ಲರೂ ಕಲೆಯ ಆಗರ ಸೋದರ ಸಮಾನ
೪) ಹಿಮಾಲಯ ದೈವ ಸನ್ನಿದಾನ ತಂದೆ ಸಮಾನ
೫) ಗಂಗೆ, ತುಂಗೆ ಸೋದರ ಸಮಾನ ತಾಯಿ ಸಮಾನ
೭) ಸ್ವಂತ ವಾಕ್ಯದಲ್ಲಿ ಬರೆಯಿರಿ (Make your own sentences)
ಆಗರ: ಕರ್ನಾಟಕ ಕಲೆಯ ಆಗರ.
ನಿರ್ಮಾಣ: ನಮ್ಮ ಮನೆ ನಿರ್ಮಾಣ ಆಯಿತು.
ಭಾರತ: ನಮ್ಮ ದೇಶ ಭಾರತ.
ಸೋದರ: ನನ್ನ ಸೋದರನ ಹೆಸರು ಕಿರಣ.
೮) ಬಿಟ್ಟಸ್ಥಳ ತುಂಬಿರಿ. Fill in the blanks
೧) ಇದು ಈ ನಾಡಿನ ಹ್ರದಯವಾಗಿದೆ ದೈವ ಸನ್ನಿಧಾನ.
೨) ತಂಗಾಳಿಗೆ ತಲೆದೂಗುವ ಪೈರಿನ ಹಾಡು.
೩) ನೀರು ಹರಿಯುವ ಧ್ವನಿಯು ಕಲಕಲನೆ.
೯. ಪದ್ಯ ಪೂರ್ಣಗೊಳಿಸಿ . Complete the poem.
ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
ಈ ದೇಶದ ಜನರೆಲ್ಲರೂ ಸೋದರ ಸಮಾನ
ಈ ನಾಡಿನ ಹೃದಯವದು ದೈವ ಸನ್ನಿಧಾನ
ಅಜಂತ ಎಲ್ಲೋರ ಹಳೇಬೀಡು ಬೇಲೂರು
ಶಿಲೆಗಳಿವು ಕಲೆಯ ಆಗರ
ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ
ಧರ್ಮಗಳ ಮಹಾಸಾಗರ
೧೦. ಒಂದು ವಾಕ್ಯದಲ್ಲಿ ಉತ್ತರಿಸಿರಿ. ( Answer in one sentence)
೧. ನೀರು ಹರಿಯುವಾಗ ಉಂಟಾಗುವ ಧ್ವನಿ ಹೇಗಿರುತ್ತದೆ?
ಉ: ನೀರು ಹರಿಯುವಾಗ ಕಲಕಲನೆ ಧ್ವನಿ ಉಂಟಾಗುತ್ತದೆ.
೨. ಈ ನಾಡಿನ ಹೃದಯವು ಯಾರ ಸನ್ನಿಧಾನವಾಗಿದೆ?
ಉ: ಈ ನಾಡಿನ ಹೃದಯವು ದೈವ ಸನ್ನಿಧಾನವಾಗಿದೆ.
೩. ವಿಜ್ಞಾನ ಯಾವುದನ್ನು ಗೆಲ್ಲುವ ಸಾಧನವಾಗಿದೆ?
ಉ: ವಿಜ್ಞಾನ ಅಜ್ಞಾನ ಗೆಲ್ಲುವ ಸಾಧನವಾಗಿದೆ.
೪. ತಂಗಾಳಿಗೆ ಯಾವುದು ತಲೆದೂಗುತ್ತದೆ?
ಉ: ತಂಗಾಳಿಗೆ ಪೈರು ತಲೆದೂಗುತ್ತದೆ.
೧೧. ಎರಡು, ಮೂರು ವಾಕ್ಯದಲ್ಲಿ ಉತ್ತರಿಸಿ. (Answer in two – three sentences)
೧. ಯಾವ ಯಾವ ಧರ್ಮಗಳು ಭಾರತದಲ್ಲಿವೆ?
ಉ: ಹಿಂದೂ, ಬೌದ್ಧ, ಕ್ರೈಸ್ತ, ಜೈನ, ಮುಸಲ್ಮಾನ ಧರ್ಮಗಳು ಭಾರತದಲ್ಲಿವೆ.
೨. ಯಾವ ಯಾವ ಸ್ಥಳಗಳು ಕಲೆಯ ಆಗರವಾಗಿವೆ?
ಉ:ಅಜಂತಾ, ಎಲ್ಲೋರ, ಹಳೇಬೀಡು, ಬೇಲೂರು ಕಲೆಯ ಆಗರವಾಗಿವೆ.