Udayaraaga poem is written by Panje Mangeshraayaru. In this poem, the poet has explained the beauty of sunrise. The Sun has described the fight with the darkness as the light defeats the darkness, the beauty of the sun rays when it rises wearing a golden crown, the knowledge washes away the darkness of man’s mind as the sun dispels the darkness.
ಉದಯರಾಗ ಕವಿತೆಯನ್ನು ಪಂಜೆ ಮಂಗೇಶರಾಯರು ಬರೆದಿದ್ದಾರೆ. ಈ ಕವಿತೆಯಲ್ಲಿ ಕವಿಯು ಸೂರ್ಯೋದಯದ ಸೊಬಗನ್ನು ವಿವರಿಸಿದ್ದಾರೆ.
ಬೆಳಕು ಕತ್ತಲನ್ನು ಹೊಡೆದೋಡಿಸುವ ಸಂದರ್ಭವನ್ನು ರವಿ ಕತ್ತಲೊಡನೆ ಜಗಳಾಡುವನು ಎಂದು ವರ್ಣಿಸಿದ್ದಾರೆ. ಸೂರ್ಯ ಬಂಗಾರದ ಬಣ್ಣದ ಕಿರೀಟ ಧರಿಸಿ ಉದಯಿಸಿದಾಗ ಅವನ ಕಿರಣಗಳ ಸುಂದರತೆಯನ್ನು ಬಣ್ಣಿಸಿದ್ದಾರೆ. ರವಿ ಕತ್ತಲನ್ನು ಕಳೆದಂತೆ ಜ್ಞಾನ ಮಾನವನ ಮನದ ಕತ್ತಲನ್ನು ತೊಳೆಯುತ್ತದೆ. ಉನ್ನತ ಸ್ಥಾನಕ್ಕೇರಿದ ವ್ಯಕ್ತಿ ಅಹಂಕಾರವನ್ನು ಹೊಂದಿರಬಾರದು ಎನ್ನುವ ಸಂದೇಶವನ್ನು ನೀಡಿದ್ದಾರೆ.
ಉದಯರಾಗ
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಅಂಗ = ದೇಹದ ಭಾಗ ಎಳೆಯವ = ಚಿಕ್ಕವ, ಸಣ್ಣವ
ಕಂಗು = ಅಡಿಕೆ ಕಿರೀಟ = ಮುಕುಟ
ಕೂಡಲ ಕೋಣೆ = ಪಡಸಾಲೆ, ಮೊಗಸಾಲೆ ಕೊಳೆ = ಹೊಲಸು, ಕಸ
ಚಿನ್ನದ = ಬಂಗಾರದ ನೆತ್ತರು = ರಕ್ತ
ಬಾನು = ಆಕಾಶ ಮಾಡಿನ = ಚಾವಣಿಯ ಉಪ್ಪರಿಗೆಯ
ಮೂಡಣ = ಪೂರ್ವ ದಿಕ್ಕು ಮೆತ್ತು = ಹಚ್ಚು, ಬಳಿ
ರಂಗಸ್ಥಳ = ನಾಟಕ ಪ್ರದರ್ಶನ ಸ್ಥಳ ರಂಗು = ಬಣ್ಣ
ಶ್ರಂಗಾರ = ನವರಸಗಳಲ್ಲಿ ಒಂದು ಸಾರು = ಹೇಳು
ಆ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ರವಿ ಮೂಡುವಾಗ ಯಾರೊಡನೆ ಜಗಳಾಡುವನು?
ಉ: ರವಿ ಮೂಡುವಾಗ ಕತ್ತಲೊಡನೆ ಜಗಳಾಡುವನು.
೨. ರವಿ ಎಲ್ಲಿ ಕುಣಿದಾಡುವನು?
ಉ: ರವಿ ಮೂಡಣ ರಂಗಸ್ಥಳದಲ್ಲಿ ಕುಣಿದಾಡುವನು.
೩. ರವಿ ಏನನ್ನು ತೊಟ್ಟು ಶ್ರಂಗಾರದ ತಲೆ ಎತ್ತುವನು?
ಉ: ರವಿ ಬಂಗಾರದ ಚೆಲು ಬಿಸಿಲ ಕಿರೀಟವ ತೊಟ್ಟು ಶ್ರಂಗಾರದ ತಲೆ ಎತ್ತುವನು.
೪. ರವಿ ಯಾವು ಯಾವುದಕ್ಕೆ ರಂಗನ್ನು ಮೆತ್ತುವನು?
ಉ: ರವಿ ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕ್ಕೆ ರಂಗನ್ನು ಮೆತ್ತುವನು.
೫. ಚಿನ್ನದ ಗೆರೆ ಎಳೆಯುವ ರವಿ ಹೇಗಿರುತ್ತಾನೆ?
ಉ: ಚಿನ್ನದ ಗೆರೆ ಎಳೆಯುವ ರವಿ ಎಳೆಯವನಾಗಿರುತ್ತಾನೆ.
೬. ರವಿ ಬಾನೊಳು ಸಣ್ಣಗೆ ಕಾಣುವುದು ಯಾವಾಗ?
ಉ: ರವಿ ಬಾನೊಳು ಸಣ್ಣಗೆ ಕಾಣುವುದು ಮೇಲಕ್ಕೇರಿದಾಗ.
ಇ. ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer in two – three sentences)
೧. ಮೂಡಣ ದಿಕ್ಕಿನಲ್ಲಿ ರವಿ ಉದಯಿಸುವದನ್ನು ಕವಿ ಹೇಗೆ ವರ್ಣಿಸಿದರು?
ಉ: ರವಿಯು ಮೂಡುವಾಗ ಕತ್ತಲೊಡನೆ ಜಗಳವಾಡುತ್ತಾನೆ. ಅವನು ಪೂರ್ವ ದಿಕ್ಕಿನ ರಂಗಸ್ಥಳದಲ್ಲಿ ನೆತ್ತರು ಹೊಂದಿದವನಂತೆ ಕುಣಿದಾಡಿ ಮೂಡುತ್ತಾನೆ.
೨. ಸೂರ್ಯನ ಕಿರಣಗಳ ರಂಗನ್ನು ಕವಿ ಹೇಗೆ ವರ್ಣಿಸಿದರು?
ಉ: ಸೂರ್ಯನ ಕಿರಣಗಳು ತೆಂಗಿನ, ಕಂಗಿನ, ತಾಳೆಯ, ಬಾಳೆಯ ಅಂಗಕ್ಕೆ ರಂಗನ್ನು ಮೆತ್ತುವದು. ಮಾಡಿನ ಹುಲ್ಲಿಗೆ ಚಿನ್ನದ ಗೆರೆ ಎಳೆದ ಹಾಗೆ ಕಾಣಿಸುವುದು. ಕೂಡಲ ಕೋಣೆಯ ಕತ್ತಲೆಯನ್ನು ತೊಳೆಯುವದು.
೩. ಎಳೆಯ ರವಿ ಕೂಡಲ ಕೋಣೆಯಲ್ಲಿ ಮಾಡುವ ಕೆಲಸವೇನು?
ಉ: ಎಳೆಯ ರವಿ ಕೂಡಲ ಕೋಣೆಯಲ್ಲಿ ಕತ್ತಲ ಕೊಳೆಯನ್ನು ತೊಳೆಯುವನು.
೪. ಮೇಲಕ್ಕೇರಿದ ರವಿ ನೀಡುವ ಸಂದೇಶವೇನು?
ಉ: ಮೇಲಕ್ಕೆರಿದವನು ಚಿಕ್ಕವನಿರಬೇಕು ಎಂಬ ಮಾತನ್ನು ರವಿಯು ಹೇಳುತ್ತಾನೆ. ಅಂದರೆ ಉನ್ನತ ಸ್ಥಾನಕ್ಕೆ ಹೋದ ವ್ಯಕ್ತಿ ಅಹಂಕಾರವಿಲ್ಲದೆ ಚಿಕ್ಕವನ ಹಾಗೆ ಇರಬೇಕು ಎಂಬುದು ರವಿಯ ಸಂದೇಶ.
ಈ . ಸ್ವಂತ ವಾಕ್ಯ ಬರೆಯಿರಿ. (Make your own sentences)
ಮೂಡಣ = ಮೂಡಣದಲ್ಲಿ ಸೂರ್ಯನು ಉದಯಿಸುವನು.
ಕುಣಿದಾಡು = ಗಾಳಿಪಟ ಹಾರುವುದನ್ನು ನೋಡಿ ರವಿಯು ಕುಣಿದಾಡಿದನು.
ಮೆತ್ತು = ನಾನು ಗೋಡೆಗೆ ಹಸಿರು ಬಣ್ಣವನ್ನು ಮೆತ್ತಿದೆನು
ಏರು = ನನ್ನ ಪ್ರಗತಿ ಏರುತ್ತಿರಬೇಕು.
ಸಾರು = ಗಾಂಧೀಜಿಯವರು ಸತ್ಯ, ಅಹಿಂಸೆಯನ್ನು ಸಾರಿದರು.
ಉ. ಹೊಂದಿಸಿ ಬರೆಯಿರಿ. (Match the following)
ಅ ಬ
ಅ) ಕತ್ತಲೊಡನೆ ೧)ಸಣ್ಣಗೆ ತೋರುವನು ಜಗಳಾಡುವನು
ಆ) ಶೃಂಗಾರದ ೨)ಎಳೆಯುವನು ತಲೆ ಎತ್ತುವನು
ಇ) ಅಂಗಕೆ ೩)ಜಗಳಾಡುವನು ರಂಗನು ಮೆತ್ತುವನು
ಈ) ಚಿನ್ನದ ಗೆರೆಯನ್ನು ೪) ರಂಗನು ಮೆತ್ತುವನು ಎಳೆಯುವನು
ಉ) ಬಾನೊಳು ೫) ತಲೆ ಎತ್ತುವನು ಸಣ್ಣಗೆ ತೋರುವನು
ಊ. ಬಿಟ್ಟ ಸ್ಥಳ ತುಂಬಿರಿ (Fill in the blanks)
೧. ರವಿ ಕತ್ತಲೊಡನೆ ಜಗಳಾಡುವನು.
೨. ರವಿ ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು.
೩. ‘ತೆಂಗಿನ ಕಂಗಿನ’ ಈ ಪದಗಳ ಅರ್ಥ ತೆಂಗು-ಅಡಿಕೆ.
೪. ರವಿ, ಏರಿದವನು ಚಿಕ್ಕವ ಇರಬೇಕು ಎಂಬ ಮಾತನ್ನು ಸಾರುವನು.
೫. ಬಾನೊಳು ಏರಿದ ರವಿ ಸಣ್ಣಗೆ ತೋರುವನು.
ಋ. ಸಮನಾರ್ಥಕ ಪದಗಳನ್ನು ಬರೆಯಿರಿ. ( Write synonyms)
೧. ರವಿ – ಸೂರ್ಯ, ದಿನಕರ
೨. ಮೂಡಣ – ಪೂರ್ವ, ಪಡುವಣ
೩. ಕಿರೀಟ – ಮುಕುಟ, ರುಮಾಲು
೪. ನೆತ್ತರು – ರಕ್ತ , ರುಧಿರ
೫. ಬಾನು – ಆಕಾಶ, ನಭ
ಎ. ʼಉದಯರಾಗʼ ಕವಿತೆಯಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆಯಿರಿ. (Write rhyming words from the poem ‘Udayaraaga’
ಜಗಳಾಡುವನು – ಮೂಡುವನು
ಎತ್ತುವನು – ಮೆತ್ತುವನು
ಏರುವನು – ತೋರುವನು
ಏ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ಜಗಳವಾಡು = ಜಗಳ + ಆಡು
೨. ಕುಣಿದಾಡು = ಕುಣಿದು + ಆಡು
೩. ಚಿಕ್ಕವನಿರಬೇಕು = ಚಿಕ್ಕವನು + ಇರಬೇಕು
ಐ. ಸಂಬಂಧಪಟ್ಟ ಪದವನ್ನು ಹೊರತೆಗೆದು ಬರೆಯಿರಿ. (Remove and write the odd one out)
೧. ಸೂರ್ಯ, ರವಿ, ಚಂದ್ರ, ದಿನಕರ ಚಂದ್ರ
೨. ಕಿರೀಟ, ಹಾರ, ರುಮಾಲು, ಮುಕುಟ ಹಾರ
೩. ಬೆಳ್ಳಿ, ಬಂಗಾರ, ಚಿನ್ನ, ಸ್ವರ್ಣ ಬೆಳ್ಳಿ
೪. ಆಕಾಶ, ಮೋಡ, ಬಾನು, ನಭ ಮೋಡ