Folk art has a rich and ancient history, often passed down through generations as a reflection of a community’s cultural heritage. Karnataka, a state in southern India, boasts a diverse and vibrant tradition of folk art. The state is home to various forms of folk art that showcase the artistic and cultural expressions of its people.

Veeragase: Veeragase is a traditional dance form that is performed in praise of Lord Veerabhadra, a deity associated with Lord Shiva. The dancers, adorned in colorful costumes and elaborate makeup, perform dynamic and energetic movements to the beats of traditional musical instruments.
Kansale: Kansale is a unique form of folk dance that involves the use of metal discs, known as “Kansale,” which are tied to various parts of the dancer’s body. The rhythmic clanging of these discs, along with foot movements, creates a distinctive and captivating performance.
Dollu Kunita: Dollu Kunita is a traditional drum dance that originated in the northern parts of Karnataka. It involves a group of performers playing large drums called “Dollu” while executing synchronized dance movements. The dance is often accompanied by traditional songs and is performed during festive occasions.
Yakshagana: Yakshagana is a traditional form of theater that combines dance, music, dialogue, and elaborate costumes. It typically depicts mythological and historical stories, with performers wearing colorful and ornate costumes and makeup. Yakshagana is known for its vibrant and dynamic performances.

These folk art forms play a crucial role in preserving and promoting the cultural identity of Karnataka. They are not only a source of entertainment but also serve as a means of passing down stories, values, and traditions from one generation to the next. The splendor of Karnataka’s folk art reflects the diversity and richness of the state’s cultural heritage.

ಜನಪದ ಕಲೆಯು ಶ್ರೀಮಂತ ಮತ್ತು ಪುರಾತನ ಇತಿಹಾಸವನ್ನು ಹೊಂದಿದೆ. ಇದು ಸಮುದಾಯದ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿ ಪೀಳಿಗೆಯ ಮೂಲಕ ಹಾದುಹೋಗುತ್ತದೆ. ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕವು ಜಾನಪದ ಕಲೆಯ ವೈವಿಧ್ಯಮಯ ಮತ್ತು ರೋಮಾಂಚಕ ಸಂಪ್ರದಾಯವನ್ನು ಹೊಂದಿದೆ. ರಾಜ್ಯವು ತನ್ನ ಜನರ ಕಲಾತ್ಮಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಪ್ರದರ್ಶಿಸುವ ಜಾನಪದ ಕಲೆಯ ವಿವಿಧ ಪ್ರಕಾರಗಳಿಗೆ ನೆಲೆಯಾಗಿದೆ.
ವೀರಗಾಸೆ: ವೀರಗಾಸೆ ಎಂಬುದು ಶಿವನಿಗೆ ಸಂಬಂಧಿಸಿದ ದೇವರಾದ ವೀರಭದ್ರನನ್ನು ಸ್ತುತಿಸಿ ಪ್ರದರ್ಶಿಸುವ ಸಾಂಪ್ರದಾಯಿಕ ನೃತ್ಯ ಪ್ರಕಾರವಾಗಿದೆ. ವರ್ಣರಂಜಿತ ವೇಷಭೂಷಣಗಳು ಮತ್ತು ವಿಸ್ತಾರವಾದ ಬಣ್ಣದಲ್ಲಿ ಅಲಂಕರಿಸಲ್ಪಟ್ಟ ನರ್ತಕರು ಸಾಂಪ್ರದಾಯಿಕ ಸಂಗೀತ ವಾದ್ಯಗಳ ಬಡಿತಗಳಿಗೆ ಕ್ರಿಯಾತ್ಮಕ ಮತ್ತು ಶಕ್ತಿಯುತ ಚಲನೆಗಳನ್ನು ಪ್ರದರ್ಶಿಸುತ್ತಾರೆ.
ಕಂಸಾಳೆ: ಕಂಸಾಳೆ ಎಂಬುದು ಜಾನಪದ ನೃತ್ಯದ ಒಂದು ವಿಶಿಷ್ಟ ರೂಪವಾಗಿದ್ದು, ನರ್ತಕಿಯ ದೇಹದ ವಿವಿಧ ಭಾಗಗಳಿಗೆ ಕಟ್ಟಲಾಗಿರುವ “ಕಂಸಾಲೆ” ಎಂದು ಕರೆಯಲ್ಪಡುವ ಲೋಹದ ತಾಳಗಳ ಬಳಕೆಯನ್ನು ಒಳಗೊಂಡಿರುತ್ತದೆ. ಈ ತಾಳಗಳನ್ನು ಲಯಬದ್ಧವಾದ ಬಾರಿಸಿ, ಪಾದದ ಚಲನೆಗಳೊಂದಿಗೆ, ವಿಶಿಷ್ಟವಾದ ಮತ್ತು ಆಕರ್ಷಕವಾದ ನೃತ್ಯವನ್ನು ಮಾಡುತ್ತಾರೆ.
ಡೊಳ್ಳು ಕುಣಿತ: ಡೊಳ್ಳು ಕುಣಿತವು ಕರ್ನಾಟಕದ ಉತ್ತರ ಭಾಗಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ಡ್ರಮ್ ನೃತ್ಯವಾಗಿದೆ. ಇದು ನೃತ್ಯ ಚಲನೆಗಳನ್ನು ನಿರ್ವಹಿಸುವಾಗ “ಡೊಲ್ಲು” ಎಂಬ ದೊಡ್ಡ ಡ್ರಮ್ ಅನ್ನು ನುಡಿಸುವ ಪ್ರದರ್ಶಕರ ಗುಂಪನ್ನು ಒಳಗೊಂಡಿರುತ್ತದೆ. ನೃತ್ಯವು ಸಾಮಾನ್ಯವಾಗಿ ಸಾಂಪ್ರದಾಯಿಕ ಹಾಡುಗಳೊಂದಿಗೆ ಇರುತ್ತದೆ ಮತ್ತು ಹಬ್ಬದ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಯಕ್ಷಗಾನ: ಯಕ್ಷಗಾನವು ನೃತ್ಯ, ಸಂಗೀತ, ಸಂಭಾಷಣೆ ಮತ್ತು ವಿಸ್ತಾರವಾದ ವೇಷಭೂಷಣಗಳನ್ನು ಸಂಯೋಜಿಸುವ ಒಂದು ಸಾಂಪ್ರದಾಯಿಕ ರಂಗಭೂಮಿಯಾಗಿದೆ. ಇದು ವಿಶಿಷ್ಟವಾಗಿ ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳನ್ನು ಚಿತ್ರಿಸುತ್ತದೆ. ಪ್ರದರ್ಶಕರು ವರ್ಣರಂಜಿತ ಮತ್ತು ಅಲಂಕೃತ ವೇಷಭೂಷಣಗಳು ಮತ್ತು ಬಣ್ಣವನ್ನು ಹಚ್ಚಿರುತ್ತಾರೆ . ಯಕ್ಷಗಾನವು ಅದರ ರೋಮಾಂಚಕ ಮತ್ತು ಕ್ರಿಯಾತ್ಮಕ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ. ಈ ಜಾನಪದ ಕಲಾ ಪ್ರಕಾರಗಳು ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವು ಮನರಂಜನೆಯ ಮೂಲ ಮಾತ್ರವಲ್ಲದೆ ಕಥೆಗಳು, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸುವ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತವೆ. ಕರ್ನಾಟಕದ ಜಾನಪದ ಕಲೆಯ ವೈಭವವು ರಾಜ್ಯದ ಸಾಂಸ್ಕೃತಿಕ ಪರಂಪರೆಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ.

ಜನಪದ ಕಲೆಗಳ ವೈಭವ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ವೀರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು?
ಉ: ವೀರಗಾಸೆಯಲ್ಲಿ ಪಂಚವಾದ್ಯಗಳಾದ ತಾಳ , ಶ್ರುತಿ , ಚಮಾಳ , ಓಲಗ , ಕರಡೆ ಬಳಸಲಾಗುತ್ತವೆ.
೨. ಕಂಸಾಳೆ ಎಂಬ ಹೆಸರು ಹೇಗೆ ಬಂದಿತ್ತು?
ಉ: ಕಾಂಸತಾಲ್ಯ ಪದದ ತದ್ಭವ ರೂಪದಿಂದ ಕಂಸಾಳೆ ಎಂಬ ಪದ ಬಂದಿದೆ .
೩. ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ?
ಉ: ಡೊಳ್ಳು ಕುಣಿತ ಬೀರೇಶ್ವರ ಸಂಪ್ರದಾಯದ ಹಾಲುಮತ ಸಮುದಾಯದ ಕುಣಿತವಾಗಿದೆ.
೪. ಪರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ?
ಉ: ಪರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವದಲ್ಲಿ ನಡೆಯುತ್ತದೆ?
೫. ಯಕ್ಷಗಾನದ ಮೂರು ಶೈಲಿಗಳು ಯಾವವು?
ಉ: ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು. 

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in two -three sentence)

೧. ವೀರಗಾಸೆ ಕುಣಿತದ ವೇಷ ಭೂಷಣಗಳು ಹೇಗಿರುತ್ತವೆ? ವಿವರಿಸಿರಿ.
ಉ: ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಅವರು ಬಿಳಿಯ ಪಂಚೆಯ ವೀರಗಚ್ಚಿ ಹಾಕಿ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು ಕಟ್ಟಿರುತ್ತಾರೆ. ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿಯಲ್ಲಿ ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸಿರುತ್ತಾರೆ.
೨. ದೇವರ ಗುಡ್ಡರಿಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ? ವಿವರಿಸಿರಿ.
ಉ: ಕಂಸಾಳೆಯು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು. ಕಂಸಾಳೆಯ ಮಹಿಮೆ ಅಪಾರ ಎಂದು ಗುಡ್ಡರು ಅದನ್ನು ಪೂಜಿಸುತ್ತಾರೆ. ಇದನ್ನು ಎತ್ತುಕೊಳ್ಳುವ ಮೊದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಬಾರಿಸಲು ಪ್ರಾರಂಭಿಸುವರು. ಇದೊಂದು ಬರೀ ವಾದ್ಯವಲ್ಲದೇ ಕಾಣಿಕೆ ಪಡೆಯುವ ಪಾತ್ರೆಯಾಗಿ ಬಳಕೆಯಾಗುವ ಏಕಮಾತ್ರ ಸಾಧನ. ಗುಡ್ಡರು ಕಾಣಿಕೆಯನ್ನು ಸ್ವೀಕರಿಸುವಾಗ ಕಂಸಾಳೆಯ ಬಟ್ಟಲನ್ನು ಮಾತ್ರ ಮುಂದೆ ಒಡ್ಡಿ ಪಡೆದು ಅನಂತರ ಜೋಳಿಗೆಗೆ ಸುರಿದುಕೊಳ್ಳುತ್ತಾರೆ. ಇದಕ್ಕೆ ಅರ್ಪಿಸುವ ಕಾಣಿಕೆ ಮಲೆಯ ಮಹದೇಶ್ವರನಿಗೆ ಸಮರ್ಪಿತವಾದಂತೆಯೇ ಎಂಬ ಭಾವನೆ ಗುಡ್ಡನಿಗೂ ದಾನಿಗೂ ಇರುತ್ತದೆ.
೩. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳು ಕಾರ್ಯಕ್ರಮ ಹೇಗೆ ನಡೆಯುತ್ತದೆ?
ಉ: ಡೊಳ್ಳಿನ ಹಾಡುಗಳು ಸಾಮಾನ್ಯವಾಗಿ ದೈವಭಕ್ತರ ಕಥೆಯಾಗಿರುತ್ತದೆ. ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದದಲ್ಲಿ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ. ಭಕ್ತರು ದೇವರ ಮುಮ್ಮೇಳದವರಾಗಿ ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ . ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಡೊಳ್ಳು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ.
೪. ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳ ವೈಶಿಷ್ಟ್ಯವೇನು?ವಿವರಿಸಿ.
ಉ: ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು. ಬಡಗುತಿಟ್ಟಿನಲ್ಲಿ ಸಿಂಹಾಸನದ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದರು. ಹಿಮ್ಮೇಳದ ಪ್ರಮುಖ ವಾದ್ಯಗಳೆಂದರೆ ಚಂಡೆ, ಮದ್ದಳೆ, ಶ್ರುತಿ, ತಾಳ ಮತ್ತು ಜಾಗಟ. ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ತಿಟ್ಟು ಮತ್ತು ಪಾತ್ರಕ್ಕನುಗುಣವಾಗಿ ವೈವಿಧ್ಯಮಯವಾಗಿರುತ್ತವೆ. ಬಡಗುತಿಟ್ಟಿನಲ್ಲಿ ಕುಣಿತ ಹಾಗೂ ಅಭಿನಯಕ್ಕೆ ಪ್ರಾಧಾನ್ಯತೆ ಇರುತ್ತದೆ .
೫. ಚೌಕಿಯಲ್ಲಿ ನಡೆಯುವ ವಿಶೇಷಗಳೇನು? ವಿವರಿಸಿ.
ರಂಗಸ್ಥಳ ಹಿಂದೆ ಅಥವಾ ಸಮೀಪ ಇರುವ ಬಣ್ಣದ ಮನೆಯೇ ಚೌಕಿ. ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ . ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ಇಲ್ಲಿ ತಾವೇ ಹಚ್ಚಿಕೊಳ್ಳುತ್ತಾರೆ . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ . ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು. ನಂತರ ಪಾತ್ರಧಾರಿಗಳು ಪ್ರವೇಶಿಸುವರು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ವಿವರಿಸಿ. (Answer the following in eight to ten sentence)

೧. ವೀರಗಾಸೆ ನರ್ತಕನ ಒಡಪಿನೊಂದಿಗಿನ ಕುಣಿತ ಹೇಗಿರುತ್ತದೆ?
ಉ: ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ . ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜನಪದ ಕಲೆ , ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಅವರು ಬಿಳಿಯ ಪಂಚೆಯ ವೀರಗಚ್ಚಿ ಹಾಕಿ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು ಕಟ್ಟಿರುತ್ತಾರೆ. ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿಯಲ್ಲಿ ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸಿರುತ್ತಾರೆ. “ ಆಹಹಹಾ ರುದ್ರಾ ಅಹಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ.
ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ. ವೀರಭದ್ರ ವೇಷಧಾರಿ ದಕ್ಷಯಾಗ, ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ. ಖಡ್ಗವನ್ನು ಉತ್ತರ ಕರ್ನಾಟಕದಲ್ಲಿ ಒಡಪು ಎಂದು ಕರೆಯುತ್ತಾರೆ. ಮತ್ತೊಬ್ಬ ವ್ಯಕ್ತಿ “ಭಲರೇ ವೀರ ಅಹಹಾ ವೀರ” ಎಂದು ಕಾಕು ಹೇಳುತ್ತಾ ಜಾಗಟೆ ಬಡಿಯುತ್ತಾ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ. ಚಮಾಳ ಹಾಗೂ ಕರಡೆಯ ಬಡಿತ ಇವರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಮತ್ತೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳು ಜೋರಾಗುತ್ತವೆ. ಮುಂದಿನ ಗತಿಯ ಕುಣಿತ ಆರಂಭವಾಗುತ್ತದೆ. ಗತಿಯಿಂದ ಗತಿಯ, ಕುಣಿತ, ಬಡಿತಗಳ ವೇಗ ಹೆಚ್ಚುತ್ತದೆ.
೨. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ವಿವರಿಸಿ.
ಉ: ಬೀಸುಕಂಸಾಳೆ ದೇವರಗುಡ್ಡರ ವಿಶಿಷ್ಟ ನೃತ್ಯ. ಕರ್ನಾಟಕದ ಜನಪದ ನೃತ್ಯಗಳಲ್ಲಿ ಅಪೂರ್ವವಾದುದು. ಇದರಲ್ಲಿ ಫಾರ್‌ಬಟ್ಟು , ತಟ್ಬಟ್ಟು ಮುಂತಾದ ಬಗೆಗಳಿವೆ. ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲಿಂಗ ಬಾ , ಮುದ್ದುಲಿಂಗ ಬಾ , ನಮ್ಮ ಮುದ್ದು ಮಾದಯ್ಯ ಲಿಂಗ ಬಾ ಎಂದು ಹಾಡುತ್ತಾರೆ . ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತಾ ಕುಣಿಯುತ್ತಾನೆ .ತಲೆಯ ಮೇಲೆ , ಬೆನ್ನಹಿಂದೆ , ಕಾಲ ಕೆಳಗೆ ಕುಳಿತು , ನಿಂತು , ಬಾಗಿ , ಬಳುಕಿ ತೀವ್ರಗತಿಯಲ್ಲಿ ವರ್ತಿಸುವ ಭಂಗಿ ಅದ್ಭುತ . ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುತ್ತಾರೆ. ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ.
೩. ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ?
ಉ: ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ. ಡೊಳ್ಳು ಚರ್ಮವಾದ್ಯ. ಡೊಳ್ಳುಬಾರಿಸುವ ಕಲಾವಿದರ ವೇಷಭೂಷಣಗಳು ವಿಶಿಷ್ಟವಾಗಿರುತ್ತವೆ. ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲಿನ ಭಾಗಕ್ಕೆ ಕರಿಯ ಕಂಬಳಿಯನ್ನು,  ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತ ಕಚ್ಚೆಪಂಚೆಯನ್ನು ಉಡುತ್ತಾರೆ. ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನು ಧರಿಸುತ್ತಾರೆ. ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ , ಅಂಗಿ ಟೊಪ್ಪಿಗೆ ಕೊಡುವರು. ಎರಡು ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ.
೪. ಯಕ್ಷಗಾನದ ವೈಶಿಷ್ಟ್ಯ ಹಾಗೂ ಪೂರ್ವರಂಗದ ಉದ್ದೇಶವೇನು?
ಉ: ಯಕ್ಷಗಾನಕ್ಕೆ ದಶಾವತಾರ , ಬಯಲಾಟ , ಭಾಗವತರಾಟ ಎಂಬ ಹೆಸರೂ ಇವೆ. ಗೀತ , ಕುಣಿತ , ವೇಷಭೂಷಣ , ಮಾತುಗಾರಿಕೆ , ವಾದ್ಯ ಇವು ಬಯಲಾಟದ ಪಂಚ ಅಂಗಗಳು. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಿಸಿದ ಪ್ರಸಂಗಗಳು ಇರುತ್ತವೆ. ಪುರುಷರೇ ಸ್ತ್ರೀ ವೇಷಹಾಕುವುದು ಯಕ್ಷಗಾನದ ವೈಶಿಷ್ಟ್ಯ. ಯಕ್ಷಗಾನದ ಪೂರ್ವರಂಗ ಎಂದು ಕರೆತಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದು. ಪುನಾ ದೇವತಾಸ್ತುತಿಯ ನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಓಡ್ಡೋಲಗ ಪ್ರಾರಂಭವಾಗುತ್ತದೆ . ಪಾತ್ರಧಾರಿಗಳು ಭಾಗವತರಿಗೆ , ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸುವರು.

ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Write answer to the context)

೧. “ಅಹಹಾ ರುದ್ರ ಅಹಹಾ ದೇವ”
ಆಯ್ಕೆ:ಪ್ರಸ್ತುತ ವಾಕ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ತಯಾರಿಸಿ ನಿಗದಿಪಡಿಸಿದ ʼಜನಪದ ಕಲೆಗಳ ವೈಭವʼ ಎಂಬ ಜಾನಪದ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಅಹಹ ರುದ್ರಾ ಆಹಹ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರನ ಹುಟ್ಟಿನ ವರ್ಣನೆಯನ್ನು ಮಾಡುವ ಸಂದರ್ಭದಲ್ಲಿ ವೀರಗಾಸೆಯ ವೇಷದಾರಿಗಳು  ಈ ಮಾತನ್ನು ಹೇಳುತ್ತಾರೆ.
ಸಾರಸ್ಯ: ವೀರಭದ್ರನ ಹುಟ್ಟಿನ ವರ್ಣನೆಯನ್ನು ನೃತ್ಯದ ಮೂಲಕ ವರ್ಣಿಸುವುದೇ ಇಲ್ಲಿನ ಸ್ವಾರಸ್ಯ.
೨. “ಭಲರೇ ವೀರ ಅಹಹಾ ವೀರ”  
ಆಯ್ಕೆ:ಪ್ರಸ್ತುತ ವಾಕ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ತಯಾರಿಸಿ ನಿಗದಿಪಡಿಸಿದ ʼಜನಪದ ಕಲೆಗಳ ವೈಭವʼ ಎಂಬ ಜಾನಪದ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ವೀರಭದ್ರ ವೇಷಧಾರಿ ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ. ಮತ್ತೊಬ್ಬ ವ್ಯಕ್ತಿ
“ಭಲರೇ ವೀರ, ಆಹಹಾ ವೀರ” ಎಂದು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.
ಸಾರಸ್ಯ: ವೀರಭದ್ರನ ವಿಜಯವನ್ನು ವೀರಗಾಸೆಯ ವೇಷಧಾರಿಯು ಕುಣಿಯುತ್ತಾ ಒಡಪಿಗೆ ತಕ್ಕಂತೆ ಕುಣಿಯುವುದು ರೋಮಾಂಚನಕಾರಿಯಾಗಿರುತ್ತದೆ ಎಂಬುದೇ ಇಲ್ಲಿ ಸ್ವಾರಸ್ಯವಾಗಿದೆ.
೩. “ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣ್ಣಪ್ಪ ಶರಣು ಶರಣಾರ್ಥಿ”
ಆಯ್ಕೆ: ಪ್ರಸ್ತುತ ವಾಕ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ತಯಾರಿಸಿ ನಿಗದಿಪಡಿಸಿದ ʼಜನಪದ ಕಲೆಗಳ ವೈಭವʼ ಎಂಬ ಜಾನಪದ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಗುಡ್ಡದವರು ಕಾಣಿಕೆಯನ್ನು ಪಡೆಯುವ ಮೊದಲು ಕಂಸಾಳೆಯನ್ನು ಮುಂದೆ ಚಾಚಿ ಕಾಣಿಕೆಯನ್ನು ಪಡೆಯುತ್ತಾರೆ. ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಕೈಗೆತ್ತಿಕೊಳ್ಳುವ ಮೊದಲು “ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣ್ಣಪ್ಪ ಶರಣು ಶರಣಾರ್ಥಿ” ಎಂದು ನಮಸ್ಕರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ದೇವರ ಗುಡ್ಡದವರು ಮಲೆಮಹೇಶ್ವರನ ಮೇಲೆ ಇಟ್ಟಿರುವ ಭಕ್ತಿಯಷ್ಟೆ ಕಂಸಾಳೆಯ ಮೇಲೂ ಎಂಬದು ಸ್ವಾರಸ್ಯವಾಗಿದೆ.
೪. “ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ” 
ಆಯ್ಕೆ: ಪ್ರಸ್ತುತ ವಾಕ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ತಯಾರಿಸಿ ನಿಗದಿಪಡಿಸಿದ ʼಜನಪದ ಕಲೆಗಳ ವೈಭವʼ ಎಂಬ ಜಾನಪದ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಡೊಳ್ಳಿನ ಕುಣಿತ ಹಾಗೂ ಹಾಡು ಪ್ರಾರಂಭವಾಗುವ ಸಂದರ್ಭದಲ್ಲಿ “ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ”  ಎಂದು ಹೇಳುತ್ತಾರೆ.
ಸ್ವಾರಸ್ಯ : ಸಾಮಾನ್ಯವಾಗಿ ಹಾಡಿನ ವಿಷಯ ದೈವಮಹಿಮೆ ಅಥವಾ ದೈವಭಕ್ತರ ಕಥೆಯೆಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
೫. “ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ”
ಆಯ್ಕೆ:
ಪ್ರಸ್ತುತ ವಾಕ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ತಯಾರಿಸಿ ನಿಗದಿಪಡಿಸಿದ ʼಜನಪದ ಕಲೆಗಳ ವೈಭವʼ ಎಂಬ ಜಾನಪದ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಯಕ್ಷಗಾನದಲ್ಲಿ ಕಾಳಗ, ಸಂಹಾರ ಮತ್ತು ಕಲ್ಯಾಣಗಳ ಪ್ರಸಂಗಗಳೇ ಹೆಚ್ಚು. ಕಾಳಗವಿಲ್ಲದೇ ಯಕ್ಷಗಾನ ಇರುವುದಿಲ್ಲ. ಯಕ್ಷಗಾನದಲ್ಲಿ ಕಾಳಗ ಮುಗಿದ ಸಂದರ್ಭದಲ್ಲಿ “ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ” ತತ್ವವನ್ನು ಹೇಳುತ್ತಾರೆ.
ಸ್ವಾರಸ್ಯ: ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿಯನ್ನು ಬೆಳೆಸಲು ಸಹಕಾರಿಯಾಗಿರುವುದು ಇದರ ಸ್ವಾರಸ್ಯವಾಗಿದೆ.

ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks).

೧. ವೀರಗಾಸೆ ಶೈವ ಸಂಪ್ರದಾಯಕ್ಕೆ ಸೇರಿದ ನೃತ್ಯ.
೨. ಕಂಸಾಳೆ ಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳುವ ಮೊದಲು ಮಹದೇಶ್ವರ
ದೇವರನ್ನು ಸ್ಮರಿಸುತ್ತಾರೆ.
೩. ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು ಕಾವ್ಯಗೀತೆ ಗೆ ಉದಾಹರಣೆ.
೪. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು ಚೌಕಿ ಎಂದು ಕರೆಯುತ್ತಾರೆ.

ಊ. ಹೊಂದಿಸಿ ಬರೆಯಿರಿ. (Match the following)

ಅ ಪಟ್ಟಿ                            ಆ ಪಟ್ಟಿ

ವೀರಭದ್ರ                        ಕಾಂಸತಾಲ್ಯ                    ಒಡಪು
ಕಂಸಾಳೆ                         ಚರ್ಮವಾದ್ಯ                    ಕಾಂಸತಾಲ್ಯ
ಡೊಳ್ಳು                           ಮಹಾಕಾವ್ಯ                     ಚರ್ಮವಾದ್ಯ
ಯಕ್ಷಗಾನ                       ಒಡಪು                           ಭಾಗವತ
ಮಹದೇಶ್ವರ                    ವೇಷಭೂಷಣ                   ಮಹಾಕಾವ್ಯ
                                      ಭಾಗವತ
                                      ಏಳ್ಮಲೆ ಹೆತ್ತಯ್ಯ
                                      ದೇವಟಿಗೆ

Click here to download Janapada Kalegala Vaibhava Exercises