Sankalpageethe is poem writen by Sri G S Sivarudrappa. Nothing is impossible if you work with determination and determination. Act without desire for reward. We can build a hate-free society by committing to light the lamp of love in our lives. We can face life with courage as we resolve to tread carefully. Taking the initiative to conserve the environment like the monsoon rains can keep the river waters clean. If we take the initiative to preserve forests, we can make the forests lush and prosperous. We can prevent society’s moral dominance by committing to instilling hope in all. Taking the resolve to be egalitarian can bring down the walls of inequality between human beings. A determination to live mindfully that all votes are paths to achievement can bring peace to the country. A dream of the future can be found by resolving to be free from fear and doubt. Thus the poet Sri G S Sivarudrappa expresses his views on intention and implementation in this poem Sankalpageethe .
ಸಂಕಲ್ಪಗೀತೆ
೧. ಪದಗಳ ಅರ್ಥ ಬರೆಯಿರಿ.
ಕಂದಿದ = ಮಸುಕಾದ, ವಸಂತ = ಸಮೃದ್ಧಿ, ಕಲುಷಿತ = ಮಲಿನ, ಹಡಗು = ನಾವೆ, ಪಥ = ದಾರಿ, ಹಣತೆ = ದೀಪ, ಬರಡು = ಪೊಳ್ಳು, ಹಾಳು ಬಿದ್ದಿರುವ
ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
೧. ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?
ಉ: ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು.
೨. ನದೀಜಲಗಳು ಏನಾಗಿವೆ?
ಉ: ನದೀಜಲಗಳು ಕಲುಷಿತವಾಗಿವೆ.
೩. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಉ: ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
೪. ಕಾಡು ಮೇಡುಗಳ ಸ್ಥಿತಿ ಹೇಗಿದೆ?
ಉ: ಕಾಡುಮೇಡುಗಳು ಬರಡಾಗಿವೆ.
೫. ಯಾವ ಎಚ್ಚರದೊಳು ಬದುಕಬೇಕಿದೆ?
ಉ: ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?
ಉ: ಅಂಧಕಾರವನ್ನು ಹೋಗಲಾಡಿಸಲು ಬದುಕಿನಲ್ಲಿ ಅಥವಾ ಮನಸ್ಸಿನಲ್ಲಿ ಕವಿದ ನಿರಾಶೆಯ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ ಮತ್ತು ಪ್ರೀತಿಯ ಹಣತೆಯನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ.
೨. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
ಉ: ಋತುಗಳ ರಾಜನಾದ ವಸಂತನು ಬರಡಾಗಿರುವ ಕಾಡುಗಳು ಹಚ್ಚಹಸುರಿನಿಂದ ಕಂಗೊಳಿಸುವಂತೆ ಮುಟ್ಟಬೇಕಿದೆ. ವಸಂತನ ಆಗಮನದಿಂದ ಬರಡಾಗಿರುವ ಕಾಡಿನಲ್ಲಿ ಮರಗಿಡುಗಳು ಚಿಗುರಿ ಪ್ರಕೃತಿಗೆ ನವ ಚೈತನ್ಯ ಮೂಡಬೇಕಿದೆ ಎಂಬುದು ಕವಿಯ ಆಶಯವಾಗಿದೆ.
೩. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆ ಆಗಬೇಕಿದೆ?
ಉ: ಭಾಷೆ ಜಾತಿ, ಮತ, ಧರ್ಮಗಳ ಭೇದ ಭಾವದಿಂದ ಮನುಷ್ಯರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಸ್ನೇಹ, ಪ್ರೀತಿ, ನಂಬಿಕೆ ಮೂಲಕ ಮನುಜರ ನಡುವಿನ ಈ ಅಡ್ಡಗೋಡೆಗಳನ್ನು ಕೆಡವಬೇಕು. ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜರೆಲ್ಲರ ನಡುವೆ ಸೇತುವೆ ಆಗಬೇಕಿದೆ.
೪. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
ಉ: ಎಲ್ಲಾ ಮತ ಧರ್ಮಗಳು ದಾರಿ ತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು. ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನಸ್ಸಿನಲ್ಲಿ ಭವಿಷ್ಯದ ಕನಸನ್ನು ಬಿತ್ತುತ್ತಾ ಬದುಕು ನಡೆಸಬೇಕು.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ?
ದೃಢ ಸಂಕಲ್ಪದಿಂದ ಏನನ್ನಾದರೂ ಸಾಧಿಸಬಹುದೆಂದು ಜಿ ಎಸ್ ಶಿವರುದ್ರಪ್ಪನವರು ತಮ್ಮ ಸಂಕಲ್ಪ ಗೀತೆಯಲ್ಲಿ ಸರಳವಾಗಿ ಹೇಳಿದ್ದಾರೆ. ಇಂದು ಮನುಷ್ಯರ ನಡುವೆ ಇರುವ ಮೇಲು-ಕೀಳು, ಬಡವ-ಶ್ರೀಮಂತ ಎಂಬ ಅನೇಕ ಅಡ್ಡ ಗೋಡೆಗಳನ್ನು ತೊಡೆದು ಹಾಕಬೇಕು. ನಮ್ಮ ಸುತ್ತಲೂ ಇರುವ ದ್ವೇಷದ ಕತ್ತಲೆಯನ್ನು ಕಳೆಯಲು ಪ್ರೀತಿಯ ದೀಪವನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿರುವ ಬದುಕಿನ ಹಡಗನ್ನು ಎಚ್ಚರದಲ್ಲಿ ಮುನ್ನಡೆಸಬೇಕು. ದುರ್ಬಲರನ್ನು ಕೈಹಿಡಿದು ಹೊಸ ಭರವಸೆಯನ್ನು ಅವರಿಗೆ ನೀಡಬೇಕು. ಎಲ್ಲಾ ಜಾತಿ ಮತಗಳ ನೀತಿ ಒಂದೇ ಎಂಬುದನ್ನು ತಿಳಿಸಬೇಕು. ಭಯ ಸಂಶಯವನ್ನು ನಿವಾರಿಸಿ ಹೊಸ ಕನಸನ್ನು ಬಿತ್ತುವ ಸಂಕಲ್ಪವನ್ನು ನಾವು ಮಾಡಬೇಕು.
೨. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.
ಉ: ಸಂಕಲ್ಪದಿಂದ, ದೃಢ ನಿರ್ಧಾರದಿಂದ ಕೆಲಸ ಮಾಡಿದರೆ ಅಸಾಧ್ಯವಾದುದು ಯಾವುದು ಇಲ್ಲ. ಪ್ರತಿಫಲದ ಅಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸಬೇಕು. ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷವಿಲ್ಲದ ಸಮಾಜವನ್ನು ನಿರ್ಮಾಣ ಮಾಡಬಹುದು. ನಾವು ಬದುಕನ್ನು ಎಚ್ಚರಿಕೆಯಿಂದ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವುದರಿಂದ ಬದುಕನ್ನು ಧೈರ್ಯವಾಗಿ ಎದುರಿಸಬಹುದು. ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದಿ ಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ನಾವು ವನ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ಕಾಡುಗಳು ಹಚ್ಚ ಹಸಿರಿನಿಂದ ಸಮೃದ್ಧವಾಗುವಂತೆ ಮಾಡಬಹುದು. ನಾವು ಎಲ್ಲರಲ್ಲೂ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಿಪತನವನ್ನು ತಡೆಯಬಹುದು. ಸಮಾನತೆ ಭಾವನೆಯುಳ್ಳವರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಮನುಜರ ನಡುವಿನ ಅಸಮಾನತೆಯ ಅಡ್ಡ ಗೋಡೆಗಳನ್ನು ಬೀಳಿಸಬಹುದು. ಎಲ್ಲ ಮತಗಳು ಸಾಧನೆಯ ದಾರಿಗಳು ಎಂದು ಎಚ್ಚರವಹಿಸಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಭವಿಷ್ಯದ ಕನಸನ್ನು ಕಾಣಬಹುದು. ಹೀಗೆ ಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಪ್ರೀತಿಯ ಹಣತೆಯ ಹಚ್ಚೋಣ”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಶಿವರುದ್ರಪ್ಪನವರ “ಎದೆ ತುಂಬಿ ಹಾಡಿದನು” ಎಂಬ ಕವನ ಸಂಕಲನದಿಂದ ಆಯ್ದ “ಸಂಕಲ್ಪಗೀತೆ” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಜಿ.ಎಸ್.ಶಿವರುದ್ರಪ್ಪನವರು ಜಾತಿ,ಮತ, ಭಾಷೆಯೆಂಬ ಕತ್ತಲೆಯನ್ನು ಓಡಿಸಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:ನಮ್ಮ ಜೀವನದಲ್ಲಿರುವ ಕತ್ತಲನ್ನು ಹೋಗಲಾಡಿಸಲು ಪ್ರೀತಿಯೆಂಬ ದೀಪವನ್ನು ಬೆಳಗಿಸುವ ಸಂಕಲ್ಪ ಮಾಡಬೇಕೆಂಬ ತಮ್ಮ ಭಾವನೆಯನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.
೨. “ಮುಂಗಾರಿನ ಮಳೆಯಾಗೋಣ”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಶಿವರುದ್ರಪ್ಪನವರ “ಎದೆ ತುಂಬಿ ಹಾಡಿದನು” ಎಂಬ ಕವನ ಸಂಕಲನದಿಂದ ಆಯ್ದ “ಸಂಕಲ್ಪಗೀತೆ” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಕವಿಗಳು ಜೀವನದಲ್ಲಿ ಧನ್ಯಾತ್ಮಕ ಮನೋಭಾವನೆಯ ದೃಢಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ. ಸ್ವಾರಸ್ಯ: ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದಿಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂದು ಕವಿಗಳು ಸ್ವಾರಸ್ವ ಪೂರ್ಣವಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.
೩. “ಹೊಸ ಭರವಸೆಗಳ ಕಟ್ಟೋಣ”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಶಿವರುದ್ರಪ್ಪನವರ “ಎದೆ ತುಂಬಿ ಹಾಡಿದನು” ಎಂಬ ಕವನ ಸಂಕಲನದಿಂದ ಆಯ್ದ “ಸಂಕಲ್ಪಗೀತೆ” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಕುಸಿದು ಹೋಗಿರುವ ಭರವಸೆಗಳನ್ನು ಮತ್ತೆ ನಿಲ್ಲಿಸಬೇಕು. ಬಡತನ, ಜಾತಿ,ಮತ, ಭಾಷೆಗಳಿಂದ ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ಸಮಾನರಾಗಿ ಬದುಕುವ ಭರವಸೆಯನ್ನು ಕಟ್ಟಿ ಕೊಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:ಮೌಲ್ಯಗಳನ್ನು ಪುನರ್ ಸ್ಥಾಪಿಸಿ, ಶೋಷಿತರ ಬದುಕಿಗೆ ಭರವಸೆ ತುಂಬುವ ಸಂಕಲ್ಪ ಬೇಕು ಎಂಬುದನ್ನು ಕವಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.
೪. “ಹೊಸ ಎಚ್ಚರದೊಳು ಬದುಕೋಣ”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಶಿವರುದ್ರಪ್ಪನವರ “ಎದೆ ತುಂಬಿ ಹಾಡಿದನು” ಎಂಬ ಕವನ ಸಂಕಲನದಿಂದ ಆಯ್ದ “ಸಂಕಲ್ಪಗೀತೆ” ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಎಲ್ಲ ಮತಗಳು ಸಾಧನೆಯ ದಾರಿಗಳು ಎಂದು ಎಚ್ಚರವಹಿಸಿ ಬದುಕುವ ಸಂಕಲ್ಪ ಕೈಗೊಳ್ಳಬೇಕೆಂಬ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ದೇಶದಲ್ಲಿ ಶಾಂತಿಯು ನೆಲೆಸಲು ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕಬೇಕೆಂಬ ಮೌಲ್ಯವನ್ನು ಕವಿ ಈ ವಾಕ್ಯದಲ್ಲಿ ಎತ್ತಿ ಹಿಡಿದಿದ್ದಾರೆ.
ಉ. ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಸಂಕಲ್ಪ ಗೀತೆ ಪದ್ಯವನ್ನು ಎದೆತುಂಬಿ ಹಾಡಿದನು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
೨. ಕತ್ತಲೆಯೊಳಗೆ ಪ್ರೀತಿಯ ಹಣತೆ ಹಚ್ಚೋಣ.
೩. ಜಿ ಎಸ್ ಶಿವರುದ್ರಪ್ಪನವರು ದಾವಣಗೆರೆಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.
ನಿಲ್ಲಿಸು = ನಿಲ್ಲು, ನಡೆಸು = ನಡೆ, ಹಚ್ಚುವುದು = ಹಚ್ಚು,
ಮುಟ್ಟೋಣ = ಮುಟ್ಟು, ಕಟ್ಟುವುದು = ಕಟ್ಟು, ಆಗೋಣ = ಆಗು
೨. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಪದಗಳು | ವಿಭಕ್ತಿ ಪ್ರತ್ಯಯ | ವಿಭಕ್ತಿ ಹೆಸರು |
ಪ್ರೀತಿಯ | ಅ | ಷಷ್ಠಿ |
ಬಿರುಗಾಳಿಗೆ | ಗೆ | ಚತುರ್ಥಿ |
ಜಲಕ್ಕೆ | ಕೆ | ಚತುರ್ಥಿ |
ಬಿದ್ದುದನ್ನು | ಅನ್ನು | ದ್ವಿತೀಯ |
ಭರವಸೆಗಳ | ಅ | ಷಷ್ಠಿ |
೩. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿರಿ.
ಪದಗಳು | ವಿಭಕ್ತಿ ಪ್ರತ್ಯಯ | ವಿಭಕ್ತಿ ಹೆಸರು |
ಸಂಶಯದೊಳ್ | ಒಳ್ | ಸಪ್ತಮಿ |
ಜಲದಿ೦ | ಇ೦ | ತೃತೀಯ |
ಮರದತ್ತಣಿ೦ | ಅತ್ತಣಿ೦ | ಪ೦ಚಮಿ |
ರಾಯ೦ಗೆ | ಗೆ | ಚತುರ್ಥಿ |
೪. ಕೊಟ್ಟಿರುವ ಧಾತುಗಳಿಗೆ ವಿದ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭವನಾರ್ಥಕ ರೂಪಗಳನ್ನು ಬರೆಯಿರಿ.
ಧಾತು | ವಿದ್ಯರ್ಥಕ ರೂಫ | ನಿಷೇಧಾರ್ಥಕ ರೂಪ | ಸಂಭಾವನಾರ್ಥಕ ರೂಪ |
ಹಾಡು | ಹಾಡಲಿ/ಹಾಡಿರಿ | ಹಾಡನು /ಹಾಡಳು /ಹಾಡರು/ಹಾಡದು | ಹಾಡಿಯಾನು/ಹಾಡಿಯಾರು/ ಹಾಡೀತು |
ನೋಡು | ನೋಡಲಿ/ನೋಡಿರಿ | ನೋಡನು/ನೋಡಳು/ನೋಡರು/ ನೋಡದು | ನೋಡಿಯಾನು/ನೋಡಿಯಾಳು/ ನೋಡಿಯಾರು/ನೋಡೀತು |
ಕಟ್ಟು | ಕಟ್ಟಲಿ/ಕಟ್ಟಿರಿ | ಕಟ್ಟನು/ಕಟ್ಟಳು /ಕಟ್ಟರು/ಕಟ್ಟದು | ಕಟ್ಟಯಾನು/ಕಟ್ಟಿಯಾಳು/ ಕಟ್ಟಿಯಾರು/ಕಟ್ಟೀತು |
ಕೇಳು | ಕೇಳಲಿ/ಕೇಳಿರಿ | ಕೇಳನು/ಕೇಳಳು/ಕೇಳರು /ಕೇಳದು | ಕೇಳಿಯಾನು/ಕೇಳಿಯಾಳು/ ಕೇಳಿಯಾರು/ಕೇಳೀತು |
ಓಡು | ಓಡಲಿ/ಓಡಿರಿ | ಓಡನು/ಓಡಳು /ಓಡರು/ಓಡದು | ಓಡಿಯಾನು/ಓಡಿಯಾಳು/ ಓಡಿಯಾರು/ಓಡೀತು |
ಓದು | ಓದಲಿ/ಓದಿರಿ | ಓದನು/ಓದಲು /ಓದರು/ಓದದು | ಓದಿಯಾನು/ಓದಿಯಾಳು/ ಓದಿಯಾರು/ಓದಿತು |
ಬರೆ | ಬರೆಯಲಿ/ಬರೆಯಿರಿ | ಬರೆಯನು/ಬರೆಯಳು/ಬರೆಯರು/ ಬರೆಯದು | ಬರೆದಾನು/ಬರೆದಾಳು/ ಬರೆದಾರು/ಬರೆದೀತು |