“Bhidige Chandra bandha nodu,” a poem by D.R. Bendre, eloquently depicts the moon’s phases. Bhidige Chandra refers to the second-day moon after a full moon or new moon. The poet describes this moon as looking like two lit lamps. On the fourth day, the moon appears to have two horns, prompting the poet to wonder about the animal on the moon. The eighth-day moon resembles a half-eaten laddu, while the full moon is compared to a butter ball.

ದ.ರಾ.ಬೇಂದ್ರೆಯವರ ಬಿದಿಗೆ ಚಂದ್ರ ಬಂದ ನೋಡು” ಎಂಬ ಕವಿತೆಯಲ್ಲಿ ಚಂದ್ರನ ಹಂತಗಳನ್ನು ನಿರರ್ಗಳವಾಗಿ ಚಿತ್ರಿಸಲಾಗಿದೆ. ಬಿದಿಗೆ ಚಂದ್ರನು ಹುಣ್ಣಿಮೆ ಅಥವಾ ಅಮಾವಾಸ್ಯೆಯ ನಂತರದ ಎರಡನೇ ದಿನದ ಚಂದ್ರನನ್ನು ಉಲ್ಲೇಖಿಸುತ್ತಾನೆ. ಈ ಚಂದ್ರನು ಎರಡು ಬೆಳಗಿದ ದೀಪಗಳಂತೆ ಕಾಣುತ್ತಾನೆ ಎಂದು ಕವಿ ವಿವರಿಸುತ್ತಾನೆ. ನಾಲ್ಕನೆಯದು. ಚಂದ್ರನು ಎರಡು ಕೊಂಬುಗಳನ್ನು ಹೊಂದಿರುವಂತೆ ಕಾಣುತ್ತದೆ, ಎಂಟನೇ ದಿನದ ಚಂದ್ರನು ಅರ್ಧ ತಿಂದ ಲಡ್ಡುವನ್ನು ಹೋಲುತ್ತಾನೆ, ಆದರೆ ಹುಣ್ಣಿಮೆಯನ್ನು ಬೆಣ್ಣೆಯ ಚೆಂಡಿಗೆ ಹೋಲಿಸಲಾಗುತ್ತದೆ.

ಬಿದಿಗೆ ಚಂದ್ರ ಬಂದ ನೋಡು

ಅ. ಬಿಟ್ಟಸ್ಥಳ ತುಂಬಿರಿ (Fill in the blanks)

೧. ದೀಪ ಹಚ್ಚಿದಂತೆ ಜೋಡು.

೨. ಯಾರ ಮನೆಯ ಅಲ್ಲಿ ಇಹುದೋ

೩. ಅಗೋ ಚವತಿ ಚಂದ್ರ ನೋಡು.

೪. ಮೂಡಿದಂತೆ ಎರಡು ಕೋಡು.

ಆ. ಹೊಂದಿಸಿ ಬರೆಯಿರಿ (Match the following)

೧. ದ. ರಾ. ಬೇಂದ್ರೆ           ಅ. ಮಜ್ಜಿಗೆ ಮೇಲಿನ ಬೆಣ್ಣೆಮುದ್ದೆ       ಅಂಬಿಕಾತನಯದತ್ತ

೨. ನಾಕುತಂತಿ                ಆ. ಅರ್ಧ ತಿಂದು ಅರ್ಧ ಬಿಟ್ಟು         ಜ್ಞಾನಪೀಠ ಪ್ರಶಸ್ತಿ

೩. ಅಷ್ಟಮಿ ಚಂದ್ರ             ಇ. ಜ್ಞಾನಪೀಠ ಪ್ರಶಸ್ತಿ                 ಅರ್ಧ ತಿಂದು ಅರ್ಧ ಬಿಟ್ಟು

೪. ಹುಣ್ಣಿಮೆ ಚಂದ್ರ            ಈ. ಅಂಬಿಕಾತನಯದತ್ತ              ಮಜ್ಜಿಗೆ ಮೇಲಿನಬೆಣ್ಣೆಮುದ್ದೆ

ಇ. ಆವರಣದಲ್ಲಿ ಕೊಟ್ಟಿರುವ ಉತ್ತರಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ. (Select the correct option and fill in the blanks)

೧. ಮ್ರಗವು ಎಲ್ಲಿ ಇಹುದೊ ಏನೊ

   ( ಇರುವುದೊ, ಇಹುದೊ, ಇಲ್ಲವೊ, ಇದೆಯೊ)

೨. ಬಂದನು ಹುಣ್ಣಿವೆಯ ಚಂದ್ರ

(ಹಣ್ಣಿವೆ, ಹೆಣ್ಣವೆ, ಹುಣ್ಣಿವೆ, ಕಣ್ಣಿವೆ)

೩. ಬೆಳದಿಂಗಳು ನಿಬಿಡ ಸಾಂದ್ರ

   (ನಿಬಿಡ, ನಿಗೂಢ, ನಡುವೆ, ನವಿರು)

ಈ. ತಪ್ಪಾಗಿರುವ ಪದಗಳನ್ನು ಸರಿಪಡಿಸಿ ಬರೆಯಿರಿ (Correct the sentence)

೧. ದೀಪ ಹಚ್ಚಿದಂತೆ ಕೋಡು.
ಉ: ದೀಪ ಹಚ್ಚಿದಂತೆ  ಜೋಡು.
೨. ಅಗೋ ಚವತಿ ಸೂರ್ಯ ನೋಡು.
ಉ: ಅಗೋ ಚವತಿ ಚಂದ್ರ ನೋಡು.
೩. ಇಂಥ ಚಿತ್ರ ಕೊರೆದನಿಲ್ಲಿ ಯಾವ ಜಾಣನು?
ಉ: ಇಂಥ ಚಿತ್ರ ಬರೆದನಿಲ್ಲಿ ಯಾವ ಜಾಣನು?
೪. ಅಲ್ಲ ಅಲ್ಲ ಮುಗಿಲ ತುಂಬ ಇಹುದು ಸಜ್ಜಿಗೆ.
ಉ: ಅಲ್ಲ ಅಲ್ಲ ಮುಗಿಲ ತುಂಬ ಇಹುದು ಮಜ್ಜಿಗೆ.
೫. ರಾಗಿಮುದ್ದೆ ಮೇಲೆಯೊಂದು.
ಉ: ಬೆಣ್ಣೆಮುದ್ದೆ ಮೇಲೆಯೊಂದು.

ಉ. ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer in one sentence)

೧. ಬಿದಿಗೆ ಚಂದ್ರ ಹೇಗೆ ಕಾಣುತ್ತಾನೆ?
ಉ: ಬಿದಿಗೆ ಚಂದ್ರ ದೀಪ ಹಚ್ಚಿದಂತೆ ಕಾಣುತ್ತಾನೆ.
೨. ಅಷ್ಟಮಿ ಚಂದಿರನು ಹೇಗೆ ಕಾಣುತ್ತಾನೆ?
ಉ: ಅಷ್ಟಮಿ ಚಂದಿರನು ಅರ್ಥ ಬಿಟ್ಟು ಅರ್ಥ ತಿಂದ ಹಾಗೆ ಕಾಣುತ್ತಾನೆ.
೩. ಹುಣ್ಣಿವೆ ಚಂದಿರನ ಬೆಳದಿಂಗಳು ಹೇಗಿದೆ?
ಉ: ಹುಣ್ಣಿಮೆ ಚಂದಿರನ ಬೆಳದಿಂಗಳು ನಿಬಿಡ ಸಾಂದ್ರವಾಗಿದೆ.
೪. ಮಜ್ಜಿಗೆಯ ಮೇಲಿನ ಬೆಣ್ಣೆ ಮುದ್ದೆ ಯಾರು?
ಉ: ಮಜ್ಜಿಗೆಯ ಮೇಲಿನ ಬೆಣ್ಣೆ ಮುದ್ದೆ ಹುಣ್ಣಿಮೆಯ ಚಂದ್ರ.
೫. ದ ರಾ ಬೇಂದ್ರೆಯವರ ಕಾವ್ಯನಾಮ ಯಾವುದು?
ಉ: ದ ರಾ ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ.

ಊ. ಪದ್ಯಭಾಗ ಪೂರ್ಣಗೊಳಿಸಿರಿ. (Complete the poem)

ಅಷ್ಟಮಿ ಚಂದಿರನು ಬಂದ
ಅರ್ಧ ಬಿಟ್ಟು ಅರ್ಧ ತಿಂದ
ಉಂಡಿ ಚೆಲ್ಲಿ ಕೊಟ್ಟನಿಲ್ಲಿ
ಹುಡುಗನಾವನು?
ಕಾಣೆ ಅತ್ತ ಇತ್ತ ಎತ್ತು ಅವನ
ಠಾವನು

ಋ. ಸ್ವಂತ ವಾಕ್ಯ ರಚಿಸಿರಿ (Write your own sentence)

ಚಂದಿರ: ಹುಣ್ಣಿಮೆಯ ಚಂದಿರ ಬೆಣ್ಣೆಮುದ್ದೆ.
ಬೆಳದಿಂಗಳು: ಬೆಳದಿಂಗಳ ಊಟ ಚಂದ.
ಭೂಮಿ: ನಮ್ಮ ಭೂಮಿ ಚಂದ.
ಆಕಾಶ: ಆಕಾಶದ ಬಣ್ಣ ನೀಲಿ.
ನಕ್ಷತ್ರ: ನಕ್ಷತ್ರ ಹೊಳೆಯುತ್ತಿವೆ.

ಎ. ಕೊಟ್ಟಿರುವ ಪದಗಳ ಸರಿಯಾದ ರೂಪ ಬರೆಯಿರಿ (Correct the words)

ಉಣ್ಣಿವೆ- ಹುಣ್ಣಿವೆ              ಆಕಾಸ – ಆಕಾಶ              ಬೆನ್ನೆಮುದ್ದೆ – ಬೆಣ್ಣೆಮುದ್ದೆ

ಸಾರ್ತಕ – ಸಾರ್ಥಕ           ಅಸ್ಟಮಿ – ಅಷ್ಟಮಿ             ಆಸ್ರಯ – ಆಶ್ರಯ

ಏ. ಪದಗಳನ್ನು ಕೂಡಿಸಿ ಬರೆಯಿರಿ. (Join the words)

ಕೊಟ್ಟನು + ಇಲ್ಲಿ = ಕೊಟ್ಟನಿಲ್ಲಿ         ಮೇಲೆ + ಒಂದು = ಮೇಲೊಂದು

ಬರೆದನು + ಅಲ್ಲಿ = ಬರೆದನಿಲ್ಲಿ         ಹೇಳಲು + ಒಲ್ಲರು =   ಹೇಳಲೊಲ್ಲರು

Click here to download bidhige chandira bandha noodu exercises