Bhagyashilpigalu chapter is about “Nalvadi Krishnaraja Wodeyar IV”, also known as the “Rajarshi” or “Saintly King,” was the Maharaja of Mysore from 1894 to 1940. Bhagyashilpigalu also talks about Shri M Vishweshwaryya. Nalvadi Krishnaraja Wodeyar IV, His reign is often regarded as a golden era in the history of Mysore, marked by significant advancements in various fields. Krishnaraja Wodeyar IV was a visionary ruler prioritized education, healthcare, and infrastructure. He established numerous educational institutions, including the University of Mysore in 1916, one of India’s first universities. His focus on public health led to the establishment of hospitals and promoting sanitation, significantly improving the well-being of his subjects.

Under his rule, Mysore became one of the most progressive states in India. He introduced pioneering industrial initiatives, such as the Mysore Iron and Steel Works and the Krishnarajasagar Dam, which revolutionized agriculture and irrigation in the region. His administration also promoted arts and culture, leading to the flourishing of traditional music, dance, and literature. Krishnaraja Wodeyar IV was deeply committed to social welfare, championing causes like women’s education and the upliftment of the downtrodden. His reign is remembered for its emphasis on modern governance, cultural patronage, and the welfare of the people, making him one of India’s most respected and beloved monarchs.

“ರಾಜರ್ಷಿ” ಅಥವಾ “ಸಂತ ರಾಜ” ಎಂದೂ ಕರೆಯಲ್ಪಡುವ ನಾಲ್ವಡಿ ಕೃಷ್ಣರಾಜ ಒಡೆಯರ್ IV, 1894 ರಿಂದ 1940 ರವರೆಗೆ ಮೈಸೂರಿನ ಮಹಾರಾಜರಾಗಿದ್ದರು. ಅವರ ಆಳ್ವಿಕೆಯನ್ನು ಮೈಸೂರಿನ ಇತಿಹಾಸದಲ್ಲಿ ಸುವರ್ಣ ಯುಗವೆಂದು ಪರಿಗಣಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಲಾಗಿದೆ. ಕೃಷ್ಣರಾಜ ಒಡೆಯರ್ IV ಅವರು ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡಿದರು. ಅವರು 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರ. ಇದು ಭಾರತದ ಮೊದಲ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಅವರ ಗಮನವು ಆಸ್ಪತ್ರೆಗಳ ಸ್ಥಾಪನೆಗೆ ಕಾರಣವಾಯಿತು. ಅವರ ಪ್ರಜೆಗಳ ಯೋಗಕ್ಷೇಮವನ್ನು ಗಮನಾರ್ಹವಾಗಿ ಸುಧಾರಿಸಿತು.

ಅವರ ಆಳ್ವಿಕೆಯಲ್ಲಿ, ಮೈಸೂರು ಭಾರತದ ಅತ್ಯಂತ ಪ್ರಗತಿಶೀಲ ರಾಜ್ಯಗಳಲ್ಲಿ ಒಂದಾಯಿತು. ಅವರು ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕೆಲಸಗಳು ಮತ್ತು ಕೃಷ್ಣರಾಜಸಾಗರ ಅಣೆಕಟ್ಟಿನಂತಹ ಪ್ರವರ್ತಕ ಕೈಗಾರಿಕಾ ಉಪಕ್ರಮಗಳನ್ನು ಪರಿಚಯಿಸಿದರು, ಇದು ಈ ಪ್ರದೇಶದಲ್ಲಿ ಕೃಷಿ ಮತ್ತು ನೀರಾವರಿಯಲ್ಲಿ ಕ್ರಾಂತಿಯನ್ನುಂಟುಮಾಡಿತು. ಅವರ ಆಡಳಿತವು ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಿತು, ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ಸಾಹಿತ್ಯದ ಏಳಿಗೆಗೆ ಕಾರಣವಾಯಿತು. ಕೃಷ್ಣರಾಜ ಒಡೆಯರ್ IV ಅವರು ಸಾಮಾಜಿಕ ಕಲ್ಯಾಣಕ್ಕಾಗಿ ಆಳವಾಗಿ ಬದ್ಧರಾಗಿದ್ದರು, ಮಹಿಳಾ ಶಿಕ್ಷಣ ಮತ್ತು ದೀನದಲಿತರ ಉನ್ನತಿಗಾಗಿ ಶ್ರಮಿಸಿದರು. ಆಧುನಿಕ ಆಡಳಿತ, ಸಾಂಸ್ಕೃತಿಕ ಪ್ರೋತ್ಸಾಹ ಮತ್ತು ಜನರ ಕಲ್ಯಾಣಕ್ಕೆ ಒತ್ತು ನೀಡಿದ್ದಕ್ಕಾಗಿ ಅವರ ಆಳ್ವಿಕೆಯನ್ನು ನೆನಪಿಸಿಕೊಳ್ಳಲಾಗುತ್ತದೆ, ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ರಾಜರಲ್ಲಿ ಒಬ್ಬರನ್ನಾಗಿ ಮಾಡಿದೆ.

Sir M. Visvesvaraya, a pioneering engineer and statesman, is best known for designing the Krishnarajasagar Dam, which revolutionized irrigation in Karnataka. He also introduced modern water supply and drainage systems in Hyderabad and Mysore. His contributions to industrialization and education earned him the “Bharat Ratna”, India’s highest civilian award, in 1955.

ಸರ್ ಎಂ.ವಿಶ್ವೇಶ್ವರಯ್ಯ ಅವರು ಕರ್ನಾಟಕದಲ್ಲಿ ನೀರಾವರಿ ಕ್ರಾಂತಿಯನ್ನು ಮಾಡಿದ ಕೃಷ್ಣರಾಜಸಾಗರ ಅಣೆಕಟ್ಟಿನ ವಿನ್ಯಾಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಹೈದರಾಬಾದ್ ಮತ್ತು ಮೈಸೂರಿನಲ್ಲಿ ಆಧುನಿಕ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಪರಿಚಯಿಸಿದರು. ಕೈಗಾರಿಕೀಕರಣ ಮತ್ತು ಶಿಕ್ಷಣಕ್ಕೆ ಅವರ ಕೊಡುಗೆಗಳು ಅವರಿಗೆ 1955 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ವನ್ನು ತಂದುಕೊಟ್ಟಿತು.

ಭಾಗ್ಯಶಿಲ್ಪಿಗಳು

ಅಭ್ಯಾಸ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. (Answer the given questions in one sentence each.

೧. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ಉ. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರು.
೨. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣ ಬದ್ಧರಾದರು?
ಉ. ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದರು.
೩. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?
ಉ. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ವಾಣಿವಿಲಾಸ ಸಾಗರ.
೪. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು ?
ಉ. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.
೫. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
ಉ. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು.
೬. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ?
ಉ: ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ʼಎಂಜನಿಯರ್  ದಿನಾಚರಣೆʼಯನ್ನು ಆಚರಿಸಲಾಗುತ್ತಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the given questions in three to four sentences)

೧. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.
೨. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ಉ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಾಣಿವಿಲಾಸ ಸಾಗರ ಅಥವಾ ಮಾರಿ ಕಣಿವೆ, ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ, ಕೃಷ್ಣರಾಜಸಾಗರ ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ ಹೀಗೆ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು.
೩. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
ಉ: ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆ ಜನ್ಮ ಸಿದ್ಧ ಹಕ್ಕಾಗಬೇಕು” ಎಂದು ಹೇಳಿದರು.
೪. ನೆಹರು ಅವರು ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ?
ಉ: “ ದುರದೃಷ್ಟವಶಾತ್  ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ. ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ನೆಹರು ಅವರು ಸರ್. ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಹೇಳಿದ್ದಾರೆ.
೫. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
ಉ: ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳು ಹೀಗಿವೆ: ೧೯೧೩ರಲ್ಲಿ ಮೈಸೂರು ಬ್ಯಾಂಕ್ ಅನ್ನು ಸ್ಥಾಪಿಸಿದರು. ಅನಂತರ ಉಳಿತಾಯ ಬ್ಯಾಂಕುಗಳನ್ನು ಆರಂಭಿಸಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಪ್ರಾರಂಭಿಸಿದರು. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲ ತೆಗೆದುಕೊಳ್ಳಲು ಸಹಕಾರಿ ಬ್ಯಾಂಕುಗಳನ್ನು ಆರಂಭಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the given questions in eight to ten sentences)

೧. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ʼಮಾದರಿ ಮೈಸೂರು ರಾಜ್ಯʼ ಹೇಗಾಯಿತು?
೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ಕೃಷ್ಣರಾಜ ಒಡೆಯರ್ ಅವರು ನೋಡಿಕೊಂಡರು. ಅವರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ಇವರು ಪ್ರಜಾಪ್ರತಿನಿಧಿ ಸಭೆ ಆರಂಭಿಸಿ ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದರು. ಇದನ್ನು ವರ್ಷಕ್ಕೆ ಎರಡು ಬಾರಿ ಜೂನ್ ೧, ಮಹಾರಾಜರ ವರ್ಧಂತಿ ಅಕ್ಟೋಬರ್ ೨, ದಸರಾ ಮಹೋತ್ಸವ ಸಮಾವೇಶಗಳಲ್ಲಿ ಕಲಾಪಗಳನ್ನು ನಡೆಸುತ್ತಿದ್ದರು. ಅಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು ಮುಂತಾದ ಸಂಸದೀಯ ಮಾದರಿಯ ನಡವಳಿಕೆ ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು.

ನಾಲ್ವಡಿ ಕೃಷ್ಣರಾಜರು ೧೯೦೭ರಲ್ಲಿ ನ್ಯಾಯ ವಿದಾಯಕ ಸಭೆಯನ್ನು ಸ್ಥಾಪಿಸಿದರು. ಇದರ ಸದಸ್ಯರ ಸಂಖ್ಯೆ ೫೦. ಈ ಸಂಸ್ಥೆ ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು. ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲಾ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿತ್ತು. ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಈ ಸಭೆಯ ಅನುಮತಿ ಬೇಕಿತ್ತು. ಈ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಾಣಿವಿಲಾಸ ಸಾಗರ ಅಥವಾ ಮಾರಿ ಕಣಿವೆ, ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ, ಕೃಷ್ಣರಾಜಸಾಗರ ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ ಹೀಗೆ ಹಲವು ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು.

ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣವನ್ನು ಮಾಡಿದರು. ನಗರ ಪಾಲಿಕೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಕೆಲಸವನ್ನು ಮಾಡಲು ಆರಂಭಿಸಿದವು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.

ಸಂಗೀತ, ಸಾಹಿತ್ಯ, ವಾಸ್ತುಶಿಲ್ಪಗಳ ಅಭಿವೃದ್ಧಿಯನ್ನು ಮಾಡಿದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಮೈಸೂರು, ಅರಿಸಿಕೆರೆ, ಬೆಂಗಳೂರು – ಚಿಕ್ಕಬಳ್ಳಾಪುರ, ಚಿಕ್ಕಜಾಜೂರು- ಚಿತ್ರದುರ್ಗ, ನಂಜನಗೂಡು-ಚಾಮರಾಜನಗರ, ತರಿಕೆರೆ-ಶಿವಮೊಗ್ಗ-ಆನಂದಪುರ ಈ ಎಲ್ಲಾ ರೈಲಿನ ಮಾರ್ಗಗಳನ್ನು ೧೯೩೧ರ ವೇಳೆಗೆ ಪೂರೈಸಿದರು.

ಹೀಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ʼಮಾದರಿ ಮೈಸೂರು ರಾಜ್ಯʼವಾಯಿತು.

೨. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
ಉ: ವಿಶ್ವೇಶ್ವರಯ್ಯನವರು ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು.
ವಿಶ್ವೇಶ್ವರಯ್ಯನವರು ೧೯೧೩ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಅವರು ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್‌ ವಿಶ್ವವಿದ್ಯಾನಿಲಯದ ನಿಯಂತ್ರಣದಿಂದ ಹೊರಗೆ ತಂದರು. ಇದನ್ನು ಮೈಸೂರು ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ಆರ್ಥಿಕ ಶರತ್ತಿನ ಮೂಲಕ ನಡೆಸುವ ಯೋಜನೆಯನ್ನು ತಂದರು. ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.
ವಿಶ್ವೇಶ್ವರಯ್ಯನವರು ಕೈಗಾರಿಕೆಗೆ ಅಗ್ರ ಪ್ರಶಸ್ತಿ ನೀಡಿದ್ದರು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಿದರು. ಹೆಂಚಿನ ಕಾರ್ಖಾನೆ, ಮೂಳೆ ಮತ್ತು ಗೊಬ್ಬರ ತಯಾರಿಕಾ ಸ್ಥಾವರ, ಸಕ್ಕರೆ ಕಾರ್ಖಾನೆ, ಔಷಧಿ ತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದ ಕಾರ್ಖಾನೆಗಳನ್ನು ಸ್ಥಾಪಿಸಿದರು. ಸೋಪು ಹಾಗೂ ಲೋಹ ತಯಾರಿಕೆ, ಕಲೆ ಮತ್ತು ಕರಕುಶಲ ಡಿಪೋ, ಕೃಷ್ಣರಾಜೇಂದ್ರ ಬಟ್ಟೆ ಗಿರಣಿ, ಕಾಗದದ ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತು ಪಿಠೋಪಕರಣಗಳ ತಯಾರಿಕಾ ಘಟಕಗಳು ಹೀಗೆ ಹಲವು ಕೈಗಾರಿಕೆಗಳನ್ನು ಆರಂಭಿಸಿದರು.
ವಿಶ್ವೇಶ್ವರಯ್ಯನವರು ರಾಜ್ಯದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು. ಅವರು ೧೯೧೩ರಲ್ಲಿ ಮೈಸೂರು ಬ್ಯಾಂಕ್ ನ್ನು ಸ್ಥಾಪಿಸಿದರು. ಉಳಿತಾಯ ಬ್ಯಾಂಕುಗಳನ್ನು ಸ್ಥಾಪಿಸಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಪ್ರಾರಂಭಿಸಿದರು. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲ ತೆಗೆದುಕೊಳ್ಳಲು ಸಹಕಾರಿ ಬ್ಯಾಂಕುಗಳನ್ನು ಆರಂಭಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದರು. ಅವರು ರಾಜ್ಯದ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು. ಹೀಗೆ ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸೇವೆಯನ್ನು ಸಲ್ಲಿಸಿದರು.

೩. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
ಉ: ವಿಶ್ವೇಶ್ವರಯ್ಯನವರು ಆಧುನಿಕ ಶಿಕ್ಷಣವು ಎಲ್ಲ ಸಮಸ್ಯೆಗಳಿಗೂ ಪರಿಹಾರವೆಂದು ನಂಬಿದ್ದರು. ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ವಿಶ್ವೇಶ್ವರಯ್ಯನವರು ೧೯೧೩ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು. ಅವರು ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್‌ ವಿಶ್ವವಿದ್ಯಾನಿಲಯದ ನಿಯಂತ್ರಣದಿಂದ ಹೊರಗೆ ತಂದರು. ಇದನ್ನು ಮೈಸೂರು ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ಆರ್ಥಿಕ ಶರತ್ತಿನ ಮೂಲಕ ನಡೆಸುವ ಯೋಜನೆಯನ್ನು ತಂದರು. ವಿಶ್ವೇಶ್ವರಯ್ಯನವರು “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ರಾಜ್ಯದಲ್ಲಿ ಎಲ್ಲರ ಜನ್ಮಸಿದ್ದ ಹಕ್ಕಾಗಬೇಕು” ಎಂದು ನಂಬಿದ್ದರು. ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿರಿ. (Explain taste with context)

೧. “ಸಾಮಾಜಿಕ ಕಾನೂನುಗಳ ಹರಿಕಾರ”
ಆಯ್ಕೆ: ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಪಾಠ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿ ಮಾಡಿದರು. ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ, ಗೆಜ್ಜೆಪೂಜೆ ಪದ್ಧತಿ ನಿರ್ಮೂಲನೆ, ವೈಶ್ಯಾವೃತ್ತಿ ತಡೆಗಟ್ಟುವ ಕಾಯಿದೆ, ವಿಧವಾ ಮರು ವಿವಾಹ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ ಹೀಗೆ ಹಲವಾರು ಕಾನೂನುಗಳನ್ನು ಜಾರಿಗೊಳಿಸಿ ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದರು.
ಸ್ವಾರಸ್ಯ:
ಒಳ್ಳೆಯ ಸಮಾಜಕ್ಕಾಗಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಕಾನೂನುಗಳು
ಅವರನ್ನು “ಸಾಮಾಜಿಕ ಕಾನೂನುಗಳ ಹರಿಕಾರ” ಎಂಬ ಹೆಸರು ತಂದುಕೊಟ್ಟಿದ್ದು ಇಲ್ಲಿನ ಸ್ವಾರಸ್ಯವಾಗಿದೆ.

೨. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು”
ಆಯ್ಕೆ: ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ಪುನಾದ ಮುಖ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲುಗಳನ್ನು ವಿಶ್ವೇಶ್ವರಯ್ಯನವರು ಅಳವಡಿಸಿದ್ದರು. ಸ್ವಯಂ ಚಾಲಿತ ಬಾಗಿಲುಗಳ ಅನ್ವೇಷಣೆ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು ಎಂಬ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ವಿಶ್ವೇಶ್ವರಯ್ಯನವರಲ್ಲಿದ್ದ ಅನ್ವೇಷಣಾ ಸಾಮರ್ಥ್ಯವನ್ನು ಇಲ್ಲಿ ಸ್ವಾರಸ್ಯ ಪೂರ್ಣವಾಗಿ ಹೇಳಲಾಗಿದೆ.

೩. “ಮೈಸೂರು ಸಂಸ್ಥಾನಕ್ಕೆ ʼಮಾದರಿ ಮೈಸೂರುʼ ಎಂಬ ಕೀರ್ತಿ ಪ್ರಾಪ್ತವಾಯಿತು”
ಆಯ್ಕೆ: ಈ ವಾಕ್ಯವನ್ನು “ಭಾಗ್ಯಶಿಲ್ಪಿಗಳು” ಪಾಠದ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿರುವ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಪಾಠ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ಕೃಷ್ಣರಾಜ ಒಡೆಯರ್ ಅವರು ನೋಡಿಕೊಂಡರು. ಅವರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಹೀಗೆ ಮೈಸೂರು ಸಂಸ್ಥಾನದ ಅಭಿವೃದ್ದಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
ಸ್ವಾರಸ್ಯ: ನಾಲ್ವಡಿ ಕೃಷ್ಣರಾಜ ಒಡೆಯರು ದೂರದೃಷ್ಟಿ ಹಾಗೂ ಅಭಿವೃದ್ಧಿಯ ಆಡಳಿತದ ಸ್ವಾರಸ್ಯವನ್ನು ಇಲ್ಲಿ ಹೇಳಲಾಗಿದೆ.

೪. “ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ”
ಆಯ್ಕೆ:
ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು” ಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ:  ದುರದೃಷ್ಟವಶಾತ್  ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ. ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ನೆಹರುರವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು.
ಸ್ವಾರಸ್ಯ: ಸರ್ ಎಂ ವಿಶ್ವೇಶ್ವರಯ್ಯನವರ ಅಘಾತ ಸೇವೆ ಕರ್ತವ್ಯ ನಿಷ್ಠೆ ಭಾರತದ ಗಮನ ಸೆಳೆದಿತ್ತು ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.

ಉ) ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ. (Fill in the blanks with the correct word)

೧. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರೀಜೆಂಟರಾಗಿ ಕಾರ್ಯ ನಿರ್ವಹಿಸಿದವರು ಮಹಾರಾಣಿ ವಾಣಿ ವಿಲಾಸ್ ರವರು.
೨. ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧವಾಯಿತು.
೩. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು.
೪. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್‌ ಸಂಡ್‌ ಹಸ್ಟ್ರ್  ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು.
೫. ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ ʼಭಾರತ ರತ್ನʼ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳ ತತ್ಸಮ ತದ್ಭವ ಬರೆಯಿರಿ. (Write the equivalent of the given words.

ವಂಶ = ಬಂಚ, ಸ್ಥಾನ = ತಾಣ, ಯಶ = ಜಸ, ಪಟ್ಟಣ = ಪತ್ತನ, ಕಾರ್ಯ = ಕಜ್ಜ

೨. ನೀಡಿರುವ ಪದಗಳಲ್ಲಿ ಅನ್ಯ ದೇಶ ಪದಗಳನ್ನು ಆರಿಸಿ ಬರೆಯಿರಿ. (Choose and write foreign words from the given words)

 ಡಿಪ್ಲೋಮಾ, ದಿವಾನ, ಪ್ರೌಢ, ಶಿಕ್ಷಣ, ನಡೆಸು, ಸೋಪು, ಕಾರ್ಖಾನೆ, ಕಾಗದ, ಕಚೇರಿ

ಅನ್ಯ ದೇಶ ಪದಡಿಪ್ಲೋಮಾ, ದಿವಾನ, ಸೋಪು, ಕಚೇರಿ

೩.ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. (Explain and write the meaning of the given proverbs)

೧. ಕೂಡಿ ಬಾಳಿದರೆ ಸ್ವರ್ಗ ಸುಖ.

ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು.

ಕೂಡಿ ಬಾಳುವುದು ಎಂದರೆ ಒಗ್ಗಟ್ಟಾಗಿ ದ್ವೇಷ, ಜಗಳಗಳು ಇಲ್ಲದೆ ಒಟ್ಟಿಗೆ ಬಾಳುವುದು. ಕೂಡಿ ಬಾಳುವುದು ಅಂದರೆ ಬರೀ ಮನೆಯ ಕುಟುಂಬಕ್ಕೆ ಮಾತ್ರ ಅಲ್ಲದೇ, ನಮ್ಮ ಊರಲ್ಲಿ, ದೇಶದಲ್ಲಿ, ಸಮಾಜದಲ್ಲಿ ಕೂಡ ಒಗ್ಗಟ್ಟಾಗಿರಬೇಕು. ಮನೆಯೇ ಮೊದಲ ಪಾಠ ಶಾಲೆ, ಹಾಗೆ ಮನೆಯಲ್ಲಿ ನಾವು ಕೂಡಿ ಬಾಳಿ ಒಟ್ಟಿಗೆ ಬಾಳಿದರೆ ಸಮಾಜದಲ್ಲಿ, ಊರಿನಲ್ಲಿ, ದೇಶದಲ್ಲಿ ಕೂಡಿ ಬಾಳುವ ನಿಯಮ ಪಾಲನೆ, ಶಿಸ್ತು ಪಾಲಿಸಲು ಸುಲಭ. ನಾವು ಮನೆಯಲ್ಲಿ ಕೂಡಿಬಾಳಿದರೆ, ನಮ್ಮಲ್ಲಿ ಕೌಟುಂಬಿಕ ಬಾಂಧವ್ಯ ಹೆಚ್ಚಾಗಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇದರಿಂದ ನಮ್ಮಲ್ಲಿ ಒಡಕು ಕೆಡಕು ಇಲ್ಲದೇ, ಆರ್ಥಿಕ ಸಮಸ್ಯೆಯು ಇರುವುದಿಲ್ಲ.
ಜಾತಿ,ಮತ, ಪರಸ್ಪರ ಅಸೂಯೆ, ಹಗೆತನ, ಹೊಡೆದಾಟ, ಅಶಾಂತಿ, ಅಸಮಧಾನವನ್ನು ಬಿಟ್ಟು ನಾವೆಲ್ಲ ಬಂಧುಬಾಂಧವರಾಗಿ ಒಂದೇ ತಾಯಿ ಮಕ್ಕಳಂತೆ ಭಾರತದಲ್ಲಿ ಕೂಡಿ ಇರಬೇಕು. ಹೀಗಿದ್ದಲ್ಲಿ ಮಾತ್ರ ನೆಮ್ಮದಿ ಸಾಧ್ಯ.

೨. ಮಾತೆ ಮುತ್ತು ಮಾತೆ ಮೃತ್ಯು.
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು.

ಮನುಷ್ಯನಿಗೂ ಪ್ರಾಣಿಗಳಿಗೂ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಮನುಷ್ಯನು ಮಾತನಾಡಬಲ್ಲನು. ಮನುಷ್ಯನು ಆಡುವ ಮಾತು ಮುತ್ತಾಗಿರಬಹುದು ಅಥವಾ ಅದು ಅವನಿಗೆ ಮೃತ್ಯು ಆಗಬಹುದು. ನಮ್ಮ  ಮಾತಿನ ಮೇಲೆ ನಮಗೆ ಹಿಡಿತ ಇರಬೇಕು‌. ಏಕೆಂದರೆ ನಾವು ಆಡುವ ಮಾತಿಂದ ಕೆಲವರ ಮನಸ್ಸಿಗೆ ನೋವಾಗಬಹುದು.. ಕೆಲವರಿಗೆ ಕಿರಿಕಿರಿ ಆಗಬಹುದು. ನಾವಾಡುವ ಮಾತಿಂದ ಇನ್ನು ಕೆಲವರಿಗೆ ಕೋಪ ಬಂದು ಹಿಡಿತ ತಪ್ಪಿ ಇಬ್ಬರ ಮಧ್ಯೆ ಜಗಳವಾಗಬಹುದು. ಆದ್ದರಿಂದ ನಾವಾಡುವ ಮಾತಿನ ಮೇಲೆ ನಮಗೆ ನಿಗಾ ಇರುವುದು ಒಳ್ಳೆಯದು. ಹಾಗಾಗಿ ಮಾತೆ ಮುತ್ತು ಮಾತೆ ಮೃತ್ಯು.

Click here to download bagyasilpigalu exercise