Halagali beedaru is a chapter for 10th graders. In 1857, the British passed the Disarming Act to control the ownership of weapons. Under this law, all arms had to be handed over and would only be returned if the government issued a license. However, it was well known that no Indian ever received their weapons back.
Despite knowing the British had the power to defeat them, the Halagali beedaru refused to surrender their weapons. This led to a clash on November 29, 1857, between the villagers and the British army. Outnumbered, the Bedas fought back bravely, using their homes as shelters.
In response, Colonel Malcolm ordered the houses to be set on fire, hoping to force the Bedas out. Even as their homes burned, the Bedas chose to stay inside, preferring to die in the flames rather than be captured. Those who survived were later tried for treason and sentenced to death, showcasing the community’s courage and unwavering spirit.
ಹಲಗಲಿ ಬೇಡರು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು?
೨. ಹಲಗಲಿಯ ನಾಲ್ವರು ಪ್ರಮುಖರು ಯಾರು?
೩. ಹಲಗಲಿ ಗುರುತು ಉಳಿಯದಂತದು ಏಕೆ?
೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
೫. ಹಲಗಲಿ ಗ್ರಾಮ ಎಲ್ಲಿದೆ?
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentence)
೧. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು?
೨. ಹಲಗಲಿಗೆ ದಂಡು ಬರಲು ಕಾರಣವೇನು?
೩. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
೪. ಲಾವಣಿಗಳನ್ನು ಏಕೆ ವೀರ ಗೀತೆಗಳು ಎನ್ನಲಾಗಿದೆ?
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ. (Answer the following in eight – ten sentence)
೧. ಹಲಗಲಿ ದಂಗೆಗೆ ಕಾರಣವೇನು?
೨. ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?
೩. ಹಲಗಲಿ ದಂಗೆಯ ಪರಿಣಾಮವೇನು?
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿರಿ. ( Explain the context)
೧. “ಎಲ್ಲಾ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ”
೨. “ಜೀವ ಸತ್ತು ಹೋಗುವದು ಗೊತ್ತಾ”
೩. “ಹೊಡೆದರೂ ಗುಂಡ ಕರುಣೆ ಇಲ್ಲದಂಗ”
೪. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು”
ಉ) ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ………………………….
೨. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ …………………………………
೩. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ………………………………….
೪. ಲಾವಣಿಕಾರ ಅಂಕಿತಗೊಳಿಸಿರುವ ದೈವ ……………………………
೫. ʼವಿಲಾತಿʼ ಪದದ ಸರಿಯಾದ ರೂಪ …………………………………….
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
ಮುಂಗೈ, ನಡುರಾತ್ರಿ, ಹನುಮಭೀಮರಾಮ, ಮೋಸ ಮಾಡು
೨. ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.
ಹೀಂಗ, ಮ್ಯಾಗ, ಕಳುವ್ಯಾರೆ, ಇಲ್ಲದಂಗ, ಇಸವಾಸ, ಸಕಾರಿ
೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.
“ಒಳಗಿನ ಮಂದಿ ಗುಂಡು ಹೊಡೆದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ”
“ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾವ”
೪. ಸ್ವಂತ ವಾಕ್ಯದಲ್ಲಿ ಬಳಸಿ.
ಒಳಗಿಂದೊಳಗೆ, ಸುದ್ದಿ, ಮಂದಿ, ಕಸರತ್ತು
೫. ದೇಶ ಅನ್ಯ ದೇಶ ಪದಗಳನ್ನು ಆರಿಸಿ ಬರೆಯಿರಿ.
ಹೊತ್ತು, ಹತಾರ, ಮಸಲತ್ತ, ಬಂಟರು, ಹುಕುಮ, ಮುಂಗೈ ಸಾಹೇಬ, ಕಾರಕೂನ, ಸಿಪಾಯಿ, ಮುಂಗಾರು, ಕಬುಲ