Hemanta poem 9th grade is written by Dr. S. V. Parameshwar Bhatt. He is a very important Kannada poet. He was a contemporary of Kuvempu, Bendre, Pu Ti Na. Parameshwar Bhatt influenced all his poems very strongly. Many poems of Parameshwar Bhatt are popular. His poem “Deep Hatcha” resonates in the hearts of Kannadigas every Deepavali. “In the Hemanta poem, Parameshwara Bhatt has captured the scenes of nature during the Hemantha season in a touching way. At this time it is winter for the Northern Hemisphere.
As in North India, this is the season of heavy snowfall. At this time, nature is in awe. Birds reduce flight. Trees lose their leaves and become bald. It becomes difficult for wild animals to get food. Many animals slip into a state of neutrality. So nature does not want Hemant? In this poem Hemanta, the poet discusses how to prepare for the Hemant season. Hemantana bows to this harsh edict and says in the end that creation is the inner self that preserves itself. The wish of the poem is that it is nature’s nature to change itself according to the seasons and time. We can apply this poem to our lives as well. Man’s life is not always a spring season of celebration. Sometimes difficulties come in life. A man’s life is subjected to severe trials. Then he should not follow the fate. Difficulties should be overcome. One should live with the hope that spring will come one day. The feeling of the poem is that even though nature seems to be inert in the Hemanta season, it springs forth and sighs when the new season comes, so man should also wait for the new season, the new sunshine, and accept the hardships and pleasures as natural.
ಆಶಯ ಭಾವ
ಡಾ . ಎಸ್ . ವಿ . ಪರಮೇಶ್ವರ ಭಟ್ಟರು ಕನ್ನಡದ ಬಹುಮುಖ್ಯ ಕವಿ. ಇವರು ಕುವೆಂಪು , ಬೇಂದ್ರೆ , ಪುತಿನ ಮುಂತಾದವರ ಸಮಕಾಲೀನರು. ಅವರೆಲ್ಲರ ಕಾವ್ಯಗಳನ್ನು ಬಹಳ ತೀವ್ರವಾಗಿ ಪ್ರಭಾವಿಸಿದವರು. ಎಸ್ . ವಿ . ಪರಮೇಶ್ವರ ಭಟ್ಟರ ಅನೇಕ ಕವಿತೆಗಳು ಜನಮಾನಸದಲ್ಲಿ ನಿಂತಿವೆ . ಅವರ “ ದೀಪ ಹಚ್ಚಾ * ಎಂಬ ಕವಿತೆಯಂತೂ ಪ್ರತಿ ದೀಪಾವಳಿಯ ಸಮಯದಲ್ಲಿ ಕನ್ನಡಿಗರ ಮನೆಮನಗಳಲ್ಲಿ ನಲಿದಾಡುತ್ತದೆ. “ ಹೇಮಂತ ಕವಿತೆಯಲ್ಲಿ ಪರಮೇಶ್ವರ ಭಟ್ಟರು ಹೇಮಂತ ಋತುವಿನಲ್ಲಿ ಪ್ರಕೃತಿಯಲ್ಲಿ ಕಂಡುಬರುವ ದೃಶ್ಯಗಳನ್ನು ಮನಮುಟ್ಟುವಂತೆ ಸೆರೆಹಿಡಿದಿದ್ದಾರ . ಈ ಸಮಯದಲ್ಲಿ ಉತ್ತರ ಗೋಳಾರ್ಧಕ್ಕೆ ಚಳಿಗಾಲ. ಉತ್ತರ ಭಾರತದಲ್ಲಂತೂ ಈ ಸಮಯದಲ್ಲಿ ತೀವ್ರವಾದ ಮಂಜುಬೀಳುವ ಕಾಲ. ಪ್ರಕೃತಿ ಈ ಸಮಯದಲ್ಲಿ ಮೈಮುದುರಿ ಕೂರುತ್ತದೆ. ಹಕ್ಕಿಗಳು ಹಾರಾಟವನ್ನು ಕಡಿಮೆ ಮಾಡುತ್ತವೆ. ವೃಕ್ಷಗಳು ಎಲೆಗಳನ್ನುದುರಿಸಿ ಬೋಳಾಗಿ ನಿಲ್ಲುತ್ತವೆ. ಕಾಡುಪ್ರಾಣಿಗಳಿಗೆ ಆಹಾರ ಸಿಗುವುದು ಕಷ್ಟವಾಗುತ್ತದೆ. ಎಷ್ಟೋ ಪ್ರಾಣಿಗಳು ತಟಸ್ಥಾವಸ್ಥೆಗೆ ಜಾರುತ್ತವೆ. ಹಾಗಾದರೆ ಪ್ರಕೃತಿಗೆ ಹೇಮಂತ ಬೇಡವೆ ? ಹೇಮಂತ ಋತುವನ್ನು ಎದುರುಗೊಳ್ಳುವ ಬಗೆಯೆಂತು ಎಂಬುದನ್ನು ಕವಿ ಈ ಕವಿತೆಯಲ್ಲಿ ಚರ್ಚಿಸುತ್ತಾರೆ. ಹೇಮಂತನ ಈ ಕಠಿಣ ಶಾಸನಕ್ಕೆ ತಲೆಬಾಗುವುದೆ ಸೃಷ್ಟಿಯು ತನ್ನನ್ನು ಉಳಿಸಿಕೊಳ್ಳುವ ಒಳಮರ್ಮ ಎಂದು ಕೊನೆಯಲ್ಲಿ ಹೇಳುತ್ತಾರೆ. ಋತುಗಳಿಗೆ ತಕ್ಕಂತೆ , ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವುದೇ ಪ್ರಕೃತಿಯ ಸಹಜಧರ್ಮ ಎಂಬ ಆಶಯ ಕವಿತೆಯದು. ಈ ಕವಿತೆಯನ್ನು ನಮ್ಮ ಜೀವನಗಳಿಗೂ ನಾವು ಅನ್ವಯಿಸಿಕೊಳ್ಳಬಹುದು . ಮನುಷ್ಯನ ಬದುಕೆಂಬುದು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕಷ್ಟನಷ್ಟಗಳು ಬರುತ್ತವೆ. ಮನುಷ್ಯನ ಬದುಕು ತೀವ್ರ ಪರೀಕ್ಷೆಗಳಿಗೊಳಗಾಗುತ್ತದೆ . ಆಗ ಆತ ವಿಧಿಯನ್ನು ಹಳಿಯಬಾರದು. ಬಂದಿರುವ ಕಷ್ಟಗಳನ್ನು ಸೈರಿಸಬೇಕ . ಮುಂದೊಂದು ದಿನ ವಸಂತವು ಬಂದೇ ಬರುವುದೆಂಬ ಭರವಸೆಯಿಂದ ಬಾಳನ್ನು ಬಾಳಬೇಕು. ಹೇಮಂತ ಋತುವಿನಲ್ಲಿ ಪ್ರಕೃತಿ ಜಡವಾಗಿದ್ದಂತೆ ಕಂಡರೂ ಮತ್ತೆ ಹೊಸ ಋತು ಬಂದಾಗ ಅದು ಚಿಗುರೊಡೆದು ನಳನಳಿಸುವಂತೆ ಮನುಷ್ಯನು ಕೂಡ ಹೊಸ ಕಾಲಕ್ಕೆ , ಹೊಸ ಬಿಸಿಲಿಗೆ ಕಾಯಬೇಕು, ಬಂದೆಲ್ಲ ಕಷ್ಟಸುಖಗಳನ್ನು ನೈಸರ್ಗಿಕ ಎಂದು ಸ್ವೀಕರಿಸಬೇಕು – ಎಂಬ ಭಾವ ಕವಿತೆಯದ್ದಾಗಿದೆ.
ಹೇಮಂತ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೇಗಿರುತ್ತವೆ?
ಉ: ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೂವು, ಹಸಿರು, ಚಿಗುರೆಲೆಗಳು ಇಲ್ಲದೆ ಬರಿದಾಗುತ್ತವೆ.
೨. ಮಂಜು ಮುಸುಕನು ಹೊದ್ದು ಮಲಗಿರುವವರು ಯಾರು?
ಉ: ಮಂಜು ಮುಸುಕನು ಹೊದ್ದು ಮಲಗಿರುವವರು ಹೊಲಗದ್ದೆಗಳು.
೩. ಕಾನನದ ಹಕ್ಕಿ ಏನು ಮಾಡುತ್ತಿದೆ?
ಉ: ಕಾನನದ ಹಕ್ಕಿ ಕಣ್ಣೀರು ಸುರಿಸುತ್ತಿವೆ.
೪. ಎತ್ತಲೂ ಕಾಣುತ್ತಿರುವ ದೃಶ್ಯ ಯಾವುದು?
ಉ:ಎತ್ತಲೂ ಕಾಣುತ್ತಿರುವ ದೃಶ್ಯ ಬಿಳಿಮಂಜು ಮತ್ತು ಹಿಮಗಾಳಿ.
೫. ಹೇಮಂತ ಋತುವಿನಲ್ಲಿ ತುಂಗೆಯ ತೊರೆ ಹೇಗೆ ಹರಿಯುತ್ತಿದೆ?
ಉ: ಹೇಮಂತ ಋತುವಿನಲ್ಲಿ ತುಂಗೆಯ ತೊರೆ ನಡುಗಿ ಮೈನೆನೆದು ಹರಿಯುತ್ತಿದೆ.
೬. ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?
ಉ: ಸೃಷ್ಟಿಯು ಹೇಮಂತ ಋತುವಿನಗೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ.
೭. ಜೀವಗಳ ಧರ್ಮ ಯಾವುದು?
ಉ: ಸಂಸ್ಕಾರ ಪಡೆಯುವುದೇ ಜೀವಗಳ ಧರ್ಮ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
೧.ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಹೇಗಿತ್ತು?
ಉ: ಹೇಮಂತನು ಬಂದಿಳಿದಾಗ ಲೋಕದ ಮರಗಿಡಗಳಲ್ಲಿ ಹೂವು, ಹಸಿರು ಇರಲಿಲ್ಲ. ಚಿಗುರೆಲೆಗಳು ಇರಲಿಲ್ಲ. ದುಂಬಿಗಳ ಧ್ವನಿಯು, ಹಕ್ಕಿಯ ಹಾಡು ಇರಲಿಲ್ಲ. ಕುಸುಮದ ಗಂಧವು ಇರಲಿಲ್ಲ.
೨. ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನು?
ಉ: ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ. ನದಿಯು ಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡಗುತ್ತಾ ಹರಿಯುತ್ತಿದೆ. ಇದು ಹೊಲಗದ್ದೆಗಳ ಮೇಲೆ ಮತ್ತು ನದಿಗಳ ಮೇಲೆ ಹೇಮಂತನು ಮಾಡಿರುವ ಪ್ರಭಾವ.
೩. ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಹೇಗಿರುತ್ತದೆ?
ಉ: ಹೇಮಂತ ಋತುವಿನಲ್ಲಿ ಮರಗಳ ಎಲೆಗಳು ಹಣ್ಣಾಗಿ ಉದುರುತ್ತವೆ. ಹೂವು, ಹಸಿರು, ಚಿಗುರೆಲೆಗಳಿಲ್ಲದೇ ಮರ ಬೋಳಾಗುತ್ತವೆ. ಮರಗಳ ಸ್ಥಿತಿ ನೋಡಿ ಕಾನನದ ಹಕ್ಕಿ ಕಣ್ಣೀರು ಸುರಿಸುತ್ತದೆ. ಹೀಗೆ ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಇರುತ್ತದೆ.
೪. ಹೇಮಂತನ ಕಠಿಣ ಶಾಸನವನ್ನು ಹೇಗೆ ಸ್ವೀಕರಿಸಬೇಕು?
ಉ: ಮನುಷ್ಯನ ಬದುಕು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕಷ್ಟ ನಷ್ಟಗಳು ಬರುತ್ತವೆ. ಆದ್ದರಿಂದ ವಿಧಿಯನ್ನು ಶಪಿಸಬಾರದು. ಹೇಮಂತನ ಕಠಿಣ ಶಾಸನವನ್ನು ಪ್ರಕೃತಿಯ ನಿಯಮ ಎಂದು ಸ್ವೀಕರಿಸಬೇಕು. ಹೊಸ ಕಾಲಕ್ಕೆ ಮನುಷ್ಯ ಕಾಯಬೇಕು.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಹೇಮಂತನ ಋತುವಿನಲ್ಲಿ ಪ್ರಕೃತಿಯು ಹೇಗಿರುತ್ತದೆ ಎಂಬುದನ್ನು ವರ್ಣಿಸಿ.
ಉ: ಹೇಮಂತ ಋತುವಿನಲ್ಲಿ ಮರಗಳ ಎಲೆಗಳು ಹಣ್ಣಾಗಿ ಉದುರುತ್ತವೆ. ಹೂವು, ಹಸಿರು, ಚಿಗುರೆಲೆಗಳಿಲ್ಲದೇ ಮರ ಬೋಳಾಗುತ್ತವೆ. ಮರಗಳ ಸ್ಥಿತಿ ನೋಡಿ ಕಾನನದ ಹಕ್ಕಿ ಕಣ್ಣೀರು ಸುರಿಸುತ್ತದೆ. ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ. ನದಿಯು ಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡಗುತ್ತಾ ಹರಿಯುತ್ತಿದೆ. ಈ ಕಾಲದಲ್ಲಿ ದುಂಬಿಗಳ ದನಿಯಿರುವುದಿಲ್ಲ. ಹಕ್ಕಿಗಳ ಹಾಡಿರುವುದಿಲ್ಲ. ಹೂವಿನ ಗಂಧವನ್ನು ತರುವ ಗಾಳಿ ಇರುವುದಿಲ್ಲ. ತಂಪಾದ ಗಾಳಿಯಲ್ಲಿ ಮಾನವನ ಜೀವ ಸೆರೆಸಿಕ್ಕಿದಂತೆ ಇರುತ್ತದೆ. ಎಲ್ಲೆಲ್ಲೂ ಬಿಳಿಮಂಜು, ಹಿಮಗಾಳಿ. ಎಷ್ಟೋ ಪ್ರಾಣಿಗಳು ಜಡಾವಸ್ಥೆಗೆ ಹೋಗುತ್ತವೆ. ಹೇಮಂತನ ಋತುವಿನಲ್ಲಿ ಪ್ರಕೃತಿಯು ಹೀಗಿರುತ್ತದೆ.
ಈ. ಈ ಕೆಳಗಿನ ವಾಕ್ಯಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.
೧. ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ
ಆಯ್ಕೆ: ಈ ಮೇಲಿನ ವಾಕ್ಯವನ್ನು ಎಸ್. ವಿ. ಪರಮೇಶ್ವರ ಭಟ್ಟರು ಬರೆದ ʼಗಗನಚುಕ್ಕಿʼ ಎಂಬ ಕವನ ಸಂಕಲನದಿಂದ ಆಯ್ದ ʼಹೇಮಂತʼ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ: ಹೇಮಂತ ಋತುವಿನ ಕಾಲದಲ್ಲಿ ಪ್ರಕೃತಿಯಲ್ಲಿ ಜಡತ್ವವು ತುಂಬಿರುತ್ತದೆ. ಮರಗಿಡಗಳು ಚಿಗುರೆಲೆಗಳನ್ನು ಕಳೆದುಕೊಂಡು ಬೋಳಾಗಿರುತ್ತದೆ ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
೨. ಸುಯ್ಯೆಲ್ಲರ ಸೂಸುತಿವೆ ನಿನ್ನ ಹಳಿದು
ಆಯ್ಕೆ: ಈ ಮೇಲಿನ ವಾಕ್ಯವನ್ನು ಎಸ್. ವಿ. ಪರಮೇಶ್ವರ ಭಟ್ಟರು ಬರೆದ ʼಗಗನಚುಕ್ಕಿʼ ಎಂಬ ಕವನ ಸಂಕಲನದಿಂದ ಆಯ್ದ ʼಹೇಮಂತʼ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ: ಹೇಮಂತ ಋತುವಿನ ಕಾಲದಲ್ಲಿ ಪ್ರಕೃತಿಯಲ್ಲಿ ಜಡತ್ವವು ತುಂಬಿರುತ್ತದೆ. ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ. ಪ್ರಕೃತಿಯ ತಟಾವಸ್ಥೆಯು ಇಲ್ಲಿಯ ಸ್ವಾರಸ್ಯವಾಗಿದೆ.
೩. ಕಣ್ಣೀರು ಸುರಿಸುತ್ತಿದೆ ಕಾನನದ ಹಕ್ಕಿ
ಆಯ್ಕೆ: ಈ ಮೇಲಿನ ವಾಕ್ಯವನ್ನು ಎಸ್. ವಿ. ಪರಮೇಶ್ವರ ಭಟ್ಟರು ಬರೆದ ʼಗಗನಚುಕ್ಕಿʼ ಎಂಬ ಕವನ ಸಂಕಲದಿಂದ ಆಯ್ದ ʼಹೇಮಂತʼ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ: ಹೇಮಂತ ಋತುವಿನಲ್ಲಿ ಮಂಜು ತುಂಬಾ ಬೀಳುತ್ತಿರುತ್ತದೆ. ಮರ ಗಿಡಗಳು ಬೋಳಾಗಿರುತ್ತದೆ. ಹಕ್ಕಿಗಳು ಹಾರುವದನ್ನು ಕಡಿಮೆ ಮಾಡಿ ಕಣ್ಣೀರನ್ನು ಸುರಿಸಿ ದುಃಖ ಪಡುತ್ತದೆ ಎನ್ನುವುದು ಇಲ್ಲಿಯ ಸ್ವಾರಸ್ಯ.
೪. ಎತ್ತಲುಂ ನಡುಗುತಿಹ ನೀರವಾಲೋಕ
ಆಯ್ಕೆ: ಈ ಮೇಲಿನ ವಾಕ್ಯವನ್ನು ಎಸ್. ವಿ. ಪರಮೇಶ್ವರ ಭಟ್ಟರು ಬರೆದ ʼಗಗನಚುಕ್ಕಿʼ ಎಂಬ ಕವನ ಸಂಕಲದಿಂದ ಆಯ್ದ ʼಹೇಮಂತʼ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ: ಹೇಮಂತ ಋತುವಿನಲ್ಲಿ ಮಂಜು ಬೀಳುತ್ತಿರುತ್ತದೆ, ಎಲ್ಲೆಲ್ಲೂ ತುಂಬಾ ಚಳಿ. ಈ ಕಾಲದಲ್ಲಿ ಪ್ರಕೃತಿಯಲ್ಲಿ ಜಡತ್ವ ಆವರಿಸಿ ನೀರವ ಮೌನ ತುಂಬಿರುತ್ತದೆ ಎಂಬುದು ಸ್ವಾರಸ್ಯವಾಗಿದೆ.
೫. ಅದಕೆ ತಲೆಬಾಗುವುದೆ ಸೃಷ್ಟಿಯೊಳಮರ್ಮ
ಆಯ್ಕೆ: ಈ ಮೇಲಿನ ವಾಕ್ಯವನ್ನು ಎಸ್. ವಿ. ಪರಮೇಶ್ವರ ಭಟ್ಟರು ಬರೆದ ʼಗಗನಚುಕ್ಕಿʼ ಎಂಬ ಕವನ ಸಂಕಲದಿಂದ ಆಯ್ದ ʼಹೇಮಂತʼ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ: ಹೇಮಂತ ಋತುವಿನ ಜಡತ್ವ ಸೃಷ್ಟಿಯ ಮರ್ಮ. ಈ ಋತುವಿನ ಕಠಿಣ ಶಾಸನಕ್ಕೆ ನಾವು ತಲೆಬಾಗಬೇಕು. ಹೊಸ ಋತುವಿಗಾಗಿ ಕಾಯಬೇಕು ಎಂಬುದು ಇಲ್ಲಿಯ ಸ್ವಾರಸ್ಯ.
ಉ. ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
೧. ಸಿಂಗರ : ಸಿಂಗಾರ :: ಮರುತ : ಮಾರುತ
೨. ಮೌನ : ಮಾತು :: ಜಡ : ಚೇತನ
೩. ಬನ : ವನ :: ಮೊಗ : ಮುಖ
೪. ಚಿಗುರಲೆ : ಲೋಪಸಂಧಿ :: ತಲೆವಾಗು : ಆದೇಶಸಂಧಿ
೫. ನೀರವ : ಮೌನ :: ಕಠಿಣ : ಕ್ಲಿಷ್ಟ
One Response