ಹಸುರು

Hasuru X grade poem is written by Kuvempu. Hasuru grade 10th poem is how the poet looks at the nature. Hasuru is a poem inspired by the sight of a green colour in nature during Navratri in the month of Ashwayuja. This is the aesthetic experience that Kuvempu had in the poetic style of Kuppalli in the highlands. Nature shows Kumpu’s close relationship with the greenery there. It can be recognized through this poem that the poet is engrossed in the greenery to the extent that the green of plant abundance extends to the fields, meadows, plains, evenings, flowers, and the sound of the birds and the sea. Hasuru poem is one of the best of Kuvempu.

‘ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ್ದ ಹಚ್ಚಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ಕವಿಶೈಲದಲ್ಲಿ ಅವರಿಗುಂಟಾದ ಸೌಂದರ್ಯಾನುಭವ. ಪ್ರಕೃತಿ, ಅಲ್ಲಿಯ ಹಸಿರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ. ಸಸ್ಯ ಸಮೃದ್ಧಿಯ ಹಸುರೆ ಆಗಸ, ಮುಗಿಲು, ಗದ್ದೆ, ಬಯಲು, ಸಂಜೆ, ಹೂಕಂಪು, ಹಕ್ಕಿಯ ದನಿ, ಕಡಲಿನವರೆಗೂ ವ್ಯಾಪಿಸುವ ಮಟ್ಟಿಗೆ ಕವಿ ಹಸುರಿನಲ್ಲಿ ತಲ್ಲೀನರಾಗಿರುವದನ್ನು ಈ ಕವನದ ಮುಖಾಂತರ ಗುರುತಿಸಬಹುದಾಗಿದೆ.

ಕುವೆಂಪು 

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ೨೯ ಡಿಸೆಂಬರ್ ೧೯೦೪ರಂದು ಜನಿಸಿದರು.

ಇವರು ಬರೆದಿರುವ ಪ್ರಮುಖ ಕೃತಿಗಳು: ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು. ನನ್ನ ದೇವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕಥೆಗಳು, ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು – ಕಾದಂಬರಿಗಳು. ರಸೋವೈಸಃ , ತಪೋನಂದನ – ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ – ಮಕ್ಕಳ ಪುಸ್ತಕಗಳು , ಜಲಗಾರ , ಯಮನ ಸೋಲು , ಬೆರಳೆ ಕೊರಳ್ – ನಾಟಕಗಳು , ನೆನಪಿನ ದೋಣಿಯಲ್ಲಿ – ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ.
ಶ್ರೀಯುತರಿಗೆ ‘ಶ್ರೀರಾಮಾಯಣ ದರ್ಶನ ‘ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೮ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ ೧೯೫೭ ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು . ಇವರಿಗೆ ೧೯೬೪ ರಲ್ಲಿ ರಾಷ್ಟ್ರಕವಿ, ೧೯೮೮ ರಲ್ಲಿ ಪಂಪ ಪ್ರಶಸ್ತಿ , ೧೯೯೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ . ಅಲ್ಲದೆ ಮೈಸೂರು , ಕರ್ನಾಟಕ , ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. ೧೯೯೨ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ . ಪ್ರಸ್ತುತ ಪದ್ಯಭಾಗವನ್ನು ಕುವೆಂಪುರವರ ‘ಪಕ್ಷಿಕಾಶಿ’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ .

ಅ)ಕೊಟ್ಟಿರುವ ಪ್ರಶ್ನೆಗಳಿಗೆ  ಒಂದು ವಾಕ್ಯದಲ್ಲಿ ಉತ್ತರಿಸಿ. 

೧. ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ? 
ಉ : ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯ ಹಸುರಿನಂತಿದೆ. 

೨. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
ಉ : ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ. 

೩. ‘ಹಸುರು‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ? 
ಉ : ‘ ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . 

೪. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ? 
ಉ : ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ ಕಂಡಿದೆ . 

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . 

೧ ) ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ? 

ಉ : ಕವಿಗೆ ನವರಾತ್ರಿಯ ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ, ನೀಲಿ ಕಪ್ಪಾದ ಸಮುದ್ರದಲ್ಲಿ, ಕವಿಯ ಹೃದಯವು ಹಸುರಾಗಿದೆ. ಆಗಸ, ಮುಗಿಲು, ಗದ್ದೆಯ ಬಯಲು, ಬೆಟ್ಟ, ಕಣಿವೆ, ಸಂಜೆಯ ಬಿಸಿಲು ಹಸುರಾಗಿ ಕಾಣಿಸುತ್ತಿದೆ.
ಕಾಡಂಚಿನ ಅಡಕೆಯ ತೋಟ , ಹೂವಿನ ಕಂಪಿನಲ್ಲಿ , ಗಾಳಿಯ ತಂಪಿನಲ್ಲಿ ಹಕ್ಕಿಯ ಧ್ವನಿಯಲ್ಲಿ, ಹೀಗೆ ಆಗಸದಿಂದ ಬಿಸಿಲವರೆಗೂ ಕವಿಗೆ ಹಸುರು ಕಾಣುತ್ತಿದೆ. 

೨ ) ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ?

ಉ : ಹಸುರಾದ ಭೂಮಿ, ಆಗಸ, ಮುಗಿಲು, ಗದ್ದೆಯ ಬಯಲು, ಬೆಟ್ಟ ಕಣಿವೆ , ಸಂಜೆಯ ಬಿಸಿಲು ಕಾಡಂಚಿನ ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಕಾಣಿಸುತ್ತವೆ.ಹೂವಿನ ಕಂಪಿನ ಹಸುರು ಮೂಗಿಗೆ, ಗಾಳಿಯ ತಂಪಿನ ಸ್ಪರ್ಷ ಚರ್ಮಕ್ಕೆ,  ಹಕ್ಕಿಯ ಕೂಗಿನ ಚಿಲಿಪಿಲಿ ಗಾನ ಕಿವಿಗೆ, ಶ್ಯಾಮಲ ಸಮುದ್ರದ ಹಸುರು ಕವಿಯ ಆತ್ಮಕ್ಕೆ ನಾಲಗೆಗೆ ರಸಪಾನ ಮಾಡಿದಂತಾಗಿದೆ.
ಹೀಗೆ ಪ್ರಕೃತಿಯ ಹಸುರು ಸಕಲ ಇಂದ್ರಿಯಗಳನ್ನೂ ವ್ಯಾಪಿಸಿದೆ ಎಂಬುದನ್ನು ಕವಿ ಕುವೆಂಪು ಅವರು ವರ್ಣಿಸಿದ್ದಾರೆ.

೩) ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು?

ಉ : ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಕಾಣುವ ವಿಶಾಲವಾದ ಶ್ಯಾಮಲ ಕಡಲು, ಹಸುರಿನ ಆಗಸ, ಹಸುರು ಮುಗಿಲು, ಹಸುರು ಗದ್ದೆಯ ಬಯಲು, ಹಸುರಿನ ಬೆಟ್ಟ, ಹಸುರು ಕಣಿವೆ, ಸಂಜೆಯ ಬಿಸಿಲು, ಅಶ್ವಜದ ಶಾಲಿವನದ ಗಿಳಿಯ ಹಸುರು ಬಣ್ಣದ ನೋಟ, ಕಾಡಂಚಿನಲ್ಲಿರುವ ಅಡಕೆಯ ತೋಟ, ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿದಂತೆ ಹಸುರುಟ್ಟಿರುವ ಭೂಮಿ, ಹೊಸ ಹೂವಿನ ಕಂಪು, ತಂಗಾಳಿಯ ತಂಪು, ಹಕ್ಕಿಯ ಇಂಪಾದ ಗಾನ, ಎತ್ತೆತ್ತ ನೋಡಿದರೂ ಹಸುರು. ಇವೆಲ್ಲಾ ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳು. 

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . 

೧. ‘ ಹಸುರು ‘ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ. 
ಉ : ʼಹಸುರುʼ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ಕವಿಶೈಲದಲ್ಲಿ ಅವರಿಗುಂಟಾದ ಪ್ರಕೃತಿಯ ಸೌಂದರ್ಯಾನುಭವ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ. ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಕಾಣುವ ವಿಶಾಲವಾದ ಶ್ಯಾಮಲ ಕಡಲು, ಹಸುರಿನ ಆಗಸ, ಹಸುರು ಮುಗಿಲು, ಹಸುರು ಗದ್ದೆಯ ಬಯಲು, ಹಸುರಿನ ಬೆಟ್ಟ, ಹಸುರು ಕಣಿವೆ, ಸಂಜೆಯ ಬಿಸಿಲು, ಅಶ್ವಜದ ಶಾಲಿವನದ ಗಿಳಿಯ ಹಸುರು ಬಣ್ಣದ ನೋಟ, ಕಾಡಂಚಿನಲ್ಲಿರುವ ಅಡಕೆಯ ತೋಟ, ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿದಂತೆ ಹಸುರುಟ್ಟಿರುವ ಭೂಮಿ, ಹೊಸ ಹೂವಿನ ಕಂಪು, ತಂಗಾಳಿಯ ತಂಪು, ಹಕ್ಕಿಯ ಇಂಪಾದ ಗಾನ, ಎತ್ತೆತ್ತ ನೋಡಿದರೂ ಹಸಿರು ವ್ಯಾಪಿಸಿದೆ ಎಂದು ಕುವೆಂಪುರವರು ತಮ್ಮ ಕವನದಲ್ಲಿ ವಿವರಿಸಿದ್ದಾರೆ.

. ಪ್ರಕೃತಿಯ ‘ ಹಸುರು ‘ ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ಉ: ಪ್ರಕೃತಿಯ ‘ಹಸುರು’ ಜೀವ ಜಗತ್ತಿಗೆ ಅತ್ಯಂತ ಮುಖ್ಯವಾಗಿದೆ. ಹಸಿರು ಗಿಡಗಳು ಹಾಗೂ ಮರಗಳು ಜಗತ್ತಿಗೆ ಉಸಿರನ್ನು ಕೊಡುತ್ತದೆ. ಅವುಗಳಿಲ್ಲದೇ ಜೀವನ ಅಸಾಧ್ಯವಾಗುತ್ತದೆ. ಏಕೆಂದರೆ ಮರಗಳು ಆಮ್ಲಜನಕವನ್ನು ನೀಡುತ್ತವೆ. ಹಸಿರು ತಾಜಾತನದ ಸಂಕೇತವಾಗಿದೆ ಮತ್ತು ಮಾನವನಿಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಹಸಿರು ಗಿಡಗಳು ಮಣ್ಣನ್ನು ಕಾಪಾಡಿ ಮಳೆನೀರನ್ನು ಹೀರಿಕೊಳ್ಳುತ್ತವೆ. ಇವು ಪರಿಸರದ ಸಮತೋಲನವನ್ನು ಕಾಪಾಡುತ್ತವೆ. ಉಷ್ಣತೆಗೆ ತಾಪಮಾನವನ್ನು ಕಡಿಮೆ ಮಾಡುತ್ತವೆ. ಹುಲ್ಲು, ಹಸಿರು ಕಾಡುಗಳು ಪ್ರಾಣಿಗಳ ಬಾಳಿಗೆ ಆಶ್ರಯ ಕೊಡುತ್ತವೆ. ಹಸಿರು ಇರುವ ಪ್ರದೇಶಗಳಲ್ಲಿ ಪ್ರಕೃತಿ ತಾಜಾ, ಸುಂದರ ಮತ್ತು ಸಮೃದ್ಧವಾಗಿರುತ್ತದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. 

೧. “ ಹಸುರಾದುದು ಕವಿಯಾತ್ಮಂ ‘ 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ  ʼಪಕ್ಷಿಕಾಶಿʼ ಕವನ ಸಂಕಲನದ ‘ಹಸುರುʼ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ . 
ಸಂದರ್ಭ: ನವರಾತ್ರಿಯ ಈ ಶ್ಯಾಮಲ ವರ್ಣದ ಕಡಲಿನಲ್ಲಿ ಕವಿಯ ಆತ್ಮ ಹಸುರಾಯಿತು. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ಕವಿಶೈಲದಲ್ಲಿ ಪ್ರಕೃತಿ , ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ
ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ. ಪ್ರಕೃತಿಯಲ್ಲಿ ವ್ಯಾಪಿಸಿರುವ ಹಸುರು ರಸಪಾನದಲ್ಲಿ ಮಿಂದಿತು ಎಂದು ಹಸುರಿನ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ನವರಾತ್ರಿಯ ಕಪ್ಪು ಕಡಲಿನಲ್ಲೂ ಹಸುರನ್ನು ಕಾಣುವ ಕುವೆಂಪು ಅವರ ಕವಿಯಾತ್ಮದ ಪ್ರಕೃತಿಯ ಭಾವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ. 

೨. “ಬೇರೆ ಬಣ್ಣವನೆ ಕಾಣೆ”

ಆಯ್ಕೆ: ಈ ವಾಕ್ಯವನ್ನು ಕುವೆಂಪು ಅವರ ʼಪಕ್ಷಿಕಾಶಿʼ ಕವನ ಸಂಕಲನದಿಂದ ಆರಿಸಲಾಗಿರುವ ʼಹಸುರುʼ ಎಂಬ ಪದ್ಯದಿಂದ ಆರಿಸಲಾಗಿದೆ. 
ಸಂದರ್ಭ: ಅಶ್ವಿಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ, ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ, ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ
ಭೂಮಿಯು ಹಸುರಿನಿಂದ ಮೈ ಮುಚ್ಚಿರುವ ಬಗೆಯನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಭೂಮಿಯ ಮೇಲೆ ಎಲ್ಲೆಂದರಲ್ಲಿ ವಿವಿಧ ರೂಪದಲ್ಲಿ ಹಸುರು ಹರಡಿರುವುದನ್ನು ನೋಡಿ ರಸಾನಂದ ಹೊಂದಿದ ಕವಿ ‘ಬೇರೆ ಬಣ್ಣಗಳೇ ಕಾಣದಾದವುʼ ಎಂದು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. 

೩. “ಹಸುರು ಹಸುರಿಳೆಯುಸಿರೂ”

ಆಯ್ಕೆ: ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ಎಂಬ ಪದ್ಯದಿಂದ ಆರಿಸಲಾಗಿದೆ. 
ಸಂದರ್ಭ: ಹೊಸ ಹೂವಿನ ಕಂಪು, ಬೀಸುವ ಗಾಳಿಯ ತಂಪು, ಹಕ್ಕಿಯ ಕೊರಲಿನಿಂದ ಹೊರಟ ಗಾನದ ಇಂಪು, ಅಲ್ಲದೆ ಇಡೀ ಭೂಮಿಯ ಶ್ವಾಸವೆಲ್ಲಾ ಹಸುರುಮಯವಾಗಿದೆ ಎಂದು ವರ್ಣಿಸುವ ಸಂದರ್ಭದಲ್ಲಿ
ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಇಲ್ಲಿ ಹೂವು, ಗಾಳಿ, ಹಕ್ಕಿಯ ಗಾನಗಳಲ್ಲಿ ಬೇರೆ ಬೇರೆ ಅನುಭವವಿದ್ದರೂ ಹಸುರು ಸರ್ವೇಂದ್ರಿಯಗಳನ್ನೂ ವ್ಯಾಪಿಸಿದೆ ಎಂದು ಕವಿಯ ಕಲ್ಪನೆ ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ. 

೪. ” ಹಸುರತ್ತಲ್ , ಹಸುರಿತ್ತಲ್ , ಹಸುರೆತ್ತಲ್ ” 

ಆಯ್ಕೆ : ಈ ವಾಕ್ಯವನ್ನು ಕುವೆಂಪು ಅವರ ‘ ಪಕ್ಷಿಕಾಶಿ ‘ ಕವನ ಸಂಕಲನದಿಂದ ಆರಿಸಲಾಗಿರುವ ‘ ಹಸುರು ‘ ಎಂಬ ಪದ್ಯದಿಂದ ಆರಿಸಲಾಗಿದೆ. 
ಸಂದರ್ಭ : ಅತ್ತ – ಇತ್ತ – ಎತ್ತಲೂ ಹಸುರೇ ಆವರಿಸಿರುವುದನ್ನು ಕವಿದೃಷ್ಟಿಯಿಂದ ಕುವೆಂಪು ನೋಡಿದರು. ಅವರು ‘ಕಡಲಿನಲ್ಲಿ ಎಲ್ಲೆಲ್ಲೂ ಹಸುರೇ ಹಸುರು ಎಂದು ವರ್ಣಿಸಿದರು. ಕವಿಯ ಆತ್ಮ ಹಸುರು ನೆತ್ತರಿನಿಂದ ಹಸುರುಗಟ್ಟಿತು ಎಂದು ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು
ಹೇಳಿದ್ದಾರೆ.
ಸ್ವಾರಸ್ಯ : ಹಸುರು ಕೇವಲ ಪ್ರಕೃತಿಗಷ್ಟೇ ಅಲ್ಲದೇ ‘ರಕ್ತದಲ್ಲೂ ಹಸುರು ವ್ಯಾಪಿಸಿದೆ ‘ ಎಂಬುದನ್ನು ಕವಿಯು ಸ್ವಾರಸ್ಯವಾಗಿ ವಿವರಿಸಿದ್ದಾರೆ. 

Click here to download hasuru poem exercises