Huvada hudugi kannada 8th grade lesson is written by A K Ramanujan. Huvada hudugi VIII grade lesson is about a girl turning to a flower plant. A mother of two girls worked as a househelp to make ends meet. Her younger daughter had a magical gift: she could transform into a flower plant. She would ask her sister to bring two mugs of water, chant a prayer, and request her sister to pour one mug on her. Instantly, she’d turn into a flower plant. Her sister would pluck the flowers to sell them to the royal family. Afterward, she’d pour the second mug, and her sister would return to human form.

One day, the prince noticed this and eventually married the younger girl. But her sister-in-law, curious about her powers, took her to a “surahonne thota” and tried the magic herself. However, she didn’t pour the water properly, leaving the girl stuck as a half-human, half-plant. Heavy rains washed her away to a nearby temple, where she was found by the queen’s maids, who discovered she was the prince’s wife. They brought her to the prince’s elder sister’s home, where she was cared for.

Meanwhile, the prince, saddened by her disappearance, wandered in search of her. He finally found her at his sister’s house, poured the final mug of water, and restored her to her human form. They were reunited and lived happily ever after.

ಹೂವಾದ ಹುಡುಗಿ

ಕೃತಿಕಾರರ ಪರಿಚಯ

ಎ.ಕೆ ರಾಮಾನುಜನ್ ಅವರು ಕವಿ, ಚಿಂತಕ, ಪ್ರಾಧ್ಯಾಪಕ, ಜಾನಪದತಜ್ಞ ಹೀಗೆ ವಿವಿದ ಪ್ರತಿಭೆಗಳ ಸಂಗಮವೆಂದು ಖ್ಯಾತರಾದವರು. ಇವರ ಪೂರ್ಣ ಹೆಸರು ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್. ಇವರು ಮಾರ್ಚ್ 16, 1929 ರಲ್ಲಿ ಮೈಸೂರುನಲ್ಲಿ ಜನಿಸಿದರು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ‘ಹೊಕ್ಕುಳಲ್ಲಿ ಹೂವಿಲ್ಲ ಮತ್ತು  ಇತರ ಕವಿತೆಗಳು’, ‘ಕುಂಟೋಬಿಲ್ಲೆ’, ‘ಮತ್ತೊಬ್ಬನ ಆತ್ಮ ಚರಿತ್ರೆ’ ಪ್ರಸಿದ್ಧ ಕೃತಿಗಳು. ಕನ್ನಡ ವಚನ ಸಾಹಿತ್ಯವನ್ನು ‘ಸ್ಪೀಕಿಂಗ್ ಆಫ್ ಶಿವ’ ಎಂದು ಅನುವಾದಿಸಿದ್ದಾರೆ. ಇವರ ಸಾಹಿತ್ಯದಲ್ಲಿನ ಸಾಧನೆಗೆ 1976 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1983 ರಲ್ಲಿ ಪ್ರಸಿದ್ಧ ‘ಮ್ಯಾಕ್‌ಅರ್ಥರ್ಫೆ ಲೋಷಿಪ್’ ಗೌರವ ಸಂದಿದೆ. ಪ್ರಸ್ತುತ ‘ಹೂವಾದ ಹುಡುಗಿ’ ಜನಪದ ಕಥೆಯನ್ನು ಶ್ರೀ ಎ. ಕೆ. ರಾಮಾನುಜನ್ ಅವರು ಸಂಪಾದಿಸಿರುವ ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ನಿಗದಿಪಡಿಸಿದೆ.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಮುದುಕಿಯ ಕಿರಿಯ ಮಗಳು ಏಕೆ ಹೂವಿನ  ಗಿಡವಾದಳು?
ಉ: ಮುದುಕಿಯಾಗಿದ್ದರೂ ಕೂಲಿ ಮಾಡಿ ತಮ್ಮನ್ನು ಸಾಕುತ್ತಿದ್ದ ಅಮ್ಮನಿಗೆ ಸಹಾಯ ಮಾಡಲು ಮುದುಕಿಯ ಕಿರಿ ಮಗಳು ಹೂವಿನ ಗಿಡವಾದಳು.

೨. ದೊರೆಯ ಹೆಂಡತಿ ಹೂವಿಗೆ ಎಷ್ಟು ಹಣ ಕೊಟ್ಟಳು?
ಉ: ದೊರೆಯ ಹೆಂಡತಿ ಹೂವಿಗಾಗಿ ಒಂದು ಬೊಗಸೆ ತುಂಬ ಹಣಕೊಟ್ಟಳು.

೩. ಹೂವಾಗುವ ಹುಡುಗಿಯ ವಿಚಾರವನ್ನು ದೊರೆಯ ಮಗ ಯಾರ ಬಳಿ ಹೇಳಿದ?
ಉ: ಹೂವಾಗುವ ಹುಡುಗಿಯ  ವಿಚಾರವನ್ನು ದೊರೆಯ ಮಗ ಮಂತ್ರಿಯ ಮಗನ ಬಳಿ ಹೇಳಿದನು.

೪. ದೊರೆಯ ಚಿಕ್ಕಮಗಳು ಗೆಳತಿಯರೊಂದಿಗೆ ಎಲ್ಲಿಗೆ ಹೋದಳು?
ಉ: ದೊರೆಯ ಚಿಕ್ಕಮಗಳು ಗೆಳತಿರೊಂದಿಗೆ ಸುರಹೊನ್ನೆ ತೋಟಕ್ಕೆ ಹೋದರು.

೫. ಪಟ್ಟಣಕ್ಕೆ ಹಿಂದಿರುವಾಗ ಅಕ್ಕ ತಮ್ಮನಿಗೆ ಏನು ಉಡುಗೊರೆ ನೀಡಿದಳು?
ಉ: ಪಟ್ಟಣಕ್ಕೆ ಹಿಂದಿರುವಾಗ ಅಕ್ಕ ತಮ್ಮನಿಗೆ ಬೇಕಾದಷ್ಟು  ಐಸಿರಿಯ ಉಡುಗೊರೆ ನೀಡಿದಳು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

೧. ಅರಮನೆಗೆ ಹೂವು ಎಲ್ಲಿಂದ ಬರುತ್ತದೆಂದು ದೊರೆಮಗ ಹೇಗೆ ಕಂಡು ಹಿಡಿದನು?
ಉ: ದೊರೆಮಗನು ಅರಮನೆಗೆ ಹೂವು ತಂದು ಕೊಡುತ್ತಿದ್ದ ಹುಡುಗಿಯನ್ನು ಹಿಂಬಾಲಿಸಿ ಹೋದ. ಈ ಮನೆಯ ಸುತ್ತ ಮುತ್ತ ಹೂವಿನ ಗಿಡಗಳಿಲ್ಲದನ್ನು ನೋಡಿ, ಇಂಥ ಹೂವು ಇವರಿಗೆಲ್ಲಿಂದ ಬರುತ್ತವೆ ಎಂದು ಯೋಚನೆ ಮಾಡಿ ಅರಮನೆಗೆ ಬಂದ. ಮಾರನೆ ದಿನ ಸೂರ್ಯ ಹುಟ್ಟುವ ಮೊದಲೇ ಹೋಗಿ ಮನೆಯ ಮರದ ಮೇಲೆ ಕುಳಿತುಕೊಂಡನು. ಅಂದು ಸಹ ತಂಗಿ ಹೂವಿನ ಗಿಡವಾಗಿದ್ದನ್ನು ದೊರೆಮಗ ನೋಡಿದನು. ಹೀಗೆ ಹೂವು ಅರಮನೆಗೆ ಬರುವುದನ್ನು ಕಂಡು ಹಿಡಿದನು.

೨. ತಂಗಿ ಹೇಗೆ ಹೂವಿನ ಗಿಡವಾಗುತ್ತಿದ್ದಳು?
ಉ: ಅಕ್ಕ ಹೂವಿನ ಗಿಡವಾಗುವ ಸ್ಥಳವನ್ನು ಮೊದಲು ಗುಡಿಸಿ ಸಾರಿಸುತ್ತಿದ್ದಳು. ಸ್ನಾನಮಾಡಿದ ನಂತರ ತಂಗಿ ದೇವರ ಧ್ಯಾನ ಮಾಡುತ್ತಾ ಕುಳಿತಿರುತ್ತಿದ್ದಳು. ಅಕ್ಕ, ಚಿಳ್‌ಉಗುರು ಸೋಕದ ಹಾಗೆ ಎರಡು ತಂಬಿಗೆ ನೀರನ್ನು ತರುತ್ತಿದ್ದಳು. ಮೊದಲು ಒಂದು ತಂಬಿಗೆ ನೀರನ್ನು ಸುರಿಯುತ್ತಿದ್ದಳು. ಆಗ ತಂಗಿ ಘಮ ಘಮಿಸುವ ಹೂವಿನ ಗಿಡವಾಗುತ್ತಿದ್ದಳು. ಅಕ್ಕ, ಜೋಪಾನವಾಗಿ ಹೂ ಬಿಡಿಸಿದ ನಂತರ ಇನ್ನೊಂದು ತಂಬಿಗೆ ನೀರು ಸುರಿಯುವಳು. ಆಗ ತಂಗಿ ಮತ್ತೆ ಮನುಷ್ಯಳಾಗುತ್ತಿದ್ದಳು. ಹೀಗೆ ತಂಗಿ ಹೂವಿನ ಗಿಡವಾಗುತ್ತಿದ್ದಳು.

೩. ದೊರೆಯಮಗ ದೇಶಾಂತರ ಹೋಗಲು ಕಾರಣವೇನು?
ಉ: ದೊರೆ ಮಗಳು ತನ್ನ ಸ್ನೇಹಿತೆಯರ ಜೊತೆ ಸುರಹೊನ್ನೆ ತೋಟಕ್ಕೆ ಉಯ್ಯಾಲೆ ಆಡಲು ಹೊರಟಳು. ತನ್ನ ತಾಯಿ ಮತ್ತು ಅಣ್ಣನನ್ನು ಒಪ್ಪಿಸಿ ಅತ್ತಿಗೆಯನ್ನು ಸುರೆಹೊನ್ನೆ ತೋಟಕ್ಕೆಕರೆದುಕೊಂಡು ಹೋದಳು. ಅಲ್ಲಿ ಅವಳನ್ನು ಹೂವಿನ ಗಿಡವಾಗಲು ಹೇಳಿ, ಅರ್ಧಂಬರ್ಧ ಮನುಷ್ಯಳಾಗಿದ್ದ ಅತ್ತಿಗೆಯನ್ನು ತೋಟದಲ್ಲಿ ಬಿಟ್ಟು ಅರಮನೆಗೆ ಬಂದಳು. ತನ್ನ ಹೆಂಡತಿಯನ್ನು ಕಾಣದೇ ದೊರೆಮಗ ಬೇಜಾರಾಗಿ ದೇಶಾಂತರ ಹೊರಟು ಹೋದನು.

೪. ಅರ್ಧಂಬರ್ದ ದೇಹವಾಗಿದ್ದವಳು ಹೇಗೆ ರಾಣಿಯ ಅರಮನೆ ಸೇರಿದಳು?
ಉ: ಅರ್ಧಂಬರ್ದ ದೇಹವಾಗಿದ್ದ ಹೂವಿನ ಹುಡುಗಿ ಮಳೆಯ ನೀರಿನಲ್ಲಿ ತೇಲಿಕೊಂಡು ಮೋರಿಯಲ್ಲಿ ಬಿದ್ದಿದ್ದಳು. ಮಾರನೇ  ದಿನ ಅತ್ತ ಕಡೆಯಿಂದ ಅರಳೆ  ತುಂಬಿದ ಗಾಡಿಯವನೊಬ್ಬನು ಕೊರಗುವ ಶಬ್ದ ನೋಡಿದನು. ಬಟ್ಟೆಯಿಲ್ಲದ ಇಡೀ ದೇಹದಲ್ಲಿ ಮುಖ ಮಾತ್ರ ಚೆನ್ನಾಗಿತ್ತು. ಅಯ್ಯೋ ಮನುಷ್ಯ ಅಂತ ಹೇಳಿ ತನ್ನ ತಲೆ ವಸ್ತ್ರವನ್ನ  ಅದರ ಮೇಲೆ ಹಾಕಿ ಗಾಡಿಯಲ್ಲಿ
ಕೂರಿಸಿಕೊಂಡು ಮುಂದಿನ ಊರಿನ ಹಾಳು ಮಂಟಪದಲ್ಲಿ ಬಿಟ್ಟು ಹೋದನು. ಆ ಪಟ್ಟಣದ, ದಾದೇರು ರಾಣಿಗೆ ಆ ಹುಡುಗಿ ಅವಳ ತಮ್ಮನ ಹೆಂಡತಿಯ ಹಾಗೆ ಕಾಣಿಸುತ್ತಾಳೆ ಎಂದು  ಅರಮನೆಗೆ ತಂದರು. ಹೀಗೆ ಅರ್ಧಂಬರ್ದ ದೇಹವಾಗಿದ್ದ ಹುಡುಗಿ ರಾಣಿಯ ಅರಮನೆ ಸೇರಿದಳು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯದಲ್ಲಿ  ಉತ್ತರಿಸಿ.

೧. ದೊರೆಯ ಕಿರಿಯ ಮಗಳು ತನ್ನ ಅತ್ತಿಗೆಗೆ ಮಾಡಿದ ದ್ರೋಹವೇನು?
ಉ: ದೊರೆ ಮಗಳು ತನ್ನ ಸ್ನೇಹಿತೆಯರ ಜೊತೆ ಸುರಹೊನ್ನೆ ತೋಟಕ್ಕೆ ಉಯ್ಯಾಲೆ ಆಡಲು ಹೊರಟಳು. ತನ್ನ ತಾಯಿ ಮತ್ತು ಅಣ್ಣನನ್ನು ಒಪ್ಪಿಸಿ ಅತ್ತಿಗೆಯನ್ನು ಸುರೆಹೊನ್ನೆ ತೋಟಕ್ಕೆಕರೆದುಕೊಂಡು ಹೋದಳು. ಅಲ್ಲಿ ಹೂವಿನ ಗಿಡವಾಗಲು ಹೇಳಿದಳು. ಅದಕ್ಕೆ ಹುಡುಗಿ ತಾನು ಮನುಷ್ಯಳು, ದೇವರು ಅಲ್ಲ, ದೆವ್ವನು ಅಲ್ಲ. ನಾನು ಹೂವಿನ ಗಿಡವಾಗುವ ವಿಷಯ ನಿನಗೆ ಯಾರು ಹೇಳಿದರು ಎಂದು ಗದರಿಸಿದಳು. ಆದರೂ ದೊರೆಯ ಕಿರಿಮಗಳು ಬಿಡದೇ ತನ್ನ ಅತ್ತಿಗೆಯನ್ನು ಹೂವಿನ ಗಿಡವಾಗಲು ಒಪ್ಪಿಸಿದಳು. ಆಗ ಹುಡುಗಿ ತನ್ನ ಮೇಲೆ ನೀರು ಹೇಗೆ ಸುರಿಯಬೇಕು. ಹೇಗೆ ಹೂ ಕೀಳಬೇಕು ಎಂಬುದನ್ನೆಲ್ಲ ಹೇಳಿಕೊಟ್ಟಳು. ಆದರೂ ಸರಿಯಾಗಿ ಕೇಳಿಸಿಕೊಳ್ಳದೆ ದೊರೆಯ ಮಗಳು ಹಾಗೂ ಗೆಳೆತಿಯರು ಅಡ್ಡ- ದಿಡ್ಡಿಯಾಗಿ ನೀರು ಸುರಿದು ತೊಟ್ಟು, ಎಲೆ, ಸುಳಿ ಕಿತ್ತು, ರೆಂಬೆಯನ್ನೆಲ್ಲ ತೆರೆದು ಬಿಟ್ಟರು. ಅಷ್ಟರಲ್ಲಿ ಗುಡುಗು ಸಹಿತ ಮಳೆಗೆ ಹೆದರಿ ಅರ್ಧಂಬರ್ಧ ನೀರು ಸುರಿದು ಮನೆ ಕಡೆ ಓಡಿದರು. ಆಕೆ ಮನುಷ್ಯಳಾಗದೆ ಕೈಯಿಲ್ಲದ, ಕಾಲು ಇಲ್ಲದ ದೇಹವಾಗಿದ್ದಳು. ಮೈಯೆಲ್ಲ ಗಾಯವಾಗಿತ್ತು. ಮಳೆ ನೀರಿನಲ್ಲಿ ತೇಲಿಕೊಂಡು ಮೋರಿಗೆ ಬಿದ್ದಳು. ನಂತರ ಆಕೆ ಏನಾದಳೆಂದು ಕೂಡ ನೋಡದೆ ಅರಮನೆಗೆ ಹೊರಟು ಹೋದರು.

೨. ದೊರೆಯ ಮಗ ತನ್ನ ಹೆಂಡತಿಯನ್ನು ಹೇಗೆ ಪುನಃ ಪಡೆದನು?
ಉ: ಹೂವಾದ ಹುಡುಗಿಯು  ಅರ್ಧಂಬರ್ಧ ಮನುಷ್ಯಳಾಗಿ ಮೋರಿಯಲ್ಲಿ ಬಿದ್ದಿದ್ದಳು. ಅರಳೆ ಗಾಡಿಯವರು ಅವಳನ್ನು ದೊರೆ ಮಗನ ದೊಡ್ಡಕ್ಕನ ಊರಿಗೆ ತಂದು ಬಿಟ್ಟರು. ಆ ಪಟ್ಟಣದ ದಾದೇರು ಇವಳನ್ನು ನೋಡಿದರು. ಈ ವಿಚಾರವನ್ನು ರಾಣಿಗೆ ತಿಳಿಸುತ್ತಾರೆ. ರಾಣಿಗೆ ಮನಸ್ಸಿಲ್ಲದಿದ್ದರೂ ಅವಳನ್ನು ತನ್ನ ಅರಮನೆಗೆ ಕರಸಿ, ಸ್ನಾನಮಾಡಿಸಿ, ಗಾಯಗಳಿಗೆ ಔಷಧಿ ಹಾಕಿಸಿ ಉಪಚಾರ ಮಾಡಿದಳು.ಇತ್ತ ದೇಶಾಂತರ ಹೋಗಿದ್ದ ದೊರೆಮಗ ತನ್ನ ಅಕ್ಕನ ಪಟ್ಟಣದ ಬಾಗಿಲಿಗೆ ಬಂದು ಕುಳಿತುಕೊಂಡನು. ನೀರಿಗೆ ಹೋಗಿ ಬರುತ್ತಿದ್ದ ದಾದೇರು ಇವನನ್ನು ನೋಡಿ ಅರಮನೆಗೆ ಬಂದು ರಾಣಿಗೆ ಯಾರೋ ನಿಮ್ಮ ತಮ್ಮನ ಹಾಗೆ ಇರುವವನು ಕುಳಿತಿದ್ದಾನೆ ಎಂದರು. ದುರಬೀನು ಹಾಕಿ ನೋಡಿ, ಕರೆಸಿ, ತನ್ನ ತಮ್ಮನೇ ಇರಬೇಕೆಂದು ರಾಣಿ ಅವನನ್ನು ಚೆನ್ನಾಗಿ ನೋಡಿಕೊಂಡಳು. ಎಣ್ಣೆ ಹಚ್ಚಿ ನೀರು ಹಾಕಿಸಿದಳು.  ದಾದೇರು ಅರಮನೆಯ ಮುಂದಿದ್ದ ಅರ್ಧಂಬರ್ಧ ಇದ್ದ ದೇಹಕ್ಕೆ ಶೃಂಗಾರಮಾಡಿ, ರಾಣಿಯಿಂದ ಅಪ್ಪಣೆ ಪಡೆದು ಇವನ ಮಂಚದ ಮೇಲೆ ಕೂರಿಸಿದರು. ರಾತ್ರಿಯೆಲ್ಲ ಇವನ ಕಾಲನ್ನು ಒತ್ತುತ್ತ ಹೂ…..ಹೂ….. ಅಂತ ಹೇಳುತ್ತಿದ್ದಳು. ಆಗ ಎದ್ದು ನೋಡಿದ, ಇವಳೇ ತನ್ನ ಹೆಂಡತಿ ಎಂದು  ತಿಳಿದಿಕೊಂಡ. ಅನಂತರ ಮಂತ್ರಿಸಿ ನೀರನ್ನು ಹಾಕಿ ಹೂವಿನ ಗಿಡ ಮಾಡಿ, ಮುರಿದು ರೆಂಬೆ ಕೊಂಬೆಗಳನ್ನೆಲ್ಲ ಜೋಡಿಸಿ, ನಂತರ ನೀರು ಹಾಕಿದಾಗ ಹೂವಾದ ಹುಡುಗಿ ಮತ್ತೆ ಮನುಷ್ಯಳಾದಳು. ಹೀಗೆ ದೊರೆಮಗ ತನ್ನ ಹೆಂಡತಿಯನ್ನು ಮತ್ತೆ ಪಡೆದನು.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಅಕ್ಕಯ್ಯ ಅಮ್ಮನಿಗೆ ಹೇಳಬೇಡ  ಮುಚ್ಚಿಡು”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ ʼಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದ ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಕೂಲಿ ಮಾಡಿ ತಮ್ಮನ್ನು ಸಾಕುತ್ತಿದ್ದ ಅಮ್ಮನಿಗೆ ಸಹಾಯ ಮಾಡಲು ಮುದುಕಿಯ ಕಿರಿ ಮಗಳು ಹೂವಿನ ಗಿಡವಾದಳು.ಅದರಲ್ಲಿರುವ ಹೂವುಗಳನ್ನು ಅರಮನೆಗೆ ಹೋಗಿ ಹೂವು ಮಾರಿ ಹಣ ಸಂಪಾದನೆ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೂವಾದ ಹುಡುಗಿ ತನ್ನ ಅಕ್ಕನಿಗೆ ಹೇಳುತ್ತಾಳೆ.
ಸ್ವಾರಸ್ಯ: ಅಮ್ಮನಿಗೆ ತಿಳಿಯದ ಹಾಗೆ ಹೂ ಗಿಡವಾಗಿ, ಹೂ ಮಾರಿ ಹಣವನ್ನು ಕೊಟ್ಟಾಗ ತಾಯಿಗೆ ಹಣ ಎಲ್ಲಿಂದ ಬಂತು ಎಂದು ಕೇಳಿ ಬೈಯಬಹುದು. ಆದ್ದರಿಂದ ಮುಚ್ಚಿಡು ಎಂದು ಹೇಳುವ ಮಾತು ಸ್ವಾರಸ್ಯಕರವಾಗಿದೆ.

೨. “ಈ ಸಂಪತ್ತಿಗೇಕೆ ನನ್ನ ಮದುವೆ ಆದಿರಿ?”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದ “ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ದೊರೆಮಗನು ಮೆಚ್ಚಿ ಹೂವಾದ ಹುಡುಗಿಯನ್ನು ಮದುವೆಯಾದನು. ಅರಮನೆಯಲ್ಲಿ ಇಬ್ಬರೂ ಅವರಷ್ಟಕ್ಕೇ ಇದ್ದರು. ಅವನೇ ಮಾತನಾಡಿಸಲಿ ಅಂತ ಅವಳು. ಅವಳೇ ಮಾತನಾಡಿಸಲಿ ಅಂತ ಅವನು. ಹೀಗೆ ಇಬ್ಬರೂ ಸುಮ್ಮನಿದ್ದರು. ಆಗ ಮೌನ ಮುರಿದ ಸಂದರ್ಭದಲ್ಲಿ ಹೂವಾದ ಹುಡುಗಿ ಈ ಮಾತನ್ನು ದೊರೆ ಮಗನಿಗೆ ಕೇಳಿದಳು.
ಸ್ವಾರಸ್ಯ : ತನ್ನ ಜೊತೆ ಮಾತನಾಡಲು ಇಷ್ಟವಿಲ್ಲದಿದ್ದ ಮೇಲೆ ತನ್ನನ್ನು ಏಕೆ ಮದುವೆಯಾಗಬೇಕಿತ್ತು ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.

೩. “ಯಾರಾದರೂ ಅನ್ನ ನೀರು ಕೊಟ್ಟರೆ ಜೀವ ಉಳಿಸಿಕೋ”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ  ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದ ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಹೂವಾದ ಹುಡುಗಿಯು  ಮೋರಿಯಲ್ಲಿ ನರಳುತ್ತಿರುವುದನ್ನು ನೋಡಿದ ಅರಳೆ ಗಾಡಿಯವನು ತನ್ನ ತಲೆಯ ಮೇಲಿದ್ದ ವಸ್ತ್ರವನ್ನು ಕೊಟ್ಟು ಅವಳನ್ನು ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಒಂದು ಊರಿನ
ಮಂಟಪದಲ್ಲಿ ಬಿಟ್ಟ ಸಂದರ್ಭದಲ್ಲಿ ಅರಳೆ ಗಾಡಿಯವನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಹೂವಾದ ಹುಡುಗಿಯನ್ನು ಗಾಡಿಯವನು ಇವಳನ್ನು ಒಂದು ಪಟ್ಟಣದಲ್ಲಿ ಬಿಟ್ಟು ಹೋಗುತ್ತಾನೆ. ಗಾಡಿಯವನ ಪರೋಪಕಾರ ಗುಣವು ಸ್ವಾರಸ್ಯಕರವಾಗಿದೆ.

೪. “ಅವಳನ್ನು ನೋಡಿದರೆ ನಿಮ್ಮ ತಮ್ಮನ ಹೆಂಡತಿಯಂತೆ ಕಾಣ್ತಾಳೆ”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ  ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :  ಅರ್ಧಂಬರ್ಧ ಮನುಷ್ಯಳಾದ ಹೂವಾದ ಹುಡುಗಿ  ಮೋರಿಯಲ್ಲಿ ಬಿದ್ದಿದ್ದಾಗ ಗಾಡಿಯವನು ದೊರೆಮಗನ ದೊಡ್ಡಕ್ಕನವರ ಪಟ್ಟಣದಲ್ಲಿ ಬಿಟ್ಟು ಹೋಗುತ್ತಾನೆ. ಇವಳನ್ನು ನೋಡಿದ ದಾದೇರು ತನ್ನ ರಾಣಿಯ ಬಳಿಗೆ ಹೋಗಿ ಈ ವಿಚಾರ ತಿಳಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಅರ್ಧಂಬರ್ಧ ಮನುಷ್ಯಳಾಗಿದ್ದ ಹೂವಾದ ಹುಡುಗಿಯನ್ನು ದಾದೇರು ರಾಣಿಯ ಬಳಿ ಬಂದು ಆ ಹುಡುಗಿ ನಿಮ್ಮ ತಮ್ಮನ ಹೆಂಡತಿಯಂತೆ  ಕಾಣುವಳು. ಅವಳನ್ನು ಕರೆ ತಂದು ಉಪಚರಿಸೋಣವೇ ಎಂದು ಹೇಳುವ ಮಾತಿನಲ್ಲಿರುವ ಉಪಕಾರ ಗುಣ ಸ್ವಾರಸ್ಯಕರವಾಗಿದೆ.

ಉ. ಖಾಲಿಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.

೧. ನೋಡಕ್ಕಯ್ಯ ನಾನಿಲ್ಲಿ ದೇವರ ಧ್ಯಾನಮಾಡಿ ಕುತುಕೋತಿನಿ.

೨. ಅವರು ಮಾತಾಡಲೇ ಇಲ್ಲವಲ್ಲ, ಮತ್ತೇಕೆ ಮದುವೆ ಯಾದರು.

೩. ನರಮನುಷ್ಯರು ಹೂವಿನಗಿಡ ಆಗೋದುಂಟೆ ?

೪. ದಿನವಹಿ ಮೈಮೇಲಿನ ಗಾಯಗಳಿಗೆ ಔಷಧ ಹಾಕಿ ವಾಸಿಮಾಡಿದರು.

ಚಟುವಟಿಕೆ

ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ.

೧. ಧ್ಯಾನಮಾಡು : ದಿನಕ್ಕೇ ಒಮ್ಮೆಯಾದರು ಧ್ಯಾನಮಾಡು.

೨. ಬಡವರು : ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸ್ವಾಭಿಮಾನದಿಂದ ಬದುಕುವವರೆ ಬಡವರು.

೩. ಸಂಪಾದನೆ :  ನಾವು ಚೆನ್ನಾಗಿ ಓದಿ ಸಂಪಾದನೆ ಮಾಡಲೇಬೇಕು.

೪. ಉಡುಗೊರೆ : ನನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆ ಉಡುಗೊರೆ ಕೊಡಬೇಕು.

ಕೊಟ್ಟಿರುವ ವಾಕ್ಯಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.

೧. ನೀನು ಹೂ ತಕ್ಕೊಂಡು ಹೋಗಿ ಮಾರ‍್ಕೊಂಡು ಬಂದ್ಬಿಡೇ.
ಉ: ನೀನು ಹೂವು ತೆಗೆದುಕೊಂಡು ಹೋಗಿ ಮಾರಿಕೊಂಡು ಬಂದು ಬಿಡೇ.

೨. ದಾದೇರು ಗೋಗರೆದದ್ದಕ್ಕೆ ಒಪ್ಕತಾಳೆ.
ಉ: ದಾದೇರು ಗೋಗರೆದಿದ್ದಕ್ಕೆ ಒಪ್ಪಿಕೊಳ್ಳುತ್ತಾಳೆ.

೩. ತಾಯಿ ಅಣ್ಣನ ಕೇಳ್ಕೊಂಡು ಕರ‍್ಕೊಂಡೋಗು ಅನ್ತಾಳೆ.
ಉ : ತಾಯಿ ಅಣ್ಣನನ್ನು ಕೇಳಿ ಕರೆದುಕೊಂಡು ಹೋಗು ಅನ್ನುತ್ತಾಳೆ.

Click here to download hoovada hudugi exercises