ಭಗತ್ ಸಿಂಗ್
Bhagat singh X grade kannada chapter is written by Chidananda Murthy G S. Bhagat Singh grade 10 lesson is about how Bagath singh felt about Jaliyanwala bhag and his contribution to the Indian Independence.
ಲೇಖಕರು: ಜಿ.ಎಸ್. ಚಿದಾನಂದಮೂರ್ತಿ
ಪ್ರವೇಶ : ಪರಕೀಯರ ಆಳ್ವಿಕೆಯಿಂದ ಭಾರತವನ್ನು ವಿಮೋಚನೆಗೊಳಿಸಿಕೊಳ್ಳಲು ಭಾರತೀಯರು ನಡೆಸಿದ ಹೋರಾಟ ಪ್ರಮುಖವಾದುದು. ಈ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಜನ ತಮ್ಮ ಜೀವನ, ಪ್ರಾಣವನ್ನು ತ್ಯಾಗ ಮಾಡಿ ವೀರ ಬಲಿದಾನಗೈದರು. ಇಂತಹ ವೀರ ಸ್ವಾತಂತ್ರ್ಯ ಬಲಿದಾನಿಗಳನ್ನು ಸ್ಮರಣೆಗೈಯುವುದು ಭಾರತೀಯರೆಲ್ಲ ಜವಾಬ್ದಾರಿ.
Introduction: The fight by Indians to free their country from foreign rule was very important. In this struggle, thousands of brave people gave up their lives for freedom. It is the duty of all Indians to remember and respect these heroes.
ಎಲ್ಲ ಮಕ್ಕಳೂ ಸಂಜೆ ಶಾಲೆಯಿಂದ ಮನೆಗೆ ಬಂದಿದ್ದರು. ಆದರೆ, ಹನ್ನೆರಡು ವರ್ಷದ ಒಬ್ಬ ಬಾಲಕ ಮಾತ್ರ ಮನೆಗೆ ಬಂದಿರಲಿಲ್ಲ. ಅವನ ತಂದೆ ತಾಯಿಯರಿಗೆ, ಕುಟುಂಬದ ಇತರ ಸದಸ್ಯರಿಗೆ ಬಹಳ ಆತಂಕವಾಯಿತು. ಸಂಜೆ ತಡವಾಗಿ ಬಾಲಕ ಮನೆಯೊಳಕ್ಕೆ ಕಾಲಿಟ್ಟ. ಅವನ ತಂಗಿ ಕೂಗಿಕೊಂಡಳು, “ವೀರಾಜಿ ಬಂದ…. ವೀರಾಜಿ ಬಂದ….” ಅವನಮ್ಮ ಓಡಿ ಬಂದು ಬಾಲಕನನ್ನು ಬಿಗಿಯಾಗಿ ಅಪ್ಪಿದಳು. ತಾಯಿಯ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯತೊಡಗಿತ್ತು.
All the children had returned home from school in the evening. However, one twelve-year-old boy had not come back yet. His parents and other family members became very worried. Late in the evening, the boy walked into the house. His younger sister shouted, “Veeraji has come… Veeraji has come…” His mother ran over and hugged the boy tightly. Tears began to flow heavily from his mother’s eyes.
ತಂಗಿ ಕೊಟ್ಟ ಹಣ್ಣುಗಳನ್ನು ತಿನ್ನದೇ ನಿಂತಿದ್ದ ಬಾಲಕನ ಮುಖದಲ್ಲಿಯ ಗಾಂಭೀರ್ಯವನ್ನು ಕಂಡು ತಂಗಿಗೆ ಆಶ್ಚರ್ಯವಾಯಿತು. “ದಯವಿಟ್ಟು ನನಗೆ ಏನನ್ನೂ ತಿನ್ನಲು ಹೇಳಬೇಡ, ಬಾ, ನಿನಗೆ ಏನೋ ತೋರಿಸುತ್ತೇನೆ…’ ಎಂದು ಗಂಭೀರ ಧ್ವನಿಯಲ್ಲಿ ಹೇಳಿ ಊಟದ ಡಬ್ಬದಲ್ಲಿದ್ದ, ರಕ್ತದಲ್ಲಿ ತೊಯ್ದ ಮಣ್ಣನ್ನು ಹೊರತೆಗೆದ. “ಇದು ಬಹಳ ಪೂಜ್ಯನೀಯವಾದ ಮಣ್ಣು, ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ರಕ್ತದಿಂದ ಈ ಮಣ್ಣು ಒದ್ದೆಯಾಗಿದೆ” ಎಂದು ಹೇಳಿ ಜಲಿಯನ್ ವಾಲಾಬಾಗ್ ನೆತ್ತರಿನ ಆ ಮಣ್ಣಿಗೆ ವಂದಿಸಿದ ಆ ಬಾಲಕನೇ ವೀರ ಭಗತ್‌ಸಿಂಗ್. ಪವಿತ್ರವಾದ ಮಣ್ಣಿನಿಂದ ತುಂಬಿದ ಡಬ್ಬವನ್ನು ಮನೆಯ ಸ್ವಚ್ಛವಾದ ಜಾಗದಲ್ಲಿ ಇರಿಸಿದ. ಆಗ ತಾನೆ ಕಿತ್ತು ತಂದ ಹೂಗಳನ್ನು ಅದರ ಮೇಲಿಟ್ಟು ಭಕ್ತಿಯಿಂದ ನಮಸ್ಕರಿಸಿದ. ಅಂದಿನಿಂದ ಅನೇಕ ವರ್ಷಗಳವರೆಗೆ ಪವಿತ್ರ ಮಣ್ಣನ್ನು ಪೂಜಿಸುವುದು ಅವನ ದಿನನಿತ್ಯದ ಆಚರಣೆಯಾಯಿತು.
The boy stood there without eating the fruits his sister gave him. Seeing how serious his face looked, his sister was surprised. In a serious voice, he said, “Please don’t ask me to eat anything. Come, I will show you something.” Then, he took out some soil soaked in blood from his lunch box. He bowed to the blood-stained soil and said, “This is very sacred mud. It is wet with the blood of the martyrs who died in the Jallianwala Bagh massacre.” That brave boy was none other than Veer Bhagat Singh. He placed the box filled with the holy soil in a clean spot in the house. He put some freshly picked flowers on top of it and prayed with deep respect. From that day on, worshipping this holy soil became a part of his daily routine for many years.
1919ರಲ್ಲಿ ಏಪ್ರಿಲ್ 13ರಂದು ಜಲಿಯನ್ ವಾಲಾಬಾಗ್‌ನಲ್ಲಿ ಶಾಂತಿಯುತ ಸಭೆ ಸಂಘಟಿಸಿದ್ದರು. ಸುಮಾರು ಇಪ್ಪತ್ತು ಸಾವಿರ ಜನರಿದ್ದ ಸಭೆಯಲ್ಲಿ ಅಮಾಯಕರಾದ, ನಿಶ್ಯಸ್ತರಾದ ಗಂಡಸರು, ಹೆಂಗಸರು, ಮುದುಕರು, ಮಕ್ಕಳು ಎಲ್ಲ ಇದ್ದರು. ಅಲ್ಲಿದ್ದ ಜನರಿಗೆ ಯಾವ ಎಚ್ಚರಿಕೆಯನ್ನೂ ಕೊಡದೆ ಜನರಲ್ ಡಯರ್ ತನ್ನ ಸೈನಿಕರಿಗೆ ಗುಂಡಿನ ದಾಳಿ ನಡೆಸಲು ಆಜ್ಞೆ ನೀಡಿದ. ಈ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ 400 ಜನ ಕೊಲ್ಲಲ್ಪಟ್ಟರು. 1200ಕ್ಕೂ ಹೆಚ್ಚು ಜನ ಗಾಯಗೊಂಡರು.
On April 13, 1919, a peaceful meeting was organized at Jallianwala Bagh. Around twenty thousand people were present in the meeting, including innocent and unarmed men, women, the elderly, and children. Without giving any warning to the people gathered there, General Dyer ordered his soldiers to open fire. In this Jallianwala Bagh massacre, 400 people were killed and more than 1,200 people were injured.
ಆಗ 12 ವರ್ಷದವನಾಗಿದ್ದ ಭಗತಸಿಂಗ್ ಈ ಘಟನೆ ಬಗ್ಗೆ ಕೇಳಿ ದಿಗ್ಧಾಂತನಾದ. ಅವನಿಗೆ ಒಂದು ಮಾತನ್ನಾಡಲೂ ಬಾಯಿಂದ ಸೊಲ್ಲು ಬರಲಿಲ್ಲ. ಆ ವೀರ ಬಾಲಕ ಭಗತ್‌ಸಿಂಗ್, ಕಿಶನ್ ಸಿಂಗ್ ಹಾಗೂ ವೀರಮಾತೆ ವಿದ್ಯಾವತಿಯವರ ಸುಪುತ್ರನಾಗಿ 1907ರ ಸೆಪ್ಟೆಂಬರ್ 28ರಂದು ಪಂಜಾಬಿನ ಲಾಯಲಪುರ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಜನಿಸಿದನು.
Bhagat Singh, who was 12 years old at the time, was shocked to hear about this incident. He was so stunned that he could not utter a single word. That brave boy, Bhagat Singh, was born on September 28, 1907, in Banga village of Punjab’s Lyallpur district, as the son of Kishan Singh and the heroic mother Vidyavati.
ಆಗ ಅಮೃತಸರದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು. ಎಲ್ಲ ಕಡೆ ಪೊಲೀಸರ ಜಮಾವಣೆಯಾಗಿತ್ತು. ಅನುಮಾನಾಸ್ಪದರನ್ನು ಕಂಡಲ್ಲಿ ಗುಂಡಿಕ್ಕುವ ಆಜ್ಞೆಯೂ ಇತ್ತು. ಆದರೆ ಭಗತ್‌ಸಿಂಗ್ ಪೊಲೀಸರ ಕಣ್ಣು ತಪ್ಪಿಸಿ, ಜಲಿಯನ್ ವಾಲಾಬಾಗ್ ತಲುಪಿದ್ದ. ಭಕ್ತಿಯಿಂದ ತಲೆಬಾಗಿ ರಕ್ತದಿಂದ ತೊಯ್ದ ಒಂದು ಚಿಟಿಕೆ ಮಣ್ಣನ್ನು ತೆಗೆದು ತನ್ನ ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡು ಕಣ್ಮುಚ್ಚಿ ಭಕ್ತಿಯಿಂದ ಕೈ ಮುಗಿದು, ಹುತಾತ್ಮರಿಗೆ ಗೌರವ ಸಲ್ಲಿಸಿ, ಪೂಜ್ಯನೀಯ ಆ ಮಣ್ಣನ್ನು ತನ್ನ ಊಟದ ಡಬ್ಬದಲ್ಲಿ ಮನೆಗೆ ತಂದ ಆ ವೀರಬಾಲಕ, ಅದು ತನಗೆ ದೊರೆತ ಪಾರಿತೋಷಕವೆಂಬಂತೆ ತಿಳಿದಿದ್ದ.
At that time, the situation in Amritsar was tense. Police were deployed everywhere, and there were even orders to shoot suspicious people on sight. However, Bhagat Singh dodged the police and reached Jallianwala Bagh. Bowing down with respect, the brave boy picked up a pinch of the blood-soaked soil, applied it as a tilak on his forehead, closed his eyes, and folded his hands in prayer to honor the martyrs. He brought that sacred soil home in his lunch box, treating it as if it were a prized trophy he had won.
ಅದು ಸ್ವಾತಂತ್ರ್ಯ ಇತಿಹಾಸದ ಕರಾಳ ಘಟನೆ; ಅಮೃತಸರದ ಉದ್ಯಾನದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಾವಿರಾರು ಅಮಾಯಕ ಭಾರತೀಯರ ಮೇಲೆ ಪೊಲೀಸರು ಗುಂಡಿನ ಮಳೆಗರೆದಿದ್ದರು. ಆ ಅವಧಿಯಲ್ಲಿ ಪಂಜಾಬಿನ ಅಧಿಕಾರಿಯಾಗಿದ್ದ ಲೆಫ್ಟಿನಂಟ್ ಗೌರ್ನರ್ ಜನರಲ್ ಡಯರ್ ಕಠೋರ ಹೃದಯದ ಅಧಿಕಾರಿ. ಜನರಲ್ಲಿ ಭೀತಿ ಹುಟ್ಟಿಸಲು ಗುಂಡಿನ ಮಳೆಗರೆದಿದ್ದ.
That was a dark chapter in the history of the freedom struggle. The police had rained bullets on thousands of innocent Indians who gathered for a meeting in a park in Amritsar. At that time, the Lieutenant Governor of Punjab, General Dyer, was a cruel-hearted officer. He ordered the firing just to create terror among the people.
ಜಲಿಯನ್ ವಾಲಾಬಾಗ್ ಮಾರಣಹೋಮ ಭಗತ್‌ಸಿಂಗ್ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿತ್ತು. 1921ರಲ್ಲಿ ಅವನು ಒಂದು ನಿರ್ಧಾರಕ್ಕೆ ಬಂದ. ಒಂದಲ್ಲ ಒಂದು ದಿನ ಈ ದಮನಕಾರಿ ಪ್ರಭುತ್ವವನ್ನು ಧ್ವಂಸ ಮಾಡಲು ಏನನ್ನಾದರೂ ಮಾಡಿಯೇ ತೀರುತ್ತೇನೆಂದೂ, ಆಗ ಕ್ರೂರಿ ಬ್ರಿಟೀಷ್ ಆಳ್ವಿಕೆ ಅಂತ್ಯವಾಗುತ್ತದೆ ಎಂದಿದ್ದ. ಮುಂದೆ ಕ್ರಾಂತಿಕಾರಿಗಳ ಸಹಕಾರದಿಂದ, ಮಾತೃಭೂಮಿಯನ್ನು ಗುಲಾಮಗಿರಿಯ ಸಂಕೋಲೆಯಿಂದ ಬಿಡಿಸಲು, ಸ್ವಾತಂತ್ರ್ಯ ಹೋರಾಟದ ಪಥದಲ್ಲಿ ಮುನ್ನಡೆದ. “ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವನವನ್ನೇ ಅರ್ಪಿಸಿ, ಮರಣದಂಡನೆಗೆ ಈಡಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಗುರಿಯನ್ನು ತೋರಿಸಿಕೊಟ್ಟು ಪ್ರಾಣಾರ್ಪಣೆ ಮಾಡಿದ ಭಗತ್ಸಿಂಗ್ ತನ್ನ ತ್ಯಾಗ ಬಲಿದಾನದಿಂದ ಅಮರನಾದನು.
The Jallianwala Bagh massacre left a permanent mark on Bhagat Singh’s mind. In 1921, he made a firm decision. He vowed that one day, he would definitely do something to destroy this oppressive government so that the cruel British rule would come to an end. Later, with the help of fellow revolutionaries, he moved forward on the path of the freedom struggle to free his motherland from the chains of slavery. Giving up his life for freedom with the slogan “Inquilab Zindabad”, Bhagat Singh was sentenced to death. By sacrificing his life, he gave a clear direction to the freedom movement and became immortal through his ultimate sacrifice.
ಕೃತಿಕಾರರ ಪರಿಚಯ: ಶ್ರೀ ಚಿದಾನಂದಮೂರ್ತಿ ಜಿ.ಎಸ್. ರವರು ಸಾ. ಶ. 1970ರಲ್ಲಿ ಗೊಪ್ಪೇನಹಳ್ಳಿ, ಕೊಂಡಜ್ಜಿ (ಪೋಸ್ಟ್) ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿ ಜನಿಸಿದರು. ಮೈಸೂರು ಮಾನಸಗಂಗೋತ್ರಿಯಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣ ಹಾಗೂ ಇಂಗ್ಲೀಷ್ ಎಂ.ಎ. ಮಾಡಿರುತ್ತಾರೆ. ಕೆಲವು ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. 2015 ರಿಂದ ತಮ್ಮ ಹುಟ್ಟೂರಿನಲ್ಲಿ ಪೂರ್ಣ ಪ್ರಮಾಣದ ರೈತನಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಪಾಠವನ್ನು ಶ್ರೀ ಚಿದಾನಂದಮೂರ್ತಿ ಜಿ.ಎಸ್. ರವರು ಬರೆದಿರುವ ‘ಜೀವನ ಸಾಧನೆ ಮಾಲಿಕೆ’ಯ ಭಗತ್‌ಸಿಂಗ್ ಜೀವನ ಚರಿತ್ರೆ ಕೃತಿಯಿಂದ ಆರಿಸಿಕೊಳ್ಳಲಾಗಿದೆ. About the Author Mr. Chidanandamurthy G.S. was born in 1970 in Goppenahalli, Kondajji (Post), Turuvekere Taluk, Tumakuru District. He completed his postgraduate studies in Ancient History and Archaeology at Mysore Manasagangotri, and also holds an M.A. in English. He has served as a teacher in a few high schools. Since 2015, he has been working as a full-time organic farmer in his hometown. This lesson is taken from the biography Bhagat Singh, which is part of the ‘Jeevana Sadhane Maalike’ (Life Achievement Series) written by Mr. Chidanandamurthy G.S
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
೧. ಜಲಿಯನ್ ವಾಲಾಬಾಗ್ ನಲ್ಲಿ ಶಾಂತಿಯುತ ಸಭೆ ಯಾವಾಗ ನಡೆಯಿತು?
ಉ: ಜಲಿಯನ್ ವಾಲಾಬಾಗ್ ನಲ್ಲಿ ಶಾಂತಿಯುತ ಸಭೆ ಏಪ್ರಿಲ್ ೧೩,೧೯೧೯ನಲ್ಲಿ ನಡೆಯಿತು.
೨. ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ನ ಮಣ್ಣಿನ ಕುರಿತು ತನ್ನ ತಂಗಿಗೆ ಏನೆಂದು ಹೇಳುತ್ತಾನೆ?
ಉ: “ಇದು ಬಹಳ ಪೂಜ್ಯನೀಯವಾದ ಮಣ್ಣು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ರಕ್ತದಿಂದ ಈ ಮಣ್ಣು ಒದ್ದೆಯಾಗಿದೆ” ಎಂದು ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ನ ಮಣ್ಣಿನ ಕುರಿತು ತನ್ನ ತಂಗಿಗೆ ಹೇಳಿದನು.
೩.ಅಮಾಯಕ ಭಾರತೀಯರ ಮೇಲೆ ಗುಂಡಿನ ಮಳೆಗರೆದ ಅಧಿಕಾರಿಯ ಹೆಸರೇನು?
ಉ: ಅಮಾಯಕ ಭಾರತೀಯರ ಮೇಲೆ ಗುಂಡಿನ ಮಳೆಗರೆದ ಅಧಿಕಾರಿಯ ಹೆಸರು ಜನರಲ್ ಡಯರ್.
೪. ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ಮಾರಣಹೋಮದಿಂದ ತೆಗೆದುಕೊಂಡ ನಿರ್ಧಾರವೇನು?
ಉ: ಒಂದಲ್ಲ ಒಂದು ದಿನ ಈ ದಮನಕಾರಿ ಪ್ರಭುತ್ವವನ್ನು ನಾಶ ಮಾಡಲು ಏನನ್ನಾದರೂ ಮಾಡಿಯೇ ತೀರುತ್ತೇನೆ ಎಂದುಕೊಂಡ. ಆಗ ಕ್ರೂರ ಬ್ರಿಟಿಷ್ ಆಳ್ವಿಕೆ ಅಂತ್ಯವಾಗುತ್ತದೆ ಎಂದನು. ಕ್ರಾಂತಿಕಾರಿಗಳ ಸಹಕಾರದಿಂದ ಮಾತ್ರ ಭೂಮಿಯನ್ನು ಗುಲಾಮಗಿರಿಯಿಂದ ಬಿಡಿಸಲು ಸ್ವಾತಂತ್ರ ಹೋರಾಟದಲ್ಲಿ ಮುನ್ನಡೆದ. “ಇಂಕಲಾಬ್ ಜಿಂದಾಬಾದ್” ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯಕ್ಕಾಗಿ ತನ್ನ ಜೀವ ಅರ್ಪಿಸಿ ಮರಣದಂಡನೆಗೆ ಈಡಾದ.