Kouravendrana konde neenu kannada poem grade X. In Kouravendrana konde neenu grade 10th poem is written by Kumarvyasa. Kumarvyasa translated Mahabharata to Kannada
Krishna, hoping to bring Karna to the Pandavas’ side, approaches him with a strategic plan. He invites Karna into his chariot, speaks kindly, and treats him like a friend. Krishna assures Karna that he has nothing to fear and emphasizes that there is no real difference between Karna, the Pandavas, the Kauravas, and the Yadavas. He even offers Karna the throne if he agrees to support the Pandavas.

In Kouravendrana konde neenu Kumarvyasa continues to writes, however Karna feels uneasy and refuses the offer, explaining that Dhuryodhana gave him shelter when no one else did. Out of loyalty, he declares that he could never betray Duryodhana. Seeing Karna’s determination, Krishna decides to reveal a shocking truth—Karna’s true birth story. Krishna tells him that he is the son of Kunti and the Sun God (Surya), making him the elder brother of the Pandavas.

This revelation deeply unsettles Karna, leaving him torn between his loyalty to Duryodhana and his newly discovered connection to the Pandavas. After a moment of contemplation, Karna tells Krishna that he killed kauvravendra that is “Kouravendrana konde neenu”. He continues that is bound to his dharma. He vows to fight for Duryodhana but promises Krishna that he will hold back in battle and ensure the Pandavas’ victory, though he knows it will cost him his life. Kouravendrana konde neenu means you killed kuravendra, that is Duryodana.

ಕೌರವೇಂದ್ರನ ಕೊಂದೆ ನೀನು

ಕವಿಕೃತಿ ಪರಿಚಯ: ಕುಮಾರವ್ಯಾಸ   

ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪನು ಕ್ರಿ.ಶ.ಸುಮಾರು ೧೪೩೦ರಲ್ಲಿ  ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದನು. ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂದು ಹೆಸರನ್ನು ಹೊಂದಿರುವ ಇವರು ಕರ್ಣಾಟ ಭಾರತ ಕಥಾಮಂಜರಿ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾನೆ. ಇವರು ತನ್ನ ಕೃತಿಯಲ್ಲಿ ರೂಪಕಾಲಂಕಾರವನ್ನೂ ಹೆಚ್ಚಾಗಿ ಬಳಸಿದ್ದರಿಂದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದಾನೆ. ಕರ್ನಾಟಕ ರತ್ನ ಕಥಾಮಂಜರಿ ಕೃತಿಯನ್ನು ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಅ. ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು ?
ಉ: ಕೃಷ್ಣನು ಕರ್ಣನ ಸಂಗಡ ಸರಸವನ್ನು ಮಾಡಿ ಕೈಹಿಡಿದು ಎಳೆದು ರಥದ ಪೀಠದಲ್ಲಿ ಕೂರಿಸಿದನು.
೨. ಕುಮಾರವ್ಯಾಸನ ಆರಾಧ್ಯದೈವ ಯಾರು ?
ಉ: ಕುಮಾರವ್ಯಾಸನ ಆರಾಧ್ಯ ದೈವ ಗದುಗಿನ ವೀರನಾರಾಯಣ.
೩. ಅಶ್ವಿನಿದೇವತೆಗಳ ವರಬಲದಿಂದ ಜನಿಸಿದವರು ಯಾರು?
ಉ: ಅಶ್ವಿನಿದೇವತೆಗಳ ವರಬಲದಿಂದ  ಜನಿಸಿದವರು ನಕುಲ ಮತ್ತು ಸಹದೇವ.
೪. ಕುಮಾರವ್ಯಾಸನಿಗಿರುವ ಬಿರುದು ಯಾವುದು?
ಉ: ಕುಮಾರವ್ಯಾಸನಿಗಿರುವ  ಬಿರುದು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’.
೫. ನಾರಣಪ್ಪನಿಗೆ ಕುಮಾರವ್ಯಾಸ ಎಂಬ ಹೆಸರು ಏಕೆ ಬಂತು?
ನಾರಾಯಣಪ್ಪನು  ವ್ಯಾಸರ ಸಂಸ್ಕೃತ ‘ಮಹಾಭಾರತವನ್ನು’ ಕನ್ನಡದಲ್ಲಿ ‘ಕರ್ನಾಟಕ ಕಥಾಮಂಜರಿ’ ಎಂಬ ಕೃತಿ ರಚಿಸಿದ್ದರಿಂದ ಕುಮಾರವ್ಯಾಸ ಎಂಬ ಹೆಸರು ಬಂತು.

ಆ. ಎರಡು-ಮೂರು ವಾಕ್ಯಗಳಲ್ಲಿ  ಉತ್ತರಿಸಿ.

೧. ಕೃಷ್ಣನು ಕರ್ಣನಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?
ಉ: ಕರ್ಣ ನಿನಗೂ, ಪಾಂಡವರಿಗೂ, ಯಾದವರಗೂ, ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ. ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ಎಂದು  ಹೇಳುತ್ತಾ  ಕೃಷ್ಣನು  ಕರ್ಣನ ಕಿವಿಯಲ್ಲಿ ಭಯವನು ಬಿತ್ತಿದನು.

೨. ಕುಂತಿ, ಮಾದ್ರಿಯರು ಯಾರ‍್ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?
ಉ: ಕುಂತಿಯು ಯಮಧರ್ಮನ  ಅನುಗ್ರಹದಿಂದ ಧರ್ಮರಾಯನನ್ನು, ವಾಯುವಿನ ಅನುಗ್ರಹದಿಂದ ಭೀಮನನ್ನು, ಇಂದ್ರನ ಅನುಗ್ರಹದಿಂದ ಅರ್ಜುನನ್ನು ಪಡೆದಳು. ಮಾದ್ರಿಯು ಅಶ್ವಿನಿ ದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು.

೩. ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನಮನದಲ್ಲಿ  ಮೂಡಿದ ಭಾವನೆಗಳೇನು ?
ಉ: ಕೃಷ್ಣನು  ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆಹಿಗ್ಗಿದವು. ಕಂಬನಿಯು ರಭಸದಿಂದ ಮುಂದೆ ಬಂತು. ಅಧಿಕವಾಗಿ  ಕರ್ಣನು ದುಃಖಗೊಂಡು  ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡಾಯಿತು” ಎಂದನು. ಹರಿಯ  ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ ಸುಮ್ಮನೆ ಹೋಗುವುದಿಲ್ಲ. ಕೃಷ್ಣನು  “ನನ್ನವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು” ಎಂದು ಮನದಲ್ಲಿ ನೊಂದುಕೊಂಡನು.

೪. ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು?
ಉ: ಕರ್ಣನು ಕೃಷ್ಣನಿಗೆ  “ನಾನು ರಾಜ್ಯದ  ಸಿರಿಸಂಪತ್ತಿಗೆ  ಸೋಲುವವನಲ್ಲ, ಪಾಂಡವರು, ಕೌರವರು ಸೇವೆಯನ್ನು  ಮಾಡುವುದು  ನನಗೆ   ಇಷ್ಟವಿಲ್ಲ. ಆದರೆ  ನನ್ನನ್ನು  ಕಾಪಾಡಿದ  ಒಡೆಯನಾದ  ಧುರ್ಯೋಧನನಿಗೆ  ಶತ್ರುಗಳ  ಶಿರವನ್ನು  ಕಡಿದು  ತಂದು  ಒಪ್ಪಿಸುವ  ಆವೇಶದಲ್ಲಿ  ಇದ್ದೆನು. ಆದರೆ ನೀನು ನನ್ನ ಜನ್ಮ ರಹಸ್ಯವನ್ನು ಹೇಳಿ ಧುರ್ಯೋಧನನ್ನು  ಕೊಂದೆ” ಎಂದನು.

೫. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?
ಉ:ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು. ನಾನು ಕೌರವನ  ಉಪಕರಾದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು, ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಪಾಂಡವರನ್ನು ನೋಯಿಸುವುದಿಲ್ಲ. ಇದು ಸೂರ್ಯನ ಮೇಲಾಣೆ” ಎಂದನು.

ಇ. ಎಂಟು-ಹತ್ತು  ವಾಕ್ಯಗಳಲ್ಲಿ  ಉತ್ತರಿಸಿ. 

೧. ಕರ್ಣನಿಗೆ ಕೃಷ್ಣನು ಒಡ್ಡಿದ ಆಮಿಷಗಳೇನು?
ಉ: ಕರ್ಣ ನಿನಗೂ, ಪಾಂಡವರಿಗೂ, ಯಾದವರಗೂ, ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ. ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ಎಂದು  ಕರ್ಣನ ಜನ್ಮವೃತ್ತಾಂತವನ್ನು ಕೃಷ್ಣನು  ಹೇಳಿದನು. ನಿನ್ನನ್ನು ಹಸ್ತಿನಾಪುರದ ರಾಜ್ಯದ ರಾಜನನ್ನಾಗಿ ಮಾಡುವೆನು. ಪಾಂಡವರು, ಕೌರವರು ನಿನ್ನನ್ನು ಓಲೈಸುವರು. ನಿನಗೆ  ಎರಡು  ವಂಶವು  ಮರುಮಾತನಾಡದೆ ಸೇವೆಯನ್ನು  ಮಾಡುವವು. ನೀನು ಧುರ್ಯೋಧನನ  ಬಾಯೆಂಜಲಿಗೆ  ಕೈಯೊಡ್ಡುವುದೇ? ಎಡಭಾಗದಲ್ಲಿ  ಕೌರವೇಂದ್ರರ ಸಮೂಹ, ಬಲಭಾಗದಲ್ಲಿ ಪಾಂಡು ಮಕ್ಕಳ ಸಮೂಹ, ಮುಂದೆ ಮಾದ್ರ, ಮಾಗದ, ಯಾದವಾದಿಗಳು. ಮಧ್ಯದಲ್ಲಿ ನೀನು ರಾಜಸಭೆಯಲ್ಲಿ  ಪ್ರಕಾಶಿಸುವ  ಸೊಬಗನ್ನು  ತೊರೆದು, ಧುರ್ಯೋಧನ 
ಹೇಳಿದ ಮಾತಿಗೆಲ್ಲ  ‘ಒಡೆಯ ಪ್ರಸಾದ ಅನುಗ್ರಹವಾಗಲಿʼ ಎಂಬುದು  ನಿನಗೆ ಕಷ್ಟವಾಗುವುದಿಲ್ಲವೇ?” ಎಂದು ಆಮಿಷ ಒಡ್ಡಿದನು.

೨. ಪಾಂಡವರು ಸೋದರರೆಂದು ತಿಳಿದಾಗ ಕರ್ಣನ ಮನಸ್ಥಿತಿಯನ್ನು ತಿಳಿಸಿ.
ಉ: ಕೃಷ್ಣನು  ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳಸೆರೆಹಿಗ್ಗಿದವು. ಕಂಬನಿಯು ರಭಸದಿಂದ ಮುಂದೆ ಬಂತು. ಅಧಿಕವಾಗಿ  ಕರ್ಣನು ದುಃಖಗೊಂಡು  ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡಾಯಿತು” ಎಂದಕೊಂಡನು. ಹರಿಯ  ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ ಸುಮ್ಮನೆ ಹೋಗುವುದಿಲ್ಲ. ಕೃಷ್ಣನು ತನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ಎಂದು ಮನದಲ್ಲಿ ನೊಂದುಕೊಂಡನು. ಅವನಿಗೆ ತಾನು ಏನು ಮಾಡಬೇಕೆಂಬುದು ತಿಳಿಯದಾಯಿತು. ತಾನು ರಾಜ್ಯದ  ಸಿರಿಸಂಪತ್ತಿಗೆ  ಸೋಲುವವನಲ್ಲ. ಪಾಂಡವರು, ಕೌರವರು ಸೇವೆಯನ್ನು  ಮಾಡುವುದು ತನಗೆ  ಇಷ್ಟವಿಲ್ಲ. ಆದರೆ  ನನ್ನನ್ನು  ಕಾಪಾಡಿದ  ಒಡೆಯನಾದ ಧುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು  ತಂದು  ಒಪ್ಪಿಸುವ  ಆವೇಶದಲ್ಲಿ  ಇರುವಾಗ ಕೃಷ್ಣನು ತನ್ನ ಜನ್ಮ ರಹಸ್ಯವನ್ನು ಹೇಳಿ ಧುರ್ಯೋಧನನ್ನು  ಕೊಂದನು ಎಂದು ದುಃಖಿಸಿದನು. ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು. ತಾನು ಕೌರವನ  ಉಪಕಾರದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು, ತನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಪಾಂಡವರನ್ನು ನೋಯಿಸುವುದಿಲ್ಲ. ಇದು ಸೂರ್ಯನ ಮೇಲಾಣೆ ಎಂದುಕೊಂಡನು.

೩. ಕರ್ಣನ ನಿರ್ಧಾರ ಸರಿ ಎನ್ನುವಿರಾ? ಏಕೆ?
ಉ: ಕೃಷ್ಣನು  ಕರ್ಣನ ಜನ್ಮರಹಸ್ಯವನ್ನು ತಿಳಿಸಿ ಆತನನ್ನು ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿ  ಮಾಡುವುದಾಗಿ ತಿಳಿಸುತ್ತಾನೆ. ಸೂರ್ಯನ  ಅನುಗ್ರಹದಿಂದ ಜನಿಸಿದ  ಕರ್ಣನನ್ನು ಮಗುವಾಗಿದ್ದಾಗ ಕುಂತಿಯು ನೀರಿನಲ್ಲಿ ತೇಲಿಬಿಟ್ಟಳು.ಈ ಮಗುವನ್ನು ಅಂಬಿಗನು ಬೆಳೆಸಿದನು. ಕರ್ಣನು ಸೂತಪುತ್ರನಾಗಿ  ಬೆಳೆದನು. ಸೂತಪುತ್ರನೆಂದು ಸಮಾಜದಲ್ಲಿ ಆತನ ಶಕ್ತಿ, ಸಾಮರ್ಥ್ಯಕ್ಕೆ ಸರಿಯಾಗಿ ಸ್ಥಾನಮಾನ ದೊರೆಯಲಿಲ್ಲ. ಅಂತಹ  ಸಂದರ್ಭದಲ್ಲಿ  ಧುರ್ಯೋಧನ  ಕರ್ಣನನ್ನ  ಗೆಳೆಯನಾಗಿ ಸ್ವೀಕರಿಸಿ  ಅಂಗರಾಜ್ಯದ  ರಾಜನಾಗಿ ಮಾಡಿದನು. ಆತನಿಗೆ ಗೌರವವನ್ನು ದೊರಕಿಸಿದನು. ಈ ಕಾರಣಗಳಿಂದ  ಕರ್ಣನು ಧುರ್ಯೋಧನನೇ ತನಗೆ ಒಡೆಯನೆಂದುಕೊಂಡನು. ಧುರ್ಯೋಧನನ ಹಗೆಗಳು ತನಗೂ ಹಗೆಗಳೇ,  ಆತನ ಮಿತ್ರರು  ತನಗೂ  ಮಿತ್ರರು ಎಂದುಕೊಂಡನು. ಧುರ್ಯೋಧನನಿಗೆ  ಯುದ್ದದಲ್ಲಿ  ನಿಜ ಉಪಕಾರವನ್ನು ಶ್ರೇಷ್ಠತೆಯನ್ನು ತೋರಿಸುತ್ತೇನೆ ಎಂದುಕೊಂಡ ಕರ್ಣನ ನಿರ್ಧಾರ ಸರಿಯಾಗಿದೆ. ಕೌರವನು  ತನಗೆ  ಮಾಡಿದ ಉಪಕಾರವನ್ನು ಯುದ್ಧರಂಗದಲ್ಲಿ ತೀರಿಸುತ್ತೇನೆ. ತಮ್ಮಂದಿರನ್ನು ನೋಯಿಸದೆ, ಸೈನ್ಯಬಲವನ್ನು  ಮಾರಿಗೆ  ಔತಾಣವನ್ನಾಗಿ ನೀಡಿ ಧುರ್ಯೋಧನನ ಋಣವನ್ನು ತೀರಿಸಿ, ಶರಿರವನ್ನು  ತ್ಯಜಿಸುತ್ತೇನೆ ಎಂಬ ಕರ್ಣನ ಮಾತು ಆತನ ನಿರ್ಧಾರ ಧರ್ಮವೇ ಆಗಿದೆ ಹಾಗೂ ಸರಿಯಾಗಿಯೇ ಇದೆ ಎಂಬುದು ನನ್ನ ಅನಿಸಿಕೆ.

ಈ. ಸಂದರ್ಭನುಸಾರ ಸ್ವಾರಸ್ಯ  ಬರೆಯಿರಿ.

೧. “ರವಿಸುತನ ಕಿವಿಯಲಿ ಬಿತ್ತಿದನು ಭಯವ”

ಆಯ್ಕೆ: ಈ ವಾಕ್ಯವನ್ನು  ಕುಮಾರವ್ಯಾಸನೆಂದು  ಪ್ರಸಿದ್ಧನಾದ  ಗದುಗಿನ ನಾರಣಪ್ಪನು ರಚಿಸಿರುವ  ‘ಕರ್ಣಾಟಕ ರತ್ನ ಕಥಾಮಂಜರಿ’ ಎಂಬ ಮಹಾಕಾವ್ಯದಿಂದ  ಆಯ್ದು  ‘ಕೌರವೇಂದ್ರನ  ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕೃಷ್ಣನು  ಪಾಂಡವ  ಕೌರವರ ನಡುವೆ ಸಂಧಿ ಮಾಡಲು ಹೋಗಿ ವಿಫಲನಾಗಿ ಹಿಂದಿರುವಾಗ  ಕರ್ಣನನ್ನು ರಥದಲ್ಲಿ ಕರೆದುಕೊಂಡು ಬಂದು  ಮೈದುನತನದ  ಸರಸದಲ್ಲಿ  ಮಾತನಾಡಿಸುವ ಸಂದರ್ಭದಲ್ಲಿ  ಈ ಮಾತನ್ನು ಕೃಷ್ಣ ಕರ್ಣನಿಗೆ ಹೇಳುತ್ತಾನೆ.
ಸ್ವಾರಸ್ಯ : ಕರ್ಣ ನಿನಗೂ, ಪಾಂಡವರಿಗೂ, ಯಾದವರಗೂ, ಕೌರವರಿಗೂ ವಂಶ ಗೌರವದಲ್ಲಿ ಭೇದವಿಲ್ಲ. ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ಎಂದು  ಹೇಳುತ  ಕೃಷ್ಣನು  ಕರ್ಣನ ಕಿವಿಯಲ್ಲಿ  ಭಯವನ್ನು ಬಿತ್ತಿದನು ಎಂದು ಕವಿ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾರೆ.

೨. “ಬಾಯ್ದಂಬುಲಕೆ ಕೈಯಾನುವರೆ”

ಆಯ್ಕೆ: ಈ ವಾಕ್ಯವನ್ನು  ಕುಮಾರವ್ಯಾಸನೆಂದು  ಪ್ರಸಿದ್ಧನಾದ  ಗದುಗಿನ ನಾರಣಪ್ಪನು ರಚಿಸಿರುವ  ‘ಕರ್ಣಾಟಕ ರತ್ನ ಕಥಾಮಂಜರಿ’ ಎಂಬ ಮಹಾಕಾವ್ಯದಿಂದ  ಆಯ್ದು  ‘ಕೌರವೇಂದ್ರನ  ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಸಂದರ್ಭ: ಕೃಷ್ಣನು  ಪಾಂಡವ  ಕೌರವರ ನಡುವೆ ಸಂಧಿ ಮಾಡಲು ಹೋಗಿ ವಿಫಲನಾಗಿ ಹಿಂದಿರುವಾಗ  ಕರ್ಣನನ್ನು ರಥದಲ್ಲಿ ಕರೆದುಕೊಂಡು ಬಂದು  ಮೈದುನತನದ  ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ  ಈ ಮಾತನ್ನು  ಕವಿಯು ಹೇಳುತ್ತಾನೆ.
ಸ್ವಾರಸ್ಯ: ಕರ್ಣ ನೀನು  ಹಸ್ತಿನಾಪುರದ  ರಾಜನಾದರೆ ನಿನಗೆ  ಕೌರವರು ಮತ್ತು  ಪಾಂಡವರು  ಸೇವೆಯನ್ನು  ಮಾಡುವರು. ಅದನ್ನು  ಬಿಟ್ಟು ನೀನು ಧುರ್ಯೋಧನನ  ಬಾಯೆಂಜಲು  ಕೈಯೊಡ್ಡುವುದು  ಸರಿಯೇ  ಎಂದು  ಕೃಷ್ಣನುಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ .

೩. “ಜೀಯ ಹಸಾದವೆಂಬುದು  ಕಷ್ಟ”
ಆಯ್ಕೆ: ಈ ವಾಕ್ಯವನ್ನು  ಕುಮಾರವ್ಯಾಸನೆಂದು  ಪ್ರಸಿದ್ಧನಾದ  ಗದುಗಿನ ನಾರಣಪ್ಪನು ರಚಿಸಿರುವ  ‘ಕರ್ಣಾಟಕ ರತ್ನ ಕಥಾಮಂಜರಿ’ ಎಂಬ ಮಹಾಕಾವ್ಯದಿಂದ  ಆಯ್ದು  ‘ಕೌರವೇಂದ್ರನ  ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕೃಷ್ಣನು  ಪಾಂಡವ  ಕೌರವರ ನಡುವೆ ಸಂಧಿ ಮಾಡಲು ಹೋಗಿ ವಿಫಲನಾಗಿ ಹಿಂದಿರುವಾಗ  ಕರ್ಣನನ್ನು ರಥದಲ್ಲಿ ಕರೆದುಕೊಂಡು ಬಂದು  ಮೈದುನತನದ  ಸರಸದಲ್ಲಿ  ಮಾತನಾಡಿಸುವ ಸಂದರ್ಭದಲ್ಲಿ  ಈ ಮಾತನ್ನು ಕೃಷ್ಣ ಕರ್ಣನಿಗೆ ಹೇಳುತ್ತಾನೆ.
ಸ್ವಾರಸ್ಯ: ಕರ್ಣ ನಿನ್ನ ಎಡಭಾಗದಲ್ಲಿ  ಕೌರವೇಂದ್ರರ ಸಮೂಹ, ಬಲಭಾಗದಲ್ಲಿ ಪಾಂಡು ಮಕ್ಕಳ ಸಮೂಹ, ಮುಂದೆ ಮಾದ್ರ, ಮಾಗದ, ಯಾದವಾದಿಗಳು. ಮಧ್ಯದಲ್ಲಿ ನೀನು ರಾಜಸಭೆಯಲ್ಲಿ  ಪ್ರಕಾಶಿಸುವ ಸೊಬಗನ್ನು  ತೊರೆದು, ಕೌರವನಿಗೆ  ಜೀಯಪ್ರಸಾದವೆಂಬುದು ಕಷ್ಟವಾಗುವುದಿಲ್ಲವೇ?” ಎಂದು ಕೃಷ್ಣನು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

೪. “ನಿನ್ನಪದೆಸೆಯ ಬಯಸುವನಲ್ಲ”
ಆಯ್ಕೆ: ಈ ವಾಕ್ಯವನ್ನು  ಕುಮಾರವ್ಯಾಸನೆಂದು  ಪ್ರಸಿದ್ಧನಾದ  ಗದುಗಿನ ನಾರಣಪ್ಪನು ರಚಿಸಿರುವ  ‘ಕರ್ಣಾಟಕ ರತ್ನ ಕಥಾಮಂಜರಿ’ ಎಂಬ ಮಹಾಕಾವ್ಯದಿಂದ  ಆಯ್ದು  ‘ಕೌರವೇಂದ್ರನ  ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕೃಷ್ಣನು  ಪಾಂಡವ  ಕೌರವರ ನಡುವೆ ಸಂಧಿ ಮಾಡಲು ಹೋಗಿ ವಿಫಲನಾಗಿ ಹಿಂದಿರುವಾಗ  ಕರ್ಣನನ್ನು ರಥದಲ್ಲಿ ಕರೆದುಕೊಂಡು ಬಂದು  ಮೈದುನತನದ  ಸರಸದಲ್ಲಿ  ಮಾತನಾಡಿಸುವ ಸಂದರ್ಭದಲ್ಲಿ 
ಈ ಮಾತನ್ನು ಕೃಷ್ಣ ಕರ್ಣನಿಗೆ ಹೇಳುತ್ತಾನೆ.
ಸ್ವಾರಸ್ಯ: ತನ್ನ ಜನ್ಮ ರಹಸ್ಯವನ್ನು ತಿಳಿದು ಕರ್ಣನು ಚಿಂತಿತನಾಗಿ ಮೌನವಾದಾಗ ಕೃಷ್ಣನು ಅವನನ್ನು ಸಮಾಧಾನ ಪಡಿಸುವಾಗ ಈ ಮಾತನ್ನು ಹೇಳಿರುವದು ಸ್ವಾರಸ್ಯ ಪೂರ್ಣವಾಗಿ ಮೂಡಿಬಂದಿದೆ.

೫. “ಮಾರಿಗೌತಣವಾಯ್ತು ನಾಳಿನ ಭಾರತವು” 
ಆಯ್ಕೆ: ಈ ವಾಕ್ಯವನ್ನು  ಕುಮಾರವ್ಯಾಸನೆಂದು  ಪ್ರಸಿದ್ಧನಾದ  ಗದುಗಿನ ನಾರಣಪ್ಪನು ರಚಿಸಿರುವ  ‘ಕರ್ಣಾಟಕ ರತ್ನ ಕಥಾಮಂಜರಿ’ ಎಂಬ ಮಹಾಕಾವ್ಯದಿಂದ  ಆಯ್ದು  ‘ಕೌರವೇಂದ್ರನ  ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕೃಷ್ಣನು  ಪಾಂಡವ  ಕೌರವರ ನಡುವೆ ಸಂಧಿ ಮಾಡಲು ಹೋಗಿ ವಿಫಲನಾಗಿ ಹಿಂದಿರುವಾಗ  ಕರ್ಣನನ್ನು ರಥದಲ್ಲಿ ಕರೆದುಕೊಂಡು ಬಂದು  ಮೈದುನತನದ  ಸರಸದಲ್ಲಿ  ಮಾತನಾಡಿಸುವ ಸಂದರ್ಭದಲ್ಲಿ 
ಈ ಮಾತನ್ನು ಕೃಷ್ಣ ಕರ್ಣನಿಗೆ ಹೇಳುತ್ತಾನೆ.
ಸ್ವಾರಸ್ಯ:  ಕರ್ಣನು ಮುಂದೆ ನಡೆಯುವ ಮಹಾಭಾರತ ಕುರುಕ್ಷೇತ್ರ ಯುದ್ಧದ ಭೀಕರತೆಯನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿಹೇಳುತ್ತಾನೆ .

ಉ. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರದಿಂದ ಪೂರ್ಣಗೊಳಿಸಿ. 

೧ ) ರಾಜೀವಸಖ ಎಂದರೆ ಸೂರ್ಯ ಎಂದು ಅರ್ಥ.
೨ ) ಗದುಗಿನ ಭಾರತವು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ.
೩ ) ಅಶ್ವಿನೀದೇವತೆಗಳ ವರಬಲದಿಂದ ನಕುಲ – ಸಹದೇವರು ಜನಿಸಿದರು.
೪ ) ಕರ್ಣನು ಸೂರ್ಯನ ಅನುಗ್ರಹದಿಂದ ಜನಿಸಿದನು . 
೫ ) ಗದುಗಿನ ಸಮೀಪದ ಕೋಳಿವಾಡದಲ್ಲಿ ಕುಮಾರವ್ಯಾಸನು ಜನಿಸಿದನು.

ಭಾಷಾ ಚಟುವಟಿಕೆ

೧. ಅಲಂಕಾರವನ್ನು ಹೆಸರಿಸಿ , ಸಮನ್ವಯಗೊಳಿಸಿ . 

“ಮಾರಿಗೌತನವಾಯ್ತು ನಾಳಿನ ಭಾರತವು” 

ಆಲಂಕಾರ : ರೂಪಕಾಲಂಕಾರ 

ಉಪಮೇಯ : ಭಾರತ ಯುದ್ಧ 

ಉಪಮಾನ : ಮಾರಿಯ ಔತಣ 

ಸಮನ್ವಯ : ಇಲ್ಲಿ ಉಪಮೇಯವಾಗಿರುವ ಭಾರತ ಯುದ್ದಕ್ಕೂ ಉಪಮಾನವಾಗಿರುವ ಮಾರಿಯ ಔತಣಕ್ಕೂ ಅಭೇದ ಕಲ್ಪಿಸಲಾಗಿದೆ . ಆದ್ದರಿಂದ ಇದು ರೂಪಕಾಲಂಕಾರವಾಗಿದೆ .

೨. ವಿಗ್ರಹಿಸಿ , ಸಮಾಸದ ಹೆಸರನ್ನು ತಿಳಿಸಿ. 

೧ ) ಇನತನೂಜ = ಇನನ ತನೂಜನು ಯಾರೋ ಅವನೇ ( ಸೂರ್ಯ ) – ಬಹುವೀಹಿಸಮಾಸ 

೨ ) ದನುಜರಿಪು = ದನುಜರಿಗೆ ರಿಪ ( ವೈರಿ ) ಆಗಿರುವವನು ಯಾರೋ ಅವನೇ ( ವಿಷ್ಣು ಅಥವಾ ಕೃಷ್ಣ ) – ಬಹುವೀಹಿಸಮಾಸ 

೩ ) ಮುರಾರಿ = ಮುರನಿಗೆ ಅರಿ ( ಶತ್ರು ) ಆದವನು ಯಾರೋ ಅವನೇ ( ವಿಷ್ಣು ಅಥವಾ ಕೃಷ್ಣ – ಬಹುವೀಹಿ ಸಮಾಸ 

೪ ) ಮೇದಿನಿಪತಿ = ಮೇದಿನಿಗೆ ( ಭೂಮಿಗೆ ) ಪತಿಯಾದವನು ( ಒಡೆಯನಾದವನು ) ಯಾರೋ ಅವನೇ – ಬಹುವೀಹಿಸಮಾಸ

 ೫ ) ಕೈಯಾನು = ಕೈಯನ್ನು + ಆನು – ಕ್ರಿಯಾಸಮಾಸ . 

೬ ) ಮಾದ್ರಮಾಗಧಯಾದವರು = ಮಾದ್ರರೂ + ಮಾಗಧರೂ + ಯಾದವರೂ – ದ್ವಂದ್ವ ಸಮಾಸ

 ೭ ) ಹೊಗೆದೋರು = ಹೊಗೆಯನ್ನು + ತೋರು – ಕ್ರಿಯಾಸಮಾಸ

 ೮ ) ರಾಜೀವಸಖ = ರಾಜೀವನಿಗೆ ( ತಾವರೆಗೆ ) ಸಖನಾದವನು ಯಾರೋ ಅವನೇ ( ಸೂರ್ಯ ) – ಬಹುವೀಹಿಸಮಾಸ

ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧ ಬರೆಯಿರಿ :

೧. ತನುಜ : ಮಗ :: ಸಖ : ಗೆಳೆಯ
೨. ಯುದ್ಧ : ಜುದ್ಧ :: ಪ್ರಸಾದ : ಹಸಾದ
೩. ಭೇದವಿಲ್ಲ : ಆಗಮ ಸಂಧಿ :: ನಿಮ್ಮಡಿಗಳಲಿ : ಲೋಪ
೪. ಕಂದಪದ್ಯ : ನಾಲ್ಕುಸಾಲು :: ಷಟ್ಟದಿ: ಆರುಸಾಲು
೫. ಋಣ : ಹಂಗು :: ರಣ: ಯುದ್ಧ
೬. ಲಕ್ಷ್ಮೀಶ  : ಷಟ್ಪದಿ  :: ಕುಮಾರವ್ಯಾಸ : ಭಾಮಿನೀಷಟ್ಪದಿ  
೭.  ಪಟ್ಟದಿ : ಮಾತ್ರಾಗಣ : : ಚಂಪಕಮಾಲಾವೃತ್ತ: ಅಕ್ಷರಗಣ    
೫ . ಇನತನೂಜ :  ಬಹುರ್ವಿಸಮಾಸ  ::  ಮದ್ರಾಮಾಗಧಯದವರು: ದ್ವಂದ್ವಸಮಾಸ    
೬. ಲಘು : ಒಂದುಮಾತ್ರೆ  :: ಗುರು: ಎರಡು ಮಾತ್ರೆ 
೭. ಮುರಾರಿ::ಕೃಷ್ಣ : :ರವಿಸುತ : ಕರ್ಣ  
೮.ಹಸಾದ : ಪ್ರಸಾದ : : ದಾತಾರ : ದತ್ರ

Click here to download kavravendrana konde neenu

Leave a Reply

Your email address will not be published. Required fields are marked *