Punykoti is a cherished Kannada folk tale. Punykoti kannada poem Grade VI CBSE syllabus. It narrates the story of a truthful cow named Punykoti, who embodies integrity and compassion. One day, while grazing, she encounters a hungry tiger named Arbhuta, who threatens to kill her. Punyakoti requests time to bid farewell to her calf, promising to return. True to her word, she comes back after saying goodbye. Touched by her honesty and unwavering commitment to truth, Arbhuta decides to spare her life. Inspired by her values, he chooses to renounce violence, adopting a peaceful and vegetarian lifestyle.
This heartwarming tale leaves a profound moral lesson, emphasizing the power of truthfulness and compassion. It continues to inspire children and adults alike, reminding us of the strength found in integrity and the possibility of transformation through kindness. Punykoti kannada poem Grade 6th CBSE syllabus.
ಪುಣ್ಯಕೋಟಿ
ಅ. ಪದಗಳ ಅರ್ಥ ಬರೆಯಿರಿ. (Write meaning in kannada)
ವನ = ಕಾಡು,ಬನ ಗವಿ = ಗುಹೆ, ಸತ್ಯ = ನಿಜ, ಹುಲಿ = ವಾಘ್ರ, ಹಸು = ದನ
ಆ. ವಿರುದ್ಧ ಪದಗಳನ್ನು ಬರೆಯಿರಿ. (Write the opposite words)
ಸತ್ಯ X ಸುಳ್ಳು ಮೇಲೆX ಕೆಳಗೆ ಹಿಂದೆ X ಮುಂದೆ ಸುಂದರ X ಕುರೂಪ ಸಂಜೆ X ಬೆಳಿಗ್ಗೆ
ಇ. ವಚನ ಬದಲಿಸಿ ಬರೆಯಿರಿ. (Change to Singular/Plural)
ಕರು = ಕರುಗಳು ಮರ = ಮರಗಳು ತಂದೆ = ತಂದೆಯಂದಿರು ಗೊಲ್ಲ = ಗೊಲ್ಲರು
ಅದು = ಅವು ತಾಯಿ = ತಾಯಂದಿರು
ಈ. ಪದಗಳನ್ನು ಬಿಡಿಸಿ ಬರೆಯಿರಿ. (Split the words)
ಬಾಗಿಲಲ್ಲಿ = ಬಾಗಿಲು + ಅಲ್ಲಿ
ಆಹಾರವನ್ನು = ಆಹಾರ + ಅನ್ನು
ಕೊಳಲನೂದಿ = ಕೊಳಲನು +ಊದಿ
ದೊಡ್ಡಿಯೊಳಗೆ = ದೊಡ್ಡಿ + ಒಳಗೆ
ಉ. ಹೊಂದಿಸಿ ಬರೆಯಿರಿ. (Match the following)
೧. ಕೊಳಲು ಅ. ಹಸು ಗೊಲ್ಲ
೨. ಪುಣ್ಯಕೋಟಿ ಆ. ಗೊಲ್ಲ ಹಸು
೩. ಕರ್ನಾಟಕ ಇ. ಹುಲಿ ನಾಡು
೪. ಅರ್ಬುತ ಈ. ನಾಡು ಹುಲಿ
ಊ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ಬೆಟ್ಟ ಪ್ರದೇಶದಲ್ಲಿ ಯಾರು ವಾಸವಾಗಿದ್ದರು?
ಉ: ಬೆಟ್ಟ ಪ್ರದೇಶದಲ್ಲಿ ಅರ್ಬುತನೆಂಬ ಹುಲಿ ವಾಸವಾಗಿತ್ತು.
೨. ಗೊಲ್ಲನು ಹಸುಗಳನ್ನು ಎಲ್ಲಿ ಕಟ್ಟುತ್ತಿದ್ದನು?
ಉ: ಗೊಲ್ಲನು ಹಸುಗಳನ್ನು ದೊಡ್ಡಿಯೊಳಗೆ ಕಟ್ಟುತ್ತಿದ್ದನು.
೩. ದನಗಳನ್ನು ಯಾರು ಕಾಯುತ್ತಿದ್ದರು?
ಉ: ದನಗಳನ್ನು ಕಾಳಿಂಗನೆಂಬ ಗೊಲ್ಲ ಕಾಯುತ್ತಿದ್ದರು.
೪. ಹುಲಿ ಹೇಗೆ ಪ್ರಾಣ ಬಿಟ್ಟಿತು?
ಉ: ಹುಲಿ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟಿತು.
ಋ. ಎರಡು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two sentences)
೧. ಹಸುವಿನ ನಿಷ್ಠೆಯನ್ನು ಕಂಡು ಹುಲಿ ಏನೆಂದು ನುಡಿಯಿತು?
ಉ: ಹಸುವಿನ ನಿಷ್ಠೆಯನ್ನು ಕಂಡು ಹುಲಿ ನನ್ನ ಒಡಹುಟ್ಟಕ್ಕ ನೀನು. ನಿನ್ನನ್ನು ಕೊಂದರೆ ಪರಮಾತ್ಮನು ಮೆಚ್ಚುವುದಿಲ್ಲ ಎಂದು ನುಡಿಯಿತು,
೨. ಪುಣ್ಯಕೋಟಿ ಇತರ ಹಸುಗಳಲ್ಲಿ ಏನೆಂದು ಮೊರೆಯಿಟ್ಟಿತು?
ಉ:ಹಸುಗಳಲ್ಲಿ ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ, ನನ್ನ ಕಂದನನ್ನು ನಿಮ್ಮವನೆಂದು ಕಾಣಿರಿ ಎಂದು ಪುಣ್ಯಕೋಟಿ ಮೊರೆಯಿಟ್ಟಿತು.
ಎ. ಯಾರು ಯಾರಿಗೆ ಹೇಳಿದರು? (Who told to whom)
೧. ‘ನಿನ್ನ ಕೊಂದು ನಾನೇನು ಪಡೆಯುವೆʼ
ಉ: ಅರ್ಬುತ ಹುಲಿಯು, ಪುಣ್ಯಕೋಟಿಗೆ ಹೇಳಿತು.
೨. ʼ ಅಮ್ಮ ತಬ್ಬಲಿ ಮಾಡಲೇಕೆ ʼ
ಉ: ಪುಣ್ಯಕೋಟಿಯ ಕರು ಪುಣ್ಯಕೋಟಿಗೆ ಹೇಳಿತು.
೩. ʼ ಸತ್ಯವೇ ನಮ್ಮ ತಾಯಿ ತಂದೆ ʼ
ಉ: ಪುಣ್ಯಕೋಟಿಯು ಕರುವಿಗೆ ಹೇಳಿತು.
೪. ʼ ಕಂದ ನಿಮ್ಮವನೆಂದು ಕಾಣಿರಿ ʼ
ಉ: ಪುಣ್ಯಕೋಟಿಯು ತನ್ನ ಬಳಗಕ್ಕೆ ಹೇಳಿತು.