ವಚನಾಮೃತ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ಹೇಗೆ ಬುದ್ಧಿಯನ್ನು ಹೇಳಬೇಕಿದೆ?
ಉ: ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಹೇಳಬೇಕಿದೆ.

೨. ಕಾಯಕದಲಿ ನಿರತನಾದವನು ಯಾವುದನ್ನು ಮರೆಯಬೇಕು?
ಉ: ಕಾಯಕದಲಿ ನಿರತನಾದವನು ಗುರುದರ್ಶನ, ಲಿಂಗ ಪೂಜೆಯನ್ನು, ಜಂಗಮ ಮುಂದೆ ನಿಂತರೂ ಮರೆಯಬೇಕು.

೩. ಆಯ್ದಕ್ಕಿ ಮಾರಯ್ಯನ ಪ್ರಕಾರ ಕೈಲಾಸ ಯಾವುದು?
ಉ: ಆಯ್ದಕ್ಕಿ ಮಾರಯ್ಯನ ಪ್ರಕಾರ ಕಾಯಕವೇ ಕೈಲಾಸ.

೪. ಕಾಗೆಯು ಏನಾಗಲು ಸಾಧ್ಯವಿಲ್ಲ?
ಉ: ಕಾಗೆಯು ಕೋಗಿಲೆಯಾಗಲು ಸಾಧ್ಯವಿಲ್ಲ.

೫. ಯಾರ ಮುಖವನ್ನು ನೋಡಲಾಗದು?
ಉ: ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವ ದಡ್ಡರ ಮುಖವನ್ನು ನೋಡಲಾಗದು ಎಂದು ಅಮುಗೆ ರಾಯಮ್ಮ ಹೇಳಿದ್ದಾರೆ.

೬. ಶರಣರು ಕೆಡಿಸುವ ನಿದ್ದೆಯನ್ನು ಹೇಗೆ ಗೆದ್ದಿದ್ದಾರೆ?
ಉ: ಶರಣರು ಕೆಡಿಸುವ ನಿದ್ದೆಯನ್ನು ಯೋಗ ಸಮಾಧಿಯನ್ನು ಮಾಡಿ ಗೆದ್ದಿದ್ದಾರೆ.

ಆ. ಕೊಟ್ಟಿರುವ  ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧. ಶ್ರೀಗುರುವು ಶಿಷ್ಯರಿಗೆ ಬುದ್ಧಿ ಕಲಿಸುವುದು ಕಾಲಕಟ್ಟಳೆಗೆ ಹೇಗೆ ಒಳಪಟ್ಟಿದೆ? ವಿವರಿಸಿ.
ಉ: ಕೃತಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬಡಿದು ಬುದ್ಧಿಯನ್ನು ಕಲಿಸುತ್ತಿದ್ದನು. ತ್ರೇತಾಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬೈದು ಬುದ್ಧಿಯನ್ನು ಕಲಿಸುತ್ತಿದ್ದನು.ದ್ವಾಪರಯುಗದಲ್ಲಿ ಶ್ರಿಗುರುವು ಶಿಷ್ಯನಿಗೆ ಹೆದರಿಸಿ ಬುದ್ಧಿಯನ್ನು ಕಲಿಸುತ್ತಿದ್ದನು. ಆದರೆ ಕಲಿಯುಗದಲ್ಲಿ ಶ್ರೀಗುರು ತನ್ನ ಶಿಷ್ಯನಿಗೆ ವಂದಿಸಿ ಬುದ್ದಿಯನ್ನು ಕಲಿಸಬೇಕಾಗಿದೆ. ಈ ರೀತಿ ಗುರುವು ಶಿಷ್ಯನಿಗೆ ಬುದ್ದಿಯನ್ನು ಕಲಿಸುವುದು ಕಾಲಕಟ್ಟಳೆಗೆ ಒಳಪಟ್ಟಿದೆ.

೨. ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ಹೇಗೆ ನಿರೂಪಿಸಿದ್ದಾನೆ?
ಉ: ನಾವು ಮಾಡುವ ಕಾಯಕದಲ್ಲಿ ನಿಷ್ಠೆ ಹೇಗಿರಬೇಕೆಂದರೆ, ಕಾಯಕದಲ್ಲಿ ನಿರತನಾದಾಗ ಗುರುದರ್ಶನವಾದರೂ ಮರೆಯಬೇಕು. ಲಿಂಗಪೂಜೆ ಮಾಡುವುದನ್ನು ಮರೆಯಬೇಕು. ಜಂಗಮ ಮುಂದೆ
ಬಂದು  ನಿಂತರು ಕೆಲಸದ ಕಡೆ ಗಮನವಿರಬೇಕು. ಕಾಯಕವೇ ಕೈಲಾಸ. ಕಾಯಕಕ್ಕೆ ಮೊದಲ ಸ್ಥಾನಕೊಡಬೇಕು ಎಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾರೆ.

೩. ಅರಿವು, ಆಚಾರ, ಸಮ್ಯಜ್ಞಾನದ ಬಗ್ಗೆ ಅಮುಗೆರಾಯಮ್ಮನ ಅನಿಸಿಕೆ ಏನು?
ಉ: ಕಾಗೆಯ ಮರಿ ಕೋಗಿಲೆಯಾಗಲು ಸಾಧ್ಯವಿಲ್ಲ. ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ. ಸೀಳು ನಾಯಿ ಸಿಂಹದ ಮರಿಯಾಗಲು ಸಾಧ್ಯವಿಲ್ಲ. ಅದೇ ರೀತಿ ಅರಿವು, ಆಚಾರ, ಸಮ್ಯಜ್ಞಾನವನ್ನು ಅರಿಯದ ದಡ್ಡರು ಹಣೆಯ ಮೇಲೆ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವನ ಕೈಯಲ್ಲಿ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದು ಅಮುಗೆ ರಾಯಮ್ಮ ಅವರ ಅನಿಸಿಕೆಯಾಗಿದೆ.

೪. ಬುದ್ಧಿ ಹೀನರು ಹೇಗೆ ವಿದ್ಯೆಯನ್ನು ಸಂಪಾದಿಸುತ್ತಾರೆ?
ಉ: ಕೆಲವು ಬುದ್ಧಿಹೀನರು ಜಗದ ಪಾಶವನ್ನು ಬಿಡದೆ, ಕಾಯಕವನ್ನು ಮಾಡದೆ, ತನುವನ್ನು ಕರಗಿಸಿ, ಕಾಯವನ್ನು ಮರುಗಿಸುತ್ತಾರೆ. ಯೋಗ ಸಮಾಧಿಯನ್ನು ಮಾಡದೆ ದೈಹಿಕ ದಂಡನೆ ಮಾಡಿ, ಮನವನ್ನು ಶುದ್ಧಮಾಡಿಕೊಳ್ಳದೆ, ನಿದ್ದೆಗೆಟ್ಟು ವಿದ್ಯೆಯನ್ನು ಸಂಪಾದಿಸುತ್ತಾರೆ.

೫. ಶಿವಶರಣರು ಜಗವನ್ನೇ ಗೆದ್ದಿಹ ವಿಚಾರದಲ್ಲಿ ಲಿಂಗಮ್ಮನ ಅನಿಸಿಕೆಯೇನು?
ಉ: ಶಿವಶರಣರು “ಕಾಮ, ಕ್ರೋಧ, ಮದ, ಮತ್ಸರ, ಮೋಹವನ್ನು ಬಿಟ್ಟು ಮನವನ್ನು ಗೆಲ್ಲುತ್ತಾರೆ. ಆಸೆ, ರೋಷಗಳನ್ನು ತೊರೆದು ಕಾಯಕವನ್ನೇ ಕೈಲಾಸವೆಂದು ತಿಳಿದು, ನಿದ್ದೆಯನ್ನೇ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು. ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರ ಅನಿಸಿಕೆ.

ಇ. ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

೧. ವಚನಾಮೃತದಲ್ಲಿ ವ್ಯಕ್ತವಾಗಿರುವ ‘ಕಾಯಕ ತತ್ವದ’ ಮಹತ್ವವನ್ನು ವಿವರಿಸಿ.
ಉ: ನಾವು ಮಾಡುವ ಕಾಯಕದಲ್ಲಿ ನಿಷ್ಠೆ ಹೇಗಿರಬೇಕೆಂದರೆ, ಕಾಯಕದಲ್ಲಿ ನಿರತನಾದಾಗ ಗುರುದರ್ಶನವಾದರೂ ಮರೆಯಬೇಕು. ಲಿಂಗಪೂಜೆ ಮಾಡುವುದನ್ನು ಮರೆಯಬೇಕು. ಜಂಗಮ ಮುಂದೆ ಬಂದು  ನಿಂತರು
ಕೆಲಸದ ಕಡೆ ಗಮನವಿರಬೇಕು. ಕಾಯಕವೇ ಕೈಲಾಸ. ಕಾಯಕಕ್ಕೆ ಮೊದಲ ಸ್ಥಾನಕೊಡಬೇಕು ಎಂದು ಆಯ್ದಕ್ಕಿ ಮಾರಯ್ಯನು ಕಾಯಕದ ಮಹತ್ವವನ್ನು ತಿಳಿಸಿದ್ದಾರೆ.
ಶಿವಶರಣರು “ಕಾಮ, ಕ್ರೋಧ, ಮದ, ಮತ್ಸರ, ಮೋಹವನ್ನು ಬಿಟ್ಟು ಮನವನ್ನು ಗೆಲ್ಲುತ್ತಾರೆ. ಆಸೆ, ರೋಷಗಳನ್ನು ತೊರೆದು ಕಾಯಕವನ್ನೇ ಕೈಲಾಸವೆಂದು ತಿಳಿದು, ನಿದ್ದೆಯನ್ನೇ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು ಸುಖವನ್ನು ತೊರೆದು ಜಗತ್ತನ್ನೇ ಗೆದ್ದವರೆಂದರೆ ಶರಣರು. ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರ ಅನಿಸಿಕೆ.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆ”
ಆಯ್ಕೆ: ಅಲ್ಲಮಪ್ರಭುವಿನ ವಚನದ ಈ ವಾಕ್ಯವನ್ನು ಎಂ.ಎಂ ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ವಿವಿಧ ಕಾಲಗಟ್ಟದಲ್ಲಿ ಶ್ರೀಗುರು ತನ್ನ ಶಿಷ್ಯನಿಗೆ ಯಾವ ರೀತಿ ಬುದ್ಧಿಯನ್ನು ಕಲಿಸುತ್ತಾನೆ ಎಂದು ವರ್ಣಿಸುತ್ತಾ ಕೃತಯುಗದಲ್ಲಿ ಬಡಿದು, ತ್ರೇತಾಯುಗದಲ್ಲಿ ಬೈದು, ದ್ವಾಪರಯುಗದಲ್ಲಿ ಗದರಿಸಿ, ಕಲಿಯುಗದಲ್ಲಿ
ವಂದಿಸಿ ಬುದ್ದಿಯನ್ನು ಕಲಿಸಬೇಕಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಅಲ್ಲಮಪ್ರಭು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಕಾಲದಿಂದ ಕಾಲಕ್ಕೆ ಶಿಷ್ಯರಿಗೆ ಗುರುವಿನ ಮೇಲೆ ಗೌರವ, ಭರವಸೆ ಕ್ಷೀಣಿಸುತ್ತಿದೆ ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.

೨. “ನಾಮವನೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು”

ಆಯ್ಕೆ: ಅಮುಗೆ ರಾಯಮ್ಮನವರ ಈ ವಚನದ ವಾಕ್ಯವನ್ನು ಎಂ.ಎಂ ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕಾಗೆಯ ಮರಿ ಕೋಗಿಲೆಯಾಗಲು ಸಾಧ್ಯವಿಲ್ಲ. ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ. ಸೀಳು ನಾಯಿ ಸಿಂಹದ ಮರಿಯಾಗಲು ಸಾಧ್ಯವಿಲ್ಲ. ಅದೇ ರೀತಿ ಅರಿವು, ಆಚಾರ, ಸಮ್ಯಜ್ಞಾನವನ್ನು ಅರಿಯದ ದಡ್ಡರು ಹಣೆಯ ಮೇಲೆ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವ ದಡ್ಡರ ಮುಖ ನೋಡಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಅಮುಗೆ ರಾಯಮ್ಮ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ: ಆಚಾರ ಮತ್ತು ಸಮ್ಯಜ್ಞಾನವನ್ನು ಅರಿತವರು ಮಾತ್ರ ಜ್ಞಾನಿಗಳು ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.

೩. “ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು”

ಆಯ್ಕೆ: ಆಯ್ದಕ್ಕಿ ಮಾರಯ್ಯನವರ ಈ ವಚನದ ವಾಕ್ಯವನ್ನು ಎಂ.ಎಂ  ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕಾಯಕದಲಿ ನಿರತನಾದವನು ಗುರುದರ್ಶನ, ಲಿಂಗ ಪೂಜೆಯನ್ನು, ಜಂಗಮ ಮುಂದೆ ನಿಂತರೂ ಮರೆಯಬೇಕು. ಕಾಯಕವೇ ಕೈಲಾಸ ಎಂದು ಆಯ್ದಕ್ಕಿ ಮಾರಯ್ಯ ಹೇಳಿದ್ದಾರೆ.
ಸ್ವಾರಸ್ಯ: ಕಾಯಕವೇ ಕೈಲಾಸ, ಕಾಯಕವೇ ದೇವರು ಎಂದು ಸ್ವಾರಸ್ಯಕರವಾಗಿ ಹೇಳಿದ್ದಾರೆ.

೪. “ ಕಾಯಕವನೆ ಪ್ರಸಾದ ಕಾಯಕ ಮಾಡಿ ಸಲಹಿದರು ”

ಆಯ್ಕೆ: ಶಿವಶರಣೆ ಲಿಂಗಮ್ಮ ಅವರ ವಚನದ ಈ ವಾಕ್ಯವನ್ನು ಎಂ.ಎಂ ಕಲಬುರ್ಗಿ ಅವರು ಸಂಪಾದಿಸಿರುವ ‘ಸಮಗ್ರ ವಚನ ಸಂಪುಟ’ ಕೃತಿಯಿಂದ ಆಯ್ದ ‘ವಚನಾಮೃತ’ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕೆಲವು ಬುದ್ಧಿಹೀನರು ಜಗದ ಪಾಶವನ್ನು ಬಿಡದೆ, ಕಾಯಕವನ್ನು ಮಾಡದೆ, ತನುವನ್ನು ಕರಗಿಸಿ, ಕಾಯವನ್ನು ಮರುಗಿಸುತ್ತಾರೆ. ಯೋಗ ಸಮಾಧಿಯನ್ನು ಮಾಡದೆ ದೈಹಿಕ ದಂಡನೆ ಮಾಡಿ, ಮನವನ್ನು ಶುದ್ಧಮಾಡಿಕೊಳ್ಳದೆ, ನಿದ್ದೆಗೆಟ್ಟು ವಿದ್ಯೆಯನ್ನು ಸಂಪಾದಿಸುತ್ತಾರೆ. ಆದರೆ ಶಿವಶರಣೆಯರು ಕಾಯಕವನ್ನೇ ಪ್ರಸಾದವೆಂದು ತಿಳಿದು ಬದುಕಿದರು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಬುದ್ಧಿಹೀನರು ಸುಮ್ಮನೆ ದೇಹವನ್ನು ಕರಗಿಸುತ್ತಾರೆ. ಶಿವಶರಣೆಯರು ತಮ್ಮ ದೇಹವನ್ನು ಕಾಯಕದಲ್ಲಿ ತೊಡಗಿಸುತ್ತಾರೆ ಎಂಬುದು ಸ್ವಾರಸ್ಯಕರವಾಗಿದೆ.

ಉ. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರ ಪದವನ್ನು ಆರಿಸಿ ಬರೆಯಿರಿ.

೧. ತ್ರೇತಾಯುಗದಲ್ಲಿ ಶ್ರೀಗುರುವು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು : ಬಡಿದು

ಅ) ಬಡಿದು  ಆ) ಬೈದು  ಇ) ವಂದಿಸಿ   ಈ) ಝಂಕಿಸಿ

೨. ಆಯ್ದಕ್ಕಿ ಮಾರಯ್ಯನ ಅಂಕಿತ ನಾಮ : ಅಮರೇಶ್ವರ ಲಿಂಗ

ಅ)ಗುಹೇಶ್ವರ  ಆ)ಅಮುಗೇಶ್ವರ    ಇ) ಅಮರೇಶ್ವರಲಿಂಗ  ಈ) ಅಪ್ಪಣ್ಣಪ್ರಿಯ

೩. ‘ಕೋಗಿಲೆ’ ಪದದ ತದ್ಭವ ರೂಪ : ಕೋಕಿಲ

ಅ) ಕೋಕಿಲ    ಆ) ಸಂಕಿಲಾ    ಇ) ಕೋಕಿಲೆ     ಈ) ಕೊಕಿಲಾ

೪. ‘ಜಂಗಮ’ ಪದದ ವಿರುದ್ಧಾರ್ಥಕ ಪದ : ಸ್ಥಾವರ

ಅ) ವಿರಕ್ತಿ    ಆ) ವಿದ್ವಾಂಸ      ಇ) ಗುರು       ಈ) ಸ್ಥಾವರ

5. “ತನುವ ಕರಗಿಸಿ ಕಾಯ ಮರುಗಿಸಿ ವಿದ್ಯೆಯನ್ನು ಕಲಿತಿಹೆ ” ಎನ್ನುವವರು : ಬುದ್ಧಹೀನರು

ಅ) ಶಿವಶರಣರು         ಆ) ಬುದ್ಧಿಹೀನರು        ಇ) ಸಾಮಾನ್ಯರು     ಈ) ವಿದ್ಯಾರ್ಥಿಗಳು

ಊ. ಗುಂಪಿಗೆ ಸೇರದ ಪದಗಳನ್ನು ಆಯ್ದು ಬರೆಯಿರಿ.

೧. ಆನೆ, ಗಜ, ಹಯ, ಕರಿ – ಹಯ

೨. ಬಸವಣ್ಣ, ಕನಕದಾಸರು, ಅಲ್ಲಮಪ್ರಭು, ಅಮುಗೆ ರಾಯಮ್ಮ – ಕನಕದಾಸರು

೩. ಕಾಮ, ಕ್ರೋಧ, ಧನ, ಲೋಭ – ಧನ

೪. ದ್ವಾಪರಯುಗ, ಕೃತಯುಗ, ಸುವರ್ಣಯುಗ,  ಕಲಿಯುಗ – ಸುವರ್ಣಯುಗ 

೫. ತನು, ದೇಹ, ಮಾಯ, ಕಾಯ – ಮಾಯ