Amma lesson Kannada 8th grade is about writing Sri U R Anantamurthy’s mother and his childhood. Amma Kannada lesson VIII teaches us the value of the mother and the family.
The saying that home is the first school, and that Amma and Mother are the first teachers is true. A mother’s lessons and actions have a profound impact on children. The author’s mother started her literacy in the sand on the ground. Amma and grandmother used to keep the children safe inside the house even in the fear of tigers and gave them courage.
Fond memories of Amma, life lessons, and the joys and sorrows of home life dominate the childhood memories of the author of Kannada literature. They are the footprints of a cultured personality.
When he could not go to school due to his fear of tigers, Krishnappaiah Teacher came to his house and taught him lessons. In childhood, he remembered making garlands using marigold flowers, playing small games, and his grandfather’s words of courage. But the days spent playing in the midst of nature were more attractive than school lessons. Mother used to collect snacks for the rainy season. The tradition of drinking coffee from the house, the effort to maintain the culture even in poverty, and the love of his mother left a deep imprint on the author’s life.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತು ಸತ್ಯ. ಮಕ್ಕಳ ಮೇಲೆ ತಾಯಿಯ ಪಾಠ ಮತ್ತು ನಡೆನುಡಿಗಳು ತೀವ್ರ ಪ್ರಭಾವ ಬೀರುತ್ತವೆ. ಲೇಖಕರ ತಾಯಿ ಅವರಿಗೆ ಅಕ್ಷರಾಭ್ಯಾಸವನ್ನು ನೆಲದ ಮರಳಿನಲ್ಲಿ ಆರಂಭಿಸಿದರು. ತಾಯಿ ಮತ್ತು ಅಜ್ಜಿ ಹುಲಿಗಳ ಭಯದಲ್ಲೂ ಮನೆಯೊಳಗೆ ಮಕ್ಕಳನ್ನು ಸುರಕ್ಷಿತವಾಗಿಟ್ಟುಕೊಂಡು, ಧೈರ್ಯ ನೀಡುತ್ತಿದ್ದರು.
ಕನ್ನಡ ಸಾಹಿತ್ಯದ ಲೇಖಕನ ಬಾಲ್ಯದ ನೆನಪುಗಳಲ್ಲಿ ಅಮ್ಮನ ಸವಿನೆನಪುಗಳು, ಜೀವನ ಪಾಠಗಳು, ಮತ್ತು ಗೃಹಜೀವನದ ಕಷ್ಟ-ಸುಖಗಳು ಪ್ರಧಾನವಾಗಿವೆ. ಅವುಗಳು ಸಂಸ್ಕಾರವಂತ ವ್ಯಕ್ತಿತ್ವದ ಹೆಜ್ಜೆಗುರುತು.
ಹುಲಿಯ ಭಯದಿಂದ ಶಾಲೆಗೆ ಹೋಗಲು ಸಾಧ್ಯವಾಗದಿದ್ದಾಗ, ಕೃಷ್ಣಪ್ಪಯ್ಯ ಮೇಸ್ಟ್ರು ಮನೆಗೆ ಬಂದು ಪಾಠ ಕಲಿಸಿದರು. ಬಾಲ್ಯದಲ್ಲಿ ರಂಜದ ಹೂ ಬಳಸಿ ಸರಗಳನ್ನು ಮಾಡುವುದು, ಚಿಕ್ಕ ಆಟಗಳು, ಹಾಗೂ ಅಜ್ಜನ ಧೈರ್ಯದ ಮಾತುಗಳು ನೆನಪು. ಆದರೆ ಪ್ರಕೃತಿಯ ಮಧ್ಯೆ ಆಟಮಗ್ನ ದಿನಗಳು ಶಾಲೆಯ ಪಾಠಗಳಿಗಿಂತ ಆಕರ್ಷಕವಾಗಿದ್ದವು. ತಾಯಿ ಮಳೆಗಾಲಕ್ಕಾಗಿ ತಿಂಡಿಗಳನ್ನು ಸಂಗ್ರಹಿಸುತ್ತಿದ್ದರು. ಮನೆಯಲ್ಲಿ ಚರಟದ ಕಾಫಿ ಕುಡಿಯುವ ಸಂಪ್ರದಾಯ, ಬಡತನದಲ್ಲೂ ಸಂಸ್ಕಾರಗಳನ್ನು ಉಳಿಸಿಕೊಳ್ಳುವ ಶ್ರಮ, ಮತ್ತು ತಾಯಿಯ ಪ್ರೀತಿ ಲೇಖಕರ ಜೀವನಕ್ಕೆ ಆಳವಾದ ಮುದ್ರೆಯಾಗಿ ಉಳಿಯಿತು.
ಅಮ್ಮ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಬಾಲ್ಯದಲ್ಲಿ ಲೇಖಕರು ಭಯವಾದಾಗ ಯಾವ ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು?
ಉ: ಬಾಲ್ಯದಲ್ಲಿ ಲೇಖಕರು ಭಯವಾದಾಗ “ಅರ್ಜುನಃ ಫಲ್ಗಣೋ ಪಾರ್ಥಃ ಕಿರೀಟೀ ಶ್ವೇತವಾಹನಃ” ಮಂತ್ರವನ್ನು ಹೇಳಿಕೊಳ್ಳುತ್ತಿದ್ದರು.
೨. ಲೇಖಕರ ಮೊದಲ ವಿದ್ಯಾಗುರು ಯಾರು?
ಉ: ಲೇಖಕರ ಮೊದಲ ವಿದ್ಯಾಗುರು ಅವರ ‘ಅಮ್ಮ’
೩. ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
ಉ: ಸಣ್ಣ ಕುಳಿಯೊಳಗಿನ ಕಪ್ಪುಹುಳುವನ್ನು ‘ತನ್ನಾದೇವಿ’ ಅಥವಾ ‘ಗುಬ್ಬಿ’ ಎಂದು ಕರೆಯುತ್ತಿದ್ದರು.
೪. ಲೇಖಕರ ಬಾಲ್ಯದ ಪುನರಾವರ್ತಿತ ದೈನಿಕ ಯಾವುದಾಗಿತ್ತು?
ಉ: ರಂಜದ ಹೂವನ್ನು ಬಾಳೆಯನಾರಿನಲ್ಲಿ ಪೋಣಿಸುತ್ತಾ, ಕೃಷ್ಣಪ್ಪಯ್ಯ ಮೇಷ್ಟ್ರಿಗಾಗಿ ಆತಂಕದಲ್ಲಿ ಕಾಯುತ್ತಾ ‘ಇವತ್ತು ಮೇಷ್ಟ್ರಿಗೆ ಜ್ವರ ಬರಲಿ ದೇವರೇ’ ಎಂದು ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸುವುದು
ಲೇಖಕರ ಬಾಲ್ಯದ ಪುನರಾವರ್ತಿತ ದೈನಿಕವಾಗಿತ್ತು.
೫. ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದವರು ಯಾರು?
ಉ: ಬ್ಯಾರಿಯೊಬ್ಬರು ತಿಂಗಳಿಗೊಮ್ಮೆ ಕಾಫಿ ಬೀಜವನ್ನು ತಂದು ಕೊಡುತ್ತಿದ್ದರು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in 2 to 3 sentences)
೧. ಲೇಖಕರ ಅಕ್ಷರಾಭ್ಯಾಸ ಆರಂಭವಾದದ್ದು ಹೇಗೆ?
ಉ: ಲೇಖಕರ ಮೊದಲ ವಿದ್ಯಾಗುರು ಅವರ ಅಮ್ಮ. ಲೇಖಕರ ತಾಯಿ ಸ್ಕೂಲ್‌ಗೆ ಹೋಗಿ ಅಲ್ಪಸಲ್ಪ ಓದಲು ಬರೆಯಲು ಕಲಿತ್ತಿದ್ದರು. ಲೇಖಕರ ಅಕ್ಷರಾಭ್ಯಾಸವು ಕೆರೆಕೊಪ್ಪದ ಮನೆಯಲ್ಲಿದ್ದಾಗ ಪ್ರಾರಂಭವಾಯಿತು. ಅವರ ಅಮ್ಮ “ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ, ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ” ಎಂದು ಹೇಳುತ್ತಾ ನೆಲದ ಮರಳಿನಲ್ಲಿ ಕೂರಿಸಿ ಲೇಖಕರ ಬೆರಳನ್ನು ಹಿಡಿದು ‘ಅ’ ಎಂಬ ಅಕ್ಷರವನ್ನು ಬರೆಸುತ್ತಿದ್ದರು. ಹೀಗೆ ಲೇಖಕರ ಅಕ್ಷರಾಭ್ಯಾಸ ಆರಂಭವಾಯಿತು.
೨. ಮಳೆಗಾಲದ ಆರಂಭಕ್ಕೆ ಮುನ್ನ ಮಲೆನಾಡಿನಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು?
ಉ: ಮಳೆಗಾಲದ ಆರಂಭಕ್ಕೆ ಮೊದಲೇ ಸಂಭಂದಿಕರು, ಸ್ನೇಹಿತರು ಒಣ ಸೌದೆ, ಅಕ್ಕಿ, ಬೇಳೆ, ಜೋನಿ ಬೆಲ್ಲವನ್ನು ಸಂಗ್ರಹಿಸಲು ನೆರವಾಗುತ್ತಿದ್ದರು. ಆಗೆಲ್ಲ ಕಾಡು ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತಿತ್ತು. ಬೇಸಿಗೆಯಲ್ಲಿ ಮಳೆಗಾಲದ ದಿನಗಳಿಗೆಂದು ಹಪ್ಪಳ ಸಂಡಿಗೆಯಂತಹ ಅನೇಕ ತಿಂಡಿಗಳನ್ನು ಒಣಗಿಸಿ ಇಡುತ್ತಿದ್ದರು.
೩. ನಸುಕಿನಲ್ಲಿ ಲೇಖಕರಿಗೆ ಖುಷಿ ಕೊಡುತ್ತಿದ್ದ ಸಂಗತಿಗಳಾವುವು?
ಉ: ಕೆರೆಕೊಪ್ಪದಲ್ಲಿ ಮನೆಯ ಅಂಗಳದ ಆಚೆ ಅರಣ್ಯವಿತ್ತು. ನಸುಕಿನಲ್ಲಿ ಎದ್ದು, ಮನೆಯೆದುರು ಅರಣ್ಯದ ಅಂಚಿನಲ್ಲಿ ಇದ್ದ ರಂಜದ ಮರವೊಂದರಿಂದ ನೆಲದ ಮೇಲೆ ಬಿದ್ದಿರುವ ನಕ್ಷತ್ರ ಆಕಾರದ ರಂಜದ ಹೂಗಳನ್ನು ಆರಿಸುವುದು. ಹುಲ್ಲಲ್ಲಿ ದೂರ್ವೆಯನ್ನು ಹುಡುಕಿ ಅಜ್ಜಯ್ಯನಿಗೆ ಪೂಜೆಗೆ ಕೊಡುವುದು. ಮರದ ಮೇಲಿನ ಗೂಡಲ್ಲಿ ಮೊಟ್ಟೆ ಮರಿಯಾಯಿತೇ ಎಂದು ಬಿದಿರಿನ ಸಂದಿಯಿಂದ ನಿತ್ಯ ನೊಡುವುದು ಲೇಖಕರಿಗೆ ಖುಷಿ ಕೊಡುತ್ತಿದ್ದ ಸಂಗತಿಗಳು.
೪. ವಿಶೇಷ ಪದಾರ್ಥಗಳನ್ನು ಕಡವಾಗಿ ಪಡೆಯುತ್ತಿದ್ದ ಹಾಗೂ ತೀರಿಸುತ್ತಿದ್ದ ಬಗೆ ಹೇಗೆ?
ಉ: ಬ್ಯಾರಿಯವರಿಂದ ಕಾಫಿ ಬೀಜವನ್ನು, ವಿಶೇಷ ಪದಾರ್ಥಗಳನ್ನು ತಿಂಗಳಿಗೊಮ್ಮೆ ಕಡವಾಗಿ ಪಡೆಯುತ್ತಿದ್ದರು. ಅದಕ್ಕೆ ಬದಲಾಗಿ ಅಡಕೆಯನ್ನು ಅಥವಾ ಭತ್ತವನ್ನೊ ಕೊಟ್ಟು ತೀರಿಸುತ್ತಿದ್ದರು. ಇದರ ಲೆಕ್ಕಚಾರವನ್ನು ದೀಪಾವಳಿಯಿಂದ ಇನ್ನೊಂದು ದೀಪಾವಳಿಗೆ, ಯುಗಾದಿಯಿಂದ ಇನ್ನೊಂದು ಯುಗಾದಿಗೆ,ಗೌರಿ ಹಬ್ಬದಿಂದ ಇನ್ನೊಂದು ಗೌರಿ ಹಬ್ಬದವರೆಗೆ ಇರುತ್ತಿತ್ತು.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.( Answer the following in 5 to 6 sentences)
೧. ಮಲೆನಾಡಿನಲ್ಲಿ ಹುಲಿಗಳಿಂದಾಗುತ್ತಿದ್ದ ತೊಂದರೆಯ ಬಗ್ಗೆ ಹೇಗೆ ವರ್ಣಿಸಲಾಗಿದೆ?
ಉ: ಲೇಖಕರ ಊರಿನಲ್ಲಿ ಹುಲಿಗಳ ಕಾಟ ಬಹಳ ಇತ್ತು. ಲೇಖಕರ ತಾಯಿಗೆ ದೂರದಲ್ಲಿ ಎಲ್ಲೊ ಹುಲಿ ಕೂಗಿದರೆ ತಟ್ಟನೆ ತಿಳಿದು ಬಿಡುತ್ತಿತ್ತು. ಹುಲಿಗಳ ಶಬ್ದಕ್ಕೆ ತುಂಬಾ ಸೂಕ್ಷ್ಮವಾಗಿದ್ದ ಜೀವಿಗಳೆಂದರೆ ದನಗಳು. ಅವು ಹುಲಿ ಬಂದ ತಕ್ಷಣ ಗಡಗಡ ನಡುಗಲು ಶುರುಮಾಡುತ್ತಿದ್ದವು. ಕೊರಳಿನ ಘಂಟೆಯ ಜೋರು ಶಬ್ದ ಕೇಳಿದರೆ ಹುಲಿ ಬಂದ ಸೂಚನೆಯಾಗಿತ್ತು. ಲೇಖಕರ ತಾಯಿ, ಅಜ್ಜಿ, ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಮನೆಯ ಒಳಗಡೆ ಕೂತು ಹುಲಿ ಎಲ್ಲಿ ಬಂದು ಬಿಡುತ್ತದೆಯೋ ಎಂದು ಕಾಯುತ್ತಿದ್ದರು. ಎಲ್ಲರೂ ನಿದ್ದೆ ಮಾಡಿದರೂ ಲೇಖಕರ ತಾಯಿ ಮಾತ್ರ ನಿದ್ದೆ ಮಾಡುತ್ತಿರಲಿಲ್ಲ. ಬೆಳಗ್ಗೆ ಎದ್ದು ಕೊಟ್ಟಿಗೆಯಲ್ಲಿ ಎಲ್ಲ ದನಗಳನ್ನು ನೋಡಿದಾಗ ಅವರ ಮನಸ್ಸಿಗೆ ಸಮಾಧಾನ. ನಿತ್ಯವು ಲೇಖಕರ ಮನೆಗೆ ಆಳುಗಳು ಬಂದಾಗ ಯಾವುದೋ ಹುಲಿ ಯಾವುದೋ ಮನೆಯ ದನವನ್ನು ಹಿಡೀತು ಎಂದು ಮಾತು ಆರಂಭವಾಗುತ್ತಿತ್ತು. ಅವರ ಮನೆ ದನ ಹೋಯಿತು, ಇವರ ಮನೆ ದನ ಹೋಯಿತು ಎಂದು ಮಾತನಾಡುವುದು ಸಾಮಾನ್ಯವಾಗಿತ್ತು.
೨. ‘ಒರಿಜಿನಲ್’ ಹಾಗೂ ಚರಟದ ಕಾಫಿಯನ್ನು ಸಿದ್ಧಗೊಳಿಸುತ್ತಿದ್ದ ಬಗೆಯನ್ನು ವಿವರಿಸಿ.
ಉ: ಮನೆಯ ಹಿರಿಯರಾದ ಅಜ್ಜಯ್ಯನಿಗೆ, ಲೇಖಕರ ತಂದೆ ಶಾನುಭೋಗರಿಗೆ ಅವರ ಸ್ನೇಹಿತರಾದ ಊರಿನ ಪಟೇಲರಿಗೆ ಮಾತ್ರ ‘ಓರಿಜಿನಲ್’ ಕಾಫಿ ಪುಡಿಯ ಕಾಫಿಯನ್ನು ಸಿಗುತ್ತಿತ್ತು. ಕಾಫಿ ಬೀಜವನ್ನು ಆಗಲೇ ಹುರಿದು, ಪುಡಿಮಾಡಿ, ಕುದಿಯುವ ನೀರಿಗೆ ಬೆರೆಸಿ, ಮುಚ್ಚಿಟ್ಟು ಅದರ ಗಸಿ ಇಳಿಯುವಷ್ಟು ಕಾದು ಅದಕ್ಕಾಗಿಯೇ ಇದ್ದ ಬಟ್ಟೆಗೆ ಸುರಿದು ಹಿಂಡಿ, ಡಿಕಾಕ್ಷನ್ ಇಳಿಯುವಾಗ ಕಳೆದುಕೊಂಡ ಉಷ್ಣಾಂಶವನ್ನ ಬಿಸಿಬಿಸಿ ಎಮ್ಮೆ ಹಾಲು ಬೆರೆಸಿ ಹದ ಮಾಡಿ ಕಾಫಿ ಮಾಡುವುದು ಸಾಮಾನ್ಯವಾಗಿತ್ತು. ನಿತ್ಯ ಈ ಕಾಫಿಯ ಡಿಕಾಕ್ಷನ್ ನಲ್ಲಿ ಉಳಿದ ಅದರ ಚರಟ ಕುದಿಸಿ ಮಾಡಿದ ಕಾಫಿಯ ಸೇವನೆ ಉಳಿದವರಿಗೆಲ್ಲಾ ಕೊಡುತ್ತಿದ್ದರು.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.( explain the context)
೧. “ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ”
ಆಯ್ಕೆ : ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರ ಅಕ್ಷರಾಭ್ಯಾಸವು ಕೆರೆಕೊಪ್ಪದ ಮನೆಯಲ್ಲಿದ್ದಾಗ ಪ್ರಾರಂಭವಾಯಿತು. ಅವರ ಅಮ್ಮ “ಸರಸ್ವತೀ ನಮಸ್ತುಭ್ಯ ವರದೇ ಕಾಮರೂಪಿಣೀ, ವಿದ್ಯಾರಂಭ ಕರಿಷ್ಯಾಮಿ | ಸಿದ್ಧಿರ್ಭವತು ಮೇ ಸದಾ” ಎಂದು ಹೇಳುತ್ತಾ ನೆಲದ ಮರಳಿನಲ್ಲಿ ಕೂರಿಸಿ ಲೇಖಕರ ಬೆರಳನ್ನ ಹಿಡಿದು ‘ಅ’ ಎಂಬ ಅಕ್ಷರವನ್ನು ಬರೆಸುತ್ತಿದ್ದ ಆ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಲೇಖಕರ ತಾಯಿ ತನ್ನ ಮಗನ ವಿದ್ಯಾಭ್ಯಾಸಕ್ಕೆ ಸರಸ್ವತಿ ದೇವಿಯನ್ನು ವಂದಿಸುವುದರ ಮೂಲಕಭಕ್ತಿ ಭಾವವನ್ನು ವ್ಯಕ್ತಪಡಿಸುವುದು ಸ್ವಾರಸ್ಯಕರವಾಗಿದೆ.
೨. “ನನಗೂ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು”
ಆಯ್ಕೆ: ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಲೇಖಕರಿಗೆ ಓದು ಬರಹಕ್ಕಿಂತ ರಂಜದ ಹೂವನ್ನು ತಂದು ಪೋಣಿಸಿ ದೊಡ್ಡದೊಡ್ಡ ಸರಗಳನ್ನು ಮಾಡಿ ತನ್ನ ತಾಯಿಗೆ ಮುಡಿಯಲು ಕೊಡುವುದು ಮತ್ತು ತಾನು ಮುಡಿಯುವುದು ಬಹಳ ಆಸಕ್ತಿ. ಆಗ ಇನ್ನೂ ಲೇಖಕರಿಗೆ ಚೌಲವಾಗಿರಲಿಲ್ಲ. ಅದ್ದರಿಂದ ಹೆಣ್ಣು ಮಕ್ಕಳಂತೆ ಉದ್ದ ಕೂದಲಿತ್ತು ಎಂಬ ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ: ಬಾಲ್ಯದಲ್ಲಿ ಲೇಖಕರಿಗೆ ಪಾಠಕ್ಕಿಂತ ಇತರ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಎಂಬುದು ಈ ವಾಕ್ಯದ ಸ್ವಾರಸ್ಯವಾಗಿದೆ.
೩. “ಇವತ್ತು ಮೇಷ್ಟ್ರಿಗೆ ಜ್ವರ ಬರಲಿ ದೇವರೇ”
ಆಯ್ಕೆ : ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರು ತನ್ನ ತಾಯಿ ಹಾಡನ್ನು ಹಾಡುವುದು ಆಲಿಸುತ್ತ, ರಂಜದ ಹೂವನ್ನು ಬಾಳೆಯ ನಾರಿನಲ್ಲಿ ಪೋಣಿಸುತ್ತ, ಕೃಷ್ಣಪ್ಪಯ್ಯ ಮೇಷ್ಟ್ರಿಗಾಗಿ ಆತಂಕದಲ್ಲಿ ಕಾಯುತ್ತ “ಇವತ್ತು ಮೇಷ್ಟ್ರಿಗೆ ಜ್ವರ ಬರಲಿ ದೇವರೇ” ಎಂದು ಮನಸ್ಸಲ್ಲೇ ಪ್ರಾರ್ಥಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಬಾಲ್ಯದಲ್ಲಿ ಮಕ್ಕಳಿಗೆ ಶಿಕ್ಷಕರ ಮೇಲೆ ಎಷ್ಟು ಭಯ ಇರುತ್ತದೆ. ಮತ್ತು ಓದುವುದಕ್ಕಿಂತ ಆಟದಲ್ಲಿ ಆಸಕ್ತಿ ಹೆಚ್ಚು ಎಂಬುದು ಸ್ವಾರಸ್ಯವಾಗಿದೆ .
೪. “ನನಗೂ ಎಲ್ಲೋ ಒಂದೊಂದು ಸಾರಿ ಈ ಕಾಫಿಯ ಪುಣ್ಯ ಸಿಗುತ್ತಿತ್ತು”
ಆಯ್ಕೆ: ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಮನೆಯ ಹಿರಿಯರಾದ ಅಜ್ಜಯ್ಯನಿಗೆ, ಲೇಖಕರ ತಂದೆ ಶಾನುಭೋಗರಿಗೆ ಅವರ ಸ್ನೇಹಿತರಾದ ಊರಿನ ಪಟೇಲರಿಗೆ ಮಾತ್ರ ‘ಓರಿಜಿನಲ್’ ಕಾಫಿ ಪುಡಿಯ ಕಾಫಿಯು ಸಿಗುತ್ತಿತ್ತು. ಆದರೆ ಉಳಿದವರಿಗೆ ಚರಟದ ಕಾಫಿ ಸಿಗುತ್ತಿತ್ತು. ಆ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಬಡತನದ ಕಾರಣ ಮನೆ ಮಂದಿಗೆ ಯಾವಾಗಲೂ ಚರಟದ ಕಾಫಿ ಸಿಗುತ್ತಿತ್ತು. ಒರಿಜಿನಲ್ ಕಾಫಿ ಪುಡಿಯ ಕಾಫಿ ಕುಡಿಯಲು ಪುಣ್ಯ ಮಾಡಿರಬೇಕು ಎಂಬ ಮಾತು ಸ್ವಾರಸ್ಯಕರವಾಗಿದೆ .
೫. “ನನಗೆ ಚರಟದಲ್ಲಿ ಕಾಫಿಯೋ?”
ಆಯ್ಕೆ: ಈ ವಾಕ್ಯವನ್ನು ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಎಂಬ ಆತ್ಮಕಥನದಿಂದ ಆಯ್ದ ‘ಅಮ್ಮ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಲೇಖಕರ ಅಮ್ಮ ಸ್ವಲ್ಪ ಕಾಫಿಪುಡಿಯಲ್ಲಿ ಒಂದು ಲೋಟ ಕಾಫಿ ಮಾಡಿ ಅಪ್ಪನಿಗೆ ಕೊಟ್ಟು ಆ ಕಾಫಿ ಮಾಡಿದ ಚರಟದಲ್ಲಿ ಲೇಖಕರಿಗೆ, ಅವರಜ್ಜನಿಗೆ ಕೊಡುತ್ತಿದ್ದರು. ಅಜ್ಜ ಮನೆಗೆ ಹಿರಿಯರಾದ್ದರಿಂದ ‘ನನಗೆ ಚರಟದಲ್ಲಿ ಕಾಫೀಯೊ ?’ ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಸದಾ ಒರಿಜಿನಲ್ ಕಾಫಿ ಪುಡಿಯಿಂದ ಮಾಡಿದ ಕಾಫಿಯನ್ನೇ ಕುಡಿಯುತ್ತಿದ್ದ ಅಜ್ಜಯ್ಯನವರಿಗೆ ಚರಟದ ಕಾಫಿ ಕೊಟ್ಟಾಗ ಕೋಪ ಬಂದಿರುವುದು ಸಹಜವಾಗಿದೆ.
ಉ. ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. (Fill in the blanks)
೧. ಅಧಿಕೃತವಾಗಿ ಅನಂತಮೂರ್ತಿಯವರ ಮೊದಲ ಶಿಕ್ಷಕರು ಕೃಷ್ಣಪ್ಪಯ್ಯ.
(ಕೃಷ್ಣಪ್ಪಯ್ಯ, ಅಮ್ಮ, ತಂದೆ, ಶೇಷಗಿರಿ)
೨. ಮಳೆಗಾಲದಲ್ಲಿ ಮಲೆನಾಡಿನಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಹಣ್ಣು ಹಲಸಿನ ಹಣ್ಣು.
(ಮಾವಿನಹಣ್ಣು, ಸೀಬೆಹಣ್ಣು, ಹಲಸಿನ ಹಣ್ಣು, ಬಾಳೆಹಣ್ಣು )
೩. ‘ಪಟ್ಟಾಂಗ’ ಈ ಪದದ ಅರ್ಥ ಹರಟೆ.
(ಒಳ್ಳೆಯ ಮಾತು, ಹರಟೆ, ಪಟ್ಟಕಟ್ಟುವುದು, ಕೆಟ್ಟಮಾತು)
೪. ‘ಕಡೆಗೋಲು’ ಪದವು ಆದೇಶಸಂಧಿಗೆ ಉದಾಹರಣೆಯಾಗಿದೆ.
(ಆಗಮಸಂಧಿ, ಗುಣಸಂಧಿ, ಲೋಪಸಂಧಿ, ಆದೇಶಸಂಧಿ)
೫. ‘ಸಕ್ಕರೆ’ ಪದದ ತತ್ಸಮ ರೂಪ ಶರ್ಕರಾ.
(ಸಕ್ಕರಿ, ಸಕ್ಕಾರಿ, ಶರ್ಕರಾ, ಸರಕಾರಿ)