ಕೋಟ ಶಿವರಾಮ ಕಾರಂತರು 1902 ರಲ್ಲಿ ಉಡುಪಿ ಜಿಲ್ಲೆಯ ಕೋಟಾದಲ್ಲಿ ಜನಿಸಿದರು. ಇವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ರಚಿಸಿದ್ದಾರೆ. ಇವರು ರಚಿಸಿರುವ ಚೋಮನದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಅಳಿದ ಮೇಲೆ ಕಾದಂಬರಿಗಳು ಪ್ರಸಿದ್ಧವಾಗಿವೆ. ಹಸಿವು ಹಾಗೂ ಕವಿ ಕರ್ಮ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ರಾಷ್ಟ್ರಗೀತೆ ಸುಧಾಕರ ಮತ್ತು ಸೀಳ್ ಗಮನಗಳು ಕವನ ಸಂಕಲಗಳನ್ನು ರಚಿಸಿದ್ದಾರೆ. ಇವರ ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ. ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮೈಮನಗಳ ಸುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ.
ಈ ಪಠ್ಯ ಭಾಗವನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಹೊರತಂದಿರುವ ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ 32 ಭಾಗ-2 ಗ್ರಂಥದ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಲಾಗಿದೆ.
Shri Kota Shivaram Karanth was born in 1902 at Kota in Udupi district. He has written in many genres of literature. The novels written by him are Chomanadudi, Marali mannige, Bettada Jiva, Alida mele. Hasivu and Kavi Karma are his story collections. Rashtra Gita Sudhakar and Seel Manthan are poetries. His Mukajjiya Dreams novel has won the Jnanpith Award. Yakshagana Bayalata won the Central Sahitya Academy award. Won the Pampa award for the work Maimanagala Suliil.
The text portion is selected from the Abuuindu Baramke part of the volume 32 Part-2 of the Shivarama Karantara Literary Series brought out by the Department of Kannada and Sanskrit.
ಬೆಡಗಿನ ತಾಣ ಜಯಪುರ ಪಠ್ಯ ಭಾಗದಲ್ಲಿ ರಾಜಸ್ಥಾನದ ಅಂದದ ಜಯಪುರದ ಬಗ್ಗೆ ಬರೆಯಲಾಗಿದೆ. ಅಲ್ಲಿನ ಜನರ ಉಡುಗೆ-ತೊಡುಗೆ, ಐತಿಹಾಸಿಕ ವೈಭವ, ಜಾನಪದ ಕಲೆಗಳ ಸೊಗಸು ಮೊದಲಾದ ವಿಚಾರಗಳ ಬಗ್ಗೆ ಶ್ರೀ ಶಿವರಾಮ ಕಾರಂತರು ತಿಳಿಸಿದ್ದಾರೆ. ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ (ಜಂತರ್ ಮಂತರ್) ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ.
Bedagina tana Jaipur, is written about the beautiful Jaipur of Rajasthan . Shri Shivaram Karantha told about the dress of the people there, historical glory, the elegance of folk arts etc. A special mention is made of the Jantra-Mantra (Jantar Mantar) open-air laboratory, which is a scientific approach given by the kings of Jaipur.
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?
ಉ:ರೈಗಳ ಮನೆ ನಾಲ್ಕು ಸುತ್ತಲು ಉಸುಬು ಹರಡಿದ್ದ ಮರುಭೂಮಿಯಲ್ಲಿ ಇತ್ತು.
೨. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ?
ಉ:ಜಯಪುರದ ಒಂದೊಂದು ಮನೆಯೂ ಒಂದೊಂದು ಶೈಲಿಯಲ್ಲಿ ಇರುವುದೇ ಲೇಖಕರಿಗೆ ಜಯಪುರದ ಮನೆಗಳ ಮೇಲೆ ಅವರಿಗೆ ಇರುವ ಮೋಹ.
೩. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ?
ಉ:ಜಯಪುರದ ಜನರಿಗೆ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣಗಳು ಇಷ್ಟ.
೪. ಜಯಪುರದ ಪೂರ್ವದ ರಾಜಧಾನಿ ಯಾವುದು?
ಉ:ಅಂಬೇರ ಜಯಪುರದ ಪೂರ್ವದ ರಾಜಧಾನಿ.
೫. ಲೇಖಕರಿಗಿದ್ದ ಹಂಬಲವೇನು?
ಉ: ಜಯಪುರದ ಜಾನಪದ ನೃತ್ಯಗಳನ್ನು ನೋಡುವುದು ಲೇಖಕರ ಹಂಬಲವಾಗಿತ್ತು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ.
ಉ: ಜಯಪುರದ ಒಂದೊಂದು ಮನೆಯೂ ಒಂದೊಂದು ಶೈಲಿಯಲ್ಲಿದ್ದು ಯಾವ ದೇಶದ್ದೂ ಆಗಿ ಕಾಣಿಸುವುದಿಲ್ಲ. ಇಲ್ಲಿನ ಬೀದಿಗಳು ಅಗಲವಾಗಿ , ನೇರವಾಗಿ ಇವೆ.ಮಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ . ಕೆಲವೊಂದು ಕಡೆಗಳಲ್ಲಿ ಮಹಾದ್ವಾರಗಳಿವೆ ಎಂದು
ಲೇಖಕರು ವರ್ಣಿಸಿದ್ದಾರೆ.
೨. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು?
ಉ:ಲೇಖಕರ ಮೊದಲ ಅಂಬೇರ ಭೇಟಿ ಮಾಡಿದಾಗ ಅಲ್ಲಿ ಜನವಸತಿ ಇದ್ದಿರಲಿಲ್ಲ. ಸಂಜೆ, ಮುಂಜಾನೆಗಳಲ್ಲಿ ಗುಡ್ಡ, ಬೆಟ್ಟ ಮತ್ತು ಕಣಿವೆಗಳು ಅಪೂರ್ವ ಮೋಹಕವಾಗಿ ಕಾಣಿಸುತ್ತಿತ್ತು. ಹಲವಾರು ಗುಡಿ, ಗೋಪುರಗಳು ಗೂಬೆಯ ಮನೆಗಳಾಗಿತ್ತು. ಆದರೆ ಇತ್ತೀಚಿನ ಭೇಟಿಯಲ್ಲಿ ನೂರಾರು ಸಿಂಧಿ ಕುಟುಂಬಗಳು ಮನೆಮಾಡಿದ್ದವು.
೩. ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ.
ಉ:ಮೀರಾಬಾಯಿ ದೇವಾಲಯವು ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯಲ್ಲಿ ಇದೆ. ಕೆಳಗಿಳಿದು ಹೋದರೆ ಗುಡಿಯ ಸೊಬಗು ಕಾಣಿಸುತ್ತದೆ. ಗರ್ಭಗೃಹದ ನವರಂಗಗಳು ನಕ್ಷತ್ರಾಕಾರದಲ್ಲಿವೆ.ಹೀಗೆ ಲೇಖಕರು ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿದ್ದಾರೆ.
೪. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ.
ಉ:ಹತ್ತಿರದ ಬಯಲಿನಲ್ಲಿ ಇಬ್ಬರು ಯೌವನಸ್ಥರು ಸ್ರೀಯರ ಉಡುಗೆ ಉಟ್ಟಿದ್ದು, ಮಾರವಾಡಿ ಸ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು, ಮುಖತೋರಿಸದೆ ಕುಣಿಯತೊಡಗಿದರು. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು. ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣ್ಮೆ ಚೆಲುವುಗಳೆರಡೂ ಇದ್ದವು. ಹೀಗೆ ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿದ್ದಾರೆ.
ಇ) ಕೆಳಗಿನ ಪ್ರಶ್ನೆಗಳಿಗೆ ಐದು, ಆರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ.
ಉ:ಜಯಪುರ ಬಣ್ಣಗಾರರ ತವರೂರು. ಇಲ್ಲಿನ ಹೆಂಗಸರೂ ರಂಗುರಂಗಿನ ಲಂಗ, ಪಾಯಿಜಾಮಾ, ಸೀರೆ, ರವಿಕೆ, ಮೇಲುದೆ ತೊಡುತ್ತಾರೆ. ಅದರಲ್ಲೂ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣಗಳು ಇಷ್ಟ. ನಿತ್ಯವೂ ಹೋಳಿ ಹುಣ್ಣಿಮೆ ಮಾಡುವಂತೆ ರಂಗು ರಂಗಿನ ಬಟ್ಟೆ ಅವರದು. ಗಂಡಸರೂ ರಂಗುರಾಯರೇ. ಅವರ ಪಂಚೆ, ಅಂಗಿಗಳು ಬೆಳ್ಳಗಿದ್ದರೂ ಮೂವತ್ತು ಮೊಳಗಳ ಮುಂಡಾಸಿನಲ್ಲಿ ಮುನ್ನೂರು ಬಣ್ಣಗಳಿರುತ್ತವೆ. ಇದುವೇ ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹ.
೨. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ.
ಉ: ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯಲ್ಲಿ, ಮೊದಲನೇಯ ಅಂತಸ್ತಿನಲ್ಲಿ ಪುಟ್ಟ ದೇವಾಲಯವಿದೆ. ಈ ಪುಟ್ಟ ಮಂದಿರ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದೆ. ಗೋಡೆ, ನೆಲ, ಸ್ತಂಭಗಳೆಲ್ಲವೂ ಹಾಲುಗಲ್ಲಿನವು. ಗುಡಿಯು ಶಾಂತವಾಗಿದ್ದರೂ, ವಿಗ್ರಹದ ಆಕಾರ ಮತ್ತು ಅಲಂಕಾರ ಅಷ್ಟೊಂದು ಶೋಭಿಸದು. ಗುಡಿಯ ಮೇಲಿನ ಅಂಗಳವನ್ನೇರಿ ಹೋದರೆ ದೊಡ್ಡದೊಂದು ಸಭಾಂಗಣ ಬರುತ್ತದೆ. ಇದು ವಿಶಾಲವಾದ ಹಾಲುಗಲ್ಲಿನ ರಚನೆ. ಅದರ ಛಾವಣಿ, ರಜಪೂತನ ಶೈಲಿಯ ಕಮಾನು, ಕಂಬಗಳು ತುಂಬ ಸುಂದರವಾಗಿದ್ದು, ಪರಸ್ಪರ ಹೊಂದಿಕೊಂಡು, ಈ ರಚನೆಗೆ ಚೆಲುವನ್ನು ನೀಡಿವೆ. ಎದುರಿನ ಅಂಗಣ ವಿಶಾಲವಾಗಿದೆ. ಇಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ಅಲ್ಲಿ ರಾಜರ ಅಂತಃಪುರ ಇದೆ. ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ. ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದ ಪುಷ್ಪಗಳ ಚಿತ್ರಾವಳಿಗಳು ಇವೆ. ಕೆಲವು ಚಾವಡಿಗಳಲ್ಲಿ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿದ್ದಾರೆ. ಚಿತ್ರ ವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ, ಮುಚ್ಚಿಕೆಗಳುಳ್ಳ ರಚನೆ ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ, ಲಕ್ಷೋಪಲಕ್ಷ ಈ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ. ಹೀಗಿದೆ ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವು.
೩. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ.
ಉ:ಜಂತ್ರ ಮಂತ್ರ ಹಳೆಯ ಕಾಲದ ಖಗೋಳವಿಜ್ಞಾನ ಪರಿಶೀಲನಾಲಯ. ೪೦೦-೫೦೦ ವರ್ಷಗಳ ಪೂರ್ವದಲ್ಲಿ, ಖಗೋಳಶಾಸ್ತ್ರಜ್ಞರು ಗ್ರಹ, ಸೂರ್ಯ, ಚಂದ್ರ, ತಾರಾಮಂಡಲಗಳನ್ನು ಅಳೆದು, ಪರಿಶೀಲಿಸಿ ನೋಡುವ ಸಲುವಾಗಿ, ಇಲ್ಲಿ ವಿಚಿತ್ರ ಸಾಧನಗಳನ್ನು ಇಟ್ಟಿದ್ದಾರೆ. ಗಳಿಗೆ ಅಳೆಯುವದಕ್ಕೆ, ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ, ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಡುಗಳಿವೆ. ಪ್ರತಿಯೊಂದು ಸಾಧನದ ಮೇಲೆ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ನಮೂದಿಸಿದೆ. ದೂರದರ್ಶಿಯಿಲ್ಲದೇ ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು, ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ ಇಲ್ಲಿಯ ವಿಶೇಷತೆ.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಅಲ್ಲಿ ಮಧ್ಯಾಹ್ನ ವೇಳೆ ನೀರು ಕಾಯಿಸುವ ಅಗತ್ಯವಿಲ್ಲ”
ಉ:ಈ ಮೇಲಿನ ವಾಕ್ಯವನ್ನು ಶಿವರಾಮ ಕಾರಂತರು ಬರೆದ ಪೃಕ್ರತ ಪ್ರವಾಸ ಕಥನ ಬೆಡಗಿನ ತಾಣ ಜಯಪುರ ಎಂಬ ಪಠ್ಯಭಾಗವನ್ನು ಅವರ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು ಜಯಪುರಕ್ಕೆ ತಲುಪಿದಾಗ ಮಧ್ಯಾಹ್ನ ೧೧ ಗಂಟೆಯಾಗಿತ್ತು. ಅವರು ಸ್ನಾನ ಮಾಡುವಾಗ ಇರುವ ಬಿಸಿ ನೀರಿನ ಬಗ್ಗೆ ಯೋಚಿಸಿದ ಸಂದರ್ಭದಲ್ಲಿ ಬರೆಯಲಾಗಿದೆ.
ಹದಿನೈದು ವರ್ಷಗಳ ನಂತರ ಲೇಖಕರು ಸ್ನೇಹಿತರೊಂದಿಗೆ ರೈಗಳ ಮನೆಗೆ ತಲುಪಿದಾಗ ತಲುಪಿದಾಗ ಮಧ್ಯಾಹ್ನ ೧೧ ಗಂಟೆಯಾಗಿತ್ತು. ರೈಗಳ ಮನೆ ನಾಲ್ಕು ಸುತ್ತಲು ಉಸುಬು ಹರಡಿದ್ದ ಮರುಭೂಮಿಯಲ್ಲಿ ಇತ್ತು. ಲೇಖಕರು ಸ್ನಾನ ಮಾಡುವಾಗ ಬಿಸಿ ನೀರು ಬರುತ್ತಿತ್ತು. ಅದನ್ನು ಕಾಯಿಸುವ ಅಗತ್ಯವಿರಲಿಲ್ಲ. ಉಸುಬಿನ ಬಿಸಿಗೆ ನಲ್ಲಿಯ ನೀರು ಕಾದೇ ಬರುತ್ತಿತ್ತು. ಹೀಗೆ ಲೇಖಕರು ಹೇಳಿದ್ದಾರೆ.
೨. “ಗಂಡಸರೂ ರಂಗುರಾಯರೇ”
ಉ:ಈ ಮೇಲಿನ ವಾಕ್ಯವನ್ನು ಶಿವರಾಮ ಕಾರಂತರು ಬರೆದ ಪೃಕ್ರತ ಪ್ರವಾಸ ಕಥನ ಬೆಡಗಿನ ತಾಣ ಜಯಪುರ ಎಂಬ ಪಠ್ಯಭಾಗವನ್ನು ಅವರ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು ಜಯಪುರದ ಜನರ ವೇಷಭೂಷಣದ ಬಗ್ಗೆ ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ಜಯಪುರದ ಜನರು, ಅದರಲ್ಲೂ ಹೆಂಗಸರು ರಂಗುರಂಗಿನ ಲಂಗ, ಪಾಯಿಜಾಮಾ, ಸೀರೆ, ರವಿಕೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು,
ಕಿತ್ತಳೆ ಮತ್ತು ಹಳದಿ ಬಣ್ಣಗಳು ಇಷ್ಟ. ನಿತ್ಯವೂ ಹೋಳಿ ಹುಣ್ಣಿಮೆ ಮಾಡುವಂತೆ ರಂಗು ರಂಗಿನ ಬಟ್ಟೆ ಅವರದು. ಗಂಡಸರೂ ರಂಗುರಾಯರೇ. ಅವರ ಪಂಚೆ, ಅಂಗಿಗಳು ಬೆಳ್ಳಗಿದ್ದರೂ ಮೂವತ್ತು ಮೊಳಗಳ ಮುಂಡಾಸಿನಲ್ಲಿ ಮುನ್ನೂರು ಬಣ್ಣಗಳಿರುತ್ತವೆ ಎಂದು ಲೇಖಕರು ಬಣ್ಣದ ಮೋಹವನ್ನು ವರ್ಣಿಸಿದ್ದಾರೆ.
೩. “ ಪ್ರಾಚೀನ ಗುಡಿ ಗೋಪುರಗಳು ಗೂಬೆ ಮನೆಗಳಾಗಿದ್ದವು”
ಉ:ಈ ಮೇಲಿನ ವಾಕ್ಯವನ್ನು ಶಿವರಾಮ ಕಾರಂತರು ಬರೆದ ಪೃಕ್ರತ ಪ್ರವಾಸ ಕಥನ ಬೆಡಗಿನ ತಾಣ ಜಯಪುರ ಎಂಬ ಪಠ್ಯಭಾಗವನ್ನು ಅವರ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು ಮೊದಲಿನ ಜಯಪುರ ಹಾಗೂ ಈಗಿನ ಜಯಪುರವನ್ನು ಹೋಲಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆದಿದ್ದಾರೆ.
ಹಿಂದೆ ಲೇಖಕರು ಜಯಪುರಕ್ಕೆ ಹೋದಾಗ ಜನವಸತಿ ಇರಲಿಲ್ಲ. ಪ್ರಾಚೀನ ಗುಡಿ ಗೋಪುರಗಳು ಗೂಬೆ ಮನೆಗಳಾಗಿದ್ದವು. ಈಗ ನೂರಾರು ಸಿಂಧಿ ಕುಟುಂಬಗಳು ಮನೆಮಾಡಿದ್ದವು. ಹೀಗೆ ಅಂಬೇರದ ಬಗ್ಗೆ ಲೇಖಕರು ಬರೆದಿದ್ದಾರೆ.
೪. “ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತೇವೆ”
ಈ ಮೇಲಿನ ವಾಕ್ಯವನ್ನು ಶಿವರಾಮ ಕಾರಂತರು ಬರೆದ ಪೃಕ್ರತ ಪ್ರವಾಸ ಕಥನ ಬೆಡಗಿನ ತಾಣ ಜಯಪುರ ಎಂಬ ಪಠ್ಯಭಾಗವನ್ನು ಅವರ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿಕೊಳ್ಳಲಾಗಿದೆ.
ರಾಜರ ಅಂತಃಪುರದ ವರ್ಣನೆಮಾಡುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆದಿದ್ದಾರೆ.
ರಾಜರ ಅಂತಃಪುರದ ಚಾವಡಿಗಳಲ್ಲಿ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿದ್ದಾರೆ. ಚಿತ್ರ ವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ
ಅಲಂಕರಿಸಿದಂತಹ ಕಂಬ, ಮುಚ್ಚಿಕೆಗಳುಳ್ಳ ರಚನೆ ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ, ಲಕ್ಷೋಪಲಕ್ಷ ಈ ಗಾಜಿನ ತುಣುಕುಗಳು ಚಾವಡಿಗೆ
ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ ಎಂದು ಲೇಖಕರು ವರ್ಣಿಸಿದ್ದಾರೆ.
ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧. ಜಯಪುರ ಬಣ್ಣಗಾರರ ತವರೂರು.
೨. ಚಿತ್ರಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳು.
೩. ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ
ಮಂಟಪಗಳಿವೆ.
೪. ಹಿಮ್ಮೇಳಕ್ಕೆ ಡೋಲು ತಮಟೆಗಳಿವೆ.
೫. ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿದೆವು.
ಊ) ಹೊಂದಿಸಿ ಬರೆಯಿರಿ
ಅ ಬ
೧. ಅಂಬೇರ ಪೂರ್ವದ ರಾಜಧಾನಿ
೨. ಲಕ್ಷೋಪಲಕ್ಷ ಗುಣಸಂಧಿ
೩. ಬಣ್ಣಬಣ್ಣ ದ್ವಿರುಕ್ತಿ
೪. ಜಂತ್ರ ಮಂತ್ರ ಖಗೋಳ ವೀಕ್ಷಣಾಲಯ
೫. ಶೃಂಗಾರ ಸವರ್ಣದೀರ್ಘಸಂಧಿ