“Edege Bidda Akshara” is a 10th-grade chapter written by Devanoor Mahadeva, focusing on empathy and equality as the essence of life. In Edege Bidda Akshara, he references the poet Siddalingayya, who tells the story of the goddess “Mane Manchamma.” In a village, while constructing a temple for Manchamma, the work progresses to the lintel level when she appears in the form of a laborer and authoritatively asks whether every villager has a home. One person admits he doesn’t. Manchamma then insists that before her temple is completed, all the villagers should have houses, emphasizing her concern for everyone’s well-being. Hence, she is revered as “Mane Manchamma.” The story illustrates that even the gods demonstrate empathy and treat everyone equally. “Edege Bidda Akshara” also touches on important psychological aspects, conveying a deep message about human values.

ಎದೆಗೆ ಬಿದ್ದ ಅಕ್ಷರ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ  ಉತ್ತರಿಸಿ. (Answer the following in one sentence)

೧. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
ಉ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ.
೨. ಮನೆಮಂಚಮ್ಮ  ಯಾರು?
ಉ: ಮನೆಮಂಚಮ್ಮ ಗ್ರಾಮದೇವತೆ .
೩. ಮನೆ ಮಂಚಮ್ಮನ  ಕತೆ ಹೇಳಿದ ಕವಿ ಯಾರು?
ಉ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ .
೪. ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಯಾರು?
ಉ: ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಫ.ಗು.ಹಳಕಟ್ಟಿಯವರು .
೫. ವಚನಕಾರರಿಗೆ ಯಾವುದು ದೇವರಾಗಿತ್ತು?
ಉ: ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .
೬. ಅಶೋಕ ಪೈ ಅವರ ವೃತ್ತಿ ಯಾವುದು?
ಉ: ಅಶೋಕ ಪೈ ಅವರು ಮನೋವೈದ್ಯರು .
೭. ದೇವನೂರರ ನನ್ನ ದೇವರು ಯಾರೆಂಬುದನ್ನು  ಸ್ಪಷ್ಟೀಕರಿಸಿ.
ಉ: ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ ಎಂದು ದೇವನೂರ ಮಹದೇವ ಅವರು ತನ್ನ  ದೇವರನ್ನು ಸ್ಪಷ್ಟಿಕರಿಸುತ್ತಾರೆ.
೮. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ?
ಉ: ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.
೯.ವಚನಕಾರರು ತಮ್ಮ ಕಷ್ಟ ಸುಖ, ದುಃಖ ದುಮ್ಮಾನ, ಏಳುಬೀಳುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದರು ?
ಉ: ವಚನಕಾರರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ತಮ್ಮ ಪ್ರತಿಜ್ಞೆ  ಮುಂದೆ ಹೇಳಿಕೊಳ್ಳುತಿದ್ದರು  .
೧೦. ನಮ್ಮೊಳಗೆ ಯಾವುದನ್ನ ಎಚ್ಚರಗೊಳಿಸಬೇಕಾಗಿದೆ ?
ಉ: ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in 3-4 senetnces)

೧. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಉ: ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಪಕ್ಕ ದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ಇರುತ್ತಾರೆ. ಆಗ ಟೆಲಿವಿಷನ್ ನಲ್ಲಿ ಒಂದು ಕೊಲೆ ದೃಶ್ಯ ಬರುತ್ತದೆ. ಟೆಲಿವಿಷನ್ ನೋಡುತ್ತಿದ್ದವರು ದು:ಖದ ಭಾವನೆಗೆ ಒಳಗಾಗುತ್ತಾರೆ. ಇದು ಪಕ್ಕದ ಕೊಠಡಿಯಲ್ಲಿ ಇರುವವರ  ಮನಸ್ಸಿಗೆ ಮುಟ್ಟುತ್ತದೆ.  ಅವರ ಮನಸ್ಸು  ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್ ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರಲ್ಲಿ ಖುಷಿ ಭಾವನೆ  ಉಂಟಾಗುತ್ತದೆ. ಇದು ಪಕ್ಕದ ಕೊಠಡಿಯಲ್ಲಿ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸಂತೋಷದ ಭಾವನೆ ಉಂಟಾಗುತ್ತದೆ. ಈ ಸಂಶೋಧನಾ  ಅರ್ಥ ಏನೆಂದರೆ  ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಆಗುತ್ತದೆ. ಇದು ಅಶೋಕ ಪೈ ಹೇಳಿದ ಆ ಸಂಶೋಧನಾ ಸತ್ಯ.

೨. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.
ಉ: ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ  ನಮ್ಮಲ್ಲಿ  ಮೂಡಿ ಬರುವುದು. ಅದು ಬೇರೆಯವರು ಹೇಳಿದ್ದನ್ನು  ಕೇಳಿ ತಿಳಿಯುವದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು ಎಂಬುದು ವಚನಕಾರರ ದೃಷ್ಟಿ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in 8-10 sentences)

೧. ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.
ಉ: ದೇವನೂರ  ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯ ಅವರು ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು  ಹೀಗೆ ಹೇಳುತ್ತಾರೆ. ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ  ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಗುಡಿ ಕಟ್ಟುತ್ತಾ ಇರುವಾಗ ಚಾವಣಿ ಮಟ್ಟಕ್ಕೆ  ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು  ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಆ ದೇವತೆ  “ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ  ಮಕ್ಕಳಾ ?” ಎಂದು ಕೇಳುತ್ತಾಳೆ. ಆಗ ಅಲ್ಲೊಬ್ಬ “ನನಗಿಲ್ಲ ತಾಯಿ” ಎನ್ನುತ್ತಾನೆ.  ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳುತ್ತಾಳೆ. ಅಂದಿನಿಂದ  ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ. ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)

೧. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.”

ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.

ಸಂದರ್ಭ : ಈ ವಾಕ್ಯವನ್ನು  ಮನೆಮಂಚಮ್ಮ ದೇವತೆ , ತನಗೆ ಗುಡಿ ಕಟ್ಟುತ್ತಿದ್ದ ಜನರಿಗೆ ಹೇಳುತ್ತಾಳೆ. ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ  ಗ್ರಾಮದೇವತೆ ಮಂಚಮ್ಮನಿಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಗುಡಿ ಕಟ್ಟುತ್ತಾ ಇರುವಾಗ ಚಾವಣಿ ಮಟ್ಟಕ್ಕೆ  ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು  ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಆ ದೇವತೆ  “ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ  ಮಕ್ಕಳಾ ?” ಎಂದು ಕೇಳುತ್ತಾಳೆ. ಆಗ ಅಲ್ಲೊಬ್ಬ “ನನಗಿಲ್ಲ ತಾಯಿ” ಎನ್ನುತ್ತಾನೆ.  ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳಿದ ಸಂದರ್ಭವಾಗಿದೆ.

ಸ್ವಾರಸ್ಯ : ಗುಡಿಕಟ್ಟುವ ಜನರಿಗೆ ಮನೆ ಇಲ್ಲದ ಮೇಲೆ  ತನಗೆ ಗುಡಿ ಬೇಡ ಎಂದು ಗ್ರಾಮದೇವತೆ ಕಾರುಣ್ಯ ಮತ್ತು ಸಮಾನತೆಯನ್ನು  ಹೇಳುವ ಈ ಮಾತು ಇಲ್ಲಿಯ ಸ್ವಾರಸ್ಯವಾಗಿದೆ.

೨. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”

ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.

ಸಂದರ್ಭ : ಲೇಖಕರು ಬುದ್ಧನ ಕಾರುಣ್ಯವನ್ನು ವಿವರಿಸುವಾಗ,  ಅಶೋಕ ಪೈರವರು ಹೇಳಿದ ಸಂಶೋಧನಾ  ಉದಾಹರಣೆ ನೀಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ. ಟಿ.ವಿ ನೋಡುವ ಭಾವನೆಗಳು ಪಕ್ಕದ ಕೊಠಡಿಯಲ್ಲಿದ್ದವರ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ , ಹಾಗೆಯೇ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಆಗುತ್ತದೆ.  ಈ ಭಾವನೆ ಇಡೀ ಜೀವನ  ಕುಲವೆಲ್ಲ ಒಂದೇ ಎಂಬುದನ್ನು ಹೇಳುತ್ತದೆ.

ಸ್ವಾರಸ್ಯ : ಯಾವ ಜೀವಿಯು ತಮ್ಮಷ್ಟಕ್ಕೆ ತಾವೇ  ಬದುಕಲು ಸಾಧ್ಯವಿಲ್ಲ.  ಇಡೀ ಜೀವಕುಲವೆಲ್ಲ ಒಂದೇ. ಎಲ್ಲರೂ ಸಮಾನರು ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಬಂದಿದೆ.

೩. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”

ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.

ಸಂದರ್ಭ : ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಡಿರಲಿಲ್ಲ.

ಪ್ರತಿಯೊಬ್ಬ ವಚನಕಾರರಿಗೂ ಅವರವರ ಇಷ್ಟದೇವತೆ ಇತ್ತು. ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ  ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಆ ಪ್ರಜ್ಞೆಯ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.

ಸ್ವಾರಸ್ಯ : ವಚನಕಾರರಿಗೆ ಪ್ರಜ್ಞೆಯೇ ಇಷ್ಟದೇವತೆಯಾಗಿತ್ತು. ಅದೇ ರೀತಿಯಲ್ಲಿ ಪ್ರತಿಯೊಬ್ಬರಲ್ಲಿ ಪ್ರಜ್ಞೆ ಜಾಗೃತವಾಗಲಿ ಎಂಬುದನ್ನು  ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.

೪. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”

ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.

ಸಂದರ್ಭ : ಕೊಲೆ, ಸುಲಿಗೆ, ದ್ವೇಷ, ಅಸೂಯೆಗಳಿಂದ ನರಳುತ್ತಿರುವ ಈ ಜಗತ್ತು ತನ್ನ ಆಳದ ಒಳ ಸಮಷ್ಟಿ ಮನಸ್ಸು ಘಾಸಿಗೊಳಿಸುತ್ತಿದೆ ಎನ್ನುವ ಸಂದರ್ಭದಲ್ಲಿ, ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ ಎಂದು ಹೇಳಿದ್ದಾರೆ.

ಸ್ವಾರಸ್ಯ : ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇದ್ದಾರೆ. ಎಲ್ಲರೂ  ಕಾರುಣ್ಯ ಮತ್ತು ಸಮಾನತೆಯ ಭಾವವನ್ನು ಮೂಡಿಸಿಕೊಂಡು ಬದುಕಬೇಕು ಎಂಬುದು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

Click here to download edege biddha aksara exercises