Gandiji jeevanda nija sangatigalu Kannada lesson grade V is about few incidents of Gandhiji’s life. During the freedom movement, a young boy was surprised to see Gandhiji without a shirt. He approached him and asked, “Why aren’t you wearing a shirt? Don’t you have money to buy one?” He then added, “My mother stitches clothes—she can make one for you.” Gandhiji gently replied, “I have 40 crore brothers and sisters. It would be impossible for your mother to stitch for all of them.” This is one of the true incident of Gandiji jeevanda nija sangatigalu.
On another occasion, an elderly woman came to see Gandhiji and placed half a paise at his feet before leaving. His accountant, Jamnalal Seth, suggested adding the money to the accounts, but Gandhiji refused. He explained that the coin was priceless to him, as it might have been the woman’s entire life savings.
ಗಾಂಧೀಜಿ ಜೀವನದ ನೈಜ ಸಂಗತಿಗಳು
೧. ಪದಗಳ ಅರ್ಥ ಬರೆಯಿರಿ. (Write the word meaning)
ಅರಿವೆ = ಬಟ್ಟೆ. ಅರ್ಧಾಣೆ = ಒಂದು ನಾಣ್ಯದ ಅರ್ಥ ಬೆಲೆ.
ಉದಾರ = ಧಾರಾಳ. ಚೆಕ್ಕು = ಬ್ಯಾಂಕ್ ಹುಂಡಿ ಚೀಟಿ.
ಭಗಿನಿ = ಒಡಹುಟ್ಟಿದವಳು, ಸಹೋದರಿ. ಮೌಲ್ಯ = ಬೆಲೆ, ಕಿಮ್ಮತ್ತು. ವ್ಯಸನ = ಚಿಂತೆ, ದುಃಖ. ಹೃದಯ ಕರಗಿ ನೀರಾಯಿತು = ಕರುಣೆ, ಮರುಕ ಹುಟ್ಟಿತು. ಆಣೆ = ಒಂದು ನಾಣ್ಯ. ಆಗ್ರಹ = ಬಲವಂತ, ಒತ್ತಾಯ.
ಗಳಿಕೆ = ಸಂಪಾದನೆ, ಆದಾಯ. ಬಂಧು = ನೆಂಟ, ಸಂಬಂಧಿಕ.
ಭೂಷಣ = ಅಲಂಕಾರ. ವೇಷ = ಉಡುಗೆ. ಸರ್ವಸ್ವ = ಸಮಸ್ತ ಸ್ವತ್ತು, ಸಮಸ್ತ ಆಸ್ತಿ.
೨. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಬಾಪೂಜಿಯ ವೇಷಭೂಷಣ ಕಂಡು ಬಾಲಕನಿಗೆ ಏಕೆ ವ್ಯಸನವಾಯಿತು?
ಉ: ಬಾಪೂಜಿಯ ವೇಷಭೂಷಣದಲ್ಲಿ ಒಂದು ಅಂಗಿಯೂ ಇಲ್ಲದ್ದನ್ನು ಕಂಡು ಬಾಲಕನಿಗೆ ವ್ಯಸನವಾಯಿತು.
೨. ಬಾಲಕ ಬಾಪೂಜಿಯ ವೇಷಭೂಷಣ ಕಂಡು ಏನೆಂದು ಹೇಳಿದನು?
ಉ: ಬಾಲಕ ಬಾಪೂಜಿಯ ವೇಷಭೂಷಣ ಕಂಡು “ತಾವು ಅಂಗಿ ಏಕೆ ತೊಡುವುದಿಲ್ಲ” ಹೇಳಿದನು?
೩. ಬಾಪೂಜಿಯ ಮಾತುಗಳಿಂದ ಹುಡುಗನ ಹೃದಯ ಕರಗಿ ನೀರಾಯಿತು ಏಕೆ?
ಉ: “ಮಗು ನನ್ನ ಹತ್ತಿರ ಹಣ ಎಲ್ಲಿದೆ? ನಾನು ತುಂಬಾ ಬಡವ. ಅಂಗಿಗಾಗಿ ಹಣ ಎಲ್ಲಿಂದ ತರಲಿ” ಬಾಪೂಜಿಯ ಈ ಮಾತುಗಳಿಂದ ಹುಡುಗನ ಹೃದಯ ಕರಗಿ ನೀರಾಯಿತು.
೪. ಹುಡುಗ ಬಾಪೂಜಿಗೆ ಯಾವ ರೀತಿ ಸಹಾಯ ಮಾಡುವದಾಗಿ ಹೇಳಿದನು?
ಉ:ಹುಡುಗ ಬಾಪೂಜಿಗೆ ತನ್ನ ತಾಯಿಯಿಂದ ಅಂಗಿ ಹೊಲಿಸಿ, ಸಹಾಯ ಮಾಡುವದಾಗಿ ಹೇಳಿದನು.
೫. ಗಾಂಧೀಜಿಯವರನ್ನು ಭೇಟಿ ಮಾಡಲು ಬಂದ ಮುದುಕಿ ಹೇಗಿದ್ದಳು?
ಉ: ಗಾಂಧೀಜಿಯವರನ್ನು ಭೇಟಿ ಮಾಡಲು ಬಂದ ಮುದುಕಿಯ ಕೂದಲೆಲ್ಲಾ ಬೆಳ್ಳಗಾಗಿತ್ತು, ಸೊಂಟ ಬಾಗಿ, ಚಿಂದಿ ವಸ್ತ್ರ ತೊಟ್ಟಿದ್ದಳು.
೬. ಗಾಂಧೀಜಿ ಹಣವನ್ನು ಏಕೆ ಸಂಗ್ರಹಿಸುತ್ತಿದ್ದರು?
ಉ: ಗಾಂಧೀಜಿಯವರು ಹಳ್ಳಿ – ಪಟ್ಟಣಗಳಲ್ಲಿ ಯಾತ್ರೆ ಮಾಡುತ್ತಾ ಹಣವನ್ನು ಸಂಗ್ರಹಿಸುತ್ತಿದ್ದರು.
೭. ಗಾಂಧೀಜಿಯವರನ್ನು ಭೇಟಿಯಾದ ಮುದುಕಿ ಏನು ಮಾಡಿದಳು?
ಉ: ಗಾಂಧೀಜಿಯವರನ್ನು ಭೇಟಿಯಾದ ಮುದುಕಿ ಒಂದು ಅರ್ಧಾಣೆಯನ್ನು ಅವರ ಪಾದಗಳ ಬಳಿ ಇಟ್ಟು ಹೋದಳು.
೮. ಚರಕ ಸಂಘದ ಲೆಕ್ಕಪತ್ರಗಳನ್ನು ಯಾರು ಇಡುತ್ತಿದ್ದರು?
ಉ: ಚರಕ ಸಂಘದ ಲೆಕ್ಕಪತ್ರಗಳನ್ನು ಸೇಠ್ ಜಮನಾಲಾಲ ಬಜಾಜರು ಇಡುತ್ತಿದ್ದರು.
೩. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಬಾಪೂಜಿ ಅಂಗಿ ತೊಡದಿರುವುದಕ್ಕೆ ಕಾರಣಗಳೇನು?
ಉ: ದೇಶದಲ್ಲಿರುವ ೪೦ ಕೋಟಿ ಜನರಿಗೆ ತೊಡಲು ಅಂಗಿ ಇರಲಿಲ್ಲ. ಈ ಕಾರಣಕ್ಕೆ ಬಾಪೂಜಿ ಅಂಗಿ ತೊಡದಿರುವುದಕ್ಕೆ ಕಾರಣ.
೨. ಮುದುಕಿ ನೀಡಿದ ಅರ್ಧಾಣೆ ಗಾಂಧೀಜಿಯವರಲ್ಲಿ ಯಾವ ಭಾವನೆಗಳನ್ನು ಮೂಡಿಸಿತು?
ಉ:ಲಕ್ಷಗಟ್ಟಲೆ ಹಣವಿದ್ದವರು ಒಂದೆರಡು ಸಾವಿರ ಕೊಟ್ಟರೆ ಅದು ದೊಡ್ಡ ಮಾತಲ್ಲ. ಮುದುಕಿಯ ಇಡೀ ಜೀವಮಾನದ ಗಳಿಕೆಯಾದ ಅರ್ಧಾಣೆ ಕೊಟ್ಟಿರುವುದು ಅವಳ ಉದಾರ ಮತ್ತು ದೊಡ್ಡ ಮನಸ್ಸನ್ನು ತೋರಿಸುತ್ತದೆ. ಅವಳ ತ್ಯಾಗವನ್ನು ತೋರಿಸುತ್ತದೆ ಎಂಬುದು ಗಾಂಧೀಜಿಯವರಲ್ಲಿ ಮೂಡಿದ ಭಾವನೆಗಳು.
೪. ಈ ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ. (Who told whom?)
೧. “ಮಗು ನನ್ನ ಹತ್ತಿರ ಹಣ ಎಲ್ಲಿದೆ? ನಾನು ತುಂಬಾ ಬಡವ”
ಉ: ಈ ಮಾತನ್ನು ಗಾಂಧೀಜಿಯವರು ಬಾಲಕನಿಗೆ ಹೇಳಿದರು.
೨. “ಮಗು ನನಗೆ ೪೦ ಕೋಟಿ ಬಂದು ಭಗಿನಿಯರಿದ್ದಾರೆ”
ಉ: ಈ ಮಾತನ್ನು ಗಾಂಧೀಜಿಯವರು ಬಾಲಕನಿಗೆ ಹೇಳಿದರು.
೩. “ಈ ಅರ್ಧಾಣೆಗೆ ನಿಮಗೆ ನನ್ನಲ್ಲಿ ವಿಶ್ವಾಸವಿಲ್ಲವೇ?”
ಉ: ಈ ಮಾತನ್ನು ಜಮನಾಲಾಲರು ಗಾಂಧೀಜಿಯವರಿಗೆ ಹೇಳಿದರು.
ಭಾಷಾಭ್ಯಾಸ
೧.ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿರಿ. (Make your own sentence)
ಸಹಾಯಾರ್ಥ: ಶಾಲೆಯ ಸಹಾಯಾರ್ಥ ನಾಟಕ ಕಾರ್ಯಕ್ರಮವಿತ್ತು.
ವಿಶ್ವಾಸ: ದೇವರಲ್ಲಿ ವಿಶ್ವಾಸವಿರಬೇಕು.
ಸರ್ವಸ್ವ: ನನ್ನ ತಾಯಿ ನನ್ನ ಸರ್ವಸ್ವ.
ವೇಷಭೂಷಣ: ಅವನ ವೇಷಭೂಷಣ ನೋಡಿ ನನಗೆ ಖುಷಿಯಾಯಿತು.
ಹೃದಯ ಕರಗಿತು: ನಾಯಿ ನೋಡಿ ನನ್ನ ಹೃದಯ ಕರಗಿತು.
೨. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಬಡವ X ಶ್ರೀಮಂತ ವಿಶ್ವಾಸ X ಅವಿಶ್ವಾಸ
ಉದಾರ X ಅನುದಾರ ವಿಚಾರ X ಅವಿಚಾರ
೩. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Spilt the word)
ಅರ್ಧಾಣೆ = ಅರ್ಧ+ ಆಣೆ
ಸಹಾಯಾರ್ಥ = ಸಹಾಯ + ಅರ್ಥ
ನಾನೊಬ್ಬ = ನಾನು + ಒಬ್ಬ
ಆಗಾಗ = ಆಗ + ಆಗ
ಒಂದೆರಡು = ಒಂದು + ಎರಡು
Click here to download Gandiji jeevanda nija sangatigalu grade V