Geletana poem CBSE grade VIII is a poem about friendship. Geletana kannada notes is about a poem written by Chennaveera Kanavi. In the poem, he has mentioned friendship, its taste, importance and intimacy on a philosophical basis. He has explained that friendship has a superior place in mythological, historical and contemporary life. This poem has gained importance at a time when friendship is rushing from a personal base to a base of universal harmony in the modern world. This is the inner meaning of the poem.
The poet is resting under the cool shade of the vast banyan tree called friendship. He swallows the unbearable pain, sorrow and hardships that come in life in silence.
The poet has opined that friendship is the nectar of the earth. The life of one who does not make friendship, the life of one who does not taste the nectar of friendship is like death. The mind of friends is as vast as the sky. Their hearts are as pure as crystal, as clear as a grown-up lotus. It is more tasteless than salt; We have heard the proverb that there is no better relative than a mother. Friendship is a relationship greater than maternal relations, than blood relations. There is nothing more delicious than salt in taste, but friendship is more delicious than salt. If we look at friendship, we don’t understand its importance, but instead we have to make friendship and enjoy it. Geletana means friendship.
ಗೆಳೆತನ
ಕೃತಿಕಾರರ ಪರಿಚಯ
ಕನ್ನಡದ ಪ್ರಮುಖ ಕವಿಗಳಲ್ಲಿ ಚೆನ್ನವೀರ ಕಣವಿ (1928) ಒಬ್ಬರು. ಗದಗ ಜಿಲ್ಲೆಯ ಹೊಂಬಳದವರು. ನವೋದಯ ಮತ್ತು ನವ್ಯ ಮಾರ್ಗಗಳ ಸಮನ್ವಯ ಸಾಧಿಸಿದ ಕವಿಯೆಂದೇ ಪ್ರಸಿದ್ಧರು. ಆಕಾಶಬುಟ್ಟಿ, ಭಾವಜೀವಿ,
ಮಧುಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಕಾವ್ಯಾಕ್ಷಿ, ಚಿರಂತನ ದಾಹ ಇವರ ಪ್ರಮುಖ ಕವನ ಸಂಕಲನಗಳು. ಕರ್ನಾಟಕ ಅಕಾಡೆಮಿ ಗೌರವ ಪ್ರಶಸ್ತಿ,1981 ರಲ್ಲಿ ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿವೆ. ಗೆಳೆತನ ಕವನವನ್ನು ಚೆನ್ನವೀರ ಕಣವಿ ಅವರ ಆಕಾಶಬುಟ್ಟಿ ಕವನ ಸಂಕಲನ ದಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ .
ಆಶಯ ಭಾವ
ಕವನದಲ್ಲಿ ಗೆಳೆತನ, ಅದರ ಸವಿ, ಮಹತ್ವ ಹಾಗೂ ಅನ್ಯೋನ್ಯತೆಯ ಬಗ್ಗೆ ತಾತ್ವಿಕ ನೆಲೆಯಲ್ಲಿ ಪ್ರಸ್ತಾಪಿಸಿದ್ದಾರೆ. ಗೆಳೆತನಕ್ಕೆ ಪೌರಾಣಿಕ, ಐತಿಹಾಸಿಕ ಹಾಗೂ ಸಮಕಾಲೀನ ಬದುಕಿನಲ್ಲಿ ಮಿಗಿಲಾದ ಸ್ಥಾನವಿರುವುದನ್ನು
ತಿಳಿಸಿಕೊಟ್ಟಿದ್ದಾರೆ. ಆಧುನಿಕ ಪ್ರಪಂಚದಲ್ಲಿ ಗೆಳೆತನ ವೈಯಕ್ತಿಕ ನೆಲೆಯಿಂದ ವಿಶ್ವಸಾಮರಸ್ಯದ ನೆಲೆಗೆ ಧಾವಿಸುತ್ತಿರುವ ಸಂದರ್ಭದಲ್ಲಿ ಈ ಕವಿತೆ ಮಹತ್ವವನ್ನು ಪಡೆದಿದೆ. ಇದೇ ಕವಿತೆಯ ಆಂತರ್ಯಭಾವ.
ಗೆಳೆತನ ಎಂಬ ಸುವಿಶಾಲ ಆಲದ ಮರದಡಿ ಪಸರಿಸಿಹ ತಂಪಾದ ನೆರಳಿನಲ್ಲಿ ಕವಿ ತಂಗಿರುವರು. ಜೀವನದಲ್ಲಿ ಬರುವ ಸಹಿಸಲಾಗದ, ತಾಳಲಾರದ ನೋವು, ನಲಿವು, ಕಷ್ಟಗಳನ್ನು ಮೌನದಲಿ ನುಂಗಿರುವರು.
ಗೆಳೆತನವೆ ಭೂಲೋಕಕಿರುವ ಅಮೃತ ಗೆಳೆತನವನ್ನು ಮಾಡದವನ ಜೀವನ, ಗೆಳೆತನದ ಅಮೃತವನ್ನು ಸವಿಯದ ಜೀವನ ಇದ್ದೂ ಸತ್ತಂತೆ ಎಂದು ಕವಿಯವರು ಅಭಿಪ್ರಾಯ ಪಟ್ಟಿದ್ದಾರೆ. ಗೆಳೆಯರ ಮನಸ್ಸು ಬಾನಿನಂತೆ ವಿಶಾಲವಾಗಿರುತ್ತದೆ. ಅವರ ಹೃದಯವು ತಿಳಿಗೊಳದಂತೆ ಶುದ್ಧವಾಗಿರುತ್ತದೆ. ಸ್ಪಟಿಕದಂತೆ, ಬೆಳೆದಿಂಗಳಿನಂತೆ ತಿಳಿಯಾಗಿರುತ್ತದೆ. ಉಪ್ಪಿಗಿಂತಲೂ ರುಚಿಯಿಲ್ಲ; ತಾಯಿಗಿಂತ ಬಂಧುವಿಲ್ಲ ಎಂಬ
ಗಾದೆ ಮಾತನ್ನು ಕೇಳಿದ್ದೇವೆ. ಗೆಳೆತನವು ತಾಯಿ ಸಂಬಂಧಕ್ಕಿಂತ , ರಕ್ತ ಸಂಬಂಧಕ್ಕಿಂತ ಶ್ರೇಷ್ಠವಾದ ಸಂಬಂಧವಾಗಿದೆ . ರುಚಿಯಲ್ಲಿ ಉಪ್ಪಿಗಿಂತ ರುಚಿಯಾದದ್ದು ಯಾವುದು ಇಲ್ಲ ಆದರೆ ಗೆಳೆತನವು ಉಪ್ಪಿಗಿಂತಲು ರುಚಿಯಾದದ್ದು. ಈ ರುಚಿಯನ್ನು ನೋಡಿದರೆ ರುಚಿಸದು ಹಾಗೆ ಗೆಳೆತನವನ್ನು ನೋಡಿದರೆ ಅದರ ಮಹತ್ವ ತಿಳಿಯದು ಅದರ ಬದಲಾಗಿ ನಾವು ಗೆಳೆತನವನ್ನು ಮಾಡಿ ಸವಿಯಬೇಕಿದೆ.
ಪದಗಳ ಅರ್ಥ (Word Meaning)
ಅಪ್ಪುಕಯ್- ಒಪ್ಪಿಕೊಳ್ಳು, ಸ್ವೀಕರಿಸು, ಅಹಮಿಕೆ – ಅಹಂಕಾರ ಇಹಲೋಕ – ಭೂಲೋಕ, ಕೂರ್ಪು – ಒಲವು, ಪ್ರೀತಿ
ಚಂಚಲತೆ – ಸ್ಥಿರವಿಲ್ಲದ ಜೀವನ್ಮ್ರತ – ಬದುಕಿದ್ದೂ ಸತ್ತಂತಿರುವ ತಂಗು – ಇಳಿದುಕೋ, ಬೀಡುಬಿಡು
ದುರ್ಭರ- ತಾಳಲಾಗದ, ದೋಷ – ತಪ್ಪು, ಕುಂದುಕೊರತೆ, ನುಡಿ – ಮಾತು, ನೆವ – ಕಾರಣ,
ಪಸರಿಸು – ಹರಡು,ವಿಸ್ತರಿಸು, ಬವಣೆ – ಕಷ್ಟ, ಬಾಗು – ಮಣಿ, ಬಗ್ಗು, ಶರಣಾಗು, ಮಿಗಿಲು – ಶ್ರೇಷ್ಠ ,
ರಸಪಾಕ- ರುಚಿಯಾದ ಅಡುಗೆ, ವಂಚನೆ – ಮೋಸ, ಹದ – ಪಕ್ವತೆ, ಸರಿಯಾದ ಸ್ಥಿತಿ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಕವಿ ಎಲ್ಲಿ ತಂಗಿದ್ದಾರೆ?
ಉ: ಕವಿ ಗೆಳೆತನದ ಸುವಿಶಾಲ ಆಲದ ಮರದಡಿಯ ತಂಪಾದ ನೆರಳಿನಲ್ಲಿ ತಂಗಿದ್ದಾರೆ.
೨. ಕವಿ ಮೌನದಲ್ಲಿ ಏನನ್ನು ನುಂಗಿದ್ದಾರೆ?
ಉ: ಕವಿ ಮೌನದಲ್ಲಿ ಬಹಳಷ್ಟು ತಾಳಲಾಗದ ಕಷ್ಟಗಳನ್ನು, ನೋವುಗಳನ್ನು , ತಾಪಗಳನ್ನು ನುಂಗಿದ್ದಾರೆ.
೩. ಗೆಳೆತನದ ಮನಸ್ಸಿನ ಭಾವನೆ ಹೇಗಿದೆ?
ಉ: ಗೆಳೆತನದ ಮನಸ್ಸಿನ ಭಾವನೆಯು ಬಾನಿನಷ್ಟು ಅಗಲ, ಎದೆ ತಿಳಿಯಾದ ಕೊಳದಂತೆ, ಭಾವವು ಶುದ್ಧ ಸ್ಪಟಿಕದ ಬೆಳದಿಂಗಳಂತೆ ಇದೆ.
೪. ಉಪ್ಪು ಮತ್ತು ತಾಯಿಯ ಬಗೆಗಿರುವ ಗಾದೆ ಯಾವುದು?
ಉ: ಉಪ್ಪು ಮತ್ತು ತಾಯಿಯ ಬಗೆಗಿರುವ ಗಾದೆ ಯಾವುದು ಎಂದರೆ “ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ”
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following two – three sentences)
೧. ಗೆಳೆತನದಲ್ಲಿ ಯಾವ ದುರ್ಗುಣಗಳು ಇಲ್ಲವೆಂದು ಹೇಳಲಾಗಿದೆ?
ಉ: ಗೆಳೆತನದಲ್ಲಿ ವಂಚನೆಯಿಲ್ಲ, ಚಂಚಲತೆಯಿಲ್ಲ. ಮೇಲು ಕೀಳುಗಳೆಂಬ ಭೇದವಿಲ್ಲ. ಅಹಮಿಕೆಯ ನೆಪವಿಲ್ಲ, ದ್ವೇಷವಿಲ್ಲ. ಸಣ್ಣತನ, ಸಂಕೋಚವಿಲ್ಲ. ಈ ಎಲ್ಲಾ ದುರ್ಗುಣಗಳು ಗೆಳೆತನದಲ್ಲಿ ಇಲ್ಲ.
೨. ಗೆಳೆತನದ ಶುಚಿರುಚಿ ಎಂಥದ್ದು?
ಉ: ಉಪ್ಪಿಗಿಂತಲೂ ರುಚಿಯು ತಾಯಿಗಿಂತಲೂ ಬಂಧು ಇಲ್ಲೆಂಬ ಗಾದೆನುಡಿಗಿಂತ ಗೆಳೆತನದ ಶುಚಿರುಚಿಯು ಇದಕ್ಕೂ ಮಿಗಿಲಾದುದು ಯಾವದೂ ಇಲ್ಲ. ಎಲ್ಲರಿಗೂ ಇದರ ಅರಿವಿಲ್ಲ. ಯಾರಿಗೆ ಗೆಳೆತನದ ಅರಿವಿದೆಯೋ ಅವರು ಮಾತ್ರ ಅದರ ಸವಿಯ ಬಲ್ಲರು ಎಂದು ಕವಿ ಹೇಳಿದ್ದಾರೆ.
೩. ಜೀವನ ರಸಪಾಕವಾಗುವುದು ಹೇಗೆ?
ಉ: ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ, ಎಲ್ಲ ಆಗು ಹೋಗುಗಳಿಗೆ ಪ್ರೀತಿಯಿಂದ ಸಂತೈಸುವ, ತನಗೆ ಸುಖ ಬಂದಾಗ ಸಂತಸಪಟ್ಟು, ದುಃಖದಲ್ಲಿ ಸಹಭಾಗಿಯಾಗಿರುವ ಗೆಳೆಯ ದೊರೆತಾಗ ಜೀವನ ರಸಪಾಕಗುತ್ತದೆ.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ. (Answer the following in four – five sentences)
೧. ಗೆಳೆತನ ಇಹಲೋಕಕಿರುವ ಅಮೃತ ಹೇಗೆ? ತಿಳಿಸಿ.
ಉ : ಗೆಳೆತನ ಸುವಿಶಾಲ ಆಲದ ಮರದಡಿಯಲ್ಲಿ ಸಿಗುವ ತಂಪಾದ ನೆರಳಿನಂತಿದೆ. ಗೆಳೆತನವು ಜೀವನದ ಅಮೃತ ಹಾಗೆ ಇದೆ. ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ, ಎಲ್ಲ ಆಗು ಹೋಗುಗಳಿಗೆ ಪ್ರೀತಿಯಿಂದ ಸಂತೈಸುವ, ತನಗೆ ಸುಖ ಬಂದಾಗ ಸಂತಸಪಟ್ಟು, ದುಃಖದಲ್ಲಿ ಸಹಭಾಗಿಯಾಗಿರುವ ಗೆಳೆಯ ದೊರೆತಾಗ ಜೀವನ ಅಮೃತವಾಗುತ್ತದೆ. ಇಲ್ಲಿ ಮೋಸ, ವಂಚನೆ, ಚಂಚಲತೆ, ಭೇದಭಾವವಿಲ್ಲ, ದ್ವೇಷವಿಲ್ಲ ದುರ್ಗುಣಗಳು ಇಲ್ಲದಿರುವುದರಿಂದ ಗೆಳೆತನವು ಇಹಲೋಕದ ಅಮೃತವಾಗಿದೆ.
೨. ಗೆಳೆಯರ ಮನಸ್ಸಿನ ಭಾವನೆ ಹೇಗಿರುತ್ತದೆ? ವಿವರಿಸಿ.
ಉ: ಗೆಳೆಯರ ಮನಸ್ಸಿನಲ್ಲಿ ಮೋಸ, ವಂಚನೆ, ಚಂಚಲತೆ, ಭೇದಭಾವವಿಲ್ಲ, ದ್ವೇಷವಿಲ್ಲ, ದುರ್ಗುಣಗಳಂತ ಭಾವನೆಗಳು ಇಲ್ಲ. ಇಲ್ಲಿ ಸಣ್ಣತನ, ಸಂಕೋಚವಿಲ್ಲ. ಮೇಲು, ಕೀಳೆಂಬ ಭಾವನೆಗಳಿಲ್ಲ. ಗೆಳೆಯರ ಮನಸ್ಸು ವಿಶಾಲವಾಗಿರುತ್ತದೆ. ಗೆಳೆಯರ ಭಾವ ಶುದ್ಧ ಸ್ಫಟಿಕದಂತೆ ಮತ್ತು ಬೆಳದಿಂಗಳಿನಂತೆ. ಇವು ಗೆಳೆಯರ ಮನಸ್ಸಿನಲ್ಲಿ ಇರುವ ಭಾವನೆಗಳು.
೩. ಗೆಳೆಯರು ಹೇಗೆ ಬಾಳುತ್ತಾರೆ?
ಉ: “ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು” ಇಲ್ಲೆಂಬ ಗಾದೆನುಡಿಗಿಂತ ಗೆಳೆತನದ ಶುಚಿರುಚಿಯು ಇದಕ್ಕೂ ಮಿಗಿಲಾದುದು ಯಾವದೂ ಇಲ್ಲವೆಂಬಂತೆ ಬಾಳುತ್ತಾರೆ. ಗೆಳೆಯರ ಮನಸ್ಸಿನಲ್ಲಿ ಮೋಸ, ವಂಚನೆ, ಚಂಚಲತೆ, ಭೇದಭಾವವಿಲ್ಲ, ದ್ವೇಷವಿಲ್ಲ, ದುರ್ಗುಣಗಳಂತ ಭಾವನೆಗಳು, ಮೇಲು, ಕೀಳು, ಸಣ್ಣತನ, ಸಂಕೋಚವಿಲ್ಲದೇ ಬಾಳುತ್ತಾರೆ. ಗೆಳೆಯರ ಮನಸ್ಸು ವಿಶಾಲವಾಗಿರುತ್ತದೆ. ಗೆಳೆಯರ ಭಾವ ಶುದ್ಧ ಸ್ಫಟಿಕದಂತೆ ಇದ್ದು ಬೆಳದಿಂಗಳಿನಂತೆ ಬಾಳುತ್ತಾರೆ.
ಈ. ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)
೧. ಗೆಳೆತನದ ಮಹತ್ವವನ್ನು ಕಣವಿ ಅವರು ಹೇಗೆ ತಿಳಿಸಿದ್ದಾರೆ?
ಉ: ಗೆಳೆತನ ಸುವಿಶಾಲ ಆಲದ ಮರದಡಿಯಲ್ಲಿ ಸಿಗುವ ತಂಪಾದ ನೆರಳಿನಂತಿದೆ. ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವ, ಎಲ್ಲ ಆಗು ಹೋಗುಗಳಿಗೆ ಪ್ರೀತಿಯಿಂದ ಸಂತೈಸುವ, ತನಗೆ ಸುಖ ಬಂದಾಗ ಸಂತಸಪಟ್ಟು, ದುಃಖದಲ್ಲಿ ಸಹಭಾಗಿಯಾಗಿರುವ ಗೆಳೆಯ ದೊರೆತಾಗ ಜೀವನ ಅಮೃತವಾಗುತ್ತದೆ. ಇಲ್ಲಿ ಮೋಸ, ವಂಚನೆ, ಚಂಚಲತೆ, ಭೇದಭಾವವಿಲ್ಲ, ದ್ವೇಷವಿಲ್ಲ ದುರ್ಗುಣಗಳು ಇಲ್ಲದಿರುವುದರಿಂದ ಗೆಳೆತನವು ಇಹಲೋಕದ ಅಮೃತವಾಗಿದೆ. ಇಲ್ಲಿ ಸಣ್ಣತನ, ಸಂಕೋಚವಿಲ್ಲ. ಮೇಲು, ಕೀಳೆಂಬ ಭಾವನೆಗಳಿಲ್ಲ. ಗೆಳೆಯರ ಮನಸ್ಸು ವಿಶಾಲವಾಗಿರುತ್ತದೆ. ಗೆಳೆಯರ ಭಾವ ಶುದ್ಧ ಸ್ಫಟಿಕದಂತೆ ಮತ್ತು ಬೆಳದಿಂಗಳಿನಂತೆ. “ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು” ಇಲ್ಲೆಂಬ ಗಾದೆನುಡಿಗಿಂತ ಗೆಳೆತನದ ಶುಚಿರುಚಿಯು ಇದಕ್ಕೂ ಮಿಗಿಲಾದುದು ಯಾವದೂ ಇಲ್ಲವೆಂಬಂತೆ ಗೆಳೆತನದ ಮಹತ್ವವನ್ನು ಕಣವಿ ಅವರು ಹೇಳಿದ್ದಾರೆ .
ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ಅದನುಳಿದರೇನಿಹುದು_ ಜೀವನ್ಮೃತ!”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಜೀವನದನಂತ ದುರ್ಭರ ಬವಣೆ, ನೋವುಗಳ, ಕಾವುಗಳ, ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು-ಜೀವನ್ಮೃತ! ಎಂದು ವರ್ಣಿಸುವ ಸಂದರ್ಭವಾಗಿದೆ.
ಸ್ವಾರಸ್ಯ : ಗೆಳೆತನವನ್ನು ಕವಿ ಅಮೃತಕ್ಕೆ ಹೋಲಿಸಿದ್ದಾರೆ. ಗೆಳೆತನದ ಮಹತ್ವವನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಿದ್ದಾರೆ.
೨. “ಭಾವ ಶುದ್ಧ ಸ್ಫಟಿಕ ಬೆಳದಿಂಗಳು!”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ
ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಗೆಳತನದಲ್ಲಿ ಮೋಸ, ವಂಚನೆ, ಚಂಚಲತೆ, ಭೇದಭಾವವಿಲ್ಲ. ದ್ವೇಷವಿಲ್ಲ, ದುರ್ಗುಣಗಳು ಇಲ್ಲ. ಇಲ್ಲಿ ಸಣ್ಣತನ, ಸಂಕೋಚವಿಲ್ಲ. ಮೇಲು, ಕೀಳೆಂಬ ಭಾವನೆಗಳಿಲ್ಲ ಎಂದು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಗೆಳೆಯರ ಮನಸ್ಸು ವಿಶಾಲವಾಗಿರುತ್ತದೆ. ಗೆಳೆಯರ ಭಾವ ಶುದ್ಧ ಸ್ಫಟಿಕದಂತೆ ಮತ್ತು ಬೆಳದಿಂಗಳಿನಂತೆ ಎಂದು ಹೇಳಿರುವ ಮಾತು ಸ್ವಾರಸ್ಯಕರವಾಗಿದೆ.
೩. “ಕಂಡ ಕಂಡವರೇನು ಬಲ್ಲರಿದನು”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಗೆಳೆತನದ ಶುಚಿರುಚಿಯ ಮಹತ್ವವನ್ನು ವರ್ಣಿಸುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಗೆಳೆತನದ ಶುಚಿರುಚಿ ತಿಳಿಯಬೇಕಾದರೆ ಗೆಳೆತನ ಮಾಡಬೇಕು. ಆಗ ಮಾತ್ರ ಗೆಳೆತನದ ನಿಜವಾದ ಅನುಭವವಾಗುತ್ತದೆ ಎಂಬ ಮಾತು ಸ್ವಾರಸ್ಯಪೂರ್ಣವಾಗಿ ಮೂಡಿ ಬಂದಿದೆ.
೪. “ಬಾಳುವರು ಗಂಧದೊಲು ಜೀವ ತೆಯ್ದು!”
ಆಯ್ಕೆ : ಈ ವಾಕ್ಯವನ್ನು ಚೆನ್ನವೀರ ಕಣವಿ ಅವರು ರಚಿಸಿರುವ ‘ಆಕಾಶಬುಟ್ಟಿ’ ಎಂಬ ಕವನ ಸಂಕಲನದಿಂದ ಆಯ್ದ ‘ಗೆಳೆತನ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ತನಗೆ ಸುಖ ಬಂದಾಗ ಸಂತಸಪಟ್ಟು, ದುಃಖದಲ್ಲಿ ಸಹಭಾಗಿಯಾಗಿರುವ ಗೆಳೆಯ ದೊರೆತಾಗ ಜೀವನ ರಸಪಾಕಗುತ್ತದೆ ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಗಂಧವು ತೀಡಿದಷ್ಟೂ ಸುವಾಸನೆ ಬೀರುತ್ತದೆ, ಹಾಗೆಯೇ ಗೆಳೆತನವು ಅರ್ಥ ಮಾಡಿಕೊಂಡಷ್ಟು ಅದರ ಸುವಾಸನೆ ಎಲ್ಲೆಡೆ ಹರಡುತ್ತದೆ ಎಂದು ಹೇಳಿರುವುದು ಸ್ವಾರಸ್ಯಕರವಾಗಿದೆ .
ಊ. ಗುಂಪಿಗೆ ಸೇರದ ಪದವನ್ನು ಗುರುತಿಸಿ. (Write the odd one out)
೧. ಹೆಗಲುಗೊಟ್ಟು ಸಂತಸಬಟ್ಟು ಉಂಡವನು ತಿಳಿಗೊಳ
೨. ಲೋಕ ಅಮೃತ ಎದೆ ಸಾಹಸ
೩. ಭಾವಜೀವಿ ಕಾವ್ಯಾಕ್ಷಿ ದೀಪಧಾರಿ ಜೀವಧ್ವನಿ
೪. ಬಾನು ಆಕಾಶ ಭಾನು ಗಗನ