ಲಿಂಗಗಳಲ್ಲಿ ಮೂರು ವಿಧ
ಪುಲ್ಲಿಂಗ (Masculine Gender)
ಸ್ತ್ರೀಲಿಂಗ( Feminine Gender)
ನಪುಂಸಕ ಲಿಂಗ( Neuter Gender)
ಪುಲ್ಲಿಂಗ (Masculine Gender) : ಪುರುಷ ವಾಚಕ ಶಬ್ದಗಳನ್ನು ಪುಲ್ಲಿಂಗ ಎನ್ನುತ್ತೇವೆ. A gender that refers chiefly to males or to objects classified as male
ಉದಾಹರಣೆ: ಅಣ್ಣ, ಅಪ್ಪ, ಅರಸ, ಲೇಖಕ, ಪುತ್ರ
ಸ್ತ್ರೀಲಿಂಗ ( Feminine Gender): ಸ್ತ್ರೀವಾಚಕ ಶಬ್ದಗಳನ್ನು ಸ್ತ್ರೀಲಿಂಗ ಎನ್ನುತ್ತೇವೆ.Feminine is defined as the female gender ಉದಾಹರಣೆ: ಅಕ್ಕ, ಸಖಿ, ಹುಡುಗಿ, ಶಿಕ್ಷಕಿ, ಗೃಹಿಣಿ
ನಪುಂಸಕಲಿಂಗ (Neuter Gender): ಸ್ತ್ರೀವಾಚಕವೂ ಆಗಿರದ, ಪುರುಷ ವಾಚಕವು ಆಗಿರದ ಪದಗಳನ್ನು ನಪುಂಸಕ ಲಿಂಗ ಪದಗಳೆಂದು ಕರೆಯುತ್ತಾರೆ. Neuter means which is neither male nor female ಪಶುಪಕ್ಷಿಗಳ ಹೆಸರು , ಸಮುದಾಯವನ್ನು ಸೂಚಿಸುವ ಹೆಸರು ಕೂಡಾ ನಪುಂಸಕ ಲಿಂಗ ಪದಗಳಾಗಿವೆ. Name of community and name/ group of animals also come under this ಉದಾಹರಣೆ: ಎತ್ತು, ದಂಡು, ಕೂಸು, ಶಿಶು, ಮಗು