Grama Swaraja essay grade 10th. Gram means village and Swaraj means self-government. That is, in Gram Swaraj, the villages achieve self-government. A local administrative body where the villagers themselves take decisions for the development of their village, acting as self-governing centers.

Grama Swaraja is an ambitious dream of Mahatma Gandhiji. Gandhiji believed that Swarajya means that every village in the country should be self-reliant. In his view, to provide true independence to India, every village should be self-reliant, that is, independent in its work. Gandhiji believed that ‘the development of villages is the development of India’. Nalvadi Krishnaraja Wodeyar did this in the state of Mysore. Grama Swaraja grade X essay is about Village being independently working.

ಗ್ರಾಮ ಸ್ವರಾಜ್ಯ

ಪೀಠಿಕೆ:
ಗ್ರಾಮ ಎಂದರೆ ಹಳ್ಳಿ ಮತ್ತು ಸ್ವರಾಜ್ ಎಂದರೆ ಸ್ವಯಂ ಆಡಳಿತ. ಅಂದರೆ, ಗ್ರಾಮ ಸ್ವರಾಜ್‌ನಲ್ಲಿ, ಹಳ್ಳಿಗಳು ತಾವೇ ನಿಯಂತ್ರಣವನ್ನು ಸಾಧಿಸುವುದು ಎಂದರ್ಥ.

ಗ್ರಾಮಗಳ ಸ್ವಯಂ ಆಡಳಿತ ಕೇಂದ್ರಗಳಾಗಿ ಕಾರ್ಯನಿರ್ವಹಿಸಿ , ತಮ್ಮ ಗ್ರಾಮದ ಅಭಿವೃದ್ಧಿಗೆ ಬೇಕಾದ ಕಾರ್ಯವನ್ನು ಸ್ವತಃ ಗ್ರಾಮಸ್ಥರೇ ನಿರ್ಧಾರ ಕೈಗೊಳ್ಳುವ ಒಂದು ಸ್ಥಳೀಯ ಆಡಳಿತ ಸಂಸ್ಥೆ.

ಗ್ರಾಮ ಸ್ವರಾಜ್ಯ ಎಂಬುದು ಮಹಾತ್ಮ ಗಾಂಧೀಜಿ ಅವರ ಮಹತ್ವಾಕಾಂಕ್ಷೆಯ ಕನಸಾಗಿದೆ. ಗಾಂಧೀಜಿ ಅವರು ಸ್ವರಾಜ್ಯ ಅಂದರೆ ನಾಡಿನ ಪ್ರತಿಯೊಂದು ಗ್ರಾಮವೂ ಸ್ವಾವಲಂಬನೆಯಾಗಿರಬೇಕು ಎಂಬ ನಂಬಿಕೆ ಹೊಂದಿದ್ದರು. ಅವರ ದೃಷ್ಟಿಯಲ್ಲಿ, ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಒದಗಿಸಲು ಪ್ರತಿಯೊಂದು ಗ್ರಾಮವು ಸ್ವಾವಲಂಬನೆಯಾಗಿರಬೇಕು, ಅರ್ಥಾತ್ ತಾವು ನಡೆಸುವ ಕಾರ್ಯಗಳಲ್ಲಿ ಸ್ವತಂತ್ರವಾಗಿರಬೇಕು.‘ ಗ್ರಾಮಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ‘ ಎಂಬುದು ಗಾಂಧೀಜಿ ಅವರ ನಂಬಿಕೆಯಾಗಿತ್ತು. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ರವರು ಮೈಸೂರು ರಾಜ್ಯದಲ್ಲಿ ಮಾಡಿದರು.

ವಿಷಯ ನಿರೂಪಣೆ:

ಸ್ವಾವಲಂಬನೆ ಗ್ರಾಮ ಸ್ವರಾಜ್ಯದ ಪ್ರಮುಖ ಆಧಾರವಾಗಿದೆ. ಪ್ರತಿಯೊಂದು ಗ್ರಾಮವೂ ಆರ್ಥಿಕವಾಗಿ ಸ್ವತಂತ್ರವಾಗಿದ್ದು, ತಮ್ಮ ಆಹಾರ, ನೀರು, ವಿದ್ಯುತ್, ಆರೋಗ್ಯ ಸೇವೆ ಮತ್ತು ಶಿಕ್ಷಣದ ಅಗತ್ಯಗಳನ್ನು ತಾವೇ ಪೂರೈಸಲು ಪ್ರೇರೇಪಿತವಾಗಿರಬೇಕು ಎಂಬುದು ಗಾಂಧೀಜಿ ಅವರ ಧ್ಯೇಯವಾಗಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ರವರು ಗ್ರಾಮಪಂಚಾಯತಿಯ ಕಾರ್ಯವನ್ನು ಪ್ರಾರಂಭಿಸಿದರು. ಇವರು ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಹೀಗೆ ಹಲವು ಕ್ಷೇತ್ರಗಳನ್ನು ಸ್ವಯಂ ಆಡಳಿತ ಕ್ಷೇತ್ರಗಳನ್ನಾಗಿ ಮಾಡಿದರು.

ಪಂಚಾಯತ್ ವ್ಯವಸ್ಥೆ ಗ್ರಾಮ ಸ್ವರಾಜ್ಯದ ಮೂಲತತ್ತ್ವವಾಗಿದೆ. 1992ರಲ್ಲಿ 73ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾನೂನಾತ್ಮಕವಾಗಿ ರಚಿಸಲಾಗಿದ್ದು, ಗ್ರಾಮೀಣ ಆಡಳಿತವನ್ನು ಸ್ಥಳೀಯ ಜನತೆ ನಡೆಸಲು ಅವಕಾಶ ಕಲ್ಪಿಸಿದೆ. ಈ ಮೂಲಕ ಗ್ರಾಮಸ್ಥರು ತಮ್ಮ ಸಮುದಾಯದ ಅವಶ್ಯಕತೆಗಳಿಗೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ತಮ್ಮ ಅಭಿವೃದ್ಧಿಯ ಹೊಣೆ ಹೊತ್ತುಕೊಳ್ಳಲು ಸ್ವಾತಂತ್ರ್ಯ ಪಡೆಯುತ್ತಾರೆ.

ಉಪಸಂಹಾರ:

ಆದರೆ, ಗ್ರಾಮ ಸ್ವರಾಜ್ಯದ ಆವಿಷ್ಕಾರದಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ. ಸಾಮಾಜಿಕ ಅಸಮಾನತೆ, ಆರ್ಥಿಕ ಕೊರತೆ ಮತ್ತು ಜನರು ಪಟ್ಟಣಗಳತ್ತ ವಲಸೆ ಹೋಗುವ ಸಮಸ್ಯೆಗಳು ಗ್ರಾಮ ಸ್ವರಾಜ್ಯದ ಅಡಚಣೆಗಳಾಗಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡುತ್ತ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಮುಂದುವರಿಸಬೇಕಾಗಿದೆ.

Click here to download Gram Swaraja