Cottage Industry or Home industry are run at home. Carpenter, cobbler, goldsmith, blacksmith are examples of these. These occupations have existed since the dawn of civilization. Cottage industries not only produce other commodities but also contribute to the industrial growth of the state by preparing raw materials and useful materials for senior industries. For example thaudu etc. threshing of rice along with oil production.

ಗುಡಿ – ಗೃಹ ಕೈಗಾರಿಕೆ

ಮನೆಯಲ್ಲಿ ಮಾಡುವ ಅಥವಾ ನಡೆಸುವ ಕೈಗಾರಿಕೆಗಳನ್ನು ಗೃಹ ಕೈಗಾರಿಕೆ ಎನ್ನುತ್ತಾರೆ. ಬಡಗಿ, ಚಮ್ಮಾರ, ಅಕ್ಕಸಾಲಿಗ, ಕಮ್ಮಾರ ಮುಂತಾದವುಗಳು ಇದಕ್ಕೆ ಉದಾಹರಣೆ. ನಾಗರಿಕತೆ ಪ್ರಾರಂಭವಾದಾಗಿನಿಂದ ಈ ಉದ್ಯೋಗಗಳು ಅಸ್ತಿತ್ವದಲ್ಲಿದೆ. ಗೃಹ ಕೈಗಾರಿಕೆಗಳು ಇತರ ಸಹ ವಸ್ತುಗಳನ್ನು ಉತ್ಪಾದಿಸುವುದಲ್ಲದೆ ಹಿರಿಯ ಕೈಗಾರಿಕೋದ್ಯಮಕ್ಕೆ ಕಚ್ಚಾ ಮಾಲನ್ನು, ಉಪಯುಕ್ತ ವಸ್ತುಗಳನ್ನು ತೆಯಾರಿಸಿ ರಾಜ್ಯದ ಕೈಗಾರಿಕೋದ್ಯಮದ ಬೆಳೆವಣಿಗೆಗೆ ಸಹಕಾರಿಯಾಗಿದೆ. ಉದಾಹರಣೆಗೆ ಎಣ್ಣೆ ಉತ್ಪಾದನೆಯ ಜೊತೆಯಲ್ಲಿ ಹಿಂಡಿ ಅಥವಾ ಅಕ್ಕಿ ಕುಟ್ಟುವುದರಿಂದ ತೌಡು ಇತ್ಯಾದಿ.

ಗೃಹ ಕೈಗಾರಿಕೆಯನ್ನು ಹಳ್ಳಿ ಮತ್ತು ಗ್ರಾಮಗಳಲ್ಲಿ ಭಾರತದಾ ದ್ಯಂತ ನೋಡಬಹುದು. ಇದನ್ನು ಹೆಚ್ಚಾಗಿ ಮನೆಯ ಮುಖ್ಯಸ್ಥ ಅಥವಾ ಮನೆಯವರೆಲ್ಲಾ ಸೇರಿ ನಿಭಾಯಿಸುತ್ತಾರೆ. ಇದು ಅನೇಕ ಉದ್ಯೋಗಾವಕಾಶವನ್ನು ಸೃಷ್ಠಿಸಿದೆ. ಭಾರತದ ಅನೇಕ ಹಳ್ಳಿ ಮನೆಗಳಲ್ಲಿ ಇದು ಜೀವನಾಧಾರವಾಗಿದೆ. ಸಣ್ಣ ಪ್ರಮಾಣದ ಬಂಡವಾಳ, ಹತ್ತಿರದಲ್ಲೇ ಸ್ವಾಭಾವಿಕವಾಗಿ ಸಿಗುವ ಕಚ್ಚಾ ಪದಾರ್ಥಗಳು ಈ ಕೈಗಾರಿಕಾ ಬೆಳವಣಿಗೆಗೆ ಕಾರಣವಾಗಿದೆ.

ಭಾರತವು ವಿಭಿನ್ನ ಸಂಸ್ಕೃತಿ ಮತ್ತು ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿದೆ. ಸೀರೆ ನೇಯುವುದು,ಕಾರ ಪೆಟ್ ಮಾಡುವುದು, ಹಿತ್ತಾಳೆ ಪಾತ್ರಗಳು, ಚರ್ಮ ಕೈಗಾರಿಕೆಗಳು, ಬಿದಿರಿನ ಚಾಪೆ, ಮರದ ಆಟಿಕೆಗಳು, ಬಟ್ಟೆಗಳ ಮೇಲೆ ಕಸೂತಿ ಇವು ಪ್ರಪಂಚದಾದ್ಯಂತ ಖ್ಯಾತಿ ಪಡೆದಿರುವ ಕೈಗಾರಿಕೆಗಳಾಗಿದೆ.

ಗುಡಿ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳು :-

೧. ಬಂಡವಾಳದ ಕೊರತೆ.

೩. ನಿಪುಣ ಕಾರ್ಮಿಕರ ಕೊರತೆ

೩. ದೊಡ್ಡ ಕೈಗಾರಿಕೆಗಳಿಂದ ಸ್ಪರ್ಧೆ

೪. ತಾಂತ್ರಿಕತೆಯ ಕೊರತೆ

೫. ಕಚ್ಚಾವಸ್ತು ಮತ್ತು ಮೂಲ ಸೌಲಭ್ಯಗಳ ಕೊರತೆ

೬. ಸರಿಯಾದ ಮಾರ್ಗದರ್ಶನದ ಕೊರತೆ

ಸರ್ಕಾರವು ಗುಡಿಕೈಗಾರಿಕೆಯನ್ನು ಬೆಳೆಸಲು ಅವರಿಗೆ ಕಡಿಮೆ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ಮಾಡಿದೆ. ಅವರಲ್ಲಿ ಕೌಶಲ್ಯ ಬೆಳೆಸಲು ತರಬೇತಿ ಶಾಲೆಗಳನ್ನು ತೆರದಿದೆ. ಹೊಸ ತಂತ್ರಜ್ಞಾನದ ಮೂಲಕ ಜನರಲ್ಲಿ ಅರಿವು ಮಾಡಿಸುತ್ತಿದೆ.

ಸುಮನಾ ಶ್ರೀರಾಮ್

Click to download Gruha Kaigarike essay