Halagali bedaru is a chapter in X grade. In 1857, the British government passed the Disarming Act to control the possession of weapons. According to this law, all weapons had to be surrendered and would only be returned if the government granted a license. However, it was widely known that no Indian had ever received their weapons back.
Despite knowing the British could overpower them, the Halagali bedaru refused to give up their weapons. This led to a confrontation on November 29, 1857, between the villagers and the British army. The Bedas, though outnumbered, bravely fired back and used their homes as shelters.
Seeing this, Colonel Malcolm ordered his troops to set the Halagali Bedas’ houses on fire to force them out. Even as their homes burned, the Halagali Bedas chose to stay inside, preferring to die in the flames rather than surrender. Those who survived were later tried for treason and sentenced to death. This showed the fearless spirit and courage of the community.
ಹಲಗಲಿ ಬೇಡರು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು?
ಉ: ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿ, ಎಲ್ಲ ಭಾರತೀಯರ ಆಯುಧಗಳನ್ನು ಕಸಿದು ಕೊಳ್ಳುವ ಆದೇಶ ಹೊರಡಿಸಿತು.
೨. ಹಲಗಲಿಯ ನಾಲ್ವರು ಪ್ರಮುಖರು ಯಾರು?
ಉ: ಹನುಮಾ , ಬಾಲ , ಜಡಗ ಮತ್ತು ರಾಮ ಹಲಗಲಿಯ ನಾಲ್ವರು ಪ್ರಮುಖರು.
೩. ಹಲಗಲಿ ಗುರುತು ಉಳಿಯದಂತದು ಏಕೆ?
ಉ: ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.
೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
ಉ: ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
೫. ಹಲಗಲಿ ಗ್ರಾಮ ಎಲ್ಲಿದೆ?
ಉ: ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentence)
೧. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು?
ಉ: ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿ, ಎಲ್ಲ ಭಾರತೀಯರ ಆಯುಧಗಳನ್ನು ಕಸಿದು ಕೊಳ್ಳುವ ಆದೇಶ ಹೊರಡಿಸಿತು. ಇದನ್ನು ಹಲಗಲಿ ಬೇಡರು ವಿರೋಧಿಸಿದರು. ಅವರು ತಮ್ಮಲ್ಲಿರುವ ಆಯುಧಗಳು ಹೋದರೆ ತಮ್ಮ ಜೀವನವೇ ಹೋದ ಹಾಗೆ ಎಂದು ದಂಗೆ ಎದ್ದರು.
೨. ಹಲಗಲಿಗೆ ದಂಡು ಬರಲು ಕಾರಣವೇನು?
ಉ: ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿದ್ದನ್ನು ಹಲಗಲಿಯ ಬೇಡರು ವಿರೋಧಿಸಿದರು. ಈ ದಂಗೆಯನ್ನು ನಿಲ್ಲಿಸಲು ಬಂದ ಕಾರಖೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು.ಇದರಿಂದ ಕೋಪಗೊಂಡ ಕುಂಪಣಿ ಸರಕಾರ ಹಲಗಲಿಯ ಬೇಡರ ದಂಗೆ ನಿಲ್ಲಿಸಲು ದಂಡನ್ನು ಕಳಿಸಿದರು.
೩. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
ಉ: ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿದ್ದನ್ನು ಹಲಗಲಿಯ ಬೇಡರು ವಿರೋಧಿಸಿ ದಂಗೆಯೆದ್ದರು. ಅದನ್ನು ನಿಲ್ಲಿಸಲು ಬ್ರಿಟೀಷ್ ಸರ್ಕಾರದ ದಂಡು ಬಂದು ಎದುರಿಗೆ ಸಿಕ್ಕವರನ್ನೆಲ್ಲಾ ಗುಂಡು ಹೊಡೆದು ಸಾಯಿಸಿದರು. ರಕ್ತದ ಹೊಳೆ ಹರಿಯಿತು. ಹಲಗಲಿಗೆ ಬೆಂಕಿ ಇಟ್ಟು ಇಡೀ ಊರನ್ನೇ ಸುಟ್ಟು ಬೂದಿ ಮಾಡಿದರು.
೪. ಲಾವಣಿಗಳನ್ನು ಏಕೆ ವೀರ ಗೀತೆಗಳು ಎನ್ನಲಾಗಿದೆ?
ಉ: ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಇವು ವೀರ ಕಲಿಗಳ ವೀರಸಾಹಸ, ವೀರರ ಜೀವನದ ಘಟನೆಗಳ ಕಥನಾತ್ಮಕ ಕಾವ್ಯಗಳು. ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನಲಾಗಿದೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ. (Answer the following in eight – ten sentence)
೧. ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?
ಉ: ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿ, ಎಲ್ಲ ಭಾರತೀಯರ ಆಯುಧಗಳನ್ನು ಕಸಿದು ಕೊಳ್ಳುವ ಆದೇಶ ಹೊರಡಿಸಿತು. ಇದನ್ನು ಹಲಗಲಿ ಬೇಡರು ವಿರೋಧಿಸಿದರು. ಅವರು ತಮ್ಮಲ್ಲಿರುವ ಆಯುಧಗಳು ಹೋದರೆ ತಮ್ಮ ಜೀವನವೇ ಹೋದ ಹಾಗೆ ಎಂದು ದಂಗೆ ಎದ್ದರು. ಇವರಲ್ಲಿ ಹನುಮಾ , ಬಾಲ , ಜಡಗ ಮತ್ತು ರಾಮ ಹಲಗಲಿಯ ನಾಲ್ವರು ಪ್ರಮುಖರು. ಈ ದಂಗೆಯನ್ನು ನಿಲ್ಲಿಸಲು ಬಂದ ಕಾರಖೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು.
ಈ ದಂಗೆಯನ್ನು ನಿಲ್ಲಿಸಲು ಬ್ರಿಟೀಷ್ ಸರ್ಕಾರದ ದಂಡು ಬಂದು ಎದುರಿಗೆ ಸಿಕ್ಕವರನ್ನೆಲ್ಲಾ ಗುಂಡು ಹೊಡೆದು ಸಾಯಿಸಿದರು. ರಕ್ತದ ಹೊಳೆ ಹರಿಯಿತು. ಹಲಗಲಿಗೆ ಬೆಂಕಿ ಇಟ್ಟು ಇಡೀ ಊರನ್ನೇ ಸುಟ್ಟು ಬೂದಿ ಮಾಡಿದರು.
೨. ಹಲಗಲಿ ದಂಗೆಯ ಪರಿಣಾಮವೇನು?
ಉ: ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿ, ಎಲ್ಲ ಭಾರತೀಯರ ಆಯುಧಗಳನ್ನು ಕಸಿದು ಕೊಳ್ಳುವ ಆದೇಶ ಹೊರಡಿಸಿತು. ಇದನ್ನು ಹಲಗಲಿ ಬೇಡರು ವಿರೋಧಿಸಿದರು. ಅವರು ತಮ್ಮಲ್ಲಿರುವ ಆಯುಧಗಳು ಹೋದರೆ ತಮ್ಮ ಜೀವನವೇ ಹೋದ ಹಾಗೆ ಎಂದು ದಂಗೆ ಎದ್ದರು. ಈ ದಂಗೆಯನ್ನು ನಿಲ್ಲಿಸಲು ಬಂದ ಕಾರಖೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು. ಮನವೊಲಿಸಲು ಬಂದ ಸಾಹೇಬನನ್ನು ಜಡಗ ಗುಂಡು ಹೊಡೆದು ಸಾಯಿಸಿದನು. ಇದರಿಂದ ಸಿಟ್ಟಿಗೆದ್ದ ಕಾರಸಾಹೇಬ ಊರನ್ನು ಲೂಟಿ ಮಾಡಲು ಆದೇಶಿಸಿದನು.
ಬ್ರಿಟೀಷ್ ಸೈನಿಕರು ಸಿಡಿಲು ಹೊಡೆದ ಹಾಗೆ ಗುಂಡನ್ನು ಸುರಿಸಿದರು. ಬಾಲನು ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿದನು. ರಾಮನು ರಕ್ತದ ಕಾಲುವೆಯನ್ನು ಹರಿಸಿದನು. ಹೀಗೆ ಹನುಮಾ, ಬಾಲ, ಜಡಗ, ರಾಮ, ಭೀಮ ಹೋರಾಡಿ ವೀರ ಮರಣವನ್ನಪ್ಪಿದರು. ಬ್ರಿಟೀಷ್ರು ಹಲಗಲಿಗೆ ಬೆಂಕಿ ಇಟ್ಟು ಇಡೀ ಊರನ್ನೇ ಸುಟ್ಟು ಬೂದಿ ಮಾಡಿದರು.
ಬ್ರಿಟೀಷ್ ದಂಡು ಕೊಡಲಿ, ಕುಡಗೋಲು, ಕೊಡ, ಕಬ್ಬಿಣ, ಮೊಸರು ,ಬೆಣ್ಣೆ, ಹಾಲು, ಉಪ್ಪು ,ಎಣ್ಣೆ ,ಅರಿಸಿಣ, ಜೀರಿಗೆ, ಅಕ್ಕಿ, ಸಕ್ಕರೆ, ಬೆಲ್ಲ, ತಂಬಿಗೆ, ಮಂಗಳಸೂತ್ರ, ಬೀಸುವಕಲ್ಲು –ಹೀಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡು ಹೋದರು.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿರಿ. ( Explain the context)
೧. “ಎಲ್ಲಾ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ”
ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿ ಬೇಡರು’ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ:- ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿ, ಎಲ್ಲ ಭಾರತೀಯರ ಆಯುಧಗಳನ್ನು ಕಸಿದು ಕೊಳ್ಳುವ ಆದೇಶ ಹೊರಡಿಸಿದ ಸಂದರ್ಭದಲ್ಲಿ ಹೇಳಿದ ಮಾತು.
ಸ್ವಾರಸ್ಯ:- ಭಾರತೀಯರ ಮೇಲೆ ಕುಂಪಣಿ ಸರ್ಕಾರದ ದರ್ಪ ಈ ವಾಕ್ಯದಲ್ಲಿ ಸ್ವಾರಸ್ಯ ಪೂರ್ಣವಾಗಿ ವ್ಯಕ್ತಗೊಂಡಿದೆ.
೨. “ಜೀವ ಸತ್ತು ಹೋಗುವದು ಗೊತ್ತಾ”
ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿ ಬೇಡರು’ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿ, ಎಲ್ಲ ಭಾರತೀಯರ ಆಯುಧಗಳನ್ನು ಕಸಿದು ಕೊಳ್ಳುವ ಆದೇಶ ಹೊರಡಿಸಿತು. ಇದನ್ನು ವಿರೋಧಿಸಿ ಹನುಮಾ, ಬಾಲ, ಜಡಗ, ರಾಮ ಈ ಮೇಲಿನ ಮಾತನ್ನು ಹೇಳಿದರು.
ಸ್ವಾರಸ್ಯ: ಅವರು ತಮ್ಮಲ್ಲಿರುವ ಆಯುಧಗಳು ಹೋದರೆ ತಮ್ಮ ಜೀವನವೇ ಹೋದ ಹಾಗೆ ಎಂದು ಸ್ವಾರಸ್ಯ ಪೂರ್ಣವಾಗಿ ಹೇಳಿದ್ದಾರೆ.
೩. “ಹೊಡೆದರೂ ಗುಂಡ ಕರುಣೆ ಇಲ್ಲದಂಗ”
ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿ ಬೇಡರು’ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯನ್ನು ಹೊರಡಿಸಿದ್ದನ್ನು ಹಲಗಲಿಯ ಬೇಡರು ವಿರೋಧಿಸಿ ದಂಗೆಯೆದ್ದರು. ಅದನ್ನು ನಿಲ್ಲಿಸಲು ಬ್ರಿಟೀಷ್ ಸರ್ಕಾರದ ದಂಡು ಬಂದು ಎದುರಿಗೆ ಸಿಕ್ಕವರನ್ನೆಲ್ಲಾ ಕರುಣೆ ಇಲ್ಲದೇ ಗುಂಡು ಹೊಡೆದು ಸಾಯಿಸಿದರು ಎನ್ನುವಾಗ ಈ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಹಲಗಲಿಯ ಬೇಡರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯ ವಿರೋಧವನ್ನು ನಿಲ್ಲಿಸಲು ಬ್ರಿಟೀಷ್ ಸರ್ಕಾರ ತೋರಿಸಿದ ಅಮಾನವೀಯತೆ ಇಲ್ಲಿ ವ್ಯಕ್ತವಾಗಿದೆ.
೪. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು”
ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿ ಬೇಡರು’ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: ಬ್ರಿಟಿಷ್ರ ಸೈನಿಕರು ಹಲಗಲಿಯನ್ನು ಲೂಟಿಮಾಡಿ ಊರಿಗೆ ಬೆಂಕಿ ಇಟ್ಟು, ಸುಟ್ಟು ಬೂದಿ ಮಾಡಿರುವುದನ್ನು ಲಾವಣಿಕಾರರು ಈ ಮೇಲಿನ ಮಾತಲ್ಲಿ ವರ್ಣಿಸಿದ್ದಾರೆ.
ಸ್ವಾರಸ್ಯ: ಹಲಗಲಿಯ ಬೇಡರ ನಿಶ್ಯಸ್ತ್ರೀಕರಣ ಎಂಬ ಕಾಯ್ದೆಯ ವಿರೋಧವನ್ನು ನಿಲ್ಲಿಸಲು ಬ್ರಿಟೀಷ್ ಸರ್ಕಾರ ತೋರಿಸಿದ ಅಮಾನವೀಯತೆ ಲಾವಣಿಕಾರರು ಹೀಗೆ ವ್ಯಕ್ತಪಡಿಸಿದ್ದಾರೆ.
ಉ) ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ಲಾವಣಿ.
೨. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ ಬಾಗಲಕೋಟೆ.
೩. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ನಿಶ್ಶಸ್ತ್ರೀಕರಣ.
೪. ಲಾವಣಿಕಾರ ಅಂಕಿತಗೊಳಿಸಿರುವ ದೈವ ಕಲ್ಮೇಶ.
೫. ʼವಿಲಾತಿʼ ಪದದ ಸರಿಯಾದ ರೂಪ ವಿಲಾಯಿತಿ.
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
ಮುಂಗೈ = ಕೈಯ + ಮುಂದು = ಅಂಶಿಸಮಾಸ
ನಡುರಾತ್ರಿ = ರಾತ್ರಿಯ + ನಡು = ಅ೦ಶಿಸಮಾಸ
ಹನುಮಭೀಮರಾಮ = ಹನುಮನೂ+ಭೀಮನೂ +ರಾಮನೂ = ದ್ವ೦ದ್ವಸಮಾಸ
ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ
೨. ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.
ಹೀಂಗ = ಹೀಗೆ , ಮ್ಯಾಗ = ಮೇಲೆ , ಕಳುವ್ಯಾರೆ = ಕಳುಹಿಸಿದ್ದಾರೆ, ಇಲ್ಲದಂಗ = ಇಲ್ಲದಹಾಗೆ, ಇಸವಾಸ = ವಿಶ್ವಾಸ, ಸಕ್ಕಾರಿ = ಸಕ್ಕರೆ
೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.
೧. “ಒಳಗಿನ ಮಂದಿ ಗುಂಡು ಹೊಡೆದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ”
ಅಲ೦ಕಾರ: ಉಪಮಾಲಂಕಾರ
ಉಪಮೇಯ: ಒಳಗಿನ ಮಂದಿ ಗುಂಡು ಹೊಡೆಯುವುದು
ಉಪಮಾನ: ಮುಂಗಾರಿನ ಸಿಡಿಲು
ಉಪಮಾ ವಾಚಕ: ಹಾಂಗ
ಸಮಾನ ಧರ್ಮ: ಸಿಡಿಯುವುದು
ಸಮನ್ವಯ: ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು
ಹೊಡೆಯುವುದನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಪರಸ್ಪರ ಹೋಲಿಸಿ ವರ್ಣಿಸಲಾಗಿದೆ.
೨. “ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾವ”
ಅಲಂಕಾರ: ಉಪಮಾಲಂಕಾರ
ಉಪಮೇಯ: ಗುಂಡು ಸುರಿಯುವುದು
ಉಪಮಾನ: ಸಿಡಿಲು ಸಿಡಿಯುವುದು
ಉಪಮಾ ವಾಚಕ: ಹಾಂಗ
ಸಮಾನ ಧರ್ಮ: ಸಿಡಿಯುವುದು
ಸಮನ್ವಯ:ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಪರಸ್ಪರ ಹೋಲಿಸಿವರ್ಣಿಸಲಾಗಿದೆ.
೪. ಸ್ವಂತ ವಾಕ್ಯದಲ್ಲಿ ಬಳಸಿ.
ಒಳಗಿಂದೊಳಗೆ = ಸೈನಿಕರು ಒಳಗಿಂದೊಳಗೆ ಅವರ ರಾಜನ ಬಗ್ಗೆ ಮಸಲತ್ತು ಮಾಡಿದರು.
ಸುದ್ದಿ = ನಾನು ಪ್ರತಿದಿನ ವೃತ್ತ ಪತ್ರಿಕೆಯಲ್ಲಿರುವ ಸುದ್ದಿಯನ್ನು ಓದುತ್ತೇನೆ.
ಮಂದಿ = ಊರಿನ ಮಂದಿ ಬದಲಾವಣೆಗೆ ತಯಾರಾದರು.
ಕಸರತ್ತು = ಬೆಳಿಗ್ಗೆ ಕಸರತ್ತು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
೫. ದೇಶ ಅನ್ಯ ದೇಶ ಪದಗಳನ್ನು ಆರಿಸಿ ಬರೆಯಿರಿ.
ದೇಶಿಯ ಪದಗಳು = ಹೊತ್ತು ,ಬಂಟರು , ಮುಂಗೈ , ಮುಂಗಾರು.
ಅನ್ಯದೇಶಿಯ ಪದಗಳು = ಹತಾರ , ಮಸಲತ್ತ , ಹುಕುಮ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ.
Click here to download halagali bedaru exercises
One Response