Haraleele Kannada lesson 9th grade is written by Harihara. Harihara’s nickname is Veerupaksha. Haraleele means magic of lord Shiva.
Harihara, who is famous as ‘Ragale’, lived around 1200 AD. His birthplace was Hampe. His idol was Virupaksha of Hampe. He is a renowned poet who revived the Ragale genre of poetry in Kannada literature. Harihara composed ‘Pampashataka’, ‘Rakshasataka’ and ‘Mudigey Ashtaka’ in circular meter. Haraleele Kannada 9th grade lesson is from his famous book Nambiyannana ragale.
‘ ರಗಳೆ ‘ ಎಂದೇ ಪ್ರಸಿದ್ಧನಾಗಿರುವ ಹರಿಹರನ ಕಾಲ ಸುಮಾರು ಕ್ರಿಸ್ತ ಶಕ 1200. ಈತನ ಸ್ಥಳ ಹಂಪೆ . ಹಂಪೆಯ ವಿರೂಪಾಕ್ಷ ಈತನ ಆರಾಧ್ಯದೈವ , ಕನ್ನಡ ಸಾಹಿತ್ಯದಲ್ಲಿ ರಗಳೆ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ . ಹರಿಹರನು ‘ ಪಂಪಾಶತಕ ‘ , ‘ ರಕ್ಷಾಶತಕ ‘ ಮತ್ತು ‘ ಮುಡಿಗೆಯ ಅಷ್ಟಕ’ಗಳನ್ನು ವೃತ್ತ ಛಂದಸ್ಸಿನಲ್ಲಿ ರಚಿಸಿದ್ದಾನೆ.
ಪಾಠದ ಸಾರಾಂಶ
ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನೆಯರು ಹೂ ಬಿಡಿಸುತ್ತಿದ್ದರು. ರುದ್ರಗಣದ ಪುಷ್ಪದತ್ತ ಈ ದೃಶ್ಯವನ್ನು ಗಮನಿಸಿ, ಕನ್ನೆಯರನ್ನು ಅನುರಾಗಭಾವದಿಂದ ನೋಡುವನು. ಪುಷ್ಪದತ್ತನನ್ನು ನೋಡಿದ ಕನ್ನೆಯರೂ ಅವನತ್ತ ಅದೇ ಭಾವದಿಂದ ನೋಡುತ್ತಿರುವುದನ್ನು ಶಿವನು ಗಮನಿಸಿ ಅಸಮಾಧಾನಗೊಂಡನು. ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆ ಹೊಂದುವುದು ಅಪರಾಧವೆಂದು ಪರಿಗಣಿಸಿ, ಈ ಮೂವರಿಗೂ ಭೂಲೋಕದಲ್ಲಿ ಮನುಜರಾಗಿ ಹುಟ್ಟುವಂತೆ ಶಾಪ ನೀಡಿದನು.
ನೊಂದ ಪುಷ್ಪದತ್ತ, “ನಿಮ್ಮ ಅನುಗ್ರಹವಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ,” ಎಂದು ಪ್ರಾರ್ಥಿಸಿದನು. ಶಿವನು, “ನೀನು ಭೂಲೋಕದಲ್ಲಿ ಮನುಜನಾಗಿ ಹುಟ್ಟು. ಆದಷ್ಟು ಬೇಗ ನಾನು ನಿನ್ನನ್ನು ಕೈಲಾಸಕ್ಕೆ ಕರೆತರುತ್ತೇನೆ,” ಎಂದು ಆಶ್ವಾಸನೆ ನೀಡಿದನು.
ಇತ್ತ ಸೌಂದರ್ಯ ಪೆರುಮಾಳನು ಮದುವೆಗಾಗಿ ಅಲಂಕೃತನಾಗಿ ಸಂಭ್ರಮದಿಂದ ಮಣಮಂದ ಮತ್ತು ಊರಿನತ್ತ ಹೊರಟಾಗ, ಒಬ್ಬನು ಬಂದು, “ಮಹಾನ್, ಲಗ್ನ ಮುಹೂರ್ತದ ತನಕ ಈ ವನದಲ್ಲಿ ವಿಶ್ರಾಂತಿ ಮಾಡಿರಿ,” ಎಂದನು. ನಂಬಿಯಣ್ಣನು ಆ ವನದಲ್ಲಿ ಕಾಲ ಕಳೆಯುತ್ತಿದ್ದನು. ಮದುವೆಯ ಸಂದರ್ಭದಲ್ಲಿ, ಸೌಂದರ್ಯ ಪೆರುಮಾಳನು ಭೂಮಿಯ ತಾಣವನ್ನು ವಿವಾಹ ಮಂಟಪವಾಗಿ ಸ್ವೀಕರಿಸಿ ಸಿಂಹಾಸನದಲ್ಲಿ ಕುಳಿತನು.
ಇತ್ತ ಕೈಲಾಸದಲ್ಲಿ ವಿರೂಪಾಕ್ಷನು ಗಿರಿಜೆಯನ್ನು ಕುರಿತು, “ನಮ್ಮ ಮಗ ಪುಷ್ಪದತ್ತನು ಭೂಮಿಯಲ್ಲಿ ನಂಬಿ ಎಂದು ಹುಟ್ಟಿ ಸಂಸಾರದಲ್ಲಿ ತೊಡಗಿರುವನು. ಚೋಳದೇಶದಲ್ಲಿ ರುದ್ರಕನ್ನೆಯರು ಪರವೆ ಮತ್ತು ಸಂಕಿಲೆ ಎಂಬ ಹೆಸರಿನಲ್ಲಿ ಹುಟ್ಟಿದ್ದಾರೆ. ಅವರೊಂದಿಗೆ ನಂಬಿಯನ್ನು ಸೇರಿಸಿ, ಅವನನ್ನು ಕೈಲಾಸಕ್ಕೆ ಮರಳಿ ತರುತ್ತೇನೆ,” ಎಂದನು. ಶಿವನು ವೃದ್ಧನ ವೇಷ ಧರಿಸಿ ಮದುವೆ ಮಂಟಪಕ್ಕೆ ಪ್ರವೇಶಿಸಿ ಒಳ್ಳೆಯ ಉದ್ದೇಶದಿಂದ ಮದುವೆಯನ್ನು ಹಾಳು ಮಾಡಲು ಗೊಂದಲವನ್ನು ಸೃಷ್ಟಿಸುತ್ತಾನೆ.
Haraleele lesson Summary
Two Rudrakannas were arranging flowers in the garden of Kailash. Pushpadatta of the Rudrakanna family, observing this scene, looked at the girls with affection. Shiva noticed that the girls, seeing Pushpadatta, also looked at him with the same emotion and became displeased. Considering it a crime for the Ganas to have such a perverted feeling in Kailash, he cursed all three of them to be born as humans on earth.
The distressed Pushpadatta prayed, “I cannot live without your grace. Please forgive me.” Shiva assured him, “You take birth as a human on earth. I will bring you to Kailash as soon as possible.”
Meanwhile, when Soundarya Perumal, adorned for the wedding, was leaving for Manamanda and the village with great joy, someone came and said, “Great one, rest in this forest until the time of the marriage.” Nambiyanna was spending time in that forest. During the marriage, Soundarya Perumal accepted the earth as a wedding hall and sat on the throne.
Meanwhile, in Kailash, Virupaksha said to Girija, “Our son Pushpadatta was born on earth as Nambi and is engaged in samsara. Rudrakannas have been born in Chola country under the names Parave and Sankile. I will take Nambi with them and bring him back to Kailash.” Lord Shiva disguises himself as an old man and enters the wedding hall and creates distractions to spoil the wedding with the good intention.
ಹರಲೀಲೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು?
ಉ: ನಂಬಿಯಣ್ಣನ ಪೂರ್ವಜನ್ಮದ ಹೆಸರು ʼಪುಷ್ಪದತ್ತ ʼ
೨. ಹರಲೀಲೆ ಪಾಠದ ಮೂಲ ಕೃತಿ ಯಾವುದು?
ಉ: ಹರಲೀಲೆ ಪಾಠದ ಮೂಲ ಕೃತಿ ʼ ನಂಬಿಯಣ್ಣನ ರಗಳೆ ʼ
೩. ಹರಲೀಲೆ ಪಾಠದ ಕವಿಯ ಹೆಸರೇನು?
ಉ:ಹರಲೀಲೆ ಪಾಠದ ಕವಿಯ ಹೆಸರು ಹರಿಹರ.
೪. ಗಿರಿಜೆಯು ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು?
ಉ: ಗಿರಿಜೆಯು ಊರಲ್ಲಿರುವ ದೇವಾಲಯದಲ್ಲಿ ಇರಬೇಕೆಂದು ಶಿವನು ತಿಳಿಸಿದನು.
೫. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ.
ಉ: ಗಿರಿಜಾಕಲ್ಯಾಣ , ಪಂಪಾಶತಕ , ರಕ್ಷಾಶತಕ ಹರಿಹರ ಅವರು ಬರೆದ ಕೃತಿಗಳು.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in 2 – 3 sentences)
೧. ವಿರೂಪಾಕ್ಷನು ಗಿರಿಜೆಗೆ ಏನೆಂದು ಹೇಳಿದನು ?
ಉ : ವಿರೂಪಾಕ್ಷನು ಗಿರಿಜೆಗೆ “ ದೇವಿ, ಕೇಳು ನಮ್ಮ ಮತ್ರನಾದ ಪುಷ್ಪದತ್ತನು ಭೂಲೋಕದಲ್ಲಿ ನಂಬಿಯಣ್ಣನಾಗಿ ಜನಿಸಿದ್ದಾನೆ. ಇಲ್ಲಿದ್ದ ರುದಕನ್ನಿಕೆಯರು ಚೋಳದೇಶದ ತಿರವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರವೆ ಮತ್ತು ಸಂಕಿಲಿಯರಾಗಿ ಜನಿಸಿದ್ದಾರೆ. ಈಗ ನಂಬಿಯಣ್ಣನು, ಪರವೆ ಮತ್ತು ಸಂಕಿಲಿಯರ ಜೊತೆ ಮದುವೆಯಾಗುತ್ತಿದ್ದಾನೆ. ಆತನಿಗೆ ನೀಡಿದ ಅಭಯದಂತೆ ನಾನು ಭೂಲೋಕಕ್ಕೆ ಹೋಗಿ ಅವರನ್ನು ಕರೆದುಕೊಂಡು ಬರುತ್ತೇನೆ ” ಎಂದು ಪರಮೇಶ್ವರನು ಗಿರಿಜೆಗೆ ಹೇಳಿದನು .
೨. ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ.
ಉ: ಚೋಳದೇಶದಲ್ಲಿದ್ದ ಮೂರು ಗ್ರಾಮಗಳೆಂದರೆ ಮಣಮಂದ ಪುತ್ತೂರು, ತಿರುವಾರೂರು ಮತ್ತು ತಿರುವತ್ತಿಯೂರು.
೩. ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ.
ಉ: ವೃದ್ಧಮಾಹೇಶ್ವರನು ಪುಣ್ಯವೇ ಹಣ್ಣಾದಂತೆ ಒಮ್ಮೊಮ್ಮೆ ಕೆಮ್ಮುತ್ತ ಗೊರ್ ಗೊರ್ ಎಂದು ಶಬ್ದ ಮಾಡುತ್ತಿದ್ದನು. ತೊದಲು ನುಡಿಗಳಿಂದ “ನಮಃ ಶಿವಾಯ ನಮಃ ಶಿವಾಯ” ಎನ್ನುತ್ತಿದ್ದನು.
೪. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು?
ಉ: ಕೆಳಗೆ ಬಿದ್ದ ವೃದ್ಧನನ್ನು ನೋಡಿ ಅಲ್ಲಿದ್ದ ಜನರೆಲ್ಲರೂ ಕೋಪದಿಂದ “ಈ ವೃದ್ಧ ಬ್ರಾಹ್ಮಣನನ್ನು, ಮುಪ್ಪಿನ ಮೂರ್ಖನನ್ನು, ಬಡ ಗೋವನ್ನು, ಬ್ರಾಹ್ಮಣನನ್ನು ಕೊಂದ ಬ್ರಹ್ಮಹತ್ಯಾದೋಷಿಯನ್ನು ಮದುವೆ ಮಂಟಪದೊಳಗೆ ಬಿಟ್ಟವರು ಯಾರು? ಒಳಗೆ ಕರೆ ತಂದವರು ಯಾರು? ಇನ್ನೂ ಈ ಮದುವೆ ನಡೆಯದು. ಒಂದು ಅಪ ಶಕುನ” ಎಂದು ನೆರೆದಿದ್ದ ಜನ ಮಾತನಾಡಿಕೊಂಡರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ. (Answer the following in 4 – 5 sentences)
೧. ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು?
ಉ : ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು. ಇದನ್ನು ರುದ್ರಗಣದ ಸದಸ್ಯರಲ್ಲೊಬ್ಬನಾದ ಪುಷ್ಪದತ್ತ ಗಮನಿಸಿ ಅವರನ್ನು ಅನುರಾಗದಿಂದ ನೋಡಿದನು.ಪುಷ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು. ಪುಷ್ಪದತ್ತನು ಬೇಸರದಿಂದ “ನಿಮ್ಮನ್ನು ಬಿಟ್ಟಿರಲಾರೆ, ದಯವಿಟ್ಟು ನನ್ನನ್ನು ಮನ್ನಿಸಿ” ಎಂದು ಹೇಳಿದನು. ಈ ಶಾಪದಿಂದ ಪುಷ್ಪದತ್ತನು ನರಲೋಕದಲ್ಲಿ ನಂಬಿಯಣ್ಣನಾಗಿ, ರುದ್ರ ಕನ್ನಿಕೆಯರಿಬ್ಬರೂ ಚೋಳದೇಶದ ತಿರುವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರವೆ ಮತ್ತು ಸಂಕಿಲೆ ಎಂಬ ಹೆಸರಿನಿಂದ ಹುಟ್ಟಿದರು. ಅವರು ಭೂಲೋಕದಲ್ಲಿ ಮದುವೆಯಾಗುತ್ತಿದ್ದರು. ಅವರನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಶಿವನು ವೃದ್ಧಮಾಹೇಶ್ವರ ವೇಷಧರಿಸಿದನು.
೨. ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ ?
ಉ: ವೃದ್ಧಮಾಹೇಶ್ವರನು ತಲೆಯಿಂದ ಪಾದದವರೆಗೂ ವಿಭೂತಿ ಲೇಪಿಸಿದಕೊಂಡಿದ್ದನು. ನರೆತ ತಲೆ, ಸುಕ್ಕುಗಟ್ಟಿದ ದೇಹ ಹೊಂದಿದ್ದನು. ಆತನ ಜಟೆಯಲ್ಲಿದ ಚಂದ್ರಕಳೆಯೇ ಕೊಡೆಯಾಯಿತು. ತ್ರಿಶೂಲ ಕೊಡೆಯ ಹಿಡಿಕೆಯಾಯಿತು. ಹಿಡಿದಿದ್ದ ದಂಡ ಊರುಗೋಲಾಯಿತು. ಸರ್ಪವು ಪ್ರಮಾಣವಚನವಾಯಿತು. ಬ್ರಹ್ಮನ ಶಿರವೇ ಕಮಂಡಲವಾಯಿತು. ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು. ಶಿವನು ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರರು ಪಾದರಕ್ಷೆಗಳಾಗಿ , ಕೊರಳಿನಲ್ಲಿ ಕಟ್ಟಿಕೊಂಡಿರುವ ಶಿರೋಮಾಲೆ ಜಪಮಾಲೆಯಾಗಿ ಮಹಾವೃದ್ಧನಾಗಿ ರೂಪ ಧರಿಸಿದನು ಎಂದು ಕವಿ ವೃದ್ಧಮಾಹೇಶ್ವರನನ್ನು ವರ್ಣಿಸಿದ್ದಾರೆ .
೩. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು ?
ಉ: ವೃದ್ಧ ಮಾಹೇಶ್ವರನು ಮದುವೆ ಮಂಟಪದೊಳಗೆ ಬರಲು ಮೆಲ್ಲಮೆಲ್ಲನೆ ನಡೆಯುತ್ತಾ, ಕೆಮ್ಮುತ್ತ ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದು ಮನಸ್ಸಿನಲ್ಲಿ ನಗುತ್ತಾ, ವಿವಾಹ ಮಂಟಪದ ಬಳಿ ಸಾಲಾಗಿ ಜೋಡಿಸಿದ್ದ ತುಪ್ಪದ ಕೊಡಗಳನ್ನು ಉರುಳಿಸಿದನು. ತಾನೂ ಬಿದ್ದು, ತುಪ್ಪವೂ ಎಲ್ಲರ ಮುಖಕ್ಕೆ, ಕಣ್ಣುಗಳಿಗೆ, ಮೈಯ ಮೇಲೆ ಸಿಡಿಯುವಂತೆ ಮಾಡಿದನು. ಮದುವೆ ಮಂಟಪದ ಬಳಿ ಸೇರಿದ್ದ ಜನರೆಲ್ಲಾ ಈ ವೃದ್ಧ ಮಾಹೇಶ್ವರನ್ನು ಹಿಡಿದು ನಿಲ್ಲಸಿದರು. ಒಂದೆರಡು ಹೆಜ್ಜೆ ಇಟ್ಟು ತಕ್ಷಣವೇ ಘಳಿಗೆ ಬಟ್ಟಲ ಮೇಲೆಬಿದ್ದು ಒಡೆದು ಹಾಕಿದನು. ಕಳಶ ಒಡೆದು, ಅಕ್ಕಿಯೆಲ್ಲ ಚೆಲ್ಲಿಹೋಯಿತು. ಜೋಯಿಸರು ಚದುರಿ ಓಡಿಹೋದರು. ಎಲ್ಲರೂ ಇದನ್ನು ಅಪಶಕುನ ಎಂದು ಭಾವಿಸುವಂತೆ ಮಾಡಿದನು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ ಸಕಲಸುಖಮಂ ಪೂಜೆಯಾಗಿ ಕೈಕೊಂಡುಬರ್ಪೆನ್ ”
ಆಯ್ಕೆ : ಈ ವಾಕ್ಯವನ್ನು ಹರಿಹರ ಕವಿಯ ʼನಂಬಿಯಣ್ಣನ ರಗಳೆʼ ಕೃತಿಯಿಂದ ಆಯ್ದ ʼಹರಲೀಲೆʼ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕೈಲಾಸಲದಲ್ಲಿ ಶಿವನು ಈ ಮಾತನ್ನು ಗಿರಿಜೆಗೆ ಹೇಳುತ್ತಾನೆ. ಶಿವನ ಶಾಪದಿಂದ ಪುಷ್ಪದತ್ತನು ಭೂಲೋಕದಲ್ಲಿ ನಂಬಿಯಣ್ಣನಾಗಿ, ರುದ್ರಕನ್ನಿಕೆಯರು ಪರವೆ – ಸಂಕಿಲೆಯರಾಗಿ ಹುಟ್ಟಿ ಈಗ ವಿವಾಹವಾಗುತ್ತಿದ್ದರು. ಮಾತು ಕೊಟ್ಟ ಹಾಗೆ ನಂಬಿಯಣ್ಣನಿಂದ ಸಕಲ ಸುಖವನ್ನು ಸೇವೆಯಾಗಿ ಪಡೆದು ಕೈಲಾಸಕ್ಕೆ ಕರೆತರುವೆನೆಂದು ಹೇಳುತ್ತಾನೆ.
ಸ್ವಾರಸ್ಯ : ಶಿವನು ಪುಷ್ಪದತ್ತನಿಗೆ ಕೈಲಾಸಕ್ಕೆ ಕರೆ ತರುತ್ತೇನೆ ಎಂದು ಆಶ್ವಾಸನೆ ನೀಡಿರುತ್ತಾನೆ. ಅದರಂತೆ ಶಿವನು ಭೂಲೋಕಕ್ಕೆ ಹೋಗಿ ಸಕಲಸುಖವನ್ನು ಪೂಜೆಯಾಗಿ ಪಡೆದು ಬರುತ್ತೇನೆ ಎಂಬ ಮಾತು ಸ್ವಾರಸ್ಯವಾಗಿದೆ.
೨. “ ನೀನತ್ಯಂತ ಕರುಣಿ ”
ಆಯ್ಕೆ : ಈ ವಾಕ್ಯವನ್ನು ಹರಿಹರ ಕವಿಯ ʼನಂಬಿಯಣ್ಣನ ರಗಳೆʼ ಕೃತಿಯಿಂದ ಆಯ್ದ ʼಹರಲೀಲೆʼ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಶಿವನು ಭೂಲೋಕಕ್ಕೆ ಹೋಗಿ, ನಂಬಿಯಣ್ಣನನ್ನು ಮದುವೆ ಸಂಭ್ರಮದ ಮಂಟಪದಿಂದ ಮತ್ತೆ ಕೈಲಾಸಕ್ಕೆ ಕರೆತರುವೇನು ಎಂದಾಗ ಗಿರಿಜೆಯು ತಾನು ಬರುವುದಾಗಿ ಹೇಳುತ್ತಾಳೆ. ಆಗ ಶಿವನು ನೀನು ಕರುಣಾಮಯಿ, ತಾನು ಅಲ್ಲಿ ನಿಷ್ಠುರವಾದ ಕೆಲಸವನ್ನು ಮಾಡಬೇಕಾಗಿದೆ ನೀನು ಬರುವುದು ಬೇಡ ಎಂಬ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ. ಸ್ವಾರಸ್ಯ : ಶಿವನು ಭೂಲೋಕಕ್ಕೆ ಬಂದು ನಿಷ್ಠುರವಾದ ಕೆಲಸಗಳನ್ನು ಮಾಡಬೇಕಾಗಿದೆ. ಇದನ್ನು ಕರುಣಾಮಯಿಯಾದ ಗಿರಿಜೆಯು ನೋಡಿದರೆ ತನ್ನ ಕೆಲಸಗಳಿಗೆ ಅಡ್ಡಿಪಡಿಸಬಹುದು ಎಂಬುದು ಸ್ವಾರಸ್ಯಕರವಾಗಿದೆ .
೩. “ ಪುಣ್ಯಂ ಪಣ್ಣಾದಂತೆ ”
ಆಯ್ಕೆ : ಈ ವಾಕ್ಯವನ್ನು ಹರಿಹರ ಕವಿಯ ʼನಂಬಿಯಣ್ಣನ ರಗಳೆʼ ಕೃತಿಯಿಂದ ಆಯ್ದ ʼಹರಲೀಲೆʼ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಕವಿ ಹರಿಹರ ಶಿವನು ವೃದ್ಧಮಾಹೇಶ್ವರನಾಗಿ ವೇಷವನ್ನು ಮರೆಸಿಕೊಂಡು ಭೂಲೋಕಕ್ಕೆ ಹೊರಟ ಸಂದರ್ಭದಲ್ಲಿ ಹೇಳಿದ್ದಾರೆ. ಬಿಳಿಕೂದಲು ಸುಕ್ಕು ಗಟ್ಟಿದ ಚರ್ಮದಿಂದ ಪುಣ್ಯವೆಲ್ಲಾ ಹಣ್ಣಾದಂತೆ ಶಿವನು ಕಂಡು ಬರುತ್ತಾನೆಂದು ಕವಿ ಹರಿಹರ ವರ್ಣಿಸಿದ್ದಾರೆ .
ಸ್ವಾರಸ್ಯ : ಶಿವನು ನೂರು ವರ್ಷದ ಮುದುಕನ ವೇಷ ಧರಿಸಿರುವುದು ಪುಣ್ಯವೇ ಹಣ್ಣಾದಂತೆ ಎಂದು ಕವಿ ವರ್ಣಿಸಿರುವ ಸಾಲು ಸ್ವಾರಸ್ಯಕರವಾಗಿದೆ .
೪. “ ಈ ವೃದ್ಧಂ ಕಿರುಕುಳನಲ್ಲ “
ಆಯ್ಕೆ : ಈ ವಾಕ್ಯವನ್ನು ಹರಿಹರ ಕವಿಯ ʼನಂಬಿಯಣ್ಣನ ರಗಳೆʼ ಕೃತಿಯಿಂದ ಆಯ್ದ ʼಹರಲೀಲೆʼ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಶಿವನು ಮದುವೆ ಮಂಟಪದಲ್ಲಿ ಮಾಡಿದ ಅವಾಂತರಗಳನ್ನು ನೋಡಿದ ಜನರು ಶಿವನನ್ನು ಕರೆದುಕೊಂಡು ಬಂದು ಮದುವೆ ಚಪ್ಪರದ ಹೊರಗೆ ಬಿಟ್ಟರೆ, ಮದುವೆ ಮಂಟಪದ ಬಳಿ ಹೋಗುವ ಮೊದಲೇ ಶಿವನು ಮಂಟಪ ತೋರಣಗಳನ್ನು ಕೀಳುವುದನ್ನು ನೋಡಿದ ಜನರು ಆಶ್ಚರ್ಯದಿಂದ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಶಿವನು ಮಾಡಿದ ಪವಾಡವನ್ನು ಅರ್ಥಮಾಡಿಕೊಂಡ ಜನರು ಈ ವೃದ್ಧ ನಮಗೆ ತೊಂದರೆ ಕೊಡಲು ಬಂದಿಲ್ಲ, ಇವನು ಪವಾಡ ಪುರುಷನಿರಬೇಕು ಎಂದು ಯೋಚನೆ ಮಾಡುವದು ಸ್ವಾರಸ್ಯಕರವಾಗಿದೆ .
ಉ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. (Fill in the blanks)
೧ . ಹರಿಹರನ ಕಾಲ 1200
(1160, 1360, 1200, 1460 )
೨. ವೃದ್ಧಮಾಹೇಶ್ವರ ತುಪ್ಪದ ಕೊಡದ ಮೇಲೆ ಬಿದ್ದನು.
( ಎಣ್ಣೆಯ, ಹಾಲಿನ, ತುಪ್ಪದ, ಮಜ್ಜಿಗೆ)
೩. ಹರಲೀಲೆ ಪಾಠವನ್ನು ನಂಬಿಯಣ್ಣನ ರಗಳೆಯಿಂದ ಆಯ್ದುಕೊಳ್ಳಲಾಗಿದೆ.
( ಬಸವರಾಜ ದೇವರ ರಗಳೆ, ನಂಬಿಯಣ್ಣನ ರಗಳೆ, ಗುಂಡಯ್ಯನರಗಳೆ, ಮಹಾದೇವಿಯಕ್ಕನ ರಗಳೆ )
೪. ವೃದ್ಧಮಾಹೇಶ್ವರನು ಕೈಲಾಸದಿಂದ ಮಣಮಂದಪುತ್ತೂರುಗೆ ಬಂದನು.
( ಮಣಮಂದಪುತ್ತೂರು, ತಿರುವಾರೂರು, ತಿರುವತ್ತಿಯೂರ್, ಕೈಲಾಸಪುರ)
ಊ) ಹೊಂದಿಸಿ ಬರೆಯಿರಿ. (Match the following)
ಅ | ಆ | |
೧.ಪುಷ್ಪದತ್ತ | ಹಂಪಿ | ನಂಬಿಯಣ್ಣ |
೨.ರುದ್ರಕನ್ನಿಕೆಯರು | ಬಾಗಿಲು | ಪರವೆ – ಸಂಕಿಲೆ |
೩. ಚೋಳದೇಶ | ನಂಬಿಯಣ್ಣ | ಮಣಮಂದಪುತ್ತೂರು |
೪. ಕದ | ಪರವೆ-ಸಂಕಿಲೆ | ಬಾಗಿಲು |
೫. ಗಿರಿಜೆ | ಮಣಮಂದಪುತ್ತೂರು | ಪಾರ್ವತಿ |
೬. ಶಿವ | ||
೭. ಪಾರ್ವತಿ |
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. (Answer the following)
೧. ‘ ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ – ಈ ವಾಕ್ಯದಲ್ಲಿರುವ ಕ್ರಿಯಾಪದ – ಉಂಟುಮಾಡಲಿ
ಅ) ದೇವರು ಆ ) ಎಲ್ಲರಿಗೂ ಇ ) ಒಳ್ಳೆಯದನ್ನೆ ಈ ) ಉಂಟುಮಾಡಲಿ
೨. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ – ತಿನ್ನನು
ಆ ) ತಿನ್ನನು ಆ ) ತಿನ್ನಲಿ ಇ) ತಂದಾನು ಈ) ತಿನ್ನುತಾನೆ
೩. ಇದು ಈ ಗುಂಪಿಗೆ ಸೇರದ ಪದವಾಗಿದೆ – ಉಪಮಾ
ಅ ) ಉತ್ಸಾಹ ಆ) ಉಪಮಾ ಇ ) ಮಂದಾನಿಲ ಈ ) ಲಲಿತ
೪. ‘ ಎಳಸಿರ್ಪ ‘ ಈ ಪದದ ಅರ್ಥ – ಸುತ್ತುವರಿದಿರುವ
ಅ) ಎಳೆಯದಾಗಿರುವ ಆ ) ಮಿತಿಯಿಲ್ಲದ ಇ ) ರುಚಿಯಾದ ಈ ) ಸುತ್ತುವರಿದಿರುವ