ಹೊಸಹಾಡು
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಕಲಕಂಠ, ಪದತಳ, ತೆರೆ, ತೀವ್ರ, ನಭ, ಮಾರ್ದನಿ, ಲೋಕಾಂತ, ಹಿಮಾದ್ರಿ, ಮಸಗು, ಬೆನ್ನಟ್ಟು
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ವೀರಧ್ವನಿ ಹೇಗೆ ಏರಬೇಕು?
೨. ಕಡಿದೊಗೆಯಬೇಕಾದ ಪಾಶಗಳು ಯಾವುವು?
೩. ಕವಿ ಎಂತಹ ಹಾಡನ್ನು ಹಾಡಬೇಕೆಂದು ಬಯಸುವರು?
೪. ಬಾನು ಬುವಿ ಯಾವುದರಿಂದ ಬೆಳಗಬೇಕು?
೫. ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು?
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧.ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು?
೨.ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ?
೩. ಕವಿ ಎಂತಹ ಗುಡುಗಬೇಕು ಎಂದು ಆಶಿಸುತ್ತಾರೆ?
ಈ. ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ಹೊಸ ಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Answer with the correct context)
೧. “ಯುಗಯುಗಗಳಾಚೆಯಲ್ಲಿ ಲೋಕಲೋಕಾಂತದಲಿ ಆ ಹಾಡು ಗುಡುಗಬೇಕು”.
೨. “ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿಯೇರಬೇಕು”.
೩. “ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು”.
೪. “ಇದು ಮೊದಲು ಮುನ್ನಿಲ್ಲ – ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು”.
೫. “ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನು ಬುವಿ ಬೆಳಗಬೇಕು”
ಊ. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೇ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ. (Write the word that relates to the third word as it relates to the first two words)
೧. ಧ್ವನಿ: ದನಿ::ಯುಗ:
೨. ಬಾನು:ಆಕಾಶ::ಭಾನು:
೩. ಲೋಕಾಂತರ:ಸವರ್ಣದೀರ್ಘ ಸಂಧಿ :: ಉನ್ನತೋನ್ನತ:
ಋ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಹೊಸ ಹಾಡು ಪದ್ಯದ ಆಕರ ಗ್ರಂಥ ………………………..
೨. ಹಾಡು ಪದ್ಯದ ಕವಿ …………………..
೩. ……………………….ಧರ್ಮಪಾಶಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು.
೪. ಉನ್ನತೋನ್ನತ ………………….. ಶಿಖರವನ್ನೇರಿ ಹಾಡಲ್ಲಿ ಹಾಡಬೇಕು.